ವಿಷಯಕ್ಕೆ ಹೋಗು

ಸಂಯೋಜಿತ ಧಾತು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಸಾಯನಶಾಸ್ತ್ರದಲ್ಲಿ, ಸಂಯೋಜಿತ ಅಥವಾ ಸಂಶ್ಲಿಷ್ಟವೆಂದು ವರ್ಗೀಕರಿಸಲಾದ ಮೂಲಧಾತು(Synthetic element)ಗಳು ಬಹಳ ಅಸ್ಥಿರವಿರುವುದರಿಂದ ಭೂಮಿಯ ಮೇಲೆ ಪ್ರಕೃತಿಸಿದ್ಧವಾಗಿ ಸಿಗುವುದಿಲ್ಲ. ಈ ಸಂಯೋಜಿತ ಧಾತುಗಳು ಭೂಮಿಯ ವಯಸ್ಸಿಗೆ ಹೋಲಿಸಿದರೆ ಅತಿ ಕಡಮೆ ಅರ್ಧಾಯುಷ್ಯಗಳನ್ನು ಹೊಂದಿರುವುದರಿಂದ ಭೂಮಿಯ ರಚನೆಯಾದಾಗ ಅಸ್ತಿತ್ವದಲ್ಲಿದ್ದಿರಬಹುದಾದ ಈ ಧಾತುಗಳ ಯಾವುದೇ ಪರಮಾಣುಗಳು ಯಾವತ್ತೋ ನಶಿಸಿ ಹೋಗಿರುತ್ತವೆ. ಈ ಕಾರಣದಿಂದ, ಸಂಯೋಜಿತ ಮೂಲಧಾತುಗಳ ಪರಮಾಣುಗಳು ಭೂಮಿಯ ಮೇಲೆ ಕೇವಲ ಬೈಜಿಕ ಸ್ಥಾವರಗಳು ಅಥವಾ ಕಣ ಉತ್ಕರ್ಷಕಗಳನ್ನು ಒಳಗೊಂಡ ಪ್ರಯೋಗಗಳ ಉತ್ಪನ್ನವಾಗಿ ಬೈಜಿಕ ಸಮ್ಮಿಲನ ಅಥವಾ ನ್ಯೂಟ್ರಾನ್ ವಿಲೀನದ ದ್ವಾರಾ ಉಪಸ್ಥಿತವಿರುತ್ತವೆ.

ವೈಶಿಷ್ಟ್ಯಗಳು

[ಬದಲಾಯಿಸಿ]

ಕೃತಕ ಮೂಲಧಾತುಗಳು ವಿಕಿರಣಶೀಲವಾಗಿ ಅತ್ಯಂತ ಕಡಿಮೆ ಅರ್ದಾಯುಷ್ಯವನ್ನು ಹೊಂದಿರುತ್ತವೆ.

ಕೃತಕ ಮೂಲಧಾತುಗಳ ಪಟ್ಟಿ

[ಬದಲಾಯಿಸಿ]

ಈ ಕೆಳಗಿನ ಮೂಲಧಾತುಗಳು ಭೂಮಿಯಲ್ಲಿ ತೃಣಮಾತ್ರ ಇರುವುದರಿಂದ ಕೃತಕವಾಗಿ ಸಂಯೋಜಿಸಲ್ಪಟ್ಟವು.

ಮೂಲಧಾತುವಿನ ಹೆಸರುರಾಸಾಯನಿಕ
ಚಿನ್ಹೆ
ಪರಮಾಣು
ಸಂಖ್ಯೆ
ಪ್ರಥಮ ಖಚಿತ
ಸಂಯೋಜನೆ
ಟೆಕ್ನೀಶಿಯಮ್Tc431936
ಪ್ರೊಮೆಥಿಯಮ್Pm611945
ಆಸ್ಟಟೈನ್At851940
ನೆಪ್ಚೂನಿಯಮ್Np931940
ಪ್ಲುಟೋನಿಯಮ್Pu941940