ಸಾಂಗ್ಲಿಯಾನ (ಚಲನಚಿತ್ರ)
ಪಿ.ನಂಜುಂಡಪ್ಪರವರು ನಿರ್ದೇಶಿಸಿದ [೧]ದ ಬಿಡುಗಡೆ ೧೯೮೮ರಲ್ಲಿ ಆಯಿತು. ಈ ಚಲನಚಿತ್ರವನ್ನು ಎಚ್.ಟಿ.ಸಾಂಗ್ಲಿಯಾನ ಅವರ ಜೀವನದ ಮೇಲೆ
ಆಧಾರಿಯತವಾಗಿ ಮಾಡಿರುವುದು.[೨]ಶಂಕರ್ನಾಗ್,ಭವ್ಯ ಹಾಗು ತಾರ ಅವರ ನಟನೆಯ ಈ ಚಿತ್ರ ಬಿಡುಗಡೆಯಾಗುತ್ತಲೆ ದೊಡ್ಡ ಹಿಟ್ ಆಯಿತು.ಈ ಚಿತ್ರದಲ್ಲಿ
ಅಂಬರೀಶ್ರವರು ವಿಶೇಷವಾಗಿ ಕಾಣಿಸಿಕೊಂಡರು. ಹಂಸಲೇಖ ಅವರು ಸಂಗೀತ ನೀಡಿದರು. ಹಿಟ್ ಆಗಿರುವ
ಪರಿಣಾಮವಾಗಿ ೧೯೯೦ರಲ್ಲಿ [೩] ೨ ಹಾಗು ೧೯೯೭ರಲ್ಲಿ ಸಾಂಗ್ಲಿಯಾನ ೩ ಚಿತ್ರಗಳನ್ನು ಬಿಡುಗಡೆ ಮಾಡಿದರು.ಸಾಂಗ್ಲಿಯಾನ ೩ ಚಿತ್ರದಲ್ಲಿ ದೇವರಾಜ್ರವರು ನಟಿಸಿದರು.
ಈ ಚಿತ್ರವನ್ನು ಪೊಲೀಸ್ ಅಧಿಕಾರಿ
ಎಚ್.ಟಿ. ಸಾಂಗ್ಲಿಯಾನರವರ ಜೀವನದ ಮೇಲೆ ಆಧಾರಿತವಾಗಿ ಮಾಡಿದ್ದರೆ. ಮಿಜೋರಾಮ್ ರಾಜ್ಯದವರಾದ ಸಾಂಗ್ಲಿಯಾನ ಅವರು ತಮ್ಮ ಐ.ಪಿ.ಎಸ್.
ಮುಗಿಸಿ ಕರ್ನಾಟಕಕ್ಕೆ ವರ್ಗಾವಣೆಯಾದರು.ಅವರು [http://ಬೆಂಗಳೂರು ಬೆಂಗಳೂರು] ನಗರದ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದರು.ಈ ಸಮಯದಲ್ಲಿ ಅವರು ಹಲವಾರು
ಖ್ಯಾತಿ ಪಡೆದ ಕೇಸ್ ಗಳನ್ನು ಮಾಡಿದರು.
ನಕಲಿ ಸ್ಟಾಂಪ್ ಪೇಪರ್ ಕೇಸ್ ಇವರ ಅತ್ಯಂತ ಖ್ಯಾತಿ ಪಡೆದ ಕೇಸ್.ಈ ಕೇಸಿನಲ್ಲಿ ೫೦ ಕೋಟಿ ರೂಪಾಯಿಗಳನ್ನು ವಶಪಡಿಸಿ , ಇದರ ಹಿಂದೆ ಇದ್ದ ಡಾನ್ ಹಾಗು ಹಲವಾರು
ಮಾಜಿ ಪೊಲೀಸ್ ಅಧಿಕಾರಿಗಳನ್ನು ಬಂಧಿಸಿದರು. ತಮ್ಮ ಸೇವಾ ಅವಧಿಯಲ್ಲಿ ಅವರ ಸೇವಾ ದಾಖಲೆ ಅತ್ಯಂತ ಪ್ರಭಾವಶಾಲಿಯಾದದ್ದು.
ತಮ್ಮ ನಿವೃತ್ತಿಯ ನಂತರ ಭಾರತೀಯ ಜನತಾ ಪಾರ್ಟಿ(ಬಿಜೆಪಿ)ಯ ಆಮಂತ್ರಣದಿಂದ ಹಳೆಯ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದದಿಂದ ಚುನಾವಣೆಗೆ ನಿಂತು
೩೪ ಅಭ್ಯರ್ಥಿಗಳನ್ನು ಸೋಲಿಸಿದರು. ಈ ಚಿತ್ರದಲ್ಲಿ ಶಂಕರ್ನಾಗ್
ಟಿಸಿರುವ ಪಾತ್ರ ಸಾಂಗ್ಲಿಯಾನ ಒಬ್ಬ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಹಾಗು ನಗರದಲ್ಲಿರುವ ಭ್ರಷ್ಟಾಚಾರವನ್ನು ರದ್ದು ಮಾಡುವುದೇ ಅವನ ಗುರಿ. ತನ್ನ ಜೀವನಕ್ಕೆ
ಅಪಾಯ ಬಂದರೂ ಈ ಕೇಡಿಗಳನ್ನು ಹಿಡಿಯಲು ಹಿಂಜರಿಯದೆ ಸೇವೆ ಮಾಡುತ್ತಾನೆ. ಸಾಂಗ್ಲಿಯಾನ ಶಂಕರ್ನಾಗ್ ಅವರ ಅತ್ಯುತ್ತಮ ಚಲನಚಿತ್ರಗಳಲ್ಲಿ ಒಂದು.
ಉಲ್ಲೇಖಗಳು
[ಬದಲಾಯಿಸಿ]- ↑ "ಸಾಂಗ್ಲಿಯಾನ". Retrieved 3 ಫೆಬ್ರುವರಿ 2017.
- ↑ "ಶಂಕರ್ನಾಗ್". Retrieved 3 ಫೆಬ್ರುವರಿ 2017.
- ↑ "ಮಿಜೋರಾಮ್". Retrieved 3 ಫೆಬ್ರುವರಿ 2017.