ವಿಷಯಕ್ಕೆ ಹೋಗು

ಆಸ್ತ್ರೇಲೋಪಿಥಿಕಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಸ್ಟ್ರಾಲೋಪಿತೆಕಸ್
ಕಾಲಮಾನದ ವ್ಯಾಪ್ತಿ: ೪.೫ ರಿಂದ ೧.೯೭೭ ದವಹಿಂ
ತಡವಾದ ಪ್ಲಿಯೊಸಿನ್‌ನಿಂದ ಆರಂಭಿಕ ಪ್ಲಿಸ್ಟೋಸಿನ್
lll
ಆಸ್ಟ್ರಾಲೋಪಿತೆಕಸ್ ಆಪ್ರಿಕಾನಸ್
ಮರುರಚನೆ ಸ್ಯಾನ್‌ ಡಿಯಾಗೊ ಮ್ಯುಸಿಯಂ ಆಫ್ ಮ್ಯಾನ್
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ: ಪ್ರಾಣಿ
ವಂಶ: ಕಾರ್ಡೇಟ
ಕ್ಲಾಡ್: ಸಿನಾಪ್ಸಿಡ
ವರ್ಗ: ಸಸ್ತನಿ
ಗಣ: ಪ್ರೈಮೇಟ್
ಉಪಗಣ: ಹ್ಯಾಪ್ಲೋರ್ಹಿನಿ
ಕುಟುಂಬ: ಹೋಮಿನಿಡೇ
ಬುಡಕಟ್ಟು ಹೋಮಿನಿನಿ
ಉಪಬುಡಕಟ್ಟು ಆಸ್ಟ್ರಾಲೋಪಿತೆಸಿನ
ಕುಲ: †ಆಸ್ಟ್ರಾಲೋಪಿತೆಕಸ್
ಆರ್.ಎ ಡಾರ್ಟ್, ೧೯೨೫
ಮಾದರಿ ಪ್ರಭೇದ
†ಆಸ್ಟ್ರಾಲೋಪಿತೆಕಸ್ ಆಫ್ರಿಕಾನಸ್
ಡಾರ್ಟ್, ೧೯೨೫
ಪ್ರಭೇದಗಳು
†ಆ. ಆಫ್ರಿಕಾನಸ್

†ಆ. ಆಫ್ರಿಕಾನಸ್
†ಆ. ಡೆಯಿರೆಮೆಡ
†ಆ. ಗಾರ್ಹಿ
†ಆ. ಸೆಡಿಬ
ಪರಾಂತ್ರೋಪಸ್ ಎಂದು ಸಹ ಕರೆಯಲಾಗುತ್ತದೆ
†ಪ. ಐತಿಯೋಪಿಕಸ್
†ಪ. ರೊಬಸ್ಟಸ್
†ಪ. ಬೋಯಿಸೇಯಿ
ಪ್ರಯೇಂತ್ರೊಪಸ್ ಎಂದು ಸಹ ಕರೆಯಲಾಗುತ್ತದೆ
†ಆ. ಅಫಾರೆನ್ಸಿಸ್
†ಆ. ಅನಮೆನ್ಸಿಸ್
†ಆ. ಬಹ್ರೆಲ್‌ಘಜಲಿ

ವಿಜ್ಞಾನ ಮತ್ತು ಮಾನವನ ಪೂರ್ವ ಇತಿಹಾಸ

[ಬದಲಾಯಿಸಿ]

ಮಾನವನ ಮೂಲ ಪುರುಷರಾದ ಹೋಮಿನಿಡ್ ಗಳು ಯಾರು?

ಅಸ್ಟ್ರಲೋಪಿತಿಕಸ್ ಅಪರೆನ್ಸಿಸ್

[ಬದಲಾಯಿಸಿ]

  • ಹೋಮಿನಿಡ್ ಗಳೆಂದರೆ ಮಾನವನ ಮೂಲ ಪುರುಷರಾದ ನರವಾನರರು (ಮನಷ್ಯನನ್ನುಹೋಲುವ ಕಪಿ-ಏಪ್ಸ್ ಅಥವಾ ಮಂಗನಲ್ಲ, ಚಿಂಪಾಜಿತರದವು)). ಇವರಲ್ಲಿ ಅನೇಕ ಬಗೆ. ಇವರಲ್ಲಿ ಬಹಳ ಪ್ರಾಚೀನರು, ೪೪ ಲಕ್ಷ ವರ್ಷದ ಹಿಂದಿನ ಆರ್ಡಿಪಿತಿಕಸ್ ರಾಮಿಡಸ್, ನಂತರದ ೪೧ ಲಕ್ಷ ವರ್ಷದ ಹಿಂದೆ ಇದ್ದ , ಅಸ್ಟ್ರಲೋಪಿತಿಕಸ್ ಅನಮೆನ್ನಿಸ್. ಇವರಿಗೆ ಇನ್ನೂ ಸೊಂಟ ಪೂರಾ ನೆಟ್ಟಗೆ ಇರಲಿಲ್ಲವೆಂಬ ಅನುಮಾನವಿದೆ.
  • ಮೊದಲು ಅವತರಿಸಿದ ಹೋಮಿನಿಡ್‌ಳು, ಜೈಗಾಂಟೋಪಿತೀಕಸ್, ರಾಮಾಪಿತೀಕಸ್, ಶಿವಾಪಿತೀಕಸ್, ಅಸ್ಟ್ರಲೋಪಿತೀಕಸ್, ನಂತರದ, ಹೋಮೋಹ್ಯಾಬಿಲಿಸ್ ಜಾತಿಯವು (ಮಾನವನನ್ನು ಹೋಲುವವು), ಹೋಮೋ ಎರ್ಗಾಸ್ಟರ್ , ಹೋಮೋ ಇರೆಕ್ಟಸ್, ನಿಯಾಂಡರ್ ಥಾಲ್ (ಯೂರೋಪಿನಲ್ಲಿ ಸಿಕ್ಕಿದ ಪ್ರಾಚೀನ ಮಾನವನ ಪಳಿಯುಳಿಕೆ) , ಕ್ರೋಮ್ಯಾನನ್ (ಕ್ರೋಮ್ಯಾಗ್ನನ್?), ಈ ಎಲ್ಲಾ ನರ ವಾನರ (ಹೋಮಿನಿಡ್) ಜಾತಿಗಳಿಗೂ, ನಮ್ಮ (ಮಾನವನ) ಮೂಲ ಪಿತಾಮಹ ಹಾಗೂ, ಎಲ್ಲಾ ಹೋಮೋಸೇಪಿಯನ್(ಈಗಿನ ಮಾನವನ ಪೂರ್ವಜ - ಕಪಿಮಾನವ) ಗಳ ಹುಟ್ಟಿಗೆ ಕಾರಣ ಆ ಒಂದು ಹೋಮಿನಿಡ್ ಪ್ರಭೇದ (ನರವಾನರ ಜಾತಿ ) ಯಾವುದು ಎಂದು ವಿಜ್ಞಾನಿಗಳು ಹುಡುಕಿ ತೀರ್ಮಾನಕ್ಕೆ ಬಂದಿದ್ದಾರೆ, ಹಾಗೆ ಸಿಕ್ಕಿದ ಲಕ್ಷಾಂತರ ವರ್ಷಗಳ ಹಿಂದಿನ ಆ ನರವಾನರರ ಎಲುಬುಗಳನ್ನು ಜೋಡಿಸಿ ಪರೀಕ್ಷಿಸಿದ್ದಾರೆ,
  • ಅವರ ತೀರ್ಮಾನದಂತೆ, ಸುಮಾರು ಮೂವತ್ತೆರಡು ಲಕ್ಷ ವರುಷಗಳ ಹಿಂದೆ ಆಫ್ರಿಕಾ ಖಂಡದಲ್ಲಿದ್ದ ಹೋಮಿನಡ್ ಪ್ರಭೇದ ಅಸ್ಟ್ರಲೋಪಿತಿಕಸ್ ಅಪರೆನ್ಸಿಸ್ (ಸೇಪಿಯನ್ಸ್ ಇವರ ಮಿಶ್ರ ತಳಿ) ಅಥವಾ ಅಸ್ಟ್ರಲೋಪಿತಿಕಸ್ ಸೇಪಿಯನ್ಸ್ ನಮ್ಮ ಮೂಲ ಪಿತಾಮಹ ಎಂದು ನಿರ್ಧರಿಸಿದ್ದಾರೆ. ಹಳೆಯ ಮೂಳೆಗಳ ಪಳಿಯುಳಿಕೆಗಳಲ್ಲಿ ಏಳು ಪ್ರಭೇದ (ಜಾತಿ ) ಕಂಡು ಬಂದಿದ್ದು, ಅದರಲ್ಲಿ ಅಪರೆನ್ಸಿಸ್ /ಸೇಪಿಯನ್ಸ್ ಜಾತಿಯ ನೇರ ಸೊಂಟದ ವಾನರನೇ ಮಾನವನ ಮೂಲವೆಂದು, ಎಂದರೆ ನಮ್ಮ ಪಿತಾಮಹನೆಂದು, ತೀರ್ಮಾನಿಸಿದ್ದಾರೆ. ಈ ವಾನರರ ೩೦-೪೦ರ ಗುಂಪುಗಳು ಆಫ್ರಿಕಾದಲ್ಲೇ ಸುಮಾರು ೪ಲಕ್ಷ (೪೦ಲವ)ವರ್ಷಗಳ ಕಾಲ ಬಾಳುವೆ ನಡೆಸಿರಬೇಕೆಂದು ನಿರ್ಣಯಿಸಿದ್ದಾರೆ. (ನಂತರ ಹರಡಿದ್ದಾರೆ)
  • ಅವಕ್ಕೆ ಇನ್ನೂ ಭಾಷೆ ಇಲ್ಲ, ಬೆಂಕಿಯ ಉಪಯೋಗ ಗೊತ್ತಿಲ್ಲ, ಪ್ರಾಣಿಗಳ ಜೀವನಕ್ರಮ, ಗಂಡು ಸುಮಾರು ೫ ಅಡಿ ಎತ್ತರ, ಹೆಣ್ಣು ಮೂರುವರೆ ಯಿಂದ ನಾಲ್ಕು ಅಡಿ ಎತ್ತರ. ಇದು ಪರಿಪೂರ್ಣ ದ್ವಿ ಪಾದಿಯಾಗಿತ್ತು ಎಂದು ನಿರ್ಧರಿಸಿದ್ದಾರೆ. ನೆಡಿಗೆ ಮತ್ತು ಓಟಕ್ಕೆ ಎರಡು ಕಾಲುಗಳ ಭದ್ರ ಆಧಾರ, ಕೈ ಗಳ ಸ್ವಾತಂತ್ರ್ಯವೇ ಮುಂದಿನ ನಾಗರೀಕತೆಯ ಬೆಳವಣಿಗೆಗೆ ಕಾರಣವೆಂಬುದು, ವಿಜ್ಞಾನಿಗಳ ತೀರ್ಮಾನ.
  • ಮೇಲಿನ ಮಾಹಿತಿಗೆ ಇತ್ತೀಚಿನ ಸಂಶೋಧನೆಗಳು ತಿದ್ದುಪಡಿ ತಂದಿವೆ. ಈ ಪ್ರಕಾರ ಜಿಗಾಂಟೋಪಿತೆಕಸ್, ಶಿವಾಪಿತೆಕಸ್‌ಗಳನ್ನು (ವಾಸ್ತವದಲ್ಲಿ ರಾಮಾಪಿತೆಕಸ್ ಮತ್ತು ಬ್ರಹ್ಮೋಪಿತೆಕಸ್ ಶಿವಾಪಿತೆಕಸ್‌ಗೆ ಅರಂಭದಲ್ಲಿ ಬೇರೆ ಬೇರೆ ಎಂದು ಭಾವಿಸಿ ಕೊಟ್ಟ ಹೆಸರುಗಳು) [][] ಹೋಮಿನಿನಿ ಗುಂಪಿಗೆ (ಬುಡಕಟ್ಟು) ಸೇರಿಸಲಾಗಿಲ್ಲ.[] ಗಮನಿಸ ಬೇಕಾದುದೆಂದರೆ ಈ ಬುಡಕಟ್ಟು ಚಿಂಪಾಜಿ ಮತ್ತು ಬೊನಬೊಗಳನ್ನು ಸಹ ಒಳಗೊಳ್ಳುತ್ತದೆ. ಮಾನವನ ಮೂಲವೆಂದು ಭಾವಿಸಲಾದ ದ್ವಿಪಾದಿಗಳನ್ನು ಗುರುತಿಸಲು ಈ ಬುಡಕಟ್ಟನ್ನು ಪಾನಿನ (ಚಿಂಪಾಜಿ ಮತ್ತು ಬೊನೊಬಗಳನ್ನು ಒಳಗೊಳ್ಳುವ) ಮತ್ತು ಹೋಮಿನಿನ (ಮಾನವ ಮತ್ತು ಇತರ ದ್ವಿಪಾದಿಗಳು) ಉಪಬುಡಕಟ್ಟು ಎಂಬ ವಿಭಜನೆಯನ್ನು ೧೯೯೬ರಲ್ಲಿ ಪ್ರಸ್ತಾಪಿಸಲಾಗಿದ್ದು ಇದನ್ನೇ ಸಾಮಾನ್ಯವಾಗಿ ಅನುಸರಿಸುವಂತೆ ಭಾಸವಾಗುತ್ತದೆ.[]
  • ಒಂದು ಮೂಲದ ಪ್ರಕಾರ ಹೋಮಿನಿನ ಉಪಬುಡಕಟ್ಟಿನಲ್ಲಿ ಹೋಮೊ, ಆಸ್ಟ್ರಾಲೋಪಿತೆಕಸ್, ಪರಾಂತ್ರೋಪಸ್, ಆರ್ಡಿಪಿತೆಕಸ್, ಒರೊರಿಯನ್ ಮತ್ತು ಸಹೇಲಾಂತ್ರೊಪಸ್ ಕುಲಗಳನ್ನು (ಜೀನಸ್) ಸೇರಿಸಲಾಗಿದೆ.[] ಇನ್ನೊಂದು ಮೂಲವು ಹೋಮೋ ಪ್ರಭೇದವನ್ನು ಹೊರತು ಪಡಿಸಿ ಉಳಿದೆಲ್ಲವನ್ನೂ ಅಸ್ಟ್ರಾಲೋಪಿತೆಸಿನ ಉಪಬುಡಕಟ್ಟಿನಲ್ಲಿ ಇರಿಸುತ್ತದೆ.[] ಆದರೆ ಆಧುನಿಕ ಜೀವ ವರ್ಗೀಕಣವು ಏಕಮೂಲ ವಂಶದನ್ನು ಗಣನೆಗೆ ತೆಗೆದುಕೊಳ್ಳುತ್ತದೆ (ಕ್ಲಾಡಿಸ್ಟಿಕ್ ವರ್ಗೀಕರಣ).[] ಹೀಗಾಗಿ ಸಹೇಲಾಂತ್ರೋಪಸ್‌ನ್ನು ಈ ಉಪಬುಡಕಟ್ಟಿನಲ್ಲಿ ಸೇರಿಸುವುದರ ಬಗೆಗೆ ಏಕಾಭಿಪ್ರಾಯವಿದ್ದಂತೆ ತೋರುವುದಿಲ್ಲ. ಏಕೆಂದರೆ ಏಕಮೂಲ ‌ವಂಶದ ಆಧಾರದ ಮೇಲಿನ ಉಪಬುಡಕಟ್ಟಿನ ಕವಲೊಡೆಯುವಿಕೆಯನ್ನು ಚಿಂಪಾಜಿ ಮತ್ತು ಮಾನವ ಕವಲು ಬೇರೆಯಾಗುವುದರ ಮೇಲೆ ಅವಲಂಭಿಸಿದೆ. ಅಧ್ಯಯನಗಳು ಬೇರೆ ಬೇರೆ ವಂಶವಾಹಿಗಳಿಗೆ ಬೇರೆ ಬೇರೆ ಕಾಲಮಾನ ಕೊಡುತ್ತಿವೆ ಮತ್ತು ಈ ಕವಲೊಡೆಯುವಿಕೆಯು ತಟ್ಟನೆ ಆದಂತ ಘಟನೆಯಾಗಿರದೆ ಸುಮಾರು ೪ ದಶಲಕ್ಷ ವರುಷಗಳ ವರೆಗೂ ಹಬ್ಬಿದ್ದು ಈ ಕಾಲಮಾನದಲ್ಲಿ ಈ ಕವಲೊಡೆದ ಗುಂಪುಗಳ ನಡುವೆ ದೊಡ್ಡ ಮಟ್ಟದಲ್ಲಿ ಸಂಕರವಾಯಿತು ಎಂದು ಭಾವಿಸಲಾಗಿದೆ.[] ಇದು ಈ ಕವಲೊಡೆಯುವಿಕೆ ಆಧಾರದ ವರ್ಗೀಕರಣಕ್ಕೆಕೆಲವು ತೊಂದರೆಗಳನ್ನು ತಂದಿದೆ.
    • ಸಹೇಲಾಂತ್ರೊಪಸ್‌ನ ಪತ್ತೆಯಾದ ಒಂದು ಪ್ರಭೇದ ಟಚಡೆನ್ಸಿಸ್‌. ಇದರ ಹೆಡತಲೆಯ (ಆಕ್ಸಿಪೆಟಲ್) ಮೂಳೆಯ ರಂಧ್ರವು (ಫೊರಾಮೆನ್ ಮ್ಯಾಗ್ನಮ್) ಮುಂಭಾಗದಲ್ಲಿದೆ ಎಂದು ಹೇಳಿಕೊಂಡಿರುವುದು ಅದು ದ್ವಿಪಾದಿಯಾಗಿರುವ ಸಾಧ್ಯತೆಯನ್ನು ಹೆಚ್ಚಿಸಿದೆ.[] ಇಲ್ಲಿ (ಮತ್ತು ಈ ಕೆಳಗಿನ ಚಿತ್ರದಲ್ಲಿ ತೋರಿಸಿದಂತೆ) ಮತ್ತು ಕೆಲವೆಡೆ ಸಹೇಲಾಂತ್ರೊಪಸ್‌ನ್ನು ಹೊಮೊ ಉಪಬುಡಕಟ್ಟಿನಲ್ಲಿ ಸೇರಿಸಲಾಗಿದೆ.
    • ಆಸ್ಟ್ರಾಲೋಪಿತೆಕಸ್ ಪ್ರಭೇದದಲ್ಲಿ ಪರಾಂತ್ರೋಪಸ್ ಪ್ರಭೇದವನ್ನೂ ತೋರಿಸಲಾಗಿದೆ (ಮೇಲಿನ ಬಾಕ್ಸ್ ನೋಡಿ-ಈ ಬಗೆಗೂ ಏಕಾಭಿಪ್ರಾಯವಿದ್ದಂತೆ ಕಾಣುವುದಿಲ್ಲ). ಈ ಕುಲದ ಹಲವು ಪ್ರಭೇದಗಳು ಪೂರ್ವ ಮತ್ತು ಉತ್ತರ ಆಫ್ರಿಕಾದಲ್ಲಿ ಸುಮಾರು ೩.೫ ದಶಲಕ್ಷ ವರುಷಗಳ ಹಿಂದೆ ಬದುಕಿದ್ದವು. ಇವು ದ್ವಿಪಾದಿಗಳಾಗಿದ್ದವು ಎನ್ನಲು ಉಲ್ಲೇಖಿಸಲಾದ ಇನ್ನೊಂದು ಪುರಾವೆ (ಅವುಗಳ ಮೂಳೆಗಳಲ್ಲದೆ) ತಂಜೇನಿಯಾದ ಲಯಿಟೊಲಿಯಲ್ಲಿ ಪತ್ತೆಯಾದ ಕಾಲಿನ ಹೆಜ್ಜೆಗಳ ಗುರುತುಗಳು. ಇವುಗಳ ಕಾಲಮಾನ ಸುಮಾರು ೩.೬ ದವಹಿಂ ಎಂದು ನಿರ್ಣಯಿಸಲಾಗಿದೆ ಮತ್ತು ಇಂದು ತಿಳಿದಂತೆ ಈ ಕಾಲಮಾನದಲ್ಲಿ ಈ ಪ್ರಭೇದದ ಹೊರತು ಬೇರೆ ಯಾವ ಹೊಮಿನಿನ್ ಪ್ರಭೇದಗಳೂ ಇರಲಿಲ್ಲವಾದ್ದರಿಂದ ಈ ಹೆಜ್ಜೆ ಗುರುತುಗಳಿಗೆ ಆಸ್ಟ್ರಾಲೋಪಿತೆಕಸ್ ಕಾರಣ ಎಂದು ಭಾವಿಸಲಾಗಿದೆ.[]
    • ಇನ್ನು ಹೋಮೋ ಪ್ರಬೇದಗಳಲ್ಲಿ ಹೋಮೋ ಹೆಬಿಲಿಸ್, ಹೋಮೋ ಎರೆಕ್ಟಸ್ ಮತ್ತು ಆಧುನಿಕ ಮಾನವ ಹೋಮೋ ಸೆಪಿಯನ್ಸ್ ಅಲ್ಲದೆ ಇತರ ಹಲವು ಪ್ರಭೇದಗಳನ್ನು ಸೇರಿಸಲಾಗಿದೆ. ಎಂದಿನಂತೆ ಈ ಬಗೆಗೆ ಏಕಾಭಿಪ್ರಾಯವಿಲ್ಲ.[]
    • ಮೊದಲ ಕಲ್ಲಿನ ಪರಿಕರಗಳ ಕುರುಹು ೩೩ ಲಕ್ಷ ವರುಷಗಳಷ್ಟು ಹಿಂದೆ ಹೋಗುತ್ತದೆ. ಇದು ಹೋಮೋ ಪ್ರಭೇದಗಳಿಗೂ ಮುಂಚಿನ ಕಾಲಮಾನ ಕೊಡುತ್ತಿದ್ದು ಬಹುಶಹ ಹೋಮೋ ಕುಲಕ್ಕೂ ಹಿಂದಿನ ಜೀವಿಗಳು ಈ ಪರಿಕರಗಳನ್ನು ಬಳಸಿರ ಬೇಕು.[] ಮೊದಲ ಬೆಂಕಿಯ ಹತೋಟಿಯ ಬಗೆಗೆ ನಿಸಂದಿಗ್ಧ ಪುರಾವೆಗಳ ಕಾಲಮಾನ ೪ ಲಕ್ಷ ವರುಷಗಳಷ್ಟು ಈಚಿನದು ಎಂದು ಹಲವು ತಜ್ಞರು ಅಭಿಪ್ರಾಯ ಪಡುತ್ತಾರೆ. ಆದರೆ ಇಂತಹ ಸಾಧ್ಯತೆಯ ವ್ಯಾಪ್ತಿಯಾದರೂ ೧೭ ಲಕ್ಷ ವರುಷದಷ್ಟು ಹಿಂದೆ ಹೋಗುತ್ತದೆ.[೧೦] ಭಾಷೆಯ ಹುಟ್ಟಿನ ಬಗೆಗಿನ ಅಧ್ಯಯನ ಹೇಗೆ ಮುಂದುವರೆಯ ಬೇಕು ಎಂಬುದರ ಬಗೆಗೆ ಏಕಾಭಿಪ್ರಾಯವಿಲ್ಲ. ನೋಮ್ ಚೋಮ್‌ಸ್ಕಿ ೧ ಲಕ್ಷ ವರುಷಗಳ ಹಿಂದಿನ ಅಕಸ್ಮಿಕ ವ್ಯತ್ಯಯನ ಈ ಶಕ್ತಿ ಕೊಟ್ಟಿತು ಎಂದು ಭಾವಿಸುತ್ತಾರೆ. ಆಸ್ಟ್ರಾಲೋಪಿತೆಕಸ್‌ನಲ್ಲಿ ಈ ಶಕ್ತಿ ಇರಲಿಲ್ಲ ಎಂಬುದರ ಬಗೆಗೆ ಎಲ್ಲರೂ ಬಹುತೇಕ ಒಪ್ಪುತ್ತಾರೆ. ಆದರೆ ಹೋಮೋ ಪ್ರಭೇದದ ಬಗೆಗೆ ಹೀಗೆ ಹೇಳಲಾಗುವುದಿಲ್ಲ. ಯಾವುದೋ ರೀತಿಯ ಪ್ರೋಟೊ ಭಾಷೆ (ಆದಿ ಭಾಷೆ) ಹೋಮೋ ಹೆಬಿಲಿಸ್‌ನಷ್ಟು (ಈ ಮಾನವನ ಆರಂಭಿಕ ಕಾಲಮಾನ ೨8 ಲಕ್ಷ ವರುಷ ಹಿಂದೆ ಹೋಗುತ್ತದೆ) ಹಿಂದೆ ಇತ್ತು ಎಂದು ಕೆಲವರು ಭಾವಿಸುತ್ತಾರೆ. ಇನ್ನೂ ಕೆಲವರ ಪ್ರಕಾರ ಈ ಅಂದಾಜು ೨ ಲಕ್ಷ ವರುಷಗಳಷ್ಟು ಈಚಿನದು. ಕ್ಯೂ.ಡಿ. ಅಟ್ಕಿನ್ಸನ್ ಹೊಸ ಪದ್ಧತಿಯನ್ನು ಅನುಸರಿಸಿ ಭಾಷೆಗಳಲ್ಲಿನ ದ್ವನಿಮಾಗಳ (ಫೋನೀಮ್) ಆಧಾರದ ಮೇಲೆ ಭಾಷೆಯ ಹುಟ್ಟನ್ನು ಲೆಕ್ಕ ಹಾಕುವ ಪ್ರಯತ್ನ ಮಾಡಿದ್ದಾರೆ. ಈ ಚಿಂತನೆ ದ್ವನಿಮಾಗಳ ಸಂಖ್ಯೆ ಕಡಿಮೆಯಾಗುವ ದರಕ್ಕೆ ಸಂಬಂಧಿಸಿದೆ. ಈ ಅಂದಾಜಿನ ಪ್ರಕಾರ ಭಾಷೆ ಹುಟ್ಟಿದ್ದು ೩.೫ ದಿಂದ ೧.೫ ಲಕ್ಷ ವರುಷಗಳ ಹಿಂದೆ. ಇದು ಬಹುತೇಕ ಆಧುನಿಕ ಮಾನವ ಹೋಮೋ ಸೆಪಿಯಿನ್ಸ್ ವಿಕಾಸವಾದ ಕಾಲಮಾನವೂ ಸಹ.[೧೧]
ಚಿತ್ರ:A.afarensis.jpg
ಹೊಮಿನಿನಿ ಉಪಬುಡಕಟ್ಟನ ಪ್ರಭೇದಗಳು ಆಸ್ಟ್ರಾಲೋಪಿತೆಕಸ್ ಅಫಾರೆನ್ಸಿನ್‌ನ ಮರುರಚನೆ ನ್ಯಾಶನಲ್ ಮ್ಯೂಸಿಯಂ ಆಫ್ ನೇಚರ್ ಅಂಡ್ ಸೈನ್ಸ್, ಟೋಕಿಯೊ, ಜಪಾನ್‌ನಲ್ಲಿನ ಲಯಿಟೊಲಿ ಹೆಜ್ಜೆಗುರುತುಗಳ ನಕಲುಪ್ರತಿ

ಆಧಾರ :

[ಬದಲಾಯಿಸಿ]

  • ವಿಕಿಪೀಡಿಯಾ ಇಂಗ್ಲಿಷ್ ತಾಣಗಳು
  • ಜೀವ ಜೀವನ -ಡಾ.ಶಿವರಾಮಕಾರಂತ
  • ವಿವಿಧ ಬಿಡಿ ಲೇಖನಗಳು
ಮಾನವನ ವಿಕಾಸ
ನಕ್ಷೆ ನೋಡಿ

ಉಲ್ಲೇಖಗಳು

[ಬದಲಾಯಿಸಿ]
  1. "Sivapithecus", Wikpedia access date 2016-09-19
  2. "Gingatopithecus", Wikpedia access date 2016-09-19
  3. ೩.೦ ೩.೧ ೩.೨ ೩.೩ "Hominini" Wikipedia, access date 2016-09-19
  4. "Australopithecine", Wikipedia, access date 2016-09-19
  5. "Speciation" Wikpedia, access date 2019-09-19
  6. "Sahelanthropus" Wikipedia, access date 2016-09-13
  7. "Australopithecus", access date 2016-09-19
  8. "Homo", access date 2016-09-19
  9. "Stone tool", Wikipedia, access date 2016-09-19
  10. "Control of fire by humans", Wikipedia, access date 2016-09-19
  11. "Origin of language", Wikipedia, access date 2016-09-19

|