ಭಾಷಿಕ ಸಾಪೇಕ್ಷತೆ
ಭಾಷಿಕ ಸಾಪೇಕ್ಷತೆಯ ಸಿದ್ಧಾಂತದ ಪ್ರಕಾರ, ತಾವಾಡುವ ಭಾಷೆಯ ವಿನ್ಯಾಸವು, ಆಯಾ ಭಾಷಿಕರು ತಮ್ಮ ವಿಶ್ವದ ಪರಿಕಲ್ಪನೆಯನ್ನು ಮಾಡಿಕೊಳ್ಳುವಲ್ಲಿ ಪ್ರಭಾವ ಬೀರುತ್ತದೆ. ಇವುಗಳು ಹೇಗೆ ಅರಿವಿನ ಪ್ರಕ್ರಿಯೆಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ತಿಳಿದುಬರುತ್ತದೆ. ಜನಪ್ರಿಯವಾಗಿ ಇದನ್ನು "ಸಫೀರ್-ವೂರ್ಫ್ ಸಿದ್ಧಾಂತ",ಅಥವಾ whorfianism" ಎಂದು ಕರೆಯುತ್ತಾರೆ. ಭಾಷಾ ತತ್ವಗಳು ಸಾಮಾನ್ಯವಾಗಿ ಎರಡು ಒಳಗೊಂಡಿದೆ. ಅವುಗಳೆಂದರೆ (೧)ಬಲವಾದ ಭಾಷಾ ವಿಭಾಗಳು, ಭಾಷೆಯ ಚಿಂತನೆ ಮತ್ತು ಅವುಗಳ ಮಿತಿ ಮತ್ತ್ತು ಅರಿವಿನ ವಿಭಾಗಗಳನ್ನು ನಿರ್ಧರಿಸುತ್ತದೆ.(೨)ದುರ್ಬಲ ಭಾಷಾ ಆವೃತ್ತಿಗಳ ಮೇಲೆ ಕೆಲವು ಭಾಷಾ ವಿಭಾಗಗಳು, ಮತ್ತು ಅಲ್ಲದ ಭಾಷಿಕ ಪ್ರವೃತ್ತಿಗೆ ಪರಿಣಾಮ ಬೀರುತ್ತದೆ. "sapir-whorf"ನ ಸಿದ್ದಾಂತ ಇದರ ತಪ್ಪು ಹೆಸರು. ಏಕೆಂದರೆ, ಎಡ್ವರ್ಡ್ ಸಪೀರ್ ಮತ್ತು ಬೆಂಜಮಿನ್ ಲೀ ವೂರ್ಚ್ ಎಂದು ಜೊತೆಯಲ್ಲಿ ಬರೆದಿರಲಿಲ್ಲ, ಮತ್ತು ಅವರು ತಮ್ಮ ವಿಚಾರಗಳನ್ನು ಅವರ ಕಲ್ಪನೆಗಳಲ್ಲಿ ಹೇಳಿರಲಿಲ್ಲ. ಈ ಸಾಪೇಕ್ಷತಾ ತತ್ವದಲ್ಲಿ ಒಂದು ಭಿನ್ನತೆಯೆಂದರೆ ಬಲವಾದ ಮತ್ತು ದುರ್ಬಲ ವಿಷಯದಲ್ಲಿರುವ ವ್ಯಾತ್ಯಾಸವು ಕಲ್ಪಿತ ಆವೃತ್ತಿಗಳ ನಡುವಿನ ಭಿನ್ನತೆ. ಮೊದಲು ಈ ಕಲ್ಪನೆಯಲ್ಲಿ ನಿಖರವಾಗಿ ವ್ಯಕ್ತಪದಿಸಿದವನು, ಹತ್ತೊಂಬತ್ತನೆ ಶತಮಾನದ ಚಿಂತಕ ವಿಲ್ಹೆಲೆಮ್ ವೋನ್ ಹಂಬೋಲ್ಟ್ (wilhelm von humboldt ), ಅವನು ರಾಷ್ತ್ರದ ಆತ್ಮದ ಅಭಿವ್ಯಕ್ತಿ ಎಂದು ಕಂಡಿದ್ದಾನೆ. ೨೦ನೆ ಶತಮಾನದ ಅಮೇರಿಕಾದ ಮಾನವಶಾಸ್ತ್ರಜ಼್ನರಾದ ಪ್ರಾಂಜ್ ಬೋವಾಸ್ ಮತ್ತು ಎಡ್ವರ್ಡ್ ಸಫೀರ್, ಸದಸ್ಯರುಗಳು ಒಂದುಮಟ್ಟಿಗೆ ಅವರು ಮತ್ತೊಂದು ಕಲ್ಪನೆಯನ್ನು ವಿಸ್ತರಿಸಿದರು, ಆದರೆ ಸಫೀರನು ಹೆಚ್ಚಾಗಿ ಪರವಾಗಿ ಭಾಷಾ ನಿರ್ಣಾಯಕತೆಯ ವಿರುದ್ದವಾಗಿ ಬರೆದನು. ಸಪೀರನ ವಿಧ್ಯಾರ್ಥಿಯಾದ ಬೆಂಜಮಿನ್ ಲೀ ವೂರ್ಫ್, ಇವನು ಭಾಷಾವ್ಯಾತ್ಸಾಸಗಳು ಮತ್ತು ಮಾನವನ ಸಂವೇದನೆ ಹಾಗೂ ವರ್ತನೆಯಲ್ಲಿನ ಪರಿಣಾಮವನ್ನು ಗ್ರಹಿಸಿದನು. "ಸಫೀರ್ ವೂರ್ಫ್ ಸಿದ್ದಾಂತ"ವನ್ನು, ಅವನ ವಿಧ್ಯಾರ್ಥಿಗಳಲ್ಲೊಬ್ಬನಾದ ಹ್ಯಾರಿ ಹೋಯರ್(Harry Hoijer), ಈ ಪದವನ್ನು ಪರಿಚಯಿಸಿದನು. ವಾಸ್ತವವಾಗಿ ಎಂದಿಗೂ ಸಹಾ ಆ ಎರಡು ವಿಧ್ವಾಂಸರು ಅಂತಹ ಯಾವುದೇ ಕಲ್ಪನೆಯನ್ನು ಸುಧಾರಿಸಿಲ್ಲ. ಸಾಪೆಕ್ಷತಾ ಸಿದ್ದಾಂತದ ಬಲವಾದ ಆವೃತ್ತಿಯು, ೧೯೨೦ ರಲ್ಲಿ ಜರ್ಮನ್ ಭಾಷಾ ವಿಜ಼್ನಾನಿ, ಲಿಯೋ ವಿಸ್ಗರ್ಬರ್(Leo Weisgerber) ಅಭಿವ್ರುದ್ದಿಗೊಳಿಸಿದನು. ವೂರ್ಫನ ಭಾಷಾ ಸಾಪೇಕ್ಷತಾ ಸಿದ್ದಾಂತವನ್ನು ರೋಜರ್ ಬ್ರೋನ್ (Roger Brown) ಮತ್ತು ಎರಿಕ್ ಲೆನ್ಬರ್ಗ್(Eric Lenneberg) ರವರು ಮರು ಅವಲೋಕನ ಮತ್ತು ಪ್ರಯೋಗ ಮಾಡಲು ಮುಂದಾಗುತ್ತಾರೆ. ಅವರ ಪ್ರಕಾರ ಬಣ್ಣಗಳ ಗ್ರಹಿಕೆಯನ್ನು ವಿಭಿನ್ನವಾಗಿ ವರ್ಗೀಕರಿಸಲಾಗಿದೆ, ಆದ್ದರಿಂದ ಭಾಷೆಗಳು ಆಯಾ ಭಾಷಿಕರ ನಡುವೆ ಬದಲಾಗುತ್ತದೆ. ಮಾನವನ ಭಾಷೆ ಮತ್ತು ಅರಿವಿನ ಸಾರ್ವತ್ರಿಕ ಅಧ್ಯಯನ ೧೯೬೦ ರಲ್ಲಿ ಬೆಳಕಿಗೆ ಬಂದಿತು. ಇದರ ಪ್ರಭಾವದಿಂದ ಭಾಷಾ ಸಾಪೇಕ್ಷತೆಯ ಬಗ್ಗೆ ಭಾಷ ತಜ಼್ನರ ವಲಯದಲ್ಲಿ ತಿರಸ್ಕಾರ ಮನೊಭಾವ ಉಂಟಾಯಿತು. ೧೯೬೯ ರಲ್ಲಿ ಬ್ರೆಂಟ ಬರ್ಲಿನ್ ಮತ್ತು ಪಾಲ್ ಕೆ (Brent and Paul Kay) ರವರ ಪ್ರಕಾರ ಈ ಡೊಮೇನ್ ಭಾಷಾ ಸಾಪೇಕ್ಷತೆಯ ಅಸ್ತಿತ್ವವನ್ನು ನಂಬದಿರುವಂತೆ ಕಾಣುತ್ತಿದ್ದರು, ಆದರೂ ಸಹಾ ಈ ತೀರ್ಮಾನವನ್ನು ಅಲ್ಲಗಳೆದರು. ೧೯೮೦ ರ ದಶಕದ ಕೊನೆಯ ಭಾಷಾಸಾಪೇಕ್ಷತಾ ವಿಧ್ವಾಂಸರು ಭಾಷಾ ವರ್ಗೀಕರಣದ ಪರಿಣಾಮಗಳನ್ನು ಪರಿಶೀಲನೆ ಮಾಡಿದರು ಮತ್ತು ಅವರು ಕಲ್ಪಿತ ನಿಯಂತ್ರಣವಾದವಲ್ಲದ ಆವೃತ್ತಿಗಳಿಗೆ ವ್ಯಾಪಕ ಬೆಂಬಲ ಕೊಟ್ಟರು. ಅವರು ಭಾಷಾಸಾಪೆಕ್ಷತೆಯ ಕೆಲವು ಪರಿಣಾಮಗಳನ್ನು ಹಲವಾರು ಸೆಮ್ಯಾಂಟಿಕ್ ಡೊಮೈನ್ಸ್ ನಲ್ಲಿ ತೋರಿಸಿದರು. ಆದರೂ ಕೆಲವು ಸಾಮಾನ್ಯವಾಗಿ ದುರ್ಬಲ. ಪ್ರಸ್ತುತ ಭಾಷಸಾಪೇಕ್ಷ್ತೆಯು ಒಂದು ಸಮತೋಲನೆಯನ್ನು ಹಲವಾರು ಭಾಷತಜ಼್ನರು ಸಮರ್ಥಿಸಿದ್ದಾರೆ. ಅವರ ಪ್ರಕಾರ ಭಾಷಾಸಾಪೆಕ್ಷತೆಯು ಅರಿವಿನ ಪ್ರಕ್ರಿಯೆಗಳ ಮೆಲೆ ಪರಿಣಾಮ ಬೀಳುತ್ತದೆ. ಆದರೆ ಇತರ ಪ್ರಕ್ರಿಯೆಗಳು ಮತ್ತು ವಿಷಯ ಮಾಹಿತಿಯಲ್ಲಿ ಸಾರ್ವತ್ರಿಕ ಅಂಶಗಳನ್ನು ಕಾಣಬಹುದು. ಅನ್ವೇಷಣೆಯು ಮೂಲತಹವಾಗಿ ಹೇಗೆ ಭಾಷೆಯು ಯೋಚನಾ ಲಹರಿಯ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದರ ಮೇಲೆ ಬೆಳಕು ಚೆಲ್ಲುತ್ತದೆ. ಭಾಷಸಾಪೆಕ್ಷತೆ ಮತ್ತು ಭಾಷೆ ಮತ್ತು ಚಿಂತನೆಗಳ ನಡುವಿನ ಸಂಬಂಧವನ್ನು ಹಲವಾರು ಶೈಕ್ಷಣಿಕ ಸಂಸ್ಥೆಗಳಾದ ಮಾನವಶಾಸ್ತ್ರ, ತತ್ವಶಾಸ್ತ್ರ, ಮನಶಾಸ್ತ್ರಗಳಲ್ಲಿ ಮುನ್ನಣೆ ಸಿಗುತ್ತಿದೆ. ಇದು ಬಣ್ಣದ ಕ್ರ್ತಿಗಳು ಮತ್ತು ಕನ್ ಸ್ತ್ರಕ್ತೆಡ್ ಭಾಷೆಗಳನ್ನು ಆವಿಷ್ಕಾರ ಮಾಡಲು ಪ್ರೇರಕವಾಗಿವೆ.
ನಿರೂಪಣೆಯ ಸಮಸ್ಯೆಗಳು ಮತ್ತೌ ಚರ್ಚೆಗಳು
[ಬದಲಾಯಿಸಿ]- ಭಾಷಾ ನಿರ್ಣಾಯಕತೆ.
- ಸೈನ್ಸ್ ಮತ್ತು ತತ್ವಶಾಸ್ತ್ರ ಚರ್ಚೆಗಳ ಸಂಬಂಧ
ಭಾಷಾಸಾಪೇಕ್ಷತೆಯ ಪರಿಕಲ್ಪನೆಯೂ, ಸಂಯೋಜನೆಯ ಪ್ರತಿಕ್ರಿಯೆಗಳನ್ನು ಬಿಗಿದಿಡಿದುಕೊಂಡಿದೆ. ಅವುಗಳೆಂದರೆ ಚಿಂತನೆ ಮತ್ತು ಅನುಭವ. ಇವುಗಳು ಯಾವ ರೀತಿ ಭಷೆಯ ವಿಭಾಗಗಳನ್ನು ಮತ್ತು ಮಾದರಿಗಳನ್ನು ಒಬ್ಬ ವ್ಯಕ್ತಿ ಮಾತನಾಡುತ್ತಾನೆ ಎನ್ನುವುದರಿಂದ ಪ್ರಭಾವಗೊಂಡಿರುತ್ತದೆ. ಅನುಭವಾತ್ಮಕ ಸಂಶೋಧನೆ ಎಂಬ ಪ್ರಶ್ನೆಯು ಮೂಲತಹವಾಗಿ ಬೆಂಜಮಿನ್ ಲೀ ವೂರ್ಫ್ ಜೊತೆ ಇರುತ್ತದೆ. ಅವನು ೧೯೩೦ ರಲ್ಲಿ ಈ ವಿಷಯದ ಮೇಲೆ ಬರೆದನು. ಮತ್ತು ಅವನ ಆಪ್ತ ಎಡ್ವರ್ಡ್ ಸಫೀರ್ ಸ್ವಂತ ವಿಷಯದ ಮೇಲೆ ವ್ಯಾಪಕವಾಗಿ ಬರೆಯಲಿಲ್ಲ. ಮುಖ್ಯವಾಗಿ ವೂರ್ಫ್ ನ ಬರಹಗಳು ೨೦ ನೇ ಶತಮಾನದಲ್ಲಿನ ಪ್ರಾಯೋಗಿಕ ಅಧ್ಯಯನಗಳ ಮೇಲೆ ಕೇಂದ್ರಬಿಂದುಗೊಂಡಿದೆ. ಸಂಶೋದನಾ ಎಳೆಯನ್ನು ಸಾಮಾನ್ಯವಾಗಿ ಸಫೀರ್ ವೂರ್ಫ್ ನ ಕಲ್ಪನೆ ಅಥವಾ ಕೆಲವೊಮ್ಮೆ ವೂರ್ಫಿಯನ್ ಸಿದ್ಧಾಂತ ಎಂದು ಕರೆಯಲಾಗುತ್ತದೆ. ಈ ಬಳಕೆಯನ್ನು ಹಲವರು ತಪ್ಪೆಂದು ಟೀಕಿಸಿದ್ದಾರೆ. ಏಕೆಂದರೆ ವಾಸ್ತವವಾಗಿ ಈ ಕಲ್ಪನೆಯನ್ನು ಸಫೀರ್ ಮತ್ತು ವೂರ್ಫ್ ಪ್ರಯೋಗ ಸಂಶೋಧನೆಗೆಂದು ರೂಪಿಸಲಿಲ್ಲ. ಇದು ಹೆಗೆ ಭಾಷೆಯ ಪರಿಕಲ್ಪನೆಯೂ ಯೋಚನೆಯ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಅಸ್ಪಷ್ಟವಾಗಿದೆ. ಪ್ರಸ್ತುತದಲ್ಲಿ ಸಂಶೋಧಕರು ವೂರ್ಫ್ ನನ್ನು ಭಾಷಾಸಾಪೇಕ್ಷತೆಯ ತತ್ವದ ಜನಕನಾಗಿ ಉಪಯೋಗಿಸುತ್ತಾರೆ. ಈ ಹೇಳಿಕೆಯ ಪ್ರಕಾರ ನಮಗೆ ಗೊತ್ತಾಗುವುದೇನೆಂದರೆ ಸಫೀರ್ ಮತ್ತು ವೂರ್ಪ್ ಇವರು ಭಾಷೆ ಮತ್ತು ಚಿಂತನೆ ಇವುಗಳ ಬಗ್ಗೆ ದೀರ್ಘಾಲೋಚನೆ ಮಾಡಿದರು.
ಭಾಷಾ ನಿರ್ಣಾಯಕತೆ
[ಬದಲಾಯಿಸಿ]ಭಾಷಾ ಸಾಪೇಕ್ಸ್ಷತೆ, ಈ ಚರ್ಚೆಯ ಮುಖ್ಯ ಉದ್ದೇಶವೆಂದರೆ, ಭಾಷೆ ಮತ್ತು ಚಿಂತನೆಗಳ ನಡುವಿನ ಪರಸ್ಪರ ಸಂಬಂಧವನ್ನು ಚರ್ಚೆ ಮಾಡುವುದು. ಇದರ ಪ್ರಮುಖ ಪ್ರಭಲ ರೂಪವೆಂದರೆ ಭಾಷಾನಿರ್ಣಯಕತೆ ಆಗಿದೆ. ಈ ರೂಪವು ಸಂಪೂರ್ಣವಾಗಿ ವ್ಯಕ್ತಿಯ ಅರಿವಿನ ಮತ್ತು ಸಂಭವನೀಯ ಪ್ರಕ್ರಿಯೆಗಳನ್ನು ನಿರ್ಧರಿಸುತ್ತದೆ. ಈ ದೃಷ್ಟಿಕೋನವನ್ನು ಕೆಲವೊಮ್ಮೆ ಬೆಂಜಮಿನ್ ಲೀ ವೂರ್ಫ್ ಮತ್ತು ಲುಡ್ವಿಗ್ ವಿಟ್ಗೈನ್ಸ್ತೈನ್(Ludwig Wittgenstein) ರವರುಗಳಿಗೆ ಉಲ್ಲೇಖಿಸಲಾಗಿದೆ. ಆದರೆ ಕೆಲವೊಮ್ಮೆ ಇವರು ವಾಸ್ತವವಾಗಿ ಭಾಷಾ ಮತ್ತು ಚಿಂತನೆಗಳಿಗೆ ಸಂಬಂಧಿಸಿದ ದೃಷ್ಟಿಕೋನಗಳಿಗೆ ಬೆಂಬಲ ಮಾಡಿರುವುದಿಲ್ಲ. ಭಾಷಾನಿರ್ಣಾಯಕತೆಯನ್ನು ಕೆಲವೊಮ್ಮೆ "ಬಲವಾದ ಸಫೀರ್- ವೂರ್ಫ್ ಕಲ್ಪನೆ" ಮತ್ತು ಇನ್ನೊಮ್ಮೆ "ದುರ್ಬಲ ಸಫೀರ್ ವೂರ್ಫ್ ಕಲ್ಪನೆ" ಎಂದು ವಿವರಿಸಲಾಗಿದೆ. ಬಲವಾದ ಮತ್ತು ದುರ್ಬಲವಾದ, ವೂರ್ಪ್ ರವರ ಭಾಷಾನಿರ್ಣಾಯಕತೆಯ ಆವೃತ್ತಿಗಳ ಕಲ್ಪನೆಗಳನ್ನು ಕೆಲವೊಮ್ಮೆ ತಪ್ಪು ಗ್ರಹಿಕೆ ಮಾಡಲಾಗಿತ್ತು. ಅಂತಹವರಲ್ಲಿ ಸ್ಟುವರ್ಟ್ ಚೇಸ್ ಒಬ್ಬ. ಸಫೀರ್ ಅಥವಾ, ವೂರ್ಫ್ ಆಗಲಿ ಇದುವರೆಗೂ ತಮ್ಮ ಬಲವಾದ ಮತ್ತು ದುರ್ಬಲವಾದ ಆವೃತ್ತಿಗಳ ಅಭಿಪ್ರಾಯದಲ್ಲಿ ಯಾವುದೆ ವ್ಯತ್ಸಾಸ ಸೂಚಿಸಲಿಲ್ಲ. ಭಾಷಾನಿರ್ಣಾಯಕತೆಯ ಕಲ್ಪನೆಯನ್ನು ಈಗ ಸಾಮಾನ್ಯವಾಗಿ ಸುಳ್ಳೆಂದು ಕರೆಯಲಾಗಿದೆ. ಆದರೆ ಈಗಲು ಸಹಾ ಹಲವಾರು ಸಂಶೋಧಕರು ದುರ್ಬಲ ರೂಪಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಆದ್ದರಿಂದ ಪ್ರಾಯೋಗಿಕವಾಗಿ ಧನಾತ್ಮಕ ಪುರಾವೆಯನ್ನು ಉತ್ಪಾದನೆ ಮಾಡಲಾಗಿದೆ. ಸೈನ್ಸ್ ಮತ್ತು ತತ್ವಶಾಸ್ತ್ರಗಳ, ಚರ್ಚೆಗಳ ಸಂಬಂಧಿಸಿದಂತೆ ಈ ಪ್ರಶ್ನೆಯೂ ಮುಖ್ಯವಾಗಿ ತತ್ವಶಾಸ್ತ್ರ. ವಿಜ಼್ನಾನ, ಭಾಷಾಶಾಸ್ತ್ರ, ಮತ್ತು ಮಾನವಶಾಸ್ತ್ರಗಳನ್ನು ಕುರಿತು ಚರ್ಚೆ ಮಡುತ್ತದೆ. ಚರ್ಚೆಯ ಮುಖ್ಯ ಪ್ರಶ್ನೆಯೆಂದರೆ ಮಾನವನ ಮಾನಸಿಕ ಭೋಧನೆಗಳು ಹಾಗೂ ಸಾರ್ವತ್ರಿಕವಾಗಿರಬಹುದು ಅಥವಾ ಕಲಿಕೆಯ ಪರಿಣಾಮವಾಗಿರಬಹುದು. ಆದ್ದರಿಂದ ಸಾಂಸ್ಕೃತಿಕ ಮತೂ ಸಾಮಾಜಿಕ ವಿಷಯಗಳು ಕಾಲ ಮತ್ತು ಸ್ತಳಕ್ಕನುಸಾರವಾಗಿ ಬದಲಾವಣೆಯಾಗುತ್ತದೆ. ಸರ್ವಮೋಕ್ಷವಾದಿ ವಾದದ ಪ್ರಕಾರ ಎಲ್ಲ ಮನುಷ್ಯರು ಮೂಲತಹವಾಗಿ ಒಂದೆ ಅಭಿರುಚಿ ಹೊಂದಿರುತ್ತಾರೆ. ಮತ್ತು ಲೆಕ್ಕವಿಲ್ಲದಷ್ಟು ಭಿನ್ನಾಬಿಪ್ರಾಯಗಳಿರುತ್ತವೆ. ಮಾನವನ ಮನಸ್ಸಿನ ಈ ಸ್ಥಿತಿಯನ್ನು ವೈಜ಼್ನಾನಿಕ ಸಂರಚನೆಯು ಒಳಗೊಂಡಿರುತ್ತದೆ. ಆದ್ದರಿಂದ ಎಲ್ಲ ಮಾನವರು ಒಂದೆ ರೀತಿಯ ಅಥವಾ ಹೋಲಿಕೆಯ ಮೂಲಭೂತ ಮಾದರಿಗಳನ್ನು ನಿರೀಕ್ಷಿಸಲಾಗುತ್ತದೆ. ಇದಕ್ಕೆ ವಿರುದ್ದವಾಗಿರುವ ಸ್ತಾನವನ್ನು ರಚನಾತ್ಮಕ ಎಂದು ವಿವರಿಸಬಹುದು. ಆದ್ಧರಿಂದ ಎಲ್ಲಾ ಮನುಷ್ಯರ ಪ್ರಕ್ರಿಯೆಗಳು ಮತ್ತು ಪರಿಕಲ್ಪನೆಗಳು ಹೆಚ್ಚಿನದಾಗಿ ಸಾಮಾಜಿಕ ರಚನೆಯ ಮೇಲೆ ಪ್ರಭಾವಗೊಂಡಿರುತ್ತದೆ. ಅಥವಾ ಇದನ್ನು ಆದರ್ಶವಾದ ಎಂದು ವಿವರಿಸಬಹುದು. ಮತ್ತೊಂದು ಚರ್ಚೆಯೆಂದರೆ ಭಾಷೆ ಮತ್ತು ಚಿಂತನೆಗಳಿಗಿರುವ ಸಂಬಂಧ, ಇದನ್ನು ಹಲವಾರು ತತ್ವಶಾಸ್ತ್ರಜ಼್ನರು ಮತ್ತು ಮನಶಾಸ್ತ್ರಜ಼್ನರು ಮೂಲತಹವಾಗಿ ಮನುಷ್ಯನ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಮುಂದಾದರು. ಅವರ ಪ್ರಕಾರ ಮಾತಿನ ಮೂಲಕ ಚಿಂತನೆಗಳನ್ನು ಕಲಿತುಕೊಳ್ಳಲು ಸಾಧ್ಯವಾಯಿತು.