ಸಮರೇಶ್ ಭಟ್ಟಾಚಾರ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಮರೇಶ್ ಭಟ್ಟಾಚಾರ್ಯ
ಜನನ (1960-08-24) ೨೪ ಆಗಸ್ಟ್ ೧೯೬೦ (ವಯಸ್ಸು ೬೩)
ಪಶ್ಚಿಮ ಬಂಗಾಳ, ಭಾರತ
ವಾಸಸ್ಥಳಕಲ್ಕತ್ತಾ, ಪಶ್ಚಿಮ ಬಂಗಾಳ, ಭಾರತ
ರಾಷ್ಟ್ರೀಯತೆಭಾರತೀಯ
ಕಾರ್ಯಕ್ಷೇತ್ರ
 • ಅಜೈವಿಕ ರಸಾಯನಶಾಸ್ತ್ರ
 • ಆರ್ಗನೊಮೆಟಾಲಿಕ್ ರಸಾಯನಶಾಸ್ತ್ರ
ಸಂಸ್ಥೆಗಳು
 • ಜಾದವ್ಪುರ ವಿಶ್ವವಿದ್ಯಾಲಯ
ಅಭ್ಯಸಿಸಿದ ವಿದ್ಯಾಪೀಠ
 • ಜಾದವ್ಪುರ ವಿಶ್ವವಿದ್ಯಾಲಯ
 • ಇಂಡಿಯನ್ ಅಸೋಸಿಯೇಷನ್ ಫಾರ್ ದಿ ಕಲ್ಟಿವೇಷನ್ ಆಫ್ ಸೈನ್ಸ್
ಪ್ರಸಿದ್ಧಿಗೆ ಕಾರಣಪ್ಲಾಟಿನಮ್ ಗ್ರೂಪ್ ಮೆಟಲ್ಗಳ ಅಧ್ಯಯನ
ಗಮನಾರ್ಹ ಪ್ರಶಸ್ತಿಗಳು

ಸಮರೇಶ್ ಭಟ್ಟಾಚಾರ್ಯರವರು ಭಾರತೀಯ ಅಜೈವಿಕ ಹಾಗೂ ಆರ್ಗನೊಮೆಟಾಲಿಕ್ ರಸಾಯನಶಾಸ್ತ್ರಜ್ಞರು ಮತ್ತು ಜಾದವ್ಪುರ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರು[೧]. ಅವರು ವಿಶ್ವವಿದ್ಯಾನಿಲಯದಲ್ಲಿ ವಿಜ್ಞಾನ ವಿಭಾಗದ ಡೀನ್ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಸಾವಯವ ಅಣುಗಳ ಸಕ್ರಿಯಗೊಳಿಸುವಿಕೆಯಲ್ಲಿ ಅವುಗಳ ಬಳಕೆಗೆ ಸಂಬಂಧಿಸಿದಂತೆ ಪ್ಲಾಟಿನಮ್ಪ್ಲಾಟಿನಮ್ ಗ್ರೂಪ್ ಲೋಹಗಳ ಸಮನ್ವಯ ಸಂಯುಕ್ತಗಳ ಕುರಿತಾದ ಅಧ್ಯಯನಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು 'ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್'[೨] ಮತ್ತು 'ಪಶ‍್ಚಿಮ ಬಂಗಾಳ ಅಕಾಡೆಮಿ ಆಫ್ ಸೈನ್ಸ್ ಆಂಡ್ ಟೆಕ್ನಾಲಜಿ'ಯ ಚುನಾಯಿತ ಸಹವರ್ತಿ[೩]. ವೈಜ್ಞಾನಿಕ ಸಂಶೋಧನೆಗಾಗಿ ಭಾರತ ಸರ್ಕಾರದ ಉನ್ನತ ಸಂಸ್ಥೆಯಾದ 'ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರಿಸರ್ಚ್' ರಾಸಾಯನಿಕ ವಿಜ್ಞಾನಕ್ಕೆ ನೀಡಿದ ಕೊಡುಗೆಗಳಿಗಾಗಿ ಶಾಂತಿಸ್ವರೂಪ್ ಭಟ್ನಾಗರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇದು ಭಾರತದ ಅತ್ಯುನ್ನತ ವಿಜ್ಞಾನ ಪ್ರಶಸ್ತಿಗಳಲ್ಲಿ ಒಂದಾಗಿದೆ[೪].

ಜೀವನಚರಿತ್ರೆ[ಬದಲಾಯಿಸಿ]

ಜಾದವ್ಪುರ ವಿಶ್ವವಿದ್ಯಾಲಯ

ಸಮರೇಶ್ ಭಟ್ಟಾಚಾರ್ಯರವರು ಆಗಸ್ಟ್ ೨೪,೧೯೬೦ ರಂದು ಭಾರತದ ಪಶ್ಚಿಮ ಬಂಗಾಳದಲ್ಲಿ ಜನಿಸಿದರು. ಅವರು ಜಾದವ್ಪುರ ವಿಶ್ವವಿದ್ಯಾಲಯದಲ್ಲಿ ಪದವಿ ಅಧ್ಯಯನವನ್ನು ಮಾಡಿದರು[೫]. ೧೯೭೮ ರಲ್ಲಿ, ರಸಾಯನಶಾಸ್ತ್ರದಲ್ಲಿ ಬಿಎಸ್ಸಿ(ಬ್ಯಾಚುಲರ್ ಆಫ್ ಸೈನ್ಸ್) ಉತ್ತೀರ್ಣರಾದ ನಂತರ, ೧೯೮೦ ರಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು[೬]. ಅವರು ತಮ್ಮ ಡಾಕ್ಟರೇಟ್ ಅಧ್ಯಯನವನ್ನು 'ಇಂಡಿಯನ್ ಅಸೋಸಿಯೇಷನ್ ಫಾರ್ ದಿ ಕಲ್ಟಿವೇಷನ್ ಆಫ್ ಸೈನ್ಸ್' ನಲ್ಲಿ ಮಾಡಿದರು.೧೯೮೬ ರಲ್ಲಿ ಪಿಎಚ್ಡಿ ಪಡೆದ ನಂತರ ಜಾದವ್ಪುರ ವಿಶ್ವವಿದ್ಯಾಲಯದಲ್ಲಿ, ರಸಾಯನಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕರಾಗಿ ಸೇರಿಕೊಂಡರು. ಅಂದಿನಿಂದ ಅವರು ಸಂಸ್ಥೆಯಲ್ಲಿ ಅಜೈವಿಕ ರಸಾಯನಶಾಸ್ತ್ರದ ಪ್ರಾಧ್ಯಾಪಕರಾಗಿ ಹಾಗೂ ವಿಜ್ಞಾನ ವಿಭಾಗದ ಡೀನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಂಶೋಧನೆ[ಬದಲಾಯಿಸಿ]

ಸಮರೇಶ್ ಭಟ್ಟಾಚಾರ್ಯರವರ ಸಂಶೋಧನೆಗಳು ರುಥೇನಿಯಮ್, ರೋಡಿಯಮ್, ಪಲ್ಲಾಡಿಯಮ್, ಆಸ್ಮಿಯಮ್, ಇಂಡಿಯಮ್ ಮತ್ತು ಪ್ಲಾಟಿನಮ್ಗಳನ್ನು ಒಳಗೊಂಡಿರುವ ಪ್ಲಾಟಿನಮ್ ಗ್ರೂಪ್ ಲೋಹಗಳ ಮೇಲೆ ಕೇಂದ್ರೀಕರಿಸಿದೆ.ಜೈವಿಕ ಅಣುಗಳನ್ನು ಸಕ್ರಿಯಗೊಳಿಸುವಲ್ಲಿ ಅವುಗಳ ಉಪಯೋಗಗಳನ್ನು ಸಮರೇಶ್ ರವರು ಅಧ್ಯಯನ ಮಾಡಿದ್ದಾರೆ.ಅವರು ತಮ್ಮ ಸಂಶೋಧನೆಗಳನ್ನು ಹಲವಾರು ಪರಾಮರ್ಶೆ ಲೇಖನಗಳಲ್ಲಿ ದಾಖಲಿಸಿದ್ದಾರೆ[೭]. ಅವರು ೨೦೧೨-೧೩ ರ ಅವಧಿಯಲ್ಲಿ ಪಶ್ಚಿಮ ಬಂಗಾಳ ಅಕಾಡೆಮಿ ಆಫ್ ಸೈನ್ಸ್ ಆಂಡ್ ಟೆಕ್ನಾಲಜಿಯ 'ಸೆಕ್ಷನಲ್ ಕಮಿಟಿ ಫಾರ್ ಕೆಮಿಕಲ್ ಸೈನ್ಸಸ್' ನ ಮಾಜಿ ಸದಸ್ಯರಾಗಿದ್ದರು.

ಗೌರವಗಳು[ಬದಲಾಯಿಸಿ]

 1. ೨೦೦೫ ರಲ್ಲಿ ಸಮರೇಶ್ ರವರಿಗೆ 'ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರಿಸರ್ಚ್' ನ ಅತ್ಯುನ್ನತ ಭಾರತೀಯ ವಿಜ್ಞಾನ ಪ್ರಶಸ್ತಿಗಳಲ್ಲಿ ಒಂದಾದ ಶಾಂತಿಸ್ವರೂಪ್ ಭಟ್ನಾಗರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು[೮].
 2. ೨೦೦೬ ರಲ್ಲಿ ಭಾರತದ ರಾಸಾಯನಿಕ ಸಂಶೋಧನಾ ಸೊಸೈಟಿಯ ಕಂಚಿನ ಪದಕವನ್ನು ಪಡೆದರು.

ಉಲ್ಲೇಖಗಳು[ಬದಲಾಯಿಸಿ]

 1. "Department :: Chemistry". Jadavpur University. 2016.
 2. https://www.ias.ac.in/listing/bibliography/jcsc/Samaresh_Bhattacharya
 3. "WAST Executive Council (2013-14)". West Bengal Academy of Science and Technology. 2016.
 4. "View Bhatnagar Awardees". Shanti Swarup Bhatnagar Prize. 2016. Retrieved 12 November 2016.
 5. https://in.linkedin.com/in/samaresh-bhattacharya-a0624652[ಶಾಶ್ವತವಾಗಿ ಮಡಿದ ಕೊಂಡಿ]
 6. "Faculty profile". Jadavpur University. 2016.
 7. "Browse by Fellow". Indian Academy of Sciences. 2016.
 8. "Chemical Sciences". Council of Scientific and Industrial Research. 2016. Archived from the original on 2012-09-12. {{cite web}}: Unknown parameter |deadurl= ignored (help)