ಭಾಷಾಂತರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
೩ ಭಾಷೆಗಳಲ್ಲಿ ಭಾಷಾಂತರವನ್ನು ಹೊಂದಿರುವ ಪ್ರಾಚೀನ ರೊಸೆಟ್ಟ ಕಲ್ಲು

ಭಾಷಾಂತರ ಎಂದರೆ ಒಂದು ಭಾಷೆಯಲ್ಲಿನ ಮಾತು ಅಥವಾ ಬರವಣಿಗೆಯನ್ನು ಇನ್ನೊಂದು ಭಾಷೆಯಲ್ಲಿ ಸಮಾನ ಅರ್ಥ ನೀಡುವಂತೆ ಪರಿವರ್ತಿಸುವ ಒಂದು ಪ್ರಕ್ರಿಯೆ. ಕನ್ನಡದಲ್ಲಿ ಇದಕ್ಕೆ ಸಂವಾದಿಯಾದ ಇತರ ಪದಗಳು: ಅನುವಾದ, ತರ್ಜುಮೆ, ಕನ್ನಡೀಕರಿಸು (ಬೇರೆ ಭಾಷೆಗಳಿಂದ ಕನ್ನಡಕ್ಕೆ ಭಾಷಾಂತರಿಸುವಾಗ), ಮರುಬರವಣಿಗೆ, ರೂಪಾಂತರ, ಅಳವಡಿಕೆ ಇತ್ಯಾದಿ.

ಭಾಷೆಗಳು ಆರಂಭವಾದಾಗಿನಿಂದ ಭಾಷಾಂತರವು ಆರಂಭಗೊಂಡಿದೆ. ಭಾಷೆ ಎಷ್ಟು ಹಳೆಯದೊ ಭಾಷಾಂತರವೂ ಅಷ್ಟೇ ಹಳೆಯದಾದ ಪ್ರಕ್ರಿಯೆ.

ರೋಮನ್ ಜಾಕೋಬ್ಸನ್ ಎನ್ನುವ ವಿದ್ವಾಂಸ ಮೂರು ರೀತಿಯಾಗಿ ಭಾಷಾಂತರಗಳನ್ನು ವರ್ಗೀಕರಣ ಮಾಡುತ್ತಾನೆ:

  1. ಆಂತರಿಕ ಭಾಷಾಂತರ: ಒಂದು ಭಾಷೆಯ ಒಳಗೇ ಅರ್ಥವು ಒಂದು ಪಠ್ಯದಿಂದ ಮತ್ತೊಂದು ಪಠ್ಯವಾಗಿ ರೂಪುಗೊಳ್ಳುವುದು. ಉದಾ: ಹಳೆಗನ್ನಡದ ಪಠ್ಯವೊಂದನ್ನು ಹೊಸಗನ್ನಡಕ್ಕೆ ಭಾಷಾಂತರಿಸುವುದು.
  2. ಅಂತರ್ ಭಾಷಾಂತರ: ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಅರ್ಥವು ವರ್ಗಾವಣೆಯಾಗುವುದು. ಉದಾ. ಶೇಕ್ಸ್ಪಿಯರನ ನಾಟಕದ ಕನ್ನಡ ಭಾಷಾಂತರ.
  3. ಅಂತರ್-ಸಂಜ್ಞಾತ್ಮಕ ಭಾಷಾಂತರ. ಉದಾ. ಅರ್ಥವು ಒಂದು ಸಂಜ್ಞಾವ್ಯವಸ್ಥೆಯಿಂದ ಮತ್ತೊಂದು ಸಂಜ್ಞಾವ್ಯವಸ್ಥೆಗೆ ವರ್ಗಾವಣೆಯಾಗುವುದು. ಉದಾ. ಕನ್ನಡ ಕಾದಂಬರಿಯೊಂದು ಚಲನ ಚಿತ್ರವಾಗುವುದು, ದೇವಸ್ಥಾನಗಳಲ್ಲಿ ಧಾರ್ಮಿಕ ಕಥೆಗಳು ಶಿಲ್ಪಗಳಾಗಿ ರೂಪುಗೊಳ್ಳುವುದು.
"https://kn.wikipedia.org/w/index.php?title=ಭಾಷಾಂತರ&oldid=1060668" ಇಂದ ಪಡೆಯಲ್ಪಟ್ಟಿದೆ