ಲಡಾಖಿ (ಗೋವಿನ ತಳಿ)
ಗೋಚರ
ಲಡಾಖಿ | |
---|---|
ತಳಿಯ ಹೆಸರು | ಲಡಾಖಿ |
ಮೂಲ | ಲಡಾಖ್ |
ವಿಭಾಗ | ಕಲಸಗಾರ/ಹಾಲು, ಸಣ್ಣ ಗಾತ್ರ |
ಬಣ್ಣ | ಕಪ್ಪು ಮತ್ತು ಕಂದು |
ಮುಖ | ಸಣ್ಣ ಹಣೆ, ಸ್ವಲ್ಪ ಉದ್ದ ಮುಖ |
ಕಾಲುಗಳು | ಗಿಡ್ಡ |
ಲಡಾಖಿಯು ಭಾರತದ ಲಡಾಖ್ ಪ್ರಾಂತ್ಯದ ಹಸುವಿನ ತಳಿ.[೧] ಇದು ಸಣ್ಣಗಾತ್ರದ ಕುಳ್ಳ ನಿಲುವಿನ ತಳಿಗಳಾಗಿದ್ದು ಅತಿ ಶೀತ ಮತ್ತು ಕಡಿಮೆ ಆಮ್ಲಜನಕ ಇರುವವಾತಾವರಣಕ್ಕೆ ಹೊಂದಿಕೊಂಡಂತಹ ತಳಿಯಾಗಿದೆ.[೨]
ದೇಹಲಕ್ಷಣಗಳು
[ಬದಲಾಯಿಸಿ]ಇದರ ದೇಹವು ಸಣ್ಣಗಾತ್ರದ್ದು ಕಾಲುಗಳು ಗಿಡ್ಡವಾಗಿರುತ್ತವೆ. ಬಣ್ಣ ಗಾಢ ಕಪ್ಪು ಅಥವಾ ಕಂದು. ಕೊಂಬುಗಳು ಮೇಲ್ಭಾಗಕ್ಕೆ ಮತ್ತು ಮುಂಭಾಗಕ್ಕೆ ತಿರುಗಿ ಹಣೆಯ ಕಡೆ ಚೂಪಾಗಿ ತಿರುಗಿಕೊಂಡಿರುತ್ತದೆ. ಹಣೆಯು ಸಣ್ಣದಾಗಿ ನೇರವಾಗಿದ್ದು ಕೂದಲುಗಳಿಂದ ಕೂಡಿರುತ್ತದೆ. ಮುಖವು ಸ್ವಲ್ಪ ಉದ್ದವಾಗಿರುತ್ತದೆ. ಕೆಚ್ಚಲು ಸಣ್ಣದಾಗಿದ್ದು ಬಟ್ಟಲಾಕಾರದಲ್ಲಿರುತ್ತದೆ.
ಬಳಕೆ
[ಬದಲಾಯಿಸಿ]ಇವು ಹಾಲಿಗಾಗಿ, ಕೆಲಸಕ್ಕಾಗಿ ಮತ್ತು ಗೊಬ್ಬರಕ್ಕಾಗಿ ಸಾಕಲ್ಪಡುತ್ತವೆ. ದಿನಕ್ಕೆ ಸುಮಾರು ೨ ರಿಂದ ೫ ಕೆ.ಜಿ.ಯಷ್ಟು ಹಾಲನ್ನು ಕೊಡುತ್ತವೆ. ಇದರ ಹಾಲು ಹೆಚ್ಚು ಕೊಬ್ಬಿನ ಅಂಶ (ಸುಮಾರು ೫%) ಹೊಂದಿದ್ದು ಮುಖ್ಯವಾಗಿ ಅದರಿಂದ ಸ್ಥಳೀಯ ಆಹಾರದಲ್ಲಿ ಬಳಕೆಯಾಗುವ ಬೆಣ್ಣೆ ಮತ್ತು ಚುರ್ಪಿ ಚೀಸ್ ತಯಾರಿಸಲಾಗುತ್ತದೆ.