ವಿಷಯಕ್ಕೆ ಹೋಗು

ರಾಷ್ಟ್ರೀಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಷ್ಟ್ರೀಯ

[ಬದಲಾಯಿಸಿ]

ರಾಷ್ಟ್ರ ಲಾಂಛನ ಎಂದು ಸಾರನಾಥದಲ್ಲಿನ ಅಶೋಕ ಸ್ಥಂಭದ ಮೇಲು ತುದಿಯಲ್ಲಿರುವ ನಾಲ್ಕು ಸಿಂಹಗಳ ಪ್ರತಿಮೆಯನ್ನು ಆಂಗಿಕರಿಸಿದೆ. ಅದರಲ್ಲಿ ನಾಲ್ಕು ಸಿಂಹಗಳು ಬೆನ್ನಿಗೆ ಬೆನ್ನು ಆನಿಸಿ ಮಣಿಗಳಿರುವ ಚೌಕಟ್ಟಿನ ಮೇಲೆ ಕುಳಿತಿವೆ. ಕೆಳಗಿನ ಪೀಠದಲ್ಲಿ. ಆನೆ, ಓಡುವ ಕುದುರೆ, ಗೂಳಿ ಮತ್ತು ಸಿಂಹಗಳಿವೆ. ಅವುಗಳ ನಡುವಿನ ಅವಕಾಶದಲ್ಲಿ ಚಕ್ರಗಳು ಇವೆ. ಎಲ್ಲವೂ ಗಂಟೆಯಾಕಾರದ ಕಮಲದ ಮೇಲೆ ನಿಂತಿವೆ. ಈ ಶಿಲ್ಪವನ್ನು ಏಕ ಮರಳು ಶಿಲೆಯಲ್ಲಿ ಕೆತ್ತಲಾಗಿದೆ. ಅದರಲ್ಲಿ ಶಾಸನ ಚಕ್ರವಿದೆ. ಅದನ್ನು ಧರ್ಮ ಚಕ್ರ ಎನ್ನುವರು.

ಸರ್ಕಾರವ 26 ನೆ ಜನವರಿ 1950 ರಲ್ಲಿ ಒಪ್ಪಿಕೊಂಡ ರಾಷ್ಟ್ರೀಯ ಲಾಂಛನದಲ್ಲಿ, ಮೂರುಸಿಂಹಗಳು ಮಾತ್ರ ಕಾಣತ್ತವೆ. ನಾಲ್ಕನೆಯದು ನೋಟದಿಂದ ಮರೆಯಾಗಿದೆ. ಮಣಿಗಳ ಚೌಕಟ್ಟಿನ ಕೆಳಗಿನ ಜಾಗದ ನಡುವೆ ಬಲಗಡೆ ಗೂಳಿ ಮತ್ತು ಎಡಗಡೆ ಕುದುರೆ ಪೂರ್ತಿ ಅಂಚಿನಲ್ಲಿ ಇತರ ಚಕ್ರಗಳ ಪರಿಧಿ ಕಾಣುವುದು. ಗಂಟೆಯಾಕಾರದ ಕಮಲವನ್ನು ಕೈ ಬಿಡಲಾಗಿದೆ. ಮಂಡೂಕ ಉಪನಿಷತ್ತಿನ ಸತ್ಯ ಮೇವ ಜಯತೆ ಎಂಬ ವಾಕ್ಯವನ್ನು ದೇವನಾಗರಿ ಲಿಪಿಯಲ್ಲಿ ಮಣಿಕಟ್ಟಿನ ಕೆಳಗೆ ಕೆತ್ತಲಾಗಿದೆ. ಅದರ ಅರ್ಥ “ಸತ್ಯವು ಮಾತ್ರ ಗೆಲ್ಲುವುದು” ಎಂದು.