Today's featured article
|
ಕನ್ನಡ ಅಕ್ಷರಮಾಲೆಯು ಬ್ರಾಹ್ಮಿ ಲಿಪಿಯಿಂದ ಬೆಳೆದು ಬಂದಿದೆ. ಇದನ್ನು ಸ್ವರಗಳು, ಅನುಸ್ವಾರ, ವಿಸರ್ಗ, ವ್ಯಂಜನಗಳು, ಅವರ್ಗೀಯ ವ್ಯಂಜನಗಳೆಂದು ವಿಭಾಗಿಸಲಾಗಿದೆ. ಕನ್ನಡ ಅಕ್ಷರಮಾಲೆಯನ್ನು ಕನ್ನಡ ವರ್ಣಮಾಲೆಯೆಂದು ಕರೆಯಲಾಗುತ್ತದೆ. ನಾವು ಮಾತನಾಡುವ ಮಾತುಗಳೆಲ್ಲ ವಾಕ್ಯ ವಾಕ್ಯಗಳಾಗಿರುತ್ತವೆ. ವಾಕ್ಯಗಳು ಪದಗಳಿಂದ ಕೂಡಿರುತ್ತವೆ. ಪದಗಳು ಅಕ್ಷರಗಳಿಂದ ಕೂಡಿರುತ್ತವೆ. ಉದಾಹರಣೆಗೆ, ನಾನು ಶಾಲೆಗೆ ಹೋಗಿ ಬರುವೆನು. ಈ ವಾಕ್ಯದಲ್ಲಿ ನಾನು, ಶಾಲೆಗೆ, ಹೋಗಿ, ಬರುವೆನು, ಹೀಗೆ ನಾಲ್ಕು ಪದಗಳಿವೆ. ಒಂದೊಂದು ಪದದಲ್ಲೂ ಹಲವು ಅಕ್ಷರಗಳಿವೆ. ನಾನು ಎಂಬ ಪದದಲ್ಲಿ ನ್+ಆ+ನ್+ಉ ಎಂಬ ಧ್ವನಿಮಾ ವ್ಯವಸ್ಥೆಯ ಬೇರೆ ಬೇರೆ ಅಕ್ಷರಗಳಿವೆ. ಹೀಗೆ ಕನ್ನಡ ಭಾಷೆಯನ್ನು ಮಾತನಾಡುವಾಗ ಬಳಸುವ ಅಕ್ಷರಗಳ ಮಾಲೆಗೆ ವರ್ಣಮಾಲೆ ಅಥವಾ ಅಕ್ಷರಮಾಲೆ ಎಂದು ಕರೆಯುತ್ತೇವೆ.
|
Did you know...
|
ಕನ್ನಡ ವಿಶ್ವಕೋಶದ ಸದಸ್ಯರಿಂದ ರಚಿಸಲ್ಪಟ್ಟ ಹೊಸ ಲೇಖನಗಳಿಂದ ಕೆಲವು ಸ್ವಾರಸ್ಯಕರ ಸಂಗತಿಗಳು:
ದಕ್ಷಿಣ ಕೋರಿಯಾದ ಸಾಕಣೆ ಕೇಂದ ಸೀಗಡಿ ಬೆಳವಣಿಗೆಯ ಹೊಂಡ
- ಸಿಗಡಿ ಕೃಷಿ ಯು ಮನುಷ್ಯನ ಅಹಾರಕ್ಕಾಗಿ, ಜಲಚರಗಳನ್ನು ಸಾಕುವ ಉದ್ಯಮವಾಗಿದೆ. ಸಿಗಡಿ ಕೃಷಿಯು ಆಗ್ನೇಯ ಏಷಿಯಾದಲ್ಲಿ ಸಾಂಪ್ರದಾಯಿಕ ಸಣ್ಣ ಪ್ರಮಾಣದ ಉದ್ದಿಮೆಯಾಗಿ ಆರಂಭವಾಗಿ, ಇಂದು ಜಾಗತಿಕ ಉದ್ದಿಮೆಯೆನ್ನುವ ಮಟ್ಟಕ್ಕೆ ಬೆಳೆದಿದೆ(ಚಿತ್ರಿತ).
- ಲತಾ ಮಂಗೇಶ್ಕರ್ ಭಾರತದ ಪ್ರಸಿದ್ಧ ಗಾಯಕಿಯರಲ್ಲಿ ಒಬ್ಬರು. ಹಿಂದಿ ಚಿತ್ರರಂಗದಲ್ಲಿ ಬಹಳ ಹಾಡುಗಳನ್ನು ಹಾಡಿರುವ ಇವರು, ೧೯೬೭ರಲ್ಲಿ ಬಿಡುಗಡೆಯಾದ "ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ" ಎಂಬ ಕನ್ನಡ ಚಲನಚಿತ್ರದಲ್ಲಿನ "ಬೆಳ್ಳನೆ ಬೆಳಗಾಯಿತು" ಎಂಬ ಗೀತೆಯನ್ನು ಹಾಡಿದ್ದಾರೆ.
- ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಐತಿಹಾಸಿಕವಾಗಿ ಜಮ್ಮು ಮತ್ತು ಕಾಶ್ಮೀರದ ಹಿಂದಿನ ರಾಜಪ್ರಭುತ್ವಕ್ಕೆ ಸೇರಿದೆ. ಆಜಾದ್ ಕಾಶ್ಮೀರ್ (ಎಜೆಕೆ) ಎಂದು ಕರೆಯಲ್ಪಡುವ ಈ ಪ್ರದೇಶವು ೧೯೭೪ರಲ್ಲಿ ಅಂಗೀಕರಿಸಲ್ಪಟ್ಟ ಆಜಾದ್ ಕಾಶ್ಮೀರ ಮಧ್ಯಂತರ ಸಂವಿಧಾನ ಕಾಯ್ದೆಯಡಿ ಆಡಳಿತ ನಡೆಸುತ್ತದೆ.
- ಗಂಟಲು ಕಶೇರುಕ ಅಂಗರಚನಾಶಾಸ್ತ್ರದಲ್ಲಿ, ಗಂಟಲು ಎಂದರೆ ಕುತ್ತಿಗೆಯ ಮುಂಭಾಗ, ಮತ್ತು ಕಶೇರುಖಂಡದ ಮುಂದೆ ಸ್ಥಿತವಾಗಿರುತ್ತದೆ. ಇದು ಗ್ರಸನಕೂಪ ಮತ್ತು ಗಂಟಲಗೂಡನ್ನು ಹೊಂದಿರುತ್ತದೆ. ಕಿರುನಾಲಿಗೆಯು ಇದರ ಒಂದು ಪ್ರಮುಖ ವಿಭಾಗವಾಗಿದೆ.
- ಎಎಸ್9100 ವ್ಯಾಪಕವಾಗಿ ಅಳವಡಿಸಿಕೊಳ್ಳಲಾದ ವೈಮಾನಿಕ ಉದ್ಯಮದ ಪ್ರಮಾಣೀಕೃತ ಗುಣಮಟ್ಟ ನಿರ್ವಹಣಾ ವ್ಯವಸ್ಥೆ. ಇದು ಅಕ್ಟೋಬರ್ ೧೯೯೯ ರಲ್ಲಿ ಆಟೋಮೋಟಿವ್ ಎಂಜಿನಿಯರ್ಸ್ ಸೊಸೈಟಿ ಮತ್ತು ಯುರೋಪಿಯನ್ ಅಸೋಸಿಯೇಷನ್ ಏರೋಸ್ಪೇಸ್ ಇಂಡಸ್ಟ್ರೀಸ್ ಸೇರಿ ಬಿಡುಗಡೆ ಮಾಡಿದವು .
|
|
In the news
|
- ೧ ಜನವರಿ: ಮೇ ೪ರಿಂದ ಜೂನ್ ೧೦ರವರೆಗೆ ಸಿಬಿಎಸ್ಇ ಬೋರ್ಡ್ ಪರೀಕ್ಷೆ [೩]
- ೨೮ ದಶಂಬರ: ಜನವರಿಯಲ್ಲಿ ಭಾರತಕ್ಕೆ ಬರಲಿವೆ ಇನ್ನೂ 3 ರಫೇಲ್ ಯುದ್ಧ ವಿಮಾನಗಳು[೫]
- ಭಾರತ ಸರ್ಕಾರದ ಕೋವಿಡ್ -19 ರ ಅಧಿಕೃತ ಜಾಲತಾಣ
- ಕರ್ನಾಟಕ ಸರ್ಕಾರದ ಕೋವಿಡ್ -19 ರ ಅಧಿಕೃತ ಜಾಲತಾಣ
|
On this day...
|
ಜನವರಿ:
|
|