ಸದಸ್ಯ:Br Bharath Kumar/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾರ್ಪೊರೇಶನ್ ಬ್ಯಾಂಕ್[ಬದಲಾಯಿಸಿ]

ಕಾರ್ಪೋರೇಷನ್ ಬ್ಯಾಂಕ್
ಸಂಸ್ಥೆಯ ಪ್ರಕಾರಬ್ಯಾಂಕ್
ಸ್ಥಾಪನೆ-- , --
ಮುಖ್ಯ ಕಾರ್ಯಾಲಯ--
--,
--
ಪ್ರಮುಖ ವ್ಯಕ್ತಿ(ಗಳು)(), Chairman and Managing Director
ಉದ್ಯಮಬ್ಯಾಂಕ್
ಉತ್ಪನ್ನಸಾಲ
ಆದಾಯIncrease US$ () billion (2008)
ನಿವ್ವಳ ಆದಾಯIncrease US$ () billion (2008)
ಒಟ್ಟು ಆಸ್ತಿIncrease US$ () billion (2008)
ಉದ್ಯೋಗಿಗಳು()
ಜಾಲತಾಣwww.corpbank.com/

ಇದನ್ನೂ ನೋಡಿ[ಬದಲಾಯಿಸಿ]


ಕಾರ್ಪೊರೇಷನ್ ಬ್ಯಾಂಕ್ ಒಂದು ಸಾರ್ವಜನಿಕ ವಲಯದ ಬ್ಯಾಂಕಿಂಗ್ ಸಂಸ್ಥೆ. ಇದರ ಪ್ರಧಾನ ಕಚೇರಿಯು ಮಂಗಳೂರಿನಲ್ಲಿದೆ (ಕರ್ನಾಟಕ,ಭಾರತ).ಬ್ಯಾಂಕ್ ಪ್ಯಾನ್ ಭಾರತದ ಅಸ್ಥಿತ್ವವನ್ನು ಹೊಂದಿದೆ. ಬ್ಯಾಂಕ್ ೨೪೪೦ ಸ್ವಯಂಚಾಲಿತ ಸಿಬಿಎಸ್ ಶಾಖೆಗಳನ್ನು, ೩೦೪೦ ಎಟಿಎಂ,ಮತ್ತು ದೇಶಾದ್ಯಂತ ೪೭೨೪ ಶಾಖೆರಹಿತ ಬ್ಯಾಂಕಿಂಗ್ ಘಟಕಗಳನ್ನು ಹೊಂದಿದೆ. ಬ್ಯಾಂಕ್ ಹಾಂಕಾಂಗ್ ಮತ್ತು ದುಬೈನಲ್ಲೂ ತನ್ನ ಪ್ರತಿನಿಧಿ ಕಚೇರಿಗಳನ್ನು ಹೊಂದಿದೆ. ೨೨೦೦ ಶಾಖೆಗಳನ್ನು, ೧೮೦೦+ ಎಟಿಎಂ, ಮತ್ತು ೮೦೦೦ ಕ್ರಿಯಾತ್ಮಕ ಘಟಕಗಳನ್ನು ಹೊಂದಿದೆ. ಇದರ ಜೊತೆಗೆ ಪ್ಯಾನ್ ಭಾರತ ಅಸ್ತಿತ್ವವನ್ನು ಹೊಂದಿದೆ.[೧]

ಕಾರ್ಪೊರೇಷನ್ ಬ್ಯಾಂಕಿನ ಏಟಿಎಂ





ಇತಿಹಾಸ[ಬದಲಾಯಿಸಿ]

ಭಾರತದ ಅತ್ಯಂತ ಹಳೆಯ ಬ್ಯಾಂಕುಗಳಲ್ಲಿ ಒಂದಾದ ಇದನ್ನು ಉಡುಪಿ

ಕಾರ್ಪೊರೇಷನ್ ಬ್ಯಾಂಕ್ ಸ್ಥಾಪನೆಗೊಂಡ ಸ್ಥಳ

ನೇತೃತ್ವದ ದಾನಿಗಳ ಒಂದು ಸಣ್ಣ ಗುಂಪು,"ಖಾನ್ ಬಹದ್ದೂರ್ ಹಾಜಿ ಕಾಸಿಂ ಸಾಹೇಬ್ ಬಾಹಾದೂರ್" ಅವರ ಮುಂದಾಳತ್ವದಲ್ಲಿ ೧೨ ಮಾರ್ಚ್ ೧೯೦೬ ರಂದು ಸ್ಥಾಪಿಸಲಾಯಿತು. ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದ ಉಡುಪಿಯಲ್ಲಿ ಜನಸಾಮಾನ್ಯರು ಹಣ ಕಾಸಿನ ವ್ಯವಹಾರಗಳಿಗಾಗಿ ಕೆಲವು ಶ್ರೀಮಂತ ಖಾಸಗಿ ವ್ಯಕ್ತಿಗಳ ಮೇಲೆ ಅವಲಂಬಿತರಾಗಿ ಬಳಲುತ್ತಿದ್ದರು. ಇದನ್ನು ತಡೆದು ಜನಸಾಮಾನ್ಯರಿಗೆ ಪರಿಹಾರ ಒದಗಿಸಲು ಈ ಬ್ಯಾಂಕ್ ಅನ್ನು ಆರಂಭಿಸಲಾಯಿತು. ನಿರ್ದಿಷ್ಟವಾಗಿ ಉಡುಪಿ ಜಿಲ್ಲೆಯ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸಲು ಈ ಬ್ಯಾಂಕನ್ನು ಸ್ಥಾಪಿಸಲಾಯಿತು. ಪ್ರತಿಯೊಬ್ಬ ಶುದ್ಧ, ಸರಳ ಮತ್ತು ದೇಶಪ್ರೇಮವುಳ್ಳವ ಇದರಲ್ಲಿ ಭಾಗಿಯಾಗಬೇಕೆಂಬುದು ಬ್ಯಾಂಕ್ ಸಂಸ್ಥಾಪಕರ ಆಶಯವಾಗಿತ್ತು. ಅವರ ಆಶಯದಂತೆ ಬ್ಯಾಂಕ್ ಇಂದು ಬಹು ದೊಡ್ದ ಮಟ್ಟದಲ್ಲಿ ಬೆಳೆದು ನಿಂತಿದೆ. ಎಲ್ಲರ ಪ್ರಯತ್ನ, ಸಾಂಪ್ರದಾಯಿಕ ಮೌಲ್ಯಗಳು, ನವೀನ ವಿಧಾನಗಳ ಬಳಕೆ, ಸೇವೆ ಮತ್ತು ವೃತ್ತಿಪರ ಕಾಳಜಿ, ಜೊತೆಗೆ ವಾಣಿಜ್ಯ ಪರಿಗಣನೆಗಳು, ಸಾರ್ವಜನಿಕ ಕಾಳಜಿಗಳಿಂದ ಸಮತೋಲನದ ಬೆಳವಣಿಗೆಯಾಗಿ ಬ್ಯಾಂಕ್ ಇಂದು ಬಹು ದೊಡ್ದ ಮಟ್ಟದಲ್ಲಿ ಬೆಳೆದು ನಿಂತಿದೆ. ಇಂದು, ಅತ್ಯಂತ ಆಧುನಿಕ ತಂತ್ರಜ್ಞಾನ ಪ್ರೇರಿತ ಉತ್ಪನ್ನಗಳು ಮತ್ತು ಸೇವೆಗಳಿಂದ ಬ್ಯಾಂಕ್ ರಾಷ್ಟ್ರವ್ಯಾಪಿ ತನ್ನ ಶಾಖೆಗಳನ್ನು ಹೊಂದಿದೆ. ಉತ್ತಮವಾಗಿ ನಿರ್ವಹಣೆಯಾಗುತ್ತಿರುವ ಭಾರತದ ಪ್ರಮುಖ ಬ್ಯಾಂಕುಗಳಲ್ಲಿ ಇದು ಒಂದಾಗಿದೆ. ಬ್ಯಾಂಕ್ ಸಾರ್ವಜನಿಕ ವಲಯದ ಎರಡನೇ ಅತಿದೊಡ್ಡ ಎಟಿಎಂ ಜಾಲವನ್ನು ಹೊಂದಿದೆ.

ಬ್ಯಾಂಕಿಂಗ್ ೧೧೦ ವರ್ಷಗಳು[ಬದಲಾಯಿಸಿ]

ಕಾರ್ಪೊರೇಷನ್ ಬ್ಯಾಂಕ್ ಮಾರ್ಚ್ ೧೨ ೨೦೧೫ ರಂದು ತನ್ನ ಅಸ್ತಿತ್ವದ ನೂರ ಹತ್ತು ವರ್ಷ ಪೂರ್ಣಗೊಳಿಸಿತು. ಈ ಸಂತಸವನ್ನು ಆಚರಿಸುವ ಸಂದರ್ಭದಲ್ಲಿ ಸಮಾಜಕ್ಕೆ ಅಪಾರ ಕೊಡುಗೆಗಳನ್ನು ನೀಡಿದ ಐದು ಪ್ರಮುಖ ವ್ಯಕ್ತಿಗಳನ್ನು ಬ್ಯಾಂಕಿನ ವತಿಯಿಂದ ಗೌರವಿಸಲಾಯಿತು. ಇದರಲ್ಲಿ ಡಾ ಬಿ.ಎಂ. ಹೆಗ್ಡೆ, ಖ್ಯಾತ ವೈದ್ಯ ಡಾ ಬಿ ರಮಣ ರಾವ್, ಶ್ರೀಮತಿ ಇಳಾ ಭಟ್, ಸಾಮಾಜಿಕ ಉದ್ಯಮಿ ಮತ್ತು ಸೇವಾ ಸಂಸ್ಥಾಪಕ ಡಾ ಬಿಆರ್ ಶೆಟ್ಟಿ, ಉದ್ಯಮಿ ಮತ್ತು ಡಾ ಕದ್ರಿ ಗೋಪಾಲನಾಥ್, ಮುಂತಾದವರು ಸೇರಿದ್ದರು. ಇದೇ ಸಂದರ್ಭದಲ್ಲಿ "ಐಪ್ಯಾಡ್ ಇಂಟರ್ನೆಟ್ ಬ್ಯಾಂಕಿಂಗ್" ಎಂಬ ಒಂದು ಹೊಸ ಅಪ್ಲಿಕೇಶನ್ ಅನ್ನು ಬಿಡುಗಡೆಗೊಳಿಸಲಾಯಿತು. ಇದರ ಜೊತೆಗೆ ಬ್ಯಾಂಕಿನ ಸಂಚಾರಿ ದೂರವಣಿ/ಸ್ಥಿರ ದೂರವಾಣಿ ಕರೆಗಳಿಗಾಗಿ ಒಂದು ಹೊಸ " ಕಾಲರ್ ಟ್ಯೂನ್ " ಅನ್ನೂ ಈ ಕಾರ್ಯಕ್ರಮದಲ್ಲಿ ಉದ್ಘಾಟಿಸಲಾಯಿತು. ಇದೇ ಸಂದರ್ಭದಲ್ಲಿ ಹಿಂದುಳಿದ ಹಳ್ಳಿಗಳಲ್ಲಿನ ೧೦೦ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ೨೫ ಹಳ್ಳಿಗಳಲ್ಲಿ ಗ್ರಂಥಾಲಯ ಕಟ್ಟಿಸಲಾಯಿತು. ಹಂತ ಹಂತವಾಗಿ ಇದು ೭೫ ಹಳ್ಳಿಗಳಿಗೆ ಮುಂದುವರೆಯಿತು.

ಯೋಜನೆಗಳು[ಬದಲಾಯಿಸಿ]

  • ಎಸ್.ಎಮ್.ಇ ಮತ್ತು ಕೃಷಿ ಭಾಗಗಳನ್ನು ಪೂರೈಸುವುದಕ್ಕಾಗಿ, ಬ್ಯಾಂಕ್ ಭಾರತದಾದ್ಯಂತ ಹದಿನಾರು ನಗರಗಳಲ್ಲಿ ವಿಶೇಷ ಎಸ್.ಎಮ್.ಇ ಸಾಲ ಕೇಂದ್ರಗಳನ್ನು ನಿರ್ವಹಿಸುತ್ತಿದೆ.
  • ಬ್ಯಾಂಕ್ ಕಾರ್ಪ್ ನೆಟ್ ಎಂಬ ವ್ಯವಸ್ಥೆಯ ಮೂಲಕ ತನ್ನ ಚಿಲ್ಲರೆ ವ್ಯಾಪಾರ ಮತ್ತು ಕಾರ್ಪೊರೇಟ್ ಗ್ರಾಹಕರಿಗೆ ಆನ್ಲೈನ್ ಬ್ಯಾಂಕಿಂಗ್ ಸೇವೆಯನ್ನು ನಿರ್ವಹಿಸುತ್ತಿದೆ.
  • ಬ್ಯಾಂಕ್ ಈ ಅಪ್ಲಿಕೇಷನ್ ಮೂಲಕ ವೈಯಕ್ತಿಕ ಇಂಟರ್ನೆಟ್ ಬ್ಯಾಂಕಿಂಗ್ ಅನುಮತಿಸುತ್ತದೆ.
  • ಬ್ಯಾಂಕ್ ಪ್ರಾಜೆಕ್ಟ್ ಸಂಕಲ್ಪ ಎಂಬ ವ್ಯಾಪಾರ ಪ್ರಕ್ರಿಯೆಯ ಮರು ಎಂಜಿನಿಯರಿಂಗ್ ಮತ್ತು ಸಾಂಸ್ಥಿಕ ನಿರ್ವಹಣೆ ಯೋಜನೆಯನ್ನು ನಡೆಸುತ್ತಿದೆ.

ರೇಟಿಂಗ್ಸ್[ಬದಲಾಯಿಸಿ]

ಸಿ.ಆರ್.ಐ.ಎಸ್.ಐ.ಎಲ್ ಕಾರ್ಪೊರೇಷನ್ ಬ್ಯಾಂಕಿನ ಈ ಕೆಳಗಿನ ಕಾರ್ಯಕ್ರಮಗಳನ್ನು ಸ್ಪಷ್ಟಪಡಿಸಿದೆ:-

  • ರೂಪಾಯಿ ೨ ಶತಕೋಟಿ ಬಾಂಡು[ಎಎ]
  • ಪ್ರಮಾಣಪತ್ರ ಠೇವಣಿಗಳ ಕಾರ್ಯಕ್ರಮ[ಪಿ೧+]
  • ಸ್ಥಿರ ಠೇವಣಿ ಕಾರ್ಯಕ್ರಮ[ಎಪ್.ಎ.ಎ.ಎ]

ಪ್ರಶಸ್ತಿಗಳು[ಬದಲಾಯಿಸಿ]

ಕಾರ್ಪೊರೇಶನ್ ಬ್ಯಾಂಕ್ ಹಲವಾರು ಅತ್ಯುನ್ನತ ಪ್ರಶಸ್ಥಿಗಳನ್ನು ಪಡೆದುಕೊಂಡಿದೆ.

ಗುರುತಿಸುವಿಕೆ[ಬದಲಾಯಿಸಿ]

  • ಯುನೈಟೆಡ್ ಸ್ಟೇಟ್ಸ್ ಅಡಿಯಲ್ಲಿ ಶತಕೋಟಿ ಡಾಲರ್ ವಹಿವಾಟು ಹೊಂದಿರುವ ಅತ್ಯುತ್ತಮ ೨೦೦ ಕಂಪನಿಗಳಲ್ಲಿ ಒಂದು.
  • ಡಿಸೆಂಬರ್ ೭ ೨೦೦೩ ರ ಸಮೀಕ್ಷೆಯ ಪ್ರಕಾರ ಇದು ಭಾರತದ ಅತ್ಯುತ್ತಮ ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳಲ್ಲಿ ಒಂದು.
  • ಭಾರತದ ಉತ್ತಮ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಒಂದು.

ಉತ್ಪನ್ನಗಳು ಮತ್ತು ಸೇವೆಗಳು[ಬದಲಾಯಿಸಿ]

  • ಎನಿವೇರ್ ಬ್ಯಾಂಕಿಂಗ್
  • ಕಾರ್ಪ್ ಕನ್ವೀನಿಯನ್ಸ್ ಅಂತರಾಷ್ಟ್ರೀಯ ಕ್ರೆಡಿಟ್ ಕಾರ್ಡ್
  • ಇಂಟರ್ ಬ್ಯಾಂಕ್ ಪಾವತಿ ಸೇವೆ
  • ಕ್ಯಾಂಪಸ್ ನಗದು ಕಾರ್ಡ್
  • ಕಾರ್ಪೊರೇಟ್ ಟಾವೆಲ್ ಕಾರ್ಡ್
  • ಎಟಿಎಂ ಬಳಸಿ ಹಣ ವರ್ಗಾವಣೆ
  • ಎಸ್.ಎಮ್.ಎಸ್ ಬ್ಯಾಂಕಿಂಗ್
  • ಮೊಬೈಲ್ ಬ್ಯಾಂಕಿಂಗ್
  • ಇಂಟರ್ನೆಟ್ ಬ್ಯಾಂಕಿಂಗ್
  • ಎಂ ವಾಣಿಜ್ಯ
  • ಬಹು ಸಿಟಿ ಚೆಕ್
  • ಆನ್ಲೈನ್ ತೆರಿಗೆ ಪಾವತಿ
  • ಪೇ ರೋಲ್ ಖಾತೆ
  • ಕಾರ್ಪ್ ಕಾಣಸಿಗುವ
  • ಮೂರು ಇನ್ ಒನ್ ಖಾತೆಯನ್ನು
  • ಚಿನ್ನದ ನಾಣ್ಯಗಳನ್ನು
  • ಕಾರ್ಪ್ ಮನೆಯಲ್ಲಿ ವಸತಿ ಸಾಲ
  • ಕಾರ್ಪ್ ವಾಹನ-ವಾಹನಗಳನ್ನು ಸಾಲ
  • ಕಾರ್ಪ್ ವಿದ್ಯಾ-ಶಿಕ್ಷಣ ಸಾಲ
  • ಕಾರ್ಪ್ ವಯಕ್ತಿಕ ಸಾಲ
  • ಕಾರ್ಪ್ ಸೈಟ್ ಸಾಲ
  • ಕಾರ್ಪ್ ಗ್ರಾಹಕ ಸಾಲ
  • ಕಾರ್ಪ್ ವೈದ್ಯ ಪ್ಲಸ್
  • ಎನ್.ಆರ್.ಐ ಸೇವೆ
  • ಫಾಸ್ಟ್ ಸಂಗ್ರಹಿಸುವ ಸೇವೆ

ಮುಂತಾದ ಹಲವು ಸೇವೆಗಳು


ಉಲ್ಲೇಖಗಳು[ಬದಲಾಯಿಸಿ]

[೨] [೩] [೪] [೫] [೬] [೭] [೮]

  1. ಉಡುಪಿ ಜಿಲ್ಲೆ
  2. https://www.corpbanknet.com/
  3. http://www.corpbank.com/node/59105
  4. https://www.shorttutorials.com/missed-call-bank-balance-enquiry/corporation-bank.html
  5. https://play.google.com/store/apps/details?id=com.vayana.mtc.corpbank&hl=en
  6. https://www.google.co.in/search?q=corporation+bank&ie=utf-8&oe=utf-8&gws_rd=cr&ei=5s6VWJ3kGYHSvgT5pbXwCQ#q=corporation+bank+debit+card+balance+check+online
  7. https://www.bankbazaar.com/debit-card.html
  8. https://corpbank.electracard.com/corpbank/enrollment/enroll_welcome.jsp