ಸದಸ್ಯ:2240748gaganyc/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲೂಥರ್ ಬರ್ಬ್ಯಾಂಕ್[ಬದಲಾಯಿಸಿ]

Luther_Burbank_on_the_Steps_of_his_Cabin_at_Sebastopol
ಲೂಥರ್ ಬರ್ಬ್ಯಾಂಕ್
Leucanthemum_x_superbum_'Becky'_in_NH
ಶಾಸ್ತಾ ಡೈಸಿ

ಲೂಥರ್ ಬರ್ಬ್ಯಾಂಕ್, ಇವರು ಅಮೆರಿಕನ್ ಸಸ್ಯಶಾಸ್ತ್ರಜ್ಞ ಮತ್ತು ತೋಟಗಾರಿಕಾಶಾಸ್ತ್ರಜ್ಞರಾಗಿದ್ದರು. ಕೃಷಿ ವಿಜ್ಞಾನದಲ್ಲಿ ಪ್ರವರ್ತಕರಾದ ಇವರು ತಮ್ಮ ೫೫ ವರ್ಷಗಳ ವೃತ್ತಿಜೀವನದಲ್ಲಿ ೮೦೦ಕ್ಕೂ ಹೆಚ್ಚು ತಳಿಗಳು ಮತ್ತು ಅನೇಕ ಪ್ರಭೇದಗಳನ್ನು ವಿಕಸನೆಗೊಳಿಸಿದ್ದಾರೆ. ಈ ಪಟ್ಟಿಯಲ್ಲಿ ಹಲವಾರು ಹಣ್ಣುಗಳು, ಹೂವುಗಳು, ಧಾನ್ಯಗಳು, ಹುಲ್ಲುಗಳು ಮತ್ತು ತರಕಾರಿಗಳು ಸೇರಿವೆ. ಸ್ಪೈನ್‌ಗಳಿಲ್ಲದ ಕಳ್ಳಿ [೧], ಪ್ಲಮ್‌ಕಾಟ್ ಮತ್ತು ಮುಂತಾದ ಹೈಬ್ರಿಡ್ ಸಸ್ಯಗಳ ಅಭಿವೃದ್ಧಿಗೆ ಸೃಷ್ಟಿಕರ್ತರು.

Russet_potato
ರಸ್ಸೆಟ್ ಬರ್ಬ್ಯಾಂಕ್ ಆಲೂ

ಬರ್ಬ್ಯಾಂಕ್‌ನ ಯಶಸ್ವಿ ಕಂಡ ತಳಿಗಳ ನಡುವೆ ಪ್ರಮುಖವಾದದ್ದು ಶಾಸ್ತಾ ಡೈಸಿ, ಫೈಯರ್ ಪೊಪ್ಪಿ, ದಿ ಫ್ಲೇಮಿಂಗ್ ಗೋಲ್ಡ್ ಮತ್ತು ಮುಂತಾದವು. ವ್ಯತ್ಯಯನ ಒಳಗೊಂಡ ಬರ್ಬ್ಯಾಂಕ್ ಆಲೂಗಡ್ಡೆ, ಇದು ರಸ್ಸೆಟ್ ಬಣ್ಣದ ಚರ್ಮ ಹೊಂದಿದ್ದ ಕಾರಣದಿಂದಾಗಿ ಇದಕ್ಕೆ ರಸ್ಸೆಟ್ ಬರ್ಬ್ಯಾಂಕ್ ಆಲೂ ಎಂದು ಹೆಸರು ಬಂತು.ಈ ಆಲೂಗಡ್ಡೆ ಆಹಾರ ಸಂಸ್ಕರಣೆಯಲ್ಲಿ ವಿಶ್ವದ ಪ್ರಮುಖ ಆಲೂಗಡ್ಡೆಯಾಗಿದೆ. ರಸ್ಸೆಟ್ ಬರ್ಬ್ಯಾಂಕ್ ಆಲೂಗಡ್ಡೆಯನ್ನು ವಾಸ್ತವವಾಗಿ ಮಹಾ ಕ್ಷಾಮದ ನಂತರ ಐರ್ಲೆಂಡ್‌ನಲ್ಲಿನ ವಿನಾಶಕಾರಿ ಪರಿಸ್ಥಿತಿಯಿಂದ ಹೊರಬರಲು ಕಂಡುಹಿಡಿಯಲಾಗಿತ್ತು. ಈ ಆಲೂವಿನ ವಿಶಿಷ್ಟ ಲಕ್ಷಣವೆಂದರೆ ಲೇಟ್ ಬ್ಲೈಟ್ ರೋಗ ನಿರೋಧಕವಾಗಿದೆ. [೨]

ಲೂಥರ್ ಬರ್ಬ್ಯಾಂಕ್ ಅವರು ಜನಿಸಿದ್ದು ಮಾರ್ಚ್ ೭ ೧೭೪೯, ಅಂದು ಕ್ಯಾಲಿಫೋರ್ನಿಯಾದ ಆರ್ಬರ್ ಡೇ ಎಂದು ಅವರ ಗೌರವಾರ್ಥವಾಗಿ ಆಚರಿಸಲಾಗುತ್ತದೆ.[೩]

ಜೀವನ ಮತ್ತು ಕೆಲಸ[ಬದಲಾಯಿಸಿ]

Luther_Burbank_1900_Papaver

ಲೂಥರ್ ಬರ್ಬ್ಯಾಂಕ್ ಮ್ಯಾಸುಚುಸೆಟ್ಸ್‌ನ ಲ್ಯಾನಕಾಸ್ಟರ್‌ನಲ್ಲಿ ಜನಿಸಿದರು. ಅಲ್ಲಿದ್ದ ಲ್ಯಾನಕಾಸ್ಟರ್‌ ಕೌಂಟಿ ಅಕಾಡೆಮಿಯಲ್ಲಿ ಪ್ರೌಢಶಾಲಾ ವರೆಗು ಶಿಕ್ಷಣವನ್ನು ಪಡೆದರು. ತನ್ನ ತಾಯಿ ನೊಡಿಕೊಳ್ಳುತ್ತಿದ್ದ ತೋಟದಲ್ಲಿ ಹೂವಿನ ಸಸ್ಯಗಳನ್ನು ನೋಡುತ್ತ ಆನಂದಿಸಿತ್ತಿದ್ದರು. ಅವರು ೧೮ ವರ್ಷ ಪ್ರಾಯದಲ್ಲಿ ಅವರ ತಂದೆಯನ್ನು ಕಳೆದುಕೊಂಡರು. ಪಿತ್ರಾರ್ಜಿತವನ್ನು ಬಳಸಿ ಲುನೆನ್‌ಬರ್ಗ್ ಬಳಿ ೧೭ ಎಕರೆ ಜಮೀನನ್ನು ಖರೀದಿಸಿದರು. ಇಲ್ಲಿಯೆ ಅವರು ಬರ್ಬ್ಯಾಂಕ್ ಆಲೂಗಡ್ಡೆಯನ್ನು ಅಭಿವೃದ್ಧಿಪಡಿಸಿದರು ಹಾಗು ಆಲೂಗೆಡ್ಡೆಯ ಹಕ್ಕನ್ನು $೧೫೦ ಕ್ಕೆ ಮಾರಾಟ ಮಾಡಿ ಬಂದ ಹಣದಲ್ಲಿ ಕ್ಯಾಲಿಫೋರ್ನಿಯಾದ ಸೆಂಟಾ ರೋಸಾಗೆ ಪ್ರಯಾಣಿಸಿದರು. ನಂತರ, ಇವರ ಸಾಮಾನ್ಯ ಸಸ್ಯಕ ಪ್ರಯೋಗಗಳಿಂದ ರಸ್ಸೆಟೆಡ್ ಚರ್ಮವನ್ನು ಆಯ್ಕೆಮಾಡಿ ಅದಕ್ಕೆ ರಸ್ಸೆಟ್ ಬರ್ಬ್ಯಾಂಕ್ ಆಲೂಗಡ್ಡೆ ಎಂದು ಹೆಸರಿಡಲಾಯಿತು. ಪ್ರಸ್ತುತ ಇಂದು ರಸ್ಸೆಟ್ ಬರ್ಬ್ಯಾಂಕ್ ಆಲೂಗೆಡ್ಡೆಯು ಯುನೈಟೆಡ್ ಸ್ಟೇಟ್ಸ್ನಲ್ಲಿ ವ್ಯಾಪಕವಾಗಿ ಬೆಳೆಯುವ ಬೆಳೆಗಳಲ್ಲಿ ಒಂದಾಗಿದೆ. ಈ ಆಲೂಗಡ್ಡೆ ವಿಶಿಷ್ಟ ಹಾಗು ಜನಪ್ರಿಯವಾಗಲು ಕಾರಣವೇನೆಂದರೆ ಇದು ಇತರೆ ವಿಧದ ಆಲೂಗಡ್ಡೆಗಳಂತೆ ಸುಲಭವಾಗಿ ಕೆಡುವುದಿಲ್ಲ. ಮೆಕ್ಡೊನಾಲ್ಡ್ಸ್ ಫ್ರೆಂಚ್ ಫ್ರೈಸ್ ಹೆಚ್ಚಿನ ಶೇಕಡಾವಾರು ಈ ಆಲೂಗಡ್ಡೆಯಿಂದ ತಯಾರಿಸಲಾಗುತ್ತದೆ. [೪]

ಸೆಂಟಾ ರೋಸಾದಲ್ಲಿ, ಬರ್ಬ್ಯಾಂಕ್ ೪ ಎಕರೆ ಭೂಮಿಯನ್ನು ಖರೀದಿಸಿ ಅಲ್ಲಿ ಹಸಿರುಮನೆ, ನರ್ಸರಿ ಮತ್ತು ಪ್ರಾಯೋಗಿಕ ಜಾಗಗಳನ್ನು ಸ್ಥಾಪಿಸಿದರು., ಅವರು ಅಲ್ಲಿಯೆ ಸಸ್ಯಗಳ ಮೇಲೆ ಅಡ್ಡತಳಿಯೆಬ್ಬಿಕೆ ಪ್ರಯೋಗಗಳನ್ನು ನಡೆಸುತ್ತಿದ್ದರು. ಅವರು ಚಾರ್ಲ್ಸ್ ಡಾರ್ವಿನ್ ರವರ "ದ ವೇರಿಯೇಶನ್ ಆಫ್ ಅನಿಮಲ್ಸ್ ಅಂಡ್ ಪ್ಲಾಂಟ್ಸ್ ಅಂಡರ್ ಡೊಮೆಸ್ಟಿಕೇಶನ್" ನಿಂದ ಪ್ರೇರಿತರಾಗಿದ್ದರು.

ಬರ್ಬ್ಯಾಂಕ್ ತನ್ನ ಸಸ್ಯದ ಕ್ಯಾಟಲಾಗ್‌ಗಳ ಮೂಲಕ ಚಿರಪರಿಚಿತರಾದರು, ಅತ್ಯಂತ ಪ್ರಸಿದ್ಧವಾದದ್ದು ಎಂದರೆ ೧೮೯೩ರ "ನ್ಯೂ ಕ್ರಿಯೇಷನ್ಸ್ ಇನ್ ಫ಼್ರೂಟ್ಸ್ ಅಂಡ್ ಫ಼್ಲವರ್ಸ" ಇದಲ್ಲದೆ ತೃಪ್ತ ಗ್ರಾಹಕರ ಬಾಯಿ ಮಾತಿನ ಮೂಲಕ ಹಾಗೂ ಪತ್ರಿಕಾ ವರದಿಗಳು ಅವರನ್ನು ಮೊದಲ ದಶಕದುದ್ದಕ್ಕೂ ಸುದ್ದಿಯಲ್ಲಿಟ್ಟ ಕಾರಣಕ್ಕೆ.

ಬರ್ಬ್ಯಾಂಕ್ ತಳಿಗಳು[ಬದಲಾಯಿಸಿ]

ನೂರಾರು ಹೊಸ ಪ್ರಭೇದಗಳ ಹಣ್ಣುಗಳನ್ನು (ಪ್ಲಮ್, ಪೇರಳೆ, ಒಣದ್ರಾಕ್ಷಿ, ಪೀಚ್, ಬ್ಲಾಕ್ಬೆರ್ರಿ, ರಾಶ್ಬೆರಿ); ಆಲೂಗಡ್ಡೆ, ಟೊಮೇಟೊ; ಅಲಂಕಾರಿಕ ಹೂವುಗಳು ಮತ್ತು ಇತರ ಸಸ್ಯಗಳನ್ನು ಸೃಷ್ಟಿಸಿದರು.

LutherBurbankSpinelessCactus
ಸ್ಪೈನ್‌ಗಳಿಲ್ಲದ ಕಳ್ಳಿ ಗಿಡದ ಜೊತೆ ಲೂಥರ್ ಬರ್ಬ್ಯಾಂಕ್ ಚಿತ್ರ

ಹಣ್ಣುಗಳ ಪ್ರಭೇದಗಳ ಸಂಖ್ಯೆ[ಬದಲಾಯಿಸಿ]

  • ೬೯ ನಟ್ಸ್
Luther_Burbank_-_Burbank_cherries
ಬರ್ಬ್ಯಾಂಕ್ ಚೆರ್ರಿ


ಈ ನಿರ್ದಿಷ್ಟ ಚೆರ್ರಿಗಳ ಛಾಯಾಚಿತ್ರ ತೆಗೆಯುವ ಮೊದಲು ಎರಡು ಬಾರಿ ಖಂಡದಾದ್ಯಂತ ರವಾನಿಸಲಾಗಿತ್ತು. ಬರ್ಬ್ಯಾಂಕ್ ಚೆರ್ರಿ ದೊಡ್ಡ ಗಾತ್ರ ಇರುವುದರ ಜೊತೆಗೆ, ಗಾತ್ರದ ಏಕರೂಪತೆ ಮತ್ತು ಘನಾಕೃತಿಯ ರೂಪ ಹೊಂದಿದ್ದು ಇದು ಪ್ಯಾಕಿಂಗ್ ಮಾಡುವಲ್ಲಿ ಸುಲಭವಾದ ಚೆರ್ರಿಯಾಗಿದೆ. ಈ ಚೆರ್ರಿ ಬರ್ಬ್ಯಾಂಕ್ ಹೆಸರನ್ನು ಹೊಂದಿದೆ ಹಾಗು ಬರ್ಬ್ಯಾಂಕ್ ಪರಿಚಯಿಸಿದ ಚೆರ್ರಿಗಳಲ್ಲಿ ಮೊದಲ ಚೆರ್ರಿ ಇದಾಗಿದೆ.

ಇತರ ಸಸ್ಯಗಳ ಪ್ರಭೇದಗಳ ಸಂಖ್ಯೆ[ಬದಲಾಯಿಸಿ]

  • ೯ ಧಾನ್ಯಗಳು, ಹುಲ್ಲುಗಳು, ಮೇವು
  • ೨೬ ತರಕಾರಿ
  • ೯೧ ಅಲಂಕಾರಿಕ ಸಸ್ಯ

ಅವರ ಕೆಲಸದ ವಿಧಾನಗಳ ಬಗ್ಗೆ ಎಲ್ಲರಿಗು ಸುಲಭವೆಂದು ತೋರುತ್ತದೆ ಆದರೆ ಅದನ್ನು ನಿರ್ವಹಿಸಲು ಬಂದಾಗ, ಅದು ಕಷ್ಟಕರವೆಂದು ತಿಳಿದುಬರುತ್ತದೆ. ಪ್ರತಿ ಸಲ ಅವರು ಒಂದು ಪ್ರಭೇದದ ೧೦೦೦೦ ಅಥವಾ ಅದಕ್ಕಿಂತ ಹೆಚ್ಚು ಸಸ್ಯಗಳನ್ನು ಬೆಳೆಸುತ್ತಾರೆ, ಅದರಲ್ಲಿ ಅವರು ಗರಿಷ್ಠ ೫೦ ಅಥವಾ ಕನಿಷ್ಠ ೧ ಮೊಳಕೆ ಆಯ್ಕೆ ಮಾಡುತ್ತಿದ್ದರು. ಆಯ್ದ ಸಸ್ಯಗಳಿಂದ, ಅವರು ಇನ್ನೂ ೧೦೦೦೦ ಮೊಳಕೆಗಳನ್ನು ಅವರು ಬಯಸಿದ ಫಲಿತಾಂಶಗಳನ್ನು ಸಾಧಿಸುವವರೆಗೆ ಬೆಳೆಸುತ್ತಿದ್ದರು. ಇವರ ಈ ಪ್ರಯತ್ನದಿಂದಾಗಿ ಸಾಮಾನ್ಯವಾಗಿ ೨೫ ವರ್ಷಗಳನ್ನು ನಂತರ ಫಲ ಕೊಡುತ್ತಿದ್ದ ಚೆಸ್ಟ್ನಟ್ ಮರಗಳು ಈಗ ಕೇವಲ ಮೂರು ವರ್ಷಗಳ ನಂತರ ಫಲವನ್ನು ಕೊಡುತ್ತವೆ. ಒಳಗಿನ ಬೀಜಗಳನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಿರುವ ಬಿಳಿ ಬ್ಲ್ಯಾಕ್‌ಬೆರಿ, ವಿಶ್ವದಲ್ಲಿ ಅತ್ಯುತ್ತಮವೆಂದು ಪರಿಗಣಿಸಲಾಗಿರುವ ರಸಭರಿತವಾದ ಮತ್ತು ದೊಡ್ಡ ಪ್ಲಮ್, ಸ್ಪೈನ್ಗಳಿಲ್ಲದ ಕಳ್ಳಿ, ಸುವಾಸನೆಯ ವಾಸನೆಯನ್ನು ಹೊಂದಿರುವ ಕೆಲ್ಲಾ ಲಿಲ್ಲಿ ಹೀಗೆ ಮುಂತಾದವು ಇವರ ಸೃಷ್ಟಿಗಳು.

ಪ್ರಕಟಣೆಗಳು[ಬದಲಾಯಿಸಿ]

ಬರ್ಬ್ಯಾಂಕ್ ಅವರು ಕೆಲ ವಿಜ್ಞಾನಿಗಳಿಂದ ಟೀಕೆಗೆ ಗುರಿಯಾದರು ಏಕೆಂದರೆ ಅವರು ವೈಜ್ಞಾನಿಕ ಸಂಶೋಧನೆಯಲ್ಲಿ ರೂಢಿಯಲ್ಲಿರುವಂತೆ ದಾಖಲೆಗಳನ್ನು ಇಟ್ಟುಕೊಂಡಿರಲಿಲ್ಲ ಯಾಕೆಂದರೆ ಸಸ್ಯಗಳ ಮೇಲೆ ಸಂಶೋಧನೆ ಮಾಡುವುದಕ್ಕಿಂತ ಉಪಯುಕ್ತ ಸಸ್ಯಗಳ ತಳಿಗಳನ್ನು ಉತ್ಪಾದಿಸುವುದು ಅವರ ಮುಖ್ಯ ಆಸಕ್ತಿಯಾಗಿತ್ತು. ಪರ್ಡ್ಯೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜೂಲ್ಸ್ ಜಾನಿಕ್, ೨೦೦೪ ರ 'ವರ್ಲ್ಡ್ ಬುಕ್ ಎನ್ಸೈಕ್ಲೋಪೀಡಿಯಾದಲ್ಲಿ' "ಬರ್ಬ್ಯಾಂಕ್ ಅನ್ನು ಶೈಕ್ಷಣಿಕ ಅರ್ಥದಲ್ಲಿ ವಿಜ್ಞಾನಿ ಎಂದು ಪರಿಗಣಿಸಲಾಗುವುದಿಲ್ಲ." ಎಂದು ಬರೆದಿದ್ದಾರೆ.

ವೈಯಕ್ತಿಕ ಜೀವನ[ಬದಲಾಯಿಸಿ]

ಬರ್ಬ್ಯಾಂಕ್ ರವರನ್ನು ತೋಟಗಾರಿಕೆ ಕೌಶಲ್ಯಕ್ಕಾಗಿ ಮಾತ್ರವಲ್ಲದೆ ಅವರ ನಮ್ರತೆ, ಔದಾರ್ಯ ಮತ್ತು ದಯೆಯ ಮನೋಭಾವಕ್ಕಾಗಿ ಕೂಡ ಪ್ರಶಂಸೆಗಳಿಸಿದ್ದಾರೆ. ಅವರು ಶಿಕ್ಷಣದಲ್ಲಿ ಬಹಳ ಆಸಕ್ತಿ ಹಾಗೂ ಪ್ರಾಮುಖ್ಯತೆ ತಿಳಿದಿದ್ದರು, ಅದಕ್ಕೆ ಸ್ಥಳೀಯ ಶಾಲೆಗಳಿಗೆ ಹಣವನ್ನು ನೀಡಿ ಬಡ ಮಕ್ಕಳಿಗೆ ಸಹಾಯವಾಗುತ್ತಿದ್ದರು.

ಅವರು ಎರಡು ಬಾರಿ ವಿವಾಹವಾದರು: ೧೮೯೦ ರಲ್ಲಿ ಹೆಲೆನ್ ಕೋಲ್ಮನ್ ಅವರನ್ನು ವಿವಾಹವಾದರು, ಈ ವೈವಾಹಿಕ ಸಂಬಂಧ ೧೮೯೬ ರಲ್ಲಿ ವಿಚ್ಛೇದನದಲ್ಲಿ ಕೊನೆಗೊಂಡಿತು; ಮತ್ತು ೧೯೧೬ ರಲ್ಲಿ ಎಲಿಜಬೆತ್ ವಾಟರ್ಸ್ ರವರನ್ನು ಮದುವೆಯಾಗುತ್ತರೆ, ಇವರಿಗೆ ಸ್ವಂತ ಮಕ್ಕಳಿರಲಿಲ್ಲ ಆದರೆ ಮಗಳನ್ನು ದತ್ತು ಪಡೆದಿದ್ದರು.

ಮರಣ[ಬದಲಾಯಿಸಿ]

Paul_Stark_Sr._pays_his_respects_at_Luther_Burbank's_gravesite
ಲೂಥರ್ ಬರ್ಬ್ಯಾಂಕ್ ಹೋಮ್ ಮತ್ತು ಗಾರ್ಡನ್ಸ್‌ನಲ್ಲಿರುವ ದೈತ್ಯ ಸೀಡರ್

೧೯೨೬ ರ ಮಾರ್ಚ್ ಮಧ್ಯದಲ್ಲಿ, ಬರ್ಬ್ಯಾಂಕ್ ಹೃದಯಾಘಾತದಿಂದ ಬಳಲುತ್ತಿದ್ದರು ಮತ್ತು ಜಠರಗರುಳು ವ್ಯೂಹ ತೊಂದರೆಗಳಿಂದ ಅನಾರೋಗ್ಯಕ್ಕೆ ಒಳಗಾದರು. ನಿರಂತರ ಹಿಂಸಾತ್ಮಕ ಬಿಕ್ಕಳಿಸುವಿಕೆಯು ಲೂಥರ್ ಅವರನ್ನು ಇನ್ನಷ್ಟು ದುರ್ಬಲಗೊಳಿಸಿತ್ತು, ಕೊನೆಗೆ ಏಪ್ರಿಲ್ ೧೧, ೧೯೨೬ ರಂದು ೭೭ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು. ಏಪ್ರಿಲ್ ೧೧, ೧೯೨೬ ರಂದು ಅವರು ಮರಣಿಸಿದಾಗ ಅವರ ಹಾಸಿಗೆಯ ಬಳಿ ಅವರ ಪತ್ನಿ ಎಲಿಜ಼ಬೆತ್ ಮತ್ತು ಅವರ ಸಹೋದರಿ ಇದ್ದರು. ಇವರ ದೇಹವನ್ನು ಕ್ಯಾಲಿಫೋರ್ನಿಯಾದ ಸೆಂಟಾ ರೋಸಾದಲ್ಲಿನ 'ಲೂಥರ್ ಬರ್ಬ್ಯಾಂಕ್ ಹೋಮ್ ಮತ್ತು ಗಾರ್ಡನ್ಸ್‌ನಲ್ಲಿ' ದೈತ್ಯ ಸೀಡರ್ ನ ಅಡಿಯಲ್ಲಿ ಗುರುತು ಹಾಕದ ಸಮಾಧಿಯಲ್ಲಿ ಸಮಾಧಿ ಮಾಡಿದರು.

ಬರ್ಬ್ಯಾಂಕ್ ಅವರ ಜೀವನವು ಕೊನೆಗೊಳ್ಳುತ್ತಿದ್ದಂತೆ, ಅವರ ಕೆಲಸವನ್ನು ಯಾರು ಮುಂದುವರಿಸುತ್ತಾರೆ ಎಂಬ ಪ್ರಶ್ನೆ ಉದ್ಭವಿಸಿತು ಮತ್ತು ಸ್ವಾಭಾವಿಕವಾಗಿ ಅನೇಕರು ಆಸಕ್ತಿ ಹೊಂದಿದ್ದರು. ಏಪ್ರಿಲ್ ೧೯೨೬ ರಲ್ಲಿ ಅವರು ಮರಣ ಹೊಂದುವ ಮೊದಲು, ತನ್ನ ಹೆಂಡತಿಯೊಂದಿಗೆ "ನನಗೆ ಏನಾದರೂ ಆದರೆ, ನೀವು ವ್ಯವಹಾರ ಮತ್ತು ಕೆಲಸವನ್ನು ವಿಲೇವಾರಿ ಮಾಡುವುದು ಸರಿ, ಏಕೆಂದರೆ ನೀವು ಅದನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ. ಜಗತ್ತಿನಲ್ಲಿ ಯಾವುದೆ ಸಂಸ್ಥೆಗಳು ಇಂಥಃ ಕೆಲಸವನ್ನು ಮುಂದುವರಿಯಲು ಸಜ್ಜುಗೊಂಡಿಲ್ಲ, ಆದರೆ ಒಂದೇ ಒಂದು ಇದೆ ಎಂದು ನಾನು ಭಾವಿಸುತ್ತೇನೆ, ಅದು ಇನ್ನು ಹೆಚ್ಚಿನದನ್ನು ಮಾಡಬಹುದು." ಹೇಳಿದರು. ಅವರು ಕೆಲಸವನ್ನು ಮುಂದುವರಿಸಲು 'ಸ್ಟಾರ್ಕ್ ಬ್ರೋಸ್ ನರ್ಸರಿಗಳು ಮತ್ತು ಆರ್ಚರ್ಡ್ಸ್ ಕೋ,' ಎಂದು ಹೆಸರಿಸಿದರು. [೫]

ಉಲ್ಲೇಖನಗಳು[ಬದಲಾಯಿಸಿ]

  1. "ಸ್ಪೈನ್‌ಗಳಿಲ್ಲದ ಕಳ್ಳಿ".
  2. "ರಸ್ಸೆಟ್ ಬರ್ಬ್ಯಾಂಕ್ ಆಲೂ".
  3. "ಆರ್ಬರ್ ಡೇ".
  4. "ಲೂಥರ್ ಬರ್ಬ್ಯಾಂಕ್ ಹೋಮ್ ಮತ್ತು ಗಾರ್ಡನ್ಸ್‌ನ".
  5. "ಸ್ಟಾರ್ಕ್ ಬ್ರೋಸ್ ನರ್ಸರಿ".