ಸಂಯೋಜಿತ ಧಾತು
ಗೋಚರ
ರಸಾಯನಶಾಸ್ತ್ರದಲ್ಲಿ, ಸಂಯೋಜಿತ ಅಥವಾ ಸಂಶ್ಲಿಷ್ಟವೆಂದು ವರ್ಗೀಕರಿಸಲಾದ ಮೂಲಧಾತು(Synthetic element)ಗಳು ಬಹಳ ಅಸ್ಥಿರವಿರುವುದರಿಂದ ಭೂಮಿಯ ಮೇಲೆ ಪ್ರಕೃತಿಸಿದ್ಧವಾಗಿ ಸಿಗುವುದಿಲ್ಲ. ಈ ಸಂಯೋಜಿತ ಧಾತುಗಳು ಭೂಮಿಯ ವಯಸ್ಸಿಗೆ ಹೋಲಿಸಿದರೆ ಅತಿ ಕಡಮೆ ಅರ್ಧಾಯುಷ್ಯಗಳನ್ನು ಹೊಂದಿರುವುದರಿಂದ ಭೂಮಿಯ ರಚನೆಯಾದಾಗ ಅಸ್ತಿತ್ವದಲ್ಲಿದ್ದಿರಬಹುದಾದ ಈ ಧಾತುಗಳ ಯಾವುದೇ ಪರಮಾಣುಗಳು ಯಾವತ್ತೋ ನಶಿಸಿ ಹೋಗಿರುತ್ತವೆ. ಈ ಕಾರಣದಿಂದ, ಸಂಯೋಜಿತ ಮೂಲಧಾತುಗಳ ಪರಮಾಣುಗಳು ಭೂಮಿಯ ಮೇಲೆ ಕೇವಲ ಬೈಜಿಕ ಸ್ಥಾವರಗಳು ಅಥವಾ ಕಣ ಉತ್ಕರ್ಷಕಗಳನ್ನು ಒಳಗೊಂಡ ಪ್ರಯೋಗಗಳ ಉತ್ಪನ್ನವಾಗಿ ಬೈಜಿಕ ಸಮ್ಮಿಲನ ಅಥವಾ ನ್ಯೂಟ್ರಾನ್ ವಿಲೀನದ ದ್ವಾರಾ ಉಪಸ್ಥಿತವಿರುತ್ತವೆ.
ವೈಶಿಷ್ಟ್ಯಗಳು
[ಬದಲಾಯಿಸಿ]ಕೃತಕ ಮೂಲಧಾತುಗಳು ವಿಕಿರಣಶೀಲವಾಗಿ ಅತ್ಯಂತ ಕಡಿಮೆ ಅರ್ದಾಯುಷ್ಯವನ್ನು ಹೊಂದಿರುತ್ತವೆ.
ಕೃತಕ ಮೂಲಧಾತುಗಳ ಪಟ್ಟಿ
[ಬದಲಾಯಿಸಿ]ಈ ಕೆಳಗಿನ ಮೂಲಧಾತುಗಳು ಭೂಮಿಯಲ್ಲಿ ತೃಣಮಾತ್ರ ಇರುವುದರಿಂದ ಕೃತಕವಾಗಿ ಸಂಯೋಜಿಸಲ್ಪಟ್ಟವು.
ಮೂಲಧಾತುವಿನ ಹೆಸರು | ರಾಸಾಯನಿಕ ಚಿನ್ಹೆ |
ಪರಮಾಣು ಸಂಖ್ಯೆ |
ಪ್ರಥಮ ಖಚಿತ ಸಂಯೋಜನೆ |
---|---|---|---|
ಟೆಕ್ನೀಶಿಯಮ್ | Tc | 43 | 1936 |
ಪ್ರೊಮೆಥಿಯಮ್ | Pm | 61 | 1945 |
ಆಸ್ಟಟೈನ್ | At | 85 | 1940 |
ನೆಪ್ಚೂನಿಯಮ್ | Np | 93 | 1940 |
ಪ್ಲುಟೋನಿಯಮ್ | Pu | 94 | 1940 |