ಅಡ್ಡತಳಿಯೆಬ್ಬಿಕೆ
ಅಪೇಕ್ಷಿತ ಗುಣ, ಲಕ್ಷಣಗಳನ್ನು ಪಡೆಯಲು ಜೀವಿಗಳನ್ನು ಕೃತಕ ವೀರ್ಯಪೂರಣ ಅಥವಾ ಪರಕೀಯ ಪರಾಗಸ್ಪರ್ಶದ ಮೂಲಕ ಫಲೀಕರಿಸಿ ಉತ್ಪಾದಿಸುವ ಸಂಕರ/ಮಿಶ್ರ ತಳಿ ವಿಧಾನ. ಸಿಂಧಿ ಹಸುವಿನ ಮೇಲೆ ಜರ್ಸಿ ಹೋರಿಯನ್ನೋ ಇಲ್ಲವೇ ಇದರ ಅದಲುಬದಲನ್ನೋ ಫಲೀಕರಿಸುವುದು, ಒಂದೇ ತಳಿಯಲ್ಲಿ ಅಡ್ಡತಳಿಯಬ್ಬಿಸುವ ಉದಾಹರಣೆ. ಹೆಣ್ಣು ಕುದುರೆಯೊಂದಿಗೆ ಗಂಡು ಕತ್ತೆಯನ್ನು ಕೂಡಿಸಿದರೆ ಬೇರೆ ಬೇರೆ ಜಾತಿ ಪ್ರಾಣಿಗಳಿಂದ ಅಡ್ಡತಳಿ ಎಬ್ಬಿಸಿದಂತೆ ಆಗುವುದು. ಗಂಡು ಕತ್ತೆ ಹೆಣ್ಣು ಕುದುರೆಯೊಂದಿಗೆ ಕೂಡಿದ ಮೇಲೆ ಹೇಸರಕತ್ತೆ ಹುಟ್ಟುತ್ತದೆ. ಹೆಣ್ಣುಕತ್ತೆಯೊಂದಿಗೆ ಗಂಡು ಕುದುರೆ ಕೂಡಿದರೆ ಹುಟ್ಟುವೂದೂ ಹೇಸರ ಕತ್ತೆಯೇ (ಹಿನ್ನಿ). ಗಂಡು ಕಾಡುಕೋಣ ಸಾಕಿದ ಹಸುವನ್ನು ಕೂಡಿದರೆ ಕೋಣಸು (ಕ್ಯಾಟೆಲ್ಲೊ) ಹುಟ್ಟುವುದು. ಹೀಗೆ ಪಟ್ಟೆಕುದುರೆಯೂ (ಜೀóಬ್ರ) ಕುದುರೆಯೂ ಸೇರಿದರೆ ಪಟ್ಟೆಕುದುರೆತರ (ಜಿûೀಬ್ರಾಯಿಡ್) ಆಗುತ್ತದೆ. ದನಗಳ, ಚಮರೀ ಮೃಗಗಳ ನಡುವೆ ಹುಟ್ಟುವ ಪ್ರಾಣಿ ದನಚಮರೀ (ಪಿಯೆನ್‍ನಿಯೂ). ಬೇರೆ ಬೇರೆ ಜಾತಿಗಳಿಗಿಂತಲೂ ತಳಿಗಳ ನಡುವಣ ಅಡ್ಡತಳಿಯೆಬ್ಬಿಕೆಯೇ ಹೆಚ್ಚು ಬಳಕೆಯಲ್ಲಿದೆ.
ಅಡ್ಡತಳಿಯೆಬ್ಬಿಸುವ ವಿಧಾನ
[ಬದಲಾಯಿಸಿ]ಅಡ್ಡತಳಿಯೆಬ್ಬಿಸುವ ವಿಧಾನಗಳಲ್ಲಿ ಮುಖ್ಯವಾದವು ಮೂರು ; 1 ಶುದ್ಧ ತಳಿಯ ಹೆಣ್ಣಿನೊಂದಿಗೆ ಅದೇ ತಳಿಯ ಇನ್ನೊಂದು ಶುದ್ಧ ತಳಿಯ ಗಂಡನ್ನು ಕೂಡಿಸುವುದು ; 2 ಅಡ್ಡತಳಿಯಲ್ಲಿ ಹುಟ್ಟಿದವುಗಳ ಮೇಲೆ ಒಂದಾದ ಮೇಲೊಂದರಂತೆ ಎರಡು ಶುದ್ಧ ತಳಿಯ ಜೀವಿಗಳ ನಡುವೆ ಅಡ್ಡ ತಳಿಯೆಬ್ಬಿಸುವುದು ; 3 ಎರಡಕ್ಕೂ ಹೆಚ್ಚಿನ ಶುದ್ಧತಳಿ ಜೀವಿಗಳನ್ನು ಸರದಿಯಲ್ಲಿ ಅವುಗಳ ಅಡ್ದ ತಳಿಯ ಪೀಳಿಗೆಯೊಂದಿಗೆ ಕೂಡಿಸುವ, ಸರದಿಯ ಅಡ್ಡತಳಿಯೆಬ್ಬಿಕೆ.ಅಡ್ಡತಳಿಯೆಬ್ಬಿಸುವುದು, ಪಶುಪಾಲಕರಲ್ಲಿ ಸಾಮಾನ್ಯ. ಇದರಿಂದ ಒಂದೇ ಮಂದೆಯಲ್ಲಿರುವ ಸಾಕುಪ್ರಾಣಿಗಳ ನಡುವೆ ಸಂತಾನೋತ್ಪತ್ತಿ ಜರುಗಿಸುವ ಬದಲಿಗೆ ಹೊಸ ತಳಿಗಳನ್ನು (ಜೀನ್ಸ್) ಬಳಸುವುದು. ಇದರಿಂದ ವಿಶೇಷ ಲಕ್ಷಣಗಳುಳ್ಳ ಹೊಸ ತಳಿಗಳನ್ನು ಪಡೆಯಬಹುದು. ಸಂಕರದ (ಹೈಬ್ರಿಡ್) ಫಲವನ್ನೂ ಪಡೆಯಬಹುದು. ಇಂತಹ ಅಡ್ಡತಳಿಯೆಬ್ಬಿಸುವಿಕೆಯಿಂದ ಉತ್ತಮ ಸಾಕುಪ್ರಾಣಿ ಅಥವಾ ಸಸ್ಯಗಳನ್ನು ಪಡೆಯುವುದರಿಂದ ಆರ್ಥಿಕವಾಗಿ ಲಾಭದಾಯಕ. [೧]
ಜೀವಿಗಳಲ್ಲಿ ಅಡ್ಡ ತಳಿ ವಿಧಾನ
[ಬದಲಾಯಿಸಿ]ಹೈನಿನ ದನ, ಮಾಂಸದ ದನ, ಕುರಿಗಳು, ಹಂದಿ, ಕೋಳಿ, ಬಾತುಗಳೇ ಮೊದಲಾದ ಜೀವಿಗಳಲ್ಲಿ ಅಡ್ಡ ತಳಿ ವಿಧಾನದಿಂದ ಅನೇಕ ಸಂಕರ/ಮಿಶ್ರ ತಳಿಗಳನ್ನು ಪಡೆಯಲಾಗಿದೆ. ಹೈನಿನ ದನಗಳಲ್ಲಿ ಅಡ್ಡತಳಿಯವು ಬೇಗನೆ ಬೆದೆಗೆ ಬರುತ್ತವೆ. ಹಾಲು ಹೆಚ್ಚಿಗೆ ನೀಡುತ್ತವೆ. ಹಾಲಿನಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚು. ಅವುಗಳ ಶುದ್ಧತಳಿಯವು ಮೂಲ ಸಂತಾನದವಕ್ಕಿಂತಲೂ ಕ್ರಮ ತಪ್ಪದೆ ಈಲಾಗುತ್ತದೆ. ಮಾಂಸದ ದನಗಳಲ್ಲಿ, ಅಡ್ಡತಳಿಯವು ಅವುಗಳದೇ ಶುದ್ಧತಳಿಗಿಂತಲೂ ಗುಣಮಟ್ಟದ ಮಾಂಸವನ್ನು ರೂಪಿಸುತ್ತವೆ. ಕರುಗಳು, ಹಾಲು ಬಿಡಿಸುವ ಹೊತ್ತಿಗೆ ಬಲು ಚೆನ್ನಾಗಿ ಬೆಳೆದಿರುವುವಲ್ಲದೆ, ಬೇಗನೆ ಮೈಗೂಡುತ್ತವೆ. ಮುಂಡದ ತೂಕ ಹೆಚ್ಚು. ಹದವಾಗುವ ಅಟ್ಟೆ ಭರ್ಜರಿ. ಹಾಗೇ ಕುರಿಗಳಲ್ಲೂ ಶುದ್ಧತಳಿಗಿಂತಲೂ ಅಡ್ಡತಳಿಯವೇ ತೂಕವಾದ ಮರಿಗಳನ್ನು ಹಾಕುತ್ತವೆ. ಬೆಳವಣಿಗೆಯೂ ಶೀಘ್ರಗತಿಯಲ್ಲಾಗಬಹುದು. ಕೋಳಿ, ಬಾತುಗಳಲ್ಲಿ ಕೂಡ ಅಡ್ಡತಳಿಯವೇ ಚೆನ್ನಾಗಿ ತಿಂದು ಬೇಗನೆ ಬೆಳೆಯುತ್ತ ತೂಕದ ಮೊಟ್ಟೆಗಳನ್ನು ಹೆಚ್ಚಾಗಿ ಕೊಡುವುವಲ್ಲದೆ, ಮರಣಪ್ರಮಾಣವೂ ಕಡಿಮೆಯಾಗುವುದು. ಅಡ್ಡತಳಿ ಹಂದಿಗಳು ಒಂದೊಂದು ಸೂಲಿಗೂ ಹೆಚ್ಚು ಮರಿಗಳನ್ನು ಹಾಕುತ್ತವೆ. ಮರಿಗಳು ಹುಟ್ಟುವಾಗಲೇ ಸಾಯುವುದು ಕಡಿಮೆ. ಹಾಲು ಬಿಡಿಸುವ ಹೊತ್ತಿಗೆ ಹೆಚ್ಚಿನ ಸಂಖ್ಯೆಯ ಮರಿಗಳು ಬದುಕುಳಿದಿರುತ್ತವೆ. ಕತ್ತೆ, ಕುದುರೆಗಳಿಗಿಂತಲೂ ಹೇಸರಕತ್ತೆಗಳು ಇನ್ನಷ್ಟು ಗಟ್ಟಿಮುಟ್ಟಾಗಿ, ಹೆಚ್ಚು ಬುದ್ಧಿ ಚುರುಕಿನವಾಗಿ, ಬಹುಕಾಲ ಬದುಕಿರುತ್ತವೆ. [೨]
ಶುದ್ಧತಳಿ
[ಬದಲಾಯಿಸಿ]ಶುದ್ಧತಳಿಗಳಿಗೂ ಅಡ್ಡತಳಿಗಳೇ ಮೂಲತಳಿ. ಕಳೆದ ಕೆಲವು ದಶಕಗಳಿಂದಲೂ ಹಲವಾರು ಹೊಸ ತಳಿಗಳು ಬೆಳೆದುಬಂದಿವೆ. ಆಮೇಲೆ ಬೇಕಾದುವುಗಳ ಆಯ್ಕೆ, ಒಳತಳಿಯ ಆಯ್ಕೆ ಹೀಗೇ ಹೋಗುತ್ತದೆ. ಬೆಳೆಸಿದ ಕೆಲವು ಮುಖ್ಯ ತಳಿಗಳನ್ನೂ ಮೂಲತಳಿಗಳಾಗಿ ಬಳಕೆಯಲ್ಲಿರುವ ಅಚ್ಚತಳಿಗಳನ್ನೂ ಇಲ್ಲಿ ಹೆಸರಿಸಿದೆ.[೩]
ಜಾತಿಗಳು ಹೊಸತಳಿ ಮೂಲತಳಿಯಾಗಿರುವ ಅಶುದ್ಧÀತಳಿ ದನಗಳು ಸಾಂತಗಟ್ರ್ರೂಡಿಸ್ ಷಾರ್ಟ್‍ಹಾರನ್, ನೆಲ್ಲೂರು ಕಂಕ್ರೇಜ್ ಕುರಿಗಳು ಆಕ್ಸ್‍ಫರ್ಡ್ ಡೌನ್ ಕಾಟ್ಸ್‍ವುಲ್ಡ್, ಹ್ಯಾಂಪ್‍ಷೈರ್ ಡೌನ್, ಸೌತ್‍ಡೌನ್ ಕಾರಿಡೇಲ್ ಲಿಂಕನ್, ಮೆರಿನೊ, ಕೊಲಂಬಿಯ ಲಿಂಕನ್, ರ್ಯಾಂಬೂಲಿಟ್ ಹಂದಿಗಳು ಮಿನ್ನಿಸೋಟ 1. ಲ್ಯಾಂಡ್‍ರೇಸ್, ಹ್ಯಾಂಪ್‍ಷೈರ್ ಬೆಲ್ಟ್ಸ್‍ವಿಲ್ 1. ಡೇನಿಷ್ ಲ್ಯಾಂಡ್‍ರೇಸ್, ಪ್ಲಾಂಡ್‍ಚೈನ ಮೇರಿಲ್ಯಾಂಡ್ 1. ಲ್ಯಾಂಡ್‍ರೇಸ್, ಬರ್ರ್ಕಷೈರ್
ಉಲ್ಲೇಖಗಳು
[ಬದಲಾಯಿಸಿ]- ↑ https://www.caballow.com/joueur/fiche/production?id=14329854
- ↑ https://kn.wiktionary.org/wiki/%E0%B2%85%E0%B2%A1%E0%B3%8D%E0%B2%A1%E0%B2%A4%E0%B2%B3%E0%B2%BF
- ↑ http://www.idtagentportal.com/%E0%B2%85%E0%B2%A1%E0%B3%8D%E0%B2%A1%E0%B2%A4%E0%B2%B3%E0%B2%BF%20%E0%B2%AC%E0%B3%86%E0%B2%B3%E0%B2%B8%E0%B3%81-meaning-in-english[ಶಾಶ್ವತವಾಗಿ ಮಡಿದ ಕೊಂಡಿ]