ಹೋಮೋ ಎರೆಕ್ಟಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೋಮೋ ಎರೆಕ್ಟಸ್
ಕಾಲಮಾನದ ವ್ಯಾಪ್ತಿ: ೧.೯ ರಿಂದ ೦.೦೭ ದವಹಿಂ
ಆರಂಭಿಕ ಪ್ಲಿಸ್ಟೋಸಿನ್ ಮತ್ತು ತಡವಾದ ಪ್ಲಿಸ್ಟೋಸಿನ್
ಟೌಟಾವೆಲ್, ಫ್ರಾನ್ಸ್‌ನಲ್ಲಿನ ನಮೂನೆಯ ಮರು ರಚನೆ
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ: ಪ್ರಾಣಿ
ವಂಶ: ಕಾರ್ಡೇಟ
ಕ್ಲಾಡ್: ಸಿನಾಪ್ಸಿಡ
ವರ್ಗ: ಸಸ್ತನಿ
ಗಣ: ಪ್ರೈಮೇಟ್
ಉಪಗಣ: ಹ್ಯಾಪ್ಲೋರ್ಹಿನಿ
ಕುಟುಂಬ: ಹೋಮಿನಿಡೇ
ಬುಡಕಟ್ಟು ಹೋಮಿನಿನಿ
ಕುಲ: ಹೋಮೋ
ಪ್ರಭೇದ: ಎರೆಕ್ಟಸ್
ದ್ವಿಪದ ಹೆಸರು
†ಹೋಮೋ ಎರೆಕ್ಟಸ್
ಡುಬೋಯಿಸ್, ೧೮೯೨
ಸಮಾನಾರ್ಥಕಗಳು
 • †ಆಂತ್ರಪೊಪಿತೆಕಸ್ ಎರೆಕ್ಟಸ್
 • †ಪಿತೆಕಾಂತ್ರೊಪಸ್ ಎರೆಕ್ಟಸ್
 • †ಸಿನಾಂತ್ರೊಪಸ್ ಪೀಕಿನೆನ್ಸಿಸ್
 • †ಜಾವಾತ್ರೊಪಸ್ ಸೊಲೆಯೆನ್ಸಿಸ್
 • †ಮೆಗಾಂತ್ರೊಪಸ್ ಪಾಲಿಯೊಜಾವನಿಕಸ್
 • †ಹೋಮೋ ಜಾರಿಕಸ್
 • †ಹೋಮೋ ಎರ್ಗಸ್ಟರ್?

ಹೋಮೋ ಎರೆಕ್ಟಸ್[೧] ಹೋಮಿನಿನಿ ಬುಡಕಟ್ಟಿನ ಒಂದು ದ್ವಿಪಾದಿ ಮಾನವ ಮತ್ತು ಸುಮಾರು ೧.೯ ದಶಲಕ್ಷ ಹಿಂದಿನಿಂದ ಮತ್ತು ೭೦೦೦೦ ವರುಷಗಳ ಹಿಂದಿನವರೆಗೆ ಪ್ಲಿಸ್ಟೋಸಿನ್ ಕಾಲಮಾನದ ಬಹಳಷ್ಟು ಭಾಗದಲ್ಲಿ ಬದುಕಿದ್ದ. ಇವನು/ಳು ಆಫ್ರಿಕಾದಲ್ಲಿ ಹುಟ್ಟಿ ಜಾರ್ಜಿಯ, ಭಾರತ, ಶ್ರೀಲಂಕಾ, ಚೀನ ಮತ್ತು ಇಂಡೋನೇಶಿಯಾಗಳಿಗೆ ವಲಸೆ ಹೋದ ಎಂದು ಭಾವಿಸಲಾಗಿದೆ.[೨][೩]

ಅವನ ವರ್ಗೀಕರಣ, ಮೂಲ ವಂಶಸ್ಥರು ಮತ್ತು ಸಂತತಿಗಳ ಬಗೆಗೆ, ವಿಶೇಷವಾಗಿ ಹೋಮೋ ಎರ್ಗಸ್ಟರ್‌ಗೆ ಸಂಬಂಧಿಸಿದಂತೆ ಚರ್ಚೆ ಮುಂದುವರೆದಿದ್ದು ಎರಡು ನಿಲುವುಗಳು ವ್ಯಕ್ತವಾಗಿವೆ. ೧). ಹೋ. ಎರೆಕ್ಟಸ್ ಮತ್ತು ಹೋ. ಎರ್ಗಸ್ಟರ್ ಎರಡೂ ಒಂದೇ ಮತ್ತು ಹೋಮೋ ಹೈಡೆಲ್‌ಬರ್ಗೆನ್ಸಿಸ್, ಹೋಮೋ ನಿಯಾಂಡೆರ್ತಲೆನ್ಸಿಸ್ ಮತ್ತು ಹೋಮೋ ಸೆಪಿಯಿನ್ಸ್‌ಗಳ ಪೂರ್ವಜ ಅಥವಾ ೨) ಹೋ. ಎರ್ಗಸ್ಟರ್‌ಗಿಂತ ಭಿನ್ನವಾಗಿ ಇದು ಏಶಿಯಾದ ಪ್ರತ್ಯೇಕ ಪ್ರಭೇದ.[೨][೪][೫]

ಇನ್ನೊಂದು ಬದಲೀ ದೃಷ್ಟಿಕೋನವೂ ಸಹ ಪ್ರಾಚೀನ-ಮಾನವಶಾಸ್ತ್ರಜ್ಞರಲ್ಲಿ ಇದೆ. ಇವರು ಹೋ. ಎರ್ಗಸ್ಟರ್ ಒಂದು ಆಫ್ರಿಕಾದ ಒಂದು ಉಪಪ್ರಭೇದವಾಗಿ ಪರಿಗಣಿಸುತ್ತಾರೆ. ಅವರ ಪ್ರಕಾರ ಏಶಿಯಾದ ಪ್ರಭೇದವು “ಹೋಮೋ ಎರೆಕ್ಟಸ್ ಸೆನ್ಸು ಸ್ಟ್ರಿಕ್ಟೊ” (ಖಚಿತ ಅರ್ಥದ್ದು) ಮತ್ತು ಆಫ್ರಿಕಾದ ಉಪಪ್ರಭೇದವು “ಹೋಮೋ ಎರೆಕ್ಟಸ್ ಸೆನ್ಸು ಲಾಟೊ” (ವಿಶಾಲ ಅರ್ಥದ್ದು) ಮತ್ತು ಮೂಲ ಪ್ರಭೇದವು ಏಶಿಯಾ ಮತ್ತು ಆಫ್ರಿಕಾ ಎರಡೂ ಗುಂಪುಗಳನ್ನು ಒಳಗೊಂಡಿದೆ.[೬][೭]

ಜೊತೆಗೆ ೨೦೧೩ರಲ್ಲಿ ಡಮನಿಸಿ ತಲೆಬುರುಡೆಯ ದಾಖಲೆಗಳೊಂದಿಗೆ[೮] ಇನ್ನೊಂದು ಹೊಸ ಚರ್ಚೆಯೂ ಸಹ ಕಾಣಿಸಿಕೊಂಡಿತು. ಡಮನಿಸಿ ತಲೆಬುರುಡೆಯ ವೈವಿಧ್ಯತೆಯನ್ನು ಗಣನೆಗೆ ತೆಗೆದುಕೊಂಡು ಇದುವರೆಗೆ ಬೇರೆ ಬೇರೆ ಪ್ರಭೇದಗಳಲ್ಲಿ ವರ್ಗೀಕರಿಸಿದ ಹೋ. ಎರ್ಗಸ್ಟರ್, ಹೋಮೋ ರುಡಾಲ್ಫೆನ್ಸಿಸ್ ಮತ್ತು ಹೋಮೋ ಹೆಬಿಲಿಸ್‌ನ್ನೂ ಸಹ ಹೋಮೋ ಎರೆಕ್ಟಸ್ ಎಂದು ಮರು ವರ್ಗೀಕರಿಸ ಬೇಕೆಂದು ಸಂಶೋಧಕರು ಸೂಚಿಸಿದರು.[೯][೧೦]

ಮೊದಲ ಪಳಿಯುಳಿಕೆಗಳು[ಬದಲಾಯಿಸಿ]

ಮಾನವ ವಿಕಾಸದ ಬಗೆಗಿನ ಸಿದ್ಧಾಂತಗಳಿಂದ ಪ್ರಭಾವಿತನಾದ ಯುಜೀನ್ ಡುಬೋಯಿಸ್ (೧೮೫೮-೧೯೪೦) ಅಂದು ಡಚ್‌ ಆಳ್ವಿಯೆಕೆಯಲ್ಲಿದ್ದ ಸುಮಾತ್ರಕ್ಕೆ ಮಾನವ ಮತ್ತು ವಾನರಗಳ ನಡುವಿನ “ಮಿಸ್ಸಿಂಗ್ ಲಿಂಕ್” (ಕಳೆದುಹೋದ ಕೊಂಡಿ) ಹುಡುಕಲು ಸೈನ್ಯದ ವೈದ್ಯನಾಗಿ ಹೋದ. ಅವನು ತನ್ನ ಸಂಶೋಧನೆಯನ್ನು ಜಾವಕ್ಕೆ ಸ್ಥಳಾಂತರಿಸಿದ ಮೇಲೆ ಅಲ್ಲಿನ ಟ್ರಿನಿಲ್ ಪಟ್ಟಣದ ಹತ್ತಿರದ ಸೋಲೋ ನದಿಯ ದಂಡೆಯಲ್ಲಿ ತಲೆಬುರುಡೆಯ ಟೊಪ್ಪಿಗೆ (ತಲೆಬುರುಡೆಯ ಮೇಲ್ಭಾಗ) ಅಕ್ಟೋಬರ್ ೧೮೯೧ರಲ್ಲಿ ಪತ್ತೆಯಾಯಿತು. ನಂತರದ ವರುಷದಲ್ಲಿ ಈ ಸ್ಥಳದಿಂದ ೧೫ ಗಜಗಳ ಅಂತರದಲ್ಲಿ ಮಾನವನ ತೊಡೆಯೆಲುಬು ಸಹ ಪತ್ತೆಯಾಯಿತು. ಡುಬೋಯಿಸ್ ತಲೆಬುರುಡೆಯ ಟೋಪಿ (ಮೆದುಳಿನ ಗಾತ್ರ ೯೦೦ ಘನ ಸೆಂಮೀಗೂ ತುಸು ಹೆಚ್ಚು) ಮತ್ತು ತೊಡೆಯೆಲುಬು ಒಂದೇ ಜೀವಿಯದು ಎಂದು ಊಹಿಸಿದ.[೧೧]

ಆರಂಭದಲ್ಲಿ ಅವನು ತಲೆಬುರುಡೆಯ ಮೇಲ್ಭಾಗ ವಾನರರದು ಎಂದು ಭಾವಿಸಿ ಅಂದು ಚಿಂಪಾಂಜಿಗೆ ಬಳಸುತ್ತಿದ್ದ ಹೆಸರಾದ ಆಂತ್ರಪೊಪಿತೆಕಸ್ ಎಂದು ಕರೆದ. ನಂತರದ ವಿಶ್ಲೇಷಣೆ ಮತ್ತು ಮಾನವನ ತೊಡೆಯೆಲುಬು ಹೋಲುವ ತೊಡೆಯೆಲುಬು ಪತ್ತೆಯಾದ ಬಳಿಕ ಆ ಹೆಸರನ್ನು ಪಿತೆಕಾಂತ್ರೊಪಸ್ ಎರೆಕ್ಟಸ್ ಎಂದು ಬದಲಿಸಿದ.[೧೨] ಜನಪ್ರಿಯ ಮಾಧ್ಯಮದಲ್ಲಿ ಜಾವ ಮಾನವ ಎಂದು ಕರೆಯಲಾದ ಈ ಪಳೆಯುಳಿಕೆ ಸಾರ್ವಜನಿಕರಲ್ಲಿ ಆಸಕ್ತಿ ಕೆರಳಿಸಿತು. ಆದರೆ ಬಹುತೇಕ ವಿಜ್ಞಾನಿಗಳು ಇದು ವಾನರ ಮತ್ತು ಮಾನವ ನಡುವಿನ “ಮಿಸ್ಸಿಂಗ್ ಲಿಂಕ್” ಎಂದು ಒಪ್ಪಿಕೊಳ್ಳಲಿಲ್ಲ.

ಚೀನದ ಬೀಜಿಂಗ್ (ಅಂದು ಕರೆಯುತ್ತಿದ್ದಂತೆ ಪೀಕಿಂಗ್) ಹತ್ತಿರ ಜೌಕೌಡಿಯನ್‌ನಲ್ಲಿ ಪತ್ತೆಯಾದ ಪಳೆಯುಳಿಕೆ ಸಹ ಇಂತಹುದೇ ಆಸಕ್ತಿಯನ್ನು ಹುಟ್ಟು ಹಾಕಿತು. ೧೯೨೧ರಲ್ಲಿ ಪತ್ತೆಯಾದ ಈ ಎರಡು ಹಲ್ಲುಗಳನ್ನು ಅಂಗರಚನಶಾಸ್ತ್ರಜ್ಞ ಡೇವಿಡ್‌ಸನ್ ಬ್ಲಾಕ್ ಹೊಸ ಪ್ರಭೇದ ಸಿನಾಂತ್ರೊಪಸ್ ಪೀಕಿನೆನ್ಸಿಸ್‌ಗೆ ಸೇರಿದುದಾಗಿ ಹೇಳಿದ.[೧೩] ನಂತರದ ವಿಸೃತ ಉತ್ಖನನಗಳಲ್ಲಿ ೪೦ಕ್ಕೂ ಹೆಚ್ಚು ವ್ಯಕ್ತಿಗಳ, ಐದು ಪೂರ್ಣ ತಲೆಬುರುಡೆ ಮೇಲ್ಭಾಗಗಳನ್ನೂ ಒಳಗೊಂಡು, ೨೦೦ ಕ್ಕೂ ಹೆಚ್ಚು ಪಳೆಯುಳಿಕೆಗಳು ಪತ್ತೆಯಾದವು.[೧೪] ಜರ್ಮನ್ ಅಂಗರಚನಶಾಸ್ತ್ರಜ್ಞ ಫ್ರಾಂಜ್ ವೈಡನ್‌ರಿಯಿಚ್ ಈ ಪತ್ತೆಯಾದ ಪದಾರ್ಥಗಳನ್ನು ವಿವರಿಸಿ ಹಲವು ಪ್ರಬಂಧಗಳನ್ನು ನಿಯತಕಾಲಿಕಕ್ಕೆ ಬರೆದ.

ಈ ಬಹಳಷ್ಟು ಮೂಲ ನಮೂನೆಗಳು ಎರಡನೇ ಮಹಾಯುದ್ಧದ ಸಮಯದಲ್ಲಿ ನಾಪತ್ತೆಯಾದವು ಆದರೆ ವೈಡನ್‌ರಿಯಿಚ್ ತಯಾರಿಸದ ಅದರ ನಂಬಲರ್ಹ ಎರಕಗಳು ಉಳಿದುಕೊಂಡಿವೆ. ಆರಂಭಿಕ ಇಪ್ಪತ್ತನೆಯ ಶತಮಾನದಲ್ಲಿ ಜಾವ ಮತ್ತು ಪೀಕಿಂಗ್ ಮಾನವ ಪತ್ತೆಯಾದಾಗ ಆಧುನಿಕ ಮಾನವ ಮೊದಲು ಏಶಿಯಾದಲ್ಲಿ ವಿಕಾಸವಾದ ಎಂದು ನಂಬಲಾಗುತ್ತಿತ್ತು. ಈಗ ಪಿತೆಕಾಂತ್ರೊಪಸ್ ಎರೆಕ್ಟಸ್ ಮತ್ತು ಸಿನಾಂತ್ರೊಪಸ್ ಪೀಕಿನೆನ್ಸಿಸ್‌ಗಳೆರಡನ್ನೂ ಹೋಮೋ ಎರೆಕ್ಟಸ್‌ಗಳೆಂದು ಪರಿಗಣಿಸಲಾಗುತ್ತದೆ.

ಆಫ್ರಿಕಾದ ಹುಟ್ಟು[ಬದಲಾಯಿಸಿ]

ಡಾರ್ವಿನ್‌ನಂತಹ ಕೆಲವರಷ್ಟೇ ಮಾನವ ತೀರ ಪ್ರಾಚೀನ ಪೂರ್ವಜರು ಆಫ್ರಿಕಾದಲ್ಲಿ ಇದ್ದಿರ ಬೇಕು ಎಂದು ಭಾವಿಸುತ್ತಿದ್ದರು. ಡಾರ್ವಿನ್ ಮಾನವರ ಹತ್ತಿರದ ಸಂಬಂಧಿಗಳಾದ ಚಿಂಪಾಂಜಿ, ಗೊರಿಲ್ಲ ಮತ್ತು ಅವುಗಳ ಹತ್ತಿರ ಸಂಬಂಧಿಗಳು ಆಫ್ರಿಕಾದಲ್ಲಿಯಷ್ಟೇ ವಿಕಾಸವಾಗಿವೆ ಮತ್ತು ಉಳಿದುಕೊಂಡಿವೆ ಎಂಬುದರಡೆ ಡಾರ್ವಿನ್ ಗಮನ ಸೆಳೆದಿದ್ದ.[೧೫] ೧೯೫೦ರ ದಶಕದ ನಂತರ ಪೂರ್ವ ಆಫ್ರಿಕಾದಲ್ಲಿ ಪತ್ತೆಯಾದ ಹಲವು ಪಳೆಯುಳಿಕೆಗಳು ಈ ಊಹವನ್ನು (ಹೈಪೊತೀಸಿಸ್) ಬೆಂಬಲಿಸುತ್ತವೆ.

ಈಗ ಸಾಮಾನ್ಯವಾಗಿ ಹೀಗೆ ಭಾವಿಸಲಾಗಿದೆ. ಹೋ. ಎರೆಕ್ಟಸ್ ೧). ಹಿಂದಿನ ಹೋಮಿನಿನ್ ಅಥವಾ ಹೋಮಿನಿಡ್ ಪ್ರಭೇದಗಳಿಂದ (ಬಹುಶಹ ಆಸ್ಟ್ರಾಲೋಪಿತೆಕಸ್ ಮತ್ತು ಇನ್ನೂ ಹೊಮಿನಿನ್‌ ಹೌದೇ ಅಲ್ಲವೇ ಎಂದು ಚರ್ಚಿಸಲಾಗುತ್ತಿರುವ ಆರ್ಡಿಪಿತೆಕಸ್‌ ನಂತಹವುಗಳಿಂದ) ವಿಕಾಸವಾಯಿತು. ಅಥವಾ ೨) ಹಿಂದಿನ ಹೋಮೋ ಪ್ರಭೇದಗಳಿಂದ (ಹೋಮೋ ಹೆಬಿಲಿಸ್ ಅಥವಾ ಹೋಮೋ ಎರ್ಗಸ್ಟರ್) ವಿಕಾಸವಾಯಿತು. ಪೂರ್ವ ಆಫ್ರಿಕದಲ್ಲಿ ಹೋ. ಹೆಬಿಲಿಸ್ ಮತ್ತು ಹೋ. ಎರೆಕ್ಟಸ್ ಸಿಂಪ್ರಾಟಿಕ್ ರೀತಿಯಲ್ಲಿ (ಪ್ರಭೇದಕರಣದ ಒಂದು ರೀತಿ) ಹಲವು ಲಕ್ಷ ವರುಷಗಳ ಕಾಲ ಇದ್ದವು ಎಂದು ಸೂಚಿತವಾಗಿದೆ. ಇದರ ಅರ್ಥವೆಂದರೆ ಅವು ಕ್ಲಾಡೊಜೆನಿಟಿಕ್ ರೀತಿಯಲ್ಲಿ ಅಥವಾ ಹೆಬಿಲಿಸ್ ಮತ್ತು ಎರೆಕ್ಟಸ್‌ಗಳ ಪೂರ್ವಜರು ಮೂಲ ಗುಂಪಿನಿಂದ ಸಂತಾನೋತ್ಪತ್ತಿಯಲ್ಲಿ ಪ್ರತ್ಯೇಕಗೊಂಡು ಕೊನೆಗೆ ಹೋಮೋ ಎರೆಕ್ಟಸ್ ಹೊಸ ಪ್ರಭೇದವಾಗಿ ವಿಕಾಸವಾಯಿತು ಎಂದು ಸೂಚಿಸಲ್ಪಟ್ಟಿದೆ.[೧೬]

೧೯೪೯ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಜಾನ್ ಟಿ. ರಾಬಿನ್‌ಸನ್ ಪತ್ತೆ ಹಚ್ಚಿದ ದವಡೆಯ ತುಂಡಿನ ಪಳೆಯುಳಿಕೆಯನ್ನು ಮೊದಲು ಟೆಲಾಂತ್ರೊಪಸ್ ಕ್ಯಾಪೆನ್ಸಿಸ್‌ನಲ್ಲಿ ಸೇರಿಸಲಾಗಿತ್ತು ಮತ್ತು ನಂತರದಲ್ಲಿ ಇದನ್ನು ಹೋ, ಎರೆಕ್ಟಸ್‌ನಲ್ಲಿ ಮರು ವರ್ಗೀಕರಿಸಲಾಯಿತು.[೧೭][೧೮] ನಂತರದಲ್ಲಿ ೧೯೬೧ರಲ್ಲಿ ಯವೆಸ್ ಕೊಪೆನ್ಸ್ ಪತ್ತೆಹಚ್ಚಿದ ಟಚಡಾಂತ್ರೊಪಸ್ ಯುಕ್ಯೋರಿಸ್ ಎಂದು ಕರೆಯಲಾದ ತಲೆಬುರುಡೆಯನ್ನು ಆರಂಭದಲ್ಲಿ ಹೋ. ಹೆಬಿಲಿಸ್ ಆಗಿ ಮತ್ತು ನಂತರದಲ್ಲಿ ಹೋ. ಎರೆಕ್ಟಸ್‌ಗೆ ಸೇರಿಸಿ ಮರು ವರ್ಗೀಕರಿಸಲಾಯಿತು.[೧೯][೨೦][೨೧]

ಹೋಮೋ ಎರೆಕ್ಟಸ್ ಜಾರ್ಜಿಕಸ್[ಬದಲಾಯಿಸಿ]

ಡಮನಿಸಿ ತಲೆಬುರುಡೆ ೩, ಪಳೆಯುಳಿಕೆ -ತಲೆಬುರುಡೆ ಡಿ೨೭೦೦, ಡಿ೨೭೩೫ ದವಡೆ ಜಾರ್ಜಿಯದ ಕ್ಯಾಕಸಸ್‌ನಲ್ಲಿ (ಕಪ್ಪು ಸಮುದ್ರ ಮತ್ತು ಕ್ಯಾಪ್ಸಿಯನ್ ಸಮುದ್ರಗಳ ನಡುವಿನ ಪ್ರದೇಶ) ದೊರೆತವು
ಜಾರ್ಜಿಯದಲ್ಲಿ ಪಳೆಯುಳಿಕೆ ದೊರೆತ ಸ್ಥಳ ಡಮನಿಸಿ

ಹೋಮೋ ಎರೆಕ್ಟಸ್ ಜಾರ್ಜಿಕಸ್ ಜಾರ್ಜಿಯದ ಡಮನಿಸಿಯಲ್ಲಿ ಪತ್ತೆಯಾದ ದವಡೆ ಮತ್ತು ತಲೆಬುರುಡೆಗಳಿಗೆ ಕೊಟ್ಟ ಹೆಸರು. ೧೯೯೧ರಲ್ಲಿ ಉತ್ಖನನ ಆರಂಭವಾದ ಇಲ್ಲಿ ಐದು ತಲೆಬುರುಡೆಗಳು ಕಂಡುಬಂದಿದ್ದು- ೨೦೦೫ರದು “ಬಹುತೇಕ ಪೂರ್ಣ ತಲೆಬುರುಡೆ”. ಇಲ್ಲಿಯ ಉತ್ಖನದಲ್ಲಿ ೭೩ ಕತ್ತರಿಸುವ, ಕೊಚ್ಚುವ ಕಲ್ಲಿನ ಪರಿಕರಗಳು (ಉಪಕರಣಗಳು) ಮತ್ತು ಗುರುತು ತಿಳಿಯದ ಪ್ರಾಣಿಯ ೩೪ ಎಲುಬಿನ ಚೂರುಗಳು ಪತ್ತೆಯಾಗಿವೆ[೨೨]. ಆರಂಭದಲ್ಲಿ ಇದನ್ನು ವಿಜ್ಞಾನಿಗಳು ಹೋಮೋ ಜಾರ್ಜಿಕಸ್ ಎಂಬ ಬೇರೆಯದೇ ಪ್ರಭೇದವಾಗಿ ವರ್ಗೀಕರಿಸಿದರು.[೨೩][೨೪][೨೫] ಅವರ ಪ್ರಕಾರ ಈ ಪ್ರಭೇದವು ಹೋ. ಹೆಬಿಲಿಸ್‌ನಿಂದ ಬಂದು ಏಶಿಯಾದ ಹೋ. ಎರೆಕ್ಟಸ್‌ಗೆ ಪೂರ್ವಜನಾಗಿತ್ತು. ಆದರೆ ಈ ವರ್ಗೀಕರಣಕ್ಕೆ ಬೆಂಬಲ ಸಿಗಲಿಲ್ಲ ಬದಲಿಗೆ ಅದನ್ನೊಂದು ಹೋ. ಎರೆಕ್ಟಸ್‌ನ ಉಪಪ್ರಭೇದವಾಗಿ ಗುರುತಿಸಲಾಯಿತು.[೨೬][೨೭][೨೮][೨೯]

ಅಸ್ತಿಪಂಜರದ ಪಳೆಯುಳಿಕೆಗಳ ತಲೆಬುರುಡೆ ಮತ್ತು ದೇಹದ ಮೆಲ್ಭಾಗವು ಪ್ರಾಚೀನವಾಗಿ ಕಂಡುಬರುತ್ತದೆ ಆದರೆ ಸಾಕ್ಷೇಪಿಕವಾಗಿ ಅಭಿವೃದ್ಧಿ ಹೊಂದಿದ ಬೆನ್ನೆಲುಬು ಮತ್ತು ಕಾಲುಗಳು ಕಂಡುಬಂದಿದ್ದು ಹಿಂದಿನ ದೇಹ ರಚನೆಗಿಂತ ಹೆಚ್ಚು ಚಲನಶೀಲತೆಯ ಸಾಧ್ಯತೆಯನ್ನು ತೋರುತ್ತವೆ.[೩೦] ಇದರ ಕಾಲಮಾನವನ್ನು ೧.೮ ದಶಲಕ್ಷ ವರುಷಗಳ ಹಿಂದೆ ಎನ್ನಲಾಗಿದ್ದು[೨೪][೩೧] ಇದು ಹೋ. ಹೆಬಿಲಿಸ್ ಮತ್ತು ಹೋ. ಎರೆಕ್ಟಸ್‌ಗಳ ನಡುವಿನ ಬದಲಾವಣೆಯ ಕಾಲದಲ್ಲಿನದು ಎಂದು ಭಾವಿಸಲಾಗಿದೆ. ಎರಡು ತಲೆಬುರುಡೆಗಳು ೬೦೦ ಮತ್ತು ೫೪೬ ಘನ ಸೆಂಮೀ ಮೆದುಳಿನ ಗಾತ್ರವನ್ನು ತೋರುತ್ತವೆ.[೯] ತಲೆಬುರುಡೆಗಳ ನಡುವೆ ವ್ಯತ್ಯಾಸವಿದ್ದಾಗ್ಯೂ ಇದನ್ನು ಮಾನವರ ಮತ್ತು ಚಿಂಪಾಜಿಗಳ ನಡುವಿನ ವ್ಯತ್ಯಾಸಕ್ಕಿಂತ ಹೆಚ್ಚಲ್ಲ ಎಂದು ನಿರ್ಣಯಿಸಲಾಯಿತು. ಇದು ಹಿಂದೆ ಅಂಗರಚನೆಗಳ ಮೇಲಿನ ವ್ಯತ್ಯಾಸದ ಮೇಲೆ ಆಧಾರಿತವಾದ ಹೋಮೋ ರುಡೊಲ್ಫೆನ್ಸಿಸ್, ಹೋಮೋ ಗೌಟೆನ್‌ಜೆನ್ಸಿಸ್, ಹೋಮೋ ಎರ್ಗಸ್ಟರ್ ಮತ್ತು ಹೋಮೋ ಹೆಬಿಲಿಸ್‌ಗಳನ್ನು ಸಹ ಹೋಮೋ ಎರೆಕ್ಟಸ್ ಕೆಳಗೆ ಪರಿಗಣಿಸುವಂತೆ ಸೂಚಿಸಲು ಅವಕಾಶ ಮಾಡಿಕೊಟ್ಟಿದೆ.[೩೨]

ವರ್ಗೀಕರಣ[ಬದಲಾಯಿಸಿ]

ಪ್ರಾಚೀನ ಮಾನವಶಾಸ್ತ್ರಜ್ಞರು ಹೋಮೋ ಎರೆಕ್ಟಸ್ ಮತ್ತು ಹೋಮೋ ಎರ್ಗಸ್ಟರ್‌ಗಳನ್ನು ಬೇರೆ ಬೇರೆ ಪ್ರಭೇದಗಳನ್ನು ಮಾಡುವ ಬಗೆಗೆ ಚರ್ಚೆ ಮುಂದುವರೆಸಿದ್ದಾರೆ. ಒಂದು ವರ್ಗದ ಚಿಂತನೆಯ ಪ್ರಕಾರ ಹೋಮೋ ಎರೆಕ್ಟಸ್ ಟ್ಯಾಕ್ಸಾನಮಿ ಹೆಸರು ಕೈಬಿಡಬೇಕು ಮತ್ತು ಅರ್ವಾಚೀನ ಹೋಮೋ ಸೆಪಿಯನ್ಸ್‌ನಲ್ಲಿ ಅದನ್ನು ಸೇರಿಸ ಬೇಕು.[೩೩][೩೪][೩೫][೩೬] ಇನ್ನೊಂದು ವರ್ಗವು ಹೋ. ಎರ್ಗೆಸ್ಟರ್‌ನ್ನು ಹೋ. ಎರೆಕ್ಟಸ್‌ನ ಪೂರ್ವಜ ಎಂದು ಕರೆದು ಆಫ್ರಿಕಾದಿಂದ ಏಶಿಯಾಕ್ಕೆ ವಲಸೆ ಹೋಗಿ ಅದು ಬೇರೆಯದೇ ಪ್ರಭೇದವಾಯಿತು ಎಂದು ಭಾವಿಸುತ್ತದೆ.[೩೭] ಇನ್ನೂ ಕೆಲವರು ಹೋ. ಎರ್ಗಸ್ಟರ್ ಹೆಸರನ್ನೇ ಕೈಬಿಡುತ್ತಾರೆ ಮತ್ತು ಟುರ್ಕನ ಹುಡುಗ (ತಂಜಾನಿಯದ ಟುರ್ಕನ ಸರೋವರ ಬಳಿ ದೊರೆತ ಪಳೆಯುಳಿಕೆ) ಮತ್ತು ಪೀಕಿಂಗ್ ಪಳೆಯುಳಿಕೆಗಳ ನಡುವೆ ಯಾವ ವ್ಯತ್ಯಾಸವನ್ನೂ ಮಾಡುವುದಿಲ್ಲ.ಉಲ್ಲೇಖದ ಅಗತ್ಯವಿದೆ ಆದಾಗ್ಯೂ ಹೋಮೋ ಎರ್ಗಸ್ಟರ್ ವೈಜ್ಞಾನಿಕ ವರ್ಗೀಕರಣದ ಹೆಸರು ಸಾಮಾನ್ಯ ಒಪ್ಪಿಗೆ ಪಡೆದಿದೆ ಮತ್ತು ಏಶಿಯನ್ ಸಮುದಾಯದ ಹೋ. ಎರೆಕ್ಟಸ್‌ನಿಂದ ಭಿನ್ನವಾಗಿ ಗುರುತಿಸಲ್ಪಟ್ಟಿದೆ.

ಕೆಲವರು ಅರ್ನಸ್ಟ ಮೇಯರ್‌ನ ಜೈವಿಕ ಪ್ರಭೇದ ವ್ಯಾಖ್ಯಾನ (ಬಯಾಲಾಜಿಕಲ್ ಸ್ಪೀಶೀಸ್ ಡೆಪಿನಿಶನ್) ಈ ಊಹನಕ್ಕೆ ಅನ್ವಯಿಸಲು ಸಾಧ್ಯವಾಗುವುದಿಲ್ಲ ಎಂದು ಸೂಚಿಸುವ ಮೂಲಕ ಎರಡೂ ಒಂದೇ ಪ್ರಭೇದಕ್ಕೆ ಸೇರಿದವು ಎಂದು ಸೂಚಿಸುತ್ತಾರೆ. ಬದಲಿಯಾಗಿ ಹೋ. ಎರೆಕ್ಟಸ್ ಮತ್ತು ಹೋ. ಎರ್ಗಸ್ಟರ್ ನಡುವಿನ ತಲೆಬುರುಡೆಯ ವ್ಯತ್ಯಾಸಗಳ ಮೊತ್ತವನ್ನು ಸೂಕ್ತ ಜೀವಂತ ಪ್ರೈಮೇಟ್ (ಅಂತಹುದೇ ಭೂಗೋಳಿಕ ಹಂಚಿಕೆ ಅಥವಾ ಹತ್ತಿರದ ವಿಕಸನೀಯ ಸಂಬಂಧ ಇರುವ) ವ್ಯತ್ಯಾಸಕ್ಕೆ ಹೋಲಿಸ ಬೇಕು ಮತ್ತು ಹೀಗೆ ಆಯ್ಕೆ ಮಾಡಿದ ಜೀವಿಯಲ್ಲಿನ ವ್ಯತ್ಯಾಸಕ್ಕೆ ಹೋಲಿಸಿದಲ್ಲಿ ಹೋ. ಎರೆಕ್ಟಸ್ ಮತ್ತು ಹೋ. ಎರ್ಗಸ್ಟರ್ ನಡುವಿನ ವ್ಯತ್ಯಾಸ ಹೆಚ್ಚಾಗಿದ್ದರೆ ಅವೆರಡನ್ನು ಬೇರೆ ಬೇರೆ ಪ್ರಭೇದಗಳಾಗಿ ವಿಂಗಡಿಸ ಬೇಕು ಎಂದು ಸೂಚಿಸುತ್ತಾರೆ.

ಕ್ಷೇತ್ರ ಅಧ್ಯಯನ, ವಿಶ್ಲೇಷಣೆ ಮತ್ತು ಹೋಲಿಕೆಗೆ ಸೂಕ್ತವಾದ ಮಾದರಿ ಜೀವಂತ ಪ್ರಭೇದವೊಂದನ್ನು ಗುರುತಿಸುವುದು ಬಹಳ ಮುಖ್ಯ ಮತ್ತು ಇದು ಕಷ್ಟದ ಕೆಲಸವಾಗ ಬಹುದು. (ಉದಾಹರಣೆಗೆ ಮಾನವನ ಜಾಗತಿಕ ಜನಸಂಖ್ಯೆಯಲ್ಲಿನ ರಾಚನಿಕ ವ್ಯತ್ಯಾಸ ತೀರ ಕಡಿಮೆ[೩೮] ಹೀಗಾಗಿ ಮಾನವನ ವೈವಿಧ್ಯತೆಯು ನಂಬಲರ್ಹ ಹೋಲಿಕೆಯಾಗಲು ಸಾಧ್ಯವಾಗಲಾರದು. ಜಾರ್ಜಿಯದ ಡಮನಿಸಿಯಲ್ಲಿನ ಪಳೆಯುಳಿಕೆಗಳನ್ನು ಮೊದಲು ಭಿನ್ನ ಪ್ರಭೇದವೆಂದು ಗುರುತಿಸಲಾಗಿತ್ತು ಮತ್ತು ನಂತರದಲ್ಲಿ ದೊರೆತ ನಮೂನೆಗಳ ಆಧಾರದ ಮೇಲೆ ವ್ಯತ್ಯಾಸವು ಹೋಮೋ ಎರೆಕ್ಟಸ್ ವ್ಯಾಪ್ತಿಯಲ್ಲಿಯೇ ಇದೆ ಎಂದು ನಿರ್ಣಯಿಸಲಾಯಿತು.)

ಅಂಗರಚನೆ[ಬದಲಾಯಿಸಿ]

ಹೋಮೋ ಎರೆಕ್ಟಸ್‌ನ ಮೆದುಳಿನ ಗಾತ್ರವು ಹೋ. ಹೆಬಿಲಿಸ್‌ಗಿಂತ ಕಡಿಮೆ ಇದೆ (ಡಮನಿಸಿ ನಮೂನೆಗಳು ಕಡಿಮೆ ಮೆದುಳಿನ ಗಾತ್ರ ತೋರುತ್ತವೆ). ಆರಂಭಿಕ ಪಳೆಯುಳಿಕೆಗಳು ೮೫೦ ಘನ ಸೆಂಮೀ ಮೆದುಳಿನ ಗಾತ್ರ ತೋರಿದರೆ ಜಾವದ ನಮೂನೆಯಲ್ಲಿ ಇದು ೧೧೦೦ ಘನ ಸೆಂಮೀನಷ್ಟು[೩೮] ಹೆಚ್ಚು ಇದ್ದು ಹೋ, ಸೆಪಿಯೆನ್ಸ್ ಮೇಲೂ ವ್ಯಾಪಿಸಿದೆ. ಆಸ್ಟ್ರಾಲೋಪಿತೆಸಿನಗೆ ಹೋಲಿಸಿದರೆ ಪ್ರಂಟಲ್ ಮೂಳೆಗಳು (ಮುಖದ ಮುಂಬಾಗಕ್ಕೆ ಸಂಬಂಧಿಸಿದ ಮೂರು ಮೂಳೆಗಳು) ವಾಲುವಿಕೆ ಮತ್ತು ಹಲ್ಲಿನ ಕಮಾನು ಕಡಿಮೆ ಇವೆ. ಮುಖದ ಮುಂಚಾಚುವಿಕೆ ಆಸ್ಟ್ರಾಲೋಪಿತೆಸಿನ ಮತ್ತು ಹೋ. ಹೆಬಿಲಿಸ್‌ಗೆ ಹೋಲಿಸಿದರೆ ಕಡಿಮೆ ಇದೆ. ಕೆನ್ನೆಯೆಲುಬು ಎದ್ದು ಕಾಣುವುದಿಲ್ಲ ಆದರೆ ಹುಬ್ಬಿನ ದಿಂಡು ದೊಡ್ಡದಾಗಿದೆ. ಆರಂಭಿಕ ಹೋಮಿನಿನ್‌ಗಳು ೧.೭೯ ಮೀ (೫ ಅಡಿ ೧೦ ಇಂಚು)[೩೯], ಆಧುನಿಕ ಮಾನವನಲ್ಲಿ ಶೇ ೧೭ರಷ್ಟು ಮಾತ್ರ ಇದಕ್ಕಿಂತಲೂ ಎತ್ತರ ಇದ್ದಾರೆ[೪೦]. ವಿಶೇಷವಾಗಿ ಇವರ ಕೈಕಾಲುಗಳು ಉದ್ದವಾಗಿದ್ದವು ಮತ್ತು ಇವರು ಸೂಪೂರವಾಗಿದ್ದರು.[೪೧]

ಹೋ. ಎರೆಕ್ಟಸ್‌ನಲ್ಲಿ ಲೈಂಗಿಕ ದ್ವಿರೂಪತೆ (ಹೆಣ್ಣು ಗಂಡುಗಳಲ್ಲಿ ವ್ಯತ್ಯಾಸ) ಇದ್ದು ಗಂಡುಗಳು ಹೆಣ್ಣಿಗಿಂತ ಶೇ ೨೫ ಗಾತ್ರದಲ್ಲಿ ದೊಡ್ಡವರಾಗಿದ್ದರು. ಇದು ಹೋ. ಸೆಪೆಯಿನ್ಸ್‌ಗೆ ಹೋಲಿಸಿದಲ್ಲಿ ತುಸು ಹೆಚ್ಚು ಮತ್ತು ಆಸ್ಟ್ರಾಲೋಪಿತೆಕಸ್‌ಗೆ ಹೋಲಿಸಿದರೆ ಕಡಿಮೆ. ರಿಚರ್ಡ್ ಲೀಕಿ ಮತ್ತು ಕಮೊಯ ಕಿಮೆಯು ೧೯೮೪ರಲ್ಲಿ ಕಿನ್ಯಾದ ಟುರ್ಕನ ಸರೋವರದ ಹತ್ತಿರ ಪತ್ತೆ ಮಾಡಿದ “ಟುರ್ಕನ ಹುಡುಗ”ನ (ಹೋ. ಎರ್ಗಸ್ಟರ್) ಅಸ್ತಿಪಂಜರವು ಮಾನವ ಅಂಗರಚನೆಯ ವಿಕಾಸ ಅರ್ಥಮಾಡಿಕೊಳ್ಳಲು ಮಹತ್ವದ ಕೊಡಿಗೆ ನೀಡಿದೆ. ಇದು ಬಹುತೇಕ ಪೂರ್ಣ ಅಸ್ತಿಪಂಜರ ದೊರೆತ ವಿರಳ ಉದಾಹರಣೆಗಳಲ್ಲೊಂದು ಮತ್ತು ವಿಶ್ಲೇಷಣೆಗೆ ಸಹಾಯ ಮಾಡಿದೆ.

ಮಾನವ ವಿಕಾಸದ ವಿವರಣೆ[ಬದಲಾಯಿಸಿ]

|ಎಡಗಡೆ ಸ್ಟಿಂಗರ್ ಅವರ ಗ್ರಾಫ್:
ಸ್ಟಿಂಗರ್ ಗ್ರಾಫ್ ಮಾದರಿ- ಹೋಮೋ ಕುಲದ ಹಲವು ಪ್ರಭೇದಗಳನ್ನು ಎರಡು ದಶಲಕ್ಷ ವರುಷಗಳ (ಕಾಲಮಾನ ಲಂಬ ಯಾಕ್ಸಿಸ್‌ನಲ್ಲಿ) ವಿಕಾಸವಾದುದನ್ನು ವಿವರಿಸುತ್ತದೆ. ಹೋ. ಸೆಪಿಯನ್ಸ್‌ನ ಬಹಳ ಬೇಗ “ಆಫ್ರಿಕಾದ ಹೊರಗೆ ಹರಡು”ವುದನ್ನೂ ಸೂಚಿಸಲಾಗಿದೆ[೪೨]
ಎಡಗಡೆ ರೀಡ್ ಮತ್ತು ಇತರರ ಗ್ರಾಫ್:
ರೀಡ್‌ ಮತ್ತು ಇತರರು ಸ್ಟಿಂಗರ್‌ರಿಂದ ಮರು ರಚಿಸಿದ[೪೩] ಬದಲೀ ಗ್ರಾಪ್ ಮಾದರಿ-ಹೋಮೋ ಪ್ರಭೇದಗಳ ಎರಡು ದಶಲಕ್ಷ ವರುಷಗಳ ಕಾಲಮಾನ ಮತ್ತು ಭೂಗೋಳಿಕ ಹಂಚಿಕೆ. ಹೋಮೋ ಎರ್ಗಸ್ಟರ್‌ನ್ನು ಹೋ. ಎರೆಕ್ಟಸ್‌ನ ಪೂರ್ವಜನೆಂದು ಚಿತ್ರಿಸಿದುದು ಗಮನಿಸಿ

ಹೋ. ಎರೆಕ್ಟಸ್, ಹೋ. ಎರ್ಗಸ್ಟರ್ ಮತ್ತು ಹೋ. ಸೆಪಿಯನ್ಸ್‌ಗಳ ನಡುವಿನ ವಿಕಾಸ ಸಂಬಂಧದ ಎರಡು ಸಾಧ್ಯತೆಗಳನ್ನು ಮೇಲೆ ತೋರಿಸಲಾಗಿದೆ. ಸ್ಟಿಂಗರ್ (೨೦೦೩, ೨೦೧೨) ಮತ್ತು ರೀಡ್ ಮತ್ತು ಇತರರು (೨೦೦೪) ಮತ್ತು ಇತರರು ಅವಕ್ಕೂ ಹಿಂದಿನ ಪ್ರಭೇದಗಳಿಂದ (ಹೋ. ಎರೆಕ್ಟಸ್ ಮತ್ತು/ಅಥವಾ ಹೋ. ಎರ್ಗೆಸ್ಟರ್‌ಗಳನ್ನೂ ಒಳಗೊಂಡು) ಹೋ. ಸೆಪಿಯನ್ಸ್ ವಿಕಾಸವಾದುದನ್ನು ಗ್ರಾಫ್‌ ಮೂಲಕ ವಿವರಿಸಿದ್ದಾರೆ. ಈ ಮತ್ತು ಇತರ ವಿವರಣೆಗಳು ವೈಜ್ಞಾನಿಕ ವರ್ಗೀಕರಣ ಮತ್ತು ಪ್ರಭೇದಗಳ ಭೂಗೋಳಿಕ ಹಂಚಿಕೆಯಲ್ಲಿ ಭಿನ್ನವಾಗುತ್ತವೆ.[೪೨][೪೩]

ಸ್ಟಿಂಗರ್ ಮಾನವ ವಿಕಾಸದ ಬೆಳವಣೆಗೆ ಮತ್ತು ಕಾಲಮಾನದಲ್ಲಿ ಹೋ. ಎರೆಕ್ಟಸ್ ಪ್ರಮುಖವಾಗಿರುವಂತೆ ತೋರಿಸುತ್ತಾರೆ ಮತ್ತು ಇದು ವಿಶಾಲವಾಗಿ ಆಫ್ರಿಕಾ ಮತ್ತು ಯುರೇಶಿಯಾಗಳಲ್ಲಿ ಎರಡು ದಶಲಕ್ಷ ವರುಷ ಪ್ರಮುಖವಾಗಿತ್ತು. ಇದು ನಂತರದಲ್ಲಿ ಹೋ. ಹೈಡಲ್‌ಬರ್ಗೆನ್ಸಿಸ್/ಹೋ. ರುಡಾಲ್ಫೆನ್ಸಿಸ್‌ಗಳಲ್ಲಿ ಕೊನೆಗೊಂಡು ನಂತರದಲ್ಲಿ ಹೋ. ಸೆಪಿಯನ್ಸ್ ಆಗುತ್ತದೆ. ರೀಡ್ ಮತ್ತು ಇತರರು ಹೋ. ಎರ್ಗೆಸ್ಟರ್‌ನ್ನು ಹೋ. ಎರೆಕ್ಟಸ್‌ನ ಪೂರ್ವಜ ಎಂದು ತೋರಿಸುತ್ತಾರೆ ಮತ್ತು ನಂತರ ಎರ್ಗಸ್ಟರ್ ಅಥವಾ ಅದರ ಒಂದು ಸ್ವರೂಪ ಅಥವಾ ಎರ್ಗಸ್ಟರ್ ಮತ್ತು ಎರೆಕ್ಟಸ್‌ನ ಸಂಕರ ಅರ್ವಾಚೀನ ಮತ್ತು ನಂತರದಲ್ಲಿ ಆಧುನಿಕ ಮಾನವನಾಗಿ ವಿಕಾಸವಾಗುತ್ತಾರೆ ಮತ್ತು ಆಫ್ರಿಕಾದಿಂದ ಹೊರ ಬರುತ್ತಾರೆ.

ಎರಡೂ ಮಾದರಿಗಳಲ್ಲಿಯೂ ಏಶಿಯಾದ ಹೋ. ಎರೆಕ್ಟಸ್ ಇತ್ತೀಚೆಗೆ ಅಳಿದದ್ದಾಗಿ ತೋರಿಸಲಾಗಿದೆ. ಎರಡೂ ಮಾದರಿಗಳೂ ಪ್ರಭೇದಗಳ ಮಿಶ್ರಣವನ್ನು ಸೂಚಿಸುತ್ತವೆ. ಆಫ್ರಿಕಾದಿಂದ ಹೊರ ಬಿದ್ದ ಆರಂಭಿಕ ಆಧುನಿಕ ಮಾನವ ಬೇರೆ ಬೇರೆ ಪ್ರದೇಶಗಳಿಗೆ ಹರಡಿದ ಮತ್ತು ಹೋ. ಹೈಡಲ್‌ಬರ್ಗೆನ್ಸಿಸ್/ಹೋ. ರುಡಾಲ್ಫೆನ್ಸಿಸ್ ಸಂತತಿಯವರಾದ ನಿಯಾಂಡೆರ್ತಲ್, ಡೆನಿಸೊವನ್ ಮತ್ತು ತಿಳಿಯದ ಅರ್ವಾಚೀನ ಆಫ್ರಿಕಾದ ಹೋಮಿನಿನ್‌ಗಳೊಂದಿಗೆ ಸಂಕರಗೊಂಡ.[೪೪]

ಪರಿಕರ ಮತ್ತು ಬೆಂಕಿಯ ಬಳಕೆ[ಬದಲಾಯಿಸಿ]

ಮಾನವನ ಇತಿಹಾಸದ ಪೂರ್ವೇತಿಹಾಸ ಕಾಲಮಾನವಾದ ಹಳೆಯ ಶಿಲಾಯುಗವು ೨.೬ ದಶಲಕ್ಷ ವರುಷಗಳ ಹಿಂದಿನಿಂದ ೧೦,೦೦೦ ವರುಷಗಳ ಹಿಂದಿನ ವರೆಗೂ ಇತ್ತು[೪೫] ಮತ್ತು ಇದರ ಕಾಲಮಾನ ಬಹುತೇಕ ಪ್ಲಿಸ್ಟೋಸಿನ್ ಭೂಗೋಳಿಕ ಕಾಲಮಾನಕ್ಕೆ (೨.೫೮ ದಲವಹಿಂ ನಿಂದ ೧೧,೭೦೦ ವರುಷಗಳ ಹಿಂದಿನ ವರೆಗೆ) ಹೊಂದಿಕೆಯಾಗುತ್ತದೆ.[೪೬] ಆರಂಭಿಕ ಮಾನವ ವಿಕಾಸವು ಪ್ರಾಚೀನ ತಂತ್ರಜ್ಞಾನ ಮತ್ತು ಪರಿಕರ (ಉಪಕರಣ) ಸಂಸ್ಕೃತಿಯನ್ನು ಬಿಂಬಿಸ ತೊಡಗುತ್ತದೆ. ಹೊ. ಎರೆಕ್ಟಸ್ ಮೊದಲು ಆಹಾರವನ್ನು ಬೇಯಿಸಿದ ಮತ್ತು ಕಲ್ಲಿನ ಕೊಡಲಿಗಳನ್ನು ಬಳಸಿದ ಜೀವಿ.

ಹೋ. ಎರ್ಗಸ್ಟರ್ ತನ್ನ ಪೂರ್ವಜರಿಗಿಂತ ಹೆಚ್ಚು ವೈವಿಧ್ಯಮಯ ಮತ್ತು ಹೆಚ್ಚು ಸಂಕೀರ್ಣ ಕಲ್ಲಿನ ಪರಿಕರಗಳನ್ನು ಬಳಸಿದ. ಹೋ. ಎರೆಕ್ಟಸ್‌ ಹೋಲಿಕೆಯಲ್ಲಿ ಹೆಚ್ಚು ಪ್ರಾಚೀನ ಪರಿಕರಗಳನ್ನು ಬಳಸಿದ. ಬಹುಶಹ ಹೋ. ಎರ್ಗಸ್ಟರ್ ಓಲ್ಡೊವಾನ್‌ ತಂತ್ರಜ್ಞಾನದ ಮೊದಲ ಪರಿಕರಗಳನ್ನು ಸೃಷ್ಟಿಸಿದ, ಬಳಸಿದ್ದು ಇದಕ್ಕೆ ಕಾರಣವಿದ್ದರ ಬೇಕು ಮತ್ತು ನಂತರದಲ್ಲಿ ಅವನು ಅಚ್ಯೂಲಿಯನ್ ತಂತ್ರಜ್ಞಾನವಾಗಿ ಅಭಿವೃದ್ಧಿ ಪಡಿಸಿದ.[೪೭] ಅಚ್ಯೂಲಿಯನ್ ಪರಿಕರಗಳ ಬಳಕೆ ೧.೮ ದಶಲಕ್ಷ ವರುಷಗಳ ಹಿಂದೆ ಆರಂಭವಾಯಿತು[೪೮] ಮತ್ತು ಹೋ. ಎರೆಕ್ಟಸ್ ಆಫ್ರಿಕಾದಲ್ಲಿ ಅಚ್ಯೂಲಿಯನ್ ಪರಿಕರಗಳ ಹೊಸತನ ಕಂಡುಹಿಡಿಯುವ ೨ ಲಕ್ಷ ವರುಷಗಳ ಮೊದಲೇ ಭಿನ್ನ ದಿಕ್ಕುಗಳಿಗೆ ಚದುರಿದ ಕಾರಣಕ್ಕೆ ಏಶಿಯಾಕ್ಕೆ ವಲಸೆ ಹೋದ ಹೋ. ಎರೆಕ್ಟಸ್ ಕವಲು ಅಚ್ಯೂಲಿಯನ್ ಪರಿಕರಗಳನ್ನು ತೆಗೆದುಕೊಂಡು ಹೋಗದಿರುವ ಸಾಧ್ಯತೆ ಇದೆ. ಏಶಿಯಾದ ಹೊ. ಎರೆಕ್ಟಸ್ ಸಾಗರವನ್ನೂ ಒಳಗೊಂಡು ನೀರಿನ ಸ್ಥಳಗಳನ್ನು ದಾಟಲು ತೇಲೊಡ್ಡುಗಳನ್ನು ಬಳಸಿರ ಬಹುದಾದ ಮೊದಲ ಮಾನವ ಎಂದು ಸೂಚಿಸಲಾಗಿದೆ.[೪೯] ಟರ್ಕಿಯಲ್ಲಿ ಪತ್ತೆಯಾದ ಪ್ರಾಚೀನ ಕಲ್ಲಿನ ಪರಿಕರಗಳು, ಮೊದಲು ಭಾವಿಸದಕ್ಕಿಂತ ಬಹು ಮುಂಚೆ, ಟರ್ಕಿಯ ದ್ವಾರದ ಮೂಲಕ ಪಶ್ಚಿಮ ಏಶಿಯಾದಿಂದ ಯುರೋಪನ್ನು ಸುಮಾರು ೧.೨ ದಶಲಕ್ಷ ವರುಷಗಳ ಹಿಂದೆ ಅವನು ಪ್ರವೇಶಿಸಿದ ಎಂದು ಸೂಚಿಸುತ್ತವೆ.[೫೦]

ಬೆಂಕಿಯ ಬಳಕೆ[ಬದಲಾಯಿಸಿ]

ಪೂರ್ವ ಆಫ್ರಿಕಾದ ಕೆಲವು ಸ್ಥಳಗಳಲ್ಲಿ ಆರಂಭಿಕ ಮಾನವನ ಬೆಂಕಿಯ ಹತೋಟಿಯ ಸಾಧ್ಯತೆಗಳನ್ನು ಸೂಚಿಸುವ ಪುರಾವೆ ಒದಗಿಸುತ್ತವೆ. ಚೆಸೊವಾಂಜದಲ್ಲಿ ೧.೪೨ ದಶವಹಿಂ ಎಂದು ಅಂದಾಜಿಸಿದ ಗಟ್ಟಿಯಾದ ಮಣ್ಣಿನ ತುಣುಕುಗಳು ಕಂಡುಬಂದಿವೆ.[೫೧] ವಿಶ್ಲೇಷಣೆಯು ಈ ರೀತಿ ಗಟ್ಟಿಯಾಗಲು ಮಣ್ಣನ್ನು ೪೦೦ °ಸೆ (೭೫೨ °ಎಫ್) ತಾಪಮಾನದವರೆಗೂ ಕಾಯಿಸ ಬೇಕಾಗುತ್ತದೆ ಎನ್ನುತ್ತದೆ. ಕೂಬಿ ಫೋರದ ಎರಡು ನಿವೇಶನಗಳಲ್ಲಿ ಹೋಮೋ ಎರೆಕ್ಟಸ್‌ನ ಬೆಂಕಿಯ ಹತೋಟಿಯ ಪುರಾವೆಗಳಿದ್ದು ಇದರ ಕಾಲಮಾನ ೧.೫ ದವಹಿಂ. ಇಲ್ಲಿ ಕೆಸರನ್ನು ೨೦೦ ರಿಂದ ೪೦೦ °ಸೆ (೩೯೨-೭೫೨ °ಎಫ್) ವರೆಗೂ ಕಾಯಿಸಿದ ಪುರಾವೆಗಳಿವೆ.[೫೧] ಕೀನ್ಯಾದ ಓಲೊರ್ಗೆಸೈಲೆಯಲ್ಲಿ “ಒಲೆಯಂತಹ ತಗ್ಗು” ಮತ್ತು ಸೂಕ್ಷ್ಮದರ್ಶಕದಲ್ಲಿ ನೋಡ ಬಹುದಾದ ಕಲ್ಲಿದ್ದಲು ಕಂಡುಬಂದಿವೆ.[೫೧] ಇದು ನೈಸರ್ಗಿಕವಾಗಿ ಪೊದೆಯ ಬೆಂಕಿಯಿಂದಲೂ ಆಗಬಲ್ಲದು. ಇತಿಯೋಪಿಯಾದಲ್ಲಿ ಕಲ್ಲಿನ ಪರಿಕರಗಳನ್ನು ಬಿಸುಪಿಗೆ ಒಡ್ಡಿದ ಕೆಲವು ಉದಾಹರಣೆಗಳಿವೆಯಾದರೂ ಅದು ಜ್ವಾಲಮುಖಿಯ ಬಿಸಿಯಿಂದಲೂ ನೈಸರ್ಗಿಕವಾಗಿ ಆಗಬಹುದಾದ ಸಾಧ್ಯತೆಯೂ ಇದ್ದು ಪುರಾವೆ ಈ ಅರ್ಥದಲ್ಲಿ ಅನುಮಾನರಹಿತವಾಗಿ ಇಲ್ಲ.

೭,೯೦೦,೦೦ ರಿಂದ ೬,೯೦,೦೦೦ ವರುಷಗಳ ಹಿಂದೆ ಇಸ್ರೇಲ್‌ನಲ್ಲಿ ಹೋ. ಎರೆಕ್ಟಸ್ ಅಥವಾ ಹೋ. ಎರ್ಗಸ್ಟರ್ ಬೆಂಕಿಯ ಹತೋಟಿಯನ್ನು ಸಾಧಿಸಿದ್ದ ಎಂದು ಪುರಾವೆಗಳು ಹೇಳುತ್ತವೆ[೫೨] ಮತ್ತು ಇಂದಿನಂತೆ ಇದನ್ನು ವ್ಯಾಪಕವಾಗಿ ಒಪ್ಪಿಕೊಳ್ಳಲಾಗಿದೆ. ಹೋ. ಎರೆಕ್ಟಸ್‌ ಆಹಾರವನ್ನು ಬೇಯುಸುತ್ತಿದ್ದ ಎಂಬುದರ ಪುರಾವೆಗಳು ೫ ಲಕ್ಷ ವರುಷಗಳಷ್ಟು ಹಿಂದಿನದು.[೫೩] ದಕ್ಷಿಣ ಆಫ್ರಿಕಾದ ವಂಡರ್‌ವೆರ್ಕ್ ಗವಿಯ ಸುಟ್ಟ ಮೂಳೆಗಳ ತುಂಡುಗಳು ಮತ್ತು ಸಸ್ಯದ ಬೂದಿಯ ಮರು ವಿಶ್ಲೇಷಣೆ ೧ ದವಹಿಂ ಮಾನವ ಬೆಂಕಿಯನ್ನು ಹತೋಟಿಯಲ್ಲಿಟ್ಟುಕೊಂಡಿದ್ದ ಎಂಬುದಕ್ಕೆ ಸಾಕ್ಷಿ ಎಂದು ಹೇಳಲಾಗಿದೆ.[೫೪]

ಸಾಮಾಜಿಕತೆ[ಬದಲಾಯಿಸಿ]

ಹೋಮೋ ಎರೆಕ್ಟಸ್ ಬೇಟೆ ಮತ್ತು ಸಂಗ್ರಹ ಸಮಾಜ (ಹಂಟರ್ ಗ್ಯಾದರರ್ ಸೊಸಾಯಿಟಿ) ವಾಗಿ ವ್ಯವಸ್ಥಿತ ಗೊಂಡ ಮೊದಲ ಹೋಮಿನಿನ್ ಮತ್ತು ರಿಚರ್ಡ್ ಲೀಕಿಯಂತಹ ಮಾನವಶಾಸ್ತ್ರಜ್ಞರು ಸಾಮಾಜಿಕವಾಗಿ ಎರೆಕ್ಟಸ್ ಆಸ್ಟ್ರಾಲೋಪಿತೆಕಸ್‌ಗಿಂತ ಹೆಚ್ಚಾಗಿ ಆಧುನಿಕ ಮಾನವನನ್ನು ಹೋಲುತ್ತಿದ್ದ ಎಂದು ಭಾವಿಸುತ್ತಾರೆ.

೧೯೮೪ರ ಟುರ್ಕನ ಹುಡುಗನ ಪತ್ತೆಹಚ್ಚುವಿಕೆ ಪುರಾವೆಗಳು ಎರೆಕ್ಟಸ್ ಮಾನವನಲ್ಲಿ ಹೋ. ಸೆಪಿಯನ್ಸ್ ಹೋಲುವ ಅಂಗರಚನೆ ಇದ್ದಾಗ್ಯೂ ಅವನು ಆಧುನಿಕ ಮಾನವನ ಭಾಷೆಯನ್ನು ಹೋಲುವ ಶಬ್ಧಗಳನ್ನು ಉಚ್ಛಾರಿಸುವಷ್ಟು ಸುಧಾರಿಸಿರಲಿಲ್ಲ ಎಂದು ಸೂಚಿತ್ತವೆ. ಅವನು ಆಧುನಿಕ ಭಾಷೆಯ ಅಭಿವೃದ್ಧಿ ಹೊಂದಿದ ರಚನೆ ಇರದ ಪ್ರೋಟೊ ಭಾಷೆ (ಆದಿ ಭಾಷೆ) ಬಳಸುತ್ತಿದ್ದರ ಬೇಕು ಎಂದು ಭಾವಿಸಲಾಗಿದ್ದು ಚಿಂಪಾಜಿಗಳ ಶಬ್ಧಗಳಲ್ಲದ ಸಂವಹನೆಗಿಂತಲೂ ಹೆಚ್ಚು ಮುಂದುವರೆದಿರದದ್ದು ಆಗಿರ ಬೇಕು ಎಂದು ಭಾವಿಸಲಾಗಿದೆ.[೫೫] ಈ ತರ್ಕವನ್ನು ಜಾರ್ಜಿಯದ ಡಮನಿಸಿ ಪಳೆಯುಳಿಕೆಗಳು ಏರುಪೇರು ಮಾಡುತ್ತವೆ ಮತ್ತು ಟುರ್ಕನ ಹುಡುಗನ ಕಾಲಮಾನಕ್ಕಿಂತ ೧.೫ ಲಕ್ಷ ವರುಷಗಳ ಹಿಂದೆ ಹೋ. ಎರೆಕ್ಟಸ್/ಎರ್ಗಸ್ಟರ್ ಹೋ. ಸೆಪೆಯಿನ್ಸ್ ವ್ಯಾಪ್ತಿಯ ಶಬ್ಧಗಳನ್ನು ಉತ್ಪಾದಿಸುತ್ತಿದ್ದ ಎಂದು ಸೂಚಿಸುತ್ತವೆ.[೩೦] ಮೆದುಳಿನ ಗಾತ್ರ ಮತ್ತು ಬ್ರೋಕ ಪ್ರದೇಶ (ಭಾಷೆಯ ಉತ್ಪಾದನೆಗೆ ಸಂಬಂಧಿಸಿದ ಮೆದುಳಿನ ಪ್ರದೇಶ) ಸ್ಪುಟ ಉಚ್ಛಾರಣೆಯ ಭಾಷೆ ಬಳಸುತ್ತಿದ್ದರ ಸಂಕೇತ ನೀಡುತ್ತದೆ.[೫೬]

ಹೋ. ಎರೆಕ್ಟಸ್ ಬಹುಶಹ ಮಾನವನ ಬೇಟೆ ಸಂಗ್ರಹ ಸಣ್ಣ, ಸಮಾಜದ ತಂಡ ಸಮಾಜವನ್ನು (ಬ್ಯಾಂಡ್ ಸೊಸಾಯಿಟಿ) ಹೋಲುವ ಸಮಾಜಗಳಲ್ಲಿ ಜೀವಿಸುತ್ತಿದ್ದ ಮೊದಲ ಹೋಮಿನಿನ್.[೫೭] ಇವನು ಸಹಕರಿಸುವ ಗುಂಪುಗಳಲ್ಲಿ ಬೇಟೆಯಾಡುತ್ತಿದ್ದ, ಸಂಕೀರ್ಣ ಪರಿಕರಗಳನ್ನು (ಉಪಕರಣ) ಬಳಸುತ್ತಿದ್ದ ಬಲಹೀನ ಜೊತೆಗಾರರನ್ನು ನೋಡಿಕೊಳ್ಳುತ್ತಿದ್ದ ಮೊದಲ ಹೋಮಿನಿನ್.

ಹೋಮೋ ಎರೆಕ್ಟಸ್[೪೪] ಮತ್ತು ಬಹುಶಹ ನಂತರದ ನಿಂಯಾಡ್ರೆತಲ್[೫೮] ಯುರೋಪ್ ಮತ್ತು ಏಶಿಯಾದಲ್ಲಿ ರಾಚನಿಕವಾಗಿ ಆಧುನಿಕ ಮಾನವನೊಂದಿಗೆ ಸಂಕಂರಗೊಂಡನೇ ಎಂಬುದರ ಬಗೆಗೆ ಚರ್ಚೆ ಮುಂದುವರೆದಿದೆ.

ಇವುಗಳನ್ನೂ ನೋಡಿ[ಬದಲಾಯಿಸಿ]

ಉಲ್ಲೇಖಗಳು ಮತ್ತು ಟಿಪ್ಪಣಿಗಳು[ಬದಲಾಯಿಸಿ]

 1. ಇಂಗ್ಲೀಶ್ ವಿಕಿಪೀಡಿಯ Homo erectus ಪುಟದ ಭಾಗಶಹ ಅನುವಾದ
 2. ೨.೦ ೨.೧ Hazarika, Manji (16–30 June 2007). "Homo erectus/ergaster and Out of Africa: Recent Developments in Paleoanthropology and Prehistoric Archaeology" (PDF).
 3. Chauhan, Parth R. (2003) "Distribution of Acheulian sites in the Siwalik region" in An Overview of the Siwalik Acheulian & Reconsidering Its Chronological Relationship with the Soanian – A Theoretical Perspective. assemblage.group.shef.ac.uk
 4. See overview of theories on human evolution.
 5. (1999). The Human Career: Human Biological and Cultural Origins. Chicago: University of Chicago Press, ISBN 0226439631.
 6. Antón, S. C. (2003). "Natural history of Homo erectus". Am. J. Phys. Anthropol. 122: 126–170. doi:10.1002/ajpa.10399. By the 1980s, the growing numbers of H. erectus specimens, particularly in Africa, led to the realization that Asian H. erectus (H. erectus sensu stricto), once thought so primitive, was in fact more derived than its African counterparts. These morphological differences were interpreted by some as evidence that more than one species might be included in H. erectus sensu lato (e.g., Stringer, 1984; Andrews, 1984; Tattersall, 1986; Wood, 1984, 1991a, b; Schwartz and Tattersall, 2000) ... Unlike the European lineage, in my opinion, the taxonomic issues surrounding Asian vs. African H. erectus are more intractable. The issue was most pointedly addressed with the naming of H. ergaster on the basis of the type mandible KNM-ER 992, but also including the partial skeleton and isolated teeth of KNM-ER 803 among other Koobi Fora remains (Groves and Mazak, 1975). Recently, this specific name was applied to most early African and Georgian H. erectus in recognition of the less-derived nature of these remains vis à vis conditions in Asian H. erectus (see Wood, 1991a, p. 268; Gabunia et al., 2000a). It should be noted, however, that at least portions of the paratype of H. ergaster (e.g., KNM-ER 1805) are not included in most current conceptions of that taxon. The H. ergaster question remains famously unresolved (e.g., Stringer, 1984; Tattersall, 1986; Wood, 1991a, 1994; Rightmire, 1998b; Gabunia et al., 2000a; Schwartz and Tattersall, 2000), in no small part because the original diagnosis provided no comparison with the Asian fossil record
 7. Suwa G, Asfaw B, Haile-Selassie Y, White T, Katoh S, WoldeGabriel G, Hart W, Nakaya H, Beyene Y (2007). "Early Pleistocene Homo erectus fossils from Konso, southern Ethiopia". Anthropological Science. 115 (2): 133–151. doi:10.1537/ase.061203.
 8. Skull suggests three early human species were one : Nature News & Comment
 9. ೯.೦ ೯.೧ David Lordkipanidze, Marcia S. Ponce de Leòn, Ann Margvelashvili, Yoel Rak, G. Philip Rightmire, Abesalom Vekua, Christoph P. E. Zollikofer (18 October 2013). "A Complete Skull from Dmanisi, Georgia, and the Evolutionary Biology of Early Homo". Science. 342 (6156): 326–331. doi:10.1126/science.1238484.
 10. Switek, Brian (17 October 2013). "Beautiful Skull Spurs Debate on Human History". National Geographic. Retrieved 22 September 2014.
 11. Jurmain Robert, Lynn Kilgore, Wenda Trevathan, “Essentials of Physical Anthropology”, Publisher: Cengage Learning, 2008, ISBN 0495509396, 9780495509394, page 204
 12. Dunsworth Holly and Alan Walker, Early Genus Homo, in “The Primate Fossil Record”, Editor: Walter Carl Hartwig, Publisher: Cambridge University Press, 2002, ISBN 0521663156, 9780521663151, page 419
 13. from sino-, a combining form of the Greek Σίνα, "China", and the Latinate pekinensis, "of Peking"
 14. "Review of the History". Peking Man Site Museum. During 1927-1937, abundant human and animal fossils as well as artefact were found at Peking Man Site, it made the site to be the most productive one of the Homo erectus sites of the same age all over the world. Other localities in the vicinity were also excavated almost at the same time.
 15. Darwin, Charles R. (1871). The Descent of Man and Selection in Relation to Sex. John Murray. ISBN 0-8014-2085-7.
 16. F. Spoor; M. G. Leakey; P. N. Gathogo; F. H. Brown; S. C. Antón; I. McDougall; C. Kiarie; F. K. Manthi; L. N. Leakey (2007-08-09). "Implications of new early Homo fossils from Ileret, east of Lake Turkana, Kenya". Nature. 448 (7154): 688–691. doi:10.1038/nature05986. PMID 17687323. "A partial maxilla assigned to H. habilis reliably demonstrates that this species survived until later than previously recognized, making an anagenetic relationship with H. erectus unlikely" (Emphasis added).
 17. ROBINSON JT (January 1953). "The nature of Telanthropus capensis". Nature. 171 (4340): 33. doi:10.1038/171033a0. PMID 13025468.
 18. Frederick E. Grine; John G. Fleagle; Richard E. Leakey (1 Jun 2009). "Chapter 2: Homo habilis—A Premature Discovery: Remember by One of Its Founding Fathers, 42 Years Later". The First Humans: Origin and Early Evolution of the Genus Homo. Springer. p. 7.
 19. Kalb, Jon E (2001). Adventures in the Bone Trade: The Race to Discover Human Ancestors in Ethiopia's Afar Depression. Springer. p. 76. ISBN 0-387-98742-8. Retrieved 2010-12-02
 20. Cornevin, Robert (1967). Histoire de l'Afrique. Payotte. p. 440. ISBN 2-228-11470-7.
 21. Mikko's Phylogeny Archive". Finnish Museum of Natural History, University of Helsinki. Archived from the original on 2007-01-06.
 22. Ferring, R.; Oms, O.; Agusti, J.; Berna, F.; Nioradze, M.; Shelia, T.; Tappen, M.; Vekua, A.; Zhvania, D.; Lordkipanidze, D. (2011). "Earliest human occupations at Dmanisi (Georgian Caucasus) dated to 1.85-1.78 Ma". Proceedings of the National Academy of Sciences. 108 (26): 10432–10436. doi:10.1073/pnas.1106638108
 23. Vekua A, Lordkipanidze D, Rightmire GP, Agusti J, Ferring R, Maisuradze G, Mouskhelishvili A, Nioradze M, De Leon MP, Tappen M, Tvalchrelidze M, Zollikofer C (2002). "A new skull of early Homo from Dmanisi, Georgia". Science. 297 (5578): 85–9. doi:10.1126/science.1072953. PMID 12098694.
 24. ೨೪.೦ ೨೪.೧ Lordkipanidze D, Jashashvili T, Vekua A, Ponce de León MS, Zollikofer CP, Rightmire GP, Pontzer H, Ferring R, Oms O, Tappen M, Bukhsianidze M, Agusti J, Kahlke R, Kiladze G, Martinez-Navarro B, Mouskhelishvili A, Nioradze M, Rook L (2007). "Postcranial evidence from early Homo from Dmanisi, Georgia" (PDF). Nature. 449 (7160): 305–310. doi:10.1038/nature06134. PMID 17882214.
 25. Lordkipanidze, D.; Vekua, A.; Ferring, R.; Rightmire, G. P.; Agusti, J.; Kiladze, G.; Mouskhelishvili, A.; Nioradze, M.; Ponce De León, M. S. P.; Tappen, M.; Zollikofer, C. P. E. (2005). "Anthropology: The earliest toothless hominin skull". Nature. 434 (7034): 717–718. doi:10.1038/434717b. PMID 15815618.
 26. Gibbons, A. (2003). "A Shrunken Head for African Homo erectus" (PDF). Science. 300 (5621): 893a. doi:10.1126/science.300.5621.893a.
 27. attersall, I.; Schwartz, J. H. (2009). "Evolution of the GenusHomo". Annual Review of Earth and Planetary Sciences. 37: 67–92. doi:10.1146/annurev.earth.031208.100202.
 28. Rightmire, G. P.; Lordkipanidze, D.; Vekua, A. (2006). "Anatomical descriptions, comparative studies and evolutionary significance of the hominin skulls from Dmanisi, Republic of Georgia". Journal of Human Evolution. 50 (2): 115–141. doi:10.1016/j.jhevol.2005.07.009. PMID 16271745.
 29. Gabunia, L.; Vekua, A.; Lordkipanidze, D.; Swisher Cc, 3.; Ferring, R.; Justus, A.; Nioradze, M.; Tvalchrelidze, M.; Antón, S. C.; Bosinski, G.; Jöris, O.; Lumley, M. A.; Majsuradze, G.; Mouskhelishvili, A. (2000). "Earliest Pleistocene hominid cranial remains from Dmanisi, Republic of Georgia: Taxonomy, geological setting, and age". Science. 288 (5468): 1019–1025. doi:10.1126/science.288.5468.1019. PMID 10807567.
 30. ೩೦.೦ ೩೦.೧ Bower, Bruce (3 May 2006). "Evolutionary back story: Thoroughly modern spine supported human ancestor". Science News. 169 (18): 275–276. doi:10.2307/4019325.
 31. Wilford, John Noble (19 September 2007). "New Fossils Offer Glimpse of Human Ancestors". The New York Times. Retrieved 9 September 2009.
 32. Ian Sample (17 October 2013). "Skull of Homo erectus throws story of human evolution into disarray". The Guardian.
 33. Weidenreich, F. (1943). "The "Neanderthal Man" and the ancestors of "Homo Sapiens"". American Anthropologist. 45: 39–48. doi:10.1525/aa.1943.45.1.02a00040. JSTOR 662864.
 34. Jelinek, J. (1978). "Homo erectus or Homo sapiens?". Rec. Adv. Primatol. 3: 419–429.
 35. Wolpoff, M.H. (1984). "Evolution of Homo erectus: The question of stasis". Palaeobiology. 10 (4): 389–406. JSTOR 2400612.
 36. Frayer, D.W., Wolpoff, M.H.; Thorne, A.G.; Smith, F.H.; Pope, G.G. (1993). "Theories of modern human origins: The paleontological test". American Anthropologist. 95: 14–50. doi:10.1525/aa.1993.95.1.02a00020. JSTOR 681178.
 37. Tattersall, Ian and Jeffrey Schwartz (2001). Extinct Humans. Boulder, Colorado: Westview/Perseus. ISBN 0-8133-3482-9.
 38. ೩೮.೦ ೩೮.೧ Swisher, Carl Celso III; Curtis, Garniss H. and Lewin, Roger (2002) Java Man, Abacus, ISBN 0-349-11473-0.
 39. Bryson, Bill (2005). A Short History of Nearly Everything: Special Illustrated Edition. Toronto: Doubleday Canada. ISBN 0-385-66198-3.
 40. Khanna, Dev Raj (2004). Human Evolution. Discovery Publishing House. p. 195. ISBN 978-8171417759. Retrieved 30 March 2013. African H. erectus, with a mean stature of 170 cm, would be in the tallest 17 percent of modern populations, even if we make comparisons only with males
 41. Roylance, Frank D. Roylance (6 February 1994). "A Kid Tall For His Age". Baltimore Sun. Retrieved 30 March 2013. Clearly this population of early people were tall, and fit. Their long bones were very strong. We believe their activity level was much higher than we can imagine today. We can hardly find Olympic athletes with the stature of these people
 42. ೪೨.೦ ೪೨.೧ Stringer, C. (2012). "What makes a modern human". Nature. 485 (7396): 33–35. doi:10.1038/485033a. PMID 22552077.
 43. ೪೩.೦ ೪೩.೧ "Figure 5. Temporal and Geographical Distribution of Hominid Populations Redrawn from Stringer (2003)" (edited from source), in Reed, David L.; Smith, Vincent S.; Hammond, Shaless L.; et al. (November 2004). "Genetic Analysis of Lice Supports Direct Contact between Modern and Archaic Humans". PLOS Biology. San Francisco, CA: PLOS. 2 (11): e340. doi:10.1371/journal.pbio.0020340. ISSN 1545-7885. PMC 521174. PMID 15502871.
 44. ೪೪.೦ ೪೪.೧ Whitfield, John (18 February 2008). "Lovers not fighters". Scientific American.
 45. Toth, Nicholas; Schick, Kathy (2007). "Handbook of Paleoanthropology". In Henke, H.C. Winfried; Hardt, Thorolf; Tatersall, Ian. Handbook of Paleoanthropology. Volume 3. Berlin; Heidelberg; New York: Springer-Verlag. p. 1944. (PRINT: ISBN 978-3-540-32474-4 ONLINE: ISBN 978-3-540-33761-4)
 46. "The Pleistocene Epoch". University of California Museum of Paleontology. Retrieved 22 August 2014.
 47. Beck, Roger B.; Black, Linda; Krieger, Larry S.; Naylor, Phillip C.; Shabaka, Dahia Ibo (1999). World History: Patterns of Interaction. Evanston, IL: McDougal Littell. ISBN 0-395-87274-X.
 48. The Earth Institute. (2011-09-01). Humans Shaped Stone Axes 1.8 Million Years Ago, Study Says. Columbia University. Accessed 5 January 2012.
 49. Gibbons, Ann (13 March 1998). "Paleoanthropology: Ancient Island Tools Suggest Homo erectus Was a Seafarer". Science. 279 (5357): 1635–1637. doi:10.1126/science.279.5357.1635.
 50. Oldest stone tool ever found in Turkey discovered by the University of Royal Holloway London and published in ScienceDaily on December 23, 2014
 51. ೫೧.೦ ೫೧.೧ ೫೧.೨ James, Steven R. (February 1989). "Hominid Use of Fire in the Lower and Middle Pleistocene: A Review of the Evidence" (PDF). Current Anthropology. University of Chicago Press. 30 (1): 1–26. doi:10.1086/203705. Retrieved 2012-04-04.
 52. Rincon, Paul (29 April 2004). "Early human fire skills revealed". BBC News. Retrieved 2007-11-12.
 53. Pollard, Elizabeth (2015). Worlds Together, Worlds Apart. New York: Norton. p. 13. ISBN 978-0-393-92207-3.
 54. Pringle, Heather (2 April 2012), "Quest for Fire Began Earlier Than Thought", ScienceNOW, American Association for the Advancement of Science, retrieved 2012-04-04
 55. Ruhlen, Merritt (1994). The origin of language: tracing the evolution of the mother tongue. New York: Wiley. ISBN 0-471-58426-6.
 56. Leakey, Richard (1992). Origins Reconsidered. Anchor. pp. 257–58. ISBN 0-385-41264-9.
 57. Boehm, Christopher (1999). Hierarchy in the forest: the evolution of egalitarian behavior. Cambridge: Harvard University Press. p. 198. ISBN 0-674-39031-8.
 58. Owen, James (30 October 2006). "Neanderthals, Modern Humans Interbred, Bone Study Suggests". National Geographic News. Retrieved 2008-01-14.
 59. Hadfield, Peter, Shelter New Scientist, 4th March, 2000 (Web pages)

|