ಭಾಷೆ
ಭಾಷೆ ಮಾಹಿತಿಯ ಸಂವಹನೆಗೆ ನಿರೂಪಿತವಾಗಿರುವ ಸಂಕೇತಗಳ ಪದ್ದತಿ. ಈ ಸಂಕೇತಗಳು ಉಚ್ಛರಿತವಾಗಿರಬಹುದು, ಲಿಖಿತವಾಗಿರಬಹುದು ಅಥವಾ ಅಭಿನಿತವಾಗಿರಬಹುದು. ಭಾಷೆ ಮಾನವನ ಅನುಪಮ ಗುಣಗಳಲ್ಲಿ ಒಂದಾಗಿದೆ.
ಇತಿವೃತ್ತ
[ಬದಲಾಯಿಸಿ]- ಭಾಷೆ ಎನ್ನುವುದು ಮಾನವನಿಗೆ ಮಾತ್ರ ಸಾಧಿಸಲ್ಪಡಬಹುದಾದ ಒಂದು ಸಂಕೀರ್ಣ ಸಂವಹನ ಮಾಧ್ಯಮವಾಗಿದೆ. ಈ ಸಂವಹನ ಮಾಧ್ಯಮದ ಅಥವಾ ಭಾಷೆಯ ವೈಜ್ಞಾನಿಕ ಅಧ್ಯಯನಕ್ಕೆ ಭಾಷಾ ವಿಜ್ಞಾನ ಅಥವಾ ಭಾಷಾಶಾಸ್ತ್ರ ಎನ್ನುವರು. ಅಧ್ಯಯನಗಳ ವರದಿಯಂತೆ ಪ್ರಪಂಚದಲ್ಲಿ ಒಟ್ಟು ೬೦೦೦ ದಿಂದ ೭೦೦೦ ಭಾಷೆಗಳಿವೆ ಎನ್ನಲಾಗಿದೆ. ಈ ಒಂದು ವರದಿಯು ಭಾಷೆಗಳನ್ನು ಹಾಗೂ ಡಯಲೆಕ್ಟ್ (ಉಪಭಾಷೆ) ಗಳನ್ನು ಯಾದೃಚ್ಛಿಕ ವಿಭಿನ್ನತೆಗಳನ್ನು ಆಧರಿಸಿ ಬೇರೆ ಮಾಡಲಾಗಿದೆ.
- ಸ್ವಾಭಾವಿಕ ಭಾಷೆಗಳು ಮಾತಿನ ಅಥವಾ ಸಂಜ್ಞಾ ವ್ಯವಸ್ಥೆಗಳನ್ನೊಳಗೊಂಡಿವೆ. ಅದೇ ರೀತಿ ದ್ವಿತೀಯ ಹಂತದಲ್ಲಿ ಇವುಗಳನ್ನು ಧ್ವನಿಮುದ್ರಿಸುವ, ವೀಕ್ಷಿಸುವಂತೆ ಮಾಡುವ, ಉದಾಹರಣೆಗೆ ರೇಖಾಚಿತ್ರ ಬರವಣಿಗೆ, ಬ್ರೈಲ್ ಲಿಪಿಗಳು. ಭಾಷೆಯೆನ್ನುವುದು ಒಂದು ರೀತಿಯ ಸ್ವಾಯತ್ತತೆ ಅಥವಾ ಸತ್ಯವನ್ನು ಒಳಗೊಂಡಿರುವಂತಹುದು. ಭಾಷೆಯನ್ನು ನಾವು ಒಂದು ವಿಷಯವನ್ನಾಗಿ (ಕಾನ್ಸೆಪ್ಟ್) ತೆಗೆದುಕೊಂಡಾಗ ಅದು ಅರ್ಥೈಸಿಕೊಳ್ಳಬಹುದಾದ ಸಾಮರ್ಥ್ಯವನ್ನೊಳಗೊಂಡ ಒಂದು ಸಂಕೀರ್ಣ ವ್ಯವಸ್ತೆಯನ್ನಬಹುದು.
- ಇದು ಅರ್ಥಪೂರ್ಣ ವಾಕ್ಯಗಳನ್ನು ನೀಡುವ ಸಾಮರ್ಥ್ಯವನ್ನು ಹೊಂದಿದ್ದು ಆ ಎಲ್ಲಾ ವಾಕ್ಯಗಳು ನಿಯಮಬದ್ಧವಾಗಿರುತ್ತವೆ. ಎಲ್ಲ ಭಾಷೆಗಳು ನಿಯಮಬದ್ಧವಾಗಿದ್ದು ಅದರ ಸಂಜ್ಞೆಗಳು (ಸೈನ್ ಗಳು) ಒಂದು ನಿರ್ಧಿಷ್ಟ ಅರ್ಥಗಳನ್ನು ಒಳಗೊಂಡಿರುತ್ತವೆ. ಆಡು ಭಾಷೆ(ಲಿಪಿ ರಹಿತ) ಹಾಗೂ ಶಿಷ್ಟಭಾಷೆಗಳೆರಡೂ ಕೂಡ ಒಂದು ನಿರ್ದಿಷ್ಟ ನಿಯಮಗಳನ್ನು ಒಳಗೊಂಡಿದ್ದು ಪದಗಳ ಬಳಕೆಯು ಸನ್ನಿವೇಶಕ್ಕೆ ತಕ್ಕಂತೆ ಇದ್ದು ಹಾಗೂ ವಾಕ್ಯರಚನಾ ವ್ಯವಸ್ಥೆಯೂ ಕೂಡ ತುಂಬಾ ಶಿಷ್ಟರೀತಿಯಲ್ಲಿ ಪದಗಳನ್ನು ಹಾಗೂ ಮಾರ್ಫೀಮ್ ಗಳನ್ನು ಒಳಗೊಂಡ ಪದಗುಚ್ಚ.
- ಉತ್ತಮ ಅರ್ಥವುಳ್ಳ ಉಚ್ಛಾರಣೆಗಳನ್ನೊಳಗೊಂಡಿರುತ್ತವೆ. ಮಾನವ ಭಾಷೆ ವಿಶಿಷ್ಟವಾದುದು ಏಕೆಂದರೆ ಇದು ಉತ್ಪಾದನೆ, ಪುನರಾವರ್ತನೆ ಹಾವ ಬದಲಾವಣೆಯಂತಹ ಸಾಮರ್ಥ್ಯಗಳನ್ನು ಒಳಗೊಂಡಿರುತ್ತದೆ. ಇತರ ಯಾವುದೇ ಜೀವಿಗಳ ಸಂವಹನಕ್ಕೆ ಹೋಲಿಸಿ ನೋಡಿದರೆ ಇದು ಸಂಕೀರ್ಣ ವ್ಯವಸ್ಥೆಯಾಗಿದ್ದು, ಭಾವನೆಗಳನ್ನು ಸನ್ನಿವೇಷಕ್ಕೆ ತಕ್ಕಂತೆ ವ್ಯಕ್ತಪಡಿಸಲು ಅವಕಾಶವಿದೆ. ಭಾಷೆಯನ್ನುವುದು ಚಿಂತನಾಶೀಲವಾದುದು ಹಾಗೂ ಚಲನಾಶೀಲವಾದುದು.
- ಇದು ಕಾಲ ಕಾಲಕ್ಕೆ ತಕ್ಕಂತೆ ಬದಲಾವಣೆಗೊಳಪಡುತ್ತದೆ. ಈ ಒಂದು ಭಾಷೆಯು ಮನುಷ್ಯನ ಮಿದುಳಿನ ಭಾಗಗಳ ಸಲಹೆಯಂತೆ ಯೋಚನೆಗಳು ಪದಗಳಾಗಿ ಹೊರಬರುತ್ತವೆ. ನಾವು ಭಾಷೆಯನ್ನು ಸಾಮಾಜಿಕ ಸನ್ನಿವೇಶಗಳಲ್ಲಿನ ಸಂವಹನದೊಂದಿಗೆ ಕಲಿಯುತ್ತೇವೆ. ಅದರಲ್ಲೂ ಶೈಶವಾವಸ್ಥೆಯಲ್ಲಿ ಮಕ್ಕಳು ಬಹಳ ಸ್ಪಷ್ಟವಾಗಿ ಮಾತೃಭಾಷೆಯನ್ನು ತಾನು ಮೂರು ವರ್ಷದವರಿದ್ದಾಗಲೇ ಮಾತನಾಡುವ ಸಾಮರ್ಥ್ಯಗಳನ್ನೊಳಗೊಂಡಿರುತ್ತಾರೆ.
- ಭಾಷೆಯ ಬಹುಮುಖ್ಯ ಕೊಡುಗೆಯೇನೆಂದರೆ ಅದು ಮಾನವ ಸಂಸ್ಕೃತಿಯ ಪ್ರತಿಬಿಂಬ. ಆದ್ಧರಿಂದ ಭಾಷೆ ನಿರ್ಧಿಷ್ಟ ನಿಯಮಗಳನ್ನು ಒಳಗೊಂಡ ಕ್ರಿಯೆಯನ್ನಷ್ಟೆ ಅಲ್ಲದೆ ಭಾಷೆ ಪ್ರಾದೇಶಿಕ ಹಾಗೂ ಸಂಸ್ಕೃತಿಗಳನ್ನು ಪ್ರತಿಬಿಂಭಿಸುವ ಕಾರ್ಯವನ್ನು ಮಾಡುತ್ತದೆ. ಭಾಷೆಯು ಕಾಲಕಾಲಕ್ಕೆ ಮೌಲ್ಯಮಾಪನಕ್ಕೆ ಒಳಪಡುವ ಹಾಗೂ ಕೌಶಲಗಳನ್ನು ವೃದ್ದಿಸಿಕೊಳ್ಳುವ ಶಕ್ತಿಯುಳ್ಳದ್ದಾಗಿದೆ. ಒಂದೇರೀತಿಯ ಹಿನ್ನೆಲೆಯನ್ನೊಳಗೊಂಡ ಕೆಲವೊಂದು ಭಾಷೆಗಳನ್ನು ಒಂದು ಭಾಷಾಕುಟುಂಬ ಎನ್ನಬಹುದು.
- ಪ್ರಸ್ತುತ ಬಳಕೆಯಲ್ಲಿರುವ ಸಾಕಷ್ಟು ಭಾಷೆಗಳು "ಇಂಡೋ-ಯೂರೋಪಿಯನ್" ಬಳಗಕ್ಕೆ ಸೇರಿವೆ; ಉದಾಹರಣೆಗೆ ಇಂಗ್ಲೀಷ್, ಸ್ಪ್ಯಾನಿಷ್, ಪೋರ್ಚುಗೀಸ್, ರಷ್ಯನ್ ಹಾಗೂ ಹಿಂದಿ; ಅದೇ ರೀತಿ ಸಿನೋ-ಟಿಬೆಟಿಯನ್ ಬಳಗವು ಮಾಂಡ್ರಿಯನ್, ಚೈನೀಸ್, ಕಾಂಟೋನಿಸ್ ಹಾಗೂ ಇತರ ಭಾಷೆಗಳನ್ನೊಳಗೊಂಡಿದೆ. ಬಂಟು ಭಾಷೆಯು ಸ್ವಹಿಲಿ, ಜುಲು, ತೋನ ಹಾಗೂ ನೂರಕ್ಕೂ ಹೆಚ್ಚು ಆಫ್ರಿಕನ್ ಭಾಷೆಗಳನ್ನು ಒಳಗೊಂಡ ಬಳಗ ಎನಿಸಿದೆ. ಇತ್ತೀಚಿನ ಗಣತಿಯ ಪ್ರಕಾರ ಶೇ ೫೦ ಲಿಪಿಯಿಲ್ಲದ ಭಾಷೆಗಳು ಕ್ರಿ. ಶ. ೨೧೦೦ ರ ಹೊತ್ತಿಗೆ ನಶಿಸುತ್ತವೆ ಎನ್ನಲಾಗಿದೆ.
ಲಕ್ಷಣಗಳು
[ಬದಲಾಯಿಸಿ]ಪ್ರಪಂಚದಲ್ಲಿ ಸಹಸ್ರಾರು ಭಾಷೆಗಳಿವೆ. ಎಲ್ಲಾ ಭಾಷೆಗಳಿಗೆ ಈ ಎರಡು ಲಕ್ಷಣಗಳಿವೆ -
ಸಂಕೇತಗಳ ವಿಶಿಷ್ಟ ಗುಣವೆಂದರೆ ಅವುಗಳು ಸಂವಹಿಸುತ್ತಿರುವ ಮಾಹಿತಿಗೆ ಅವು ಹೊಂದಬೇಕೆಂದೇನಿಲ್ಲ. ಉದಾಹರಣೆಗೆ, ಸ್ಪ್ಯಾನಿಷ್ ಭಾಷೆಯಲ್ಲಿ nada(ನಾಡಾ) ಎಂಬ ಸಂಕೇತ "ಇಲ್ಲ" ಎಂಬ ಮಾಹಿತಿಯನ್ನು ನೀಡುತ್ತದೆ. ಅದೇ ಸಂಕೇತ, ಕ್ರೊಯೇಶಿಯನ್ ಭಾಷೆಯಲ್ಲಿ "ಆಶಯ" ಎಂಬ ಮಾಹಿತಿಯನ್ನು ನೀಡುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ ಈ ಸಂಕೇತಗಳು ಮನಸ್ಸಿಗೆ ಅವು ಸಂವಹಿಸುತ್ತಿರುವ ಮಾಹಿತಿಯನ್ನು ನೇರವಾಗಿ ನೀಡಬಹುದು.
ಪ್ರಕಾರಗಳು
[ಬದಲಾಯಿಸಿ]ಮಾನವನ ಸಂಪರ್ಕದ ಸಲುವಾಗಿ ಸ್ವತಂತ್ರವಾಗಿ -
- ವಿಕಸಿತಗೊಂಡ ಭಾಷೆಗಳು
- ನೈಸರ್ಗಿಕ ಭಾಷೆಗಳೆಂದು ಕೆರೆಯಲ್ಪಡುತ್ತವೆ. ಇದಲ್ಲದೆ,
- ಕೃತಕವಾಗಿ ನಿರ್ಮಿತ ಭಾಷೆ|ನಿರ್ಮಿತವಾಗಿರುವ ಭಾಷೆಗಳು,
- ಗಣಕಯಂತ್ರ ಭಾಷೆಗಳು, ಹಾಗೂ
- ತರ್ಕಶಾಸ್ತ್ರದಲ್ಲಿ ಉಪಯೋಗಿಸುವ ಸಂಕೇತಗಳ ಭಾಷೆಗಳೂ ಇವೆ. ಕೆಲವು ಮಾನವೇತರ ಪ್ರಾಣಿಗಳಲ್ಲೂ ಅತ್ಯಂತ ಪುರಾತನ ಸಾಂಕೇತಿಕ ಸಂಪರ್ಕ ಪದ್ಧತಿಗಳು ಕಂಡುಬಂದಿವೆ. ಆದರೆ ಇವುಗಳಲ್ಲಿ ಸಂಕೇತದಿಂದ ಪ್ರತ್ಯೇಕವಾದ ವ್ಯಾಕರಣ ಪದ್ಧತಿ ಕಂಡುಬಂದಿಲ್ಲ.
ನೈಸರ್ಗಿಕ ಭಾಷೆಯ ವರ್ಗಗಳು
[ಬದಲಾಯಿಸಿ]ಇತಿಹಾಸದಲ್ಲಿ ಮಾನವನು ಪ್ರಪಂಚದಾದ್ಯಂತ ಹರಡಿದಂತೆ, ಹಳೆಯ ಭಾಷೆಗಳಿಂದ ಹೊಸ ಭಾಷೆಗಳು ಕವಲುಗೊಂಡು ತಾವಾಗಿಯೂ ವಿಕಾಸಗೊಂಡಿವೆ. ಹೀಗಾಗಿ ನೈಸರ್ಗಿಕ ಭಾಷೆಗಳನ್ನು ಕುಟುಂಬಗಳಾಗಿ ವರ್ಗೀಕರಿಸಬಹುದು ಹಾಗು ಈ ಕುಟುಂಬಗಳನ್ನು ವಂಶವೃಕ್ಷವಾಗಿ ಸಂಘಟಿಸಬಹುದು. ಇಂದಿನ ಕಾಲದಲ್ಲಿ ಪ್ರಚಲಿತ ಭಾಷೆಗಳು ಮುಖ್ಯವಾಗಿ ಇಂಡೋ-ಯೂರೋಪಿಯನ್ ಭಾಷಾ ಕುಟುಂಬ, ಆಫ್ರೋ-ಏಷ್ಯಾಟಿಕ್ ಭಾಷಾ ಕುಟುಂಬ, ಆಸ್ಟ್ರೋನೇಷ್ಯನ್ ಭಾಷಾ ಕುಟುಂಬ ಹಾಗು ಚೀನಿ-ಟಿಬೆಟಿಯನ್ ಭಾಷಾ ಕುಟುಂಬಗಳಿಗೆ ಸೇರಿವೆ.
ನೋಡಿ
[ಬದಲಾಯಿಸಿ]ಭಾಷೆ ; ಭಾಷೆಯ ರಚನೆ ; ಭಾಷಾ ವಂಶವೃಕ್ಷ ; ಭಾಷಾ ವಿಜ್ಞಾನ ; ಭಾಷಾವೈಶಿಷ್ಟ್ಯ ; ಭಾಷಾಶಾಸ್ತ್ರ ಚಿಂತನೆಯ ಇತಿಹಾಸ ; ಭಾಷಾ ಪ್ರಯೋಗಾಲಯ ; ಭಾಷಿಕ ಸಾಪೇಕ್ಷತೆ ; ಭಾಷಾಂತರ;ಭಾಷಾ ಕುಟುಂಬಗಳ ಪಟ್ಟಿ
ಹೆಚ್ಚಿನ ಓದಿಗೆ
[ಬದಲಾಯಿಸಿ]- ಭಾರತದ ನಾನೂರು ಭಾಷೆಗಳು ಅಳಿವಿನತ್ತ;ಪ್ರಜಾವಾಣಿ ವಾರ್ತೆ;6 Aug, 2017 Archived 2018-03-27 ವೇಬ್ಯಾಕ್ ಮೆಷಿನ್ ನಲ್ಲಿ.