ಆಸ್ತ್ರೇಲೋಪಿಥಿಕಸ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Australopithecus couple.jpg

ವಿಜ್ಞಾನ ಮತ್ತು ಮಾನವನ ಪೂರ್ವ ಇತಿಹಾಸ[ಬದಲಾಯಿಸಿ]


ಮಾನವನ ಮೂಲ ಪುರುಷ ರಾದ ಹೋಮಿನಿಡ್ ಗಳು ಯಾರು?

ಅಸ್ಟ್ರಲೋಪಿತಿಕಸ್ ಅಪರೆನ್ಸಿಸ್[ಬದಲಾಯಿಸಿ]


  • ಹೋಮಿನಿಡ್ ಗಳೆಂದರೆ ಮಾನವನ ಮೂಲ ಪುರುಷರಾದ ನರವಾನರರು (ಮನಷ್ಯನನ್ನುಹೋಲುವ ಕಪಿ-ಏಪ್ಸ್ ಅಥವಾ ಮಂಗನಲ್ಲ, ಚಿಂಪಾಜಿತರದವು)). ಇವರಲ್ಲಿ ಅನೇಕ ಬಗೆ. ಇವರಲ್ಲಿ ಬಹಳ ಪ್ರಾಚೀನರು, ೪೪ ಲಕ್ಷ ವರ್ಷದ ಹಿಂದಿನ ಆರ್ಡಿಪಿತಿಕಸ್ ರಾಮಿಡಸ್, ನಂತರದ ೪೧ ಲಕ್ಷ ವರ್ಷದ ಹಿಂದೆ ಇದ್ದ , ಅಸ್ಟ್ರಲೋಪಿತಿಕಸ್ ಅನಮೆನ್ನಿಸ್. ಇವರಿಗೆ ಇನ್ನೂ ಸೊಂಟ ಪೂರಾ ನೆಟ್ಟಗೆ ಇರಲಿಲ್ಲವೆಂಬ ಅನುಮಾನವಿದೆ.
  • ಮೊದಲು ಅವತರಿಸಿದ ಹೋಮಿನಿಡ್‌ಳು, ಜೈಗಾಂಟೋಪಿತೀಕಸ್, ರಾಮಾಪಿತೀಕಸ್, ಶಿವಾಪಿತೀಕಸ್, ಅಸ್ಟ್ರಲೋಪಿತೀಕಸ್, ನಂತರದ, ಹೋಮೋಹ್ಯಾಬಿಲಿಸ್ ಜಾತಿಯವು (ಮಾನವನನ್ನು ಹೋಲುವವು), ಹೋಮೋ ಎರ್ಗಾಸ್ಟರ್ , ಹೋಮೋ ಇರೆಕ್ಟಸ್, ನಿಯಾಂಡರ್ ಥಾಲ್ (ಯೂರೋಪಿನಲ್ಲಿ ಸಿಕ್ಕಿದ ಪ್ರಾಚೀನ ಮಾನವನ ಪಳಿಯುಳಿಕೆ) , ಕ್ರೋಮ್ಯಾನನ್ (ಕ್ರೋಮ್ಯಾಗ್ನನ್?), ಈ ಎಲ್ಲಾ ನರ ವಾನರ (ಹೋಮಿನಿಡ್) ಜಾತಿಗಳಿಗೂ, ನಮ್ಮ (ಮಾನವನ) ಮೂಲ ಪಿತಾಮಹ ಹಾಗೂ, ಎಲ್ಲಾ ಹೋಮೋಸೇಪಿಯನ್(ಈಗಿನ ಮಾನವನ ಪೂರ್ವಜ - ಕಪಿಮಾನವ) ಗಳ ಹುಟ್ಟಿಗೆ ಕಾರಣ ಆ ಒಂದು ಹೋಮಿನಿಡ್ ಪ್ರಬೇಧ (ನರವಾನರ ಜಾತಿ ) ಯಾವುದು ಎಂದು ವಿಜ್ಞಾನಿಗಳು ಹುಡುಕಿ ತೀರ್ಮಾನಕ್ಕೆ ಬಂದಿದ್ದಾರೆ, ಹಾಗೆ ಸಿಕ್ಕಿದ ಲಕ್ಷಾಂತರ ವರ್ಷಗಳ ಹಿಂದಿನ ಆ ನರವಾನರರ ಎಲುಬುಗಳನ್ನು ಜೋಡಿಸಿ ಪರೀಕ್ಷಿಸಿದ್ದಾರೆ,
  • ಅವರ ತೀರ್ಮಾನದಂತೆ, ಸುಮಾರು ಮೂವತ್ತೆರಡು ಲಕ್ಷ ವರುಷಗಳ ಹಿಂದೆ ಆಫ್ರಿಕಾ ಖಂಡದಲ್ಲಿದ್ದ ಹೋಮಿನಡ್ ಪ್ರಬೇಧ ಅಸ್ಟ್ರಲೋಪಿತಿಕಸ್ ಅಪರೆನ್ಸಿಸ್ (ಸೇಪಿಯನ್ಸ್ ಇವರ ಮಿಶ್ರ ತಳಿ) ಅಥವಾ ಅಸ್ಟ್ರಲೋಪಿತಿಕಸ್ ಸೇಪಿಯನ್ಸ್ ನಮ್ಮ ಮೂಲ ಪಿತಾಮಹ ಎಂದು ನಿರ್ಧರಿಸಿದ್ದಾರೆ. ಹಳೆಯ ಮೂಳೆಗಳ ಪಳಿಯುಳಿಕೆಗಳಲ್ಲಿ ಏಳು ಪ್ರಬೇಧ (ಜಾತಿ ) ಕಂಡು ಬಂದಿದ್ದು, ಅದರಲ್ಲಿ ಅಪರೆನ್ಸಿಸ್ /ಸೇಪಿಯನ್ಸ್ ಜಾತಿಯ ನೇರ ಸೊಂಟದ ವಾನರನೇ ಮಾನವನ ಮೂಲವೆಂದು, ಎಂದರೆ ನಮ್ಮ ಪಿತಾಮಹನೆಂದು, ತೀರ್ಮಾನಿಸಿದ್ದಾರೆ. ಈ ವಾನರರ ೩೦-೪೦ರ ಗುಂಪುಗಳು ಆಫ್ರಿಕಾದಲ್ಲೇ ಸುಮಾರು ೪ಲಕ್ಷ (೪೦ಲವ)ವರ್ಷಗಳ ಕಾಲ ಬಾಳುವೆ ನಡೆಸಿರಬೇಕೆಂದು ನಿರ್ಣಯಿಸಿದ್ದಾರೆ. (ನಂತರ ಹರಡಿದ್ದಾರೆ)
  • ಅವಕ್ಕೆ ಇನ್ನೂ ಭಾಷೆ ಇಲ್ಲ, ಬೆಂಕಿಯ ಉಪಯೋಗ ಗೊತ್ತಿಲ್ಲ, ಪ್ರಾಣಿಗಳ ಜೀವನಕ್ರಮ, ಗಂಡು ಸುಮಾರು ೫ ಅಡಿ ಎತ್ತರ, ಹೆಣ್ಣು ಮೂರುವರೆ ಯಿಂದ ನಾಲ್ಕು ಅಡಿ ಎತ್ತರ. ಇದು ಪರಿಪೂರ್ಣ ದ್ವಿ ಪಾದಿಯಾಗಿತ್ತು ಎಂದು ನಿರ್ಧರಿಸಿದ್ದಾರೆ. ನೆಡಿಗೆ ಮತ್ತು ಓಟಕ್ಕೆ ಎರಡು ಕಾಲುಗಳ ಭದ್ರ ಆಧಾರ, ಕೈ ಗಳ ಸ್ವಾತಂತ್ರ್ಯವೇ ಮುಂದಿನ ನಾಗರೀಕತೆಯ ಬೆಳವಣಿಗೆಗೆ ಕಾರಣವೆಂಬುದು, ವಿಜ್ಞಾನಿಗಳ ತೀರ್ಮಾನ.

ಆಧಾರ :[ಬದಲಾಯಿಸಿ]


  • ವಿಕಿಪೀಡಿಯಾ ಇಂಗ್ಲಿಷ್ ತಾಣಗಳು
  • ಜೀವ ಜೀವನ -ಡಾ.ಶಿವರಾಮಕಾರಂತ
  • ವಿವಿಧ ಬಿಡಿ ಲೇಖನಗಳು
ಮಾನವನ ವಿಕಾಸ
ನಕ್ಷೆ ನೋಡಿ