ವಿಷಯಕ್ಕೆ ಹೋಗು

ಲಾರಾ ದತ್ತಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Lara Dutta at the launch of NIVEA Sun in India (14)
Lara Dutta
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
(1978-04-16) ೧೬ ಏಪ್ರಿಲ್ ೧೯೭೮ (ವಯಸ್ಸು ೪೬)
Ghaziabad, ಉತ್ತರ ಪ್ರದೇಶ, India
ವೃತ್ತಿ Actress, model
ವರ್ಷಗಳು ಸಕ್ರಿಯ 2001 – present

ಲಾರಾ ದತ್ತಾ (ಹಿಂದಿ:लारा दत्ता; 1978 ರ ಏಪ್ರಿಲ್ 16 ರಂದು ಜನನ) ಇವರು ಭಾರತೀಯ ನಟಿಯಾಗಿದ್ದು, UNFPA ಯ ಸೌಹಾರ್ದ ರಾಯಭಾರಿ(UNFPA ಗುಡ್ ವಿಲ್ ಅಂಬ್ಯಾಸಿಡರ್)ಯಾಗಿದ್ದರಲ್ಲದೇ, ಮಾಜಿ ಭುವನ ಸುಂದರಿಎನಿಸಿದ್ದಾರೆ.[]

ಬಯೋಗ್ರಫಿ

[ಬದಲಾಯಿಸಿ]

ಆರಂಭಿಕ ಜೀವನ

[ಬದಲಾಯಿಸಿ]

ದತ್ತಾ, ಉತ್ತರಪ್ರದೇಶದ ಗಾಜಿಯಾ ಬಾದ್ ನಲ್ಲಿ ಪಂಜಾಬೀ ತಂದೆ ಮತ್ತು ಆಂಗ್ಲೋ-ಇಂಡಿಯನ್‌ ತಾಯಿಯ ಪುತ್ರಿಯಾಗಿ ಜನಿಸಿದರು.[] ಇವರ ತಂದೆ ವಿಂಗ್ ಕಮಾಂಡರ್ L.K. ದತ್ತಾ (ನಿವೃತ್ತ), ತಾಯಿ ಜೆನಿಫರ್ ದತ್ತಾರವರಾಗಿದ್ದಾರೆ. ಇವರು ಇಬ್ಬರು ಹಿರಿಯ ಸಹೋದರಿಯರನ್ನು ಹೊಂದಿದ್ದು, ಅವರಲ್ಲಿ ಒಬ್ಬರು ಭಾರತೀಯ ವಾಯುಪಡೆಯಲ್ಲಿ ಸೇವೆಸಲ್ಲಿಸುತ್ತಿದ್ದಾರೆ. ಎರಡನೆಯವರು ಕೂಡ ಪ್ರಸಿದ್ಧರಾಗಿದ್ದಾರೆ. ಪ್ರಸಿದ್ಧ ಸಂಗೀತಕಾರ DJ ನಿತಿನ್ ಸಾನಿ ದತ್ತಾರವರ ಸೋದರ ಸಂಬಂಧಿಯಾಗಿದ್ದಾರೆ.[] 1981 ರಲ್ಲಿ ದತ್ತಾ ಕುಟುಂಬವು ಬೆಂಗಳೂರಿಗೆ ತೆರಳಿತು. ಅಲ್ಲಿ ಅವರು ತಮ್ಮ ಪ್ರೌಢ ಶಿಕ್ಷಣವನ್ನು, ಸೆಂಟ್ ಫ್ರಾನ್ಸಿಸ್ ಝೇವಿಯರ್ ಮಹಿಳಾ ಪ್ರೌಢ ಶಾಲೆಯಲ್ಲಿ ಮತ್ತು ಫ್ರ್ಯಾಂಕ್ ಅಂತೋನಿ ಪಬ್ಲಿಕ್ ಶಾಲೆಯಲ್ಲಿ ಮುಗಿಸಿದರು. ಲಾರಾ ಮುಂಬಯಿ ವಿಶ್ವವಿದ್ಯಾನಿಲಯದಿಂದ ಮೈನರ್ ಇನ್ ಕಮ್ಯುನಿಕೇಷನ್ ನೊಂದಿಗೆ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. ಅಲ್ಲದೇ 2000 ನೆಯ ಇಸವಿಯಲ್ಲಿ ಭುವನ ಸುಂದರಿ ಕಿರೀಟ ಧರಿಸಿದರು, ಇದು ಅವರನ್ನು UNFPA ಯ ಸೌಹಾರ್ದ ರಾಯಭಾರಿಯನ್ನಾಗಿಸಿತು.[]

ಮಾಡೆಲಿಂಗ್(ರೂಪದರ್ಶಿ) ವೃತ್ತಿಜೀವನ

[ಬದಲಾಯಿಸಿ]

ದತ್ತಾ ವಾರ್ಷಿಕ ಗ್ಲ್ಯಾಡ್ಸ್ ರಾಗ್ಸ್ ಮಾಡೆಲಿಂಗ್ ಸ್ಪರ್ಧೆಯನ್ನು ತನ್ನ ತಾಯ್ನಾಡಾದ ಭಾರತದಲ್ಲಿ ಗೆದ್ದುಕೊಂಡರು. ಈ ಮೂಲಕ 1997 ರ ಮಿಸ್ ಇಂಟರ್ ಕಾಂಟಿನೆಂಟಲ್ (ಖಂಡಾಂತರ ಸುಂದರಿ) ಸ್ಪರ್ಧೆಯಲ್ಲಿ ಪ್ರಥಮ ಭಾರತೀಯ ಪ್ರತಿನಿಧಿಯಾಗುವ ಹಕ್ಕನ್ನು ಪಡೆದುಕೊಂಡರು, ಹಾಗು ಮೊದಲನೆಯ ಸ್ಥಾನ ಗಳಿಸಿದರು. ಅನಂತರ, ಅವರು ಫೆಮಿನಾ ಮಿಸ್ ಇಂಡಿಯಾ ಯುನಿವರ್ಸ್(ಫೆಮಿನಾ ಭಾರತದ ಭುವನ ಸುಂದರಿ)ಕಿರೀಟ ಧರಿಸಿದರಲ್ಲದೇ, 2000 ಇಸವಿಯಲ್ಲಿ ಭುವನ ಸುಂದರಿಯಾದರು.[]

ಸೈಪ್ರಸ್ ನಲ್ಲಿ ನಡೆದ ಭುವನ ಸುಂದರಿ 2000 ದಲ್ಲಿ ವೆನಿಜುಲಾ, ಸ್ಪ್ಯೇನ್, USA ಮತ್ತು ಕೆನಡಾ ದಿಂದ ನೀಡಲಾದ ಅತ್ಯಂತ ಕಠಿಣವಾದ ಸ್ಪರ್ಧೆಯಲ್ಲಿ ದತ್ತಾ ನಿರೀಕ್ಷಿತ ವಿಜೇತೆಯಾದರು. ಈಜುಡುಪು ಸ್ಪರ್ಧೆಯಲ್ಲಿ ಅವರು ಅತ್ಯಂತ ಅಧಿಕ ಅಂಕಗಳನ್ನು ಗಳಿಸಿದರು. ಅಲ್ಲದೇ ಅವರ ಅಂತಿಮ ಸ್ಪರ್ಧಿ ಸಂದರ್ಶನದಲ್ಲಿ ಗಳಿಸಿರುವ ಅಂಕ ಭುವನ ಸುಂದರಿ ಸ್ಪರ್ಧೆಯ ಯಾವುದೇ ವಿಭಾಗದ ಇತಿಹಾಸದಲ್ಲೆ ಅತ್ಯಂತ ಹೆಚ್ಚು ಅಂಕಗಳಾಗಿವೆ. ಅವರ ಪರಿಪೂರ್ಣ ಸಂದರ್ಶನ ಬಹುಪಾಲು ತೀರ್ಪುಗಾರರು ಗರಿಷ್ಠ 9.99 ಅಂಕಗಳನ್ನು ಕೊಡುವಂತೆ ಮಾಡಿತು. ಅವರ ಅಂತಿಮ ಪ್ರಶ್ನೆಗೆ ಭುವನಸುಂದರಿ ಸ್ಪರ್ಧೆಯ(ಮತ್ತು ಇತರ ಸೌಂದರ್ಯ ಪ್ರದರ್ಶನಗಳು)ಭಾವನಾತ್ಮಕ ಸಮರ್ಥನೆಯನ್ನು ನೀಡಿದ ನಂತರ, ದತ್ತಾ ಎರಡನೆಯ ಭಾರತೀಯ ಭುವನ ಸುಂದರಿಯಾದರು.

ಇದೇ ವರ್ಷದಲ್ಲಿ, ಪ್ರಿಯಾಂಕ ಚೋಪ್ರಾ ಮತ್ತು ದಿಯಾ ಮಿರ್ಜಾ ಅನುಕ್ರಮವಾಗಿ ಅವರ ವಿಶ್ವಸುಂದರಿ ಮತ್ತು ಮಿಸ್ ಏಷಿಯಾ ಫೆಸಿಫಿಕ್ ಕಿರೀಟವನ್ನು ಗೆದ್ದುಕೊಂಡರು. ಇದರಿಂದಾಗಿ ಪ್ರಪಂಚದಲ್ಲಿನ ಸೌಂದರ್ಯ ಪ್ರದರ್ಶನಗಳಲ್ಲಿ ಭಾರತಕ್ಕೆ ಅತ್ಯಂತ ಅಪರೂಪದ ಮೂರು ಜಯಗಳು ಲಭ್ಯವಾದವು.

ನಟನಾ ವೃತ್ತಿಜೀವನ

[ಬದಲಾಯಿಸಿ]

ಲಾರಾ ದತ್ತಾ ಆರಂಭದಲ್ಲಿ ಅರಸಚ್ಚಿ ಎಂಬ ತಮಿಳುಚಲನಚಿತ್ರಕ್ಕೆ 2002 ರಲ್ಲಿ ಸಹಿಹಾಕಿದರು. ಆದರೆ ಹಣಕಾಸಿನ ತೊಂದರೆಗಳಿಂದಾಗಿ ಈ ಚಲನಚಿತ್ರ 2004 ರ ಮಧ್ಯಾವಧಿಯಲ್ಲಿ ತೆರೆಕಂಡಿತು. 2003 ರಲ್ಲಿ ಅಂದಾಜ್ ಎಂಬ ಹಿಂದಿ ಚಲನಚಿತ್ರದಲ್ಲಿ ನಟಿಸುವ ಮೂಲಕ ಹಿಂದಿ ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಲನಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತಲ್ಲದೇ, ಅವರಿಗೆ ಫಿಲ್ಮ್ ಫೇರ್ ಅತ್ಯುತ್ತಮ ಆರಂಭಿಕ ನಟಿ ಪ್ರಶಸ್ತಿಯನ್ನು ತಂದುಕೊಟ್ಟಿತು. ಅನಂತರ ಅವರು ಅನೇಕ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ, ಅವುಗಳಲ್ಲಿ ಕೆಲವು ಗಲ್ಲಾ ಪೆಟ್ಟಿಗೆಯಲ್ಲಿ ಸೋತರೆ, ಕೆಲವು ಸಾಧಾರಣ ಯಶಸ್ಸನ್ನು ಕಂಡಿವೆ. ಗಲ್ಲಾ ಪೆಟ್ಟಿಗೆಯಲ್ಲಿ "ಯಶಸ್ವಿಯಾದ" ಅವರ ಚಲನಚಿತ್ರಗಳು ಕೆಳಕಂಡಂತಿವೆ: ಮಸ್ತಿ (2004), ನೋ ಎಂಟ್ರಿ (2005) , ಪಾರ್ಟನರ್ (2007) ಮತ್ತು ಹೌಸ್ ಫುಲ್(ಸಿನಿಮಾ) (2010).

2006 ರಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಹಾಸ್ಯ ಪ್ರಧಾನ ಭಾಗಂ ಬಾಗ್ ಚಲನಚಿತ್ರವು ಗಲ್ಲಾ ಪೆಟ್ಟಿಗೆಯಲ್ಲಿ ಚೆನ್ನಾಗಿ ಹಣ ಗಳಿಸಿತು.[]

2007 ರಲ್ಲಿ ಸಾನಿಯಾ ಮಿರ್ಜಾ ಮತ್ತು ದತ್ತಾ 2007 ರ ನವೆಂಬರ್ 13 ರಂದು ನಡೆದ ಕೌನ್ ಬನೇಗಾ ಕರೋಡ್ ಪತಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.[] ಶಾದ್ ಅಲಿಯವರ ಜೂಮ್ ಬರಾಬರ್ ಜೂಮ್ , 2007 ರಲ್ಲಿ ತೆರೆಕಂಡ ದತ್ತಾರವರ ಮೊದಲ ಚಲನಚಿತ್ರವಾಗಿದೆ. ಈ ಚಲನಚಿತ್ರವು ಭಾರತದಲ್ಲಿ ಗಲ್ಲಾ ಪೆಟ್ಟಿಗೆಯಲ್ಲಿ ಸೋತರೂ ಕೂಡ, ಹೊರದೇಶಗಳಲ್ಲಿ ವಿಶೇಷವಾಗಿ U.K. ಯಲ್ಲಿ ಉತ್ತಮ ಸಾಧನೆಯನ್ನು ಕಂಡಿತು.[] ಈ ಚಲನಚಿತ್ರದಲ್ಲಿನ ಅವರ ಅಭಿನಯಕ್ಕಾಗಿ ಮಿಶ್ರ ಪ್ರತಿಕ್ರಿಯೆಯನ್ನು ಪಡೆದರು. ಅನಂತರ ತೆರೆಕಂಡ ಅವರ ಪಾರ್ಟನರ್ ಚಲನಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಿತಲ್ಲದೇ, ಯಶಸ್ವಿಯಾಯಿತು.[]

ಇತ್ತೀಚೆಗೆ ತೆರೆಕಂಡ ಅವರ ಬ್ಲೂ ಚಲನಚಿತ್ರವು ಅತ್ಯಂತ ದುಬಾರಿ ಭಾರತೀಯ ಚಲನಚಿತ್ರಗಳಲ್ಲಿ ಒಂದಾಗಿದೆ. ಆದರೆ ದತ್ತಾ ಈ ಯೋಜನೆಯನ್ನು ಕೈಬಿಟ್ಟಿದ್ದರು, ಏಕೆಂದರೆ ದತ್ತಾರವರಿಗೆ ಈಜು ಬರುತ್ತಿರಲಿಲ್ಲ. ಈ ಸಿನಿಮಾವನ್ನು ಸಂಪೂರ್ಣವಾಗಿ ಸಮುದ್ರದಲ್ಲಿ ಚಿತ್ರಿಸಲಾಗಿದೆ. ಆರಂಭದಲ್ಲಿ ಈ ಚಲನಚಿತ್ರಕ್ಕೆ ಸಹಿಹಾಕಲು ಅವರು ನಿರಾಕರಿಸಿದರು, ಆದರೆ ನಾಯಕ ನಟ ಅಕ್ಷಯ್ ಕುಮಾರ್, ಈಜುವುದನ್ನು ಕಲಿಯುವಲ್ಲಿ ಅವರಿಗೆ ಪ್ರೋತ್ಸಾಹಿಸಿದರು. ಇದರಿಂದಾಗಿ ತಕ್ಷಣವೇ ದತ್ತಾ ವಿಶೇಷ ತರಬೇತುದಾರನಿಂದ ಈಜನ್ನು ಕಲಿಯಲು ಪ್ರಾರಂಭಿಸಿದರು. ಬ್ಲೂ 2009 ರ ಅಕ್ಟೋಬರ್ 16 ರಂದು ತೆರೆಕಂಡಿತು.[][] ದತ್ತಾ, "ಈ ಯೋಜನೆಯ ಬಗ್ಗೆ ನನಗೆ ತಿಳಿದಾಗ, ನಾನು ಅಕ್ಷಯ್ ಯವರನ್ನು ಕರೆಯಿಸಿ, ಈ ಯೋಜನೆಯನ್ನು ಒಪ್ಪಿಕೊಳ್ಳಲಾಗುವುದಿಲ್ಲವೆಂದು ಅವರಿಗೆ ಹೇಳಿದೆ. ನನ್ನ ನಿರ್ಧಾರಕ್ಕೆ ಕಾರಣ ಏನೆಂಬುದು ಅವರಿಗೆ ತಿಳಿದಿತ್ತು. ಅಂದಾಜ್ ಚಲನಚಿತ್ರದ ಸಮಯದಲ್ಲಿ ನಾನು ಬಹುಪಾಲು ನೀರು ಪಾಲಾಗಿದ್ದೆ ಎಂಬುದು ಕೇವಲ ಕೆಲವರಿಗೆ ಮಾತ್ರ ಗೊತ್ತು. ಇದರಿಂದ ಅಕ್ಷಯ್ ನನ್ನನ್ನು ಪಾರುಮಾಡಿದ್ದರು, ಎಂದು ಹೇಳಿದ್ದಾರೆ. ನನಗೆ ಈಜು ಬರುವುದಿಲ್ಲ ಎಂದು ಅವರಿಗೆ ನೆನಪಿಸಿದಾಗ, ಅಕ್ಷಯ್ ಭಯವನ್ನು ಮರೆತು ತಕ್ಷಣವೇ ಈಜುವುದನ್ನು ಕಲಿ ಎಂದು ಹೇಳಿದ್ದರು" ಎಂದು ದತ್ತಾ ನೆನಪಿಸುತ್ತಾರೆ. "ಇಂದು, ಬ್ಲೂ ಕೇವಲ ನನ್ನ ಭಯವನ್ನು ಮೆಟ್ಟಿನಿಲ್ಲುವಂತೆ ಮಾಡಿತಲ್ಲದೇ, ನಾನು ಬದುಕಿರುವವರೆಗೂ ನನ್ನ ಜೊತೆಯಲ್ಲಿ ಉಳಿಯುವುದನ್ನು ನನಗೆ ಕಲಿಸಿಕೊಟ್ಟಿದೆ, ಎಂದು ನನಗನಿಸುತ್ತದೆ" ಎಂದು ಹೇಳುತ್ತಾರೆ.[]

ಇತ್ತೀಚೆಗೆ ತೆರೆಕಂಡ ಅವರ ಹೌಸ್ ಫುಲ್(ಸಿನಿಮಾ) ಭಾರತದಲ್ಲೆಲ್ಲಾ ಯಶಸ್ವಿ ಸಾಧನೆ ಮಾಡಿತು. ಈ ಚಲನಚಿತ್ರದಲ್ಲಿ ಅಕ್ಷಯ್ ಕುಮಾರ್, ದೀಪಿಕಾ ಪಡುಕೋಣೆ ಮತ್ತು ರಿತೇಶ್ ದೇಶ್ ಮುಖ್ ಪ್ರಮುಖ ಪಾತ್ರದಲ್ಲಿದ್ದಾರೆ.

ವೈಯಕ್ತಿಕ ಜೀವನ

[ಬದಲಾಯಿಸಿ]

ದತ್ತಾ ನ್ಯೂಯಾರ್ಕ್ ನಗರದಲ್ಲಿ ವಾಸವಾಗಿದ್ದಾಗ ನ್ಯೂಯಾರ್ಕ್ ಯಾಂಕೀಸ್ ಎಂಬ ಬೇಸ್ ಬಾಲ್ ತಂಡದ ನಾಯಕರಾದ ಡೆರೆಕ್ ಜೆಟರ್ ರವರೊಂದಿಗೆ ಮುಕ್ತ ವಿಹಾರ ಮಾಡಿದ್ದರು. ಅಲ್ಲಿ ಯಾಂಕೀಸ್ ಮೈದಾನದಲ್ಲಿ ನಡೆಯುತ್ತಿದ್ದ ಬೇಸ್ ಬಾಲ್ ಆಟದ ಸಂದರ್ಭದಲ್ಲಿ ದತ್ತಾ ಕಾಣಿಸಿಕೊಂಡಿದ್ದರು, ಹಾಗು ESPN ಈ ಸುದ್ದಿಯನ್ನು ವರದಿಮಾಡಿತ್ತು.[೧೦]

2010 ರ ಸೆಪ್ಟೆಂಬರ್ ನಲ್ಲಿ, ಭಾರತೀಯ ಟೆನಿಸ್ ಆಟಗಾರರಾದ ಮಹೇಶ್ ಭೂಪತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು.[೧೧][೧೨]

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]
ವರ್ಷ (ಚಿತ್ರೀಕರಣ) ಪಾತ್ರ ಇತರ ಟಿಪ್ಪಣಿಗಳು
2003 ಅಂದಾಜ್‌ ಕಾಜಲ್
ಪ್ರಧಾನ ಪಾತ್ರ
ವಿಜೇತೆ , ಫಿಲ್ಮ್‌ಫೇರ್‌ ಅತ್ಯುತ್ತಮ ಆರಂಭಿಕ ನಟಿ ಪ್ರಶಸ್ತಿ,
ಮುಂಬಯಿ ಸೆ ಆಯ ಮೇರಾ ದೋಸ್ತ್ ಕೇಸರ್
2004 ಖಾಕೀ ಐಸಾ ಜಾದೂ ಎಂಬ ಹಾಡಿನಲ್ಲಿ ಗೌರವ ನಟಿಯಾಗಿ ಕಾಣಿಸಿಕೊಂಡಿದ್ದಾರೆ
ಮಸ್ತಿ ಮೋನಿಕಾ
ಬರ್ದಾಷ್ತ್ ವಕೀಲೆ ಪಾಯಲ್
ಅರಸಚ್ಚಿ ಲಾರಾ ತಮಿಳು ಚಲನಚಿತ್ರ
Aan: Men at Work ಕಿರಣ್
2005 ಇನ್ಸಾನ್ ಮೇಘನಾ
ಎಲಾನ್ ಸೋನಿಯಾ
ಜುರ್ಮ್ ಸಂಜನ ಮಲ್ಹೋತ್ರ
ಕಾಲ್‌ ಇಶಿಕಾ
ನೋ ಎಂಟ್ರಿ ಕಾಜಲ್
ಏಕ್ ಅಜನಬಿ ಯುವತಿ ಅನಾಮಿಕ ಗೌರವ ನಟಿ
Dosti: Friends Forever ಕಾಜಲ್
2006 ಜಿಂದಾ ಜೆನ್ನಿ ಸಿಂಗ್
ಫನಾ ಜೀನತ್ ಗೌರವ ನಟಿ
ಅಲಗ್ ಸಬಸೆ ಅಲಗ್ ಹಾಡಿನಲ್ಲಿ ಗೌರವ ನಟಿ
ಭಾಗಂ ಬಾಗ್ ಮುನ್ನಿ/ನಿಶಾ/ಅದಿತಿ
2007 ಜೂಮ್ ಬರಾಬರ್ ಜೂಮ್ ಅನೈದಾ ರಜ/ಲೈಲಾ
ಪಾರ್ಟನರ್ ನೈನಾ
ಓಂ ಶಾಂತಿ ಓಂ ಸ್ವಯಂ ಪಾತ್ರ ದೀವಾನಗೀ ದೀವಾನಗೀ ಹಾಡಿನಲ್ಲಿ ಗೌರವ ನಟಿ
2008 ಜಂಬೂ ಸೋನಿಯಾ (voice)
ರಬ್‌ ನೇ ಬನಾದಿ ಜೋಡೀ ಫಿರ್ ಮಿಲಿಂಗೇ ಚಲ್ತೆ ಚಲ್ತೆ ಹಾಡಿನಲ್ಲಿ ಗೌರವ ನಟಿಯಾಗಿ
2009 ಬಿಲ್ಲು ಬಾರ್ಬರ್ ಬಿಂದ್ಯ
ಸತ್ಯ ಮೇವ ಜಯತೇ ತೆಲುಗು ಚಿತ್ರ
ಗೌರವ ನಟಿ
ಡು ನಾಟ್ ಡಿಸ್ಟರ್ಬ್ ಡಾಲಿ ಪ್ರಧಾನ ನಾಯಕಿ ಪಾತ್ರದಲ್ಲಿ
ಬ್ಲೂ ಮೋನಾ
2010 ಹೌಸ್ ಫುಲ್ ಹೀತಲ್ ಪಟೇಲ್
2011 ಡಾನ್ 2 - ದಿ ಚೇಸ್ ಕಂಟಿನ್ಯೂಸ್ ಲೊರಾ ಚಿತ್ರೀಕರಣದ ಹಂತದಲ್ಲಿದೇ
ಬಂದಾ ಯೇ ಬಿಂದಾಸ್ ಹೇ ನಿರ್ಮಾಣದ-ನಂತರದ್ದು

ಪ್ರಶಸ್ತಿಗಳು

[ಬದಲಾಯಿಸಿ]
  • 2004: ಅಂದಾಜ್ ಚಲನಚಿತ್ರಕ್ಕಾಗಿ , ಸ್ಟಾರ್ ಸ್ಕ್ರೀನ್ ಅತ್ಯುತ್ತಮ ಭರವಸೆ ಮೂಡಿಸಬಲ್ಲ ನಟಿ ಪ್ರಶಸ್ತಿ - ನಟಿ,
  • 2004:ಅಂದಾಜ್ ಚಿತ್ರಕ್ಕಾಗಿ , (ಪ್ರಿಯಾಂಕ ಚೋಪ್ರಾ ರವರೊಂದಿಗೆ ಒಟ್ಟಿಗೆ ಗೆದ್ದುಕೊಂಡದ್ದು) ಫಿಲ್ಮ್ ಫೇರ್ ಅತ್ಯುತ್ತಮ ಚೊಚ್ಚಿಲ ನಟಿ ಪ್ರಶಸ್ತಿ,
  • 2008: ರಾಜೀವ್ ಗಾಂಧಿ ಪ್ರಶಸ್ತಿ(ಚಲನಚಿತ್ರರಂಗಕ್ಕೆ ಮಹಿಳಾ ಕ್ಷೇತ್ರದಿಂದ ಸಲ್ಲಿಸಿರುವ ಸೇವೆಗಾಗಿ)

ನಾಮನಿರ್ದೇಶನಗಳು

[ಬದಲಾಯಿಸಿ]
  • 2006: ನೋ ಎಂಟ್ರಿ ಚಲನಚಿತ್ರಕ್ಕಾಗಿ, ಅತ್ಯುತ್ತಮ ಪೋಷಕ ನಟಿ IIFA ಪ್ರಶಸ್ತಿ
  • 2009:ಬಿಲ್ಲು ಚಲನಚಿತ್ರಕ್ಕಾಗಿ, ಅತ್ಯುತ್ತಮ ನಟಿ ಸ್ಟಾರ್ ಡಸ್ಟ್ ಪ್ರಶಸ್ತಿ

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ Shanadi, Govind (May 2000). "Lara Dutta - Miss Universe 2000". desiclub.com. New York. Archived from the original on 2011-11-06. Retrieved 2010-09-20.
  2. ಪಾಲಿಟಿಕಲ್ ಅನಿಮಲ್ , ಮ್ಯೂಸಿಕಲ್ ಜೀನಿಯಸ್, ಹೀಲಿಂಗ್ ಪೋಷನ್ - ನಿತಿನ್ ಸಾನಿ ಆನ್‌ಲೈನ್ ಲಭ್ಯವಿದೆ. Archived 2007-02-18 ವೇಬ್ಯಾಕ್ ಮೆಷಿನ್ ನಲ್ಲಿ.
  3. UNFPA ಗುಡ್ ವಿಲ್ ಅಂಬ್ಯಾಸಡರ್ಸ್ ಫ್ರೊಫೈಲ್ ಪೇಜ್, ಆನ್ ಲೈನ್ ಲಭ್ಯವಿದೆ Archived 2003-04-20 ವೇಬ್ಯಾಕ್ ಮೆಷಿನ್ ನಲ್ಲಿ.
  4. "ಆರ್ಕೈವ್ ನಕಲು". Archived from the original on 2012-06-30. Retrieved 2011-01-11.
  5. "boxofficeindia.com". Box office status for Bhagam Bhag. Archived from the original on 28 May 2007. Retrieved 26 July 2007.
  6. "ಆರ್ಕೈವ್ ನಕಲು". Archived from the original on 2009-10-12. Retrieved 2011-01-11.
  7. "imdb.com". JBJ does better overseas. Archived from the original on 30 ಸೆಪ್ಟೆಂಬರ್ 2007. Retrieved 26 July 2007.
  8. "boxofficeindia.com". Box office status for Partner. Archived from the original on 24 August 2007. Retrieved 26 July 2007.
  9. ೯.೦ ೯.೧ ೯.೨ http://sify.com/movies/bollywood/fullstory.php?id=14913612
  10. http://www.rediff.com/us/2001/jul/04usspec.htm
  11. "Lara, Mahesh Bhupathi engaged". ಟೈಮ್ಸ್ ಆಫ್ ಇಂಡಿಯ. New Dehli, India. Times News Network. September 19, 2010. Retrieved 2010-09-20. {{cite news}}: Cite has empty unknown parameter: |1= (help)
  12. Bhattacharya, Roshmila (September 19, 2010). "Lara Dutta super-excited about "new" character in Don-2". Hindustan Times. New Dehli, India. Archived from the original on 2010-09-21. Retrieved 2010-09-20. {{cite news}}: Cite has empty unknown parameter: |coauthors= (help)

ಬಾಹ್ಯ ಕೊಂಡಿಗಳು

[ಬದಲಾಯಿಸಿ]
Awards and achievements
ಪೂರ್ವಾಧಿಕಾರಿ
ಬೋಟ್ಸ್ವಾನ Mpule Kwelagobe
Miss Universe
2000
ಉತ್ತರಾಧಿಕಾರಿ
ಪೋರ್ಟೊ ರಿಕೊ Denise Quiñones
ಪೂರ್ವಾಧಿಕಾರಿ
Gul Panag
Femina Miss India
2000
ಉತ್ತರಾಧಿಕಾರಿ
Celina Jaitley