ಸದಸ್ಯ:ಶರಣ್ಯ ಭಟ್/ನನ್ನ ಪ್ರಯೋಗಪುಟ

ವಿಕಿಪೀಡಿಯ ಇಂದ
Jump to navigation Jump to search

ನಾಯರ್ ಕಲ್ಲು[ಬದಲಾಯಿಸಿ]

ನಾಯರ್ ಕಲ್ಲು ಎನ್ನುವ ಸ್ಥಳವು ಸುಳ್ಯ ತಾಲೂಕಿನ ಅಮರ ಮುಡ್ನೂರು[೧] ಗ್ರಾಮದ ಪೂರ್ವ ಭಾಗದಲ್ಲಿದೆ. ಪೈಲಾರು[೨] ಎನ್ನುವ ಸ್ಥಳಕ್ಕೆ ಸಮೀಪವರ್ತಿಯಾಗಿದೆ.

ಇತಿಹಾಸ[ಬದಲಾಯಿಸಿ]

ಚಾತು ನಾಯರ್ ಎನ್ನುವ ಹೆಸರು ಮಲೆಯಾಳ ಭಾಷೆಯಲ್ಲಿ ಐತಿಹಾಸಿಕ ಪುರುಷನೊಬ್ಬನ ಹೆಸರಾಗಿದೆ. ಇವನು ಸುಳ್ಯ ಕೋಡಿ ಕೊಟ್ಟಾರದಲ್ಲಿದ್ದು ಆಡಳಿತ ನಡೆಸಿದ್ದನು. ತನ್ನ ಜೀವಿತದ ಕೊನೆಯಲ್ಲಿ ಉಲ್ಲಾಕುಳು[೩] ದೈವಗಳಿಂದ ಉಬರಡ್ಕದ ಹೊಳೆಯಲ್ಲಿ ಮಾಯಕನಾದನು. ಆ ಬಳಿಕ ದೈವನಾದನು. ಇವನು ದೈವನಾದ ಬಳಿಕ ಪ್ರಸರಣ ಹೊಂದಿ ಸುಳ್ಯ ಸೀಮೆಯಲ್ಲಿ ಆರಾಧನೆಯಾಗುವ ದೈವವಾಗಿದ್ದಾನೆ. ಉಬರಡ್ಕದಲ್ಲಿ ಮಾಯಕ ಸೇರಿ, ದೈವವಾದ ಚಾತು ನಾಯರ್ [೪]ತಾನು ಆಡಳಿತ ನಡೆಸುತ್ತಿದ್ದ ಬೀಡು ಕೇಂದ್ರ ನೆಲೆಗಳಲ್ಲಿ ಆರಾಧನೆ ಪಡೆಯುತ್ತಾನೆ. ಸುಳ್ಯ ಕೋಡಿಯಿಂದ ಹೊರಟ ಚಾತು ನಾಯರ್ ಸುಳ್ಯದ ಕಾನತ್ತಿಲ[೫], ತೊಡಿಕ್ಕಾನ, ಮರ್ಕಂಜಕ್ಕೆ ಬರುತ್ತಾನೆ. ಮರ್ಕಂಜದಲ್ಲಿ ನೆಲೆಯಾದ ಅಮರ ಮುಡ್ನೂರು ಚೊಕ್ಕಾಡಿಗೆ ಬಂಟಮಲೆ[೬]ಯ ಮೂಲಕ ಬಂದು ಆಯಾಸಗೊಂಡು ಬಂದು ಅಮರ ಮುಡ್ನೂರಿಗೆ ಸೇರಿದ ಎತ್ತರದ ಬೆಟ್ಟದ ಕಲ್ಲೊಂದರಲ್ಲಿ ಕುಳಿತು ಪಶ್ಚಿಮಾಭಿಮುಖವಾಗಿ ನೋಡುತ್ತಾನೆ. ಅಮರ ಮುಡ್ನೂರಿಗೆ ಪ್ರವೇಶವಾಗಿ, ಪ್ರಥಮತಃ ಕುಳಿತ ಕಲ್ಲೇ ಮುಂದೆ ನಾಯರ್ ಕಲ್ಲೆಂದು ಕರೆದುಕೊಂಡಿತು. ಈ ನಾಯರ್ ಕಲ್ಲೆಂದು ಕರೆದುಕೊಳ್ಳುವ ಸ್ಥಳದಲ್ಲಿ ಕೆಲ ಗೌಡ ಕುಟುಂಬಗಳು ನೆಲೆಯಾಗಿದ್ದು, ಕ್ಷೇತ್ರಾಧೀಶನೆಂದು ಕರೆದುಕೊಳ್ಳುವ ಈ ನಾಯರ್ ದೈವವನ್ನು ಇವರು ಆಚರಿಸುತ್ತಾರೆ. ನಾಯರ್ ಕಲ್ಲಿಗೆ ಇವರು ದೈವ ಮಹಾತ್ಮೆಯ ಹಿನ್ನೆಲೆಯಲ್ಲಿ ವಿಶೇಷ ಗೌರವವನ್ನು ಶ್ರದ್ಧೆಯನ್ನು ತೋರಿಸುತ್ತಾರೆ. ಸೂತಕ ಇತ್ಯಾದಿ ಮೈಲಿಗೆಯವರು ಈ ಕಲ್ಲಿನ ಹತ್ತಿರವಾಗಲೀ, ಹತ್ತುವ ಸಾಹಸವನ್ನಾಗಲೀ ಮಾಡಬಾರದೆನ್ನುವ ಕಟ್ಟಳೆಗಳಿವೆ.[೭]

ಆರಾಧನೆ[ಬದಲಾಯಿಸಿ]

ಕೃಷಿ[ಬದಲಾಯಿಸಿ]

ಸಮುದಾಯ[ಬದಲಾಯಿಸಿ]

ಭಾಷೆಗಳು[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. https://timesofindia.indiatimes.com/topic/Amara-Mudnur-village
  2. http://sullia.suddinews.com/archives/351666
  3. http://shodhganga.inflibnet.ac.in/handle/10603/131824
  4. http://shodhganga.inflibnet.ac.in/handle/10603/131824
  5. https://samskruti.udayavani.com/sulya-chennakeshava-celebration-rathotsava/
  6. http://www.varthabharati.in/article/karavali/55126
  7. ತುಳುನಾಡಿನ ಸ್ಥಳನಾಮಧ್ಯಯನ , ರಘುಪತಿ ಕೆಮ್ತೂರು, ಪ್ರೊ. ಟಿ. ಮುರುಗೇಶಿ, ಚರಿತ್ರೆ ಮತ್ತು ಪುರಾತತ್ವ ಶಾಸ್ತ್ರ ವಿಭಾಗ ಎಂ ಸ್ ಆರ್ ಎಸ್ ಕಾಲೇಜು ಶಿರ್ವ ಉಡುಪಿ. ಪುಟ ಸಂಖ್ಯೆ ೧೯೭,
  8. ಪೂವಪ್ಪ ಕಣಿಯೂರು (೨೦೧೬). ಸ್ಥಳನಾಮಗಳು ಮತ್ತು ಐತಿಹ್ಯಗಳು. ಸುಳ್ಯ: ಕನ್ನಡ ಸಂಘ,ನೆಹರು ಮೆಮೋರಿಯಲ್ ಕಾಲೇಜು. pp. ೨೫-೨೬. Check date values in: |year= (help)