ವಿಷಯಕ್ಕೆ ಹೋಗು

ಭಾಷಾವೈಶಿಷ್ಟ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾಷಾವೈಶಿಷ್ಟ್ಯ ಎಂಬುದು (ಲ್ಯಾಟಿನ್‌: ಇಡಿಯೋಮಾLatin: idioma, “ವಿಶೇಷ ಗುಣ”, f. ಗ್ರೀಕ್‌: ἰδίωμα - ಇಡಿಯೋಮಾGreek: [ἰδίωμα - idiōma] Error: {{Lang}}: text has italic markup (help) , “ವಿಶೇಷ ಲಕ್ಷಣ, ವಿಶೇಷ ಪದವಿನ್ಯಾಸ”, f. ಗ್ರೀಕ್‌: ἴδιος - ಇಡಿಯೋಸ್‌Greek: [ἴδιος - idios] Error: {{Lang}}: text has italic markup (help) , “ತನಗೇ ಸೇರಿದ”) ಒಂದು ಅಭಿವ್ಯಕ್ತಿ, ಪದ, ಅಥವಾ ನುಡಿಗಟ್ಟು ಆಗಿದ್ದು, ಅದು ಒಂದು ಭಾಷಾಲಂಕಾರಿಕ ಅರ್ಥವನ್ನು ಹೊಂದಿರುತ್ತದೆ ಮತ್ತು ಈ ಭಾಷಾಲಂಕಾರಿಕ ಅರ್ಥವು ಆ ಅಭಿವ್ಯಕ್ತಿಯ ಒಂದು ಸಾಮಾನ್ಯ ಬಳಕೆಗೆ ಸಂಬಂಧಿಸಿದಂತೆ ಗ್ರಹಿಸಲ್ಪಡುತ್ತದೆ. ಅಭಿವ್ಯಕ್ತಿಯು ಯಾವ ಪದಗಳಿಂದ ರಚಿಸಲ್ಪಟ್ಟಿದೆಯೋ ಅವುಗಳ ಪದಶಃ ಅರ್ಥ ಅಥವಾ ವ್ಯಾಖ್ಯಾನದಿಂದ ಸದರಿ ಅಭಿವ್ಯಕ್ತಿಯು ಪ್ರತ್ಯೇಕವಾಗಿ ನಿಲ್ಲುತ್ತದೆ.[] ಅಮೆರಿಕಾದ ಇಂಗ್ಲಿಷ್‌ನಲ್ಲಿ ಏನಿಲ್ಲವೆಂದರೂ ಕಡೇಪಕ್ಷ 25,000ದಷ್ಟು ಭಾಷಾನುಗುಣವಾದ ಅಭಿವ್ಯಕ್ತಿಗಳಿರಬಹುದೆಂದು ಅಂದಾಜಿಸಲಾಗಿದೆ.[]

ಭಾಷಾಶಾಸ್ತ್ರದಲ್ಲಿ, ಭಾಷಾವೈಶಿಷ್ಟ್ಯಗಳನ್ನು ಸಂಯೋಜನೀಯತೆಯ ತತ್ತ್ವವನ್ನು ಅಲ್ಲಗಳೆಯುವ ಭಾಷಾಲಂಕಾರಗಳು ಎಂಬ ರೀತಿಯಲ್ಲಿ ಸಾಮಾನ್ಯವಾಗಿ ಭಾವಿಸಲಾಗುತ್ತದೆ; ಆದರೂ ಸದರಿ ವಿಷಯವು ಚರ್ಚಾಸ್ಪದ ವಿಷಯವಾಗಿಯೇ ಉಳಿದುಕೊಂಡಿದೆ. ಜಾನ್‌ ಸಯೀದ್‌ ಎಂಬಾತ, ಒಂದು ಭಾಷಾವೈಶಿಷ್ಟ್ಯವೆಂಬುದು ಜೊತೆಯಲ್ಲಿಡಲ್ಪಟ್ಟ ಪದಗಳ ವ್ಯವಸ್ಥೆಯಾಗಿದ್ದು, ಅವು ಒಂದು ಪಳೆಯುಳಿಕೆಗೊಳಿಸಲಾದ ಪದವಾಗಿ ರೂಪಾಂತರಿಸುವಿಕೆಗೆ ಒಳಗಾಗುವವರೆಗೂ ಪರಸ್ಪರ ಅಂಟಿಕೊಂಡಿರುತ್ತವೆ ಎಂಬ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾನೆ.[] ಈ ಜೋಡಣೆಯು- ಅಂದರೆ ಒಂದು ಗುಂಪಿನಲ್ಲಿ ಸಾಮಾನ್ಯವಾಗಿ ಬಳಸಲ್ಪಡುವ ಪದಗಳು- ಪದದ-ಗುಂಪಿನಲ್ಲಿನ ಪ್ರತಿ ಅಂಗಭಾಗದ ಪದವನ್ನು ಮರು-ವ್ಯಾಖ್ಯಾನಿಸುವುದರಿಂದ ಅಥವಾ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸುವುದರಿಂದ, ಅದು ಒಂದು ಭಾಷಾನುಗುಣವಾದ ಅಭಿವ್ಯಕ್ತಿ ಯಾಗಿ ಹೊರಹೊಮ್ಮುತ್ತದೆ. ಪದಗಳು ಒಂದು ವಿಶೇಷೀಕರಿಸಿದ ಅರ್ಥವನ್ನು ಒಂದು ಅಸ್ತಿತ್ವವಾಗಿ, ಒಂದು ಭಾಷಾವೈಶಿಷ್ಟ್ಯ ವಾಗಿ ಬೆಳೆಸುತ್ತವೆ. ಮೇಲಾಗಿ, ಒಂದು ಭಾಷಾವೈಶಿಷ್ಟ್ಯವು ಒಂದು ಅಭಿವ್ಯಕ್ತಿ, ಪದ, ಅಥವಾ ನುಡಿಗಟ್ಟು ಆಗಿದ್ದು, ಅದರ ಪದಗಳು ಅಕ್ಷರಶಃ ಸೂಚಿಸುವ ಅರ್ಥಕ್ಕಿಂತ ಅದರ ಭಾವವು ಒಂದು ರೀತಿಯಲ್ಲಿ ವಿಭಿನ್ನವಾದ ಅರ್ಥವನ್ನು ಕೊಡುತ್ತದೆ. ಓರ್ವ ಮಾತುಗಾರನು ಒಂದು ಭಾಷಾವೈಶಿಷ್ಟ್ಯವನ್ನು ಬಳಸಿದಾಗ, ಅದನ್ನು ಕೇಳುವ ಅವನು ಅಥವಾ ಅವಳು ಒಂದು ವೇಳೆ ಈ ಭಾಷಾಲಂಕಾರವನ್ನು ಈ ಮುಂಚೆ ಕೇಳಿರದೇ ಇದ್ದಲ್ಲಿ, ಅದರ ವಾಸ್ತವಿಕ ಅರ್ಥವನ್ನು ಅವರು ತಪ್ಪಾಗಿ ಗ್ರಹಿಸಬಹುದು.[] ಭಾಷಾವೈಶಿಷ್ಟ್ಯಗಳು ಸಾಮಾನ್ಯವಾಗಿ ಉತ್ತಮವಾಗಿ ಅನುವಾದಿಸಲ್ಪಡುವುದಿಲ್ಲ; ಕೆಲವೊಂದು ನಿದರ್ಶನಗಳಲ್ಲಿ, ಭಾಷಾವೈಶಿಷ್ಟ್ಯವೊಂದು ಮತ್ತೊಂದು ಭಾಷೆಗೆ ಅನುವಾದಿಸಲ್ಪಟ್ಟಾಗ ಒಂದೋ ಅದರ ಅರ್ಥ ಬದಲಾಗಿರುತ್ತದೆ, ಇಲ್ಲವೇ ಅದು ಅರ್ಥರಹಿತವಾಗಿ ಉಳಿದುಬಿಡುತ್ತದೆ.

ಹಿನ್ನೆಲೆ

[ಬದಲಾಯಿಸಿ]

ಟು ಕಿಕ್‌ ದಿ ಬಕೆಟ್‌ ಎಂಬ ಇಂಗ್ಲಿಷ್‌‌‌ ಅಭಿವ್ಯಕ್ತಿಯಲ್ಲಿ, ಕೇವಲ ಕಿಕ್‌ ಮತ್ತು ಬಕೆಟ್‌ ಎಂಬ ಪದಗಳ ಅರ್ಥವನ್ನಷ್ಟೇ ತಿಳಿದಿರುವ ಓರ್ವ ಕೇಳುಗನು, ಸದರಿ ಅಭಿವ್ಯಕ್ತಿಯ ನಿಜವಾದ ಅರ್ಥವಾದ ಸಾಯುವುದು ಎಂಬುದನ್ನು ತರ್ಕಿಸಲು ಅಸಮರ್ಥನಾಗುತ್ತಾನೆ. ವಾಸ್ತವವಾಗಿ, ಈ ಭಾಷಾನುಗುಣವಾದ ನುಡಿಗಟ್ಟು ನಿಜವಾಗಿಯೂ ಒಂದು ಬಕೆಟ್‌ನ್ನು ಒದೆಯುವುದಕ್ಕೆ ಉಲ್ಲೇಖಿಸಬಲ್ಲುದಾದರೂ, ಸ್ವಾಭಾವಿಕವಾಗಿ ಅಥವಾ ಸ್ಥಳೀಕವಾಗಿ ಇಂಗ್ಲಿಷ್‌ ಭಾಷೆಯನ್ನು ಮಾತನಾಡುವವರು ಇದನ್ನು ಆ ರೀತಿಯಲ್ಲಿ ಬಳಸುವುದು ಅಪರೂಪ. ಪದಶಃ ಅನುವಾದವು (ಪದದಿಂದ ಪದಕ್ಕೆ ಮಾಡುವ ಅನುವಾದ) ಇತರ ಭಾಷೆಗಳಲ್ಲಿ ಅದೇ ಅರ್ಥವನ್ನು ನೀಡುವುದಿಲ್ಲ- ಪೋಲಿಷ್‌‌‌ ಭಾಷೆಯಲ್ಲಿ ಇದೇ ಅಭಿವ್ಯಕ್ತಿಯು ಕೋಪ್‌ನ್ಯಾಕ್‌ ಡಬ್ಲ್ಯೂ ಕ್ಯಾಲೆಂಡರ್ಜ್‌ (“ಟು ಕಿಕ್‌ ದಿ ಕ್ಯಾಲೆಂಡರ್‌‌”) ಎಂದಾಗಿದ್ದು, ಇಂಗ್ಲಿಷ್‌ ನುಡಿಗಟ್ಟಿನಲ್ಲಿನ “ಬಕೆಟ್‌” ರೀತಿಯಲ್ಲಿ ಅದರ ವಾಡಿಕೆಯ ಅರ್ಥದಿಂದ “ಕ್ಯಾಲೆಂಡರ್‌‌” ಎಂಬುದು ಬೇರ್ಪಡಿಸಲ್ಪಟ್ಟಿದೆ. ಬಲ್ಗೇರಿಯನ್‌ ಭಾಷೆಯಲ್ಲಿ ಈ ನುಡಿಗಟ್ಟು ದಾ ಗುಶ್ನೆಶ್‌ ಬಕೆಟಾ ಎಂದಾಗಿದ್ದು (ಸಿರಿಲಿಕ್ ಭಾಷೆಯಲ್ಲಿ‌: "да гушнеш букета") ಅದು “ಟು ಹಗ್‌ ದಿ ಬಂಚ್‌ ಆಫ್‌ ಫ್ಲವರ್ಸ್‌‌” ಎಂದು ಧ್ವನಿಸುತ್ತದೆ; ಡಚ್‌ ಭಾಷೆಯಲ್ಲಿ ಈ ನುಡಿಗಟ್ಟು ಹೆಟ್‌ ಲೂಡ್ಜೆ ಲೆಗ್ಗೆನ್‌ (“ಟು ಲೇ ದಿ ಪೀಸ್‌ ಆಫ್‌ ಲೆಡ್‌”) ಎಂದಾಗಿದೆ; ಫಿನ್ನಿಶ್‌‌ ಭಾಷೆಯಲ್ಲಿ ಈ ನುಡಿಗಟ್ಟು ಹೀಟ್ಟಾ ಲೂಸಿಕ್ಕಾ ನೂರ್‌ಕ್ಕಾನ್‌ (“ಟು ಥ್ರೋ ದಿ ಸ್ಪೂನ್‌ ಇನ್‌ಟು ದಿ ಕಾರ್ನರ್‌‌”) ಎಂದಾಗಿದೆ; ಲ್ಯಾಟಿವಿಯನ್‌ ಭಾಷೆಯಲ್ಲಿ ಈ ನುಡಿಗಟ್ಟು ನೊಲಿಕ್ಟ್‌ ಕರೋಟಿ (“ಟು ಪುಟ್‌ ದಿ ಸ್ಪೂನ್‌ ಡೌನ್‌”) ಎಂದಾಗಿದೆ; ಪೋರ್ಚುಗೀಸ್‌ ಭಾಷೆಯಲ್ಲಿ ಇದು ಬ್ಯಾಟರ್‌ ಆಸ್‌ ಬೊಟಾಸ್‌ (“ಟು ಬೀಟ್ ದಿ ಬೂಟ್ಸ್‌‌”) ಎಂದಾಗಿದೆ; ಡ್ಯಾನಿಷ್‌ ಭಾಷೆಯಲ್ಲಿ ಇದು ಅಟ್‌ ಸ್ಟಿಲ್ಲೆ ಟ್ರೇಸ್ಕೋನೆ ("ಟು ಟೇಕ್‌ ಆಫ್‌ ದಿ ಕ್ಲಾಗ್ಸ್‌‌") ಎಂದಾಗಿದೆ; ಸ್ವೀಡಿಷ್‌ ಭಾಷೆಯಲ್ಲಿ ಇದು ಟ್ರಿಲ್ಲಾ ಅವ್‌ ಪಿನ್‌ ("ಟು ಫಾಲ್‌ ಆಫ್‌ ದಿ ಸ್ಟಿಕ್‌") ಎಂದಾಗಿದೆ; ಗ್ರೀಕ್ ಭಾಷೆಯಲ್ಲಿ ಇದು "ಟು ಷೇಕ್‌ ದಿ ಹಾರ್ಸ್‌-ಷೂಸ್‌" ಎಂದಾಗಿದೆ; ಮತ್ತು ಬ್ರೆಝಿಲ್ ಭಾಷೆ‌ಯಲ್ಲಿ “ಟು ಕಿಕ್‌ ದಿ ಬಕೆಟ್‌” ಎಂಬ ಅಭಿವ್ಯಕ್ತಿಯು (ಚೂಟರ್‌ ಒ ಬಾಲ್ಡೆ ) ಒಂದು ಸಂಪೂರ್ಣವಾಗಿ ವಿಭಿನ್ನವಾಗಿರುವ ಅರ್ಥವನ್ನು (ಟು ಡ್ರಿಂಕ್‌ ಟೂ ಮಚ್‌ ಆಲ್ಕೋಹಾಲ್‌) ಹೊಂದಿದೆ.

ಭಾಷಾವೈಶಿಷ್ಟ್ಯಗಳ ಮತ್ತೊಂದು ವರ್ಗವೆಂದರೆ, ಒಂದು ಪದವು ಹಲವಾರು ಅರ್ಥಗಳನ್ನು ಹೊಂದಿರುವುದು ಆಗಿದ್ದು, ಇದು ಕೆಲವೊಮ್ಮೆ ಏಕಕಾಲಿಕವಾಗಿ, ಕೆಲವೊಮ್ಮೆ ಅದರ ಬಳಕೆಯ ಸಂದರ್ಭದಿಂದ ವ್ಯತ್ಯಾಸವನ್ನು ಅರಿಯಲ್ಪಡುವ ರೀತಿಯಲ್ಲಿ ಇರುತ್ತದೆ. ಇದನ್ನು (ಬಹುತೇಕವಾಗಿ ರೂಪನಿಷ್ಪತ್ತಿ ಮಾಡಲ್ಪಡದ) ಬಹು ಅರ್ಥದ ಪದಗಳಲ್ಲಿನ ಇಂಗ್ಲಿಷ್‌ ಭಾಷೆಯಲ್ಲಿ ಕಾಣಬಹುದು. ಅಂದರೆ, ಒಂದು ಚಟುವಟಿಕೆಗೆ ಸಂಬಂಧಿಸಿದಂತಿರುವ ಅದೇ ಪದದ ಸಾಮಾನ್ಯ ಬಳಕೆಯು, ಅದರಲ್ಲಿ ತೊಡಗಿಸಿಕೊಂಡವರಿಗೆ ಸಂಬಂಧಿಸಿ, ಬಳಸಲ್ಪಟ್ಟ ಉತ್ಪನ್ನಕ್ಕೆ ಸಂಬಂಧಿಸಿ, ಚಟುವಟಿಕೆಯೊಂದರ ಸ್ಥಳ ಅಥವಾ ಸಮಯಕ್ಕೆ ಸಂಬಂಧಿಸಿ, ಮತ್ತು ಕೆಲವೊಮ್ಮೆ ಒಂದು ಕ್ರಿಯಾಪದಕ್ಕೆ ಸಂಬಂಧಿಸಿದಂತೆ ವಿಭಿನ್ನವಾಗಿ ಕಂಡುಬರಬಹುದು.

ಭಾಷಾವೈಶಿಷ್ಟ್ಯಗಳ ಪರಿಚಯವನ್ನು ಯಾರು ಹೊಂದಿಲ್ಲವೋ ಅಂಥವರಿಗೆ ಗೊಂದಲವುಂಟುಮಾಡುವ ಪ್ರವೃತ್ತಿಯನ್ನು ಅವು ಹೊಂದಿರುತ್ತವೆ; ಹೊಸ ಭಾಷೆಯೊಂದರ ವಿದ್ಯಾರ್ಥಿಗಳು ಅದರ ಭಾಷಾನುಗುಣವಾದ ಅಭಿವ್ಯಕ್ತಿಗಳನ್ನು ಶಬ್ದಸಂಪತ್ತಾಗಿ ಕಲಿಯಬೇಕಿರುವುದು ಅಗತ್ಯ. ಅನೇಕ ಸ್ವಾಭಾವಿಕ ಭಾಷಾ ಪದಗಳು ಭಾಷಾನುಗುಣವಾದ ಮೂಲಗಳನ್ನು ಹೊಂದಿವೆಯಾದರೂ, ಅವು ಸಮೀಕರಿಸಲ್ಪಡುವುದರಿಂದ ತಮ್ಮ ಭಾಷಾಲಂಕಾರಿಕ ಅರ್ಥಗಳನ್ನು ಅವು ಕಳೆದುಕೊಳ್ಳುತ್ತವೆ.

ಸಂಸ್ಕೃತಿಯೊಂದಿಗಿನ ನಂಟು

[ಬದಲಾಯಿಸಿ]

ಒಂದು ಭಾಷಾವೈಶಿಷ್ಟ್ಯವು ಸಾಮಾನ್ಯವಾಗಿ ಒಂದು ಬಳಕೆಯ ಮಾತಿನ ರೂಪಕಾಲಂಕಾರವಾಗಿರುತ್ತದೆ[ಸೂಕ್ತ ಉಲ್ಲೇಖನ ಬೇಕು] — ಅಂದರೆ, ಇದು ಕೇವಲ ಒಂದು ಸಂಸ್ಕೃತಿಯೊಳಗೆ ಬಳಸಲು ಅಗತ್ಯವಿರುವ ಒಂದಷ್ಟು ತಳಹದಿಯ ಜ್ಞಾನ, ಮಾಹಿತಿ, ಅಥವಾ ಅನುಭವವನ್ನು ಬಯಸುವ ಒಂದು ಶಬ್ದವಾಗಿದ್ದು, ಇಲ್ಲಿ ಸಂಭಾಷಣೆಯಲ್ಲಿ ತೊಡಗಿಸಿಕೊಳ್ಳುವ ವ್ಯಕ್ತಿಗಳು ಸಾಮಾನ್ಯ ಸಾಂಸ್ಕೃತಿಕ ಉಲ್ಲೇಖಗಳನ್ನು ಹೊಂದಿರುವುದು ಅಗತ್ಯವಾಗಿರುತ್ತದೆ. ಆದ್ದರಿಂದ, ಭಾಷಾವೈಶಿಷ್ಟ್ಯಗಳನ್ನು ಭಾಷೆಯ ಭಾಗವಾಗಿ ಪರಿಗಣಿಸಲಾಗುವುದಿಲ್ಲವಾದರೂ, ಸಂಸ್ಕೃತಿಯ ಭಾಗವಾಗಿ ಪರಿಗಣಿಸಲಾಗುತ್ತದೆ. ವಿಶಿಷ್ಟವೆನಿಸುವಂತೆ, ಸಂಸ್ಕೃತಿಯು ಸ್ಥಳೀಕರಿಸಲ್ಪಟ್ಟಿರುವುದರಿಂದ ಅಥವಾ ಸೀಮಿತಗೊಳಿಸಲ್ಪಟ್ಟಿರುವುದರಿಂದ, ಭಾಷಾವೈಶಿಷ್ಟ್ಯಗಳು ತಮ್ಮ ಸ್ಥಳೀಯ ಸಂದರ್ಭದಿಂದ ಆಚೆಗೆ ಅನೇಕವೇಳೆ ಪ್ರಯೋಜನರಹಿತವಾಗಿರುತ್ತವೆ; ಅದೇನೇ ಇದ್ದರೂ, ಕೆಲವೊಂದು ಭಾಷಾವೈಶಿಷ್ಟ್ಯಗಳು ಇತರವುಗಳಿಗಿಂತ ಹೆಚ್ಚು ಸರ್ವವ್ಯಾಪಿಯಾಗಿರಲು ಸಾಧ್ಯವಿದ್ದು, ಅವುಗಳನ್ನು ಸುಲಭವಾಗಿ ಅನುವಾದಿಸಬಹುದಾಗಿವೆ ಮತ್ತು ಅವುಗಳ ರೂಪಕಾಲಂಕಾರದ ಅರ್ಥವನ್ನು ತರ್ಕಿಸಬಹುದಾಗಿವೆ.

ದಿ ನ್ಯೂ ಇಂಟರ್‌‌ನ್ಯಾಷನಲ್‌ ವೆಬ್‌ಸ್ಟರ್‌‌’ಸ್‌ ಕಾಲೇಜ್‌ ಡಿಕ್ಷ್‌‌ನರಿಯಿಂದ ವ್ಯಾಖ್ಯಾನಿಸಲ್ಪಟ್ಟಿರುವಂತೆ, ಒಂದು ಭಾಷಾವೈಶಿಷ್ಟ್ಯವು ಒಂದು ಅಭಿವ್ಯಕ್ತಿಯಾಗಿದ್ದು, ಅದರ ವ್ಯಾಕರಣಬದ್ಧವಾದ ರಚನೆಯಿಂದಾಗಲೀ ಅಥವಾ ಅದರ ಘಟಕಾಂಶವಾಗಿರುವ ಭಾಗಗಳಿಂದಾಗಲೀ ಅದನ್ನು ಸರಾಗವಾಗಿ ವಿಶ್ಲೇಷಿಸಲಾಗುವುದಿಲ್ಲ. ಇದು ಒಂದು ನಿರ್ದಿಷ್ಟ ಭಾಷೆಯ ವೈಶಿಷ್ಟ್ಯ ಸೂಚಕ ಸ್ವರೂಪ ಅಥವಾ ರಚನೆಯ ಭಾಗವಾಗಿದ್ದು, ಕೇವಲ ಆ ಭಾಷೆಯಲ್ಲಿ ಮಾತ್ರವೇ ಅಸ್ತಿತ್ವದಲ್ಲಿರುವ ಒಂದು ವಿಶಿಷ್ಟ ಸ್ವರೂಪ ಅಥವಾ ಶೈಲಿಯನ್ನು ಅದು ಹೊಂದಿರುತ್ತದೆ.[this quote needs a citation] ರ್ಯಾಂಡಮ್‌ ಹೌಸ್‌ ವೆಬ್‌ಸ್ಟರ್‌‌'ಸ್‌ ಕಾಲೇಜ್‌ ಡಿಕ್ಷ್‌‌ನರಿ ಯು ಈ ವ್ಯಾಖ್ಯಾನಕ್ಕೆ ಸಮ್ಮತಿಯನ್ನು ಸೂಚಿಸಿರುವಂತೆ ಕಂಡುಬಂದಿದ್ದು, ಸದರಿ ವ್ಯಾಖ್ಯಾನವನ್ನು ಮತ್ತಷ್ಟು ವಿಸ್ತರಿಸಿ ಅದು ತಿಳಿಸುವ ಪ್ರಕಾರ, ಒಂದು ಭಾಷಾವೈಶಿಷ್ಟ್ಯವು ಒಂದು ಅಭಿವ್ಯಕ್ತಿಯಾಗಿದ್ದು, ಭಾಷೆಯೊಂದರ ವಾಡಿಕೆಯ ವ್ಯಾಕರಣಬದ್ಧವಾದ ನಿಯಮಗಳಿಂದ ಅಥವಾ ಅದರ ರಚನಾಂಗವಾದ ಅಂಶಗಳ ವಾಡಿಕೆಯ ಅರ್ಥಗಳಿಂದ ಅದರ ಅರ್ಥವನ್ನು ನಿರೀಕ್ಷಿಸಲು ಅಥವಾ ಊಹಿಸಲು ಸಾಧ್ಯವಿಲ್ಲ.[this quote needs a citation] ಭಾಷೆಯ ಇತರ ಅನೇಕ ಮಗ್ಗುಲುಗಳಿಗಿಂತ ಭಿನ್ನವಾಗಿರುವ ಭಾಷಾವೈಶಿಷ್ಟ್ಯವೊಂದು, ಸಮಯವು ಕಳೆದಂತೆ ಸರಾಗವಾಗಿ ಅಥವಾ ಅನಾಯಾಸವಾಗಿ ಬದಲಾಗುವುದಿಲ್ಲ. ಕೆಲವೊಂದು ಭಾಷಾವೈಶಿಷ್ಟ್ಯಗಳು ಜನಪ್ರಿಯ ಸಂಸ್ಕೃತಿಯಲ್ಲಿ ಸಮ್ಮತಿಯನ್ನು (ಅಥವಾ ಒಲವನ್ನು) ಗಳಿಸುತ್ತವೆ ಮತ್ತು ಕಳೆದುಕೊಳ್ಳುತ್ತವೆಯಾದರೂ, ಅವು ತಮ್ಮ ರಚನೆಯಲ್ಲಿ ಯಾವುದೇ ವಾಸ್ತವಿಕ ಬದಲಾವಣೆಯನ್ನು ಹೊಂದುವುದು ಅಪರೂಪವೆನ್ನಬಹುದು. ಜನರೂ ಸಹ ಕೆಲವೊಮ್ಮೆ ತಾವು ಅರ್ಥೈಸಿಕೊಂಡಿದ್ದನ್ನು ಅತಿಯಾಗಿ ಉತ್ಪ್ರೇಕ್ಷಿಸುವ ಒಂದು ಸ್ವಾಭಾವಿಕ ಪ್ರವೃತ್ತಿಯನ್ನು ಹೊಂದಿರುತ್ತಾರೆ; ಇದೂ ಸಹ ಆಕಸ್ಮಿಕವಾಗಿ ಹೊಸ ಭಾಷಾವೈಶಿಷ್ಟ್ಯಗಳನ್ನು ಹುಟ್ಟುಹಾಕುತ್ತದೆ.

ಅನೇಕ ಭಾಷಾನುಗುಣವಾದ ಅಭಿವ್ಯಕ್ತಿಗಳು, "ಟೈಂ ಆಸ್‌ ಎ ಸಬ್‌ಸ್ಟೆನ್ಸ್‌‌", "ಟೈಂ ಆಸ್‌ ಎ ಪಾತ್‌‌", "ಲವ್‌ ಆಸ್‌ ವಾರ್‌‌", ಮತ್ತು "ಅಪ್‌ ಈಸ್‌ ಮೋರ್‌‌"ನಂಥ ಕಲ್ಪನಾತ್ಮಕ ರೂಪಕಾಲಂಕಾರಗಳನ್ನು ಆಧರಿಸಿರುತ್ತವೆ; ರೂಪಕಾಲಂಕಾರವು ಅವಶ್ಯಕವಾಗಿರುತ್ತದೆಯೇ ಹೊರತು, ಭಾಷಾವೈಶಿಷ್ಟ್ಯಗಳಲ್ಲ. ಉದಾಹರಣೆಗೆ, "ಸ್ಪೆಂಡ್‌ ಟೈಂ", "ಬ್ಯಾಟಲ್‌ ಆಫ್‌ ದಿ ಸೆಕ್ಸಸ್‌", ಮತ್ತು "ಬ್ಯಾಕ್‌ ಇನ್‌ ದಿ ಡೇ" ಇವೇ ಮೊದಲಾದವು ಭಾಷಾನುಗುಣವಾದವಾಗಿದ್ದು, ಅವಶ್ಯಕ ಅಥವಾ ಮೂಲಭೂತ ರೂಪಕಾಲಂಕಾರಗಳನ್ನು ಅವು ಆಧರಿಸಿವೆ. ಈ "ಆಳವಾದ ರೂಪಕಾಲಂಕಾರಗಳು" ಮತ್ತು ಮಾನವ ಗ್ರಹಿಕೆಯೊಂದಿಗಿನ ಅವುಗಳ ಸಂಬಂಧವನ್ನು, ಜಾರ್ಜ್‌ ಲೇಕಾಫ್‌ ಹಾಗೂ ಮಾರ್ಕ್‌ ಜಾನ್ಸನ್‌ ಎಂಬಿಬ್ಬರು ಮೆಟಫರ್ಸ್‌ ವಿ ಲಿವ್‌ ಬೈ (1980) ಎಂಬ ಕೃತಿಯಲ್ಲಿ ಚರ್ಚಿಸಿದ್ದಾರೆ.

"ಪ್ರಾಫಿಟ್ಸ್‌ ಆರ್‌ ಅಪ್‌"ನಂಥ ಸ್ವರೂಪಗಳಲ್ಲಿ ರೂಪಕಾಲಂಕಾರವು ಸ್ವತಃ "ಅಪ್‌" ಎಂಬುದರಿಂದಲೇ ಸಂವಹಿಸಲ್ಪಡುತ್ತದೆ. "ಪ್ರಾಫಿಟ್ಸ್‌ ಆರ್‌ ಅಪ್‌" ಎಂಬ ನುಡಿಗಟ್ಟು ಒಂದು ಭಾಷಾವೈಶಿಷ್ಟ್ಯವಲ್ಲ; ಅಳೆಯಬಹುದಾದ ಯಾವುದೇ ಒಂದು ಅಂಶವು "ಪ್ರಾಫಿಟ್ಸ್‌‌" ಎಂಬುದರ ಸ್ಥಾನವನ್ನಾಕ್ರಮಿಸಬಲ್ಲದು: "ಕ್ರೈಮ್‌ ಈಸ್‌ ಅಪ್‌", "ಸ್ಯಾಟಿಸ್ಫ್ಯಾಕ್ಷನ್‌ ಈಸ್‌ ಅಪ್‌", "ಕಂಪ್ಲೇಂಟ್ಸ್‌‌ ಆರ್‌ ಅಪ್‌" ಇತ್ಯಾದಿಗಳು ಇದಕ್ಕೆ ನಿದರ್ಶನಗಳಾಗಿವೆ. ಅವಶ್ಯಕ ಅಥವಾ ಮೂಲಭೂತ ಭಾಷಾವೈಶಿಷ್ಟ್ಯಗಳು ಸಾಮಾನ್ಯವಾಗಿ ಉಪಸರ್ಗಗಳನ್ನು ಒಳಗೊಂಡಿರುತ್ತವೆ, ಉದಾಹರಣೆಗೆ: "ಔಟ್‌ ಆಫ್‌" ಮತ್ತು "ಟರ್ನ್‌ ಇನ್‌ಟು".

ಇದೇ ರೀತಿಯಲ್ಲಿ, ಅನೇಕ ಚೀನೀ ಭಾಷೆಯ ಅಕ್ಷರಗಳು [which?] ಭಾಷಾನುಗುಣವಾದ ಪದಗುಚ್ಛಗಳಾಗಿವೆ; ಏಕೆಂದರೆ ಅವುಗಳ ಅರ್ಥಗಳನ್ನು ಅವುಗಳ ಮೂಲಪದಗಳ ಒಂದು ಪದಶಃ (ಚಿತ್ರಸಂಕೇತವುಳ್ಳ) ಅರ್ಥಕ್ಕೆ ಅನೇಕವೇಳೆ ಪತ್ತೆಹಚ್ಚಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅಕ್ಷರಗಳು ಸುಮಾರು 214 ಮೂಲಪದಗಳ ಒಂದು ಚಿಕ್ಕ ತಳಹದಿಯಿಂದ ಸಂಯೋಜಿಸಲ್ಪಟ್ಟಿದ್ದು, ಅವುಗಳ ಜೋಡಿಸಲ್ಪಟ್ಟ ಅರ್ಥಗಳು ಅರ್ಥವಿವರಣೆಯ ವಿಭಿನ್ನ ವಿಧಾನಗಳನ್ನು ಅನುಸರಿಸುತ್ತವೆ - ಅಂದರೆ ಚಿತ್ರಸಂಕೇತವುಳ್ಳದ್ದರಿಂದ ರೂಪಕಾಲಂಕಾರದ್ದಕ್ಕೆ, ರೂಪಕಾಲಂಕಾರದ್ದರಿಂದ ತಮ್ಮ ಮೂಲ ಅರ್ಥಗಳನ್ನು ಕಳೆದುಕೊಂಡಿರುವಂಥ ಪದಗಳಿಗೆ ಅದು ಸಾಗುತ್ತದೆ.

ಇದನ್ನೂ ನೋಡಿ

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
  1. ದಿ ಆಕ್ಸ್‌ಫರ್ಡ್‌ ಕಂಪ್ಯಾನಿಯನ್‌ ಟು ದಿ ಇಂಗ್ಲಿಷ್‌ ಲಾಂಗ್ವೇಜ್‌ (1992) ಪುಟಗಳು 495–96.
  2. ‌ಜ್ಯಾಕೆನ್‌ಡಾಫ್, R. (1997). ದಿ ಆರ್ಕಿಟೆಕ್ಚರ್‌ ಆಫ್‌ ದಿ ಲಾಂಗ್ವೇಜ್‌ ಫಾಕಲ್ಟಿ. ಕೇಂಬ್ರಿಜ್‌, MA: MIT ಪ್ರೆಸ್‌‌.
  3. ‌ಸಯೀದ್, ಜಾನ್‌ I. (2003), ಸಿಮ್ಯಾಂಟಿಕ್ಸ್‌‌ . 2ನೇ ಆವೃತ್ತಿ. ಆಕ್ಸ್‌ಫರ್ಡ್‌: ಬ್ಲ್ಯಾಕ್‌ವೆಲ್‌. ಪುಟ 60.
  4. ಸಯೀದ್‌, ಜಾನ್‌ I. (2003), ಸಿಮ್ಯಾಂಟಿಕ್ಸ್‌‌ . 2ನೇ ಆವೃತ್ತಿ. ಆಕ್ಸ್‌ಫರ್ಡ್‌: ಬ್ಲ್ಯಾಕ್‌ವೆಲ್‌.


ಬಾಹ್ಯ ಕೊಂಡಿಗಳು

[ಬದಲಾಯಿಸಿ]