ವಿಷಯಕ್ಕೆ ಹೋಗು

ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬ್ರೆಝಿಲ್‌ನಲ್ಲಿ ಅಮೇಝಾನ್ ರೇನ್‌ಫಾರೆಸ್ಟ್ ಪ್ರದೇಶ.ದಕ್ಷಿಣ ಅಮೇರಿಕಾದ ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳಲ್ಲಿ ತಳಿಗಳ ಅತಿ ದೊಡ್ಡ ವೈವಿಧ್ಯಮಯತೆ ಇದೆ.[][]

ಭೂಮಧ್ಯರೇಖೆಯಿಂದ ಸುಮಾರು 28 ಡಿಗ್ರಿಗಳ ಅಂತರದಲ್ಲಿ ಉತ್ತರಕ್ಕೆ ಇಲ್ಲವೇ ದಕ್ಷಿಣಕ್ಕೆ ಇರುವ ಸ್ಥಳವೇ ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು . ಇವುಗಳು ಕಂಡುಬರುವುದು ಏಷಿಯಾ, ಆಸ್ಟ್ರೇಲಿಯಾ, ಆಫ್ರಿಕಾ, ದಕ್ಷಿಣ ಅಮೇರಿಕಾ, ಮಧ್ಯ ಅಮೇರಿಕಾ, ಮೆಕ್ಸಿಕೊ ಹಾಗೂ ಪೆಸಿಫಿಕ್ ದ್ವೀಪಗಳ ಹಲವು ದ್ವೀಪಗಳು. ವಿಶ್ವ ವನ್ಯಜೀವಿ ನಿಧಿಯ ಪ್ರಕಾರ (ಜೀವರಾಶಿ)ಜೀವ ಮಂಡಲ, ಉಷ್ಣವಲಯದ ಆರ್ದ್ರ ಕಾಡುಗಳ ಜಾತಿಯ ಕಾಡುಗಳನ್ನು ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು ಉಷ್ಣವಲಯದ ಆರ್ದ್ರ ಕಾಡುಗಳು ಅಥವಾ ವಿಸ್ತಾರ ಕಾಡುಗಳು ) ಮತ್ತು ಕೆಲವೊಮ್ಮೆ ಅವುಗಳನ್ನು ತಗ್ಗುಪ್ರದೇಶದ ಉಷ್ಣವಲಯದ ನಿತ್ಯಹಸಿರಿನ ಕಾಡುಗಳು . ಎಂದು ಕೂಡ ವರ್ಗೀಕರಿಸಲಾಗುತ್ತದೆ. ಈ ಪರಿಸರದಲ್ಲಿ ವರ್ಷದಲ್ಲಿ ಸಾಮಾನ್ಯವಾಗಿ ಕೆಲವೊಮ್ಮೆ ಕನಿಷ್ಠ 175 cm (69 in) ಮತ್ತು 200 cm (79 in) ಮಧ್ಯಮ ಪ್ರಮಾಣದ ಮಳೆ ಬೀಳುತ್ತದೆ . ಅದೇ ರೀತಿ ವರ್ಷದ 18 °C (64 °F) ಎಲ್ಲಾ ತಿಂಗಳುಗಳ ಅವಧಿಯಲ್ಲಿಯೂ ಕೂಡ ತಾಪಮಾನವು ಮಿತಿಮೀರುತ್ತಾ ಸಾಗುತ್ತದೆ.[] ಭೂಗ್ರಹದಲ್ಲಿರುವ ಎಲ್ಲಾ ಪ್ರಾಣಿಗಳು ಮತ್ತು ಸಸ್ಯ ಪ್ರಬೇಧಗಳಿಗೆ ನಿತ್ಯಹರಿದ್ವರ್ಣದ ಕಾಡುಗಳು ಒಂದು ವಸತಿ ನೆಲೆಯಾಗಿದೆ.[] ಮಳೆಕಾಡುಗಳ ಅನೇಕ ಪ್ರದೇಶಗಳಲ್ಲಿ ನೆಲದ ವರೆಗೆ ಸೂರ್ಯನ ಬೆಳಕು ಬೀಳುವುದಿಲ್ಲವಾದ್ದರಿಂದ , ಇಲ್ಲಿ ದಟ್ಟವಾದ ಕುರುಚಲು ಗಿಡಗಳು ಬೆಳೆಯುವುದಿಲ್ಲ. ಇದು ಮಾನವರಿಗೆ ಮತ್ತು ಇತರ ಪ್ರಾಣಿಗಳಿಗೆ ಅರಣ್ಯದ ಮೂಲಕ ಆಚೀಚೆ ನಡೆದಾಡಲು ಸಾಧ್ಯವಾಗುತ್ತದೆ. ಒಂದು ವೇಳೆ ಯಾವುದೇ ಕಾರಣಕ್ಕಾಗಿ ಭೂಮಿಯ ಮೇಲಿನ ಮರಗಿಡಗಳನ್ನು ನಾಶಪಡಿಸುವುದು ಅಥವಾ ಕಡಿಮೆ ಮಾಡಿದ್ದಲ್ಲಿ, ಭೂಮಿಯ ಮೇಲೆ ವಿವಿಧ ಜಾತಿಯ ಬಳ್ಳಿಗಳು, ಗಿಡಪೊದೆಗಳು ಮತ್ತು ಸಣ್ಣ ಜಾತಿಯ ಮರಗಳು ದಟ್ಟವಾಗಿ ಕೂಡಲೇ ಹಬ್ಬಿ ದಟ್ಟಾರಣ್ಯದ ಕಾಡು ನಿರ್ಮಾಣವಾಗುವುದು.[] ಉಷ್ಣವಲಯದ ನಿತ್ಯಹರಿದ್ವರ್ಣ ಕಾಡುಗಳು ಪ್ರಸ್ತುತವಾಗಿ ಮನುಷ್ಯನ ಚಟುವಟಿಕೆಯಿಂದಾಗಿ ಛಿದ್ರಗೊಂಡಿವೆ. ಪ್ರಾಚೀನ ಕಾಲದಲ್ಲಿ ಜ್ವಾಲಾಮುಖಿ ಮತ್ತು ಪರಿಸರ ಬದಲಾವಣೆಗಳಂತಹ ಭೌಗೋಳಿಕೆ ಪ್ರಕ್ರಿಯೆಗಳಿಂದಾಗಿ ವಾಸದ ಭೂಮಿಯು ತುಣುಕುಗಳಾಗಿ ಭಾಗವಾಗಿದೆಯಲ್ಲದೇ, ಅವುಗಳನ್ನು ವಿಭಿನ್ನತೆಯ ವಾಹಕಗಳೆಂದು ಗುರುತಿಸಲಾಗಿದೆ.[] ಆದ್ದಾಗ್ಯೂ, ಮಾನವರು ಅತೀ ವೇಗವಾಗಿ ಈ ವಾಸಭೂಮಿಯನ್ನು ನಾಶಮಾಡುವುದರಿಂದ ಪ್ರಭೇದಗಳ ಅಳಿವಿಗೆ ಅದೊಂದು ಪ್ರಮುಖ ಕಾರಣವಾಗಬಲ್ಲುದೆಂದು ಊಹಿಸಲಾಗುತ್ತಿದೆ.

ಲಕ್ಷಣಗಳು

[ಬದಲಾಯಿಸಿ]
ಪೆರುವಿನಲ್ಲಿರುವ ಅಮೇಜಾನ್ ನದಿಯ ನಿತ್ಯ ಹರಿದ್ವರ್ಣದ ಕಾಡುಗಳು

ನಿತ್ಯಹರಿದ್ವರ್ಣದ ಕಾಡುಗಳು ಇತರೆಲ್ಲೆಡೆ ಇರುವ ಒಟ್ಟು ಜೀವಿಗಳಿಗಿಂತ ಹೆಚ್ಚಾಗಿ ವಿಶ್ವಾದ್ಯಂತದ ಅನೇಕ ಜೀವಪ್ರಬೇಧಗಳಿಗೆ ಅಥವಾ ಜನಸಂಖ್ಯೆಗೆ ಒಂದು ನೆಲೆಯಾಗಿದೆ. ವಿಶ್ವದ ಶೇಕಡಾ 80% ರಷ್ಟು ಜೀವವೈವಿಧ್ಯ ಗಳು ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳಲ್ಲಿವೆ.[] ದಟ್ಟಾರಣ್ಯದಲ್ಲಿ 50 ರಿಂದ 85 ಮೀಟರ್ಗಳಿಂದ ಹೆಚ್ಚು ಎತ್ತರವಾಗಿ ಬೆಳೆಯುವ ಹುಲುಸಾದ ಸೊಪ್ಪಿನ ಮರಗಳು ಈ ಕಡಿಮೆ ಎತ್ತರವಿರುವ ದಟ್ಟ ಪೊದರುಗಳ ಸಮೂಹದ ರಚನೆಗೆ ಅವಕಾಶ ನೀಡುತ್ತದೆ. ಈ ಮರಗಳಿಂದ ಬೀಳುವ ಸಾವಯವ ಪದಾರ್ಥಗಳು ಭೂಮಿಯ ಮೇಲೆ ಬಿದ್ದು ಅತಿ ಬೇಗನೆ ಕೊಳೆಯುತ್ತದಲ್ಲದೇ ಅತೀ ಬೇಗನೆ ಮಣ್ಣು ಕೂಡ ಪೋಷಕಾಂಶಯುಕ್ತವಾಗುತ್ತದೆ.

ನಿತ್ಯಹರಿದ್ವರ್ಣದ ಕಾಡುಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆ ಬೀಳುತ್ತದೆ. ಇದು ಕೆಲವೊಮ್ಮೆ ಪೋಷಕಾಂಶಯುಕ್ತ ದ್ರವದ ಸೋರಿಕೆಯ ಮೂಲಕ ಮಣ್ಣಿನ ಗುಣಮಟ್ಟವನ್ನು ಕಡಿಮೆಗೊಳಿಸುತ್ತದೆ. ಆಕ್ಸಿಸೋಲ್ಸ್ಗಳೆಂದರೆ ಅಕಾಲಿಕವಾಗಿ ಅರಣ್ಯಪ್ರದೇಶದಲ್ಲಿ ಪ್ರವಾಹದಿಂದ ಸಾಗಿಬಂದ ಮಣ್ಣಾಗಿದ್ದು, ಅವುಗಳು ಒಂದೆಡೆ ಫಲವತ್ತಾದ ಹೂಳಿನ ರಾಶಿಯಾಗಿ ಸಂಗ್ರಹಗೊಂಡಿರುತ್ತದೆ. ಉಷ್ಣವಲಯದ ನಿತ್ಯಹರಿದ್ವರ್ಣ ಕಾಡುಗಳು 20ನೇ ಶತಮಾನದುದ್ದಕ್ಕೂ ಹೆಚ್ಚಿನ ಮರದ ದಿಮ್ಮಿಗಳ ಸಾಗಾಟ ಮತ್ತು ಕೃಷಿ ಚಟುವಟಿಕೆಗಳಿಗೆ ಕಾರಣವಾಯಿತಲ್ಲದೇ, ವಿಶ್ವಾದ್ಯಂತ ವ್ಯಾಪಕವಾಗಿ ಆವರಿಸಿರುವ ನಿತ್ಯಹರಿದ್ವರ್ಣದ ಕಾಡುಗಳು ಈ ಕಾರಣದಿಂದಾಗಿ ಅಳಿವಿನಂಚಿನತ್ತ ಸಾಗಿದವು.[][] ನಿತ್ಯಹರಿದ್ವರ್ಣದ ಕಾಡುಗಳನ್ನು “ಭೂಮಿಯ ಶ್ವಾಸಕೋಶಗಳು” ಎಂದು ಕೂಡ ಕರೆಯಲ್ಪಡುತ್ತವೆ. ಹಾಗಿದ್ದರೂ ಕೂಡ ನಿತ್ಯಹರಿದ್ವರ್ಣಕಾಡುಗಳ ಬಗ್ಗೆ ಹೇಳಲಾಗುವ ಈ ಹೇಳಿಕೆಗೆ ವೈಜಾÕನಿಕ ನೆಲೆಯ ಆಧಾರಗಳಿಲ್ಲ. ಯಾಕೆಂದರೆ ಈ ಕಾಡುಗಳು ಸ್ವಲ್ಪ ಪ್ರಮಾಣದ ಆಮ್ಲಜನಕ ಹೊಂದಿರುತ್ತದೆ ಅಥವಾ ಸಂಪೂರ್ಣ ಪ್ರಮಾಣದ ಆಮ್ಲಜನಕದ ಉತ್ಪಾದನೆ ಮಾಡದಿದ್ದರೂ , ಆಮ್ಲಜನಕ ಕ್ಕೆ ತಟಸ್ಥವಾಗಿರುತ್ತವೆ..[೧೦][೧೧] ನಿತ್ಯ ಹರಿದ್ವರ್ಣದ ಕಾಡುಗಳು ಆರ್ದ್ರತೆಯಿಂದ ಕೂಡಿರುತ್ತವೆ. ಎತ್ತರವಾದ, ಅಗಲವಾದ ಎಲೆಗಳನ್ನು ಹೊಂದಿರುವ ನಿತ್ಯ ಹಸಿರು ಮರಗಳು ಪ್ರಬಲವಾಗಿರುವುದರಿಂದ ಅರಣ್ಯಪ್ರದೇಶದಲ್ಲಿ ಎಲೆಗಳ ದಟ್ಟ ಹೊದಿಕೆಯನ್ನು ರಚಿಸುತ್ತವೆ. ಎಮರ್ಜೆಂಟ್ಸ್ ಎನ್ನುವ ಎತ್ತರದ ಮರಗಳು ಈ ಕ್ಯಾನೋಪಿ ಹೊದಿಕೆಯಿಂದ ಮೇಲಕ್ಕೆ ಬೆಳೆಯುತ್ತವೆ. ಈ ಸಸ್ಯ ಹೊದಿಕೆಯ ಮೇಲ್ಭಾಗವು ಕೆಲವೊಮ್ಮೆ ಹೆಚ್ಚಿನ ಪ್ರಮಾಣದಲ್ಲಿರುವ ಆರ್ಕಿಡ್‌ಗಳು, ಬ್ರೊಮಿಲಿಯಾಡ್‌ಗಳು, ಮತ್ತು ಪಾಚಿ ಶಿಲಾವಲ್ಕಗಳಂತಹ ಮರಗಳ ಕಾಂಡಗಳಿಗೆ ಅಂಟಿಕೊಂಡಿರುವ ಪರೋಪಜೀವಿ ಸಸ್ಯರಾಶಿ ಸಂಪತ್ತಿಗೆ ಆಧಾರಸ್ತಂಭವಾಗಿರುತ್ತದೆ. ನಿತ್ಯಹರಿದ್ವರ್ಣದ ಕಾಡುಗಳಲ್ಲಿನ ಸಣ್ಣಜಾತಿಯ ಗಿಡಗಳು ಅಥವಾ ಸಣ್ಣಗಾತ್ರದ ಪೊದರು ಸಸ್ಯಗಳಿಗೆ ಯಾವುದೇ ಸೂರ್ಯನ ಪ್ರಕಾಶವು ಲಭಿಸುವುದಿಲ್ಲ ಹಾಗೆಯೇ, ಇಲ್ಲಿ ನೆರಳಿಗೆ ಹೊಂದಿಕೊಳ್ಳುವ ಪೊದೆಗಳು, ಮೂಲಿಕೆಗಳು, ಜರಿ ಗಿಡಗಳು, ಸಣ್ಣ ಮರಗಳು ಮತ್ತು ಚೌಬೀನೆಗಳಂತಹ ಬಳ್ಳಿ ಜಾತಿಯ ಸಸ್ಯಗಳು ಸೂರ್ಯನ ಬೆಳಕನ್ನು ಪಡೆಯುವುದಕ್ಕೋಸ್ಕರ ಮರವನ್ನು ಸುತ್ತಿ ಬಳಸಿ ಬೆಳೆಯುತ್ತವೆ. ಚದುರಿದಂತಿರುವ ಪೊದೆಜಾತಿಯ ಸಸ್ಯರಾಶಿಗಳಿಂದಾಗಿ ಜನರು ಮತ್ತು ಇತರ ಪ್ರಾಣಿಗಳು ಅರಣ್ಯದಲ್ಲಿ ನಡೆದಾಡಲು ಅನುಕೂಲವಾಗುತ್ತದೆ. (ಪರ್ಣಪಾತಿ)ಉದುರುಲೆ ಅರಣ್ಯಗಳು ಮತ್ತು ಅರೆಪರ್ಣಪಾತಿ ಅರಣ್ಯಗಳು ಅಥವಾ ಅರಣ್ಯಗಳಲ್ಲಿ ಪೊದೆ ಜಾತಿಯ ಸಸ್ಯಗಳು ಕೆಲವೊಂದು ಕಾರಣಗಳಿಂದಾಗಿ ಅಲ್ಲಲ್ಲಿ ಹರಡಿದೆಯಲ್ಲದೇ, ಭೂಮಿಯ ಕೆಳಭಾಗದಲ್ಲಿ ಕೆಲವೊಂದು ಜಾತಿಯ ಬಳ್ಳಿಗಳು, ಪೊದೆಗಳು ಮತ್ತು ಸಣ್ಣ ಜಾತಿಯ ಮರಗಳು ಅಲ್ಲಲ್ಲಿ ಹಬ್ಬಿದ್ದು, ಅದನ್ನು ಕಾಡು ಎಂದು ಕರೆಯಲಾಗುತ್ತದೆ.

ವಾರ್ಷಿಕವಾಗಿ 125 ರಿಂದ 660 cmನಷ್ಟು ಮಳೆ ಹಾಗೂ ತಾಪಮಾನ 21 °C ರಿಂದ 45°Cನಷ್ಟರ ಮಧ್ಯೆ ಇರುತ್ತದೆ.

ಪದರಗಳು

[ಬದಲಾಯಿಸಿ]
ಚಿತ್ರ:TropischeRegenwaelder.png
ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು ಹರಡಿರುವುದು
ಘನದಲ್ಲಿರುವ ಕ್ಯಾಕಮ್ ನ್ಯಾಷನಲ್ ಪಾರ್ಕ್‌‌ನ 40 ಮೀ ಮೇಲ್ಮಟ್ಟದಲ್ಲಿರುವ ಕ್ಯನೋಪಿ ವಾಕ್‌ವೇ

ನಿತ್ಯಹರಿದ್ವರ್ಣದ ಕಾಡುಗಳನ್ನು ಐದು ವಿಭಿನ್ನ ಪದರಗಳಾಗಿ ವಿಂಗಡಿಸಲಾಗಿದ್ದು, ಪ್ರತಿಯೊಂದು ಪದರದಲ್ಲಿಯೂ ಕೂಡ, ವಿಭಿನ್ನ ಗಿಡಗಳು ಮತ್ತು ಪ್ರಾಣಿಗಳು ಜೀವಿಸುತ್ತಿವೆ. ಅವುಗಳೆಂದರೆ, ಭೂವಲಯದ ಪದರ, ಪೊದೆಜಾತಿಯ ಸಸ್ಯಗಳಿರುವ ಪದರ(ಪೊದರು ಜಾತಿಯ ಸಸ್ಯಪದರು), (ಮಧ್ಯಮ ಜಾತಿಯ)ದಟ್ಟವಾಗಿ ಬೆಳೆಯುವ ಸಸ್ಯ ಜಾತಿಗಳಿರುವ ಪದರ ಮತ್ತು ಸ್ವಲ್ಪ ದೊಡ್ಡ ಜಾತಿಯ ಸಸ್ಯರಾಶಿಯ ಪದರ ಮತ್ತು ಎತ್ತರದ ಜಾತಿಯ ಮರಗಳಿರುವ ಹರಿದ್ವರ್ಣಕಾಡಿನ ಪದರವಾಗಿದೆ. ಎತ್ತರದ ಜಾತಿಯ ಮರಗಳಿರುವ ಪದರ(ಎಮರ್ಜೆಂಟ್ ಲೇಯರ್) ನಿತ್ಯಹರಿದ್ವರ್ಣಕಾಡುಗಳ ವಿಶೇಷ ಪದರವಾಗಿದ್ದು, ಉಳಿದ ಇತರ ಸಸ್ಯಪದರಗಳು ಉಷ್ಣವಲಯದ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಕಂಡುಬರುತ್ತವೆ. ಈ ಎತ್ತರ ಜಾತಿಯ ಮರಗಳಿರುವ (ಎಮರ್ಜೆಂಟ್ ಲೇಯರ್) ಅರಣ್ಯ ಪದರವು ದೊಡ್ಡ ಮರಗಳನ್ನು ಕಡಿಮೆ ಪ್ರಮಾಣದಲ್ಲಿ ಹೊಂದಿರುವುದಲ್ಲದೇ ಇವುಗಳು (ಕ್ಯಾನೋಪಿ ಲೇಯರ್)ಸ್ವಲ್ಪ ದೊಡ್ಡ ಜಾತಿಯ ಮರಗಳ ಪದರದಿಂದ ಹೆಚ್ಚು ಎತ್ತರಕ್ಕೆ ಬೆಳೆಯುವುದಲ್ಲದೇ, ಅವುಗಳು 45-55 ಮೀಟರ್‌ಗಳಷ್ಟು ಎತ್ತರಕ್ಕೆ ಬೆಳೆಯುತ್ತವೆ, ಹಾಗೆಯೇ, ಕೆಲವೊಮ್ಮೆ ಸಾಂದರ್ಭಿಕವಾಗಿ ಕೆಲವೊಂದು ಜಾತಿಯ ಮರಗಳು 40 ರಿಂದ 50 ಮೀಟರ್ಗಳವರೆಗೆ ಬೆಳೆಯುತ್ತವೆ. ಅವುಗಳಿಗೆ ಉಷ್ಣ ತಾಪಮಾನ ಮತ್ತು ಪ್ರಬಲ ಗಾಳಿಯನ್ನು ಎದುರಿಸಿ ನಿಲ್ಲುವಷ್ಟು ಸಾಮರ್ಥ್ಯ ಬೇಕಾಗುತ್ತದೆ. ಈ ಪದರದಲ್ಲಿ ಹದ್ದುಗಳು, ಚಿಟ್ಟೆಗಳು, ಬಾವಲಿಗಳು ಮತ್ತು ನಿರ್ದಿಷ್ಟ ಮಂಗಗಳು ವಾಸವಾಗಿವೆ. (ಕ್ಯಾನೋಪಿ ಲೇಯರ್) ಸ್ವಲ್ಪ ದೊಡ್ಡ ಜಾತಿಯ ಮರಗಳಿರುವ ಸಸ್ಯ ಪದರವು ಅರಣ್ಯಪದರದ ಪ್ರಮುಖ ಪದರವಾಗಿದ್ದು, ಇದು ಉಳಿದೆರಡು ಪದರಗಳಿಗೆ (ಸೂರು)ಛಾವಣಿಯನ್ನು ರಚಿಸುತ್ತದೆ. ಈ ಕ್ಯಾನೋಪಿ ಪದರದಲ್ಲಿನ ಮರಗಳು ಮೆತ್ತಗಿನ ಜಾತಿಯದ್ದಾಗಿದ್ದು, ದುಂಡಗಿನ ಎಲೆಗಳನ್ನು ಹೊಂದಿರುವ ಮರಗಳನ್ನು ಹೊಂದಿರುತ್ತದೆ. ಅದು ಎಲೆಗಳು ಮತ್ತು ಕಾಂಡಗಳಿಂದ ಸಮ್ಮಿಶ್ರಗೊಂಡಿದೆ. ಈ ಭಾಗದಲ್ಲಿ ಹೆಚ್ಚಿನ ಜಾತಿಯ ಪ್ರಾಣಿಗಳು ವಾಸಿಸುತ್ತವಲ್ಲದೇ, ಹೆಚ್ಚಿನ ಪ್ರಮಾಣದ ಆಹಾರ ಪದಾರ್ಥಗಳು ದೊರೆಯುತ್ತವೆ. ಈ ಭಾಗದಲ್ಲಿ ವಾಸಿಸುವ ಪ್ರಾಣಿಗಳೆಂದರೆ: ಹಾವುಗಳು, ಉದ್ದ ಕೊಕ್ಕುಗಳಿರುವ ಹಕ್ಕಿಗಳು ಮತ್ತು ಮರಕಪ್ಪೆಗಳು.

ದಟ್ಟ ಪ್ರಮಾಣದಲ್ಲಿ ಬೆಳೆಯುವ ಸಸ್ಯ ಪದರ/ಅಂಡರ್ ಸ್ಟೋರಿ ಲೇಯರ್ ಕ್ಕೆ ಸ್ವಲ್ಪ ಪ್ರಮಾಣದ ಸೂರ್ಯನ ಬೆಳಕು ದೊರೆಯುತ್ತದಲ್ಲದೇ, ಇಲ್ಲಿ ಬೆಳೆಯುವ ಸಸ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಸೂರ್ಯನ ಬೆಳಕನ್ನು ಹೀರುವುದಕ್ಕೋಸ್ಕರ ದೊಡ್ಡ ಗಾತ್ರದ ಎಲೆಗಳನ್ನು ಬೆಳೆಯಬೇಕಾಗುತ್ತದೆ. ಈ ಪ್ರದೇಶದಲ್ಲಿ ಬೆಳೆಯುವ ಗಿಡಗಳು ಅಪರೂಪಕ್ಕೆ 3 ಮೀಟರ್ಗಳಷ್ಟು ಎತ್ತರಕ್ಕೆ ಬೆಳೆಯುತ್ತದೆ. (10 ಅಡಿ) ಇಲ್ಲಿ ಬದುಕುವ ಪ್ರಾಣಿಗಳಲ್ಲಿ ಹುಲಿ (ಚಿರತೆ) ಜಾತಿಯ ಪ್ರಾಣಿಗಳು, ಕೆಂಪು ಕಣ್ಣನ್ನು ಹೊಂದಿರುವ ಮರ ಕಪ್ಪೆಗಳು ಮತ್ತು ಚಿರತೆಗಳು ಸೇರಿವೆ. ಈ ಪ್ರದೇಶದಲ್ಲಿ ಹೆಚ್ಚಿನ ಜಾತಿಯ ಕೀಟಗಳು ವಾಸಿಸುತ್ತವೆ. ಪೊದರು ಪದರ ಮತ್ತು ಭೂಪದರ(ಅರಣ್ಯ ಪದರ) ಈ ಪ್ರದೇಶಗಳು ದಟ್ಟವಾಗಿದ್ದು, ನೋಡಲು ಕತ್ತಲು ಕವಿದಂತಿರುತ್ತದೆ. ಹೀಗಾಗಿ ಇಲ್ಲಿ ಕೆಲವೇ ಕೆಲವು ಸಸ್ಯವರ್ಗಗಳು ಇಲ್ಲಿ ಬೆಳೆಯುತ್ತವೆ. ಈ ಅರಣ್ಯ ಪದರಕ್ಕೆ ಬಹಳ ಪ್ರಯಾಸದಲ್ಲಿ ಸೂರ್ಯನ ಬೆಳಕು ಬೀಳುವುದರಿಂದ ಅರಣ್ಯದಲ್ಲಿನ ಯಾವುದೇ ವಸ್ತುಗಳು ಬೇಗನೆ ಕೊಳೆಯುತ್ತವೆ. ಸಾಮಾನ್ಯ ಪರಿಸರದಲ್ಲಿ ಒಂದು ಎಲೆಯು ಕೊಳೆಯಲು ಒಂದು ವರ್ಷವನ್ನು ತೆಗೆದುಕೊಂಡರೆ ಇಂತಹ ಪ್ರದೇಶದಲ್ಲಿ ಅದು ಕೇವಲ 6 ವಾರಗಳಲ್ಲಿಯೇ ಕೊಳೆತು ಮಾಯವಾಗುತ್ತದೆ. ದೈತ್ಯ ಇರುವೆಭಕ್ಷಕಗಳು ಈ ಪದರದಲ್ಲಿ ವಾಸಿಸುತ್ತವೆ.

ನೈಸರ್ಗಿಕ ಇತಿಹಾಸ

[ಬದಲಾಯಿಸಿ]

ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು ಭೂಮಿಯಲ್ಲಿ ಸುಮಾರು ಮಿಲಿಯಗಟ್ಟಳೆ ವರ್ಷಗಳ ಹಿಂದೆಯೇ ಅಸ್ಥಿತ್ವದಲ್ಲಿತ್ತು. 300 ಮಿಲಿಯನ್ ವರ್ಷಗಳ ಹಿಂದೆಯೇ ಯೂರಮೇರಿಕಾ ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳಲ್ಲಿನ ಪರಿಸರದಲ್ಲಿನ ಕಾರ್ಬೊನಿಫೆರಸ್ ನಶಿಸಿಹೋಗಿತ್ತು. ನಿತ್ಯಹರಿದ್ವರ್ಣದ ಕಾಡುಗಳು ಪರಿಸರದಲ್ಲಿನ ಬದಲಾವಣೆಯಿಂದಾಗಿ ತುಣುಕುಗಳಾಗಿ ವಿಭಜಿಸಲ್ಪಟ್ಟವು. ವಿವಿಧ ಜಾತಿಯ ಉಭಯವಾಸಿಗಳು ನಶಿಸಿದವಲ್ಲದೇ, ಇದೇ ಸಮಯದಲ್ಲಿ ಒಣ ಪರಿಸರವು ವಿವಿಧ ಜಾತಿಯ ಮೊಸಳೆಗಳ ಉಗಮಕ್ಕೆ ಪ್ರಚೋದನೆ ನೀಡಿತು.[] hxhci<ydxfc uSDjff<sdf bsdhf<se f<dgflghdf SDFN jhfgjlikudsyuxhf

ಮಾನವ ಬಳಕೆ

[ಬದಲಾಯಿಸಿ]

ಮಾನವರ ಬಳಕೆಯಿಂದಾಗುವ ದುಷ್ಪರಿಣಾಮಗಳು

[ಬದಲಾಯಿಸಿ]

ಮನುಷ್ಯರು ಅಮೆಝಾನ್ ನಿತ್ಯಹರಿದ್ವರ್ಣದ ಕಾಡು ಗಳನ್ನು ಕೃಷಿ, ಮರಗಳ ಸಾಗಾಟಕ್ಕೆ, ಪಶುಸಂಗೋಪನೆ ನಡೆಸುವುದಕ್ಕಾಗಿ ಪ್ರತಿ ಸೆಕೆಂಡ್ಗೆ ಸರಿಸುಮಾರು 1.5 ಎಕ್ರೆಗಳಷ್ಟು ಭೂಪ್ರದೇಶ ಅಥವಾ ಪ್ರತಿ ನಿಮಿಷಕ್ಕೆ 50 ಫುಟ್ಬಾಲ್ ಕ್ರೀಡಾಂಗಣದಷ್ಟು ಭೂಪ್ರದೇಶವನ್ನು ಸ್ವಚ್ಚಗೊಳಿಸಿದರಲ್ಲದೇ, ನಿತ್ಯಹರಿದ್ವರ್ಣದ ಕಾಡುಗಳು ಅಳಿವಿನಂಚಿಗೆ ಬರಲು ಕಾರಣವಾಯಿತು.( ಪ್ರತಿ ನಿಮಿಷಕ್ಕೆ 75 ಎಕ್ರೆ ಭೂಪ್ರದೇಶ) [ಸೂಕ್ತ ಉಲ್ಲೇಖನ ಬೇಕು]

ಈ ಉಷ್ಣವಲಯದ ನಿತ್ಯಹರಿದ್ವರ್ಣವನದ ಕಾಡುಗಳು ಮನುಷ್ಯರ ಜೀವನಕ್ಕೆ ಸಹಕಾರಿಯಾಗಿರುವುದಿಲ್ಲ.[೧೨] ಹೆಚ್ಚಿನ ಪ್ರಮಾಣದಲ್ಲಾದ ಜೀವವೈವಿಧ್ಯಗಳಿಂದಾಗಿ ಅರಣ್ಯದೊಳಗಡೆಯೇ ಲಭಿಸುವ ಅನೇಕ ಆಹಾರದ ಮೂಲಗಳು ಗಣನೀಯ ಪ್ರಮಾಣದಲ್ಲಿ ಚದುರುಹೋಗಿರುವುದಲ್ಲದೇ, ಇಲ್ಲಿ ಲಭಿಸುವ ಆಹಾರಮೂಲಗಳು ಕ್ಯಾನೋಪಿ ವಲಯಕ್ಕೆ ಸೀಮಿತವಾಗಿರುವುದಲ್ಲದೇ ಅವುಗಳನ್ನು ಪಡೆಯಲು ಹೆಚ್ಚಿನ ಪ್ರಮಾಣದ ಶಕ್ತಿಯನ್ನು /ಪ್ರಯತ್ನವನ್ನು ಮಾಡಬೇಕಾಗುತ್ತದೆ. ಕೆಲವೊಂದು ಬೇಟೆ ಹುಡುಕುವ ಗುಂಪಿನ ಜನರು ಕೆಲವೊಂದು ಋತುಗಳಿಗೆ ಅನುಗುಣವಾಗಿ, ಸವನ್ನಾದ ಅಂಚಿನಲ್ಲಿ ವಾಸಿಸುವ ಮೂಲಕ ಹೆಚ್ಚಿನ ಪ್ರಮಾಣದ ಆಹಾರ ಪದಾರ್ಥಗಳು ದೊರೆಯುವಂತಹ ನಿತ್ಯಹರಿದ್ವರ್ಣವನದ ಕಾಡುಗಳನ್ನು ಮತ್ತು ಮುಕ್ತವಾತಾವರಣವಿರುವ ಅರಣ್ಯಪ್ರದೇಶಗಳನ್ನು ನಾಶಪಡಿಸುತ್ತಾರೆ. ನಿತ್ಯಹರಿದ್ವರ್ಣ ಕಾಡಿನಲ್ಲಿ ವಾಸಿಸುವ ಜನರು ಬೇಟೆಯನ್ನು ಹುಡುಕುವ ಗುಂಪಿನ ಜನರಾಗಿದ್ದು, ಇವರುಗಳು ಹೆಚ್ಚಿನ ಬೆಲೆಬಾಳುವಂತಹ ಅರಣ್ಯ ಉತ್ಪನ್ನಗಳಾದ, ಚರ್ಮ, ಗರಿಗಳು ಮತ್ತು ಜೇನುತುಪ್ಪ ಇತ್ಯಾದಿಯನ್ನು ಅರಣ್ಯ ಪ್ರದೇಶಗಳಿಂದ ಹೊರಗಿರುವ ರೈತಾಪಿ ಜನಗಳಿಗೆ ಮಾರಾಟ ಮಾಡುವ ಮೂಲಕ ತಮ್ಮ ಜೀವನವನ್ನು ಸಾಗಿಸುತ್ತಾರೆ.[೧೨]

ಕೃಷಿಭೂಮಿಯಾಗಿ ಪರಿವರ್ತನೆ

[ಬದಲಾಯಿಸಿ]

ಕೃಷಿಯ ಅನ್ವೇಷಣೆಯೊಂದಿಗೆ ಮಾನವರು ನಿತ್ಯಹರಿದ್ವರ್ಣ ಕಾಡುಗಳನ್ನು ಸ್ವಚ್ಛಗೊಳಿಸಿದರಲ್ಲದೇ ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ಅರಣ್ಯಭೂಮಿಯನ್ನು ಮುಕ್ತ ಕೃಷಿಭೂಮಿಯನ್ನಾಗಿ ಪರಿವರ್ತಿಸಿದರು. ಹೀಗೆ ಮನುಷ್ಯರು ಮುಖ್ಯವಾಗಿ ಆಹಾರವನ್ನು ಅರಣ್ಯವನ್ನು ಕಡಿದು ಮಾರ್ಪಡಿಸಿದ ಕೃಷಿಭೂಮಿಯಿಂದ ಪಡೆಯುತ್ತಿದ್ದರಲ್ಲದೇ, ಇದಕ್ಕೆ ಪೂರಕವಾಗಿ [೧೨][೧೩] ಬೇಟೆ ಮತ್ತು ಮೇವಿಗಾಗಿ ಅರಣ್ಯವನ್ನು ಅವಲಂಭಿಸಿದ್ದರು. ಅರಣ್ಯಪ್ರದೇಶವಾಗಿದ್ದ ಭೂಮಿಯಲ್ಲಿ ಕೃಷಿ ಮಾಡುವುದು ಅಷ್ಟೇನು ಸುಲಭದ ಕೆಲಸವಾಗಿರಲಿಲ್ಲ. ನಿತ್ಯಹರಿದ್ವರ್ಣ ಪ್ರದೇಶದ ಮಣ್ಣು ಅನೇಕ ಖನಿಜಾಂಶಗಳ ಸೋರಿಕೆಯಿಂದ ನಿಸ್ಸಾರ/ ಸಾರರಹಿತವಾಗಿಲ್ಲದೇ, ಹೆಚ್ಚಿನ ಪ್ರಮಾಣದ ಮಳೆಯಿಂದಾಗಿ ಕೃಷಿಭೂಮಿಯಾಗಿ ಪರಿವರ್ತನೆಗೊಂಡಿರುವ ಭೂಮಿಯಿಂದ ಕೂಡ ಖನಿಜಾಂಶಗಳು ಸೋರಿಹೋಗುತ್ತಿತ್ತು. ಅಮೆಝಾನ್ನಲ್ಲಿ ವಾಸಿಸುತ್ತಿದ್ದ ಯೋನೋಮೋಮೊ ಪಂಗಡದ ಜನರು ಈ ಭೂಮಿಯಲ್ಲಿ ಕೃಷಿ ಮಾಡಲು ಹಿಂದೆ ಅರಣ್ಯಭೂಮಿಯಾಗಿದ್ದ ಆ ಪ್ರದೇಶವನ್ನು ಚೆನ್ನಾಗಿ ಕೊಚ್ಚಿ ನಂತರ ಕಳೆಗಳನ್ನು ಸುಡಲು ಭೂಮಿಯನ್ನು ಸುಟ್ಟು ನಂತರ ಕೃಷಿ ಮಾಡುತ್ತಿದ್ದರು. ಹೀಗಿದ್ದರೂ, ಈ ಅರಣ್ಯಭೂಮಿಯಲ್ಲಿ ವಾಸಿಸುತ್ತಿದ್ದರೂ, ಈ ಕೃಷಿ ಭೂಮಿಯನ್ನು [೧೨] ಸ್ವಚ್ಛಗೊಳಿಸುವ ಸಂದರ್ಭದಲ್ಲಿ, ಅರಣ್ಯವು [೧೩] ಲೂಟಿ ಮಾಡಲು ಕಾರಣವಾಗುತ್ತಿತ್ತು. ಶೇಕಡಾ 90%ರಷ್ಟು ಪ್ರಮಾಣದ ಈ ವಿಶಿಷ್ಠ ಯೋನೋಮೋಮೋ ಪಂಗಡದ ಜನರ ಆಹಾರ ಮೂಲಗಳು ಈ ಕೃಷಿ ಭೂಮಿಯಲ್ಲಿನ ಗಿಡಗಳಿಂದ ದೊರೆಯುತ್ತಿತ್ತು.[೧೩]

ಬೆಳೆಯಲಾಗುವ ಆಹಾರ ಹಾಗೂ ಮಸಾಲೆ ಪದಾರ್ಥಗಳು

[ಬದಲಾಯಿಸಿ]

ಕಾಫಿ, ಚಾಕಲೇಟ್, ಬಾಳೆಹಣ್ಣು, ಮಾವು, ಪಪ್ಪಾಯಿ, ಮೆಕಡೋಮಿಯ ಹಣ್ಣಿನ ಬೀಜ, ಅವಕಾಡೋ ಮತ್ತು ಕಬ್ಬು ಇವೆಲ್ಲವೂ ಕೂಡ ನಿತ್ಯಹರಿದ್ವರ್ಣದ ಕಾಡಿನಲ್ಲಿ ಲಭ್ಯವಾಗುತ್ತಿತ್ತಲ್ಲದೇ, ಇವುಗಳನ್ನು ಹಿಂದೆ ಅರಣ್ಯಭೂಮಿಯಾಗಿದ್ದ ಪ್ರದೇಶಗಳಲ್ಲಿ ಪ್ಲಾಂಟೇಷನ್ ಬೆಳೆಯಾಗಿ ಈಗಲೂ ಬೆಳೆಯಾಗಿ ಬೆಳೆಯಲಾಗುತ್ತಿದೆ. 1980 ಮತ್ತು 90ರ ದಶಕದ ಮಧ್ಯಭಾಗದಲ್ಲಿ ವಾರ್ಷಿಕವಾಗಿ 40 ಮಿಲಿಯನ್ ಟನ್ಗಳಷ್ಟು ಬಾಳೆಹಣ್ಣುಗಳನ್ನು ವಿಶ್ವಾದ್ಯಂತ ಬೆಳೆಯಲಾಗುತ್ತಿತ್ತಲ್ಲದೇ, ಅದರೊಂದಿಗೆ 13 ಮಿಲಿಯನ್ ಟನ್ಗಳಷ್ಟು ಮಾವಿನಹಣ್ಣುಗಳನ್ನು ಕೂಡ ಬೆಳೆಯಲಾಗುತ್ತಿತ್ತು. 1970 ರಲ್ಲಿ ಸುಮಾರು $3 ಅಮೆರಿಕನ್ ಡಾಲರ್ಗಳಷ್ಟು ಮೌಲ್ಯದ ಕಾಫಿಯನ್ನು ಮಧ್ಯ ಅಮೇರಿಕಾದಿಂದ ರಫ್ತು ಮಾಡಲಾಗಿತ್ತು. ಹೊಸ ಜಾತಿಯ ಕೀಟ ಗಳಿಂದ ಆಗುವ ಹಾನಿಯನ್ನು ತಪ್ಪಿಸುವುದಕ್ಕಾಗಿ ವನ್ಯ ದಾಸ್ತಾನು ನಿರೋಧಕದಿಂದ ಹೆಚ್ಚಿನ ಪ್ರಮಾಣದಲ್ಲಿ ಜೆನೆಟಿಕ್ ವೇರಿಯೇಷನ್ /ವಿಭಿನ್ನ ತಳಿಗಳನ್ನು ಈಗಲೂ ಬಳಸಲಾಗುತ್ತಿದೆ. ಸಮಶೀತೋಷ್ಣ ವಲಯಕ್ಕೆ ಹೋಲಿಸಿದಾಗ ಇದು ಕೇವಲ 20 ಜಾತಿಯ ಹಣ್ಣುಗಳನ್ನು ಪೂರೈಸಿದರೆ, ಉಷ್ಣವಲಯದ ಕಾಡುಗಳು 250 ಜಾತಿಯ ಹಣ್ಣುಗಳನ್ನು ಬೆಳೆಸಿ ಪೂರೈಸುತ್ತಿವೆ. ಕೇವಲ ನ್ಯೂಗಿನಿ ಯಲ್ಲಿನ ಅರಣ್ಯವೊಂದರಲ್ಲೇ ನಾವು ಖಾದ್ಯ ಹಣ್ಣುಗಳ ಮರಗಳೊಂದಿಗೆ 251 ಮರಗಳ ಜಾತಿಗಳನ್ನು ಕಾಣಬಹುದಾಗಿದ್ದು, ಅವುಗಳಲ್ಲಿ 43 ಜಾತಿಯ ಮರಗಳನ್ನು 1985ರಲ್ಲಿ ಬೆಳೆ ಬೆಳೆಯುವ ಮರಗಳೆಂದು ಪರಿಗಣಿಸಲಾಗಿದೆ.[೧೪]

ಔಷಧೀಯ ಹಾಗೂ ಜೈವಿಕ ವೈವಿಧ್ಯತೆಯುಳ್ಳ ಸಂಪನ್ಮೂಲ

[ಬದಲಾಯಿಸಿ]

ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳಲ್ಲಿ ಲಭ್ಯವಾಗುವ ಸಸ್ಯಗಳಿಂದ ಹೆಚ್ಚಿನ ಪ್ರಮಾಣದ ನೈಸರ್ಗಿಕ ಔಷಧಗಳನ್ನು ಅನ್ವೇಷಣೆ ಮಾಡುವುದರಿಂದ “ವಿಶ್ವದ ಅತೀ ದೊಡ್ಡ ಔಷಧಾಲಯ[ಸೂಕ್ತ ಉಲ್ಲೇಖನ ಬೇಕು]” ಎಂದು ಕರೆಯಲಾಗುತ್ತದೆ. ಉದಾಹರಣೆಗೆ, ನಿತ್ಯಹರಿದ್ವರ್ಣದ ಕಾಡುಗಳಲ್ಲಿ “ಹಾರ್ಮೋನಲ್ ಕಾಂಟ್ರಾಸೆಪ್ಷನ್ ನ ಪ್ರಮುಖ ಅಂಶಗಳ” ವಿಧಾನಗಳನ್ನು ಹೊಂದಿರುವ ಕೊಕೇನ್, ಸ್ಟಿಮ್ಯುಲೆಂಟ್/ಪ್ರಚೋದಕಗಳು ಮತ್ತು ಟ್ರಾಂಕ್ವಿಲೈಝಿಂಗ್ ಡ್ರಗ್ಗಳು (ಬ್ಯಾಂಕ್ಸ್) ಗಳು ಲಭಿಸುತ್ತವೆ. ಕ್ಯುರೇರ್ (ಪ್ಯಾರಾಲೈಸಿಂಗ್ ಡ್ರಗ್) ಮತ್ತು ಕ್ವಿನೈನ್ (ಮಲೇರಿಯಾ ಕ್ಯೂರ್/ವಾಸಿಮಾಡುವಂತಹ ಔಷಧಿ) ಕೂಡ ಇಲ್ಲಿ ದೊರೆಯುತ್ತದೆ.

ಧನಾತ್ಮಕ ಪರಿಣಾಮಗಳು

[ಬದಲಾಯಿಸಿ]
ಆಕ್ರಮಣದ ದಿನಾಂಕಗಳು ಹಾಗೂ ನೈಋತ್ಯದ ಬೇಸಿಗೆ ಮಾನ್ಸೂನ್‌ನ ಮಾರುತಗಳು

ಪ್ರವಾಸೋದ್ಯಮದ ದುಷ್ಪರಿಣಾಮದ ಹೊರತಾಗಿಯೂ ನಿತ್ಯಹರಿದ್ವರ್ಣದ ಕಾಡುಗಳಲ್ಲಿ ಅನೇಕ ಪ್ರಮುಖ ಪ್ರಯೋಜನಾತ್ಮಕ ಪರಿಣಾಮಗಳು ಕೂಡ ಇವೆ.

  • ಪ್ರವಾಸೋದ್ಯಮದ ಹೆಚ್ಚಳದಿಂದಾಗಿ, ಹೆಚ್ಚಿನ ಕಂದಾಯ ಲಭಿಸುವ ಮೂಲಕ ಇದು ವಸತಿಯ ರಕ್ಷಣೆಗಾಗಿ ಆರ್ಥಿಕ ಬೆಂಬಲವನ್ನು ನೀಡುತ್ತದೆ. ಪ್ರವಾಸೋದ್ಯಮ ನೇರವಾಗಿ ಸೂಕ್ಷ್ಮ ಪ್ರದೇಶಗಳು ಮತ್ತು ವಸತಿ ಪ್ರದೇಶಗಳಿಗೆ ಸಂರಕ್ಷಣೆಯನ್ನು ಒದಗಿಸುತ್ತದೆ. ಉದ್ಯಾನವನಗಳ ಪ್ರವೇಶ ಶುಲ್ಕದಿಂದ ಬರುವ ಆದಾಯಗಳಂತಹ ಇತರ ಆದಾಯದ ಮೂಲಗಳನ್ನು ವಿಶೇಷವಾಗಿ ಪರಿಸರ ಸಂವೇದಿ ಪ್ರದೇಶಗಳ ನಿರ್ವಹಣೆ ಮತ್ತು ರಕ್ಷಣೆಗಾಗಿ ಬಳಸಬಹುದಾಗಿದೆ. ತೆರಿಗೆ ಮತ್ತು ಪ್ರವಾಸೋದ್ಯಮದಿಂದ ದೊರೆಯುವ ಆದಾಯವು ಸರ್ಕಾರಕ್ಕೆ ಪೂರಕ ಉತ್ತೇಜಕವಾಗಿದ್ದು ಇದು ಅರಣ್ಯ ಪ್ರದೇಶದ ರಕ್ಷಣೆಗಾಗಿ ಅಗತ್ಯವಿರುವ ಆದಾಯವನ್ನು ಒದಗಿಸುತ್ತದೆ.
  • ಪ್ರವಾಸೋದ್ಯಮವು ಪರಿಸರದ ಬಗ್ಗೆ ಸಾರ್ವಜನಿಕ ಮೆಚ್ಚುಗೆಯನ್ನು ಹೆಚ್ಚಿಸುವ ಸಂಭವನೀಯತೆಯನ್ನು ಹೊಂದಿದ್ದು, ಅದು ಜನರನ್ನು ಪರಿಸರದತ್ತ ಹೆಚ್ಚು ಒಲವಿನಿಂದ ಸಂಪರ್ಕಿಸಲು ಅನುವು ಮಾಡಿಕೊಟ್ಟಾಗ ಪರಿಸರ ಸಂಬಂಧಿ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಲು ಸಹಕಾರಿಯಾಗುತ್ತದೆ. ಇಂತಹ ಹೆಚ್ಚಿನ ಜಾಗೃತಿಯು ಪರಿಸರದ ಬಗ್ಗೆ ಪ್ರಜಾÕವಂತ ನಡವಳಿಕೆಯನ್ನು ಪ್ರಚೋದಿಸಲು ಕಾರಣವಾಗಬಲ್ಲುದು. ಕೇವಲ ಆಫ್ರಿಕಾದಲ್ಲಿ ವನ್ಯಜೀವಿ ಸಂರಕ್ಷಣೆ ಮತ್ತು ರಕ್ಷಣಾ ಕಾರ್ಯಗಳಲ್ಲಿ ಪ್ರವಾಸೋದ್ಯಮವು ಧನಾತ್ಮಕ ಪರಿಣಾಮವನ್ನು ಹೊಂದಿರುವುದು ಮಾತ್ರವಲ್ಲದೇ, ದಕ್ಷಿಣ ಅಮೇರಿಕಾ, ಏಷ್ಯಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಪೆಸಿಫಿಕ್‌ನಲ್ಲಿ ಕೂಡ ಪರಿಣಾಮ ಬೀರಿದೆ.[೧೫]

ಮಾನವನ ಚಟುವಟಿಕೆಗಳಿಗಾಗಿ ಪೂರಕವಾಗಿ ನಿತ್ಯಹರಿದ್ವರ್ಣದ ಕಾಡುಗಳನ್ನು ಬರಿದುಮಾಡುವುದಕ್ಕೆ ಪೂರಕವಾಗಿ ಈ ಕಾಡುಗಳಲ್ಲಿ ಸಂಪನ್ಮೂಲಗಳು ಮತ್ತೆ ಮತ್ತೆ ಉತ್ಪತ್ತಿಗೊಳ್ಳುತ್ತವೆ. ಇದು ಪದೇ ಪದೇ ಸಂಭವಿಸುವುದನ್ನು ಪರಿಸರವ್ಯವಸ್ಥೆಗಳೆಂದು ಕರೆಯಲಾಗುತ್ತದೆ. ಜೀವವೈವಿಧ್ಯತೆಯನ್ನು ನಿರ್ವಹಣೆ ಮಾಡುವಲ್ಲಿ , ಮಳೆಹನಿಗಳನ್ನು ಮಾರ್ಪಡಿಸುವಲ್ಲಿ , ಮಳೆ ಕ್ರಮವಾಗಿ ಹರಡಿ ಬೀಳುವುದು ಮತ್ತು ಸುಧಾರಿತ ವೈಜಾÕನಿಕ ತಿಳುವಳಿಕೆಯನ್ನು ಹೆಚ್ಚಿಸಿ ಪ್ರವಾಹ ತಡೆಯುವಲ್ಲಿ ನಿತ್ಯಹರಿದ್ವರ್ಣಕಾಡುಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ.

ವಿನಾಶ/ಅಳಿವು

[ಬದಲಾಯಿಸಿ]

ಜ್ವಾಲಾಮುಖಿ, ಕಾಡ್ಚಿಚ್ಚು, ಪರಿಸರ ಬದಲಾವಣೆಗಳಂತಹ ನೈಸರ್ಗಿಕ ಪ್ರಕ್ರಿಯೆಗಳ ಮೂಲಕ ಉಷ್ಣವಲಯದ ನಿತ್ಯಹರಿದ್ವರ್ಣ ಕಾಡುಗಳು ನಾಶವಾಗುತ್ತಿವೆಯಲ್ಲದೇ, ಪಳೆಯುಳಿಕೆಗಳ ದಾಖಲೆಗಳ ಪಟ್ಟಿಯಲ್ಲಿ ಕೂಡ ಇವು ಸೇರಿಕೊಂಡಿವೆ.[] ಈ ಭೌಗೋಳಿಕ ಪ್ರಕ್ರಿಯೆಗಳು ನಿಧಾನವಾಗಿ ವಿವಿಧ ಜೈವಿಕ ಪ್ರಭೇದಗಳು ಮತ್ತು ಭೌಗೋಳಿಕ ಬದಲಾವಣೆಗಳಂತಹ ಭೌತಿಕ ಪರಿಸರದ ಮಾರ್ಪಾಡಿಗೆ ಕಾರಣವಾಗುತ್ತದೆ.[] ಇದಕ್ಕೆ ಪ್ರತಿಯಾಗಿ, ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳನ್ನು ನಾಶ ಮಾಡಿ ಭೂ ಪರಿವರ್ತನೆಯಾಗಿ ಮಾರ್ಪಾಡು ಮಾಡುವ ಮಾನವನ ಚಟುವಟಿಕೆಗಳು ಕೂಡ ಅತೀ ಬೇಗನೆ ಪರಿಸರದ ಮಾರ್ಪಾಡಿಗೆ ಕಾರಣವಾಗುವುದಲ್ಲದೇ, ನಿತ್ಯಹರಿದ್ವರ್ಣದ ಕಾಡುಗಳ ನಾಶಕ್ಕೆ ಕೂಡ ಪ್ರಮುಖ ಕಾರಣವಾಗಬಲ್ಲುದು ಎಂದು ಶಂಕಿಸಲಾಗಿದೆ.

ಅಧ್ಯಯನಕ್ಕೆ ಸಂಬಂಧಿಸಿದ ಆಕರಗಳು

[ಬದಲಾಯಿಸಿ]
  • ಕೃಷಿ ಹಾಗೂ ಕಾಡಿನ ಹವಾಮಾನ ಶಾಸ್ತ್ರ [೧೬]
  • ಸಸ್ಯಶಾಸ್ತ್ರದ ವಾರ್ಷಿಕ ಬಖೈರುಗಳು [೧೭]
  • ದಕ್ಷಿಣದ ಪರಿಸರವಿಜ್ಞಾನ
  • ಜೈವಿಕ ವೈವಿಧ್ಯ ಹಾಗೂ ಸಂರಕ್ಷಣೆ , ಐಎಸ್‌ಎಸ್‌ಎನ್: 0960-3115 ಇಐಎಸ್‌ಎಸ್‌ಎನ್: 1572-9710 [೧೮]
  • ಜೀವಶಾಸ್ತ್ರಕ್ಕೆ ಸಂಬಂಧಿಸಿದ ಸಂರಕ್ಷಣೆ [೧೯]
  • ವೈವಿಧ್ಯತೆ ಹಾಗೂ ವಿಭಾಗೀಕರಣ [೨೦]
  • ಪರಿಸರ ವಿಜ್ಞಾನದ ಸೂಚಕಗಳು [೨೧]
  • ಪರಿಸರ ವಿಜ್ಞಾನದ ನಿರ್ವಹಣೆ & ನವೀಕರಣ [೨೨]
  • ಪರಿಸರ ವಿಜ್ಞಾನ [೨೩]
  • ಜರ್ನಲ್ ಆಫ್ ಟ್ರಾಪಿಕಲ್ ಎಕಾಲಜಿ [೨೪]
  • ಪ್ಯಾಲೆಯೊಜಿಯೋಗ್ರಫಿ, ಪ್ಯಾಲೆಯೊಕ್ಲೈಮೆಟಾಲಜಿ, ಪ್ಯಾಲೆಯೊಎಕಾಲಜಿ [೨೫]
  • ನವ ಉಷ್ಣವಲಯದ ಪ್ರಾಣಿಗಳು ಹಾಗೂ ಪರಿಸರದ ಮೇಲಿನ ಅಧ್ಯಯನಗಳು [೨೬]
  • ಉಷ್ಣವಲಯದ ಹಾಗೂ ಉಪ‌ಉಷ್ಣವಲಯದ ತೇವಾಂಶವುಳ್ಳ ಅಗಲವಾದ ಎಲೆಗಳ ಕಾಡುಗಳು
  • ಪ್ಯಾಲಿಯೋಜಿಯೋಗ್ರಫಿ
  • ಮಳೆಕಾಡು
  • ಅರೆ ನಿತ್ಯಹರಿವರ್ಷದ ಕಾಡು
  • ಉಷ್ಣವಲಯ ಹಾಗೂ ಉಪ-ಉಷ್ಣವಲಯದ ತೇವ ಅಗಲ-ಎಳೆಗಳುಳ್ಳ ಕಾಡುಗಳು
  • ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳ ಹವಾಮಾನ

ಉಲ್ಲೇಖಗಳು‌

[ಬದಲಾಯಿಸಿ]
  1. NASA.gov
  2. ScienceDaily.com
  3. ಸುಸಾನ್ ವುಡ್ವರ್ಡ್. ಟ್ರಾಪಿಕಲ್ ಬ್ರಾಡ್‌ಲೀಫ್ ಎವರ್‌ಗ್ರೀನ್ ಫಾರೆಸ್ಟ್: ದಿ ರೈನ್‌ಫಾರೆಸ್ಟ್. Archived 2008-02-25 ವೇಬ್ಯಾಕ್ ಮೆಷಿನ್ ನಲ್ಲಿ. 2008-03-14ರಂದು ಪರಿಷ್ಕರಿಸಲಾಗಿದೆ.
  4. ಯೂನಿವರ್ಸಿಟಿ ಆಫ್ ಮಿಚಿಗನ್ನ ರಾಜಪ್ರತಿನಿಧಿಗಳು. ದಿ ಟ್ರಾಪಿಕಲ್ ರೈನ್ ಫಾರೆಸ್ಟ್. 2008-03-14ರಂದು ಪರಿಷ್ಕರಿಸಲಾಗಿದೆ.
  5. "Tropical Rain Forest". Glossary of Meteorology. American Meteorological Society. Archived from the original on 2012-01-18. Retrieved 2008-05-14.
  6. ೬.೦ ೬.೧ ೬.೨ ೬.೩ Sahney, S., Benton, M.J. & Falcon-Lang, H.J. (2010). "Rainforest collapse triggered Pennsylvanian tetrapod diversification in Euramerica" (PDF). Geology. 38: 1079–1082.{{cite journal}}: CS1 maint: multiple names: authors list (link)
  7. [84] ^ ಯು.ಎನ್. ಕಾಲ್ಸ್ ಆನ್ ಏಷಿಯನ್ ನೇಷನ್ಸ್ ಟು ಎಂಡ್ ಡಿಫಾರೆಸ್ಟ್ರೇಷನ್, ರೂಟರ್ಸ್
  8. ಬ್ರೆಝಿಲ್: ಡಿಫಾರೆಸ್ಟೇಷನ್ ರೈಸಸ್ ಶಾರ್ಪ್‌ಲಿ ಅಸ್ ಫಾರ್ಮರ್ಸ್ ಪುಶ್ ಇಂಟು ಅಮೇಝಾನ್, ದಿ ಗಾರ್ಡಿಯನ್, ಸೆಪ್ಟೆಂಬರ್ 1, 2008
  9. ಚೈನಾ ಈಸ್ ಬ್ಲ್ಯಾಕ್ ಹೋಲ್ ಆಫ್ ಏಷಿಯಾಸ್ ಡಿಫಾರೆಸ್ಟೇಷನ್, ಏಷಿಯಾ ನ್ಯೂಸ್, 24 ಮಾರ್ಚ್ 2008
  10. ಬ್ರೋಕರ್, ಡಬ್ಲು.ಎಸ್., 2006 "ಬ್ರೀತಿಂಗ್ ಈಸಿ, ಎಟ್ ಟು, O2" ಕೊಲಂಬಿಯಾ ಯೂನಿವರ್ಸಿಟಿ Columbia.edu
  11. [60] ^ ಮೊರನ್, E.F., "ಡಿಫಾರೆಸ್ಟ್ರೇಷನ್ ಅಂಡ್ ಲ್ಯಾಂಡ್ ಯೂಸ್ ಇನ್ ದಿ ಬ್ರೆಜಿಲಿಯನ್ ಅಮೇಜಾನ್", ಹ್ಯೂಮನ್ ಎಕಾಲಜಿ, ಸಂಪುಟ 21, ಸಂಖ್ಯೆ. 1, 1993" “"ಲಂಗ್ಸ್ ಆಫ್ ದಿ ವರ್ಲ್ಡ್" ಎನ್ನುವ ಪುರಾಣ ಕಥೆಯನ್ನು ಸರಿಪಡಿಸಲು ಸುಮಾರು 15 ವರ್ಷಗಳು ಬೇಕಾಯಿತು. ದ್ಯುತಿ ಸಂಶ್ಲೇಷಣೆಯಿಂದ ನಿತ್ಯಹರಿದ್ವರ್ಣದ ಕಾಡುಗಳು ವಾತಾವರಣಕ್ಕೆ ಆಮ್ಲಜನಕವನ್ನು ಸೇರಿಸುತ್ತವೆ.”
  12. ೧೨.೦ ೧೨.೧ ೧೨.೨ ೧೨.೩ ಬಾಯ್ಲೇ, ಆರ್.ಸಿ., ಹೆಡ್, ಜಿ., ಜೆನಿಕೆ, ಎಮ್., ಓವೆನ್,ಬಿ., ರೆಚ್ಮನ್, ಆರ್., ಝೆಚೆಂಟರ್, ಇ., 1989 "ಹಂಟಿಂಗ್ ಅಂಡ್ ಗ್ಯಾದರಿಂಗ್ ಇನ್ ಟ್ರೋಪಿಕಲ್ ರೇನ್‌ಫಾರೆಸ್ಟ್: ಇದು ಸಾಧ್ಯವೇ." ಅಮೇರಿಕನ್ ಆಂಥ್ರೋಪಾಲಜಿಸ್ಟ್, 91:1 59-82
  13. ೧೩.೦ ೧೩.೧ ೧೩.೨ ಫಿಲಿಪ್ ಎಲ್. ವಾಕರ್, ಲ್ಯಾರಿ ಸುಗಿಯಮ, ರಿಚರ್ಡ್ ಚಾಕೊನ್. (1998) '"ಡಯಟ್, ಡೆಂಟಲ್ ಹೆಲ್ತ್, ಹಾಗೂ ಕಲ್ಚರಲ್ ಚೇಂಜ್ ಅಮಾಂಗ್ ರೀಸೆಂಟ್ಲಿ ಕಾಂಟ್ಯಾಕ್ಟೆಡ್ ಸೌತ್ ಅಮೇರಿಕನ್ ಇಂಡಿಯನ್ ಹಂಟರ್-ಹಾರ್ಟಿಕಲ್ಚರಲಿಸ್ಟ್ಸ್" ಇನ್ ಹ್ಯೂಮನ್ ಡೆಂಟಲ್ ಡೆವಲಪ್ಮೆಂಟ್, ಮಾರ್ಫಾಲಜಿ, ಅಂಡ್ ಪೆಥಾಲಜಿ . ಯೂನಿವರ್ಸಿಟಿ ಆಫ್ ಒರೆಗಾನ್ ಆಂಥ್ರೊಪೊಲಾಜಿಕಲ್ ಪೇಪರ್ಸ್, ಸಂಖ್ಯೆ. 54
  14. ಮೈಯರ್ಸ್, ಎನ್. 1985. ದಿ ಪ್ರೈಮರಿ ಸೋರ್ಸ್ ಡಬ್ಲು. ಡಬ್ಲು. ನಾರ್ಟನ್ ಅಂಡ್ ಕೊ., ನ್ಯೂಯಾರ್ಕ್, ಪುಟಗಳು. 189-193.
  15. ಫೊಷೀ, ಎಸ್. (10 ಅಕ್ಟೋಬರ್. ಎನ್ವಾರನ್ಮೆಂಟಲ್ ಇಂಪ್ಯಾಕ್ಟ್ಸ್ ಆಫ್ ಟೂರಿಸಂ. ನವೆಂಬರ್ 30, 2007ರಂದು ಪರಿಷ್ಕರಿಸಲಾಗಿದೆ Uneptie.org Archived 2007-12-28 ವೇಬ್ಯಾಕ್ ಮೆಷಿನ್ ನಲ್ಲಿ.
  16. Elsevier. "Agricultural and Forest Meteorology". Retrieved 20 January 2009. {{cite web}}: Cite has empty unknown parameter: |coauthors= (help)
  17. Oxford University Press. "Annals of botany". Retrieved 20 January 2009. {{cite web}}: Cite has empty unknown parameter: |coauthors= (help)
  18. Springer. "Biodiversity and Conservation". Retrieved 20 January 2009. {{cite web}}: |last= has generic name (help); Cite has empty unknown parameter: |coauthors= (help)[permanent dead link]
  19. Elsevier. "Biological Conservation". Retrieved 20 January 2009. {{cite web}}: Cite has empty unknown parameter: |coauthors= (help)
  20. "Diversity and Distributions". Retrieved 20 January 2009. {{cite web}}: Cite has empty unknown parameter: |coauthors= (help)[permanent dead link]
  21. Elsevier. "Ecological Indicators". Retrieved 20 January 2009. {{cite web}}: Cite has empty unknown parameter: |coauthors= (help)
  22. John Wiley & Sons. "Ecological Management & Restoration". Archived from the original on 29 ಏಪ್ರಿಲ್ 2009. Retrieved 20 January 2009. {{cite web}}: Cite has empty unknown parameter: |coauthors= (help)
  23. BioOne. "Ecoscience". Retrieved 20 January 2009. {{cite web}}: Cite has empty unknown parameter: |coauthors= (help)
  24. Cambridge University Press. "Journal of Tropical Ecology". Archived from the original on 3 ಜನವರಿ 2009. Retrieved 20 January 2009. {{cite web}}: Cite has empty unknown parameter: |coauthors= (help)
  25. Elsevier. "Palaeogeography, Palaeoclimatology, Palaeoecology". Retrieved 20 January 2009. {{cite web}}: Cite has empty unknown parameter: |coauthors= (help)
  26. Taylor & Francis. "Studies on Neotropical Fauna and Environment". Retrieved 20 January 2009. {{cite web}}: Cite has empty unknown parameter: |coauthors= (help)

ಬಾಹ್ಯ ಕೊಂಡಿಗಳು‌

[ಬದಲಾಯಿಸಿ]