ವಿಷಯಕ್ಕೆ ಹೋಗು

ಕಡೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಡೂರು

ಕಡೂರು
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಚಿಕ್ಕಮಗಳೂರು
ನಿರ್ದೇಶಾಂಕಗಳು 13.55° N 76.01° E
ವಿಸ್ತಾರ
 - ಎತ್ತರ
 km²
 - 763 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2011)
 - ಸಾಂದ್ರತೆ
34151[]
 - /ಚದರ ಕಿ.ಮಿ.
ಶಾಸಕ ಬೆಳ್ಳಿ ಪ್ರಕಾಶ್ []
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - ೫೭೭೫೪೮
 - +
 - ಕೆಎ-೬೬
ಅಂತರ್ಜಾಲ ತಾಣ: http://www.kadurtown.gov.in

ಕಡೂರು ಭಾರತ ದೇಶದ ಕರ್ನಾಟಕ ರಾಜ್ಯದಚಿಕ್ಕಮಗಳೂರು ಜಿಲ್ಲೆಯ ಒಂದು ತಾಲ್ಲೂಕು .ಇದು ಹಿಂದೆ ಇದ್ದ ಮೈಸೂರು ರಾಜ್ಯ ದಲ್ಲಿ ಕಡೂರು ಜಿಲ್ಲಾ ಕೇಂದ್ರವಾಗಿತ್ತು .೧೯೪೭ ರವರೆಗೂ ಕಡೂರು ಜಿಲ್ಲೆ ಎಂದೇ ಕರೆಯಲಾಗುತ್ತಿದ್ದು, ನಂತರ ಚಿಕ್ಕಮಗಳೂರು ಜಿಲ್ಲೆ ಅಸ್ತಿತ್ವಕ್ಕೆ ಬಂದಿತು.[].ಇದು ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿದೆ.ಬೆಂಗಳೂರಿನಿಂದ ಸುಮಾರು ೨೩೨ ಕಿಲೋಮೀಟರುಗಳ ದೂರದಲ್ಲಿದೆ. ಹೊಯ್ಸಳರ ಕಾಲದ ಶಿಲಾಶಾಸನವನ್ನು ಬೆನ್ನತಿ. ಗುಜರಾತಿನ ಸೋಮನಾಥ ದೇವರಿಗೂ ಕುಪ್ಪಳಿಗೂ ಏನು ಸಂಬಂಧ....? 849 ವರ್ಷಗಳ ಹಿಂದಿನ ನಂದಿಕೇಶ್ವರ ದೇಗುಲ ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲ್ಲೂಕು ಕುಪ್ಪಾಳು ಗ್ರಾಮ.

ಚಿಕ್ಕಮಗಳೂರು  ಜಿಲ್ಲೆಯ ಕಡೂರು ತಾಲ್ಲೂಕಿನ ಕುಪ್ಪಾಳು ಗ್ರಾಮ 849 ವರ್ಷಗಳ ಹಿಂದೆ ಈ ದೇವಸ್ಥಾನದ ಮುಂದೆ ಒಂದು ಶಿಲಾ ಶಾಸನವಿದೆ. ಆ ಶಿಲಾಶಾಸನ ಒಂದು ದೇವಾಲಯದ ಒಂದು ಕಥೆಯನ್ನು ಹೇಳುತ್ತದೆ. ಕ್ರಿಸ್ತಶಕ 1173 ಜುಲೈ 22 ದಾಖಲಾಗಿರುವ ಹೊಯ್ಸಳರ ದೇವಾಲಯ ಎರಡನೇ ವೀರ ಬಲ್ಲಾಳನು ಹೊಯ್ಸಳರ ರಾಜಧಾನಿ ದ್ವಾರಸಮುದ್ರ ಅಂದರೆ ಈಗಿನ ಹಳೇಬೀಡು ಪಟ್ಟಾಭಿಷೇಕವಾದ ದಿನವೇ 1173 ಜುಲೈ 22 ರಲ್ಲಿ ದಾಖಲಾಗಿರುವ ಈ ದಿನವಾದ ಶಿಲಾ ಶಾಸನ ಬರೆಸಿದ ದಿನವಾಗಿದೆ. 1173 ರಲ್ಲಿ ಜುಲೈ 22ರಂದು ಆಸಂದಿ ನಾಡಿನ ಒಳಗಿನ ಕುಪ್ಪೆಹಾಳು  ಸೀಮೆಯನ್ನು ಅಂದರೆ ಈಗಿನ ಕುಪ್ಪಾಳು ಗ್ರಾಮದ ಸೌರಾಷ್ಟ್ರದ ಸೋಮನಾಥ ದೇವಾಲಯದ ರಂಗಭೋಗದ ದೇವಧಾನವಾಗಿ ನಡೆದ ಬಗ್ಗೆ ಶಿಲಾ ಶಾಸನದ ಬಗ್ಗೆ ತಿಳಿಸಲಾಗಿದೆ. ಈ ದೇವದಾನ  ಅಂದರೆ ಕುಪ್ಪೆಹಾಳು ಅಥವಾ ಈಗಿನ ಕುಪ್ಪಾಳು ಸೀಮೆಯಲ್ಲಿ  ಆದಾಯವನ್ನು  ಸೌರಾಷ್ಟ್ರದಲ್ಲಿ ಸೋಮನಾಥ ಈಗಿನ ಗುಜರಾತಿನ ಸೋಮನಾಥ ದೇವಾಲಯಕ್ಕೆ ಕುಪ್ಪಾಳು ಗ್ರಾಮದಿಂದ ಸಂಗ್ರಹವಾದ ಆದಾಯವನ್ನು ಇಲ್ಲಿನ ರವಾನಿಸುತ್ತಿದ್ದರು. ಆಗಿನ ಕಾಲದಲ್ಲಿ ಸೋಮನಾಥ ದೇವಾಲಯ ಎಷ್ಟು ಪ್ರಸಿದ್ಧವಾಗಿದೆ. ಅದೇ ರೀತಿಯಲ್ಲಿ  ಶಿಲಾಶಾಸನದ ಮುಂದೆ ಬರೆಯಲಾಗಿದ್ದ ವಿಚಾರ ಮಾಳಗಿಜಾ ಅಳಿಯ ನಾಗದೇವನು ಕೆರೆಯನ್ನು ಕಟ್ಟಿಸಿ ನಂದಿಕೇಶ್ವರ ದೇಗುಲವನ್ನು ಪ್ರತಿಷ್ಠಾಪಿಸಿದನು. ದೇವರಿಗೆ ಕೆಲವು ಜಮೀನನ್ನು ನೀಡಿದ ಶಿಲಾಶಾಸನದಲ್ಲಿ ಕಾಣಬಹುದು. ಶಿಲಾ ಶಾಸನವನ್ನು  ಒಕ್ಕಣಿಕೆ ಮಾಡಿದ್ದು ಅಂದರೆ ತಿಕ್ಕಾ ಅರಸ  ಪುತ್ರ 

ರುದ್ರದೇವನು ನಾವು ಒಕ್ಕಣಿಕೆ ಮಾಡಿದ್ದ ಶಿಲಾಶಾಸನ ಕೆತ್ತಿದ್ದು ಅಭೋಜ ಎಂದು ವಿಶೇಷವಾಗಿ ಕಾಣಬಹುದು ಸುಂದರವಾಗಿ ಕೆತ್ತನೆ ಮಾಡಿದ್ದಾರೆ. ಕಡೂರು ತಾಲ್ಲೂಕಿನ ಕುಪ್ಪಾಳು ಗ್ರಾಮದಲ್ಲಿ ಶಿಲಾ ಶಾಸನದ ಮಹತ್ತರವಾದ ಎಂದು ಹೇಳಬಹುದು. ಏಕೆಂದರೆ ಹೊಯ್ಸಳರ ಪ್ರಬಲ ದೊರೆಯಾಗಿದ್ದ ವೀರ ಬಲ್ಲಾಳನು ಪಟ್ಟಾಭಿಷೇಕ ಆಗುವ ದಿನವೇ ಕುಪ್ಪೆಹಾಳು (ಕುಪ್ಪಾಳು )ಸೌರಾಷ್ಟ್ರದ ಗುಜರಾತಿನ ಸೋಮನಾಥ ದೇವರಿಗೆ ಹಾಳನ್ನು ದೇವದಾನವಾಗಿ ಕೊಟ್ಟಿರುವುದನ್ನು ವಿಶೇಷವಾದ ಇತಿಹಾಸವಿದೆ. ವೀರಗಲ್ಲು ಶಿಲಾಶಾಸನ ಶಾಸನವನ್ನು 15 ಮತ್ತು 16ನೇ ಶತಮಾನದಲ್ಲಿ ಕಾಣಬಹುದು ಪ್ರಸ್ತುತದಲ್ಲಿ ಇದೆ.

ತುಂತುರು ನೀರಾವರಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಯಗಟಿ ಗ್ರಾಮವಿದೆ. ಯಗಟಿ ಗ್ರಾಮದಲ್ಲಿ ಅತೀ ಹೆಚ್ಚು ಕೃಷಿ ಪ್ರಧಾನ ಹಳ್ಳಿಯಾಗಿದೆ. ಅತೀ ಹೆಚ್ಚು ಕೃಷಿ ಚಟುವಟಿಕೆಯ ಮೇಲೆ ಅವಲಂಬಿತರಾಗಿ ಜೀವನದ ಮುಖ್ಯ ಕಸುಬಾಗಿದೆ. ತುಂತುರು ನೀರಾವರಿ ಒಂದು ಸೂಕ್ಷ್ಮ ನೀರಾವರಿ ವ್ಯವಸ್ಥೆಯಾಗಿದೆ. ಮಣ್ಣಿನ ಕೆಳಗೆ ಹೂತುಹೋಗಿರುವ ಸಸ್ಯಗಳ ಬೇರುಗಳಿಗೆ ನೀರು ನಿಧಾನವಾಗಿ ತೊಟ್ಟಿಕ್ಕುವಂತೆ ಮಾಡುವ ಮೂಲಕ ನೀರು ಮತ್ತು ಪೋಷಕಾಂಶಗಳನ್ನು ಉಳಿಸುವ ಸಾಮರ್ಥ್ಯವನ್ನು ಹೊಂದಿದೆ. ಕೃಷಿಯಲ್ಲಿ ಬೇಕಾಗುವ ಮೂಲಸೌಕರ್ಯಗಳ ಸರ್ಕಾರ ಸೌಲಭ್ಯಗಳ ಮೂಲಕ ಕೃಷಿಚಟುವಟಿಕೆಗಳಿಗೆ ಉತ್ತೇಜಿಸುವಂತೆ ಮಾಡಲಾಗಿದೆ.

ಸೌಲಭ್ಯಗಳು
  • ತೋಟಗಾರಿಕೆ ಇಲಾಖೆ ಅಡಿಯಲ್ಲಿ ಸೌಲಭ್ಯಗಳು ಒದಗಿಸುವುದು
  • ಕೃಷಿ ಚಟುವಟಿಕೆಗೆ ಆಹಾರ-ಧಾನ್ಯಗಳು ಕಡಿಮೆ ದರದಲ್ಲಿ ಕೃಷಿಕರಿಗೆ ನೀಡಲಾಗುವುದು
  • ಪಹಣಿ, ಜಮೀನು ಇಷ್ಟು ಡ್ರಿಪ್ ಪೈಪು ಸ್ಪೀಕ್ಲರ್ ರಿಯಾಯಿತಿ ದರದಲ್ಲಿ ಕೃಷಿ ಚಟುವಟಿಕೆಗಳಿಗೆ ಕೊಡುವುದು
  • ಹಿಂದುಳಿದ ವರ್ಗದವರಿಗೆ SC-ST ಯವರಿಗೆ 25% ಮತ್ತು OBC ಯವರಿಗೆ 15% ಸೌಲಭ್ಯಗಳನ್ನು ಕಲ್ಪಿಸಿಕೊಡುವುದು.

ಬೆಳೆಗಳು

  • ತುಂತುರು ಪದ್ಧತಿಯನ್ನು ಬೆಳೆಯುವ ಸೂರ್ಯಕಾಂತಿ, ಕಡ್ಲೆ, ಕಬ್ಬು, ಅರಿಶಿಣ, ತೋಟಗಾರಿಕೆ ಬೆಳೆಗಳಾದ ಕ್ಯಾರೆಟ್, ಮೂಲಂಗಿ, ಮೆಣಸಿನಕಾಯಿ, ಇತ್ಯಾದಿ ತರಕಾರಿಗಳನ್ನು ಬೆಳೆಯಬಹುದು
  • ಭತ್ತ,ರಾಗಿ,ಜೋಳ,ಬೆಳೆಗಳಿಗೂ ಇದನ್ನು ಸೂಕ್ತವಾಗಿದೆ.ನೀರಿನ ಪ್ರಮಾಣ 40%-50% ರಷ್ಟು ನೀರನ್ನು ಉಳಿತಾಯ ಮಾಡಬಹುದು.

ಭೂಗೋಳ

[ಬದಲಾಯಿಸಿ]

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕು ಬಯಲು ಸೀಮೆಯ ನಾಡು ಆಗಿದ್ದು ಇಲ್ಲಿ ಬೆಳೆಯುವ ಪ್ರಮುಖ ಬೆಳೆಗಳೆಂದರೆ ರಾಗಿ,ಜೋಳ, ಅಡಿಕೆ, ತೆಂಗು, ಸಾಸಿವೆ, ಸೂರ್ಯಕಾಂತಿ ಮತ್ತು ಎಳ್ಳು.

ನೈಸರ್ಗಿಕ ಸಂಪನ್ಮೂಲಗಳು

[ಬದಲಾಯಿಸಿ]

ಕಡೂರಿನ ಮುಖ್ಯ ನೈಸರ್ಗಿಕ ಸಂಪತ್ತು ಇಲ್ಲಿನ ಬೆಲೆಬಾಳುವ ಮರಗಳಿರುವ ಕಾಡುಗಳಾಗಿವೆ. ಕಡೂರಿನ ಸಮೀಪ ವೇದ ಮತ್ತು ಅವತಿ ನದಿಗಳು ಸಂಗಮಗೊಂಡು ಮುಂದೆ ವೇದಾವತಿ ನದಿಯಾಗಿ ಹರಿಯುತ್ತದೆ.

ಕಡೂರಿನ ಸುತ್ತ ಮುತ್ತ ಇರುವ ಪ್ರೇಕ್ಷಣೀಯ ಸ್ಥಳಗಳು

[ಬದಲಾಯಿಸಿ]
  • ಸಿಂಗಟಗೆರೆ ಕ್ಷೇತ್ರ - ಕಡೂರು ಪಟ್ಟಣದಿಂದ 24 ಕಿ.ಮೀ ದೂರದಲ್ಲಿದೆ. ಇಲ್ಲಿ ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯವು ಪ್ರಸಿದ್ದವಾದುದು. ಈ ದೇವಾಲಯವನ್ನು ಹೊಯ್ಸಳ ದೊರೆ ವೀರಬಲ್ಲಾಳನು ಕಟ್ಟಿಸಿದನು. ಸಿಂಗಳರಾಯನು ಈ ದೇವಾಲಯದ ಹಿಂಭಾಗದಲ್ಲಿ ಒಂದು ಕೆರೆಯನ್ನು ಕಟ್ಟಿಸಿದನು.ಆ ಕಾರಣದಿಂದ ಸಿಂಗಳರಾಯನ ನೆನಪಿನ ಸ್ಮರಣಾರ್ಥಕ್ಕಾಗಿ "ಸಿಂಗಟಗೆರೆ" ಎಂದು ಹೆಸರು ಬಂದಿತು.ಪ್ರತಿವರ್ಷ ಬುದ್ದಪೂರ್ಣಿಮೆಯಂದು ಶ್ರೀ ಕಲ್ಲೇಶ್ವರ ಸ್ವಾಮಿಯವರ ರಥೋತ್ಸವ ಜರುಗುತ್ತದೆ. ಈ ಮಹೋತ್ಸವಕ್ಕೆ ವಿವಿಧ ಕಡೆಗಳಿಂದ ಜನರು ಆಗಮಿಸುತ್ತಾರೆ. ಫೆಬ್ರವರಿಯಲ್ಲಿ ಗ್ರಾಮದೇವತೆಯಾದ 'ಉಡುಸಲಮ್ಮ' ದೇವಿಯವರ ಜಾತ್ರಾ ಮಹೋತ್ಸವ ಜರುಗುತ್ತದೆ.
  • ಶ್ರೀ ಶಿವಂಗಂಗಾಗಿರಿ ಕ್ಷೇತ್ರ - ಕಡೂರು ಪಟ್ಟಣದಿಂದ 25 ಕಿ.ಮೀ.ದೂರದಲ್ಲಿದೆ ಶ್ರೀ ವೀರಭದ್ರಸ್ವಾಮಿ ಮತ್ತು ಶ್ರೀ ಗಂಗಾಧರೇಶ್ವರರ ಕ್ಷೇತ್ರ.
  • ಶ್ರೀ ಸೀತಾರಾಮಾಂಜನೇಯ ಸ್ವಾಮಿ - ಸುಕ್ಷೇತ್ರ ಮುತ್ತಾಣೆಗೆರೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮುತ್ತಾಣೆಗೆರೆ ಎಂಬ ಗ್ರಾಮವು ಕಡೂರಿನಿಂದ 40 ಕಿ.ಮೀ ದೂರದಲ್ಲಿ ಸಿಂಗಟಗೆರೆ ಹಾಗೂ ಪಂಚನಹಳ್ಳಿಯ ನಡುವೆ ಇದೆ. ಈ ಗ್ರಾಮದಲ್ಲಿ ಸರಿಸುಮಾರು 400 ರಿಂದ 500 ಮನೆಗಳಿದ್ದು ಒಟ್ಟು 1000-1100 ಜನರು ವಾಸಿಸುತ್ತಿದ್ದಾರೆ.ಮುತ್ತಿನ ಕೆರೆ ಎಂಬ ಹೆಸರಿನಿಂದ ಮುತ್ತಾಣೆಗೆರೆ ಎಂಬ ಹೆಸರು ಬಂತು. ಗ್ರಾಮದಲ್ಲಿ ಪುರಾತನ ಕಾಲದಿಂದಲು ನೆಲೆಸಿರುವ ಆಂಜನೇಯಸ್ವಾಮಿಯ ವಿಗ್ರಹ ವಿರಾಜಮಾನವಾಗಿ ದರ್ಶನ ನೀಡುತ್ತಿದೆ.ಆಂಜನೇಯಸ್ವಾಮಿಯಲ್ಲಿ ಹೂವಿನ ಪ್ರಸಾದ ಕೇಳುವ ಪದ್ಧತಿ ಇದೆ.ಈ ಕಾರಣಕ್ಕಾಗಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಶ್ರೀ ಸ್ವಾಮಿಯ ಹೂವಿನ ಪ್ರಸಾದದ ಅಪ್ಪಣೆ ಎಂದಿಗೂ ಸುಳ್ಳಾಗುವುದಿಲ್ಲ ಎಂಬುದು ಇಲ್ಲಿನ ಹಿರಿಯರ ಅನುಭವದ ಮಾತು.ಈಗಿರುವ ದೇವಾಲಯವನ್ನು 1976 ರಲ್ಲಿ ಜೀರ್ಣೋದ್ಧಾರಗೊಳಿಸಿದ್ದು,ವಸಂತಋತು ಚೈತ್ರಮಾಸ ಶುಕ್ಲಪಕ್ಷ ನವಮಿಯಂದು ಶ್ರೀಸೀತಾರಾಮಾಂಜನೇಯಸ್ವಾಮಿಯವರ ಬ್ರಹ್ಮ ರಥೋತ್ಸವನ್ನು ಪಂಚರಾತ್ರಾಗಮೊಕ್ತವಾಗಿ ಅಚರಿಸುತ್ತಾರೆ ಹಾಗೂ ಹನುಮಜಯಂತಿ ಸಂದರ್ಭದಲ್ಲಿ ವಿಶೇಷ ಉತ್ಸವಗಳನ್ನು ನೆಡೆಸುತ್ತಾರೆ. ಈ ಗ್ರಾಮದಲ್ಲಿ ಒಟ್ಟು 11 ದೇವಾಲಯಗಳಿವೆ ಅದರಲ್ಲಿ ಪ್ರಮುಖವಾದ ದೇವಾಲಯಗಳೆಂದರೆ ಶ್ರೀಸೀತಾರಾಮಾಂಜನೇಯ ಹಾಗೂ ಶ್ರೀಲಕ್ಷೀವೆಂಕಟೇಶ್ವರ ದೇವಾಲಯಗಳು. ಈ ಗ್ರಾಮದ ಪ್ರಮುಖ ಆಕರ್ಷಣೆಗಳೆಂದರೆ ಊರಿನಕೆರೆ ಹಾಗೂ ಕಲ್ಯಾಣಿ. 18ನೆಯ ಶತಮಾನದಲ್ಲಿ ಕಲ್ಯಾಣಿಯನ್ನು ಯಜಮಾನ ಗುರುಭಕ್ತ ತಿಮ್ಮೇಗೌಡರು ಗ್ರಾಮಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಕಲ್ಯಾಣಿಯ ಜಲವನ್ನು ಪೂಜಾ ಕೈಂಕರ್ಯಗಳಿಗೆ ಈಗಲೂ ಸಹ ಉಪಯೋಗಿಸುತ್ತಾರೆ. ಈ ಗ್ರಾಮದ ಪ್ರಮುಖ ಮನೆತನವೆಂದರೆ ಹೆಬ್ಬಾಗಿಲುಮನೆ ತಿಮ್ಮೇಗೌಡರ ಮನೆತನ. ಏಕೆಂದರೆ, ತಿಮ್ಮೇಗೌಡರು ಗುರುಭಕ್ತರಾಗಿದ್ದು ತ್ರಿಕಾಲ ಶಿವಪೂಜೆಯನ್ನು ನೆಡೆಸುತ್ತಿದ್ದರು ಹಾಗೂ ಹಸಿದವರಿಗೆ/ಬಡವರಿಗೆ ಆಹಾರ,ಆಶ್ರಯ ನೀಡುತ್ತಿದ್ದರು.ಇವರ ಮಗನಾದ ಟಿ.ಎಚ್.ಶಿವನಂಜೇಗೌಡರು ಅಂದಿನ ಮೈಸೂರು ಸಂಸ್ಥಾನದ ಕಡೂರು ಜಿಲ್ಲೆಯ ಅಮುಲ್ದಾರರಾಗಿ ಮತ್ತು ಅಮೃತಪುರದ ಶಿರಸ್ತೇದಾರರಾಗಿ ಸೇವೆ ಸಲ್ಲಿಸಿದ್ದಾರೆ ಹಾಗು ರೈತರಿಗೆ ಜಮೀನನ್ನು ದಾನ ನೀಡುವ ಮೂಲಕ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದ್ದಾರೆ. ಅಂತೆಯೇ ಶಿಕ್ಷಣಕ್ಕೂ ಸಹ ಉತ್ತೇಜನ ನೀಡಿದ್ದಾರೆ. ಇಂದಿಗೂ ಕೂಡ ಇವರ ವಾಸ್ತುಗೃಹದಲ್ಲಿ ಕಾಣಬಹುದಾದ ಕೆಲಕುರುಹುಗಳೆಂದರೆ:-ಮನೆಯ ಒಳಗೆ ಇರುವಂತಹ ಬಾವಿ,18/19ನೆಯ ಶತಮಾನದಲ್ಲಿ ಉಪಯೋಗಿಸಿರುವ ವಸ್ತುಗಳು,ಹಿಂದಿನಕಾಲದ ಓಲೆಗರಿಗಳು,ಧಾರ್ಮಿಕ ಗ್ರಂಥಗಳು,ಪೂಜಾ ಸಾಮಗ್ರಿಗಳು ಇತ್ಯಾದಿ..... ಈ ಗ್ರಾಮದಲ್ಲಿ ಪ್ರಮುಖವಾಗಿ ತೆಂಗು,ರಾಗಿ,ಜೋಳ,ಹೆಸರು,ಉದ್ದು,ಅವರೆ,ಹುರುಳಿ,ಎಳ್ಳು,ಸಾಮೆ ಇತ್ಯಾದಿ... ಬೆಳೆಗಳನ್ನು ಬೆಳೆಯುತ್ತಾರೆ. ವರ್ಷದಲ್ಲಿ ಯಾವ ಬೆಳೆ ಹೆಚ್ಚು ಫಲ ನೀಡುವುದು ಎಂಬುದನ್ನು ತಿಳಿಯಲು ಜನರು ಕಾರಹುಣ್ಣಿಮೆಯ ಸಂದರ್ಭದಲ್ಲಿ ಕಾರಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬವನ್ನು ಸಾಂಪ್ರದಾಯಕವಾಗಿ ತಿಮ್ಮೇಗೌಡರ ವಂಶಸ್ಥರು ತಲಾ-ತಲಾಂತರದಿಂದ ನೆಡೆಸಿಕೊಂಡು ಬರುತ್ತಿದ್ದಾರೆ. ಈ ಸ್ಥಳವು ಬೆಂಗಳೂರಿನಿಂದ 220 ಕಿ.ಮೀ ದೂರವಿದ್ದು ಬಿ.ಎಚ್.ರಸ್ತೆಯ ಮೂಲಕ ಬಾಣಾವಾರಕ್ಕೆ ಬಂದು20 ಕಿ.ಮೀ ಹುಳಿಯಾರು ರಸ್ತೆಯಲ್ಲಿ ಚಲಿಸಿ ಎಡಭಾಗಕ್ಕೆ ಗಿರಿಬೊಮ್ಮನಹಳ್ಳಿಯ ಮಾರ್ಗವಾಗಿ3 ಕಿ.ಮೀ ಚಲಿಸಿದರೆ ಸಿಗುವುದು ಮುತ್ತಾಣೆಗೆರೆ.
  • ಕೆರೆಸಂತೆ ಶ್ರೀ ಮಹಾಲಕ್ಷ್ಮೀ ಲಕ್ಕಮ್ಮ ದೇವಿ ದೇವಸ್ಥಾನ. ಕಡೂರ್ ನಿಂದ ಬಾಣವರ ಕಡೆ ೧೭ km ದೂರದಲ್ಲಿದೆ. ಹೊಯ್ಸಳರಿಂದ ನಿರ್ಮಿಸಿದ್ದ ದೇವಾಲಯವಿದು.
  • ದಂಡಿಗೆಕಲ್ಲು ಶ್ರೀ ರಂಗನಾಥಸ್ವಾಮಿ ದೇವಸ್ಥಾನ, ಕೆ.ದಾಸರಹಟ್ಟಿ
  • ಕುಂತಿ ಹೊಳೆ - ವೇದಾವತಿ ನದಿಯ ಕವಲಾದ ಈ ಹೊಳೆಯ ಬಳಿಗೆ ಮಹಾಭಾರತ ಕಾಲದಲ್ಲಿ ಪಾಂಡವರು ಬಂದಿದ್ದರೆಂಬ ಪ್ರತೀತಿ ಇದೆ.
  • ಹುರುಕನಹಳ್ಳಿ - ಇಂದಿನ ಅಜ್ಜಂಪುರ (ಹಿಂದಿನ ಕಡೂರು) ತಾಲ್ಲೂಕು ಕೇಂದ್ರದಿಂದ ಉತ್ತರಕ್ಕೆ 24 ಕಿ ಮೀ ಹಾಗೂ ಶ್ರೀ ದುರ್ಗಾಂಭಾ ದೇವಿ ಪುಣ್ಯ ಕ್ಷೇತ್ರ ಅಂತರಘಟ್ಟೆಯಿಂದ ದಕ್ಷಿಣಕ್ಕೆ 6 ಕಿಮೀ ಹಾಗೂ ಮಲ್ಲಿಕಾರ್ಜುನ ಸ್ವಾಮಿ ಪುಣ್ಯ ಕ್ಷೇತ್ರ ಯಗಟಿ ಪುರದಿಂದ ಪಶ್ಚಿಮಕ್ಕೆ 6 ಕಿ ಮೀ ಮತ್ತು ಶ್ರೀ ಗುರು ರೇವಣಸಿದ್ದೇಶ್ವರ ಸ್ವಾಮಿ ಮಠ ಆಸಂದಿ ಯಿಂದ ಪೂರ್ವಕ್ಕೆ 6 ಕಿಮೀ ದೂರದಲ್ಲಿದ್ದು ಹುರುಕನಹಳ್ಳಿಯಲ್ಲಿ ಶ್ರೀ ಚೌಡೇಶ್ವರಿ ದೇವಿ ದೇವಾಲಯ ಇದೆ.
  • ಶಂಖತೀರ್ಥ - ರಾಮಾಯಣ ಕಾಲದಲ್ಲಿ ರಾಮನು ಲಕ್ಷ್ಮಣ,ಸೀತೆಯರೊಡನೆ ವನವಾಸದಲ್ಲಿದ್ದಾಗ ಈ ಜಾಗಕ್ಕೂ ಭೇಟಿ ನೀಡಿದ್ದನೆಂದು ಪ್ರತೀತಿ.
  • ಕನಕರಾಯನ ಗುಡ್ಡ - ಇಲ್ಲಿ ವೆಂಕಟೇಶ್ವರನಮೂರ್ತಿ ಸ್ವಯಂ ಉದ್ಭವವಾಗಿದೆ ಎಂಬ ಪ್ರತೀತಿ ಇದೆ. ಈ ವಿಗ್ರಹ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ತಲೆಯ ಭಾಗ ದೇವಾಲಯದ ಚಾವಣಿಯನ್ನು ಸ್ಪರ್ಶಿಸಿದ ದಿನ ಪ್ರಳಯ ಆಗುತ್ತದೆ ಎಂಬುದು ಸ್ಥಳೀಯರ ನಂಬಿಕೆಯಾಗಿದೆ. ಆದರೆ ಇದಕ್ಕೆ ಯಾವುದೇ ಆಧಾರಗಳಿಲ್ಲ ಮತ್ತು ಅದರ ಬೆಳವಣಿಗೆಯಲ್ಲಿ ಯಾವ ಪ್ರಗತಿಯೂ ಕಂಡು ಬಂದಿಲ್ಲ.
  • ನಿರ್ವಾಣ ಸ್ವಾಮಿ ಗುಡ್ಡ - ಊರ ಹೊರಗಿನ ಈ ಗುಡ್ಡದ ಮೇಲೆ ನಿರ್ವಾಣ ಸ್ವಾಮಿಯ ದೇವಾಲಯವೂ, ಸನಿಹದಲ್ಲೇ ಗುಹೆಯೂ ಇದೆ. ಈ ಗುಹೆಗೂ, ಚಿಕ್ಕಮಗಳೂರು ಬಳಿಯ ಬಾಬಾಬುಡನ್ ಗಿರಿ ಪರ್ವತದ ಮೇಲಿನ ದತ್ತ ಪೀಠಕ್ಕೂ ಸಂಪರ್ಕವಿದೆಯೆಂಬ ಪ್ರತೀತಿ ಇದೆ. ಈ ತಾಣದಲ್ಲಿಏಟು ಎದುರೇಟು ಚಿತ್ರವನ್ನು ಚಿತ್ರೀಕರಿಸಲಾಗಿದೆ.
  • ಅಯ್ಯನ ಕೆರೆ - ಸಮೀಪದ ಸಖರಾಯಪಟ್ಟಣದ ಬಳಿ ಪ್ರಖ್ಯಾತವಾದ ಈ ಕೆರೆಯಿದ್ದುಏಟು ಎದುರೇಟು ಮತ್ತಿತರ ಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡಿವೆ.
  • ಮಲ್ಲೇಶ್ವರ - ಗ್ರಾಮದೇವತೆ ಮಲ್ಲೇಶ್ವರದಮ್ಮನ ಜಾತ್ರೆ ಇಲ್ಲಿ ನಡೆಯುತ್ತದೆ. ಕಡೂರಿನಿಂದ ಇಲ್ಲಿಗೆ ಕೇವಲ ಒಂದೂವರೆ ಕಿ.ಮೀ. ದೂರ. ಆವತಿ ಹಳ್ಳವೆಂಬ ಪುಟ್ಟ ಹೊಳೆಯ ದಂಡೆಯಲ್ಲಿ ಈ ಊರಿದೆ.
  • ದೇವನೂರು - ಜೈಮಿನಿ ಭಾರತ ಬರೆದ ಮಹಾಕವಿ ಲಕ್ಷ್ಮೀಶನ ಜನ್ಮ ಸ್ಥಳ ಇದು. ಇಲ್ಲಿ ಲಕ್ಶ್ಮಿಕಾಂತಸ್ವಾಮಿ ದೇವಾಲಯವಿದೆ.
  • ಬಿಸಲೇಹಳ್ಳಿ - ಸಮೀಪದ ಬ್ರಹ್ಮಸಮುದ್ರ ಇಲ್ಲಿ ಚಾಲುಕ್ಯರ ಕಾಲದ "ವೀರ ನಾರಾಯಣ" ಹಾಗು "ಶಿವನ" ದೇವಸ್ಥಾನಗಳಿವೆ.
  • ಹಂಪಾಂಪುರ - ಇಲ್ಲಿ "ಉಗ್ರ ನರಸಿಂಹ "ದೇವಾಲಯವಿದೆ ನಂಜಪ್ಪನಹಳ್ಳಿ ಎಂದು ಕರೆಯುತ್ತಾರೆ ಸುಮಾರು ೨೦೦ ವರ್ಷಗಳ ಹಿಂದಿನ ದೇವಾಲಯ. ದೇವಾಲಯವಿರುವ ಜಾಗದಲ್ಲಿ ಊರು ನಾಶಗೊಂಡು ಯಾವುದೇ ಮನೆಗಳು ಇರುವುದಿಲ್ಲ ದೇವಾಲಯ ಮಾತ್ರ ಇರುವುದು. ವಿಜಯನಗರ ಸಾಮ್ರಾಜ್ಯ ಪತನಗೊಂಡ ನಂತರ ಅಲ್ಲಿಂದ ಬಂದ ಜನರು ಇಲ್ಲಿ ನೆಲೆಸಿ ದೇವಾಲಯ ಪ್ರತಿಷ್ಠಾನ ಗೊಳಿಸಿದ್ದಾರೆ ಎಂಬುದು ಪ್ರತೀತಿ ತುಂಬ ಹಳೆಯ ಕಾಲದ ದೇವಾಲಯ ಇದಾಗಿದ್ದು ಇಲ್ಲಿ ಯಾವುದೇ ಬರಹಗಳು ಕೆತ್ತನೆಗಳು ಇಲ್ಲದ ಕಾರಣ ದೇವಾಲಯ ನಿರ್ಮಾಣದ ಕುರಿತು ಯಾವುದೇ ಸರಿಯಾದ ರೀತಿಯ ದಾಖಲೆಗಳು ದೊರೆತಿಲ್ಲ.

ಪ್ರಮುಖ ಚರ್ಚ್, ಮಸೀದಿ ಮತ್ತು ದೇವಸ್ಥಾನಗಳು

[ಬದಲಾಯಿಸಿ]
  • ಶ್ರೀ ಗಂಗಂಭಿಕಾ ದೇವಸ್ಥಾನ, ಕೆ. ಹೊಸಹಳ್ಳಿ
  • ಶ್ರೀ ರಂಗನಾಥಸ್ವಾಮಿ ದೇವಸ್ಥಾನ, ಕೆ. ದಾಸರಹಟ್ಟಿ.
  • ಶ್ರೀ ಚಂಡಿಕಾ ಭಾಮಿನಿ ಅಮ್ಮನವರ ದೇವಾಲಯ ,ಆಸಂದಿ
  • ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ದೇವಾಲಯ ,ಆಸಂದಿ
  • ಶ್ರೀ ವೀರಭದ್ರೇಶ್ವರ ಸ್ವಾಮಿ ಆಲಯ ,ಆಸಂದಿ
  • ಶ್ರೀ ಬೇಗೂರು ಬೀರಲಿಂಗೇಶ್ವರ ಸ್ವಾಮಿ, ಆಸಂದಿ
  • ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ,ಆಸಂದಿ
  • ಆಸಂದಿಯ ಶ್ರೀ ಗುರು ರೇವಣಸಿದ್ದೇಶ್ವರ ಸ್ವಾಮಿ ಮಠ
  • ಕೆರೆಸಂತೆ ಶ್ರೀ ಮಹಾಲಕ್ಷ್ಮೀ ಲಕ್ಕಮ್ಮ ದೇವಿ ದೇವಸ್ಥಾನ
  • ಹುರುಕನಹಳ್ಳಿ ಶ್ರೀ ಚೌಡೇಶ್ವರಿ ದೇವಿ ಸನ್ನಿದಿ {ಆಲದಮರ}
  • ಶ್ರೀ ಶಿವಶಂಕರಿ ದೇವಿ ಸನ್ನಿಧಿ ಹಿರೇಬಳ್ಳೇಕೆರೆ
  • ಶ್ರೀ ಈಶ್ವರ ಸ್ವಾಮಿ ದೇವಾಲಯ ಹಿರೇಬಳ್ಳೆಕೆರೆ
  • ಶ್ರೀ ರಂಗನಾಥ ಸ್ವಾಮಿ ದೇವಾಲಯ ಚಿಕ್ಕಬಳ್ಳೆಕೆರೆ
  • ಸಿಂಗಟಗೆರೆ ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯ
  • ಕೆರೆಸಂತೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ವಿಷ್ಣು ಸಮುದ್ರ ಕೆರ ದಂಡೆಯಲ್ಲಿರುತ್ತದೆ.
  • ಹಿರೆನಲ್ಲೂರು ಪುರಾತನ ವಾಸ್ತು ಶಿಲ್ಪದ ಶ್ರೀ ಮಲ್ಲಕಾರ್ಜುನ ಸ್ವಾಮಿ ದೇವಾಲಯ ಹಾಗೂ ಬೃಹತ್ ಗಾತ್ರದ ನಂದಿ ವಿಗ್ರಹ ಹೊಂದಿರುತ್ತದೆ
  • ಬಳ್ಳೆಕೆರೆಯ ಆಂಜನೇಯ ದೇವಸ್ಥಾನ
  • ರಾಘವೇಂದ್ರ ಸ್ವಾಮಿ ಮಠ
  • ಪ್ರಸನ್ನ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನ
  • ಕನ್ನಿಕಾ ಪರಮೇಶ್ವರಿ ದೇವಸ್ಥಾನ
  • ಶನಿ ಮಹಾತ್ಮನ ಗದ್ದುಗೆ
  • ಆಂಜನೇಯ ದೇವಸ್ಥಾನ
  • ಗಣಪತಿ ದೇವಸ್ಥಾನ
  • ಯಗಟಿ ಶ್ರೀಮಲ್ಲಿಕಾರ್ಜುನ ಸ್ವಾಮಿ ದೇವಾಸ್ಥಾನ ವೇದಾವತಿ ನದಿ ದಂಡೆಯ ಮೇಲಿದೆ.ಕಡೂರು ತಾಲೂಕಿನಿಂದ ಸುಮಾರು ೨೦ ಕಿ ಮೀ ದೂರದಲ್ಲಿರುವ ಯಗಟಿ ಪುರ ಎಂಬ ಗ್ರಾಮದಲ್ಲಿದೆ.
  • ಶ್ರೀ ಚಂದ್ರ ಮೌಳೇಶ್ವರ ಸ್ವಾಮಿ ದೇವಸ್ಥಾನ ಇದು ಕಡೂರು ಪಟ್ಟಣದ ಉತ್ತರ ದಿಕ್ಕಿಗಿದೆ
  • ನಿತ್ಯಾಧಾರ ಮಾತೆಯ ದೇವಾಲಯವೆಂಬ ಕ್ರೈಸ್ತರ ದೇವಾಲಯದೊಂದಿಗೆ, ಒಂದು ಮುಸ್ಲಿಮರ ಮಸೀದಿಯೂ ಇಲ್ಲಿದೆ.
  • ಮುತ್ತು ಮಾರಿಯಮ್ಮ ದೇವಸ್ಥಾನ.
  • ಕಡೂರು ತಾಲೂಕಿನಿಂದ 24 ಕಿಲೋ ದೂರದಲ್ಲಿ ಹುರುಕನಹಳ್ಳಿ ಗ್ರಾಮದಲ್ಲಿ ವಿಶಾಲವಾದ 2 ಎಕರೆ ಬೃಹದ್ದಾಕಾರದ ಆಲದ ಮರದಡಿಯಲ್ಲಿನ ಚೌಡೇಶ್ವರಿ ದೇವಾಲಯ

ಕಡೂರು ತಾಲೂಕಿನಿಂದ ೧೫ ಕಿಲೋ ದೂರದಲ್ಲಿ ಯರದಕೆರೆ ಎಂಬ ಊರು ಇದ್ದು, ಆ ಊರಿನಲ್ಲಿ ೩೦೦ ವರ್ಷಗಳ ಇತಿಹಾಸ ಇರುವ ಶ್ರೀ ದೊಡ್ಡಮ್ಮ ದೇವಿ ದೇವಸ್ಥಾನ ಇದೆ. ತಾಲೂಕಿನಿಂದ ಮೂವತ್ತೈದು ಕಿಲೋಮೀಟರ್ ದೂರದಲ್ಲಿರುವ  ಆಣೆಗೆರೆ ಗ್ರಾಮದಲ್ಲಿ ನೆಲೆಸಿರುವ ಶ್ರೀ ವೀರಪುರಾತೇಶ್ವರಸ್ವಾಮಿಯು ಊರಿನ ಮುಂಭಾಗದ ದೇವಸ್ಥಾನವಾಗಿದ್ದು ಜಾತ್ರಾಮಹೋತ್ಸವವನ್ನು ಆಚರಿಸಲಾಗುತ್ತದೆ.

ಸೇವನಗರ

[ಬದಲಾಯಿಸಿ]
  • ಕಲೆ ಮತ್ತು ಸಂಸ್ಕೃತಿ ಚಿಕ್ಕಮಗಳೂರು ಜಿಲ್ಲೆಯ. ಕಡೂರು ತಾಲೂಕಿನ, ಸೇವಾನಗರ ಎಂಬ ಗ್ರಾಮದಲ್ಲಿ   ಗೋಧಿ ಹಬ್ಬ ಆಚರಿಸುತ್ತಾರೆ. ಈ ಹಬ್ಬವು ಐದು ವರ್ಷಗಳಿಗೊಮ್ಮೆ ಅಂದರೆ ಅವರಿಗೆ ಅನುಕೂಲವಾಗುವಂತೆ. ಆಚರಣೆಯನ್ನು ಮಾಡುತ್ತಾರೆ. ಈ ಗೋದಿ ಹಬ್ಬದ ವಿಶೇಷ ವೆಂದರೆ. ಈ ಹಬ್ಬವು ಒಂಬತ್ತು ದಿನಗಳ ಕಾಲ, ಆಚರಿಸಲಾಗುತ್ತದೆ. ಮೊದಲನೆಯ ದಿನವು ಗೋಧಿಯನ್ನು ಒಂದು ಬುಟ್ಟಿಯಲ್ಲಿ ಒಣಗಿದ ಸಗಣಿಯನ್ನು ನೆನೆಸಿ ಬುಟ್ಟಿಯಲ್ಲಿ ಹಾಕಿ ಗೋಧಿಯನ್ನು ಬಿತ್ತುವುದು. ಹೀಗೆ ಒಂಬತ್ತು ದಿನಗಳವರೆಗೂ ಕೂಡ ಗ್ರಾಮದ ಯುವತಿಯರ ಎಲ್ಲರೂ ಕೂಡ ನೀರಿಗೆ ಗುಂಪಾಗಿ ಹೋಗುವುದು. ನೀರನ್ನು ಗೋಧಿಯ ಮೇಲೆ ಹಾಕಿ ಹಾಡು ಹೇಳುತ್ತಾ, ಕುಣಿಯುತ್ತ ತುಂಬಾ ಸಂತೋಷದಿಂದ ಈ ಹಬ್ಬವನ್ನು ಆಚರಿಸುತ್ತಾರೆ.  ನಂತರ 9ನೇ ದಿನ ಊರಿನ ಎಲ್ಲಾ ಗ್ರಾಮಸ್ಥರು ಸೇರಿ ದೇವಸ್ಥಾನದ ಮುಂದೆ ಎಲ್ಲಾ ಯುವತಿಯರು ಗೋಧಿಯ ಬುಟ್ಟಿಯನ್ನು ತಲೆ ಮೇಲೆ ಎತ್ತಿಕೊಂಡು ಕುಣಿಯುತ್ತ ಹಾಡುತ್ತಾ ಖುಷಿಯಿಂದ ಎಲ್ಲಾ ಗೋಧಿಯ ಸಸಿಯನ್ನು ಕೇಳುತ್ತಾರೆ.  ನಂತರ ಯಾವುದಾದರೂ ನೀರು ಇರುವ ಜಾಗದಲ್ಲಿ ಹೋಗಿ ಗೋಧಿಯ ಬುಟ್ಟಿಯನ್ನು ತೇಲಿಸುತ್ತಾರೆ. ಹೀಗೆ ಗೋಧಿ ಸಸಿ ಹಬ್ಬವು ಒಂಬತ್ತು ದಿನಗಳ ಕಾಲ ಲಂಬಾಣಿ ಜನರು. ಹಬ್ಬವಾಗಿದ್ದು ಒಂಬತ್ತು ದಿನಗಳ ಕಾಲ ನಡೆಸುವಂತಹ ಹಬ್ಬವಾಗಿದೆ [೧]

ಬೆಳೆಗಳು

[ಬದಲಾಯಿಸಿ]

ಕಬ್ಬು, ರಾಗಿ, ಟೊಮೋಟೊ, ಈರುಳ್ಳಿ, ಕೋಸು , ಮೆಕ್ಕೆ ಜೋಳಗಳನ್ನು ಬೆಳೆಯುತ್ತಾರೆ.

ಆಧಾರಗಳು

[ಬದಲಾಯಿಸಿ]
  1. Kadur Population Census 2011
  2. Kadur (Karnataka) Assembly Constituency Elections[ಶಾಶ್ವತವಾಗಿ ಮಡಿದ ಕೊಂಡಿ]
  3. "ಆರ್ಕೈವ್ ನಕಲು". Archived from the original on 2017-01-03. Retrieved 2016-12-13.

pattanagere

"https://kn.wikipedia.org/w/index.php?title=ಕಡೂರು&oldid=1234043" ಇಂದ ಪಡೆಯಲ್ಪಟ್ಟಿದೆ