ನಿರ್ಮಾಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗಗನಚುಂಬಿಗಳಂತಹ ಬೃಹತ್ ನಿರ್ಮಾಣ ಯೋಜನೆಗಳಲ್ಲಿ ಕ್ರೇನ್ ಗಳು ಅವಶ್ಯಕವಾಗುತ್ತವೆ.

ವಾಸ್ತುಶಿಲ್ಪ ಮತ್ತು ಲೋಕೋಪಯೋಗಿ ಶಿಲ್ಪಶಾಸ್ತ್ರದ ಕ್ಷೇತ್ರಗಳಲ್ಲಿ ಕಟ್ಟಡ ದ ಇಲ್ಲವೆ ಮೂಲಭೂತ ಸೌಕರ್ಯಗಳನ್ನು ಒಟ್ಟುಗೂಡಿಸುವಿಕೆಯನ್ನು ಒಳಗೊಂಡಿರುವಂತಹ ಒಂದು ಕಾರ್ಯವಿಧಾನವೇ ನಿರ್ಮಾಣ . ಏಕೈಕ ಕಾರ್ಯಚಟುವಟಿಕೆಯಿಂದ ಬಹುದೂರವಾದ ದೊಡ್ಡ ಪ್ರಮಾಣದ ನಿರ್ಮಾಣವು ಬಹುಕೆಲಸಗಳನ್ನು ಒಳಗೊಂಡ ಒಂದು ಅದ್ಭುತ ಕಾರ್ಯವಾಗಿದೆ. ಸಾಮಾನ್ಯವಾಗಿ ಈ ಕೆಲಸವು ಯೋಜನಾ ಕಾರ್ಯನಿರ್ವಾಹಕರಿಂದ ನಿಭಾಯಿಸಲ್ಪಡುತ್ತದೆ ಹಾಗೂ ನಿರ್ಮಾಣ ವ್ಯವಸ್ಥಾಪಕರು , ನಕ್ಷೆಯ ವಾಸ್ತುಶಿಲ್ಪಿ, ನಿರ್ಮಾಣದ ಯಂತ್ರಶಿಲ್ಪಿ ಅಥವಾ ಯೋಜನಾ ವಾಸ್ತುಶಿಲ್ಪಿಗಳಿಂದ ಪರಿವೀಕ್ಷಿಸಲ್ಪಡುತ್ತದೆ.

ಒಂದು ಯೋಜನೆಯ ಯಶಸ್ವಿ ನಿರ್ವಹಣೆಗೆ, ಪರಿಣಾಮಕಾರಿ ಕಾರ್ಯನಿರ್ವಹಣೆ ಅತ್ಯಾವಶ್ಯಕ. ಬೇಕಾದಂತಹ ಮೂಲಭೂತ ಸೌಕರ್ಯಗಳ ನಿರ್ವಹಣೆ ಹಾಗೂ ಮಾದರಿಯನ್ನು ರಚಿಸುವವರು ಕೆಲಸದ ಪರಿಸರದ ಮೇಲಾಗುವ ಪರಿಣಾಮ, ಸಫಲವಾಗಿ ನಿಶ್ಚಿತ ಸಮಯದಲ್ಲಿ ಜರುಗುವಂತೆ ಯೋಚಿಸುವುದು, ಆಯವ್ಯಯ ಪಟ್ಟಿ ತಯಾರಿಕೆ, ನಿವೇಶನದಲ್ಲಿನ ಸುರಕ್ಷತೆ , ವಸ್ತುಗಳ ಲಭ್ಯತೆ, ಸಾಮಾನುಗಳು ಹಾಗೂ ಕೆಲಗಾರರ ರವಾನಿಸುವಿಕೆ, ತಡವಾದ ನಿರ್ಮಾಣದಿಂದ ಸಾರ್ವಜನಿಕರಿಗೆ ಉಂಟಾಗುವ ಅನಾನುಕೂಲತೆ, ಕರಡು ಗುತ್ತಿಗೆ ದಾಖಲೆಗಳ ತಯಾರಿಕೆ ಮುತಾದುವುಗಳನ್ನು ಗಮನದಲ್ಲಿರಿಸಬೇಕು.

ನಿರ್ಮಾಣ ಯೋಜನೆಗಳ ವಿಧಗಳು[ಬದಲಾಯಿಸಿ]

ಸಾಮಾನ್ಯವಾಗಿ ನಿರ್ಮಾಣ ಕಾರ್ಯವನ್ನು ಮೂರು ವಿಧವಾಗಿ ವಿಂಗಡಿಸಬಹುದು:

  1. ಕಟ್ಟಡ ನಿರ್ಮಾಣ
  2. ಬೃಹತ್/ಕಾಮಗಾರಿ ನಿರ್ಮಾಣ
  3. ಕೈಗಾರಿಕಾ ನಿರ್ಮಾಣ

ಪ್ರತಿ ನಿರ್ಮಾಣ ಯೋಜನೆಗೂ ತನ್ನದೇ ಆದ ವೈಶಿಷ್ಟ್ಯವುಳ್ಳ ತಂಡದಿಂದ ಯೋಜಿಸಲು, ನಕ್ಷೆ ತಯಾರಿಸಲು, ನಿರ್ಮಿಸಲು ಮತ್ತು ಯೋಜನೆಯನ್ನು ನಿರ್ವಹಿಸಿ ಕಾರ್ಯಗತಗೊಳಿಸುವ ಅವಶ್ಯಕತೆಯಿರುತ್ತದೆ.

ಕಟ್ಟಡ ನಿರ್ಮಾಣ[ಬದಲಾಯಿಸಿ]

Building construction for several apartment blocks. The blue material is insulation cladding, which will be covered later.
A large unfinished building

ಕಟ್ಟಡದ ನಿರ್ಮಾಣವು ನಿವೇಶನದ ಸ್ವತ್ತಿನ ಮೇಲೆ ನಿರ್ಮಿಸುವ ಒಂದು ಕಾರ್ಯವಿಧಾನವಾಗಿದೆ. ಕಟ್ಟಡ ನಿರ್ಮಾಣ ಯೋಜನೆಗಳಲ್ಲಿ ಹೆಚ್ಚಾಗಿ ಬಹುಭಾಗ ಒಂದು ಕೊಠಡಿಯ ಸೇರ್ಪಡೆ ಇಲ್ಲವೆ ಒಂದು ಸ್ನಾನ ಗೃಹಕ್ಕೆ ಹೊಸರೂಪ ಕೊಡುವಂತಹ ಸಣ್ಣಪುಟ್ಟ ಜೀರ್ಣೋದ್ಧಾರಗಳಿರುತ್ತವೆ. ಅನೇಕ ಬಾರಿ, ಸಂಪೂರ್ಣ ಯೋಜನೆಗೆ ಆ ಸೊತ್ತಿನ ಮಾಲಿಕರು ಕಾರ್ಮಿಕ, ಸಂಬಳ ಕೊಡುವವರು ಹಾಗೂ ನಕ್ಷೆಯ ತಂಡವಾಗಿ ಕೆಲಸ ನಿರ್ವಹಿಸುತ್ತಾರೆ. ಆದಾಗ್ಯೂ, ಎಲ್ಲಾ ಕಟ್ಟಡ ನಿರ್ಮಾಣದ ಯೋಜನೆಗಳು ನಕ್ಷೆ, ಆರ್ಥಿಕ, ಹಾಗೂ ಕಾನೂನಿನ ವಿಷಯಗಳಂತಹ ಸಾಮಾನ್ಯವಾದ ಕೆಲವು ಮೂಲ ವಿಷಯಗಳನ್ನು ಒಳಗೊಂಡಿರುತ್ತವೆ. ನಿರ್ಮಾಣದ ಕುಸಿಯುವಿಕೆ, ಮಿತಿಮೀರಿದ ವೆಚ್ಚ ಮತ್ತು/ಅಥವಾ ಕಾನೂನಿನ ತೊಡಕಿನ ಕಾರಣದಂತಹ ಬದಲಾಗುವ ಗಾತ್ರಗಳ ಅನೇಕ ಯೋಜನೆಗಳು ಅನಪೇಕ್ಷಿತ ಫಲಿತಾಂಶಗಳನ್ನು ತಲುಪುತ್ತವೆ, ಈ ಕ್ಷೇತ್ರದಲ್ಲಿ ಅನುಭವವುಳ್ಳವರು ವಿವರವಾದ ಯೋಜನೆಗಳನ್ನು ತಯಾರಿಸುತ್ತಾರೆ ಹಾಗೂ ಯೋಜನಾವಧಿಯಲ್ಲಿ ಒಂದು ಸಕಾರಾತ್ಮಕ ಪರಿಣಾಮವನ್ನು ದೃಢಪಡಿಸಿಕೊಳ್ಳಲು ಎಚ್ಚರಿಕೆಯ ಮೇಲ್ವಿಚಾರಣೆಯನ್ನು ಸಂರಕ್ಷಿಸುತ್ತಾರೆ.

ದೃಢ ಹರಾಜಿನ ಕ್ರಯ, ಸಂಧಾನ ಮೂಲಕದ ಬೆಲೆ, ಪಾರಂಪರಿಕ, ಕಾರ್ಯನಿರ್ವಹಣೆಯ ಕರಾರು ಮಾಡಿಕೊಳ್ಳುವುದು, ಕಟ್ಟಡದ ಅಪಾಯದ ಕಾರ್ಯನಿರ್ವಹಣೆ, ಮಾದರಿ ರಚಿಸಿ ಕಟ್ಟಡದ ನಿರ್ಮಾಣ ಹಾಗೂ ನಕ್ಷೆ-ನಿರ್ಮಾಣವನ್ನು ತೂಗಿಸಿಕೊಂಡು ಹೋಗುವಂತಹವನ್ನು ಒಳಗೊಂಡಂತಹ ಅನೇಕ ಕಟ್ಟಿಕೊಡುವಂತಹ ಕ್ರಮ ವಿದಾನಗಳನ್ನು ಉಪಯೋಗಿಸಿಕೊಂಡು ಖಾಸಗಿಯಾಗಿ ಇಲ್ಲವೆ ಸಾರ್ವಜನಿಕವಾಗಿ ಕಟ್ಟಡ ನಿರ್ಮಾಣವನ್ನು ಪಡೆಯಲಾಗುತ್ತದೆ.

Trump International Hotel and Tower (Chicago)
May 23, 2006
September 14, 2007 (3 months before completion)

ವಾಸಕ್ಕೆ ಸಂಬಂಧಿಸಿದ ನಿರ್ಮಾಣ ಪದ್ಧತಿಗಳು, ತಂತ್ರಜ್ಞಾನಗಳು ಹಾಗೂ ಸಂಪನ್ಮೂಲಗಳು ಸ್ಥಳೀಯ ನಿರ್ಮಾಣ ಪ್ರಾಧಿಕಾರದ ಕಾನೂನುಗಳಿಗೆ ಮತ್ತು ಆಚರಣೆಯ ನಿಯಮಗಳನ್ನು ಅನುಸರಿಸಬೇಕು. ಆ ಪ್ರದೇಶದಲ್ಲಿ ಕೂಡಲೇ ಸಿದ್ಧವಾಗಿ ದೊರಕುವಂತಹ ವಸ್ತುಗಳು ಸಾಮಾನ್ಯವಾಗಿ ನಿರ್ಮಾಣಕ್ಕೆಂದು ಉಪಯೋಗಿಸುವ ಪದಾರ್ಥಗಳನ್ನು ನಿರ್ಧರಿಸುತ್ತವೆ (ಉದಾಹರಣೆಗೆ ಇಟ್ಟಿಗೆಗೆ ವಿರುದ್ಧವಾಗಿ ಕಲ್ಲುಗಳು, ಪ್ರತಿಯಾಗಿ ಮರಮುಟ್ಟುಗಳು). ನಿವೇಶನದ ಪರಿಸ್ಥಿಗಳ ಆದಾರದ ಮೇಲೆ ಸ್ಥಳೀಯ ಕಟ್ಟುಪಾಡುಗಳು, ದರದ ಮಿತವ್ಯಯ (ಒಂದು ನಿರ್ದಿಷ್ಟ ಗುಣಗಳ ಮನೆಗಳ ನಿರ್ಮಾಣದಲ್ಲಿ ಯಾವಾಗಲೂ ಹೆಚ್ಚಿನ ವೆಚ್ಚ ತಗಲುತ್ತದೆ) ಹಾಗೂ ನುರಿತ ಕುಶಲ ಕೆಲಸಗಾರರ ಲಭ್ಯತೆಯ ಮೇಲೆ ಮನೆಗಳ ನಿರ್ಮಾಣದ ವೆಚ್ಚವು ಪ್ರತಿ ಚದುರ ಮೀಟರ್ (ಅಥವಾ ಪ್ರತಿ ಚದುರ ಅಡಿ) ಆಧರಿಸಿದಂತೆ ಅತ್ಯಂತ ಹೆಚ್ಚಿನದಾಗಿ ಬದಲಾಗಬಹುದು. ವಾಸಕ್ಕೆ ಸಂಬಂಧಿಸಿದ ನಿರ್ಮಾಣಗಳಲ್ಲಿ (ಅಲ್ಲದೆ ಇತರ ಮಾದರಿಗಳ ನಿರ್ಮಾಣದಲ್ಲೂ ಸಹ) ಹೆಚ್ಚಿನ ತ್ಯಾಜ್ಯ ವಸ್ತುಗಳ ಉತ್ಪಾದನೆಯಾಗ ಬಹುದಾದ್ದರಿಂದ, ಇಲ್ಲಿ ಪುನಃ ಎಚ್ಚರಿಕೆಯಿಂದ ಯೋಜನೆಯನ್ನು ರೂಪಿಸುವುದು ಅವಶ್ಯವಾಗಿದೆ.

ಸಂಯುಕ್ತ ಸಂಸ್ಥಾನದಲ್ಲಿ ವಾಸ ಯೋಗ್ಯವಾದ ನಿರ್ಮಾಣದ ಅತ್ಯಂತ ಜನಪ್ರಿಯ ವಿಧಾನವೆಂದರೆ ಮರದ ಚೌಕಟ್ಟನ್ನು ಉಪಯೋಗಿಸುವ ರಚನೆ. ಇತ್ತಿಚಿನ ವರ್ಷಗಳಲ್ಲಿ ದಕ್ಷತೆಯ ನಿಯಮಗಳು ಜಾರಿಗೆ ಬಂದಿರುವುದರಿಂದ, ನವೀನ ನಿರ್ಮಾಣದ ತಂತ್ರಜ್ಞಾನಗಳು ಹಾಗೂ ಪದ್ಧತಿಗಳು ಹೊರ ಬಂದಿವೆ. ವಿಶ್ವವಿದ್ಯಾಲಯದ ನಿರ್ಮಾಣ ನಿರ್ವಹಣೆಯ ಇಲಾಖೆಗಳು ಕಾರ್ಯಸಮರ್ಥತೆ, ಸಾಧನೆ ಮತ್ತು ನಿರ್ಮಾಣದಲ್ಲಿ ತ್ಯಾಜ್ಯಗಳನ್ನು ಕಡಿಮೆಗೊಳಿಸಿ ಸುಧಾರಿಸಲು ನಿರ್ಮಾಣದ ಯೋಜನೆಯ ಅತ್ಯಂತ ನವೀನ ವ್ಯವಸ್ಥೆಗಳನ್ನು ಹೊರತರುವುದರಲ್ಲಿ ಮುಂಚೂಣಿಯಲ್ಲಿವೆ.

Construction of the Havelock City Project in Sri Lanka.
Construction of Phase-1 of the Havelock City Project in Sri Lanka.

ಕೈಗಾರಿಕಾ ನಿರ್ಮಾಣ[ಬದಲಾಯಿಸಿ]

ಸಂಪೂರ್ಣ ನಿರ್ಮಾಣದ ಉದ್ಯೋಗದ ಸಂಬಂಧಿತವಾದ ಒಂದು ಸಣ್ಣ ಭಾಗವಾದರೂ ಸಹ, ಕೈಗಾರಿಕಾ ನಿರ್ಮಾಣವು ಒಂದು ಅತಿ ಮುಖ್ಯ ಅಂಗವಾಗಿದೆ. ದೊಡ್ಡದಾದ, ಲಾಭಕ್ಕಾಗಿ ಮಾಡುವ, ಕೈಗಾರಿಕಾ ನಿಗಮಗಳು ಸಮಾನ್ಯವಾಗಿ ಈ ಯೋಜನೆಗಳ ಮಾಲಿಕರಾಗಿರುತ್ತಾರೆ. ಔಷಧಿಗಳು, ಪೆಟ್ರೋಲಿಯಮ್, ರಾಸಾಯನಿಕ, ವಿದ್ಯುದುತ್ಪಾದನೆ, ಉತ್ಪಾದನಾ ಕ್ಷೇತ್ರ ಮುಂತಾದ ಕೈಗಾರಿಕೆಗಳಲ್ಲಿ ಈ ನಿಗಮಗಳನ್ನು ಕಾಣಬಹುದು. ಈ ಕೈಗಾರಿಕಾ ಕಾರ್ಯವಿಧಾನಗಳಲ್ಲಿ ಯೋಜಿಸಲು, ನಕ್ಷೆ ರಚಿಸಲು ಹಾಗೂ ನಿರ್ಮಾಣ ಮಾಡಲು ಅತ್ಯಂತ ತಜ್ಞರಾದ ನಿಪುಣರ ಅವಶ್ಯಕತೆಯಿರುತ್ತದೆ. ಕಟ್ಟಡಗಳು ಮತ್ತು ಬೃಹತ್/ಹೆದ್ದಾರಿ ನಿರ್ಮಾಣಗಳಲ್ಲಿ, ಯಶಸ್ವಿ ಯೋಜನೆಯ ಭರವಸೆ ಕೊಡಲು ಈ ರೀತಿಯ ನಿರ್ಮಾಣಕ್ಕೆ ವ್ಯಕ್ತಿಗಳ ಒಂದು ತಂಡವೇ ಬೇಕಾಗಿರುತ್ತದೆ.

ನಿರ್ಮಾಣದ ಕಾರ್ಯವಿಧಾನಗಳು[ಬದಲಾಯಿಸಿ]

ಆಯೋಜಿಸುವ ತಂಡ[ಬದಲಾಯಿಸಿ]

ನಿರ್ಮಾಣಗೊಳ್ಳುತ್ತಿರುವ ಶಾಸ್ತ ಅಣೆಕಟ್ಟು

ಆಧುನಿಕ ಕೈಗಾರಕೀಕರಣದ ಪ್ರಪಂಚದಲ್ಲಿ, ನಿರ್ಮಾಣವು ಸಾಮಾನ್ಯವಾಗಿ ಕಾಗದದ ಅಥವಾ ಗಣಕಯಂತ್ರ ಆಧರಿಸಿದ ಆಯೋಜನೆಗಳನ್ನು ವಾಸ್ತವಿಕತೆಗೆ ಅಳವಡಿಸಿಕೊಳ್ಳುವುದನ್ನು ಒಳಗೊಂಡಿರುತ್ತದೆ. ಒಂದು ಸಾಂಪ್ರದಾಯಿಕ ಆಯೋಜನಾ ತಂಡವು ಪ್ರಾಕೃತಿಕ ಕಾರ್ಯಗಳನ್ನು ಯೋಜಿಸಲು ಹಾಗೂ ಇತರೆ ಭಾಗಗಳ ಜೊತೆಗೆ ಆ ಕೆಲಸಗಳನ್ನು ಸಮಗ್ರವನ್ನಾಗಿ ಮಾಡಲು ಒಟ್ಟುಗೂಡಬಹುದು. ಗ್ರಾಹಕ ವಾಸ್ತುಶಿಲ್ಪಿಗಳು, ಒಳಾಂಗಣ ವಿನ್ಯಾಸಗಾರರು, ನಿವೇಶನದ ಅಳತೆಗಾರರು, ಲೋಕೋಪಯೋಗಿ ವಾಸ್ತುಶಿಲ್ಪಿಗಳು, ವೆಚ್ಚತಿಳಿಸುವ ವಾಸ್ತುಶಿಲ್ಪಿಗಳು (ಅಥವಾ ಪರಿಮಾಣದ ಮೋಜಣಿದಾರರು), ಯಾಂತ್ರಿಕ ವಾಸ್ತುಶಿಲ್ಪಿಗಳು, ವಿದ್ಯುತ್ ವಾಸ್ತುಶಿಲ್ಪಿಗಳು, ರಚನೆಯ ಯಂತ್ರಶಿಲ್ಪಿಗಳು ಹಾಗೂ ಅಗ್ನಿಶಾಮಕ ತಂಡದ ಯಂತ್ರಶಿಲ್ಪಿಗಳನ್ನು ಒಳಗೊಂಡ ಒಂದು ಆಯೋಜನಾ ತಂಡದಿಂದ ಸಾಮಾನ್ಯವಾಗಿ ತಯಾರಿಸಲ್ಪಟ್ಟ ನಕ್ಷೆಗಳು ಹಾಗೂ ನಿರ್ದಿಷ್ಟಮಾನಗಳನ್ನು ಮಾದರಿಯು ವಾಡಿಕೆಯಂತೆ ಒಳಗೊಂಡಿರುತ್ತದೆ. ಆಯೋಜನಾ ತಂಡವನ್ನು ಅತ್ಯಂತ ಸಾಧಾರಣವಾಗಿ ಸೊತ್ತಿನ ಮಾಲಿಕರಿಂದ (ಅಂದರೆ ಗುತ್ತಿಗೆಯ ಮೇರೆಗೆ) ಕೆಲಸಕ್ಕೆ ತೆಗೆದುಕೊಳ್ಳಲಾಗುತ್ತದೆ. ಈ ವ್ಯವಸ್ಥೆಯಡಿ, ಒಮ್ಮೆ ನಕ್ಷೆಯು ಆಯೋಜನಾ ತಂಡದಿಂದ ಮುಗಿಸಲ್ಪಟ್ಟಾಗ, ಅನೇಕ ನಿರ್ಮಾಣದ ಕಂಪನಿಗಳು ಅಥವಾ ನಿರ್ಮಾಣದ ನಿರ್ವಹಣೆಯ ಕಂಪನಿಗಳನ್ನು ನೇರವಾಗಿ ನಕ್ಷೆಯ ಆಧಾರದ ಮೇಲಾಗಲೀ ಇಲ್ಲವೆ ರೇಖಾಕೃತಿಗಳ ಆಧಾರದಂತಾಗಲಿ ಹಾಗೂ ಒಟ್ಟು ಅಗತ್ಯಗಳ ಪ್ರಮಾಣದ ದರಪಟ್ಟಿಯನ್ನು ಪರಿಮಾಣದ ಮೋಜಣಿದಾರನಿಂದ ಒದಗಿಸಲ್ಪಟ್ಟ ನಂತರ ಕೆಲಸಕ್ಕಾಗಿ ತಮ್ಮ ದರಗಳನ್ನು ಕೊಡುವಂತೆ ಕೇಳಬಹುದು. ದರಪಟ್ಟಿಗಳ ಮೌಲ್ಯಮಾಪನಗಳನ್ನು ಅನುಸರಿಸಿ, ಮಾಲಿಕರು ಸಾಂಕೇತಿಕವಾಗಿ ಜವಾಬ್ದಾರಿಯುತ ಅತ್ಯಂತ ಕಡಿಮೆ ಲಿಲಾವುದಾರರಿಗೆ ಗುತ್ತಿಗೆಯನ್ನು ಕೊಡುವರು.

ದೇಗು, ದಕ್ಷಿಣ ಕೊರಿಯಾದಲ್ಲಿನ, ನಿರ್ಮಾಣ ಹಂತದಲ್ಲಿರುವ ಗಗನಚುಂಬಿ ಕಟ್ಟಡ.

ಆಯೋಜನೆಯ ರಚನೆಯಲ್ಲಿ ಆಧುನಿಕ ಒಲವು ವಿಶೇಷವಾಗಿ ಬೃಹತ್ ನಿರ್ವಹಣಾ ಮಂಡಳಿಗಳಲ್ಲಿ ಈ ಮೊದಲು ಪ್ರತ್ಯೇಕಿಸಲ್ಪಟ್ಟ ವೈಶಿಷ್ಟ್ಯಗಳ ಒಟ್ಟುಗೂಡಿಸುವಿಕೆಯ ಕಡೆಗಿದೆ. ಈ ಹಿಂದೆ, ವಾಸ್ತುಶಿಲ್ಪಗಳು, ಒಳಾಂಗಣ ವಿನ್ಯಾಸಗಾರರು, ಯಂತ್ರಶಿಲ್ಪಗಳು, ನಿರ್ಮಾತೃಗಳು, ನಿರ್ಮಾಣ ಕಾರ್ಯನಿರ್ವಾಹಕರು ಹಾಗೂ ಸಾಮಾನ್ಯ ಗುತ್ತಿಗೆದಾರರು ಬೃಹತ್ ನಿರ್ವಹಣಾ ಮಂಡಳಿಗಳಲ್ಲೂ ಸಹ ಸಂಪೂರ್ಣ ಪ್ರತ್ಯೇಕ ಕಂಪನಿಗಳಾಗಿದ್ದವು. ಈಗ ಸಧ್ಯದಲ್ಲಿ, "ವಾಸ್ತುಶಿಲ್ಪ" ಅಥವಾ "ನಿರ್ಮಾಣ ಕಾರ್ಯನಿರ್ವಹಣೆಯ" ಎಂಬ ಹೆರುಗಳನ್ನುಳ್ಳ ಮಂಡಳಿಯು ಪ್ರತಿ ಅವಶ್ಯಕ ಕೌಶಲ್ಯವನ್ನು ಒದಗಿಸುವಂತಹ ಸಂಯೋಜಿಸಿದ ಕಂಪನಿಯನ್ನ ಪಡೆದು, ಇಲ್ಲವೆ ಕೆಲಸಗಾರರಂತೆ ಎಲ್ಲಾ ಸಂಬಂಧಪಟ್ಟ ಕ್ಷೇತ್ರಗಳಿಂದಲೂ ತಜ್ಞರನ್ನು ಹೊಂದಿರಬಹುದು. ಹೀಗೆ, ಆದಿಯಿಂದ ಹಿಡಿದು ಅತ್ಯಂತದವರೆಗೆ ಒಂದು ನಿರ್ಮಾಣ ಯೋಜನೆಗೆ ಅಂತಹ ಪ್ರತಿ ಮಂಡಳಿಯು "ಒಂದೇ ಸ್ಥಳದಲ್ಲಿ ಎಲ್ಲವೂ ದೊರಕುವಹಾಗೆ" ತನ್ನನ್ನು ತಾನೇ ಪ್ರಸ್ತಾಪಿಸಬಹುದು. ಇದು "ಆಯೋಜನೆ ನಿರ್ಮಾಣ" ಗುತ್ತಿಗೆಯೆಂದು ಹೆಸರಿಸಲ್ಪಟ್ಟಿದೆ, ಅಲ್ಲಿ ಗುತ್ತಿಗೆದಾರನಿಗೆ ಸಾಧನೆಯ ಒಂದು ನಿರ್ದಿಷ್ಟಮಾನವನ್ನು ಕೊಡಲಾಗುತ್ತದೆ, ಹಾಗೂ ಕಾರ್ಯನಿರ್ವಹಣೆಯ ನಿರ್ದಿಷ್ಟಮಾನಗಳಿಗೆ ದೃಢವಾಗಿ ಬದ್ಧನಾಗಿದ್ದು, ಮಾದರಿಯಿಂದ ನಿರ್ಮಾಣದವರೆಗೆ ಯೋಜನೆಯನ್ನು ವಹಿಸಿಕೊಳ್ಳಬೇಕಾಗುತ್ತದೆ.

ಈ ಮೊದಲೇ ತಯಾರಿಸಲ್ಪಟ್ಟ ಮನೆಯ ನಿರ್ಮಾಣ

ಆಯೋಜನೆ-ರಚನೆ, ಪಾಲುದಾರಿಕೆ ಮಾಡಿಕೊಳ್ಳುವುದು ಹಾಗೂ ನಿರ್ಮಾಣ ಕಾರ್ಯನಿರ್ವಹಣೆಯೂ ಸೇರಿದಂತೆ ಈ ಸಂಯೋಜನೆಯಲ್ಲಿ ಮಾಲಿಕರಿಗೆ ಅನೇಕ ಯೋಜನಾ ರಚೆನೆಗಳು ಸಹಾಯಮಾಡಬಹುದು. ಸಾಧಾರಣವಾಗಿ, ಈ ಪ್ರತಿಯೊಂದು ಆಯೋಜನೆ ಹಾಗೂ ನಿರ್ಮಾಣದುದ್ದಕ್ಕೂ ವಾಸ್ತುಶಿಲ್ಪಿಗಳು, ಒಳಾಂಗಣ ವಿನ್ಯಾಸಕಾರರು, ಯಂತ್ರಶಿಲ್ಪಿಗಳು, ಹಾಗೂ ನಿರ್ಮಾಣಗಾರರ ಸೇವೆಯನ್ನು ಒಟ್ಟುಗೂಡಿಸಲು ಈ ಪ್ರತಿ ಯೋಜನಾ ರಚನೆಗಳು ಮಾಲಿಕರಿಗೆ ಅನುವು ಮಾಡಿಕೊಡುತ್ತವೆ. ಪ್ರತಿಕ್ರಯಿಸಿ, ಅನೇಕ ಕಂಪನಿಗಳು ಆಯೋಜನೆ ಅಥವಾ ನಿರ್ಮಾಣದ ಸೇವೆಗಳನ್ನು ಮಾತ್ರ ಒಂಟಿಯಾಗಿ ಪಾರಂಪರಿಕ ಪ್ರಸ್ತಾಪಗಳಾಚೆ ಬೆಳೆಯುತ್ತಿವೆ ಹಾಗೂ ಮಾದರಿ-ರಚನೆ ಕಾರ್ಯವಿಧಾನದ ಮೂಲಕ ಬೇರೆ ಅವಶ್ಯಕ ಭಾಗೀದಾರರ ಜೊತೆ ಸಂಬಂಧಗಳನ್ನು ಸ್ಥಾಪಿಸುವುದರ ಬಗ್ಗೆ ಹೆಚ್ಚು ಪ್ರಮುಖ್ಯತೆ ಕೊಡುತ್ತಿವೆ.

ನಿರ್ಮಾಣ ಯೋಜನೆಗಳ ಹೆಚ್ಚುತ್ತಿರುವ ಜಟಿಲತೆಯು ಯೋಜನೆಯ ಜೀವನ ಚಕ್ರದ ಎಲ್ಲಾ ಹಂತಗಳಲ್ಲಿ ತರಬೇತಿ ಪಡೆದ ಆಯೋಜನಾ ತಜ್ಞರ ಅವಶ್ಯಕತೆಯನ್ನು ಸೃಷ್ಟಿಸುತ್ತದೆ ಹಾಗೂ ಸಹಿಸುವಿಕೆಯನ್ನು ಒಳಗೊಂಡಂತೆ ಅನೇಕ ಉಪ-ವ್ಯವಸ್ಥೆಗಳು ಮತ್ತು ಅವುಗಳ ವಿಶಿಷ್ಟ ಭಾಗಗಳ ಹತ್ತಿರದ ಸಂಯೋಜನೆಯನ್ನು ಕೋರುತ್ತಾ ಪ್ರಗತಿ ಹೊಂದಿದ ತಂತ್ರಜ್ಞಾನದ ವ್ಯವಸ್ಥೆಯಂತೆ ಕಟ್ಟಡದ ಶ್ಲಾಘನೆಯನ್ನು ವಿಕಾಸಗೊಳಿಸುತ್ತದೆ. ರಚನೆಯ ವಾಸ್ತುಶಿಲ್ಪವು ಈ ಹೊಸ ಪೈಪೋಟಿಯನ್ನು ಎದುರಿಸಲು ಪ್ರಯತ್ನಿಸುತ್ತಿರುವ ಒಂದು ವೃದ್ಧಿಸುತ್ತಿರುವ ವಿಭಾಗವಾಗಿದೆ.

ಆರ್ಥಿಕ ಸಲಹೆಗಾರರು[ಬದಲಾಯಿಸಿ]

ಅನೇಕ ನಿರ್ಮಾಣ ಯೋಜನೆಗಳು ತಡೆಯಬಹುದಾದಂತಹ ಆರ್ಥಿಕ ಸಮಸ್ಯೆಗಳಿಂದ ನರಳುತ್ತವೆ. ಕಡಿಮೆಯಾಗಿ ಬಿಡ್ ಮಾಡಿದ ಯೋಜನೆಗಳು ಅತ್ಯಲ್ಪ ಹಣವನ್ನು ಪೂರ್ಣಗೊಳಿಸಲು ಉಳಿಸಿಕೊಳ್ಳುತ್ತವೆ. ಈಗಿರುವ ಹಣದ ಹರಿವಿನ ಬಂಡವಾಳದ ಮೊತ್ತವು ಕೆಲಸಗಾರರಿಗೆ ಹಾಗೂ ಸಮಾನುಗಳ ಹಾಲಿ ವೆಚ್ಚವನ್ನು ಸರಿದೂಗಿಸಲು ಅಸಾಧ್ಯವಾದರೆ ಸಮಸ್ಯೆಗಳು ಇದ್ದೇ ಇರುತ್ತವೆ, ಹಾಗೂ ಅದು ಒಂದು ಸರಿಯಾದ ಸಮಯದಲ್ಲಿ ಅಗತ್ಯದ ಹಣವನ್ನು ಹೊಂದಿರುವಂತಹ ವಿಷಯವಾದ್ದರಿಂದ , ಒಟ್ಟಿನಲ್ಲಿ ಮೊತ್ತವು ಸಾಕಷ್ಟಿದ್ದಾಗಲೂ ಸಹ ಸಮಸ್ಯೆ ಏಳಬಹುದು. ಅನೇಕ ಕ್ಷೇತ್ರಗಳಲ್ಲಿ ಮೋಸ, ವಂಚನೆ ಒಂದು ಸಮಸ್ಯೆಯಾಗಿದೆ, ಆದರೆ ನಿರ್ಮಾಣದ ರಂಗದಲ್ಲಿ ಅದು ಕುಪ್ರಸಿದ್ಧವಾಗಿ ಪ್ರಬಲವಾಗಿದೆ. ಒಂದು ದೃಢವಾದ ಆಯೋಜನೆ, ಸಾಕಷ್ಟು ರಕ್ಷಣೋಪಾಯಗಳು ಹಾಗೂ ಸಂಭವಿಸಬಹುದಾದ ಅಪಾಯಗಳ ಸಹಿತ, ಒಂದು ಅತ್ಯತ್ತಮ ಯೋಜನೆಗೆ ಭರವಸೆಕೊಡಲು ಆರ್ಥಿಕ ಉಪಾಯವು ಅವಶ್ಯಕವಾಗಿದ್ದು ಯೋಜನೆಯು ಪ್ರಾರಂಭವಾಗುವ ಮೊದಲು ತಯಾರಾಗಿರಬೇಕಾಗುತ್ತದೆ, ಮತ್ತು ಯೋಜನೆಯ ಜೀವಿತಾವಧಿಯಲ್ಲಿಯೇ ಆಯೋಜನೆಯು ಸರಿಯಾಗಿ ಕಾರ್ಯರೂಪಕ್ಕೆ ಬರುವಂತೆ ಮಾಡಲು ಪ್ರಯತ್ನಿಸಬೇಕು.

ಗಿರವಿಯಿಟ್ಟುಕೊಳ್ಳುವ ಬ್ಯಾಂಕರ್ ಗಳು, ಲೆಕ್ಕಪತ್ರಗಾರರು, ಮತ್ತು ವೆಚ್ಚದ ವಾಸ್ತುಶಿಲ್ಪಿಗಳು ಕಟ್ಟಡದ ನಿರ್ಮಾಣದ ಯೋಜನೆಯ ಆರ್ಥಿಕ ಕಾರ್ಯನಿರ್ವಹಣೆಗೆ ಸರ್ವರೀತಿಯ ಆಯೋಜನೆ ಸೃಷ್ಟಿಸಲು ಸಂಭವನೀಯ ಭಾಗೀದಾರರು. ಸಂಬಂಧಿಸಿದ ಸಣ್ಣಪುಟ್ಟ ಯೋಜನೆಗಳಲ್ಲಿಯೂ ಸಹ ಭೋಗ್ಯಕ್ಕೆ ಇಟ್ಟುಕೊಳ್ಳುವ ಬ್ಯಾಂಕರ್ ಗಳ ಹಾಜರಿಯು ಹೆಚ್ಚು ನಿರೀಕ್ಷಿತವಾಗಿದೆ, ಏಕೆಂದರೆ ಸೊತ್ತಿನಲ್ಲಿ ಮಾಲಿಕನ ಸರ್ವಸಮತೆಯು ಕಟ್ಟಡದ ಯೋಜನೆಗೆ ಬಂಡವಾಳದ ಅತ್ಯಂತ ಹೆಚ್ಚು ಸ್ಪಷ್ಟವಾದ ಅಕರವಾಗಿದೆ. ಲೆಕ್ಕಪತ್ರಗಾರರು ಯೋಜನೆಯ ಜೀವಿತಕಾಲದುದ್ದಕ್ಕೂ ನಿರೀಕ್ಷಿಸಿದ ಹಣದ ಹರಿವನ್ನು ಪರಿಶೀಲಿಸಿ ಅಭ್ಯಸಿಸಲು ಹಾಗೂ ಕಾರ್ಯವಿಧಾನದುದ್ದಕ್ಕೂ ಕೆಲಸಕ್ಕೆ ಹಣಕೊಡುವ ಮೇಲ್ವಿಚಾರಣೆ ನೋಡಿಕೊಳ್ಳುತ್ತಾರೆ. ವೆಚ್ಚ ನೋಡಿಕೊಳ್ಳುವ ವಾಸ್ತುಶಿಲ್ಪಗಳು ತಮ್ಮ ಜ್ಞಾನವನ್ನು ಆಗಿರುವ ಕೆಲಸಕ್ಕೆ ಮತ್ತು ಅದಕ್ಕೆ ಉಪಯೋಗಿಸಿರುವ ಸಾಮಾನುಗಳ ಮೇಲೆ ಒಂದು ಸರಿಯಾದ ಮೌಲ್ಯಮಾಪನವನ್ನು ಮಾಡಲು ನಿರ್ಧರಿಸುತ್ತಾರೆ. ವೆಚ್ಚದಲ್ಲಿ ಹೆಚ್ಚಿನ ವೃದ್ಧಿಯಲ್ಲಿ ಪರಿಣಮಿಸುವ ಯೋಜನೆಗಳಲ್ಲಿ ಬದಲಾವಣೆಗಳು ಅಥವಾ ಬದಲಾದ ಆಜ್ಞೆಗಳನ್ನು ಗುರುತಿಸಲು ಗುತ್ತಿಗೆದಾರನು ಶಕ್ತನಾದಾಗ ಸರ್ಕಾರಿ ಯೋಜನೆಗಳ ಜೊತೆ ಅತಿ ಹೆಚ್ಚಿನ ವೆಚ್ಚದ ಹೆಚ್ಚಳವು ಸಂಭವಿಸುತ್ತವೆ, ಆವು ಈ ಮೊದಲೇ ಅರಂಭದ ಲಿಲಾವಿನ ನಂತರ ಪರೀಶೀಲನೆಯಿಂದ ತೆಗೆದುಹಾಕಲ್ಪಟ್ಟಿರುವ ಕಾರಣದಿಂದ ಬೇರೆ ವ್ಯವಹಾರ ಮಂಡಳಿಗಳಿಂದ ಸ್ಪರ್ಧೆಗೆ ಒಳಪಡುವುದಿಲ್ಲ.[೧]

ಬೃಹತ್ ಯೋಜನೆಗಳು ಹೆಚ್ಚಾದ ಸಂಕೀರ್ಣ ಆರ್ಥಿಕ ಉಪಾಯಗಳನ್ನು ಒಳಗೊಂಡಿರಬಹುದು. ಒಂದು ಯೋಜನೆಯ ಭಾಗಗಳು ಮುಗಿಯುತ್ತಾ ಬಂದಂತೆ, ಒಬ್ಬ ಸಾಲಕೊಡುವವರು ಅಥವಾ ಸೋತ್ತಿನ ಮಾಲಿಕರನ್ನು ಒಬ್ಬರಿಂದ ಒಬ್ಬರಿಗೆ ಬದಲಾವಣೆ ಮಾಡುತ್ತಾ, ಅವುಗಳನ್ನು ಮಾರಬಹುದು, ಆ ವೇಳೆಗೆ ಕಟ್ಟಡ ನಿರ್ಮಾಣದ ಯೋಜನೆಯ ಪ್ರತಿ ಹಂತಕ್ಕೂ ಸರಿಯಾದ ಉದ್ದಿಮೆಗಳು ಹಾಗೂ ದೊರಕುವ ಸಾಮಾನುಗಳನ್ನು ಹೊಂದುವ ಕೆಸಗಾರರು ಮತ್ತು ವಸ್ತುಗಳ ಸರಬರಾಜು ಮುಂದುವರಿಯುತ್ತದೆ. ಸಂಯುಕ್ತ ಸಂಸ್ಥಾನವನ್ನು ಹೊರತು ಪಡಿಸಿ, ಅನೇಕ ಇಂಗ್ಲಿಷ್-ಭಾಷೆ ಮಾತನಾಡುವ ದೇಶಗಳಲ್ಲಿ, ಯೋಜನೆಗಳು ಸಾಂಕೇತಿಕವಾಗಿ ಗುಣಮಟ್ಟದ ಮೋಜಣಿದಾರರನ್ನು ಉಪಯೋಗಿಸಿಕೊಳ್ಳಲಾಗುತ್ತದೆ.

ಕಾನೂನಿನ ಪರಿಶೀಲನೆಗಳು[ಬದಲಾಯಿಸಿ]

ಒಂದು ನಿರ್ಮಾಣ ಯೋಜನೆಯು ಆ ಸೊತ್ತನ್ನು ನಿಯಂತ್ರಿಸುತ್ತಿರುವ ಕಾನೂನಿನ ಚೌಕಟ್ಟಿಗೆ ಸರಿಹೊಂದಬೇಕು. ಸೊತ್ತನ್ನು ಉಪಯೋಗಿಸಿಕೊಳ್ಳುವ ಬಗ್ಗೆ ಸರ್ಕಾರಿ ಕಟ್ಟುಪಾಡುಗಳು ಮತ್ತು ನಿರ್ಮಾಣದ ಕಾರ್ಯವಿಧಾನದಲ್ಲಿ ರಚಿಸಲ್ಪಟ್ಟಂತಹ ಸೊತ್ತಿನ ಉಪಯೋಗ ಹಾಗೂ ಕರಾರುಗಳನ್ನು ಇವು ಒಳಗೊಂಡಿರುತ್ತವೆ.

ಯೋಜನೆಯು ವಲಯದ ರಚನೆ ಮತ್ತು ಕಟ್ಟಡದ ನಿರ್ಮಾಣ ನಿಯಮದ ಅಗತ್ಯಗಳಿಗೆ ದೃಢವಾಗಿ ಅಂಟಿಕೊಂಡಿರಬೇಕು. ಕಾನೂನುಗಳಿಗೆ ಬದ್ಧವಾಗಿರಲು ವಿಫಲವಾದಂತಹ ಒಂದು ಯೋಜನೆಯ ನಿರ್ಮಾಣವು ಮಾಲಿಕರಿಗೆ ಪ್ರಯೋಜನಕಾರಿಯಾಗಿರುವುದಿಲ್ಲ. ಸೇತುವೆಯ ಕುಸಿಯುವಿಕೆ ಇಲ್ಲವೆ ಸ್ಫೋಟನೆಗಳಂತಹ ವಿವಾದಾಸ್ಪದವಲ್ಲದ ಕೆಟ್ಟ ಘಟನೆಗಳನ್ನು ತಡೆಯಲು ಆಶಿಸುವ ಕೆಲವು ನ್ಯಾಯವಾದ ಅಗತ್ಯತೆಗಳು ತಮ್ಮದೇ ಆದ ತಪ್ಪು ವಿಚಾರಗಳಿಂದ ಬರುತ್ತವೆ. ಇತರೆ ಶಾಸನಸಮ್ಮತವಾದ ಬೇಡಿಕೆಗಳು ವ್ಯವಹಾರಗಳನ್ನು ಉದ್ಯೋಗದ ಪ್ರಾಂತಕ್ಕೆ ಹಾಗೂ ನಿವಾಸಗಳನ್ನು ವಾಸಕ್ಕೆ ಸಂಬಂಧಿಸಿದ ಪ್ರದೇಶಗಳಿಗೆ ಸೀಮಿತಗೊಳಿಸಿ ಪ್ರತ್ಯೇಕಿಸುವಂತಹ ತಮ್ಮದೇ ಆದ ಪ್ರತಿಬಂಧಕ ಪರಿಶೀಲನೆಗಳು ಅಥವಾ ಪದ್ಧತಿ ಹಾಗೂ ನಿರೀಕ್ಷೆಗಳ ವ್ಯವಸ್ಥೆಯಿಂದ ಬರುತ್ತವೆ. ಒಂದು ಕಾನೂನು ತಮಗೆ ಅನ್ವಯಿಸುವುದಿಲ್ಲ ಎಂದಾಗಲಿ (ಆ ಸೇತುವೆಯ ಆಯೋಜನೆಯು ಕುಸಿಯುವುದಿಲ್ಲ) ಇಲ್ಲವೇ ಆ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗಲಾಗುವುದಿಲ್ಲವೆಂದು (ಸಮಾಜದಲ್ಲಿ ವಾಸಸ್ಥಳ-ಕೆಲಸದ ಜಾಗಗಳು ಒಟ್ಟಿಗೇ ಇರುವ ಪ್ರದೇಶಗಳು ಹೆಚ್ಚಾಗಿ ಒಪ್ಪಿಕೊಳ್ಳಲ್ಪಟ್ಟಿವೆ) ಎಂದು ವಾದಿಸುತ್ತಾ ಕಟ್ಟಡ ಕಟ್ಟುವ ಜಾಗದಲ್ಲಿ ಕಾನೂನಿನ ನಿಯಂತ್ರಣಕ್ಕೆ ಒಬ್ಬ ವಕೀಲರು ಬದಲಾವಣೆಗಳನ್ನು ಅಥವಾ ವಿನಾಯಿತಿಗಳನ್ನು ಕೇಳಿಕೊಳ್ಳಬಹುದು.

ಒಂದು ನಿರ್ಮಾಣದ ಯೋಜನೆಯು ಪ್ರತಿಯೊಂದನ್ನು ಜಾಗರೂಕತೆಯಿಂದ ಪರಿಶೀಲಿಸುವಂತಹ ಹಾಗೂ ಇತರೆ ಶಾಸನ ಸಮ್ಮತವಾದ ಕರಾರುಗಳ ಒಂದು ಸಂಕೀರ್ಣ ಜಾಲವಾಗಿದೆ. ಒಂದು ಗುತ್ತಿಗೆಯು ಎರಡು ಅಥವಾ ಹೆಚ್ಚಿನ ಪಕ್ಷಗಳ ನಡುವೆ ಒಪ್ಪಂದಗಳ ಒಂದು ಗುಂಪಿನ ವಿನಿಮಯವಾಗಿದೆ, ಆದರೆ ಅದು ಆದಷ್ಟು ಪ್ರತಿಪಕ್ಷದವರನ್ನು ಅತಿ ಕಡಿಮೆ ವಿನಿಮಯಕ್ಕೆ ಸಾದ್ಯವಾದಷ್ಟು ಹೆಚ್ಚಿನದನ್ನು ಕೊಡಲು ಒಪ್ಪುವಂತೆ ಮಾಡಲು ಪ್ರಯತ್ನಿಸುವಂತಹ ಅಷ್ಟು ಸರಳ ವಿಚಾರವೇನಲ್ಲ. ನಿರ್ಮಾಣದಲ್ಲಿ ಮೂಲವಸ್ತುವಾದ ಸಮಯದ ವಿಳಂಬವು ಹಣದ ಹೆಚ್ಚಿನ ಹೊರೆ ಎಂದರ್ಥ, ಹಾಗೂ ಕ್ಲಿಷ್ಟಕರ ಪರಿಸ್ಥಿತಿಗಳಲ್ಲಿ ಅಡಚಣೆಯು ಅತಿರೇಕವಾಗಿ ದುಬಾರಿಯಾಗಬಹುದು. ಹೀಗೆ, ಕರಾರುಗಳಲ್ಲಿರುವಂತೆಯೇ ಕೆಲಸಗಳನ್ನು ನಿರ್ವಹಿಸಲು ಪ್ರತಿ ಪಕ್ಷವೂ ಶಕ್ತನಾಗುವಂತೆ ಸಮರ್ಥಿಸಲು ಗುತ್ತಿಗೆಯ ಕರಾರುಗಳು ರಚಿಸಲ್ಪಡಬೇಕು. ಯೋಜನೆಗಳು ಸ್ಪಷ್ಟವಾದ ನಿರೀಕ್ಷೆಗಳು ಹಾಗೂ ಸ್ಪುಟವಾದ ಮಾರ್ಗಗಳಿಂದ ಹೊರಟ ಗುತ್ತಿಗೆಗಳು ಅಗತ್ಯವಾಗಿ ಆ ಹಾರೈಕೆಗಳನ್ನು ನೆರವೇರಿಸಲು ನಿರ್ವಿಘ್ನವಾಗಿ ಚಲಿಸುವಂತೆ ಮಾಡಿ ಪೂರ್ಣಗೊಳ್ಳುತ್ತವೆ, ಆದರೆ ಸಾರವಿಲ್ಲದ ಕೆಟ್ಟದಾಗಿ ರಚಿಸಿದ ಗುತ್ತಿಗೆಗಳು ತೊಡಕು ಹಾಗೂ ಕುಸಿಯುವಿಕೆಗೆ ಕಾರಣವಾಗುತ್ತವೆ.

ಕಾನೂನು ಸಲಹೆಗಾರರು ಒಂದು ನಿರ್ಮಾಣ ಯೋಜನೆಯ ಪ್ರಾರಂಭದಲ್ಲಿ ಗುತ್ತಿಗೆ ಕರಾರಿನ ರಚನೆಯಲ್ಲಿ ತೊಂದರ ಕೊಡಬಹುದಾದ ಇತರೆ ಸಾಮರ್ಥ್ಯವುಳ್ಳ ಆಕರಗಳು ಹಾಗೂ ಸಂದೇಹಾರ್ಥಗಳನ್ನು ಗುರುತಿಸಲು ಹುಡುಕುತ್ತಾರೆ ಮತ್ತು ಆ ತೊಂದರೆಗಳನ್ನು ತಡೆಯಲು ಬೇರೆ ವಿಧಾನಗಳನ್ನು ಮುಂದಿಡುತ್ತಾರೆ. ಯೋಜನೆಯ ಕಾರ್ಯವಿಧಾನದುದ್ದಕ್ಕೂ ಅವರು ಉದ್ಭವಿಸುವಂತಹ ಜಗಳಗಳನ್ನು ಬಗೆಹರಿಸಿ ಹೋಗಲಾಡಿಸಲು ಕೆಲಸ ಮಾಡುತ್ತಾರೆ. ಪ್ರತಿ ಸಂದರ್ಭದಲ್ಲಿಯೂ, ವಕೀಲರು ಆ ಯೋಜನೆಯ ವಾಸ್ತವಿಕತೆಗೆ ಸರಿಹೊಂದುವ ಕರಾರುಗಳ ಪರಸ್ಪರ ವಿನಿಮಯಕ್ಕೆ ಸಹಾಯಮಾಡುತ್ತಾರೆ.

ತಜ್ಞರ ವಿಚಾರವಿನಿಮಯ[ಬದಲಾಯಿಸಿ]

ಆಯೋಜನೆ, ಹಣದ ವ್ಯವಸ್ಥೆ ಹಾಗೂ ಕಾನೂನು ವಿಷಯಗಳು ಪರಸ್ಪರ ಒಂದಕ್ಕೊಂದು ಸಂಬಂಧಿಸಿವೆ ಮಾದರಿಯು ರಚನಾತ್ಮಕವಾಗಿ ದೃಢವಾಗಿದ್ದು ಸ್ಥಳ ಹಾಗೂ ಉಪಯೋಗಕ್ಕೆ ಸರಿಹೊಂದುವಂತಿರಬೇಕು, ಅಲ್ಲದೆ ಕಟ್ಟಲು ಆರ್ಥಿಕವಾಗಿ ಮತ್ತು ಉಪಯೋಗಿಸಲು ಶಾಸನ ಸಮ್ಮತವಾಗಿ ಸಾಧ್ಯವಾಗಿರುವಂತಯೂ ಇರಬೇಕು. ಆರ್ಥಿಕ ವಿನ್ಯಾಸವು ಒದಗಿಸಲ್ಪಟ್ಟ ನಕ್ಷೆಯ ಕಟ್ಟಡವನ್ನು ಕಟ್ಟುವ ಅವಶ್ಯಕತೆಗೆ ಹೊಂದಿಕೆಯಾಗುವಂತಿರಬೇಕು ಹಾಗೂ ಕಾನೂನು ಬದ್ಧವಾಗಿ ಕೊಡಬೇಕಾದ ಹಣವನ್ನು ಪಾವತಿ ಮಾಡುತ್ತಿರಬೇಕು. ಕಾನೂನಿನ ರಚನೆಯು ನಿರ್ಮಾಣದ ಕಾರ್ಯವಿಧಾನದ ಆರ್ಥಿಕ ಪರಿಣಾಮಗಳನ್ನು ಹೇರುತ್ತಾ, ಪರಿಸರದ ನ್ಯಾಯವಾದ ಚೌಕಟ್ಟಿನೊಳಗೆ ನಕ್ಷೆಯನ್ನು ನ್ಯಾಯಸಮ್ಮತವಾದ ರಚನೆಯೊಳಗೆ ಸಂಯೋಜಿಸಬೇಕು.

ಸಂಪಾದಿಸುವಿಕೆ[ಬದಲಾಯಿಸಿ]

ಒಂದು ಕಟ್ಟಡವನ್ನು ಪಡೆಯಲು ಗ್ರಾಹಕನಿಂದ ಕೈಗೊಂಡ ಅನೇಕ ಚಟುವಟಿಕೆಗಳ ಐಕ್ಯತೆಯನ್ನು ವರ್ಣಿಸುವುದೇ ಸಂಪಾದಿಸುವಿಕೆ . ನಿರ್ಮಾಣವನ್ನು ದೊರಕಿಸಿಕೊಳ್ಳಲು ಅನೇಕ ಬೇರೆ ಬೇರೆ ವಿಧಾನಗಳಿವೆ; ಆದರೂ ಸಂಪಾದಿಸುವಿಕೆಯ ಮೂರು ಅತ್ಯಂತ ಸಾಮಾನ್ಯ ರೀತಿಗಳು:

  1. ಪಾರಂಪರಿಕ (ಆಯೋಜನೆ-ಲಿಲಾವು-ಕಟ್ಟುವುದು)
  2. ಆಯೋಜನೆ ಮತ್ತು ನಿರ್ಮಿಸು
  3. ನಿರ್ವಹಣೆಯ ಕರಾರು ಮಾಡಿಕೊಳ್ಳುವುದು

ಸಂಬಂಧಿತ ಗುತ್ತಿಗೆ ಮಾಡಿಕೊಳ್ಳುವುದನ್ನು ಒಳಗೊಂಡಂತಹ ಸಂಪಾದಿಸುವಿಕೆಯ ಹೋಸ ರೀತಿಗಳ ಬೆಳೆಯುತ್ತಿರುವ ಸಂಖ್ಯೆಯೂ ಸಹ ಇದೆ, ಇಲ್ಲಿ ಒಂದು ನಿರ್ಮಾಣ ಯೋಜನೆಯೊಳಗೆ ಮುಖ್ಯಸ್ಥ ಹಾಗೂ ಗುತ್ತಿಗೆದಾರ ಮತ್ತು ಇತರೆ ಸಂಬಂಧಿತ ಪಾಲುದಾರರ ನಡುವೆ ಬಂಧುತ್ವದ ಸಹಕಾರದ ತತ್ವದ ಮೇಲೆ ಪ್ರಧಾನ್ಯತೆಯಿದೆ. ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಎನ್ನುವಂತಹ ಪಾಲುದಾರಿಕೆಗಳನ್ನು (PPPs) ಹೀಗೂ ಕರೆಯ ಬಹುದು ಖಾಸಗಿ ಆರ್ಥಿಕ ಪ್ರಾರಂಭಗಳು (PFIs) ಹಾಗೂ "ಶುದ್ಧ" ಅಥವಾ "ಯೋಜನಾ" ಮೈತ್ರಿಗಳು ಹಾಗೂ "ಅಶುದ್ಧ" ಇಲ್ಲವೇ "ಕೌಶಲ್ಯಪೂರ್ಣ" ಸಂಬಂಧಗಳೆನ್ನುವಂತಹ ಮೈತ್ರಿಗಳ ಹೊಸ ರೀತಿಗಳನ್ನು ಒಳಗೊಂಡಿವೆ. ನಿರ್ಮಾಣ ಉದ್ದಿಮೆಯೊಳಗೆ ಆಗಾಗ್ಗೆ ಉನ್ನತ ಪೈಪೋಟಿಯ ಹಾಗೂ ವಿರೋಧಿ ಪದ್ಧತಿಗಳಿಂದ ಉದ್ಭವಿಸುವಂತಹ ಅನೇಕ ಸಮಸ್ಯೆಗಳನ್ನು ಉತ್ತಮ ಪಡಿಸಲು ಸಹಕಾರದ ತತ್ವದ ಮೇಲೆ ದೃಷ್ಟಿಹರಿಸಲಾಗಿದೆ.

ಸಾಂಪ್ರದಾಯಿಕ[ಬದಲಾಯಿಸಿ]

ಇದು ನಿರ್ಮಾಣದ ಸಂಪಾದಿಸುವಿಕೆಯ ಅತ್ಯಂತ ಸಾಮಾನ್ಯ ಪದ್ಧತಿಯಾಗಿದೆ ಹಾಗೂ ಚೆನ್ನಾಗಿ ಸ್ಥಾಪಿಸಿ ಗುರುತಿಸಲ್ಪಟ್ಟಿದೆ. ಈ ವ್ಯವಸ್ಥೆಯಲ್ಲಿ, ವಾಸ್ತುಶಿಲ್ಪಿ ಇಲ್ಲವೇ ಯಂತ್ರಶಿಲ್ಪಿ ಯೋಜನಾ ಸಂಯೋಜಕರಾಗಿ ಕೆಲಸ ಮಾಡುತ್ತಾರೆ. ಕೆಲಸದ ನಕ್ಷೆ ರಚಿಸುವುದು, ನಿರ್ದಿಷ್ಟಮಾನಗಳನ್ನು ತಯಾರಿಸುವುದು ಮತ್ತು ನಿರ್ಮಾಣದ ರೂಪರೇಖೆಗಳನ್ನು ತಯಾರಿಸುವುದು, ಗುತ್ತಿಗೆಯನ್ನು ನಿರ್ದೇಶಿಸುವುದು, ಕೆಲಸಗಳನ್ನು ಗುತ್ತಿಗೆಗೆ ಕೊಡುವುದು ಹಾಗೂ ಆರಂಭದಿಂದ ಮುಕ್ತಾಯದವರೆಗೂ ಕಾರ್ಯನಿರ್ವಹಿಸುವುದು ಆಕೆ ಅಥವಾ ಅವನ ಪಾತ್ರವಾಗಿರುತ್ತದೆ. ವಾಸ್ತುಶಿಲ್ಪಿಯ ಗ್ರಾಹಕ ಮತ್ತು ಮುಖ್ಯ ಗುತ್ತಿಗೆದಾರರ ನಡುವೆ ನೇರವಾದ ಕರಾರಿಗೆ ಸಂಬಂಧಪಟ್ಟ ಕೊಂಡಿಗಳಿರುತ್ತವೆ. ಯಾವುದೇ ಉಪಗುತ್ತಿಗೆದಾರನು ಮುಖ್ಯ ಗುತ್ತಿಗೆದಾರನ ಜೊತೆ ನೇರವಾದ ಕರಾರಿಗೆ ಸಂಬಂಧಪಟ್ಟ ಮೈತ್ರಿಯನ್ನು ಹೊಂದಿರುತ್ತಾನೆ.

ವಿನ್ಯಾಸ ಮತ್ತು ರಚನೆ[ಬದಲಾಯಿಸಿ]

ಈ ಮಾರ್ಗವು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಸಾಮಾನ್ಯವಾಗಿದೆ ಮತ್ತು ಒಂದು ಸಮಗ್ರವಾದ ಪೂರ್ಣವಾಗಿ ಕಾರ್ಯನಿರ್ವಹಿಸುವ ಕಟ್ಟಡವನ್ನು ಕಟ್ಟಲು, ಅವಶ್ಯವಿದ್ದಲ್ಲೆಲ್ಲ ಬೇಕಾದ ಸಮಾನುಗಳನ್ನು ಅದರ ಸ್ಥಳದಲ್ಲಿ ಹಾಕುವುದು, ತಕ್ಕುದಾದ ವಸ್ತುಗಳನ್ನು ಹೊಂದಿಸುವುದು ಹಾಗೂ ಸಲಕರಣೆಗಳನ್ನು ಒಳಗೊಂಡು ಸಂಪೂರ್ಣವಾಗಿ ಪೂರೈಸಿದ ಕಾರ್ಯವು ಅಂತರ್ಗತವಾಗಿದೆ. ಕೆಲವು ಸಂಗತಿಗಳಲ್ಲಿ, ವಿನ್ಯಾಸ ಮತ್ತು ರಚನೆ (D & B)ಯ ಪದ್ಧತಿಯಲ್ಲಿ ನಿವೇಶನವನ್ನು ಗೊತ್ತುಪಡಿಸಿ, ಬಂಡವಾಳದ ವ್ಯವಸ್ಥೆ ಮಾಡುವುದು ಹಾಗೂ ಎಲ್ಲಾ ಅವಶ್ಯಕ ಕಾನೂನುಬದ್ಧವಾದ ಒಪ್ಪಿಗೆಗಳಿಗೆ ಅರ್ಜಿಹಾಕುವುದನ್ನು ಸಹ ಒಳಗೊಂಡಿರುತ್ತದೆ.

ಯೋಜನೆಯ ಗುರಿಗಳ ಒಂದು ಸಂಪೂರ್ಣ ಚಿತ್ರಣವನ್ನು ಕೊಡುತ್ತಾ, ಯೋಜನೆಗೆ ಅವಶ್ಯಕವಾದ ತನ್ನ ಬೇಡಿಕೆಗಳ ಒಂದು ಪಟ್ಟಿಯನ್ನು ಮಾಲಿಕನು ರಚಿಸುತ್ತಾನೆ. ಅನೇಕ D & B ಗುತ್ತಿಗೆದಾರರು ಈ ಗುರಿಗಳನ್ನು ಹೇಗೆ ನೆರವೇರಿಸಬೇಕೆಂಬುದರ ಬಗ್ಗೆ ವಿವಿಧ ಅಭಿಪ್ರಾಯಗಳನ್ನು ಮಂಡಿಸುತ್ತಾರೆ. ಮಾಲಿಕರು ತಮಗೆ ಅತ್ಯಂತ ಇಷ್ಟವಾದ ಮನೋಭಾವನೆಗಳನ್ನು ಆರಿಸಿಕೊಳ್ಳುತ್ತಾರೆ ಹಾಗೂ ಯುಕ್ತರಾದ ಗುತ್ತಿಗೆದಾರರನ್ನು ನೇಮಿಸಿಕೊಳ್ಳುತ್ತಾರೆ. ಆಗಾಗ್ಗೆ, ಅದು ಕೇವಲ ಒಬ್ಬ ಗುತ್ತಿಗೆದಾರನಲ್ಲ, ಆದರೆ ಅದು ಒಟ್ಟಿಗೆ ಕೆಲಸ ನಿರ್ವಹಿಸುತ್ತಿರುವ ಅನೇಕ ಗುತ್ತಿಗೆದಾರರ ಒಂದು ಸಂಘ. ಒಮ್ಮೆ ಒಬ್ಬ ಗುತ್ತಿಗೆದಾರರನ್ನು (ಅಥವಾ ಒಂದು ಸಂಘ/ಒಕ್ಕೂಟ) ನೇಮಿಸಿದ ನಂತರ ಅವರು ಯೋಜನೆಯ ಮೊದಲ ಹಂತವನ್ನು ಕಟ್ಟಲು ಪ್ರಾರಂಭಿಸುತ್ತಾರೆ. ಮೊದಲ ಹಂತವನ್ನು ಅವರು ಕಟ್ಟಿದಂತೆ, ಎರಡನೇ ಹಂತವನ್ನು ವಿನ್ಯಾಸ ಮಾಡುತ್ತಾರೆ. ಇದು ಒಂದು ವಿನ್ಯಾಸ-ಲಿಲಾವು-ರಚನೆಯ ಗುತ್ತಿಗೆಗೆ ಪರಸ್ಪರ ವಿರೋಧವಾಗಿದೆ, ಅಲ್ಲಿ ಮಾಲಿಕನಿಂದ ಯೋಜನೆಯು ಸಂಪೂರ್ಣವಾಗಿ ರಚಿಸಲ್ಪಡುತ್ತದೆ, ನಂತರ ಬಿಡ್ ಮಾಡಲಾಗುತ್ತದೆ, ನಂತರ ಪೂರ್ಣಗೊಳಿಸಲ್ಪಡುತ್ತದೆ.

ರಾಜ್ಯಗಳು ಅಗತ್ಯ ಸಂಪನ್ಮೂಲಗಳನ್ನು ಹೊಂದಿಲ್ಲದೇ ಇದ್ದಾಗ ಯೋಜನೆಗಳನ್ನು ಪೂರೈಸಿಕೊಳ್ಳುವ ಒಂದು ಮಾರ್ಗವಾಗಿ ರಾಜ್ಯ ಸಾಗಣೆ ಇಲಾಖೆಗಳು (DOTs) ಸಾಮಾನ್ಯವಾಗಿ ವಿನ್ಯಾಸ-ರಚನೆ ಗುತ್ತಿಗೆಗಳನ್ನು ಉಪಯೋಗಿಸುತ್ತಾರೆಂದು ನ್ಯಾಷನಲ್ ಅಸ್ಫಾಲ್ಟ್ ಪೇವ್ಮೆಂಟ್ ಅಸೋಸಿಯೇಷನ್ (NAPA) ಗೆ ವಾಸ್ತುಶಿಲ್ಪದ ನಿರ್ದೇಶಕ ಕೆಂಟ್ ಹ್ಯಾನ್ಸೆನ್ ಸೂಚಿಸಿದರು. DOTs ಗಳಲ್ಲಿ, ವಿನ್ಯಾಸ ಮಾಡಿ ರಚಿಸುವ ಗುತ್ತಿಗೆಗಳನ್ನು ಸಾಮಾನ್ಯವಾಗಿ ಬೃಹತ್ ಯೋಜನೆಗಳಿಗೆ ಉಪಯೋಗಿಸುತ್ತಾರೆ.[೨]

ಆಡಳಿತ ಸಂಪಾದಿಸುವಿಕೆಯ ವ್ಯವಸ್ಥೆಗಳು[ಬದಲಾಯಿಸಿ]

ಈ ವ್ಯವಸ್ಥೆಯಲ್ಲಿ ವಿನ್ಯಾಸಗಾರರು (ವಾಸ್ತುಶಿಲ್ಪಿ ಅಥವಾ ಯಂತ್ರಶಿಲ್ಪಿ), ನಿರ್ಮಾಣ ಪ್ರಬಂಧಕ, ಮತ್ತು ವ್ಯಕ್ತಿಗತ ವಿವಿಧ ಕೆಲಸಗಳ ಗುತ್ತಿಗೆದಾರರ ಜೊತೆ ಪ್ರತ್ಯೇಕ ಒಪ್ಪಂದಗಳಿಗೆ ಪ್ರವೇಶಿಸುವುದರ ಮೂಲಕ ಸಂಪಾದನೆಯಲ್ಲಿ ಗ್ರಾಹಕನು ಚುರುಕಾದ ಪಾತ್ರವಹಿಸುತ್ತಾನೆ. ಗ್ರಾಹಕನು ಕರಾರಿಗೆ ಸಂಬಂಧಪಟ್ಟ ಕರ್ತವ್ಯ ನಿರ್ವಹಿಸಿದರೆ, ನಿರ್ಮಾಣ ಅಥವಾ ಯೋಜನಾ ವ್ಯವಸ್ಥಾಪಕರು ಪ್ರತ್ಯೇಕ ವಿವಿಧ ಕೆಲಸಗಳ ಗುತ್ತಿಗೆಗಳನ್ನು ನಿರ್ವಹಿಸುವ ಸಕ್ರಿಯ ಪಾತ್ರ ವಹಿಸುತ್ತಾರೆ ಹಾಗೂ ಅವರೆಲ್ಲರೂ ಒಂದು ಗೂಡಿ ಸುಸೂತ್ರವಾಗಿ ಮತ್ತು ಪರಿಣಾಮಕಾರಿಯಾಗಿ ಕೆಲಸಮಾಡಲು ಭರವಸೆ ಕೊಡುತ್ತಾರೆ.

ಪ್ರಾಪ್ತಿಯನ್ನು ತ್ವರಿತಗೊಳಿಸುವ ಕಾರ್ಯವಿಧಾನಗಳು, ಒಪ್ಪಂದದ್ದುದ್ದಕ್ಕೂ ವಿನ್ಯಾಸದ ಮಾರ್ಪಾಡಿನಲ್ಲಿ ಗ್ರಾಹಕನಿಗೆ ಹೆಚ್ಚಿನ ನಮನೀಯತೆಯನ್ನು ಅನುವು ಮಾಡಿಕೊಡುವುದು, ವ್ಯಕ್ತಿಗತ ಕೆಲಸದ ಗುತ್ತಿಗೆದಾರರನ್ನು ನೇಮಿಸುವ ಸಾಮರ್ಥ್ಯ, ಕರಾರಿನ ಸಾದ್ಯಂತವಾಗಿ ಪ್ರತಿ ವ್ಯಕ್ತಿಯ ಮೇಲೂ ಪ್ರತ್ಯೇಕ ಗುತ್ತಿಗೆಗೆ ಸಂಬಂಧಪಟ್ಟ ಜವಾಬ್ದಾರಿ, ಮತ್ತು ಗ್ರಾಹಕರ ಹೆಚ್ಚಿನ ಹಿಡಿತವನ್ನು ಒದಗಿಸಲು ಕಾರ್ಯನಿರ್ವಹಣಾ ಗಳಿಕೆಯ ಪದ್ಧತಿಗಳು ಸಾಮಾನ್ಯವಾಗಿ ಉಪಯೋಗಿಸಲ್ಪಡುತ್ತವೆ.

ಕಾನೂನು ಪರಿಧಿ ಹೊಂದಿರುವ ಅಧಿಕಾರ[ಬದಲಾಯಿಸಿ]

ನಿರ್ಮಾಣದಲ್ಲಿ, ನ್ಯಾಯಾಧಿಕಾರದ ವ್ಯಾಪ್ತಿಯಲ್ಲಿರುವ ಅಧಿಕಾರವು (AHJ) ಒಂದು ಸರ್ಕಾರಿ ಸೇವೆ ಒದಗಿಸುವ ಸಂಸ್ಥೆ ಅಥವಾ ಉಪ ಸಂಸ್ಥೆ, ಇದು ನಿರ್ಮಾಣ ಕಾರ್ಯವಿಧಾನವನ್ನು ವ್ಯವಸ್ಥೆಮಾಡುತ್ತದೆ. ಅತ್ಯಂತ ಹೆಚ್ಚಿನ ಸಂದರ್ಭಗಳಲ್ಲಿ, ಇದು ಕಟ್ಟಡವು ನೆಲೆಗೊಂಡಿರುವ ಪ್ರದೇಶದ ಪುರಸಭೆಯದಾಗಿರುತ್ತದೆ. ಆದರೂ, ಪುರಸಭಾ ಅಧಿಕಾರಗಳಾಚೆ ನೆರವೇರಿಸಿದ ನಿರ್ಮಾಣ ಕಾರ್ಯವು ಸಾಮಾನ್ಯವಾಗಿ ಮಾಲಿಕತ್ವದ ಪ್ರಾಧಿಕಾರದಿಂದ ನೇರವಾಗಿ ವ್ಯವಸ್ಥೆಮಾಡಲ್ಪಡುತ್ತದೆ, ಆ ಸಂದರ್ಭದಲ್ಲಿ ಅದೇ AHJ ಆಗುತ್ತದೆ.

ಒಂದು ಕಟ್ಟಡದ ಯೋಜನಾವಧಿಯಲ್ಲಿ, AHJ ಯ ವಲಯ ಹಾಗೂ ಯೋಜನಾ ಸಮಿತಿಗಳು ಪುರಸಭೆಯ ಸಾಮಾನ್ಯ ವಿನ್ಯಾಸ ಹಾಗೂ ವಲಯದ ಕಟ್ಟುಪಾಡುಗಳ ಜೊತೆ ಪರ್ಯಾಲೋಚನೆಯ ಕಟ್ಟಡವು ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ ಎಂಬುದನ್ನು ಪರಿಶೀಲಿಸುತ್ತಾರೆ. ಒಮ್ಮೆ ಆ ಆಲೋಚನೆಯ ಕಟ್ಟಡವು ಮಂಜೂರು ಮಾಡಲ್ಪಟ್ಟಾಗ, ವಿವರವಾದ ಲೋಕೋಪಯೋಗಿ, ವಾಸ್ತುಶಿಲ್ಪದ ಹಾಗೂ ರಚನಾತ್ಮಕ ಯೋಜನಾ ನಿರ್ಮಾಣದ ಕಾನೂನು ಮತ್ತು ಕೆಲವು ವೇಳೆ ವರ್ತಮಾನದ ಮೂಲಭೂತ ಸೌಕರ್ಯಗಳ ಜೊತೆ ಹೊಂದಿಕೆಯಾಗುವಂತೆ ಅಂಗೀಕಾರವನ್ನು ನಿರ್ಧರಿಸಲು ಪುರಸಭಾ ನಿರ್ಮಾಣ ಇಲಾಖೆಗೆ (ಮತ್ತು ಹಲವು ವೇಳೆ ಲೋಕೋಪಯೋಗಿ ಇಲಾಖೆಗೆ) ಒಪ್ಪಿಸಬೇಕು. ಸಾಮಾನ್ಯವಾಗಿ, ಪುರಸಭಾ ಅಗ್ನಿಶಾಮಕ ಇಲಾಖೆಯು ಅಗ್ನಿ-ಸುರಕ್ಷತೆಯ ಶಾಸನಗಳು ಹಾಗೂ ನಿಯಮಗಳ ಜೊತೆ ಅಂಗೀಕಾರಕ್ಕಾಗಿ ಯೋಜನೆಗಳನ್ನು ಪರಿಶೀಲಿಸುತ್ತದೆ.

ಕನ್ಸಾಸ್ ನಗರದಲ್ಲಿನ ಒಂದು ಕಟ್ಟಡದ ನಿರ್ಮಾಣ

ಅಡಿಪಾಯ ಅಗಿಯುವುದಕ್ಕಿಂತ ಮುಂಚೆ, ಭೂಮಿಯ ಕೆಳಗಿನ ಸೇವಾಸೌಲಭ್ಯದ ಲೈನುಗಳನ್ನು ಗುರುತುಮಾಡುವುದನ್ನು ನಿಶ್ಚಿತ ಗೊಳಿಸಲು ಡಿಗ್ ಸೇಫ್ ನಂತಹ ಒಂದು ಕಂಪನಿಯ ಮುಖಾಂತರವಾಗಲಿ ಅಥವಾ ನೇರವಾಗಿಯಾಗಲಿ ಸೇವಾಸೌಲಭ್ಯದ ಕಂಪನಿಗೆ ಸಾಂಕೇತಿಕವಾಗಿ ಗುತ್ತಿಗೆದಾರರು ತಿಳಿಯಪಡಿಸಬೇಕಾಗುತ್ತದೆ. ಒಂದು ತಾತ್ಕಾಲಿಕ ಹಾಳಾಗುವಿಕೆ ಹಾಗೂ ಸಾಧ್ಯತೆಯುಳ್ಳ ಅಪಾಯಕಾರಿ ಪರಿಸ್ಥಿತಿಗಳನ್ನು ಉಂಟುಮಾಡಬಹುದಾದ ಹಾಲಿ ವಿದ್ಯುತ್, ನೀರು, ಕೊಳಚೆ ನೀರಿನ ಮಾರ್ಗ, ಫೋನು, ಮತ್ತು ಕೇಬಲ್ ಅನುಕೂಲತೆಗಳಿಗೆ ನಷ್ಟದ ಸಂಭಾವ್ಯತೆಗಳನ್ನು ಇದು ಕಡಿಮೆಗೊಳಿಸುತ್ತದೆ. ಕಟ್ಟಡದ ನಿರ್ಮಾಣಾವಧಿಯಲ್ಲಿ, ಅನುಮೋದಿಸಲ್ಪಟ್ಟ ನಕ್ಷೆಗಳು ಹಾಗೂ ಸ್ಥಳೀಯ ಕಟ್ಟಡದ ಕಾನೂನು ಗಳಿಗೆ ನಿರ್ಮಾಣವು ಬದ್ಧವಾಗಿರುವುದನ್ನು ದೃಢಪಡಿಸಿಕೊಳ್ಳಲು ಪುರಸಭಾ ಕಟ್ಟಡದ ತಪಾಸಣಾಧಿಕಾರಿಯು ಕಟ್ಟಡದ ನಿರ್ಮಾಣವನ್ನು ನಿಯತಕಾಲಿಕವಾಗಿ ಪರೀಕ್ಷೆಮಾಡುತ್ತಾರೆ. ಒಮ್ಮೆ ನಿರ್ಮಾಣವು ಸಂಪೂರ್ನವಾಗಿ ಹಾಗೂ ಅಂತಿಮ ತಪಾಸಣೆಯು ಅಂಗೀಕಾರವಾದಾಗ, ಸ್ವಾಧೀನಕ್ಕೆ ತೆಗೆದುಕೊಳ್ಳುವ ಒಪ್ಪಿಗೆ ಕೊಡಬಹುದು.

ಕಾರ್ಯನಿರ್ವಹಿಸುತ್ತಿರುವ ಕಟ್ಟಡವು ಅಗ್ನಿಶಾಮಕ ಶಾಸನ ಗಳ ಜೊತೆ ಅಂಗೀಕಾರ ಹೊಂದಿರಬೇಕು. ಅಗ್ನಿಶಾಮಕ ಕಾಯ್ದೆಯು ಸ್ಥಳೀಯ ಅಗ್ನಿಶಾಮಕ ಇಲಾಖೆಯಿಂದ ಜಾರಿಗೊಳಿಸಲ್ಪಡುತ್ತದೆ.

ಅದರ ಉಪಯೋಗ, ವಿಸ್ತರಣೆ, ಕಟ್ಟಡದ ಭದ್ರತೆ ಮತ್ತು ಅಗ್ನಿಸುರಕ್ಷತಾ ವಿಷಯಗಳನ್ನು ಒಳಗೊಂಡಂತಹ ಸುರಕ್ಷತೆಯ ಮೇಲೆ ಪ್ರಭಾವ ಬೀರುವ ಕಟ್ಟಡಕ್ಕೆ ಮಾಡಬಹುದಾದ ಬದಲಾವಣೆಗಳು ಸಾಮಾನ್ಯವಾಗಿ ಕಟ್ಟಡದ ನಿಯಮದ ಸಂಬಂಧವಾಗಿ ಪರಿಶೀಲನೆಗೆ AHJ ಯ ಒಪ್ಪಿಗೆಯು ಅವಶ್ಯವಾಗಿರುತ್ತದೆ.

ಯು ಕೆ ದಲ್ಲಿನ ನಿಯಮಗಳಿಗೆ, ಯೋಜನಾ ಒಪ್ಪಿಗೆಯನ್ನು ನೋಡಿರಿ.

ನಿರ್ಮಾಣದಲ್ಲಿ ವೃತ್ತಿಜೀವನ[ಬದಲಾಯಿಸಿ]

USA ದಲ್ಲಿನ ಮೆಸ್ಯಾಚುಸೆಟ್ಸ್ ಜನರಲ್ ಹಾಸ್ಪಿಟಲ್ ನಲ್ಲಿ, ಕಬ್ಬಿಣದ ಕೆಲಸಗಾರರು ಸ್ಟೀಲ್ ನ ಚೌಕಟ್ಟುಗಳನ್ನು ಹೊಸ ಕಟ್ಟಡಕ್ಕೆಂದು ಜೋಡಿಸುತ್ತಿದ್ದಾರೆ

ದೇಶದಿಂದ ದೇಶಕ್ಕೆ ಬದಲಾಗುವಂತಹ ನಿರ್ಮಾಣದ ಉದ್ದಿಮೆಯೊಳಗೆ ಬೇರೆ ಬೇರೆ ವೃತ್ತಿಜೀವನಗಳಿಗೆ ಅನೇಕ ಮಾರ್ಗಗಳಿವೆ. ಆದಾಗ್ಯೂ, ಅಂತರಾಷ್ಟ್ರೀಯವಾಗಿ ಸಾಮಾನ್ಯವಾದಂತಹ ಶೈಕ್ಷಣಿಕ ಅರ್ಹತೆಯ ಹಿನ್ನಲೆಯ ಮೇಲೆ ಆಧರಿಸಿದ ವೃತ್ತಿಜೀವನಗಳ ಮೂರು ಮುಖ್ಯ ಶ್ರೇಣಿಗಳಿವೆ:

  • ಪರಿಣಿತನಲ್ಲದ ಹಾಗೂ ಅರ್ಧ ಪರಿಣಿತನಾದ - ಸ್ವಲ್ಪ ಅಥವಾ ಯಾವುದೇ ನಿರ್ಮಾಣದ ಅರ್ಹತೆಯಿಲ್ಲದಿರುವ ನಿವೇಶನದ ಸಾಮಾನ್ಯ ಕೆಲಸಗಾರ.
  • ನುರಿತವರು - ತಮ್ಮ ಹಸ್ತ ಚಾತುರ್ಯ ಅಥವಾ ಉದ್ಯೋಗದಲ್ಲಿ ಅಗಾಧ ಜ್ಞಾನ ಮತ್ತು ಅನುಭವ ಹೊಂದಿದ ನಿವೇಶನದ ಕಾರ್ಯನಿರ್ವಾಹಕರು.
  • ತಂತ್ರಜ್ಞಾನ ಮತ್ತು ಕಾರ್ಯನಿರ್ವಹಣೆ - ಸಾಮಾನ್ಯವಾಗಿ ವಿಶ್ವವಿದ್ಯಾಲಯದ ಪದವಿಯ ಅರ್ಹತೆಗಳನ್ನು ಹೊಂದಿದ್ದು ನಿರ್ಮಾಣದ ಕಾರ್ಯವಿಧಾನವನ್ನು ವಿನ್ಯಾಸಗೊಳಿಸಲು ತರಬೇತಿ ಪಡೆದ, ನಿರ್ವಹಣೆ ಹಾಗೂ ಅದೇಶಿಸಲು ಅತ್ಯಂತ ಹೆಚ್ಚು ಶೈಕ್ಷಣಿಕ ಅರ್ಹತೆಯುಳ್ಳ ಸಿಬ್ಬಂದಿ.

ಸಾಮಾನ್ಯವಾಗಿ ಯು ಕೆ ದಲ್ಲಿ ವೃತ್ತಿಗೆ ಸಂಬಂಧಿತ ವಿಷಯದ ಕ್ಷೇತ್ರಗಳಲ್ಲಿ ಕೌಶಲ್ಯ ಪೂರ್ಣ ಉದ್ಯೋಗಗಳು ಹೆಚ್ಚಿನ ಶೈಕ್ಷಣಿಕ ಅರ್ಹತೆಗಳನ್ನು ಅಪೇಕ್ಷಿಸುತ್ತವೆ. ಈ ಯೋಗ್ಯತೆಗಳು ಕಡ್ಡಾಯ ಶಿಕ್ಷಣವು ಮುಗಿದ ನಂತರ ನೇರವಾಗಿಯಾಗಲಿ ಇಲ್ಲವೆ "ಕೆಲಸದ ಮೇಲಿರುವ" ಸೇವಾಕಾಲದ ತರಬೇತಿಯ ಮೂಲಕವಾಗಲಿ ಪಡೆಯಲಾಗುತ್ತದೆ. ಯು ಕೆ ದಲ್ಲಿ, ನಿರ್ಮಾಣಕ್ಕೆ ಸಂಬಂಧಿತ 8500 ಸೇವಾಕಾಲದ ತರಬೇತಿಗಳು 2007 ರಲ್ಲಿ ಪ್ರಾರಂಭಿಸಲ್ಪಟ್ಟವು.[೩]

ಹೆಚ್ಚಿನ ತಂತ್ರಜ್ಞಾನದ ಪರಿಣಿತಿಯು ಅಪೇಕ್ಷಣೀಯವಾದ ಕಾರಣ ತಂತ್ರಜ್ಞಾನ ಹಾಗೂ ತಜ್ಞ ಉದ್ಯೋಗಗಳು ವಿಶೇಷವಾದ ಉತ್ತಮ ತರಬೇತಿಯನ್ನು ಕೋರುತ್ತವೆ. ಈ ವೃತ್ತಿಗಳು ಸಹ ಹೆಚ್ಚಿನ ಕಾನೂನಿನ ಜವಾಬ್ದಾರಿಯನ್ನು ಹೊರುತ್ತವೆ. ಶೈಕ್ಷಣಿಕ ಅಗತ್ಯತೆಗಳ ಒಂದು ರೂಪರೇಖೆಯ ಸಹಿತ ಮುಖ್ಯ ವೃತ್ತಿಜೀವನಗಳ ಒಂದು ಚಿಕ್ಕ ಪಟ್ಟಿಯನ್ನು ಈ ಕೆಳಗೆ ಕೊಡಲಾಗಿದೆ:[೪]

ಇತಿಹಾಸ[ಬದಲಾಯಿಸಿ]

ಸರಳ ಉಪಕರಣಗಳು ಅಥವ ಕೈಯಿಂದ ನಿರ್ಮಿಸುವ, ಗುಡಿಸಲುಗಳು ಹಾಗೂ ಆಶ್ರಯಗಳು ಮೊದಲ ಕಟ್ಟಡಗಳಾಗಿದ್ದವು. ತಾಮ್ರಯುಗದ ಕಾಲದಲ್ಲಿ ನಗರಗಳು ಬೆಳೆದಂತೆ, ಇಟ್ಟಿಗೆಯ ಗಾರೆ ಕೆಲಸಗಾರರು ಮತ್ತು ಬಡಗಿಗಳಂತಹ ವೃತ್ತಿಪರ ಕುಶಲ ಕೆಲಸಗಾರರ ಒಂದು ವರ್ಗವು ಕಾಣಿಸಿಕೊಂಡಿತು. ಸಾಂದರ್ಭಿಕವಾಗಿ, ನಿರ್ಮಾಣದ ಕೆಲಸಕ್ಕೆ ಗುಲಾಮರನ್ನು ಉಪಯೋಗಿಸಿಕೊಳ್ಳುತ್ತಿದ್ದರು. ಮಧ್ಯ ಯುಗದಲ್ಲಿ ,ಇವರೆಲ್ಲರೂ ವೃತ್ತಿ ಸಂಘಗಳಾಗಿ ಸಂಯೋಜಿಸಲ್ಪಟ್ಟರು. 19 ನೇ ಶತಮಾನದಲ್ಲಿ, ಉಗಿ-ಶಕ್ತಿಯ ಯಂತ್ರಗಳು ಕಾಣಿಸಿಕೊಂಡವು ಹಾಗೂ ನಂತರ ಡೀಸೆಲ್ ಮತ್ತು ವಿದ್ಯುತ್ತಿನ ಶಕ್ತಿಯಿಂದ ನಡೆಯುವಂತಹ ಯಂತ್ರಗಳಾದ ಕ್ರೇನ್ ಗಳು, ಎಕ್ಸವೇಟರ್ ಗಳು ಮತ್ತು ಬುಲ್ಡೊಜರ್ ಗಳು ಕಾಣಿಸಿಕೊಂಡವು.

ಆಕರಗಳು[ಬದಲಾಯಿಸಿ]

  1. ಸ್ಕೂಲ್ ಜಿಲ್ಲೆಗಳು ಗಮನಾರ್ಹವಾಗಿ ಪರ್ಯಾಯ ಆರ್ಥಿಕ ವ್ಯವಸ್ಥೆಯನ್ನು ಕೋರುತ್ತವೆ: ನಾರ್ಥ್ ಕೌಂಟಿ ಟೈಮ್ಸ್ - ಕ್ಯಾಲಿಫೋರ್ನಿಯಾ
  2. Cronin, Jeff (2005). "S. Carolina Court to Decide Legality of Design-Build Bids". Construction Equipment Guide. Archived from the original on 2006-10-19. Retrieved 2008-01-04.
  3. http://www.cskills.org/workinconstr/routesintoconstruction/apprenticeships/index.aspx
  4. "ಆರ್ಕೈವ್ ನಕಲು". Archived from the original on 2009-06-08. Retrieved 2010-08-03.

ಬಾಹ್ಯ ಕೊಂಡಿಗಳು[ಬದಲಾಯಿಸಿ]

Wikiversity
Wikiversity
At Wikiversity you can learn more and teach others about ನಿರ್ಮಾಣ at:
"https://kn.wikipedia.org/w/index.php?title=ನಿರ್ಮಾಣ&oldid=1184548" ಇಂದ ಪಡೆಯಲ್ಪಟ್ಟಿದೆ