ವಿಷಯಕ್ಕೆ ಹೋಗು

ಗುಡಿಸಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗುಡಿಸಲು ವಿವಿಧ ಸ್ಥಳೀಯ ಸಾಮಗ್ರಿಗಳಿಂದ ನಿರ್ಮಿಸಬಹುದಾದ ಒಂದು ಹಳೆಯ ತರಹದ ನೆಲೆ/ನಿವಾಸ. ಕುಟಿ, ಕುಟೀರ ಪರ್ಯಾಯ ನಾಮಗಳು. ಗುಡಿಸಲುಗಳು ದೇಶೀಯ ವಾಸ್ತುಶಿಲ್ಪದ ಪ್ರಕಾರವಾಗಿವೆ ಏಕೆಂದರೆ ಅವನ್ನು ಕಟ್ಟಿಗೆ, ಹಿಮ, ಮಂಜುಗಡ್ಡೆ, ಕಲ್ಲು, ಹುಲ್ಲು, ತಾಳೆ ಎಲೆಗಳು, ಶಾಖೆಗಳು, ಪ್ರಾಣಿಯ ಚರ್ಮ, ಬಟ್ಟೆ ಅಥವಾ ಮಣ್ಣಿನಂತಹ ಸುಲಭವಾಗಿ ಲಭ್ಯವಿರುವ ವಸ್ತುಗಳಿಂದ, ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದ ತಂತ್ರಗಳನ್ನು ಬಳಸಿ ಕಟ್ಟಲಾಗುತ್ತದೆ. ಗುಡಿಸಲು ಮನೆಗಿಂತ ಕಡಿಮೆ ಗುಣಮಟ್ಟದ್ದಾಗಿರುತ್ತದೆ ಆದರೆ ಗುಡಾರದಂತಹ ಆಶ್ರಯ ತಾಣಗಳಿಗಿಂತ ಹೆಚ್ಚಿನ ಗುಣಮಟ್ಟದ್ದಾಗಿರುತ್ತದೆ. ಇದನ್ನು ತಾತ್ಕಾಲಿಕ ಅಥವಾ ಋತುಕಾಲಿಕ ಆಶ್ರಯಸ್ಥಳವಾಗಿ ಅಥವಾ ಪ್ರಾಚೀನ ಸಮಾಜಗಳಲ್ಲಿ ಶಾಶ್ವತ ನೆಲೆಯಾಗಿ ಬಳಸಲಾಗುತ್ತದೆ. ಗಂಡಸರು ಮರಗಳಿಂದ ಶಾಖೆಗಳನ್ನು ಕತ್ತರಿಸಿ ಬೇಡವಾದ ಭಾಗಗಳನ್ನು ತೆಗೆದೆಸೆಯುತ್ತಾರೆ. ನಂತರ ಬಣ್ಣ ಬದಲಿಸಲು ಬೆಂಕಿಯಲ್ಲಿ ಅವನ್ನು ಇಡಲಾಗುತ್ತದೆ. ಆಮೇಲೆ ತೊಗಟೆಯನ್ನು ತೆಗೆಯಲಾಗುತ್ತದೆ. ನಂತರ, ಅವನ್ನು ಬಾಗಿದ ಆಕಾರದಲ್ಲಿ ಬಗ್ಗಿಸಿ ನಿರ್ದಿಷ್ಟ ಆಕಾರ ಬರಲು ಕೆಲವು ದಿನ ನೆಲಕ್ಕೆ ಬಿಗಿದಿಡಲಾಗುತ್ತದೆ. ಅದೇ ವೇಳೆ, ಹೆಂಗಸರು ನದಿಯ ಜೊಂಡುಗಳನ್ನು ಒಂದು ಗುಡಿಸಿಲಿಗೆ ೨೦-೪೦ ಹಾಸುಗಳ ಲೆಕ್ಕದಂತೆ ಕೈಯಿಂದ ನೇಯುತ್ತಾರೆ. ಇವನ್ನು ಚೌಕಟ್ಟಿನ ಮೇಲೆ ಎಚ್ಚರಿಕೆಯಿಂದ ಇರಿಸಿ ಆ ಸ್ಥಳದಲ್ಲಿ ಕಟ್ಟಲಾಗುತ್ತದೆ. ಗುಡಿಸಲುಗಳು ಬಹುಮಟ್ಟಿಗೆ ಎಲ್ಲ ಅಲೆಮಾರಿ ಸಂಸ್ಕೃತಿಗಳಲ್ಲಿ ಅಸ್ತಿತ್ವದಲ್ಲಿವೆ. ಕೆಲವು ಗುಡಿಸಲುಗಳನ್ನು ಎತ್ತಿ ಸಾಗಿಸಬಹುದು ಮತ್ತು ಬಹುತೇಕ ಹವಾಮಾನ ಪರಿಸ್ಥಿತಿಗಳನ್ನು ತಡೆದುಕೊಳ್ಳಬಲ್ಲವು.

"https://kn.wikipedia.org/w/index.php?title=ಗುಡಿಸಲು&oldid=889290" ಇಂದ ಪಡೆಯಲ್ಪಟ್ಟಿದೆ