ವಿಷಯಕ್ಕೆ ಹೋಗು

ಟ್ಯಾಕ್ಸಾನಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಟ್ಯಾಕ್ಸಾನಮಿ[ಟಿಪ್ಪಣಿ ೧] ( ಪುರಾತನ ಗ್ರೀಕ್ : τάξις taxis ಟ್ಯಾಕ್ಸಿಸ್ , " ವ್ಯವಸ್ಥೆ " ಮತ್ತು νομία - nomia , " ವಿಧಾನ "[]) ಅಥವಾ ಜೀವ ವರ್ಗೀಕರಣ ಜೀವಿಗಳ ಗುಂಪುಗಳನ್ನು ಅವು ಹಂಚಿಕೊಂಡ ಗುಣಗಳ ಆಧಾರದ ಮೇಲೆ ವಿಂಗಡಿಸುವ ಮತ್ತು ಅವುಗಳಿಗೆ ಹೆಸರು ಕೊಡುವ ವಿಜ್ಞಾನ. ಹೀಗೆ ವಿಂಗಡಿಸಿದ ಗುಂಪುಗಳಿಗೆ ವರ್ಗೀಕರಣದ ಶ್ರೇಣಿಗಳನ್ನು ಕೊಡಲಾಗುತ್ತದೆ. ಈ ಶ್ರೇಣಿಗಳನ್ನು ಒಂದರ ಕೆಳಗೆ ಇನ್ನೊಂದನ್ನು ಪೇರಿಸಿ ಶ್ರೇಣೀಕೃತ ವ್ಯವಸ್ಥೆಯೊಂದನ್ನು ಹುಟ್ಟುಹಾಕಲಾಗುತ್ತದೆ.[][] ಸ್ವೀಡನ್ನಿನ ಕಾರ್ಲ್ ಲಿನ್ನೇಯಸ್‌ನನ್ನು ಟ್ಯಾಕ್ಸಾನಮಿಯ ಜನಕ ಎಂದು ಕರೆಯಲಾಗಿದೆ. ಅವನ ಅಭಿವೃದ್ಧಿ ಪಡಿಸಿದ ವ್ಯವಸ್ಥೆಯನ್ನು ಜೀವಿಗಳ ಲಿನ್ನೇಯಸ್ ವರ್ಗೀಕರಣ ಎಂದು ಕರೆಯಲಾಗಿದೆ ಮತ್ತು ಇದು ಜೀವಿಯ ದ್ವಿಪದ ಹೆಸರಿಸುವಿಕೆಯನ್ನೂ ಒಳಗೊಂಡಿದೆ.

ಪ್ರಭೇದವಿಕಾಸ ವರ್ಗೀಕರಣ, ಏಕಮೂಲ ವರ್ಗೀಕರಣ ಮತ್ತು ಸಿಸ್ಟಮಾಟಿಕ್ಸ್ ಕ್ಷೇತ್ರಗಳ ಅಧ್ಯಯನದ ಆರಂಭದೊಂದಿಗೆ ಲಿನ್ನೇಯಸ್‌ ವ್ಯವಸ್ಥೆಯು ಜೀವಿಗಳ ನಡುವಿನ (ಬದುಕಿರುವ ಮತ್ತು ಅಳಿದ ಎರಡೂ) ವಿಕಾಸ ಸಂಬಂಧದ ಆಧಾರದ ಮೇಲಿನ ಆಧುನಿಕ ಜೀವ ವರ್ಗೀಕರಣದ ವ್ಯವಸ್ಥೆಯಾಗಿ ಬೆಳೆಯಿತು. ಆಂಜಿಯೊಸ್ಪರ್ಮ್ ಫೈಲೊಜನಿ ಗ್ರೂಪ್ ೨೦೦೯ರಲ್ಲಿ ಪ್ರಕಟಿಸಿದ ಎಲ್ಲಾ ಹೂಬಿಡುವ ಸಸ್ಯಗಳ ಕುಟುಂಬಗಳನ್ನು (ಎಪಿಜಿ III ಸಿಸ್ಟಮ್) ಆಧುನಿಕ ವರ್ಗೀಕರಣದ ಉದಾಹರಣೆಯಾಗಿ ಭಾವಿಸ ಬಹುದು.[]

ವ್ಯಾಖ್ಯಾನ

[ಬದಲಾಯಿಸಿ]

ಟ್ಯಾಕ್ಸಾನಮಿ (ಅಥವಾ ಜೀವ ವರ್ಗೀಕರಣ)ದ ಖಚಿತ ವ್ಯಾಖ್ಯಾನವು ಮೂಲದಿಂದ ಮೂಲಕ್ಕೆ ಬದಲಾಗುತ್ತದೆ. ಆದರೆ ತಿರುಳು ಮಾತ್ರ ಒಂದೇ ಆಗಿ ಉಳಿದುಕೊಂಡಿದೆ: ಅದು ಜೀವಿಗಳ ಹೆಸರುಸುವಿಕೆ ಮತ್ತು ಗುಂಪುಗಳಾಗಿ ವಿಂಗಡನೆಯ ಪರಿಕಲ್ಪನೆ. ಟ್ಯಾಕ್ಸಾನಮಿಗೆ ಇನ್ನೂ ಎರಡು ಪದಗಳ ಸಂಬಂಧವಿದೆ. ಅವು “ವ್ಯವಸ್ಥೀಕರಣ” ಮತ್ತು “ವರ್ಗೀಕರಣ” ಪದಗಳು ಮತ್ತು ಅವುಗಳ ಟ್ಯಾಕ್ಸನಮಿಯೊಂದಗಿನ ಸಂಬಂಧವೂ ಸಹ ಮೂಲದಿಂದ ಮೂಲಕ್ಕೆ ಭಿನ್ನವಾಗುತ್ತದೆ ಏಕೆಂದರೆ ಜೀವಶಾಸ್ತ್ರದಲ್ಲಿ ಈ ಮೂರು ಪದಗಳ ಬಳಕೆ ಸ್ವತಂತ್ರವಾಗಿ ಹುಟ್ಟಿತು.[] ಹೋಲಿಕೆ ಮಾಡಲು ಇತ್ತೀಚಿನ ಟ್ಯಾಕ್ಸನಮಿಯ ವ್ಯಾಖ್ಯಾನಗಳನ್ನು ಕೆಳಗೆ ನಮೂದಿಸಲಾಗಿದೆ:

  1. ಜೀವಿಗಳ ಗುಂಪುಗಳನ್ನು ಪ್ರಭೇದಗಳಾಗಿ ಗುರುತಿಸಿ, ಪ್ರಭೇದಗಳನ್ನು ದೊಡ್ಡ ಗುಂಪುಗಳಾಗಿ ವ್ಯವಸ್ಥೆ ಮಾಡಿ ಮತ್ತು ಈ ಗುಂಪುಗಳಿಗೆ ಹೆಸರುಕೊಡುವ ಮೂಲಕ ವರ್ಗೀಕರಣವನ್ನು ಉತ್ಪಾದಿಸುವ ಸಿದ್ಧಾಂತ ಮತ್ತು ಆಚರಣೆ.[]
  2. ವಿವರಣೆ, ಗುರುತಿಸುವಿಕೆ, ಹೆಸರಿಸುವಿಕೆ ಮತ್ತು ವರ್ಗೀಕರಣಗಳನ್ನು ಒಳಗೊಂಡ ವಿಜ್ಞಾನದ ಒಂದು ಕ್ಷೇತ್ರ (ಮತ್ತು ವ್ಯವಸ್ಥೀಕರಣದ ಪ್ರಮುಖ ಭಾಗ).[]
  3. ವರ್ಗೀಕರಣ ಒಂದು ವಿಜ್ಞಾನ ಮತ್ತು ಜೀವಶಾಸ್ತ್ರದಲ್ಲಿ ಜೀವಿಗಳ ವರ್ಗೀಕರಣದ ಒಂದು ವ್ಯವಸ್ಥೆ.[]
  4. ”ಪ್ರಭೇದಗಳು ರೂಪಗೊಳ್ಳುವ ರೀತಿಯ ಅಧ್ಯಯನವನ್ನೂ ಒಳಗೊಂಡ ಜೀವಿಗಳಿಗೆ ಅನ್ವಯಿಸಿದ ವರ್ಗೀಕರಣದ ವಿಜ್ಞಾನ.”[]
  5. ”ವರ್ಗೀಕರಣದ ಉದ್ಧೇಶಕ್ಕಾಗಿ ಜೀವಿಗಳ ಗುಣಗಳ ವಿಶ್ಲೇಷಣೆ.”[]
  6. ”[ವ್ಯವಸ್ಥಿಕರಣವು] ಜೀವಿವಿಕಸನದ ಚರಿತ್ರೆ ಅಧ್ಯಯನ ಮಾಡಿ ಹೆಚ್ಚು ಒಳಗೊಳ್ಳುವ ಕ್ಷೇತ್ರವಾದ ಟ್ಯಾಕ್ಸಾನಮಿಯಲ್ಲಿ ವರ್ಗೀಕರಣ ಮತ್ತು ಹೆಸರಿಸುವಿಕೆಗೆ ಬಳಸ ಬಹುದಾದ ವಿನ್ಯಾಸ ಗುರುತಿಸುವ ಒಂದು ಅಧ್ಯಯನ.”(ಆಪೇಕ್ಷಿತ ಆದರೆ ಸಾಧಾರಣವಲ್ಲದ ವ್ಯಾಖ್ಯಾನ)[]

ಭಿನ್ನ ವ್ಯಾಖ್ಯಾನಗಳು ಒಂದೋ ಟ್ಯಾಕ್ಸಾನಮಿಯನ್ನು ವ್ಯವಸ್ಥೀಕಣದ ಉಪ-ಕ್ಷೇತ್ರವಾಗಿ ಇರಿಸುತ್ತವೆ (ವ್ಯಾಖ್ಯಾನ ೨), ಅವೆರಡರ ನಡುವಿನ ಸಂಬಂಧವನ್ನು ತಿರುವು ಮರುವು ಮಾಡುತ್ತವೆ (‌ವ್ಯಾಖ್ಯಾನ ೬) ಅಥವಾ ಎರಡನ್ನೂ ಸಮಾನಾರ್ಥಕವಾಗಿ ಪರಿಗಣಿಸುತ್ತವೆ. ಜೀವಿಗಳ ಹೆಸರಿಸುವಿಕೆ ಟ್ಯಾಕ್ಸಾನಮಿಯ ಭಾಗವೇ (ವ್ಯಾಖ್ಯಾನ ೧ ಮತ್ತು ೨) ಅಥವಾ ಟ್ಯಾಕ್ಸಾನಮಿಯ ಹೊರಗಡೆಯೆ ಎಂಬುದರ ಬಗೆಗೆ ವ್ಯಾಖ್ಯಾನಗಳಲ್ಲಿ ಭಿನ್ನಾಭಿಪ್ರಾಯವಿದೆ. ಉದಾಹರಣೆಗೆ ವ್ಯವಸ್ಥೀಕರಣದ ಕೆಳಗಿನ ವ್ಯಾಖ್ಯಾನ ಮತ್ತು ವ್ಯಾಖ್ಯಾನ ೬ ಟ್ಯಾಕ್ಸಾನಮಿಯ ವ್ಯಾಖ್ಯಾನಗಳ ಜೋಡಿಯನ್ನು ಪರಿಗಣಿಸಿದಲ್ಲಿ ಇಲ್ಲಿ ಹೆಸರಿಸುವಿಕೆಯನ್ನು ಟ್ಯಾಕ್ಸಾನಮಿಯ ಹೊರಗೆ ಇರಿಸಲಾಗಿದೆ.[]

  • ವ್ಯವಸ್ಥೀಕರಣ: “ಜೀವಿಗಳ ಗುರುತಿಸುವಿಕೆ, ಟ್ಯಾಕ್ಸಾನಮಿ ಮತ್ತು ಹೆಸರಿಸುವಿಕೆಗಳ ಅಧ್ಯಯನ ಮತ್ತು ಇದು ಜೀವಿಗಳ ನಡುವಿನ ಸಹಜ ಸಂಬಂಧದ ಹಿನ್ನೆಲೆಯಲ್ಲಿ ಅವುಗಳ ವರ್ಗೀಕರಣ ಮತ್ತು ಗುಂಪುಗಳ ವ್ಯತ್ಯಾಸಗಳ ಮತ್ತು ವಿಕಾಸದ ಅಧ್ಯಯನವನ್ನು ಒಳಗೊಳ್ಳುತ್ತದೆ.”

ಇತಿಹಾಸ

[ಬದಲಾಯಿಸಿ]

ಕೆಲವು ವಿವರಣೆಗಳು ಜೀವ ವರ್ಗೀಕರಣದ ಇತಿಹಾಸವನ್ನು ಪ್ರಾಚೀನ ನಾಗರೀಕತೆಗಳ ವರೆಗೂ ಒಯ್ಯುತ್ತವೆಯಾದರೂ ಜೀವಿಗಳ ವರ್ಗೀಕರಣದ ನಿಜವಾದ ಪ್ರಯತ್ನವು ೧೮ನೆಯ ಶತಮಾನದವರೆಗೂ ಆರಂಭವಾಗಲಿಲ್ಲ. ಹಿಂದಿನ ಪ್ರಯತ್ನಗಳು ಹೆಚ್ಚು ವಿವರಣೆಯನ್ನು ಒಳಗೊಂಡಿದ್ದವು ಮತ್ತು ವ್ಯವಸಾಯ ಮತ್ತು ಔಷದೀಯವಾಗಿ ಉಪಯುಕ್ತವಾದ ಸಸ್ಯಗಳಿಗೆ ಸೀಮಿತವಾಗಿದ್ದವು. ಈ ವೈಜ್ಞಾನಿಕ ಚಿಂತನೆಯಲ್ಲಿ ಹಲವು ಹಂತಗಳಿವೆ. ಆರಂಭಿಕ ವರ್ಗೀಕರಣವು ಇಚ್ಛಾನುಸಾರದ ಮಾನದಂಡಗಳ ಮೇಲೆ ಆಧಾರಪಟ್ಟಿತ್ತು ಮತ್ತು ಈ “ಕೃತಕ ವ್ಯವಸ್ಥೆಯು” ಲಿನ್ನೇಯಸ್‌ನ ಲೈಂಗಿಕ ವರ್ಗೀಕರಣದ ವ್ಯವಸ್ಥೆಯನ್ನು ಒಳಗೊಂಡಿತ್ತು. ನಂತರದಲ್ಲಿ ಡೆ ಜುಸ್ಸಿಯು (೧೭೮೯), ಡೆ ಕ್ಯಾನ್‌ಡೊಲ್ಲೆ (೧೮೧೩) ಮತ್ತು ಬೆನ್ತಾಮ್ ಮತ್ತು ಹೂಕರ್ (೧೮೬೨-೧೮೬೩) ನಂತಹವರ “ನೈಸರ್ಗಿಕ ವ್ಯವಸ್ಥೆ” ಎಂದು ಕರೆಯಲಾದ ಮತ್ತು ಹೆಚ್ಚು ಪೂರ್ಣವಾಗಿ ಪಂಕ್ತಿಯ ಅಥವಾ ಗುಂಪಿನ ಗುಣಗಳ ಮೇಲೆ ಆಧಾರ ಪಟ್ಟ ವರ್ಗೀಕರಣ ಬಂದಿತು. ‌ಇವೆಲ್ಲವೂ ವಿಕಸನೀಯ ಚಿಂತನೆಯ ಪೂರ್ವದವು. ಚಾರ್ಲ್ಸ್ ಡಾರ್ವಿನ್‌ನ ಆರಿಜನ್ ಆಫ್ ಸ್ಪೀಶೀಸ್‌ (೧೮೫೯) ಪ್ರಕಟಣೆಯು ವಿಕಾಸಕ್ಕೆ ಸಂಬಂಧಿಸಿದ ಆಧಾರದ ವರ್ಗೀಕರಣಕ್ಕೆ ದಾರಿಮಾಡಿಕೊಟ್ಟಿತು. ೧೮೮೩ರ ನಂತರ ಫೈಲೆಟಿಕ್ ವ್ಯವಸ್ಥೆ ಅಥವಾ ಪ್ರಭೇದವಿಕಾಸ ವ್ಯವಸ್ಥೆ ಪರಿಕಲ್ಪನೆ ಚಾಲ್ತಿಗೆ ಬಂತು. ಈ ರೀತಿಯ ಚಿಂತನೆಯನ್ನು ಇಕ್ಲರ್ (೧೮೮೩) ಮತ್ತು ಎಗ್ಲರ್ (೧೮೮೬-೧೮೯೨)ರಲ್ಲಿ ಕಾಣಬಹುದು. ಅಣ್ವಿಕ ತಳಿವಿಜ್ಞಾನ ಆರಂಭ ಮತ್ತು ಸಂಖ್ಯಾಶಾಸ್ತ್ರದ ಪದ್ಧತಿಗಳು ಕೇವಲ ಅವಲೋಕಿಸ ಬಹುದಾದ ಗುಣಗಳ ಆಧಾರ ಮೇಲೆ ಅಲ್ಲದೆ ಏಕಮೂಲ ವಂಶ ಅಥವಾ ಕ್ಲಾಡಿಸ್ಟಿಕ್ಟ್ ಆಧಾರದ ಆಧುನಿಕ “ಪ್ರಭೇದವಿಕಾಸ ವ್ಯವಸ್ಥೆ”ಯ ಯುಗಕ್ಕೆ ನಾಂದಿ ಹಾಡಿದವು.[೧೦][೧೧][೧೨]

ಆರಂಭಿಕ ಜೀವ ವರ್ಗೀಕರಣಶಾಸ್ತ್ರಜ್ಞರು

[ಬದಲಾಯಿಸಿ]

ಟ್ಯಾಕ್ಸಾನಮಿಯನ್ನು "ವಿಶ್ವದ ಅತ್ಯಂತ ಹಳೆಯ ವೃತ್ತಿ " ಎಂದು ಕರೆಯಲಾಗಿದ್ದೆ.[೧೩] ಎಲ್ಲಿಯ ವರೆಗೆ ನಮ್ಮ ಸುತ್ತಮುತ್ತಲಿನ ವಸ್ತುಗಳನ್ನು ವರ್ಗೀಕರಿಸುವ ಪ್ರವೃತ್ತಿ ಮತ್ತು ಮಾನವರ ನಡುವಿನ ಸಂವಹನ ಇರುತ್ತದಯೊ ಅಲ್ಲಿಯವರೆಗೂ ಅದು ಮುಂದುವರೆಯುವ ಸಾಧ್ಯತೆ ಇರುತ್ತದೆ. ವಿಷಕಾರಿ ಮತ್ತು ಖ್ಯಾದ್ಯ ಸಸ್ಯಗಳು ಮತ್ತು ಪ್ರಾಣಿಗಳ ಹೆಸರುಗಳ ಮಾಹಿತಿ ತಿಳಿದು ಅದನ್ನು ಇತರ ಕುಟುಂಬ ಅಥವಾ ಗುಂಪಿನ ಸದಸ್ಯರಿಗೆ ತಿಳಿಸುವುದು ಯಾವಾಗಲೂ ಮುಖ್ಯ.

ಈಜಿಪ್ಟಿನಲ್ಲಿ ಕ್ರಿ ಪೂ ೧೫೦೦ರಿಂದಲೇ ಔಷದೀಯ ಸಸ್ಯಗಳ ಗೋಡೆ ಚಿತ್ರಗಳು ಕಂಡುಬರುತ್ತವೆ.[೧೪] ಈ ಚಿತ್ರಗಳು ಸ್ಪಷ್ಟವಾಗಿ ಆ ಸಮಾಜಗಳು ವಿವಿಧ ಪ್ರಭೇದಗಳ ಉಪಯುಕ್ತತೆಯ ಅರಿವಿಗೆ ಬೆಲೆ ಕೊಡುತ್ತಿದ್ದರು ಮತ್ತು ಆ ಮಾಹಿತಿಯನ್ನು ಸಂವಹಿಸುತ್ತಿದ್ದರು ಎಂದು ತೋರಿಸುತ್ತವೆ. ಇದು ಅಲ್ಲಿ ಮೂಲಭೂತ ಟ್ಯಾಕ್ಸನಮಿ ಅರಿವು ಇತ್ತು ಎಂದು ಸೂಚಿಸುತ್ತದೆ.

ಶ್ರೀಮತ್‌ಭಗವತ ಪುರಾಣದ ಕ್ಯಾಂಟೊ ೩, ಅಧ್ಯಾಯ ೧೦ರಲ್ಲಿ ಆರು ನಮೂನೆಯ ಗಿಡಗಳನ್ನು ಗುರುತಿಸಲಾಗಿದೆ ಮತ್ತು ಅವು:[೧೫]

  1. ವನಸ್ಪತಿ- ದೊಡ್ಡ ಮರಗಳು ಮತ್ತು ಇವು ಹೂಗಳಿಲ್ಲದೆ ಹಣ್ಣು ಬಿಡುತ್ತವೆ.
  2. ಡ್ರೂಮ-ದೊಡ್ಡ ಮರಗಳು ಮತ್ತು ಇವು ಹೂಗಳನ್ನು ಮತ್ತು ಹಣ್ಣುಗಳನ್ನು ಬಿಡುತ್ತವೆ.
  3. ಒಸದಿ-ಹಣ್ಣು ಬಿಟ್ಟ ನಂತರ ಸಾಯುವ ಮರಗಳು.
  4. ಲತ-ಬಳ್ಳಿಗಳು ಮತ್ತು ಸಣ್ಣ ಸಸ್ಯಗಳು.
  5. ವಿರುತ್-ಪೊದೆಗಳಾಗಿ ಬೆಳೆಯುವ ಸಸ್ಯಗಳು.
  6. ತ್ವಕ್ಸರ-ಒಳಗೆ ಟೊಳ್ಳಿರುವ ಮತ್ತು ಹೊರ ತೊಗಡೆ ಗಟ್ಟಿಯಾದ ಬೊಂಬಿನಂತ ಗಿಡಗಳು.

ಅರಿಸ್ಟಾಟಲ್‌ನಿಂದ ಪ್ಲಿನಿ ದಿ ಎಲ್ಡರ್‌ವರೆಗೆ

[ಬದಲಾಯಿಸಿ]

ಐತಿಹಾಸಿಕ ದಾಖಲೆಗಳು ಜೀವಿಗಳನ್ನು ಅನೌಪಚಾರಿಕವಾಗಿ ವರ್ಗೀಕರಿಸುವುದು ಕನಿಷ್ಠ ಅರಿಸ್ಟಾಟಲ್‌ನಷ್ಟು (ಗ್ರೀಸ್, ಕ್ರಿ ಪೂ ೩೮೪-೩೨೨) ಹಿಂದೆ ಹೋಗುತ್ತದೆ ಎಂದು ಸೂಚಿಸುತ್ತವೆ.[೧೬] ಅರಿಸ್ಟಾಟಲ್ ಜೀವಿಗಳ ಮೊದಲ ವಿಂಗಡನೆ ಆರಂಭಿಸಿದ ಮತ್ತು ಅವನ ಸರಳ ವರ್ಗೀಕರಣದಲ್ಲಿ ಎಲ್ಲಾ ಜೀವಿಗಳನ್ನೂ ಸಸ್ಯ ಮತ್ತು ಪ್ರಾಣಿಗಳು ಎಂದು ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಅವನು ಪ್ರಾಣಿಗಳ ಗುಂಪಿಗೆ ಕೊಟ್ಟ ಪದಗಳಾದ “ಅಕಶೇರುಕ” (ಇನ್‌ವರ್ಟಿಬರೇಟ್) ಮತ್ತು “ಕಶೇರುಕ” (ವರ್ಟಿಬರೇಟ್) ಪದಗಳನ್ನು ಇಂದೂ ನಾವು (ಕನ್ನಡದಲ್ಲಿ ಅನುವಾದಗಳಾಗಿ) ಸಾಮಾನ್ಯವಾಗಿ ಬಳಸುತ್ತಿದ್ದೇವೆ. ಅವನ ಶಿಷ್ಯ ತಿಯೊಪ್ರಾಸ್ಟಸ್ (ಗ್ರೀಸ್, ಕ್ರಿ ಪೂ ೩೭೦-೨೮೫) ಈ ಸಂಪ್ರದಾಯವನ್ನು ಮುಂದುವರೆಸಿದ ಮತ್ತು ತನ್ನ ಕೃತಿ ಹಿಸ್ಟೋರಿಯ ಪ್ಲಾಂಟರಂನಲ್ಲಿ ಸುಮಾರು ೫೦೦ ಸಸ್ಯಗಳನ್ನು ವರ್ಗೀಕರಿಸಿದ. ಕೋರನಸ್, ಕೋಕಸ್ ಮತ್ತು ನಾರ್ಸಿಸ್‌ನಂತಹ ಹಲವು ಸಸ್ಯಗಳ ಗುಂಪುಗಳ ಗುರುತಿಸುವಿಕೆ ತಿಯೊಪ್ರಾಸ್ಟಸ್‌ನಷ್ಟು ಹಿಂದೆ ಹೋಗುತ್ತದೆ. ನಂತರದ ಪ್ರಮುಖ ಜೀವ ವರ್ಗೀಕರಣಶಾಸ್ತ್ರಜ್ಞ ಪ್ಲಿನಿ ದಿ ಎಲ್ಡರ್ (ರೋಮ್, ಕ್ರಿ ಶ ೨೩-೭೯). ಅವನು ತನ್ನ ೧೬೦ ಸಂಪುಟಗಳ ನ್ಯಾಚುರಲಿಸ್ ಹಿಸ್ಟೊರಿಯದಲ್ಲಿ ಹಲವು ಸಸ್ಯಗಳನ್ನು ವಿವರಿಸಿದ.

ಇತರ ಲಿನ್ನೇಯಸ್ ಪೂರ್ವ ಜೀವ ವರ್ಗೀಕರಣಶಾಸ್ತ್ರಜ್ಞರು

[ಬದಲಾಯಿಸಿ]

ಟ್ಯಾಕ್ಸಾನಮಿ ತಜ್ಞರು ಸುಮಾರು ೧೫೦೦ ವರುಷಗಳ ನಂತರವೇ ಪ್ರಾಚೀನ ಪಠ್ಯಗಳ ಬದಲಿಗೆ ಹೊಸ ಪಠ್ಯಗಳನ್ನು ರಚಿಸುವ ಮಹತ್ವಾಕಾಂಕ್ಷೆ ತೋರಿದರು. ಹಲವು ಸಲ ಇದಕ್ಕೆ ಕಾರಣ ಜೀವಿಗಳ ರಚನೆಯ ಅಧ್ಯಯನವನ್ನು ಹೆಚ್ಚು ವಿವರವಾಗಿ ಪರಿಶೀಲಿಸಲು ಅನುಕೂಲ ಮಾಡಿಕೊಡುವ ಸಂಕೀರ್ಣ ದೃಷ್ಟಿ ಸಹಾಯಕ ಮಸೂರಗಳ (ಲೆನ್ಸ್) ಅಭಿವೃದ್ಧಿ ಎನ್ನಲಾಗಿದೆ. ತಂತ್ರಜ್ಞಾನದ ಈ ಜಿಗಿತವನ್ನು ಬಳಸಿಕೊಂಡ ಕೆಲವು ಮೊದಲ ಕೃತಿಕಾರರಲ್ಲಿ “ಮೊದಲ ಜೀವ ವರ್ಗೀಕರಣಶಾಸ್ತ್ರಜ್ಞ” ಎಂದು ಕರೆಯಲಾದ ಆಂಡ್ರಿಯೆ ಸೆಸಲ್ಪಿನೊ (ಇಟಾಲಿ, ೧೫೧೯-೧೬೦೩) ಒಬ್ಬ. ಅವನು ತನ್ನ ಪ್ರಮುಖ ಕೃತಿ ಡೆ ಪ್ಲಾಂಟಿಸ್ (೧೫೮೩ರಲ್ಲಿ ಹೊರ ಬಂತು)ನಲ್ಲಿ ಸುಮಾರು ೧೫೦೦ ಸಸ್ಯ ಪ್ರಭೇದಗಳನ್ನು ವಿವರಿಸಿದ. ಅವನು ಮೊದಲು ಗುರುತಿಸಿದ ಎರಡು ದೊಡ್ಡ ಸಸ್ಯ ಕುಟುಂಬಗಳಾದ ಅಸ್ಟರಾಸಿಯೆ (ಸೂರ್ಯಕಾಂತಿ ಕುಟುಂಬ) ಮತ್ತು ಬ್ರಾಸಿಕಸಿಯೆ (ಕ್ಯಾಬೇಜ್ ಕುಟುಂಬ) ಗಳನ್ನು ಇಂದೂ ಬಳಸಲಾಗುತ್ತಿದೆ. ನಂತರ ೧೭ನೆಯ ಶತಮಾನದಲ್ಲಿ ಜಾನ್ ರೇ (ಇಂಗ್ಲೆಂಡ್, ೧೬೨೭-೧೭೦೫) ಟ್ಯಾಕ್ಸಾನಮಿಯ ಮೇಲೆ ಹಲವು ಕೃತಿಗಳನ್ನು ರಚಿಸಿದ. ಅವನ ಅತಿದೊಡ್ಡ ಸಾಧನೆ ಮೆತೊಡಸ್ ಪ್ಲಾಂಟರಂ ನೋವ (೧೬೮೨) ಎಂದು ವಾದಿಸಲು ಸಾಧ್ಯ ಮತ್ತು ಇದರಲ್ಲಿ ಅವನು ೧೮,೦೦೦ಕ್ಕೂ ಹೆಚ್ಚು ಸಸ್ಯ ಪ್ರಭೇದಗಳನ್ನು ವಿವರಿಸಿದ. ಆ ಕಾಲದಲ್ಲಿ ಅವನ ವರ್ಗೀಕಣವು ಬಹುಶ ಅದುವರೆಗಿನ ಯಾವುದೇ ಟ್ಯಾಕ್ಸಾನಮಿ ತಜ್ಞ ಮಾಡಿದ್ದಕ್ಕಿಂತ ಅತಿ ಹೆಚ್ಚು ಸಂಕೀರ್ಣವಾದ ವರ್ಗೀಕರಣವಾಗಿತ್ತು ಮತ್ತು ಅವನು ತನ್ನ ವರ್ಗೀಕರಣಕ್ಕೆ ಹಲವು ಗುಣಗಳನ್ನು ಗಣನೆಗೆ ತೆಗೆದುಕೊಂಡಿದ್ದ. ಟ್ಯಾಕ್ಸಾನಮಿ ಬಗೆಗಿನ ನಂತರದ ಪ್ರಮುಖ ಕೃತಿ ರಚಿಸುದುದು ಜೊಸೆಪ್ ಪಿಟ್ಟಾನ್ ಡೆ ಟೊರ್ನೆಪೊರ್ಟ್ (ಫ್ರಾನ್ಸ್, ೧೬೫೬-೧೭೦೮). ಅವನ ೧೭೦೦ರ ನಂತರದ ಕೃತಿಯಾದ ಇನ್‌ಸ್ಟಿಟೂಶನೆಸ್ ರೆಯಿ ಹರ್ಬರಿಯೆಯಲ್ಲಿ ೬೯೮ ಕುಲಗಳ ೯೦೦೦ ಪ್ರಭೇದಗಳು ಸೇರಿದ್ದವು. ಇದು ನೇರವಾಗಿ ಲಿನ್ನೇಯಸ್ ಮೇಲೆ ಪ್ರಭಾವ ಬೀರಿತು ಏಕೆಂದರೆ ಈ ಕೃತಿಯನ್ನು ಅವನು ವಿದ್ಯಾರ್ಥಿಯಾಗಿದ್ದಾಗ ಪಠ್ಯವಾಗಿ ಬಳಸಲಾಗಿತ್ತು.[೧೪]

ಲಿನ್ನೇಯಸ್ ಯುಗ

[ಬದಲಾಯಿಸಿ]
ಸಿಸ್ಟಮಾ ನೇಚರಾ, ಲೀಡನ್, ೧೭೩೫, ಶೀರ್ಷಿಕೆ ಪುಟ

ಸ್ವೀಡನ್ನಿನ ಸಸ್ಯಶಾಸ್ತ್ರಜ್ಞ ಕಾರ್ಲ್ ಲಿನ್ನೇಯಸ್ (೧೭೦೭-೧೭೭೮) ಜೀವ ವರ್ಗೀಕರಣದಲ್ಲಿ ಹೊಸ ಯುಗದ ಆರಂಭಕ್ಕೆ ಕಾರಣವಾದ. ಅವನ ಪ್ರಮುಖ ಕೃತಿಗಳಾದ ಸಿಸ್ಟೆಮಾ ನೇಚರಾ (ಮೊದಲನೆಯ ಆವೃತ್ತಿ ೧೭೩೫)[೧೭], ಸ್ಪೀಶೀಸ್ ಪ್ಲಾಂಟರಂ (೧೭೫೩)[೧೮] ಮತ್ತು ಸಿಸ್ಟೆಮಾ ನೇಚರಾ ಹತ್ತನೆಯ ಆವೃತ್ತಿಗಳೊಂದಿಗೆ[೧೯] ಆಧುನಿಕ ಜೀವ ವರ್ಗೀಕರಣಶಾಸ್ತ್ರದಲ್ಲಿ ಕ್ರಾಂತಿ ಉಂಟಾಯಿತು. ಅವನ ಪ್ರಮಾಣೀಕೃತ ದ್ವಿಪದ ಹೆಸರಿಸುವಿಕೆ ವ್ಯವಸ್ಥೆ ಅವ್ಯವಸ್ಥೆಯ ಆಗರವಾದ ಟ್ಯಾಕ್ಸಾನಮಿ ಸಾಹಿತ್ಯಕ್ಕೆ ಒಳ್ಳೆಯ ಪರಿಹಾರವಾಗಿ ಪರಿಣಮಿಸಿತು. ಹೀಗೆ ಲಿನ್ನೇಯಸ್ ವ್ಯವಸ್ಥೆಯ ಉದಯವಾಯಿತು. ಮತ್ತು ಇಂದೂ ಸಹ ನಾವು ಮೂಲಭೂತವಾಗಿ ಹದಿನೆಂಟನೆಯ ಶತಮಾನದಲ್ಲಿ ಬಳಸುತ್ತಿದ್ದ ರೀತಿಯಲ್ಲಿಯೇ ಬಳಸುತ್ತಿದ್ದೇವೆ. ಸದ್ಯ ಸಸ್ಯ ಮತ್ತು ಪ್ರಾಣಿ ಟ್ಯಾಕ್ಸಾನಮಿ ತಜ್ಞರು ಲಿನ್ನೇಯಸ್ ಕೃತಿಗಳನ್ನು “ಆರಂಭಿಕ ಬಿಂದು” (ಕ್ರಮವಾಗಿ ೧೭೫೩ ಮತ್ತು ೧೭೫೮) ಎಂದು ಪರಿಗಣಿಸುತ್ತಾರೆ.[೨೦] ಅದಕ್ಕೂ ಮುಂಚೆ ಪ್ರಕಟಿತವಾದ ಹೆಸರುಗಳನ್ನು "ಲಿನ್ನೇಯಸ್‌ ಪೂರ್ವ" ಎಂದೂ ಮತ್ತು ಮಾನ್ಯವಲ್ಲ ಎಂದೂ ಪರಿಗಣಿಸುತ್ತಾರೆ (ಇದಕ್ಕೆ ಅಪವಾದ ಜೇಡಗಳ ಬಗೆಗಿನ ಸ್ವೆನ್ಸಕ ಸ್ಪಿಂಡಲಾರ್). ಆರಂಭ ಕಾಲಕ್ಕೂ ಮುಂಚಿನ ಲಿನ್ನೇಯಸ್‌ನ ಪ್ರಕಟಣೆಗಳು ಸಹ ಲಿನ್ನೇಯಸ್ ಪೂರ್ವ ಎಂದೇ ಪರಿಗಣಿತವಾಗುತ್ತವೆ.[೧೪]

ಆಧುನಿಕ ವರ್ಗೀರಣ ವ್ಯವಸ್ಥೆ

[ಬದಲಾಯಿಸಿ]

ಲಿನ್ನೇಯಸ್ ಜೀವಿಗಳ ಗುರುತಿಸುವಿಕೆ ಸುಲಭವಾಗಲೆಂದು ವರ್ಗೀಕರಿಸಿದ. ಆದರೆ ಲಿನ್ನೇಯಸ್‌ನ ವರ್ಗೀಕರಣದ ಚಿಂತನೆಯು ಹದಿನೆಂಟನೆಯ ಶತಮಾನದ ಕೊನೆಗೆ- ಆನ್ ದಿ ಆರಿಜನ್ ಆಫ್ ಸ್ಪೀಶೀಸ್ ಪ್ರಕಟನೆಗೂ ಮುಂಚೆ ಪ್ರಾಣಿ ಮತ್ತು ಸಸ್ಯ ಸಾಮ್ರಾಜ್ಯಗಳ ಒಂದು ನಮೂನೆಯ “ವೃಕ್ಷ”ವನ್ನು (ವಂಶವೃಕ್ಷವನ್ನು ಹೋಲುತ್ತದೆ) ತಯಾರಿಸುವುದು ಚಾಲ್ತಿಗೆ ತಂದಿತು. ಪ್ರಭೇದಗಳಲ್ಲಿನ ಬದವಾವಣೆಯ ಚಿಂತನೆಯ ಬಗೆಗೆ ಚರ್ಚಿಸುವ ಆರಂಭಿಕ ಕೃತಿಗಳಲ್ಲಿ ಎರಸ್ಮಸ್ ಡಾರ್ವಿನ್‌ನ ಜೂನೊಮಿಯ (೧೭೯೬) ಮತ್ತು ಜೀನ್-ಬಾಪ್ಟಿಸ್ಟೆ ಲಮಾರ್ಕ್‌ನ //ಫಿಲಾಸಫೆ ಜೂಲೊಗಿಕ್ಯೂ (೧೮೦೯) ಸೇರಿವೆ. ಆಂಗ್ಲ ಭಾಷಿಕ ಪ್ರಪಂಚದಲ್ಲಿ ಈ ಚಿಂತನೆಯನ್ನು ಊಹಾತ್ಮಕ, ಆದರೆ ವಿಸೃತವಾಗಿ ಓದಲ್ಪಟ್ಟ ರಾಬರ್ಟ್ ಚೇಂಬರ್ಸ್‌ನ ಅನಾಮಿಕ ಪ್ರಕಟನೆ ವೆಸ್ಟಿಜಸ್ ಆಫ್ ದಿ ನ್ಯಾಚುರಲ್ ಹಿಸ್ಟರಿ ಆಫ್ ಕ್ರಿಯೇಶನ್ ಜನಪ್ರಿಯ ಗೊಳಿಸಿತು.[೨೧]

ಡಾರ್ವಿನ ಸಿದ್ಧಾಂತವು ಸಾಮಾನ್ಯವಾಗಿ ಒಪ್ಪಿತವಾಗುವುದರೊಂದಿಗೆ ವರ್ಗೀಕರಣವು ಡಾರ್ವಿನ್‌ನ ಸಾಮಾನ್ಯ ಪೂರ್ವಿಕ ನಿಯಮವನ್ನು ಪ್ರತಿಬಿಂಬಿಸ ಬೇಕು ಎಂಬ ಚಿಂತನೆ ಕಾಣಿಸಿಕೊಂಡಿತು. ತಿಳಿದ ಪಳಿಯುಳಿಕೆ ಗುಂಪುಗಳನ್ನೂ ಒಳಗೊಂಡು ಜೀವಿಗಳನ್ನು ಜೀವವೃಕ್ಷದಲ್ಲಿ ಪ್ರತಿನಿಧಿಸುವುದು ವೈಜ್ಞಾನಿಕ ಕೃತಿಗಳಲ್ಲಿ ಜನಪ್ರಿಯವಾಯಿತು. ಪಳಿಯುಳಿಕೆಗಳ ಸಂಬಂಧವನ್ನು ಗುರುತಿಸಿದ ಮೊದಲ ಆಧುನಿಕ ಗುಂಪು ಹಕ್ಕಿಗಳದು. ರಿಚರ್ಡ್ ಓವೆನ್ ೧೮೪೨ರಲ್ಲಿ ಹೆಸರಿಸಿದ ಡೈನೊಸಾರಸ್‌ಗಳ ಗುಂಪಿನಿಂದ ಹಕ್ಕಿಗಳು ವಿಕಾಸವಾದವು ಎಂದು ತಾಮಸ್ ಹೆನ್ರಿ ಹಕ್ಸಲೆ ಹೇಳಿದ.[೨೨] ಇದರಿಂದ ಉಂಟಾದ ವಿವರಣೆಯಾದ ಡೈನೋಸಾರಸ್‌ಗಳು ಹಕ್ಕಿಗಳ “ಹುಟ್ಟಿಗೆ ಕಾರಣವಾದವು” ಅಥವಾ “ಪೂರ್ವಿಕರು” ಎಂಬ ಚಿಂತನೆ ಮೂಲಭೂತವಾಗಿ ವಿಕಸನೀಯ ವರ್ಗೀಕರಣ ಚಿಂತನೆಯ ಹೆಗ್ಗುರುತು. ತಡವಾದ ಹತ್ತೊಂಬತ್ತನೆಯ ಶತಮಾನ ಮತ್ತು ಆರಂಭಿಕ ಇಪ್ಪತ್ತನೆಯ ಶತಮಾನಗಳಲ್ಲಿ ಹೆಚ್ಚು ಹೆಚ್ಚು ಪಳಿಯುಳಿಕೆ ಗುಂಪುಗಳು ಪತ್ತೆಯಾದಂತೆ ಮತ್ತು ಗುರುತಿಸಲಾದಂತೆ ಪ್ರಾಗ್ಜೀವಶಾಸ್ತ್ರಜ್ಞರು ತಿಳಿದ ಗುಂಪುಗಳೊಂದಿಗೆ ಅವುಗಳ ಸಂಬಂಧ ನಿರ್ದರಿಸಿ ಹಿಂದಿನ ಯುಗಗಳಲ್ಲಿ ಪ್ರಾಣಿಗಳ ಇತಿಹಾಸ ಅರಿಯಲು ಶ್ರಮಿಸಿದರು.[೨೩] ೧೯೪೦ರ ಆರಂಭಿಕ ದಶಕದ ಆಧುನಿಕ ವಿಕಸನೀಯ ಸಂಯೋಜನೆ ಯೊಂದಿಗೆ ಪ್ರಮುಖ ಗುಂಪುಗಳ ವಿಕಾಸದ ಆಧುನಿಕ ಅರ್ಥೈಸುವಿಕೆ ಆಗಲೇ ರೂಪತಳೆದಿತ್ತು. ವಿಕಸನೀಯ ಟ್ಯಾಕ್ಸಾನಮಿಯು ಲಿನ್ನೇಯಸ್ ಟ್ಯಾಕ್ಸಾನಮಿಯ ಶ್ರೇಣಿಗಳ ಆಧಾರದ ಮೇಲೆ ರೂಪಿತವಾಗಿದ್ದು ಆಧುನಿಕ ಬಳಕೆಯಲ್ಲಿ ಈ ಎರಡೂ ನುಡಿಗಟ್ಟುಗಳನ್ನು ವಿನಿಮಯ ಮಾಡಿ ಬಳಸಬಹುದು.

೧೯೬೦ರ ದಶಕದಿಂದ ಏಕಮೂಲ ವರ್ಗೀಕರಣ ಪದ್ಧತಿಯಿಂದ ಪ್ರೇರಿತವಾದ ಗುಂಪುವಿಕಾಸ ಹೆಸರಿಸುವಿಕೆ ಪ್ರವೃತ್ತಿ ಚಾಲ್ತಿಗೆ ಬಂತು. ಇದರ ಪ್ರಮುಖ ಲಕ್ಷಣ ಟ್ಯಾಕ್ಸಾನಮಿಯಲ್ಲಿನ ವಿದ್ಯುಕ್ತ ರ‌್ಯಾಂಕ್ ಅಥವಾ ಪಂಕ್ತಿಯನ್ನು ಪರಿಗಣಿಸದೆ ಜೀವಿಗಳನ್ನು ವಿಕಸನೀಯ ವೃಕ್ಷದಲ್ಲಿ ವ್ಯವಸ್ಥಗೊಳಿಸುವುದು. ಒಂದು ಪೂರ್ವಿಕ ರೂಪದ ಎಲ್ಲಾ ಸಂತತಿಯನ್ನೂ ವರ್ಗೀಕರಣ ಒಳಗೊಂಡರೆ ಆ ಗುಂಪನ್ನು ಮೊನೊಫೈಲೆಟಿಕ್ ಎಂದು ಕರೆಯಲಾಗುತ್ತದೆ. ಗುಂಪಿನಲ್ಲಿ ಕೆಲವು ಸಂತತಿ ಗುಂಪುಗಳು ಬಿಟ್ಟು ಹೋದಲ್ಲಿ (ಉದಾಹರಣೆಗೆ ಡೈನೊಸಾರಸ್‌ನೊಂದಿಗೆ ಹಕ್ಕಿಗಳು) ಅದನ್ನು ಪ್ಯಾರಫೈಲೆಟಿಕ್ ಎಂದು ಕರೆಯಲಾಗುತ್ತದೆ ಮತ್ತು ಗುಂಪುಗಳು ಜೀವವೃಕ್ಷದ ಒಂದಕ್ಕೂ ಹೆಚ್ಚು ಕವಲುಗಳನ್ನು ಒಳಗೊಂಡಿದ್ದರೆ ಪಾಲಿಫೈಲೆಟಿಕ್ ಎಂದು ಕರೆಯಲಾಗುತ್ತದೆ. ಇಂಟರ್ನಾಶನಲ್ ಕೋಡ್ ಆಫ್ ಫೈಲೊಜೆನೆಟಿಕ್ ನಾಮೆನ್‌ಕ್ಲೇಚರ್ ಅಥವಾ ಫೈಲೊಕೋಡ್ ಏಕಮೂಲ ವರ್ಗೀಕಣಗಳ ಔಪಚಾರಿಕ ಹೆಸರಿಸುವಿಕೆಯನ್ನು ನಿಯಂತ್ರಿಸುತ್ತದೆ. ಲಿನ್ನೆಯಸ್ ಶ್ರೇಣಿಗಳ ಹೆಸರಿಸುವಿಕೆ ಈ ಫೈಲೊಕೋಡ್‌ ಕೆಳಗೆ ನಿರ್ಬಂಧವಲ್ಲ. ಸದ್ಯದ ಪಂಕ್ತಿ ಅಥವಾ ರ‌್ಯಾಂಕ್ ಆಧಾರಿತ ಸಂಕೇತಗಳನ್ನು ಜೊತೆಗೆ ಉಳಿಸಿಕೊಳ್ಳುವ ಉದ್ಧೇಶದಿಂದ ಹೀಗೆ ಮಾಡಲಾಗಿದೆ.

ಸಾಮ್ರಾಜ್ಯಗಳು ಮತ್ತು ಕ್ಷೇತ್ರಗಳು

[ಬದಲಾಯಿಸಿ]
ಆಧುನಿಕ ಜೀವ ವರ್ಗೀಕರಣ ಅಥವಾ ಟ್ಯಾಕ್ಸಾನಮಿ. ಪಂಕ್ತಿಗಳು ಅಥವಾ ರ‌್ಯಾಂಕ್‌ಗಳು- ಜೀವ (ಲೈಫ್), ಕ್ಷೇತ್ರ (ಡೊಮೈನ್), ವಂಶ (ಫೈಲಮ್), ವರ್ಗ (ಕ್ಲಾಸ್), ಗಣ (ಆರ್ಡರ್), ಕುಟುಂಬ (ಫ್ಯಾಮಿಲಿ), ಕುಲ (ಜೀನಸ್) ಮತ್ತು ಪ್ರಭೇದ (ಸ್ಪೀಶಿಸ್).[ಟಿಪ್ಪಣಿ ೨]

ಲಿನ್ನೇಯಸ್‌ನ ಬಹುಮುಂಚೆಯೇ ಸಸ್ಯ ಮತ್ತು ಪ್ರಾಣಿಗಳನ್ನು ಬೇರೆ ಬೇರೆ ಸಾಮ್ರಾಜ್ಯಗಳೆಂದು ಪರಿಗಣಿಸಲಾಗುತ್ತಿತ್ತು. ಲಿನ್ನೇಯಸ್ ಇದನ್ನು ಮೊದಲ ಪಂಕ್ತಿ (ರ‌್ಯಾಂಕ್) ಆಗಿ ಬಳಸಿ, ಭೌತಿಕ ಪ್ರಪಂಚವನ್ನು ಸಸ್ಯ, ಪ್ರಾಣಿ ಮತ್ತು ಖನಿಜ ಸಾಮ್ರಾಜ್ಯಗಳು ಎಂದು ವಿಭಜಿಸಿದ. ನಂತರ ಸೂಕ್ಷ್ಮದರ್ಶನ ತಂತ್ರಜ್ಞಾನ ಅಭಿವೃದ್ಧಿಯಾದಂತೆ ಸೂಕ್ಷ್ಮಜೀವಿಗಳ ವರ್ಗೀಕರಣವೂ ಸಾಧ್ಯವಾಗಿ ಸಾಮ್ರಾಜ್ಯಗಳ ಸಂಖ್ಯೆ ಹೆಚ್ಚಾಗಿ ಐದು ಮತ್ತು ಆರು ಸಾಮ್ರಾಜ್ಯಗಳ ವ್ಯವಸ್ಥೆ ಸಾಮಾನ್ಯವಾಯಿತು.

ಕ್ಷೇತ್ರಗಳು ಸಾಕ್ಷೇಪಿಕವಾಗಿ ಹೊಸ ಗುಂಪುಗಳು. ೧೯೯೦ರಲ್ಲಿ ಮೊದಲ ಸಲ ಮೂರು ಕ್ಷೇತ್ರಗಳ ವ್ಯವಸ್ಥೆಯನ್ನು ಸೂಚಿಸಲಾಯಿತು ಆದರೆ ಕೆಲಕಾಲದ ನಂತರವೇ ಇದು ಒಪ್ಪಿತವಾಯಿತು. ಮೂರು ಕ್ಷೇತ್ರಗಳ ಒಂದು ಪ್ರಮುಖ ಲಕ್ಷಣ ಹಿಂದೆ ಬ್ಯಾಕ್ಟೀರಿಯ ಸಾಮ್ರಾಜ್ಯದಡಿಯಲ್ಲಿ ಬರುತ್ತಿದ್ದ (ಕೆಲವೊಮ್ಮೆ ಇದನ್ನು ಮೊನೆರ ಎಂದು ಕರೆಯಲಾಗುತ್ತಿದ್ದ) ಆರ್ಕಿಯ ಮತ್ತು ಬ್ಯಾಕ್ಟೀರಿಯಗಳನ್ನು ಬೇರೆ ಮಾಡುವುದಾಗಿತ್ತು. ಪರಿಣಾಮವಾಗಿ ಮೂರು ಕ್ಷೇತ್ರಗಳ ಜೀವಿಗಳ ಪರಿಕಲ್ಪನೆಯಲ್ಲಿ ಆರ್ಕಿಯ, ಬ್ಯಾಕ್ಟೀರಿಯ ಮತ್ತು ಯುಕ್ಯಾರಿಯೋಟ್ (ಬೀಜಕಣವಿರುವ ಜೀವಕೋಶಗಳ ಜೀವಿಗಳು) ಎಂದು ವಿಭಜಿಸಲಾಯಿತು.[೨೪] ವಿಜ್ಞಾನಿಗಳ ಸಣ್ಣ ವರ್ಗ ಆರ್ಕಿಯವನ್ನು ಆರನೆಯ ಸಾಮ್ರಾಜ್ಯವಾಗಿ ಸೇರಿಸುತ್ತಾರೆ ಮತ್ತು ಕ್ಷೇತ್ರ ಪದ್ಧತಿಯನ್ನು ಒಪ್ಪಿಕೊಳ್ಳುವುದಿಲ್ಲ.

ತಾಮಸ್ ಕ್ಯಾವಲಿಯರ್-ಸ್ಮಿತ್ ವಿಸ್ತಾರವಾಗಿ ಪ್ರೊಟಿಸ್ಟ್ ವರ್ಗೀಕರಣದ ಬಗೆಗೆ ಪ್ರಕಟಿಸಿದ್ದು ಅವರು ಏಕಮೂಲದ ಆರ್ಕಿಯ ಮತ್ತು ಯುಕ್ಯಾರಿಯಗಳನ್ನು ಒಳಗೊಂಡ ನಿಯೊಮುರ ಗುಂಪನ್ನು ಇತ್ತೀಚಿಗೆ ಸೂಚಿಸಿದ್ದಾರೆ. ಇವು ಬ್ಯಾಕ್ಟೀರಿಯ, ನಿರ್ದಿಷ್ಟವಾಗಿ ಅಕ್ಟಿನೊಬ್ಯಾಕ್ಟೀರಿಯದಿಂದ ವಿಕಾಸವಾದವು. ಅವರ ೨೦೦೪ರ ವರ್ಗೀಕರಣ ಆರ್ಕಿಯೊಬ್ಯಾಕ್ಟೀರಿಯವನ್ನು ಸಾಮ್ರಾಜ್ಯ ಬ್ಯಾಕ್ಟೀರಿಯದ ಉಪಸಾಮ್ರಾಜ್ಯ ಎಂದು ಪರಿಗಣಿಸುತ್ತದೆ. ಹೀಗೆ ಅವರು ಮೂರು ಕ್ಷೇತ್ರಗಳ ವ್ಯವಸ್ಥೆಯನ್ನು ಪೂರ್ಣವಾಗಿ ತಿರಸ್ಕರಿಸುತ್ತಾರೆ.[೨೫] ೨೦೧೨ರಲ್ಲಿ ಸ್ಟೆಪಾನ್ ಲುಕೆಟ ಐದು “ಕ್ಷೇತ್ರ”ಗಳ ವ್ಯವಸ್ಥೆಯನ್ನು ಸೂಚಿಸುತ್ತಾ ಪ್ರಿಯಾನ್‌ಬಯೋಟ (ಜೀವಕೋಶ ಮತ್ತು ನ್ಯೂಕ್ಲಿಯಕ್ ಆಮ್ಲಗಳಿಲ್ಲದ) ಮತ್ತು ವೈರಸ್‌ಬಯೋಟ (ಜೀವಕೋಶಗಳಿಲ್ಲದ ಆದರೆ ನ್ಯೂಕ್ಲಿಯಿಕ್ ಆಮ್ಲವಿರುವ) ಎಂದು ಸಂಪ್ರದಾಯಿಕ ಮೂರು ಕ್ಷೇತ್ರಗಳಿಗೆ ಸೇರಿಸುವಿಕೆಯನ್ನು ಸೂಚಿಸುತ್ತಾರೆ.[೨೬]

ಕಾರ್ಲಸ್ ಲಿನ್ನೇಯಸ್
೧೭೩೫[೨೭]
ಎರ್ನಸ್ಟ್ ಹೆಕಲ್
೧೮೬೬[೨೮]
ಎಡೊರ್ಡ್ ಚಟ್ಟನ್
೧೯೨೫[೨೯]
ಹರ್ಬಟ್ ಕೋಪ್‌ಲ್ಯಾಂಡ್
೧೯೩೮[೩೦]
ರಾಬರ್ಟ್ ವಿಟ್ಟಕರ್
೧೯೬೯[೩೧]
ಕಾರ್ಲ್ ವೊಯೆಸೆ ಇತರರು
೧೯೯೦[೩೨]
ತಾಮಸ್ ಕ್ಯಾವಿಲಿಯರ್-ಸ್ಮಿತ್
೧೯೯೮[೨೫]
೨ ಸಾಮ್ಯಾಜ್ಯಗಳು ೩ ಸಾಮ್ರಾಜ್ಯಗಳು ೨ ಎಂಪೈರ್‌ಗಳು ೪ ಸಾಮ್ರಾಜ್ಯಗಳು ೫ ಸಾಮ್ರಾಜ್ಯಗಳು ೩ ಕ್ಷೇತ್ರಗಳು ೬ ಸಾಮ್ರಾಜ್ಯಗಳು
ಪರಿಗಣಿಸಲಾಗಿಲ್ಲ ಪ್ರೊಟಿಸ್ಟ ಪ್ರೊಕ್ಯಾರಿಯೋಟ್ ಮೊನೆರ ಮೊನೆರ ಬ್ಯಾಕ್ಟೀರಿಯ ಬ್ಯಾಕ್ಟೀರಿಯ
ಆರ್ಕಿಯ
ಯುಕ್ಯಾರಿಯೋಟ್ ಪ್ರೊಟಿಸ್ಟ ಪ್ರೊಟಿಸ್ಟ ಯುಕ್ಯಾರಿಯೋಟ್
(ಯುಕ್ಯಾರಿಯ)
ಪ್ರೋಟೊಜೋವ
ಕ್ರೊಮಿಟ
ವೆಜೆಟಬಿಲಿಯ ಸಸ್ಯ ಸಸ್ಯ ಸಸ್ಯ ಸಸ್ಯ
ಶಿಲೀಂಧ್ರ ಶಿಲೀಂಧ್ರ
ಪ್ರಾಣಿ ಪ್ರಾಣಿ ಪ್ರಾಣಿ ಪ್ರಾಣಿ ಪ್ರಾಣಿ

ಫೈಲೋಜೆನೆಟಿಕ್ಸ್ ಮತ್ತು cladistics

[ಬದಲಾಯಿಸಿ]

ಜೀವನದ ಫೈಲೋಜೆನೆಟಿಕ್ ಮರ

[ಬದಲಾಯಿಸಿ]

ಫೈಲೋಜೆನೆಟಿಕ್ಸ್ ಮತ್ತು Cladistics ನಲ್ಲಿ ಪೂರ್ಣ ಲೇಖನಗಳನ್ನು ನೋಡಿ ಇತ್ತೀಚಿನ ದಶಕಗಳಲ್ಲಿ ತೀವ್ರವಾಗಿ ಬದಲಾಗಿದೆ ಹೇಗೆ ಈ ವಿಷಗಳ ಸಂಬಂಧಗಳು ತನಿಖೆ , ಆದಾಗ್ಯೂ ; ಇಂದು, ಸಾಂಪ್ರದಾಯಿಕ ಶ್ರೇಣಿಯ ಆಧಾರಿತ ಜೈವಿಕ ವರ್ಗೀಕರಣಗಳು 1700 ರಿಂದ ಬಹುಮಟ್ಟಿಗೆ ಬದಲಾಗದೆ ಒಂದು ರಚನೆ ಇರುತ್ತವೆ . ಜೀವಶಾಸ್ತ್ರಜ್ಞರು DNA ಅನುಕ್ರಮ ಮಾಹಿತಿಯು ಬಳಸಿ ಜಾತಿವಿಕಸನೀಯ ವಿಶ್ಲೇಷಣೆ ಫಲಿತಾಂಶಗಳು ಆಧರಿಸಿದ ವರ್ಗೀಕರಣ ರೂಪಿಸಲು , ಮತ್ತು ವಿಷಗಳ ವಿಶಿಷ್ಟವಾಗಿ ಏಕಮೂಲ ಮಾಡಬೇಕು ಅದನ್ನು ಈಗ ಸಾಮಾನ್ಯವಾಗಿದೆ. ಜಾತಿವಿಕಾಸದ ಸ್ವತಃ ಆಧುನಿಕ ವಿಧಾನ , ಹೊಸ ವರ್ಗವು ವಿವರಣೆ ಬಳಕೆಗೆ ಮತ್ತು ವರ್ಗೀಕರಣ ಸ್ಕೀಮ್ ಒಳಗೆ ತಮ್ಮ ಉದ್ಯೊಗ ಮೂಲಭೂತ ಆದರೂ, ಅಗತ್ಯವಿಲ್ಲ.

ಅಪ್ಲಿಕೇಶನ್

[ಬದಲಾಯಿಸಿ]

ಜೈವಿಕ ಟ್ಯಾಕ್ಸಾನಮಿ ಜೀವಶಾಸ್ತ್ರದ ಒಂದು ಉಪ ಶಿಸ್ತು , ಮತ್ತು ಉತ್ಸಾಹ ಪ್ರಕೃತಿ ಆಗಾಗ್ಗೆ ಹೊಸ ವರ್ಗವು ಪ್ರಕಟಣೆಯ ತೊಡಗಿಕೊಂಡಿವೆ ಆದರೂ ಸಾಮಾನ್ಯವಾಗಿ , " ವರ್ಗೀಕರಣಶಾಸ್ತ್ರಜ್ಞರು " ಎಂದು ಜೀವಶಾಸ್ತ್ರಜ್ಞರು ಪಾಲಿಸುತ್ತಾರೆ. ವರ್ಗೀಕರಣಶಾಸ್ತ್ರಜ್ಞರು ಕೈಗೊಂಡ ಕಾರ್ಯದಲ್ಲಿ ಸಾಮಾನ್ಯ ಜೀವಶಾಸ್ತ್ರದ ತಿಳುವಳಿಕೆ ನಿರ್ಣಾಯಕ. ವರ್ಗೀಕರಣದ ಕೆಲಸ ಮೂಲಭೂತ ಪ್ರಾಮುಖ್ಯತೆಯನ್ನು ಇದು ಅನ್ವಯಿಸಬಹುದು ಜೀವಶಾಸ್ತ್ರದ ಎರಡು ಜಾಗ ಜೀವವೈವಿಧ್ಯ ಮತ್ತು ಸಂರಕ್ಷಣೆಯ ಅಧ್ಯಯನ ಇವೆ . ಯಾವುದೇ ಪ್ರದೇಶದಲ್ಲಿ ಜೀವಿಗಳ ಒಂದು ಕೆಲಸ ವರ್ಗೀಕರಣ ಇಲ್ಲದೆ, , ಅವಾಸ್ತವಿಕ ವೈವಿಧ್ಯತೆ ಪ್ರಸ್ತುತ ಪ್ರಮಾಣವನ್ನು ಅಂದಾಜು ಮಾಹಿತಿ ಸಂರಕ್ಷಣಾ ನಿರ್ಧಾರಗಳಿಗೆ ಅಸಾಧ್ಯ . ಸಂರಕ್ಷಣಾ ಹೆಚ್ಚು ರಾಜಕೀಯವಾಗಿ ಮುಖ್ಯವಾದ ಆಗುತ್ತದೆ, ವರ್ಗೀಕರಣದ ಕೆಲಸ ಪರಿಣಾಮಗಳು ವೈಜ್ಞಾನಿಕ ಸಮುದಾಯ , ಆದರೆ ಇಡೀ ಸಮಾಜವನ್ನು ಕೇವಲ .

ಜೀವಿಗಳ ವರ್ಗೀಕರಿಸುವುದು

[ಬದಲಾಯಿಸಿ]

ಜೀವಶಾಸ್ತ್ರದ ವರ್ಗೀಕರಣದ ಇದು ವರ್ಗೀಕರಣ ಸಂಬಂಧಿಕರ ಊಹೆ ಏನು ಬಳಕೆದಾರ ಮಾಹಿತಿ ಎಂದು , ವರ್ಗೀಕರಣದ ಪ್ರಕ್ರಿಯೆಯಲ್ಲಿನ ಒಂದು ನಿರ್ಣಯಾತ್ಮಕ ಹೆಜ್ಜೆ. ಟ್ಯಾಕ್ಸಾನಮಿ ಸ್ವತಃ ಶಿಸ್ತು ವರ್ಗೀಕರಣಕ್ಕೆ ಪರಸ್ಪರ ಸಂಬಂಧಿಸಿದ ಹೇಗೆ ತನಿಖೆಗಳು ವ್ಯವಹರಿಸುವುದಿಲ್ಲ , ಇದು ಬಳಕೆದಾರ ಈ ಫಲಿತಾಂಶಗಳನ್ನು ಸಂವಹನ ಮಾಡುತ್ತದೆ ಇಲ್ಲ . ಇದನ್ನು ಮಾಡಲು, ಇದು ( ಕನಿಷ್ಠ ಅಂತರ್ಗತ ಅತ್ಯಂತ ಅಂತರ್ಗತ ಸಲುವಾಗಿ ) ಇತರರ ಸೇರಿದಂತೆ , ವರ್ಗೀಕರಣದ ಶ್ರೇಯಾಂಕಗಳನ್ನು ಬಳಸುತ್ತದೆ : . ಡೊಮೈನ್ , ಕಿಂಗ್ಡಮ್ , ವಿಭಾಗ, ವರ್ಗ, ಕ್ರಮ, ಕುಟುಂಬ, ಕುಲ , ಮತ್ತು ಜಾತಿಗಳು.

ಜೀವ ವರ್ಗೀಕರಣ ವಿವರಣೆಗಳು.

[ಬದಲಾಯಿಸಿ]

ನೆಪೆಂಥೆಸ್ smilesii , ಒಂದು ಉಷ್ಣವಲಯದ ಹೂಜಿ ಸಸ್ಯ ಪ್ರಕಾರ ಮಾದರಿಯ .

ಒಂದು ವರ್ಗ ಆಫ್ ' ವ್ಯಾಖ್ಯಾನ ' ಅದರ ವಿವರಣೆ ಮೂಲಕ ಅಡಕವಾಗಿರುತ್ತದೆ. ಇಲ್ಲ ವಿಷಗಳ ವ್ಯಾಖ್ಯಾನ ಆಡಳಿತ ಯಾವುದೇ ಸೆಟ್ ನಿಯಮಗಳು , ಆದರೆ ಹೊಸ ವರ್ಗವು ನಾಮಕರಣವು ಮತ್ತು ಪ್ರಕಟಣೆ ನಿಯಮಗಳ ಸೆಟ್ ನಿರ್ವಹಿಸಲ್ಪಡುತ್ತದೆ. ಪ್ರಾಣಿಶಾಸ್ತ್ರದಲ್ಲಿ , (ಮಹಾವಂಶ ಉಪವರ್ಗಗಳನ್ನು ಗೆ ) ಎಂದು ಸಾಮಾನ್ಯವಾಗಿ ಶ್ರೇಯಾಂಕಗಳನ್ನು ನಾಮಕರಣ , ಪ್ರಾಣಿ ವಿಜ್ಞಾನದ ನಾಮಕರಣ ಪದ್ಧತಿ ಇಂಟರ್ನ್ಯಾಷನಲ್ ಕೋಡ್ ( ICZN ಕೋಡ್ ) ನಿಯಂತ್ರಿಸಲ್ಪಡುತ್ತದೆ. ಸಸ್ಯಶಾಸ್ತ್ರ , ಕಡಲ ಸಸ್ಯವಿಜ್ಞಾನ , ಮತ್ತು ಶಿಲೀಂಧ್ರಶಾಸ್ತ್ರದ ಕ್ಷೇತ್ರಗಳಲ್ಲಿ ವಿಷಗಳ ಹೆಸರಿಸುವ ಪಾಚಿ , ಶಿಲೀಂಧ್ರಗಳು ಮತ್ತು ಸಸ್ಯಗಳು (JHB) ಫಾರ್ ಅಭಿದಾನ ಇಂಟರ್ನ್ಯಾಷನಲ್ ಕೋಡ್ ನಿರ್ವಹಿಸಲ್ಪಡುತ್ತದೆ. : ಒಂದು ವರ್ಗೀಕರಣ ಆರಂಭಿಕ ವಿವರಣೆ ಐದು ಮುಖ್ಯ ಅವಶ್ಯಕತೆಗಳನ್ನು ಒಳಗೊಳ್ಳುತ್ತದೆ

  • ವರ್ಗ ಲ್ಯಾಟಿನ್ ಅಕ್ಷರಮಾಲೆಯನ್ನು ( ಹೊಸ ಜಾತಿಗಳು ಒಂದು ದ್ವಿಪದಿ , ಅಥವಾ ಇತರ ಶ್ರೇಯಾಂಕಗಳನ್ನು ಉನಿನಾಮಿನಲ್ ) 26 ಅಕ್ಷರಗಳನ್ನು ಆಧರಿಸಿ ಹೆಸರು ನೀಡಬೇಕು.
  • ಹೆಸರು (ಅಂದರೆ ಒಂದು ಸಮಾನ ನಾಮಕ ) ಅನನ್ಯ ಇರಬೇಕು .
  • ವಿವರಣೆ ಕನಿಷ್ಠ ಒಂದು ಹೆಸರು ಹೊಂದಿರುವ ಮಾದರಿ ಮಾದರಿಯ ಆಧರಿಸಿ ಮಾಡಬೇಕು .
  • ( ; ICN , ಲೇಖನ 38.2 ICZN ಸಂಹಿತೆ, ಲೇಖನ 13.1.1 ) ಇದು ಇತರ ವಿಷಗಳ ನಿಂದ ವರ್ಗವಾದ ಪ್ರತ್ಯೇಕಿಸಲು ಸಾಕಷ್ಟು ಲಕ್ಷಣಗಳು ಉಲ್ಲೇಖ ಒಳಗೊಂಡಿರಬೇಕು . ಎರಡೂ ಸಂಕೇತಗಳು ಉದ್ದೇಶಪೂರ್ವಕವಾಗಿ ತನ್ನ ಹೆಸರನ್ನು ವಿವರಿಸುವ ಒಂದು ವರ್ಗ ( ಅದರ ಪರಿಮಿತಿ ) ವಿಷಯವನ್ನು ವಿವರಿಸುವ ಪ್ರತ್ಯೇಕಿಸಲು .
  • ಈ ಮೊದಲ ನಾಲ್ಕು ಅವಶ್ಯಕತೆಗಳನ್ನು ಶಾಶ್ವತ ವೈಜ್ಞಾನಿಕ ದಾಖಲೆ, ಹಲವಾರು ಒಂದೇ ಪ್ರತಿಗಳನ್ನು ಪಡೆಯಬಹುದಾದ ಒಂದು ಕೆಲಸ ಪ್ರಕಟವಾದ ಮಾಡಬೇಕು .

ಆದಾಗ್ಯೂ, ಸಾಮಾನ್ಯವಾಗಿ ಹೆಚ್ಚು ಮಾಹಿತಿ ಇತ್ಯಾದಿ ವರ್ಗೀಕರಣ ಭೌಗೋಳಿಕ ವ್ಯಾಪ್ತಿಯ , ಪರಿಸರ ಟಿಪ್ಪಣಿಗಳು , ರಸಾಯನಶಾಸ್ತ್ರ , ನಡವಳಿಕೆ , ಹೇಗೆ ಸಂಶೋಧಕರು ತಮ್ಮ ವರ್ಗೀಕರಣಕ್ಕೆ ತಲುಪಲಿದೆ ಬದಲಾಗುತ್ತದೆ ನಂತಹ ಸೇರಿಸಲಾಗಿದೆ; ಲಭ್ಯವಿರುವ ಮಾಹಿತಿ ಆಧರಿಸಿ , ಮತ್ತು ಸಂಪನ್ಮೂಲಗಳು, ವಿಧಾನಗಳು ಸರಳ ಪರಿಮಾಣಾತ್ಮಕ ಅಥವಾ ಗುಣಾತ್ಮಕ ಬದಲಾಗುತ್ತದೆ ಕಂಪ್ಯೂಟರ್ ವಿವರಿಸಿ ಹೊಡೆಯುವ ವೈಶಿಷ್ಟ್ಯಗಳನ್ನು ಹೋಲಿಕೆಗಳು , DNA ಅನುಕ್ರಮ ಮಾಹಿತಿಯು ದೊಡ್ಡ ಪ್ರಮಾಣದ ವಿಶ್ಲೇಷಿಸುತ್ತದೆ .

ಸಹ taximetrics ಎಂದು phenetics , ರಲ್ಲಿ, ಜೀವಿಗಳ ಅವರ ಜೀವವಿಕಾಸ ಅಥವಾ ವಿಕಸನೀಯ ಸಂಬಂಧಗಳ , ಒಟ್ಟಾರೆ ಹೋಲಿಕೆ ಮೇಲೆ ಆಧರಿತವಾಗಿರುತ್ತದೆ ವರ್ಗೀಕರಿಸಲಾಗಿದೆ . ಇದು ವಿಭಿನ್ನತೆ ವರ್ಗಗಳ ನಡುವೆ ವಿಕಾಸಾತ್ಮಕ " ದೂರ " ಒಂದು ಅಳತೆ ಕಾರಣವಾಗುತ್ತದೆ. ಫೆನೆಟಿಕ್ ವಿಧಾನಗಳು ಫೆನೆಟಿಕ್ ವಿಧಾನಗಳು apomorphic ಲಕ್ಷಣಗಳು ನಿಂದ plesiomorphic ವ್ಯತ್ಯಾಸ ಇಲ್ಲ ಎಂದು, ಹೆಚ್ಚಾಗಿ ಕ್ಲಾಡಿಸ್ಟಿಕ್ ವಿಶ್ಲೇಷಣೆಗಳನ್ನು ಹಿಂದಿಕ್ಕಿದೆ , ಆಧುನಿಕ ಕಾಲದಲ್ಲಿ ಅಪರೂಪದ ಮಾರ್ಪಟ್ಟಿವೆ . ಆದಾಗ್ಯೂ, ಇಂತಹ ಸೇರುವ ನೆರೆಯ ಕೆಲವು ಫೆನೆಟಿಕ್ ವಿಧಾನಗಳು , ( ಉದಾಹರಣೆಗೆ ಬಯೆಸಿಯನ್ ನಿರ್ಣಯ ಎಂದು ) ಸುಧಾರಿತ ವಿಧಾನಗಳನ್ನು ತುಂಬಾ ಲೆಕ್ಕಾಚಾರದ ದುಬಾರಿ ಮಾಡಿದಾಗ ಜೀವವಿಕಾಸ ಒಂದು ಸಮಂಜಸವಾದ ಅಂದಾಜು ಎಂದು , ಕ್ಲಸಿಸ್ತಿಚ್ಸ್ ಒಳಗೆ ತಮ್ಮ ದಾರಿ ಕಂಡುಕೊಂಡಿದ್ದಾರೆ .

ಡೇಟಾಬೇಸ್ಗಳು

[ಬದಲಾಯಿಸಿ]

ಆಧುನಿಕ ಟ್ಯಾಕ್ಸಾನಮಿ ವರ್ಗೀಕರಣಗಳು ಮತ್ತು ತಮ್ಮ ದಸ್ತಾವೇಜನ್ನು ಹುಡುಕಲು ಮತ್ತು ಕ್ಯಾಟಲಾಗ್ ಡೇಟಾಬೇಸ್ ತಂತ್ರಜ್ಞಾನಗಳನ್ನು ಬಳಸುತ್ತದೆ. ಯಾವುದೇ ಸಾಮಾನ್ಯವಾಗಿ ಬಳಸುವ ಡೇಟಾಬೇಸ್ ಇಲ್ಲ, ಅಂತಹ ಪ್ರತಿ ದಾಖಲಿಸಲಾಗಿದೆ ಜಾತಿಗಳು ಪಟ್ಟಿ ಪ್ರಯತ್ನಿಸುತ್ತದೆ ಇದು ಲೈಫ್ ಕ್ಯಾಟಲಾಗ್ , ಎಂದು ಸಮಗ್ರ ದತ್ತಸಂಚಯಗಳನ್ನು ಇವೆ . ಕ್ಯಾಟಲಾಗ್ ಆಧುನಿಕ ವಿಜ್ಞಾನ ಎಂದು ಅಂದಾಜು 1.9 ಮಿಲಿಯನ್ ಜಾತಿಗಳನ್ನು ಹೆಚ್ಚು 74 % ವ್ಯಾಪ್ತಿ ಆರೋಪಿಸಿ ಮೇ 2012 ರ ಎಲ್ಲಾ ರಾಜ್ಯಗಳೂ 1.4 ಮಿಲಿಯನ್ ಜಾತಿಗಳನ್ನು ಪಟ್ಟಿ. ಮಾಡಿದ್ದಾರೆ.

ಪೂರಕ ಮಾಹಿತಿ

[ಬದಲಾಯಿಸಿ]

ಟಿಪ್ಪಣಿಗಳು

[ಬದಲಾಯಿಸಿ]
  1. ಈ ಪುಟವು ಇಂಗ್ಲೀಶ್ ವಿಕಿಪೀಡಿಯದ "Taxonomy (biology)" ಪುಟದ ಭಾಗಶಹ ಅನುವಾದ. (ಅನುವಾದದ ತಿದ್ದುಪಡಿ)
  2. ಎಂಟನೆಯ ತರಗತಿಯ ವಿಜ್ಞಾನ ಪಠ್ಯ, (ಕರ್ನಾಟಕ ಸರ್ಕಾರ) 2015, ಪುಟ 65, ಇಲ್ಲಿಯ ಜೀನಸ್‌ಗೆ ಜಾತಿಯ ಬದಲು ಕುಲವೆಂದು ಬದಲಿಸಲಾಗಿದೆ.


ಉಲ್ಲೇಖಗಳು

[ಬದಲಾಯಿಸಿ]
  1. Harper, Douglas. "Taxonomy". Online Etymology Dictionary. Retrieved 21 August 2016.
  2. ೨.೦ ೨.೧ Judd, W.S., Campbell, C.S., Kellogg, E.A., Stevens, P.F., Donoghue, M.J. (2007) Taxonomy. In Plant Systematics – A Phylogenetic Approach, Third Edition. Sinauer Associates, Sunderland.
  3. ೩.೦ ೩.೧ Simpson, Michael G. (2010). "Chapter 1 Plant Systematics: an Overview". Plant Systematics (2nd ed.). Academic Press. ISBN 978-0-12-374380-0.
  4. Angiosperm Phylogeny Group (2009), "An update of the Angiosperm Phylogeny Group classification for the orders and families of flowering plants: APG III", Botanical Journal of the Linnean Society, 161 (2): 105–121, doi:10.1111/j.1095-8339.2009.00996.x
  5. Wilkins, J. S. (5 February 2011). "What is systematics and what is taxonomy?". Retrieved 21 August 2016.
  6. Kirk, P.M., Cannon, P.F., Minter, D.W., Stalpers, J.A. eds. (2008) "Taxonomy". In Dictionary of the Fungi, 10th edition. CABI, Netherlands.
  7. Walker, P.M.B., ed. (1988). The Wordsworth Dictionary of Science and Technology. W. R. Chambers Ltd. and Cambridge University Press.
  8. ೮.೦ ೮.೧ Lawrence, E. (2005). Henderson's Dictionary Of Biology. Pearson/Prentice Hall. ISBN 9780131273849.
  9. Wheeler, Quentin D. (2004). "Taxonomic triage and the poverty of phylogeny". In H. C. J. Godfray & S. Knapp. Taxonomy for the twenty–first century. Philosophical Transactions of the Royal Society. 359. pp. 571–583. doi:10.1098/rstb.2003.1452. PMC 1693342. PMID 15253345.
  10. Datta 1988.
  11. Stace 1989.
  12. Stuessy 2009.
  13. Knapp, S. (2010). "What's in a name? A history of taxonomy".
  14. ೧೪.೦ ೧೪.೧ ೧೪.೨ Manktelow, M. (2010) History of Taxonomy. Lecture from Dept. of Systematic Biology, Uppsala University.
  15. Bannanje, Govindacharya (2011). Essence of Bhagavata. Udupi: Ishavasya Prathisthana. pp. 57, 58. ISBN 978-81-920104-3-4.
  16. Mayr, E. (1982) The Growth of Biological Thought. Belknap P. of Harvard U.P, Cambridge (Mass.)
  17. Linnaeus, C. (1735) Systema naturae, sive regna tria naturae systematice proposita per classes, ordines, genera, & species. Haak, Leiden
  18. Linnaeus, C. (1753) Species Plantarum. Stockholm, Sweden
  19. Linnaeus, C. (1758) Systema naturae, sive regna tria naturae systematice proposita per classes, ordines, genera, & species, 10th Edition. Haak, Leiden
  20. Donk, M.A. (1957). "Typification and later starting-points" (PDF). Taxon. 6 (9): 245–256. doi:10.2307/1217493. JSTOR 1217493.
  21. Secord, James A. (2000). "Victorian Sensation: The Extraordinary Publication, Reception, and Secret Authorship of Vestiges of the Natural History of Creation". Chicago: University of Chicago Press. ISBN 978-0-226-74410-0. Archived from the original on 16 May 2008.
  22. Huxley, T. H. (1876): Lectures on Evolution. New York Tribune. Extra. no 36. In Collected Essays IV: pp 46–138 original text w/ figures
  23. Rudwick, M. J. S. (1985). The Meaning of Fossils: Episodes in the History of Palaeontology. University of Chicago Press. p. 24. ISBN 0-226-73103-0.
  24. Cracraft, Joel and Donaghue, Michael J. (eds.) (2004). Assembling the Tree of Life. Oxford, England: Oxford University Press. ISBN 0195172345. pp. 45, 78 and 555
  25. ೨೫.೦ ೨೫.೧ Cavalier-Smith, T. (1998). "A revised six-kingdom system of life". Biological Reviews. 73 (03): 203–66. doi:10.1111/j.1469-185X.1998.tb00030.x. PMID 9809012.
  26. Luketa S. (2012). "New views on the megaclassification of life" (PDF). Protistology. 7 (4): 218–237.
  27. Linnaeus, C. (1735). Systemae Naturae, sive regna tria naturae, systematics proposita per classes, ordines, genera & species.
  28. Haeckel, E. (1866). Generelle Morphologie der Organismen. Reimer, Berlin.
  29. Chatton, É. (1925). "Pansporella perplexa. Réflexions sur la biologie et la phylogénie des protozoaires". Annales des Sciences Naturelles - Zoologie et Biologie Animale. 10-VII: 1–84.
  30. Copeland, H. (1938). "The kingdoms of organisms". Quarterly Review of Biology. 13: 383–420. doi:10.1086/394568.
  31. Whittaker, R. H. (January 1969). "New concepts of kingdoms of organisms". Science. 163 (3863): 150–60. Bibcode:1969Sci...163..150W. doi:10.1126/science.163.3863.150. PMID 5762760.
  32. Woese, C.; Kandler, O.; Wheelis, M. (1990). "Towards a natural system of organisms: proposal for the domains Archaea, Bacteria, and Eucarya.". Proceedings of the National Academy of Sciences of the United States of America. 87 (12): 4576–9. Bibcode:1990PNAS...87.4576W. doi:10.1073/pnas.87.12.4576. PMC 54159. PMID 2112744.


ಗ್ರಂಥಸೂಚಿ

[ಬದಲಾಯಿಸಿ]
  • Stace, Clive A. (1989) [1980]. Plant taxonomy and biosystematics (2nd. ed.). Cambridge: Cambridge University Press. ISBN 9780521427852. Retrieved 29 April 2015.
  • Datta, Subhash Chandra (1988). Systematic Botany (4 ed.). New Delhi: New Age Intl. ISBN 8122400132. Retrieved 25 January 2015.
  • Stuessy, Tod F. (2009). Plant Taxonomy: The Systematic Evaluation of Comparative Data. Columbia University Press. ISBN 0-231-14712-0. Retrieved 6 February 2014.