ರಾಮಾಚಾರಿ (ಚಲನಚಿತ್ರ)
| ರಾಮಾಚಾರಿ (ಚಲನಚಿತ್ರ) | |
|---|---|
| ರಾಮಾಚಾರಿ | |
| ನಿರ್ದೇಶನ | ಡಿ.ರಾಜೇಂದ್ರಬಾಬು |
| ನಿರ್ಮಾಪಕ | ಎನ್.ವೀರಾಸ್ವಾಮಿ |
| ಪಾತ್ರವರ್ಗ | ರವಿಚಂದ್ರನ್ ಮಾಲಾಶ್ರೀ ಲೋಕೇಶ್, ಗಿರಿಜಾ ಲೋಕೇಶ್, ಪ್ರಕಾಶ್ ರೈ, ಜ್ಯೋತಿ, ಸುಮಿತ್ರಾ, ರಮಾದೇವಿ |
| ಸಂಗೀತ | ಹಂಸಲೇಖ |
| ಛಾಯಾಗ್ರಹಣ | ಡಿ.ಪ್ರಸಾದ್ |
| ಬಿಡುಗಡೆಯಾಗಿದ್ದು | ೧೯೯೧ |
| ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಈಶ್ವರಿ ಪ್ರೊಡಕ್ಷನ್ಸ್ |
| ಸಾಹಿತ್ಯ | ಹಂಸಲೇಖ |
| ಹಿನ್ನೆಲೆ ಗಾಯನ | ಕೆ.ಜೆ.ಯೇಸುದಾಸ್, ಎಸ್.ಜಾನಕಿ, ಮನೋ, ಎಸ್.ಪಿ.ಬಾಲಸುಬ್ರಹ್ಮಣ್ಯಂ |
ರಾಮಾಚಾರಿ - ಇದು 1991 ನೇ ವರ್ಷದ ಕನ್ನಡ ಚಲನಚಿತ್ರವಾಗಿದ್ದು ಇದನ್ನು ಡಿ. ರಾಜೇಂದ್ರ ಬಾಬು ಇದನ್ನು ನಿರ್ದೇಶಿಸಿದ್ದಾರೆ. ಇದನ್ನು ಎನ್. ವೀರಾಸ್ವಾಮಿ ನಿರ್ಮಿಸಿದ್ದಾರೆ. ಇದರ ಪ್ರಮುಖ ಪಾತ್ರಗಳಲ್ಲಿ ರವಿಚಂದ್ರನ್, ಮಾಲಾಶ್ರೀ ಇದ್ದಾರೆ. ಈ ಚಿತ್ರದ ಸಂಗೀತವನ್ನು ಹಂಸಲೇಖ ಸಂಯೋಜಿಸಿದ್ದಾರೆ. ಈ ಚಿತ್ರವು ಅದೇ ವರ್ಷ ತಮಿಳಿನಲ್ಲಿ ತಯಾರಾದ ಪಿ ವಾಸು ನಿರ್ದೇಶನದ ಚಿನ್ನತಂಬಿ ಎಂಬ ಚಲನಚಿತ್ರದ ರಿಮೇಕ್ ಆಗಿತ್ತು.
ಚಿತ್ರದ ನಿರ್ಮಾಣ
[ಬದಲಾಯಿಸಿ]ರವಿಚಂದ್ರನ್ ಅವರ ಕನಸಿನ ಯೋಜನೆ "ಶಾಂತಿ ಕ್ರಾಂತಿ"ಯು ಆರ್ಥಿಕ ಸೋಲನ್ನು ಅನುಭವಿಸಿದ ನಂತರ ಈ 'ಚಲನಚಿತ್ರದ ನಿರ್ಮಾಣವನ್ನು ಪ್ರಾರಂಭ ಮಾಡಿದರು. "ಶಾಂತಿ-ಕ್ರಾಂತಿ"ಯ ನಟಿ ಮತ್ತು "ಅಂಜದ ಗಂಡು", "ಯುಗಪುರುಷ" ಮತ್ತು "ರಣಧೀರ" ಚಿತ್ರಗಳ ನಾಯಕಿ ಖುಷ್ಬೂ ಸಹಾಯ ಮಾಡಿದರು. ಅವರು ಅಂತಿಮವಾಗಿ ಚಿನ್ನತಂಬಿ ಚಿತ್ರದ ನಿರ್ಮಾಪಕರಿಗೆ ರಾಮಚಾರಿ ಚಿತ್ರದ ನಿರ್ಮಾಪಕರಾಗಲು ಮನವೊಲಿಸಿದರು. ಆಕೆ ಡಬ್ಬಿಂಗ್ ಹಕ್ಕುಗಳನ್ನು ಸಹ ಖರೀದಿಸಿದಳು. ನಂತರ, ರವಿಚಂದ್ರನ್ ವಿತರಕರನ್ನು ಹುಡುಕಲು ಪ್ರಯತ್ನಿಸಿದರು. ಸಂಪೂರ್ಣ ಯೋಜನೆ ಇಲ್ಲದೆ, ರವಿಚಂದ್ರನ್ ತಮ್ಮ ವಿತರಣಾ ಹಕ್ಕುಗಳನ್ನು ಮಾರಾಟ ಮಾಡಿದರು. ರಾಮಚಾರಿ ಚಿತ್ರವು ಹಿಟ್ ಆಯಿತು.
ಪಾತ್ರವರ್ಗ
[ಬದಲಾಯಿಸಿ]- ರವಿಚಂದ್ರನ್ ರಾಮಾಚಾರಿ ಆಗಿ
- ಮಾಲಾಶ್ರೀ ನಂದಿನಿಯಾಗಿ
- ಲೋಕೇಶ್
- ಸುಮಿತ್ರಾ ಲಕ್ಷ್ಮಿ ಆಗಿ
- ಪ್ರಕಾಶ್ ರೈ
- ದೊಡ್ಡಣ್ಣ ಜ್ಯೋತಿಷಿ ಆಗಿ
- ಗಿರಿಜಾ ಲೋಕೇಶ್ ಸರಸ ಆಗಿ
- ಮೈಸೂರು ಲೋಕೇಶ್ ಮುಕ್ಕಣ್ಣನಾಗಿ
- ಜ್ಯೋತಿ
- ಮಂಜುಮಾಲಿನಿ ತ್ರಿಪುರಸುಂದರಿ ಯಾಗಿ
- ಸತ್ಯಭಾಮಾ ತ್ರಿಪುರಸುಂದರಿಯ ತಾಯಿಯಾಗಿ
- ಮಾಸ್ಟರ್ ಮಂಜುನಾಥ್ ಎಳೆಯ ರಾಮಾಚಾರಿಯಾಗಿ
ಹಿನ್ನೆಲೆ ಸಂಗೀತ
[ಬದಲಾಯಿಸಿ]ಹಂಸಲೇಖ ಈ ಚಿತ್ರಕ್ಕೆ ಹಿನ್ನೆಲೆ ಸಂಗೀತವನ್ನು ಕೊಡುವುದಲ್ಲದೆ ಚಿತ್ರದ 8 ಗೀತೆಗಳಿಗೆ ಸಾಹಿತ್ಯವನ್ನು ಮತ್ತು ಸಂಗೀತವನ್ನೊದಗಿಸಿದ್ದಾರೆ.
| ಹಾಡುಗಳು ಪಟ್ಟಿ | |||
|---|---|---|---|
| ಸಂ. | ಹಾಡು | ಹಾಡುಗಾರರು | ಸಮಯ |
| 1. | "ಯಾರಿವಳು ಯಾರಿವಳು" | ಮನೋ, ಕೊರಸ್ | 5:05 |
| 2. | "ನಮ್ಮೂರ ಯುವರಾಣಿ" | ಕೆ.ಜೆ.ಜೇಸುದಾಸ್ | 5:13 |
| 3. | "ಆಕಾಶದಾಗೆ ಯಾರೋ" | ಮನೋ, ಎಸ್. ಜಾನಕಿ | 5:07 |
| 4. | "ಕಾದಿರುವೆ ನಿನಗಾಗಿ" | ಎಸ್. ಜಾನಕಿ | 4:47 |
| 5. | "ರಾಮಾಚಾರಿ ಹಾಡುವ" | ಜೇಸುದಾಸ್ | 5:06 |
| 6. | "ರಾಮಾಚಾರಿ ಹಾಡುವ" | ಜೇಸುದಾಸ್ | 2:20 |
| 7. | "ಬುರುಡೇ ಬುರುಡೆ" | ಮನೋ, ಕೆ. ಎಸ್. ಚಿತ್ರಾ | 4:40 |
| 8. | "ರಾಮಾಚಾರಿ ಹಾಡುವ" | ಎಸ್. ಜಾನಕಿ | 4:47 |
| ಒಟ್ಟು ಸಮಯ: | 37:03 | ||