ವಿಷಯಕ್ಕೆ ಹೋಗು

ಭಾಷಾಶಾಸ್ತ್ರ ಚಿಂತನೆಯ ಇತಿಹಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾಷಾ ಅಧ್ಯಯನವು ಭಾರತದಲ್ಲಿ ಕ್ರಿ.ಪೂ. ೫ನೆ ಶತಮಾನದ ವ್ಯಾಕರಣಶಾಸ್ತ್ರಜ್ನ ಪಾಣಿನಿಯಿಂದ ಪ್ರಾರಂಭವಾಗಿದ್ದು, ಇತನು ೩೯೫೯ ಸೂತ್ರಗಳ ಮೂಲಕ ಸಂಸ್ಕ್ರತ ಶಬ್ದರೂಪಗಳನ್ನು ವಿವರಿಸಿದ್ಧಾನೆ. ಪಾಣೀನಿಯೂ ಸಂಸ್ಕ್ರುತ ಭಾಶೆಯನ್ನು ಸ್ವರಾಕ್ಶರ, ವ್ಯಂಜನಾಕ್ಶರ, ಪದವರ್ಗ, ನಾಮಪದ, ಕ್ರಿಯಾಪದಗಳಾಗಿ ಸುವ್ಯವಸ್ತಿತವಾಗಿ ವಿಂಗದಿಸಿದ್ದಾನೆ.ಮಧ್ಯಪೂರ್ವ ಪ್ರದೆಶದ sibwayhನು ಅರಬಿಕ್ ಭಾಶೆಯ ಸಂಪೂರ್ಣ ವಿವರಣೆಯನ್ನು ಕ್ರಿ ಶ ೭೬೦ ರಲ್ಲಿ ಈತನ Al-Kitab fial-nahw (ವ್ಯಾಕರಣ ಶಾಸ್ತ್ರದ ಪುಸ್ತಕ) ದಲ್ಲಿ ಮೊದಲ ಬಾರಿಗೆ ಶಬ್ಧ ಮತ್ತು phoneme (ಅಂದರೆ ಶಬ್ದವನ್ನು ಭಾಷಾಶಾಸ್ತ್ರದ ಘಟಕವಾಗಿ ಅಧ್ಯಯನ ಮಾಡುವುದು) ವ್ಯತ್ಯಾಸವನ್ನು ತಿಳಿಸಿದನು. ಪೂರ್ವ ದೇಶಗಳಲ್ಲಿ ಭಾಷೆಯ ಅದ್ಯಯನ ಪ್ರಾರಂಭವಾದ ಕಾಲದಲ್ಲಿಯೇ ಪಾಶ್ಚ್ತ್ಯಾತ್ಯ ದೇಶಗಳಲ್ಲೂ ಭಾಷಾದ್ಯಯನ ಪ್ರಾರಂಭವಾಗಿತ್ತು ಆದರೆ ಶಾಸ್ತ್ರೀಯ ಭಾಶೆಯ ವ್ಯಾಕರಣ್ಕಾರರು ಪೂರ್ವ ದೇಶದವರು ಬಳಸಿದ ನಿಯಮಗಳು ಅಥವಾ ನಿರ್ಧಾರಗಳನ್ನ್ನು ಅದೇ ರೀತಿ ಸ್ವೀಕರಿಸಲಿಲ್ಲ . ಪಾಶ್ಚ್ಯತ್ಯ ದೇಶಗಳಲ್ಲಿ ಭಾಷೆಯನ್ನು ತತ್ವಜ್ಞಾನದ ಭಾಗವಾಗಿ ಅಬ್ಯಾಸಿಸುತ್ತಿದ್ದಾರೇ ವಿನಃ ವ್ಯಾಕರಣ ವರ್ಣನೆಯಾಗಲ್ಲ ಮೊದಲ ಶಬ್ಧಾರ್ಥ ಸಿದ್ದಾಂತವನ್ನು ಪ್ಲೇಟೋ ತನ್ನ ಕ್ರೆಟಿಲಸ್ ನ ಸಂಭಾಷಣೆಯಲ್ಲಿ "ಪದಗಳು ಚಿಂತನಾ ಜಗತ್ತಿನಲ್ಲಿ ಅನಂತವಾಗಿ ಉಳಿಯುವ ಪರಿಕಲ್ಪನೆಗಳನ್ನು ಸೂಚಿಸುತ್ತದೆ" ಎಂದು ವಾದಿಸುತ್ತಾನೆ. ಈ ಕೃತಿಯು ಮೊದಲಬಾರಿಗೆ ಪದಗಳ ವ್ಯುತ್ಪತ್ತಿಯ ಮೂಲಕ ಪದದ ಅರ್ಥದ ಇತಿಹಾಸವನ್ನ ತಿಳಿಯಬಹುದು ಎಂದು ತಿಳಿಸಿಕೊಟ್ಟಿತು. ಸುಮಾರು ಕ್ರಿ ಪೂ ೨೮೦ ರಲ್ಲಿ ಅಲೆ‍‍ಗ್ಸಾಂಡರನು ಅಲೆಗ್ಸಾಂಡ್ರಿಯ ಎಂಬ ಪ್ರದೇಶದಲ್ಲಿ ವಿಶ್ವವಿದ್ಯಾಲಯವನ್ನು ಪ್ರಾರಂಬಿಸಿದನು. ಅಲ್ಲಿನ ಭಾಷಾಶಾಸ್ತ್ರಜ್ನರು ಪುರಾತನ ಪದ್ಯಗಳನ್ನು ಅದ್ಯಯನ ಹಾಗು ಬೇರೆ ಭಾಷೆಯ ಜನರಿಗೆ ಬೋದಿಸುತ್ತಿದ್ದರು ಈ ಚಿಂತನಾ ಶಾಲೆಯಲ್ಲಿ ಮೊದಲಭಾರಿಗೆ "ವ್ಯಾಕರಣ" ಎಂಬ ಪದವನ್ನು ಆದುನಿಕ ದೃಶ್ಟಿಯಲ್ಲಿ ಬಳಸಿದರು. ಪ್ಲೇಟೋ ಈ ಪದವನ್ನು ಅದರ ಮೂಲಾರ್ಥದಲ್ಲಿ ಬಳಸಿದ್ದಾನೆ. "technegrammatik" ಅಂದರೆ ಬರವಣಿಗೆಯ ಕಲೆ ಎಂದರ್ಥ. ಮದ್ಯಕಾಲದುದ್ದಕ್ಕೂ ಭಾಷೆಯನ್ನು ಭಾಷಾಶಾಸ್ತ್ರದ ಭಾಗವಾಗಿಟ್ಟುಕೊಂಡು ಪುರಾತನ ಭಾಷೆ ಹಾಗು ಗ್ರಂಥಗಳನ್ನು ಅದ್ಯಯನ ಮಾಡಿದರು, ಅವರಲ್ಲಿ ಪ್ರಮುಖರು, Roger, Ascham, Wolfgang Ratake ಮತ್ತು John Amos Comenius.

ತುಲನಾತ್ಮಕ (ಹೋಲಿಕೆಯ) ಭಾಷಾಶಾಸ್ತ್ರ

[ಬದಲಾಯಿಸಿ]

೧೮ನೇ ಶತಮಾನದಲ್ಲಿ ಮೊದಲ ಬಾರಿಗೆ ವಿಲಿಯಮ್ ಜೋನ್ಸ್ ಭಾಷಾಶಾಸ್ತ್ರದಲ್ಲಿ ತುಲನಾತ್ಮಕ ವಿಧಾನವನ್ನು ಬಳಸುವುದರ ಮೂಲಕ ತುಲನಾತ್ಮಕ ಭಾಷಾಶಾಸ್ತ್ರದ ಉಗಮಕ್ಕೆ ಕಾರಣನಾದನು.ಬ್ಲೂಮ್ಫೀಲ್ಡ್,ಜಾಕೋಬ್ ಗ್ರಿಮ್ ನ Deutsho Grammatikaಕೃತಿಯನ್ನು ಕರಿತು ವಿಶ್ವದ ಮೊದಲ ವೈಜ್ಞಾನಿಕ ಭಾಷಾಶಾಸ್ತ್ರದ ಕೃತಿ ಎಂದು ಹೊಗಳಿದ್ದಾನೆ.ಇದರ ನಂತರ ಯೂರೋಪ್ ನ ಹಲವಾರು ಭಾಷಾ ಗುಂಪುಗಳು ತುಲನಾತ್ಮಕ ಅಧ್ಯಯನ ವಿಧಾನವನ್ನು ಅಳವಡಿಸಿಕೊಂಡವು. ಭಾಷೆಯ ವೈಜ್ಞಾನಿಕ ಅಧ್ಯಯನವು ವಿಲ್ಹೆಮ್ ವನ್ ಹಂಬೋಲ್ಟ್ ನ ಮೂಲಕ ಇಂಡೋ-ಯೂರೋಪ್ ನಿಂದ ಸಾಮಾನ್ಯ ಭಾಷೆಯವರೆಗೂ ಹರಡಿದೆ.ವಿಲ್ಹೆಮ್ ವನ್ ಹಂಬೋಲ್ಟ್ ನನ್ನು ಕುರಿತು ಬ್ಲೂಮ್ಫೀಲ್ಡ್ ಹೀಗೆ ಹೇಳಿದ್ದಾನೆ. ಈ ಅಧ್ಯಯನವು ಇದರ ತಳಪಾಯವನ್ನು ಪ್ರಷ್ಯನ್ ಆಡಳಿತಗಾರ ಹಾಗೂ ಚಿಂತಕ ವಿಲ್ಹೆಮ್ ವನ್ ಹಂಬೋಲ್ಟ್ ನಿಂದ (೧೭೬೭-೧೮೩೫) ಪಡೆದಿದೆ ಅದರಲ್ಲೂ ಆತನ 'ಕವಿ' ಜಾವಾದ ಸಾಹಿತ್ಯಿಕ ಭಾಷೆಯ ಕುರಿತ ಪುಸ್ಥಕ ದ ಮೊದಲ ಭಾಗವಾದ Uber die vershiedenheit des menschlichen sprachbaues und ihreneinfluB aufdie geistigeentwickelung des Menschengeschlechts"(ಮಾನವ ಭಾಷೆಯ ವಿವಿಧ ಸಂರಚನೆಗಳು ಹಾಗೂ ಮಾನವ ಜನಾಂಗದ ಭೌತಿಕ ಬೆಳವಣಿಗೆಯ ಮೇಲಿನ ಪ್ರಭಾವ)ದಲ್ಲಿ ತಿಳಿಸಿದ್ದಾನೆ.

ಸಂರಚನಾವಾದ

[ಬದಲಾಯಿಸಿ]

೨೦ನೇ ಶತಮಾನದ ಮೊದಲಲ್ಲಿ ಸಸ್ಸ್ಯೂರನು ಭ್ಹಾಷೆಯು ಒಂದು ಅಂತರ್ ಸಂಬಂಧಿತ ಘಟಕದ ಸ್ಥಿರ ವ್ಯವಸ್ಥೆಯಾಗದ್ದು,ಅವುಗಳ ನಡುವಿನ ವಿರುದ್ಧದ ಮೂಲಕ ವಿಷ್ಲೇಶಿಸಲಾಗಿದೆ ಎಂದು ತಿಳಿಸಿದನು ಐತಿಹಾಸಿಕ ಮತ್ತು ಐತಿಹಾಸಿಕವಲ್ಲದ ಅಥವಾ ನಿಯಮಾಧಾರಿತ ಭಾಷಾ ವಿಷ್ಲೇಶಣೆಯ ನಡುವಿನ ವ್ಯತಾಸವನ್ನು ಪರಿಚಯಿಸುವುದರ ಮೂಲಕ ಆಧುನಿಕ ಭಾಷಾಶಾಸ್ತ್ರಕ್ಕೆ ಬುನಾದಿ ಹಾಕಿದನು. ಸಸ್ಸ್ಯೂರನು ಭಾಷಾವಿಜ್ಞಾನ ವಿಷ್ಲೇಶಣೆಯ ಹಲವಾರು ಮೂಲ ಘಟಕಗಳನ್ನು ಪರಿಚಯಿಸಿದ್ದು,ಅವು ಇಂದಿನ ಹಲವಾರು ಭಾಷಾವಿಜ್ಞಾನ ಚಿಂತನೆಗಳಿಗೆ ಅಡಿಗಲ್ಲಾಗಿದೆ.ಉದಾಹರಣೆ:ಅನ್ವಯ ಘಟಕ(Syntagmatic)ಮತ್ತು ನಿದರ್ಶನಾತ್ಮಕ(Paradigmatic)ಗಳ ನಡುವಿನ ವ್ಯತ್ಯಾಸ,'ನಿಯಮ'('Parole') ಮತ್ತು'ಉಚ್ಚಾರಣೆ'('Langue')ಗಳ ವ್ಯತ್ಯಾಸ ಇತ್ಯಾದಿ.ಸಸ್ಸ್ಯೂರ್ ಭಾಷೆಯ ಅಧ್ಯಯನದಲ್ಲಿ ಅಳವಡಿಸಿದ ಸಂರಚನಾತ್ಮಕ ವಿಧಾನದಿಂದ ಪ್ರೇಗ್ ಸ್ಕೂಲ್ ಪ್ರಭಾವಿತಗೊಂಡಿದ್ದು ಅದರಲ್ಲಿ ಬ್ಲೂಮ್ಫೀಲ್ಡ್,ರೋಮನ್ ಯಾಕೋಬ್ಸನ್,ಚಾರ್ಲ್ಸ್ ಎಫ್. ಹಾಕೆಟ್,ಲೂಯಿಸ್ ಜೆಮ್ಸ್ಲೆವ್ ರನ್ನು ಒಳಗೊಂಡಿದೆ.

ಉತ್ಪತ್ತಿವಾದ(Generativism)

[ಬದಲಾಯಿಸಿ]

20ನೇ ಶತಮಾನದ ಕೊನೆಯಾರ್ಧದಲ್ಲಿ ನೋಅಮ್ ಚಾಮ್ಸ್ಕಿ ಯ ಕೃತಿಗಳ ಆಧಾರದ ಮೇಲೆ ಭಾಷಾಶಾಸ್ತ್ರವು ಜನರೇಟಿವ್ ಚಿಂತನಾ ಶಾಲೆಯಿಂದ ಪ್ರಭಾವಿತವಾಗಿದೆ.ಚಾಮ್ಸ್ಕಿಯು ಮನುಶ್ಯರು ಭಾಷೆಯನ್ನು ಹೇಗೆ ಗಳಿಸಿಕೊಂಡರು ಮತ್ತು ಈ ಗಳಿಕೆಯಲ್ಲಿ ಒಳಗೊಂಡಿರುವ ಜೈವಿಕತೆಯನ್ನು ನೈಸರ್ಗಿಕ ಭಾಷೆಯ ಬಳಕೆಯಲ್ಲಿ ನಿರ್ಧಿಷ್ಟವಾಗಿ ಕಾಣಬಹುದಾಗಿದೆ.ಚಾಮ್ಸ್ಕಿಯು ಝಲ್ಲಿಂಗ್ ಹ್ಯಾರಿಸ್ ನ ಕೃತಿ ಆಧಾರದ ಮೇಲೆ ಭಾಷೆಯ ಜನರೇಟಿವ್ ಸಿದ್ಧಾಂತವನ್ನು ರೂಪಿಸಿದ್ದಾರೆ.ಈ ಸಿದ್ಧಾಂತದ ಪ್ರಕಾರ ಭಾಷೆಯ ಮೂಲರೂಪವು ವಾಕ್ಯ ರಚನೆಯ ನಿಯಮದ ಒಂದು ಗುಂಪಾಗಿದ್ದು ಇದು ಎಲ್ಲ ಮನುಷ್ಯರು ಮತ್ತು ಆ ಮನುಷ್ಯರ ಭಾಷೆಯ ವ್ಯಾಕರಣವನ್ನೊಳಗೊಂಡಿದೆ. ಈ ನಿಯಮಗಳ ಗುಂಪನ್ನು ಸಾರ್ವತ್ರಿಕ ವ್ಯಾಕರಣ ಎನ್ನುವರು ಮತ್ತು ಇದನ್ನು ವರ್ಣಿಸುವುದನ್ನೇ ಚಾಮ್ಸ್ಕಿ ಯು ಭಾಷಾಶಾಸ್ತ್ರದ ಮೂಲ ಉದ್ದೇಶ ಎಂದಿದ್ದಾನೆ. ಈ ಕಾರಣದಿಂದಲೇ ನಿರ್ಧಿಷ್ಟ ಭಾಷೆಯ ವ್ಯಾಕರಣವೂ ಸಹ ಭಾಷಾಶಾಸ್ತ್ರಜ್ನರಿಗೆ ಮುಖ್ಯವಗಿದ್ದು ಅವುಗಳ ಮೂಲಕ ಸಾರ್ವರ್ತ್ರಿಕವಾಗಿ ಅಡಗಿರುವ ನಿಯಮಹಳ ಮೂಲಕ ಭಾಷಾಶಾಸ್ತ್ರಿಕ ವ್ಯತ್ಯಾಸವನ್ನು ಉತ್ಪತ್ತಿಯ ಆದಾರದ ಮೇಲೆ ತಿಳಿಯಬಹುದು

ಬೌದ್ಧಿಕವಾದ (Cognitivism)

[ಬದಲಾಯಿಸಿ]

೧೯೫೦ ರ ದಶಕದಲ್ಲಿ ಮನೋವಿಜ್ಞಾನದಲ್ಲಿ cognitivism ಎಂಬ ಹೊಸ ಚಿಂತನ ಶಾಲೆಯೊಂದು ಪ್ರಾರಂಭವಯಿತು. Cognitivist ಗಳು ಸ್ವಲ್ಪಮಟ್ಟಿಗೆ behaviourism ಗೆ ವಿರುದ್ದವಾಗಿ ಜ್ಞಾನ ಮತ್ತು ಮಾಹಿತಿಯ ಮೇಲೆ ಹೆಚ್ಚು ಗಮನ ಹರಿಸಿದರು. Cognivitism, ಭಾಷಾಶಸ್ತ್ರದಲ್ಲಿ generativist ಚಿಂತನೆಗೆ ಪ್ರತಿಕ್ರಿಯೆಯಾಗಿ ೧೯೭೦ ಮತ್ತು ೧೯೮೦ ರ ದಶಕದಲ್ಲಿ ಮೂಡಿ ಬಂದಿತ್ತು. Ronald Langacker ಮತ್ತು george Lakoff, ರಂತಹ ಚಿಂತನಕಾರರು ಪ್ರಮುಖರು. Cognitive ಭಾಷಾಶಸ್ತ್ರಜ್ನರು ಭಾಷೆಯು ಸಾಮಾನ್ಯ ಉದ್ದೇಶದ ಬೌದ್ದಿಕ ಪ್ರಕ್ರಿಯೆಯ ಮೂಲವಾಗಿದೆ ಎಂದಿದ್ದಾರೆ generative ಚಿಂತನಾಶಾಲೆಯ ಭಾಷಾಶಾಸ್ತ್ರಕ್ಕೆ ವಿರುದ್ದವಾಗಿ cognitive ಭಾಷಾಶಾಸ್ತ್ರವು ಹೆಚ್ಚು ಕಾರ್ಯಪ್ರವೃತ್ತಿ ಗುಣಗಳನ್ನು ಹೊಂದಿದೆ. Cognitive ಭಾಷಾಶಾಸ್ತ್ರದಲ್ಲಿನ ಪ್ರಮುಖ ಬೆಳವಣಿಗೆಯೊಂದಿಗೆ cognitive ವ್ಯಾಕರಣ, ಶಬ್ದಾರ್ಥ ರಚನೆ, ಪರಿಕಲ್ಪನಾತ್ಮಕ ರೂಪಗಳನ್ನು ಒಳಗೊಂಡಿರುತ್ತದೆ. Cognitiveಭಾಷಾಶಾಸ್ತ್ರವು ಭಾಷೆಯನ್ನು ಪರಿಕಲ್ಪನೆಯಾಗಿ ವ್ಯಾಖ್ಯಾನಿಸುತ್ತದೆ.(ಕೆಲವು ಬಾರಿ ಸಾರ್ವರ್ತ್ರಿಕವಾಗಿ, ಇನ್ನೂ ಕೆಲವು ಬಾರಿ ನಿರ್ಧಿಷ್ಟ ಭಾಷೆಯಾಧಾರವಾಗಿ). ಶಬ್ಧಾರ್ಥಕ್ಕೆ (semantics) ಇದು ಸಂಭಂದಿಸಿದೆಯಾದರೂ, ಮಾತು ಮತ್ತು ಬರವಣಿಗೆಯಲ್ಲಿನ ಮಾನಸಿಕ ಪ್ರಕ್ರಿಯೆಗಳಾದ ಗಳಿಕೆ, ಉಳಿಕೆ ಮತ್ತು ಉತ್ಪಾದಕತೆಯ ಬಗ್ಗೆ ಅಭ್ಯಸಿಸುವ ಮನೋ ಭಾಷಾಶಾಸ್ತ್ರಕ್ಕಿಂತ ವಿಭಿನ್ನವಾಗಿದೆ. ಇದು ವ್ಯಾಕರಣವನ್ನು ಪರಿಕಲ್ಪನೆಯಾದಾರಿತವಾಗಿ ಅರ್ಥೈಸುತ್ತದೆ ಮತ್ತು ಭಾಷೆಯ ಬಗ್ಗೆಗಿನ ಜ್ಞಾನ ಭಾಷೆಯ ಬಳಕೆಯಿನ್ದಲೇ ದೊರೆಯುತ್ತದೆ ಎಂದು ತಿಳಿಸುತ್ತದೆ.