ವಿಷಯಕ್ಕೆ ಹೋಗು

ಮಾಸ್ಟರ್ ಮಂಜುನಾಥ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾಸ್ಟರ್ ಮಂಜುನಾಥ್
(ಎಡ) ಮಾಲ್ಗುಡಿ ಡೇಸ್ ನ ಸ್ವಾಮಿ, (ಬಲ) ಇತ್ತೀಚಿನ ಚಿತ್ರ
ಜನನ
ಮಂಜುನಾಥ್ ನಾಯಕರ್

(1976-12-23) 23 December 1976 (age 49)
ವೃತ್ತಿಚಿತ್ರ ನಟ
ಪ್ರಸಿದ್ಧರಾಗಿರುವುದುಸ್ವಾಮಿ-ಮಾಲ್ಗುಡಿ ಡೇಸ್ (೧೯೮೭)
ರವಿಚಂದ್ರನ್ರಣಧೀರ (೧೯೮೭) ನಟನೆ
ಪತ್ನಿ/ಪತಿಸ್ವರ್ಣರೇಖಾ ನಾಯಕರ್

ಮಂಜುನಾಥ್ ನಾಯಕರ್ (ಇಂಗ್ಲೀಷ್:Master Manjunath) ರವರು ಭಾರತೀಯ ನಟ ಮತ್ತು ಪಬ್ಲಿಕ್ ರಿಲೇಷನ್ಶಿಪ್ ವೃತ್ತಿಪರರು. ಪರದೆಯ ಹೆಸರು ಮಾಸ್ಟರ್ ಮಂಜುನಾಥ್ ಎಂಬ ಹೆಸರಿನಿಂದ ಅತಿ ಹೆಚ್ಚು ಗುರುತಿಸಲ್ಪಡುತ್ತಾರೆ. ಇವರು ಶಂಕರ್ ನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ (೧೯೮೭) ಎಂಬ ಜನಪ್ರಿಯ ದೂರದರ್ಶನದ ಸರಣಿಯಲ್ಲಿನ "ಸ್ವಾಮಿ ಆಂಡ್ ಫ್ರೆಂಡ್ಸ್" ಸಂಚಿಕೆಗಳಲ್ಲಿ ಕಾಣಲು ಸಿಗುವ "ಸ್ವಾಮಿ" ಎಂಬ ಪ್ರಮುಖ ಪಾತ್ರದಿಂದ ಪ್ರಖ್ಯಾತರಾಗಿದ್ದಾರೆ.[೧][೨]

ಆರಂಭಿಕ ಜೀವನ

[ಬದಲಾಯಿಸಿ]

ಮಾಸ್ಟರ್ ಮಂಜುನಾಥ್ ಅವರು ಕರ್ನಾಟಕ ರಾಜ್ಯದ ಬೆಂಗಳೂರಿನಲ್ಲಿ ಜನಿಸಿದರು. ಇವರು ಮೈಸೂರು ವಿಶ್ವವಿದ್ಯಾನಿಲಯ ಮತ್ತು ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎ ಪದವಿಯನ್ನು ಇಂಗ್ಲೀಷ್ ನಲ್ಲಿ ಹಾಗೂ ಎಂ.ಎ ಪದವಿಯನ್ನು ಸಮಾಜಶಾಸ್ತ್ರದಲ್ಲಿ ಪಡಿದಿದ್ದಾರೆ. ಇವರು ಛಾಯಾಗ್ರಹಣ ಮತ್ತು CA ಫೌಂಡೇಷನ್ ಕೋರ್ಸ್ನಲ್ಲಿ ಡಿಪ್ಲೊಮವನ್ನು ಕೂಡ ಹೊಂದಿದ್ದಾರೆ.[೩]

ವೃತ್ತಿಜೀವನ

[ಬದಲಾಯಿಸಿ]

ತನ್ನ ಮೂರು ವರ್ಷದ ವಯಸ್ಸಿನಲ್ಲೇ ನಟಿಸಲು ಪ್ರಾರಂಭಿಸಿದ ಮಾಸ್ಟರ್ ಮಂಜುನಾಥ್ ಅವರು ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ೬೮ ಚಲನಚಿತ್ರಗಳಲ್ಲಿ ನಟಿಸಿದ್ದಾರೆ, ಆದರೆ ಸ್ವಾಮಿ ಮತ್ತು ಫ್ರೆಂಡ್ಸ್ ನ ಅವರ ಪಾತ್ರದಿಂದ ಅತಿ ಹೆಚ್ಚು ಗುರುತಿಸಲ್ಪಡುತ್ತಾರೆ. ಈ ಪಾತ್ರಕ್ಕಾಗಿ ಆರು ಅಂತಾರಾಷ್ಟ್ರೀಯ, ಒಂದು ರಾಷ್ಟ್ರೀಯ ಮತ್ತು ಒಂದು ರಾಜ್ಯ ಪ್ರಶಸ್ತಿಗಳನ್ನೂ ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಈ ಸರಣಿಯು ೧೯೮೫-೮೬ ರಲ್ಲಿ ತನ್ನ ಶಾಲೆಯ ರಜೆಯ ಸಮಯದಲ್ಲಿ ಚಿತ್ರೀಕರಿಸಲಾಯಿತು ತದನಂತರ ೧೯೮೭ ರಲ್ಲಿ ಪ್ರಸಾರವಾಯಿತು.

ಅವರು ಸೂಪರ್-ಹಿಟ್ ಸಿನೆಮಾ ನಟ-ನಿರ್ದೇಶಕ ಶಂಕರ್ ನಾಗ್ ರವರ 'ನೋಡಿ ಸ್ವಾಮಿ ನಾವಿರೋದೆ ಹೀಗೆ', 'ಎಸ್.ಪಿ.ಸಾಂಗ್ಲಿಯಾನಾ-೧', 'ಎಸ್.ಪಿ. ಸಾಂಗ್ಲಿಯಾನಾ-೨' ರಲ್ಲಿ ಅಭಿನಯಿಸಿದ್ದಾರೆ. ಅಮಿತಾಭ್ ಬಚ್ಚನ್ ಅಭಿನಯಿಸಿದ ಬಾಲಿವುಡ್ ನ ಅಗ್ನಿಪಥ್ (೧೯೯೦) ಚಿತ್ರದಲ್ಲಿನ ಯುವ ವಿಜಯ್ ದೀನನಾಥ್ ಚೌಹಾಣ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ತನ್ನ ಅಧ್ಯಯನದ ಮೇಲೆ ಗಮನವಹಿಸಲು ತನ್ನ ೧೯ನೇ ವಯಸ್ಸಿನಲ್ಲಿ ಅವರು ನಟನೆಯನ್ನು ತೊರೆದರು.

ಅವರು ಪಿ.ಆರ್ ವೃತ್ತಿಪರರಾಗಿದ್ದರು ಮತ್ತು ಬೆಂಗಳೂರು - ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಪ್ರಾಜೆಕ್ಟ್ (ಬಿ.ಎಂ.ಐ.ಸಿ.ಪಿ) ಗೆ ಕೆಲಸ ಮಾಡಿದ್ದಾರೆ.[೩] ಅವರು ಈಗ ತಮ್ಮ ಸ್ವಂತ ಪಿ.ಆರ್ ಸಲಹಾ ಕಂಪನಿಯನ್ನು ನಡೆಸುತ್ತಿದ್ದಾರೆ.

ವೈಯಕ್ತಿಕ ಜೀವನ

[ಬದಲಾಯಿಸಿ]

ಮಂಜುನಾಥ್ ರವರು ಕ್ರೀಡಾಪಟು (ಒಟ ಹಾಗು ಜಿಗಿತ ಪಟು) ಸ್ವರ್ಣರೇಖಾರನ್ನು ವಿವಾಹವಾದರು.[೨]

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]
ವರ್ಷಚಲನಚಿತ್ರಪಾತ್ರಭಾಷೆ
೧೯೮೨ಅಜಿತ್ಗೊವಿಂದಕನ್ನಡ
೧೯೮೨ಮುತ್ತಿನಂಥ ಅತ್ತಿಗೆಕನ್ನಡ
೧೯೮೨ಟೋನಿದಾಮೋಧರಕನ್ನಡ
೧೯೮೩ಜಗ್ಗುಕನ್ನಡ
೧೯೮೩ಹೊಸ ತೀರ್ಪುಸೀನುಕನ್ನಡ
೧೯೮೩ಬ್ಯಾಂಕರ್ ಮಾರ್ಗಯ್ಯಬಾಲ್ಯದ ಬಾಲುಕನ್ನಡ
೧೯೮೩ನೋಡಿ ಸ್ವಾಮಿ ನಾವಿರೋದು ಹೀಗೆಚೋಟುಕನ್ನಡ
೧೯೮೪ಉತ್ಸವ್ಹಿಂದಿ
೧೯೮೪ರಕ್ತ ತಿಲಕಹನುಮಂತುಕನ್ನಡ
೧೯೮೪ನಗಬೇಕಮ್ಮ ನಗಬೇಕುಕನ್ನಡ
೧೯೮೪ಅವಳ ಅಂತರಂಗಕನ್ನಡ
೧೯೮೪ಎದಿರು ಅಲೆಗಳುಕನ್ನಡ
೧೯೮೪ಮಕ್ಕಳಿರಲವ್ವ ಮನೆತುಂಬಕೃಷ್ಣಕನ್ನಡ
೧೯೮೪ಕಲಿಯುಗಮಂಜಕನ್ನಡ
೧೯೮೪ನೇತ್ರ ಪಲ್ಲವಿಕನ್ನಡ
೧೯೮೪ಮೂರು ಜನ್ಮಕನ್ನಡ
೧೯೮೪ತಾಳಿಯ ಬಾಗ್ಯಕನ್ನಡ
೧೯೮೪ಬೆಂಕಿ ಬಿರುಗಾಳಿರಾಜುಕನ್ನಡ
೧೯೮೫ಗೂಂಡಾಗುರುಲಕ್ಕೊಕನ್ನಡ
೧೯೮೫ಮಾನವ ದಾನವಅಮರ್ಕನ್ನಡ
೧೯೮೫ಕುರಿ ದೊಡ್ಡಿ ಕುರುಕ್ಷೇತ್ರಕನ್ನಡ
೧೯೮೫ಪರಮೇಶಿ ಪ್ರೇಮ ಪ್ರಸಂಗಕನ್ನಡ
೧೯೮೬ದೇವತೆಕನ್ನಡ
೧೯೮೬ನನ್ನವರುಕನ್ನಡ
೧೯೮೭ರಣಧೀರಕನ್ನಡ
೧೯೮೭ಮಾಲ್ಗುಡಿ ಡೇಸ್ಸ್ವಾಮಿಹಿಂದಿ ಹಾಗೂ ಇಂಗ್ಲೀಷ್ (ಚಿತ್ರ ಸರಣಿಗಳು)
೧೯೮೭ಹುಲಿ ಹೆಬ್ಬುಲಿವಿಜಯೇಂದ್ರಕನ್ನಡ
೧೯೮೭ಪೂರ್ಣ ಚಂದ್ರಕನ್ನಡ
೧೯೮೭ಈ ಬಂಧ ಅನುಬಂಧಮಂಜುಕನ್ನಡ
೧೯೮೮ನವ ಬಾರತರವಿಕನ್ನಡ
೧೯೮೮ಸಾಂಗ್ಲಿಯಾನಅವಿನಾಶ್ಕನ್ನಡ
೧೯೮೮ವರ್ಣ ಚಕ್ರಕನ್ನಡ
೧೯೮೮ಅಂಜದ ಗಂಡುಕೇಶವಕನ್ನಡ
೧೯೮೮ರಣರಂಗಆನಂದ್ಕನ್ನಡ
೧೯೮೮ಸಾಹಸ ವೀರಮಂಜುಕನ್ನಡ
೧೯೮೮ತೇಜಕನ್ನಡ
೧೯೮೯ಯುದ್ಧ ಕಾಂಡಕನ್ನಡ
೧೯೮೯ಗುರುಕನ್ನಡ
೧೯೮೯ಶಾರವೇಗದ ಸರದಾರಕನ್ನಡ
೧೯೮೯ಕಿಂದರಿ ಜೋಗಿಬೊಂಮ್ಮಿಕನ್ನಡ
೧೯೮೯ಲವ್ ಮಾಡಿ ನೋಡುಗೋಪಿಕನ್ನಡ
೧೯೮೯ಬಂಗಾರದಾ ಬದುಕುಗೀತುಕನ್ನಡ
೧೯೮೯ನರಸಿಂಹಕನ್ನಡ
೧೯೯೦ಅಗ್ನೀಪಥ್ಬಾಲ್ಯದ ದೀನಾನಾಥ್ ಚೌಹಾಣ‍್ [೪]ಹಿಂದಿ
೧೯೯೦ಎಸ್.ಪಿ.ಸಾಂಗ್ಲಿಯಾನಾ-೨' ಅವಿನಾಶ್ಕನ್ನಡ
೧೯೯೦ಶಿವಶಂಕರ್' ಮಂಜುಕನ್ನಡ
೧೯೯೦ಮತ್ಸರಕನ್ನಡ
೧೯೯೦ಶಬರಿಮಲೆ ಸ್ವಾಮಿ ಅಯ್ಯಪ್ಪಕನ್ನಡ
೧೯೯೧ಭೇನಾಮ್ ಬಾದ್ಶಾಹಿಂದಿ
೧೯೯೧ರಾಮಾಚಾರಿರಾಮಾಚಾರಿಕನ್ನಡ
೧೯೯೨ವಿಶ್ವಾತ್ಮಹಿಂದಿ
೧೯೯೨ಸ್ವಾತಿ ಕಿರಣಂಗಂಗಾಧರಂತೆಲುಗು

ಉಲ್ಲೇಖಗಳು

[ಬದಲಾಯಿಸಿ]
  1. ↑ "I exactly acted as I imagine Swami to be". Rediff.com. 16 May 2001.
  2. 1 2 "The star of Malgudi Days". The Hindu. 24 October 2004. Archived from the original on 14 ಜನವರಿ 2012. Retrieved 17 ಮಾರ್ಚ್ 2018.
  3. 1 2 "Life and times of Swami". Mumbai Mirror. 28 March 2010.
  4. ↑ young Vijay Chouhan in Agneepath at indian Express : Oct16,2016

ಬಾಹ್ಯ ಕೊಂಡಿಗಳು

[ಬದಲಾಯಿಸಿ]