ವಿಷಯಕ್ಕೆ ಹೋಗು

ಹುಸೇನಿ ಬ್ರಾಹ್ಮಣರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹುಸೇನಿ ಬ್ರಾಹ್ಮಣರು ಪಂಜಾಬ್ ಪ್ರಾಂತ್ಯದ ಮೋಹ್ಯಾಲ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಸಮುದಾಯವು ಪ್ರಮುಖವಾಗಿ ಪಾಕಿಸ್ಥಾನದ ಸಿಂಧ್ ಪ್ರಾಂತ್ಯ, ಭಾರತದ ಪಂಜಾಬ್,ರಾಜಸ್ತಾನ, ದೆಹಲಿ, ಮಹಾರಾಷ್ಟ್ರಗಳಲ್ಲಿ ನೆಲೆಗೊಂಡಿದೆ. ಹಿಂದೂ ಮತ್ತು ಇಸ್ಲಾಂ ಧರ್ಮವನ್ನು ಬೆಸೆಯುವಂಥಹ ಸಂಸ್ಕೃತಿ ಹೊಂದಿರುವ ಈ ಸಮುದಾಯವು, ತಮ್ಮನ್ನು ತಾವು ಹಿಂದುಗಳೆಂದು ಗುರುತಿಸಿಕೊಳ್ಳುತ್ತಾರೆ.ಇವರು ಮೊಹಮ್ಮದರನ್ನು ಹಿಂದೂ ದೇವರ ಒಂದು ಅವತಾರ ಎಂದೇ ಭಾವಿಸುತ್ತಾರೆ. ಆದ್ದರಿಂದ ಕೆಲವು ಇಸ್ಲಾಮಿನ ಆಚರಣೆಗಳನ್ನೂ ಅನುಸರಿಸುತ್ತಾರೆ. ಸುಮಾರು ೧೪೦೦ ಹುಸೇನಿ ಬ್ರಾಹ್ಮಣರು ಕರಬಲಾ ಯುದ್ಧ ನಡೆಯುವ ಸಂದರ್ಭದಲ್ಲಿ ಬಾಗ್ದಾದಿನಲ್ಲಿ ನೆಲೆಸಿದ್ದರೆಂದು ತಿಳಿದು ಬರುತ್ತದೆ[]. ಸುಮಾರು ೧೨೫ ಹುಸೇನಿ ಬ್ರಾಹ್ಮಣ ಕುಟುಂಬಗಳು ಪುಣೆಯಲ್ಲಿ ನೆಲೆಸಿರುವರು[]. ದೆಹಲಿಯಲ್ಲಿ ನೆಲೆಗೊಂಡಿರುವ ಈ ಸಮುದಾಯಕ್ಕೆ ಸೇರಿದ ಕೆಲವು ಕುಟುಂಬಗಳು ಪ್ರತೀ ವರ್ಷ ಮೊಹರಂ ಆಚರಿಸುತ್ತಾರೆ.

ಇತಿಹಾಸ

[ಬದಲಾಯಿಸಿ]

ಹುಸೇನೀ ಬ್ರಾಹ್ಮಣರು ಸಾಮಾನ್ಯ ಯುಗ ೬೮೦ ಸಮಯದಲ್ಲಿ ಪ್ರಸ್ತುತ ಇರಾಕ್‍ನ ಯುಫರೇಟ್ ನದಿಯ ತಟದಲ್ಲಿರುವ ಅಲ್-ಹಿಂದಿಯಾ ಎಂದು ಕರೆಯಲಾಗುವ ಪ್ರದೇಶದಲ್ಲಿ ವಾಸವಿದ್ದರು. ಆ ಸಮಯದಲ್ಲಿ ಈ ಪ್ರದೇಶ ದೈರ್ ಅಲ್ ಹಿಂದಿಯಾ ಎಂದು ಕರೆಯಲ್ಪಡುತ್ತಿತ್ತು. ಅಂದರೆ ಹಿಂದೂ ಜನರ ವಾಸ ಸ್ಥಳ ಎಂಬುದಾಗಿ ಅರ್ಥೈಸಲಾಗುತ್ತದೆ.[] ಕರಬಲ ಯುದ್ದದಲ್ಲಿ ಅಥವಾ ಮೊಹಮ್ಮದ ಹುಸೈನ್‍ರಿಗೆ ಬೆಂಬಲ ನೀಡಿದ ಬ್ರಾಹ್ಮಣ ಸಮುದಾಯದಕ್ಕೆ ಸೇರಿದ ಒಂದು ಪಂಗಡವನ್ನು ಹುಸೇನಿ ಬ್ರಾಹ್ಮಣರೆಂದು ಕರೆಯುತ್ತಾರೆ[]. ಮೊಹಮ್ಮದ ಹುಸೈನ್‌ರನ್ನು ಹುಸೈನ್ ಇಬ್ನ ಅಲಿ ಎಂದೂ ಕರೆಯುತ್ತಾರೆ. ಇವರು ಪ್ರವಾದಿ ಮೊಹಮ್ಮದರ ಮೊಮ್ಮಗ, ಅಂದರೆ ಫಾತಿಮಾ ಅವರ ಮಗ. ಮೌಖಿಕ ಇತಿಹಾಸದ ಪ್ರಕಾರ ಸಾಮಾನ್ಯ ಯುಗ ೬೮೦ರ ಆಸುಪಾಸಿನಲ್ಲಿ ಬಾಗ್ದಾದ್‍ನಲ್ಲಿ ನೆಲೆಗೊಂಡಿದ್ದ ಬ್ರಾಹ್ಮಣ ಸಮುದಾಯ ಪ್ರಮುಖ ವ್ಯಕ್ತಿ, ರಹಾಬ್ ಸಿಧ್ ದತ್ತಾ ವಿವಾಹವಾಗಿ ಹಲವು ವರ್ಷಗಳ ಬಳಿಕವೂ ಮಕ್ಕಳಿಲ್ಲದೇ ಕೊರಗುತ್ತಿರುತ್ತಾರೆ. ಆಗ ಹುಸೈನ್ ಇಬ್ನ ಅಲಿ ಅವರು ದೇವರಲ್ಲಿ ದತ್ತಾ ಅವರ ಪರವಾಗಿ ಪ್ರಾರ್ಥಿಸಲು, ದತ್ತಾ ದಂಪತಿಗಳಿ ಏಳು ಸಂತಾನಗಳ ಪ್ರಾಪ್ತಿಯಾಯ್ತು ಎಂದು ತಿಳಿದು ಬರುತ್ತದೆ. ಈ ಘಟನೆಯಿಂದ ಇಸ್ಲಾಂ ಮತ್ತು ಹಿಂದೂ ಬ್ರಾಹ್ಮಣ ಪಂಗಡಗಳ ನಡುವೆ ನಿಕಟತೆ ಬೆಳೆಯಿತು. ಇದೇ ಕಾರಣಕ್ಕೆ ಈ ಬ್ರಾಹ್ಮಣ ಪಂಗಡದವರು ಕರಬಲಾ ಯುದ್ದದಲ್ಲಿ ಹುಸೈನರಿಗೆ ಬೆಂಬಲಿಸಿದರು. ಹುಸೈನ್ ಮತ್ತು ಖಲೀಫ ಯಾಜಿದ್ ನಡುವೆ ಭೀಕರ ಯುದ್ಧ ನಡೆಯಿತು. ಹುಸೇನ ಪರವಾಗಿ ತನ್ನ ಏಳು ಜನ ಮಕ್ಕಳು ಹಾಗೂ ೫೦೦ ಜನ ವೀರ ಸೈನಿಕರೊಂದಿಗೆ ರಹಾಬ್‌ ಸಿದ್ಧ ದತ್ತ ಯುದ್ದದಲ್ಲಿ ಪಾಲ್ಗೊಳ್ಳುತ್ತಾರೆ. ಮೊಹರಂ ಹತ್ತನೆಯ ದಿನದಂದು ಸಿದ್ಧ ದತ್ತನ ಏಳೂ ಜನ ಮಕ್ಕಳು ಹಾಗೂ ಅಲಿ ಅಕ್ಬರ, ಅಲಿ ಅಸ್ಗರ್ ಮುಂತಾದವರು ಯುದ್ಧದಲ್ಲಿ ಮರಣ ಹೊಂದುತ್ತಾರೆ. ವೀರಯುದ್ಧ ಮಾಡಿ ಮರಣಿಸಿದ ಈ ಸೈನಿಕರ ಸಂತಾನವನ್ನು ಹುಸೇನಿ ಬ್ರಾಹ್ಮಣರು ಎಂದೇ ಇಂದಿಗೂ ಗುರುತಿಸಲಾಗಿದೆ. ಯುದ್ಧಾನಂತರ ಅಳಿದುಳಿದವರೆಲ್ಲ ಭಾರತಕ್ಕೆ ಮರಳಿ ಪಂಜಾಬ್ ಮತ್ತಿತರ ಪ್ರದೇಶಗಳಲ್ಲಿ ನೆಲೆಯಾಗುತ್ತಾರೆ. ಇಂದಿಗೂ ಹುಸೇನಿ ಬ್ರಾಹ್ಮಣರು ಮೊಹರಂ ಆಚರಿಸುತ್ತಾರೆ. ತಾಝಿಯಾ ಸ್ವೀಕರಿಸಿ ಶೋಕಾಚರಣೆ ಮಾಡುತ್ತಾರೆ.

ಇತರ ವಿವರಗಳು

[ಬದಲಾಯಿಸಿ]

ಹುಸೇನಿ ಬ್ರಾಹ್ಮಣ ಪಂಗಡವು ಬಾಲಿ, ಭೀಮ್ವಾಲ್, ಚಿಬ್ಬರ್ , ದತ್ , ಲಾ , ಮೋಹನ್ ಮತ್ತು ವೈದ್ ಎಂಬ ಏಳು ಉಪ-ಕುಲಗಳನ್ನು ಒಳಗೊಂಡಿದೆ . ಪ್ರತಿಯೊಂದೂ ಏಳು ವಿಭಿನ್ನ ಬ್ರಾಹ್ಮಣ ಋಷಿ ಪರಂಪರೆಯನ್ನು ಪ್ರತಿನಿಧಿಸುತ್ತವೆ.[]

೧೯೪೭ರಲ್ಲಿ ಭಾರತ ವಿಭಜನೆಯಾಗುವವರೆಗೂ ಲಾಹೋರ್‌ನಲ್ಲಿ ವಾಸವಿದ್ದ ಹುಸೇನಿ ಬ್ರಾಹ್ಮಣರು, ಮುಸಲ್ಮಾನರ ದೌರ್ಜನ್ಯದಿಂದ ಒತ್ತಾಯಪೂರ್ವಕವಾಗಿ ಅಲ್ಲಿಂದ ವೀಭಜೋನೋತ್ತರ ಭಾರತದ ಭಾಗವಾದ ಪಂಜಾಬ್ ವಲಸೆ ಬರಬೇಕಾಯಿತು[]. ರಾಜಾಸ್ತಾನದ ಅಜ್ಮೇರ್‍ ನಲ್ಲಿ ತಮ್ಮ ಕೊನೆಯ ದಿನಗಳನ್ನು ಕಳೆದ ಮೊಯ್ದಿನ್ ಚಿಸ್ತಿ ಎಂಬ ಸೂಫಿ ಸಂತನನ್ನು ಈ ಪಂಗಡದವರು ಬಹುವಾಗಿ ನಂಬುತ್ತಾರೆ. ಸಾಂಪ್ರಾದಾಯಿಕ ವೈದಿಕ ಆಚರಣೆಗಳ ಜೊತೆ ಸಾಂಪ್ರಾದಾಯಿಕ ಇಸ್ಲಾಂನ ಆಚರಣೆಗಳು ಈ ಸಮುದಾಯದ ವಿಶೇಷತೆಯಾಗಿದೆ. ಆದ್ದರಿಂದ ಅರ್ಧ ಹಿಂದು-ಅರ್ಧ ಮುಸಲ್ಮಾನರೆಂದು ಇವರನ್ನು ಪರಿಗಣಿಸಲಾಗಿದೆ.

ಪ್ರಮುಖ ವ್ಯಕ್ತಿಗಳು

[ಬದಲಾಯಿಸಿ]

ಮಾಜಿ ಸಂಸತ್ ಸದಸ್ಯ ಹಾಗೂ ಚಲನಚಿತ್ರ ನಟ ಸುನಿಲ್ ದತ್ ಅವರು ಈ ಸಮುದಾಯಕ್ಕೆ ಸೇರಿದ ಖ್ಯಾತ ವ್ಯಕ್ತಿಯಾಗಿದ್ದಾರೆ[]. ಚಲನಚಿತ್ರ ನಟ ಸಂಜಯ್ ದತ್ ಹಾಗೂ ರಾಜಕಾರಣಿ ಪ್ರಿಯಾ ದತ್ ಅವರು ಇವರ ಮಕ್ಕಳಾಗಿದ್ದಾರೆ. ಚಲನ ಚಿತ್ರ ನಟಿಯರಾದ ಗೀತಾ ಬಾಲಿ, ಅರುಣ ಬಾಲಿ, ಲಾರಾ ದತ್ತಾ, ಚಲನಚಿತ್ರ ಸಾಹಿತಿ ಆನಂದ ಬಕ್ಷಿ, ಪತ್ರಕರ್ತೆ ಬರಖಾ ದತ್ತಾ, ಉರ್ದು ಲೇಖಕ, ಕವಿ ಕಶ್ಮೀರಿ ಲಾಲ್ ಝಾಕಿರ್, ಸಬೀರ್ ದತ್, ನಂದ ಕಿಶೋರ್ ವಿಕ್ರಮ್ ಮುಂತಾದವರು ಕೂಡ ಹುಸೇನಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಖ್ಯಾತನಾಮರಾಗಿದ್ದಾರೆ.[] ಪುನೀತನಾಥ ದತ್ತಾ, ವಿಜಯ ರತನ್ ಚೌಧರಿ, ರಾಜೀವ ಬಕ್ಷಿ, ಕಲ್ವಂತ್ ಸಿಂಗ್‌ದತ್ತ, ಸರ್ದಾರ್ ಬಹಾದೂರ್ ರಸೀಲ್ದಾರ್ ಮುಂತಾದ ಹುತಾತ್ಮ ಸೈನಿಕರು ಕೂಡ ಇದೇ ಸಮುದಾಯದವರು.[]

ಉಲ್ಲೇಖಗಳು

[ಬದಲಾಯಿಸಿ]
  1. https://web.archive.org/web/20161017234420/http://en.shafaqna.com/news/38333
  2. https://web.archive.org/web/20160127211246/http://epaper.timesofindia.com/Default/Layout/Includes/MIRRORNEW/ArtWin.asp?From=Archive&Source=Page&Skin=MIRRORNEW&BaseHref=PMIR%2F2010%2F12%2F19&ViewMode=HTML&EntityId=Ar00700&AppName=1
  3. ೩.೦ ೩.೧ Mahdi Nazmi (1984). Reg-i-Surkh: Dut Brahman Imam Husain se Rabt o Zabt. Abu Talib Academy, New Delhi. pp. 63–71.
  4. https://www.ichowk.in/society/amazing-story-of-hussaini-brahmin-who-fought-for-imam-hussain-in-karbala/story/1/12432.html
  5. ೫.೦ ೫.೧ http://www.reporter4public.com/%E0%B2%B9%E0%B3%81%E0%B2%B8%E0%B3%87%E0%B2%A8%E0%B2%BF-%E0%B2%AC%E0%B3%8D%E0%B2%B0%E0%B2%BE%E0%B2%B9%E0%B3%8D%E0%B2%AE%E0%B2%A3%E0%B2%B0%E0%B3%81[ಶಾಶ್ವತವಾಗಿ ಮಡಿದ ಕೊಂಡಿ]!
  6. https://www.firstpost.com/living/meet-the-hussaini-brahmins-hindus-who-observe-muharram-alongside-muslims-1788623.html
  7. https://indianexpress.com/article/opinion/columns/hussaini-brahmins-hindus-muslims-muharram-mohyal-brahmins-5367234/#:~:text=It%20boasts%20of%20a%20number,the%20better%20known%20Hussaini%20Brahmins.