ಬರ್ಖಾ ದತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬರ್ಖಾ ದತ್

ಬರ್ಖಾ ದತ್ ಅವರು ಭಾರತೀಯ ಪತ್ರಿಕೋದ್ಯಮಿ ಹಾಗೂ ಬರಹಗಾರ್ತಿ. ಅವರು ಎನ್ ಡಿ ಟಿ ವಿ ವಾಹಿನಿಯಲ್ಲಿ ೨೧ ವರ್ಷಗಳ ಕಾಲ ಸೇವೆ ಸಲ್ಲಿಸಿದಾರೆ. ಅವರು ಭಾರತ ಹಾಗೂ ಪಾಕಿಸ್ತಾನದ ನಡುವೆ ನಡೆದ ಕಾರ್ಗಿಲ್ ಯುದ್ದದ ನೇರ ಪ್ರಸಾರ ಮಾಡಿದ್ದರು.[೧][೨]

ಬಾಲ್ಯ ಜೀವನ[ಬದಲಾಯಿಸಿ]

ಇವರು ದೆಹಲಿಯಲ್ಲಿ ದಶಂಬರ್ ೧೮, ೧೯೭೧ರಲ್ಲಿ ಜನಿಸಿದರು. ಇವರ ತಂದೆ ಎಸ್.ಪಿ.ದತ್,ತಾಯಿ ಪ್ರಭಾ ದತ್,ತಂಗಿ ಬಾಹರ್ ದತ್. ಇವರು ಸೈಂಟ್ ಸ್ಟಿಪನ್ಸ್ ಕಾಲೇಜಿನಲ್ಲಿ ತಮ್ಮ ಪದವಿ ಶಿಕ್ಷಣವನ್ನು ಪಡೆದರು. ಉನ್ನತ ಶಿಕ್ಷಣವನ್ನು ಜಾಮಿಯ ಮಿಲಿಯ ಇಸ್ಲಾಮಿಯ ಸಮೂಹ ಸಂವಹನ ಸಂಶೋಧನ ಕೇಂದ್ರ ದೆಹಲಿಯಲ್ಲಿ ಪಡೆದರು.[೩][೪]

ಉದ್ಯೋಗ[ಬದಲಾಯಿಸಿ]

ಅವರು ಉದ್ಯೋಗವನ್ನು ಎನ್ ಡಿ ಟಿ ವಿ ವಾಹಿನಿಯಿಂದ ಸಲಹಾ ಸಂಪಾದಕರಾಗಿ ಪತ್ರಿಕೋದ್ಯಮವನ್ನು ಪ್ರವೇಶಿಸಿದ್ದರು.ತದನಂತರ ಇಂಗ್ಲೀಷ್ ನ್ಯೂ ವಿಂಗ್ ಸಂಸ್ಥೆ ಆರಂಭಿಸಿದ್ದರು. ಇವರು ಪಾಕಿಸ್ತಾನ,ಅಫ್ಘಾನಿಸ್ತಾನ,ಇರಾಕ್,ಕಾಶ್ಮೀರದಲ್ಲಿ ನಡೆದ ಸಂಘರ್ಷಗಳ ಕುರಿತು ವರದಿ ಮಾಡಿದ್ದಾರೆ. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ದಿನಪತ್ರಿಕೆಗಳಲ್ಲಿ ಅಂಕಣಗಾರ್ತಿಯಾಗಿ ಕೆಲಸ ಮಾಡಿದ್ದಾರೆ.[೫][೬]

ಪುಸ್ತಕ[ಬದಲಾಯಿಸಿ]

ದಿ ಅನ್ ಕ್ವಾಯ್ಟ್ ಲ್ಯಾಂಡ್ (೨೦೧೫)[೭]

ಪ್ರಶಸ್ತಿ ಹಾಗೂ ಪುರಸ್ಕಾರ[ಬದಲಾಯಿಸಿ]

  1. ಇಂಡಿಯನ್ ಟೆಲಿವಿಷನ್ ಅಕಾಡೆಮಿ ಅವಾರ್ಡ್
  2. ಟಿವಿ ಪರ್ಸನಾಲಿಟಿ ಆಫ್ ದಿ ಇಯರ್
  3. ದಿ ಸಿ.ಚ್. ಮೊಹಮ್ಮದ್ ಕೋಯಾ ನ್ಯಾಷನಲ್ ಜರ್ನಲಿಸ್ಟ್ ಅವಾರ್ಡ್ ೨೦೦೯
  4. ದಿ ಇಂಡಿಯನ್ ನ್ಯೂಸ್ ಬ್ರಾಡ್ಕ್ಯಾಸ್ಟಿಂಗ್ ಅವಾರ್ಡ್ ಫಾರ್ ದಿ ಮೋಸ್ಟ ಇಂಟಲಿಜೆಂಟ್ ನ್ಯೂಸ್ ಶೋ ಹೋಸ್ಟ್
  5. ದಿ ಕಾಮನ್ವೆಲ್ತ್ ಬಾರ್ಡ್ಕ್ಯಾಸ್ಟಿಂಗ್ ಅಸೋಸಿಯೇಷನ್ ಅವಾರ್ಡ್ ಫಾರ್ ಜರ್ನಲಿಸ್ಟ್ ಆ ದಿ ಇಯರ್ .೨೦೦೭
  6. ಬೆಸ್ಟ್ ಟಿವಿ ನ್ಯೂಸ್ ಅಂಚಾರ್ ಫಾರ್ ದಿ ಪ್ರೋಗ್ರಾಮ್ "ವೀ ದಿ ಪೀಪಲ್ " ಫಸ್ಟ್ ಇಂಡಿಯನ್ ನ್ಯೂಸ್ ಅವಾರ್ಡ್ಸ್ 2007
  7. ಪದ್ಮ ಶ್ರೀ[೮]

ಉಲ್ಲೇಖ[ಬದಲಾಯಿಸಿ]

  1. https://www.ndtv.com/communication/ndtv-statement-on-barkha-dutt-1649025
  2. https://web.archive.org/web/20100611073922/http://www.india-server.com/news/barkha-dutt-gets-most-intelligent-news-3183.html
  3. http://highlightsindia.com/barkha-dutt-biography/
  4. https://starsunfolded.com/barkha-dutt/
  5. https://womennow.in/barkha-dutt/
  6. https://www.careerguide.com/blog/barkha-dutt-inspirational-career-story
  7. https://www.amazon.in/Books-Barkha-Dutt/s?ie=UTF8&page=1&rh=n%3A976389031%2Cp_27%3ABarkha%20Dutt
  8. https://www.quora.com/How-did-Barkha-Dutt-managed-to-get-Padma-Shri-for-her-contribution-in-journalism