ರಾಜಶ್ರೀ ವಾರಿಯರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಜಶ್ರೀ ವಾರಿಯರ್
Born
ರಾಜಶ್ರೀ ವಾರಿಯರ್

(1974-01-31) ೩೧ ಜನವರಿ ೧೯೭೪ (ವಯಸ್ಸು ೫೦)
Occupationಭರತನಾಟ್ಯ ನರ್ತಕಿ
Years active೧೯೯೦-
Spouseಅನಿಲ್.ಎಸ್.ನಾಯರ್(೨೦೧೬ – ಪ್ರಸ್ತುತ)
Childrenಲಾವಣ್ಯ
Awardsದೇವದಾಸಿ ರಾಷ್ಟ್ರೀಯ ಪ್ರಶಸ್ತಿ ೨೦೧೪, ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ೨೦೧೩
Websitewww.rajashreewarrier.com

ರಾಜಶ್ರೀ ವಾರಿಯರ್ ರವರು ಭರತನಾಟ್ಯ ನರ್ತಕಿ, ಶಿಕ್ಷಣತಜ್ಞೆ ಮತ್ತು ಮಾಧ್ಯಮ ವ್ಯಕ್ತಿ.ಅಲ್ಲದೇ ಅವರು ಮಲಯಾಳಂ ನ ಬರಹಗಾರ್ತಿ ಮತ್ತು ಗಾಯಕಿ.ಸಂಗೀತದಲ್ಲಿ ಅವರ ಸಂಶೋಧನೆಗಾಗಿ ಪಿಎಚ್.ಡಿ ಪದವಿಯನ್ನು ಪಡೆದುಕೊಂಡಿದ್ದಾರೆ.ರಾಜಶ್ರೀಯವರು 'ಉತ್ತರಿಕಾ', ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ನ ಸ್ಥಾಪಕ ನಿರ್ದೇಶಕರಾಗಿದ್ದಾರೆ[೧] ಹಾಗೂ ಏಪ್ರಿಲ್ ೨೦೧೬ ರಿಂದ ಕೇರಳ ಸಂಗೀತ ನಾಟಕ ಅಕಾಡೆಮಿಯ ಕಾರ್ಯನಿರ್ವಾಹಕ ಸದಸ್ಯರಾಗಿದ್ದಾರೆ.

ಆರಂಭಿಕ ಜೀವನ ಮತ್ತು ಶಿಕ್ಷಣ[ಬದಲಾಯಿಸಿ]

ರಾಜಶ್ರೀ ವಾರಿಯರ್ ರವರು ಕೇರಳದ ತಿರುವನಂತಪುರಮ್ ನಲ್ಲಿ ಹುಟ್ಟಿ ಬೆಳೆದವರು.[೨]ಗುರು ವಿ ಮೈಥಿಲಿ ಮತ್ತು ಗುರು ಜಯಂತಿ ಸುಬ್ರಮಯ್ಯಮ್ ರವರ ಆಶ್ರಯದಲ್ಲಿ ಅವರು ಭರತನಾಟ್ಯವನ್ನು ಕಲಿತರು.ಮುಲ್ಲಾಮುಡು ಹರಿಹರ ಅಯ್ಯರ್, ಪೆರುಂಬವೂರ್ ಜಿ. ರವೀಂದ್ರನಾಥ್, ಪರಸ್ಸಲ ಪೊನ್ನಮ್ಮಲ್ ಮತ್ತು ಬಿ.ಶಶಿಕುಮಾರ್ ರವರ ನೇತೃತ್ವದಲ್ಲಿ ಕರ್ನಾಟಕ ಸಂಗೀತದಲ್ಲಿ ತರಬೇತಿಯನ್ನು ಪಡೆದರು.ಹಾಗೆಯೇ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಕೂಡ ಪಡೆದುಕೊಂಡಿದ್ದಾರೆ.

ವೈಯಕ್ತಿಕ ಜೀವನ[ಬದಲಾಯಿಸಿ]

ರಾಜಶ್ರೀ ಯವರು ಅನಿಲ್.ಎಸ್.ನಾಯರ್ ರವರನ್ನು ವಿವಾಹವಾಗಿದ್ದಾರೆ.ಅವರಿಬ್ಬರಿಗೆ ಲಾವಣ್ಯ ಎಂಬ ಮಗಳಿದ್ದಾಳೆ.[೩]

ಶಂಗುಮುಖಂ ಬೀಚ್ ನಲ್ಲಿ ರಾಜಶ್ರೀ

ವೃತ್ತಿ ಜೀವನ[ಬದಲಾಯಿಸಿ]

ಭರತನಾಟ್ಯಂ[ಬದಲಾಯಿಸಿ]

ರಾಜಶ್ರೀ ವಾರಿಯರ್ ರವರು ಭಾರತ ಮತ್ತು ವಿದೇಶಗಳಲ್ಲಿ ಅನೇಕ ಭರತನಾಟ್ಯ ಪ್ರದರ್ಶನಗಳನ್ನು ನೀಡಿದ್ದಾರೆ.ರಾಜಶ್ರೀಯವರ ನೃತ್ಯ ನಿರ್ಮಾಣಗಳು ಅವರ ಸೃಜನಶೀಲ ಸಾಮರ್ಥ್ಯಗಳಿಗೆ ಸಾಕ್ಷಿಯಾಗಿವೆ.[೪]

೧೮ ಮೇ ೨೦೧೪ ರಂದು ಪಟ್ಟಾಂಬಿ-ಪಾಲಕ್ಕಾಡ್ ನಲ್ಲಿ ನಡೆದ ಭರತನಾಟ್ಯ ಕಾರ್ಯಗಾರದಲ್ಲಿ ರಾಜಶ್ರೀ

ಮಾಧ್ಯಮ[ಬದಲಾಯಿಸಿ]

ರಾಜಶ್ರೀಯವರು ಏಷಿಯಾನೆಟ್ ನಲ್ಲಿ ಪ್ರಸಾರವಾಗುತ್ತಿದ್ದ 'ಸುಪ್ರಭಾತಮ್' ಎಂಬ ಜನಪ್ರಿಯ ಉಪಹಾರ ಕಾರ್ಯಕ್ರಮದಲ್ಲಿ, ನಾಲ್ಕು ವರ್ಷಗಳ ಕಾಲ ನಿರಂತರವಾಗಿ ನಿರೂಪಣೆ ಮಾಡಿದ್ದಾರೆ.[೫]ಅಲ್ಲದೇ ಡಿಡಿ ಕೇರಳ, ಅಮೃತ ಟಿವಿ ಮತ್ತು ಏಷಿಯಾನೆಟ್ ನಲ್ಲಿ ಪ್ರಸಾರವಾಗುತ್ತಿದ್ದ ಹಲವಾರು ಕಾರ್ಯಕ್ರಮಗಳನ್ನು ನಿರ್ಮಾಣ ಮಾಡಿದ್ದಾರೆ.[೬]

ಪ್ರಕಟಣೆಗಳು[ಬದಲಾಯಿಸಿ]

ರಾಜಶ್ರೀಯವರು ಎರಡು ಪುಸ್ತಕಗಳನ್ನು ಬರೆದಿದ್ದಾರೆ.೨೦೧೧ ರಲ್ಲಿ ಚಿಂತಾ ಪಬ್ಲಿಕೇಶನ್ಸ್ ಪ್ರಕಟಿಸಿದ 'ನೃತಕಲಾ' ಹಾಗೂ ೨೦೧೩ ರಲ್ಲಿ ಡಿಸಿ ಬುಕ್ಸ್ ಪ್ರಕಟಿಸಿದ 'ನರ್ತಕಿ'.

ನಿರ್ಮಾಣಗಳು[ಬದಲಾಯಿಸಿ]

  • ಲಂಕಾಲಕ್ಷ್ಮೀ- ಸಿ.ಎನ್ ಶ್ರೀಕಾಂತನ್ ನಾಯರ್ ರವರ ಮಲಯಾಳಂ ನಾಟಕದ ರೂಪಾಂತರ.
  • ನೀಲಾ ವರ್ಣಂ- ಭರತನಾಟ್ಯದಲ್ಲಿ ಭಗವಾನ್ ಕೃಷ್ಣನ ಎಂಟು ಸಂಯೋಜನೆಗಳು. ಗಾಯನ, ನೃತ್ಯ ಸಂಯೋಜನೆ ಮತ್ತು ಪ್ರಸ್ತುತಿ.
  • ಅಷ್ಟೈಸ್ವರ್ಯಂ- ಆಳವಾದ ಧ್ಯಾನದ ಮೂಲಕ ಸಾಧಿಸಬಹುದಾದ ಎಂಟು 'ಗುಣಗಳನ್ನು' ವಿಸ್ತಾರವಾಗಿ ವಿವರಿಸುತ್ತದೆ ಮತ್ತು ಶ್ರೀಕೃಷ್ಣನ ಜೀವನಕ್ಕೆ ಸಂಬಂಧಿಸಿದೆ.
  • ಅಷ್ಟಪತ್ನಿ- ಭಗವತಂ ದಾಸಮಾ ಸ್ಕಂದಂ ಉತ್ತರಾರ್ಧಂ ನಲ್ಲಿ ಚಿತ್ರಿಸಿರುವಂತೆ ಅಷ್ಟವಲ್ಲಭ ಎಂಬ ಪರಿಕಲ್ಪನೆಯನ್ನು ಆಧರಿಸಿದೆ.
  • ಜೀವನ ಪರಿವರ್ತನೆ- ಬೆಂಕಿ, ನೀರು ಹಾಗೂ ಭೂಮಿ ಆಧಾರಿತ.
  • ಸ್ವಾತಿ ಸ್ಮೃತಿ- ಸ್ವಾತಿ ತಿರುನಾಳ್ ರಾಮ ವರ್ಮ ರವರ ಸಂಯೋಜನೆಗಳ ಮಾರ್ಗ.
  • ರಾಸ್- ನಾರಾಯಣೀಯಂ ನ ಆಯ್ದ ಭಾಗ.
  • ಮಾಧವಂ- ಮಾಧವನ್ ಅಥವಾ ಭಗವಾನ್ ವಿಷ್ಣುವಿನ ಬಗ್ಗೆ. ಇದು ವಿಕಾಸದ ವಿಶಿಷ್ಟ ವಿಧಾನಗಳಲ್ಲಿ ಜೀವನದ ಸಂಭ್ರಮವನ್ನು ವಿವರಿಸಲು ಪ್ರಯತ್ನಿಸುತ್ತದೆ.
  • ಷೇಡ್ಸ್ ಆಫ್ ಲವ್: ಮಹಿಳೆಯ (ನಾಯಿಕಾ ಅಥವಾ ನಾಯಕಿ) ಪ್ರಣಯ ಪ್ರವಾಸದ ವಿಷಯಾಧಾರಿತ.
  • ಡಾ.ಎಂ. ಬಾಲಮುರಳಿ ಕೃಷ್ಣ ಅವರ ಸಂಗೀತ ಸಂಯೋಜನೆಗಳನ್ನು ಆಧರಿಸಿ ಭರತನಾಟ್ಯ ನಿರ್ಮಾಣ.
  • ಇರಯಿಮ್ಮನ್ ಥಂಪಿ ಅವರ ಅಪರೂಪದ ಪದಗಳನ್ನು ಆಧರಿಸಿ ಭರತನಾಟ್ಯ ನಿರ್ಮಾಣ.
  • ರಾವಣಕೃತ ಶಿವತಾಂಡವ ಸ್ತೋತ್ರವನ್ನು ಆಧರಿಸಿದ ಭರತನಾಟ್ಯ ನಿರ್ಮಾಣ.
  • ಮೀರಾ: ಮೀರಾಬಾಯಿ ಕಥೆಯ ನಾಟಕೀಯ ನಿರ್ಮಾಣ.

[೭]

ಪ್ರಶಸ್ತಿಗಳು ಮತ್ತು ಗೌರವಗಳು[ಬದಲಾಯಿಸಿ]

  • ೨೦೦೭ ರಲ್ಲಿ ಭರತನಾಟ್ಯಕ್ಕೆ ನವರಸಂ ಸಂಗೀತಾ ಸಭಾ ಪ್ರಶಸ್ತಿ.[೮]
  • ೨೦೦೯ ರಲ್ಲಿ ಚಿಲಂಕಾ ಡ್ಯಾನ್ಸ್ ಅಕಾಡೆಮಿಯವರಿಂದ 'ನಟನಾ ಶಿರೋಮಣಿ' ಪ್ರಶಸ್ತಿ.
  • ೨೦೧೦ ರಲ್ಲಿ ಸತ್ಯ ಸಾಯಿ ಸೇವಾ ಸಂಸ್ಥೆಯಿಂದ 'ಸಾಯಿ ನಾಟ್ಯ ರತ್ನ'.
  • ೨೦೧೨ ರಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯದಲ್ಲಿನ ಕೊಡುಗೆಗಳಿಗಾಗಿ, ಕೇರಳ ಸರ್ಕಾರದ ಸಾಮಾಜಿಕ ಕಲ್ಯಾಣ ಇಲಾಖೆಯ ವತಿಯಿಂದ ಮಹಿಳಾ ತಿಲಕ್ ಶೀರ್ಷಿಕೆ ಮತ್ತು ಪ್ರಶಸ್ತಿ.
  • ವಯಲರ್ ಸಂಸ್ಕಾರಿಕ ಸಮಿತಿಯ ವತಿಯಿಂದ ಕಲಾರತ್ನ ಪುರಸ್ಕಾರ.
  • ೨೦೧೩ ರಲ್ಲಿ ಭರತನಾಟ್ಯಕ್ಕೆ ಕಲಾಶ್ರೀ ಶೀರ್ಷಿಕೆ ಮತ್ತು ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ.
  • ೨೦೧೩ ರಲ್ಲಿ ಭರತನಾಟ್ಯ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಳಿಗಾಗಿ ಕೇರಳ ಕಲಾಮಂಡಲಂ ರವರ ವಿಎಸ್ ಶರ್ಮಾ ಎಂಡೋವ್ಮೆಂಟ್ ಪ್ರಶಸ್ತಿ.[೯]
  • ೨೦೧೪ ರಲ್ಲಿ ಭರತನಾಟ್ಯಕ್ಕೆ ನೀಡಿದ ಅತ್ಯುತ್ತಮ ಸೃಜನಶೀಲ ಕೊಡುಗೆಗಳಿಗಾಗಿ ದೇವ ದಾಸಿ ನೃತ್ಯ ಮಂದಿರ, ಭುವನೇಶ್ವರ್ ಪ್ರಸ್ತುತಪಡಿಸಿದ ದೇವ ದಾಸಿ ರಾಷ್ಟ್ರೀಯ ಪ್ರಶಸ್ತಿ.
  • ಅವರನ್ನು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ೨೦೧೪ ರ 'ಪುಸ್ತಕಗಳು ಮತ್ತು ಲೇಖನಗಳು' ಇದರ ತೀರ್ಪುಗಾರರಾಗಿ ಆಹ್ವಾನಿಸಲಾಗಿತ್ತು.

ಚಿತ್ರ ಗ್ಯಾಲರಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2020-03-21. Retrieved 2020-03-22.
  2. "ಆರ್ಕೈವ್ ನಕಲು". Archived from the original on 2020-03-21. Retrieved 2020-03-22.
  3. https://www.thehindu.com/society/multifaceted-artiste-rajashree-warrier-talks-about-her-creative-space/article19888753.ece
  4. https://www.thehindu.com/entertainment/reviews/bharatanatyam-by-rajashree-warrier/article25840914.ece
  5. https://www.natyasutraonline.com/bharatanatyam/rajashreewarrier
  6. "ಆರ್ಕೈವ್ ನಕಲು". Archived from the original on 2019-01-08. Retrieved 2020-03-22.
  7. https://www.thehindu.com/entertainment/dance/Rajashree-Warrier-on-her-new-Bharatanatyam-production/article17393467.ece
  8. https://prabook.com/web/rajashree.warrier/1932423
  9. https://edwardbetts.com/find_link/Kerala_Kalamandalam