ಮೈಥಿಲಿ ಶರಣ್ ಗುಪ್ತ
ಮೈಥಿಲಿ ಶರಣ್ ಗುಪ್ತ मैथिली शरण गुप्त | |
---|---|
[[File:|frameless|center=yes|alt=ಮೈಥಿಲಿ ಶರಣ್ ಗುಪ್ತ]] | |
ಜನನ | ಲಾಲಾ ಮದನ್ ಮೋಹನ್ ಜು ೧೮೮೬ ಆಗಸ್ಟ್ ೩, ಚಿರ್ಗಾಂವ್, ಝಾನ್ಸಿ, ಉತ್ತರ ಪ್ರದೇಶ, ಬ್ರಿಟಿಷ್ ಭಾರತ |
ಮರಣ | ೧೯೬೪ ಡಿಸೆಂಬರ್, ೧೨ (೭೮ ವರ್ಷ) |
ವೃತ್ತಿ | ಕವಿ, ರಾಜಕಾರಣಿ, ನಾಟಕಕಾರ, ಅನುವಾದಕ |
ರಾಷ್ಟ್ರೀಯತೆ | ಭಾರತೀಯ |
ಪ್ರಮುಖ ಕೆಲಸ(ಗಳು) | ಪಂಚವಟಿ, ಸಿದ್ಧರಾಜ್, ಸಾಕೇತ್, ಯಶೋದಾರ, ವಿಶ್ವರಾಜ್ಯ, ಇತ್ಯಾದಿ |
ಪ್ರಮುಖ ಪ್ರಶಸ್ತಿ(ಗಳು) | ಪದ್ಮಭೂಷಣ (೧೯೫೪) |
ಮೈಥಿಲಿ ಶರಣ್ ಗುಪ್ತರವರು (೧೮೮೬ ಆಗಸ್ಟ್ ೩-೧೯೬೪ ಡಿಸೆಂಬರ್ ೧೨) ಪ್ರಮುಖ ಆಧುನಿಕ ಹಿಂದಿ ಕವಿಗಳಲ್ಲೊಬ್ಬರು. ಖಾರಿ ಬೊಲಿ ಎಂಬ ಸಾಮಾನ್ಯ ಆಡುಭಾಷೆಯಲ್ಲಿ ಕವನಗಳನ್ನು ಬರೆಯುವದರಲ್ಲಿ ಮೊದಲಿಗರಾದರು. ಇವರ ಸಮಯದಲ್ಲಿ ಹಿಂದಿ ಭಾಷೆಯ ಕೃತಿ, ಕವನಗಳು ಹೆಚ್ಚು ಜನಪ್ರಿಯವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಹಿಂದಿ ಬರವಣಿಗೆಯಲ್ಲಿ ಬಳಸುತ್ತಿದ್ದ ಬ್ರಜಾಭಾಷಾ ಅಡುಭಾಷೆಯ ವಿರುದ್ಧ ಕಾರಿ ಬೊಲಿ ಶೈಲಿಯನ್ನು ಬಳಸಿದ ಮೊದಲ ವ್ಯಕ್ತಿಯಾದರು. ಆಧುನಿಕ ಹಿಂದಿ ಸಾಹಿತ್ಯದ ಲೋಕದಲ್ಲಿ ಮೈಥಿಲಿ ಶರಣ್ ಗುಪ್ತ್‌ರ ಹೆಸರು ಚಿರಪರಿಚಿತ. ಮೈಥಿಲಿ ಶರಣ್ ಗುಪ್ತರವರು ರಾಷ್ಟ್ರಕವಿಯು ಹೌದು. ಗುಪ್ತರಿಗೆ ದೇಶದ ಬಗ್ಗೆ ಹೆಚ್ಚು ಕಾಳಜಿ ಇತ್ತು. ಆದ್ದರಿಂದ ಅವರು ಹೆಚ್ಚಾಗಿ ದೇಶಭಕ್ತಿಗೀತೆಗಳು ಮತ್ತು ರಾಷ್ಟ್ರಿಯತೆ ಬಗ್ಗೆ ಕವಿತೆಗಳನ್ನು ಬರೆಯುತ್ತಿದ್ದರು. ಭಾರತದ ಮೂರನೇಯ(ಆಗಿನ ಎರಡನೆಯ) ದೊಡ್ಡ ನಾಗರಿಕ ಗೌರವವಾದ ಪದ್ಮಭೂಷಣವನ್ನು ಅವರಿಗೆ ನೀಡಲಾಗಿದೆ.
ಆರಂಭಿಕ ಜೇವನ
[ಬದಲಾಯಿಸಿ]ಗುಪ್ತರವರು ಉತ್ತರ ಪ್ರದೇಶ ರಾಜ್ಯದ, ಝಾನ್ಸಿ ತಾಲೂಕಿನ ಚಿರ್ಗಾಂವ್ ಹಳ್ಳಿಯಲ್ಲಿ[೧] ಗಹೊಯಿ ಕುಟುಂಬದಲ್ಲಿ ೧೮೮೬ ಆಗಸ್ಟ್ ೩ರಂದು ಜನಿಸಿದರು. ಗುಪ್ತರವರ ತಂದೆ ಮತ್ತು ತಾಯಿಯ ಹೆಸರು ಸೇಥ್ ರಾಮಚರಣ್ ಮತ್ತು ಕಾಶಿಭಾಯಿ. 'ಗಹೊಯಿ' ಎಂಬುದು ಬ್ರಿಟಿಷ್-ಆಳ್ವಿಕೆಯಲ್ಲಿ ಕೇಂದ್ರ ಭಾರತದ ವಿವಿಧ ನಗರಗಳಲ್ಲಿ ವಾಸಿಸುತ್ತಿದ ಮತ್ತು ವ್ಯಾಪಾರ ಮಾಡುತ್ತಿದ್ದ ಕುಟುಂಬವನ್ನು ವಿವರಿಸಲು ಬಳಸುತ್ತಿದ್ದ ಪದ. ಹೀಗಾಗಿ, ಮೈಥಿಲಿ ಶರಣ್ ಗುಪ್ತರ ತಂದೆ ಸೇಥ್ ರಾಮಚರಣ್ ಗುಪ್ತ ವ್ಯಾಪಾರಿ ಅಥವಾ ವೃತ್ತಿಯಲ್ಲಿ ವರ್ತಕನಾಗಿದ್ದರು. ಮೈಥಿಲಿಯವರು ತಮ್ಮ ಚಿಕ್ಕವಯಸ್ಸಿನಲ್ಲಿ ಶಾಲೆಗೆ ಹೋಗಲು ಇಷ್ಟಪಡುತ್ತಿರಲಿಲ್ಲಿ, ಇದರಿಂದಾಗಿ ಇವರ ತಂದೆಯವರು ಮನೆಗೆ ಶಿಕ್ಷಕರನ್ನು ಕರೆಸಿ ಶಿಕ್ಷಣವನ್ನು ಕೊಡಿಸುತ್ತಿದರು.[೨] ಗುಪ್ತರವರು ಬಾಲ್ಯದಲ್ಲಿ ಸಂಸ್ಕೃತ,ಆಂಗ್ಲ ಮತ್ತು ಬಂಗಾಳಿ ಬಾಷೆಗಳನ್ನು ಕಲಿತರು. ಮಹಾವೀರ್ ಪ್ರಸಾದ್ ದ್ವೀವೇಧಿ ಇವರ ಗುರುಗಳು. ಹಿಂದಿ ಸಾಹಿತ್ಯ ಲೋಕವು ಕಂಡ ಅತಿ ಪ್ರಮುಖ ಬರಹಗಾರರಲ್ಲಿ ಮಹಾವೀರ್ ಪ್ರಸಾದ್ ದ್ವೀವೇಧಿರವರು ಒಬ್ಬರು. ಗುಪ್ತರಿಗೆ ೧೮೯೫ರಲ್ಲಿ ವಿವಾಹವಾಯಿತು. ಒಂಭತ್ತು ವರ್ಷಗಳ ಸಣ್ಣ ಹುಡುಗನಿದ್ದಾಗಲೆ ಮೈಥಿಲಿ ಶರಣ್ ಗುಪ್ತರವರು ವಿವಾಹ ಜೀವನವನ್ನು ಆರಂಭಿಸಿದರು. ಇವರು ಭಾರತೀಯ ಸಂಸ್ಕೃತಿ ಮತ್ತು ಇತಿಹಾಸದ ಅತಿದೊಡ್ಡ ದೈವಭಕ್ತರು. ಆದರೆ ಮೂಡನಂಬಿಕೆಗಳನ್ನು ಮತ್ತು ಟೊಳ್ಳಾದ ಆದರ್ಶಗಳನ್ನು ನಂಬುವುದಿಲ್ಲ.
ಗುಪ್ತರು ದಿವಾನ್ ಶತ್ರುಘ್ನ ಸಿಂಗ್ (ಬುಂದೇಲ್ಖಂಡಿ ರಾಯಲ್)ರ ಗುರು. ಇವರನ್ನು ಬುಂದೇಲ್ಖಂಡ್ ಕೇಸರಿ ಮತ್ತು ಬುಂದೇಲ್ಖಂಡ್ ಗಾಂಧಿ ಎಂದು ಕರೆಯಲಾಗುತ್ತದೆ.
ಸಾಹಿತ್ಯ ಕೃತಿಗಳು
[ಬದಲಾಯಿಸಿ]ಇವರು ತಮ್ಮ ಹನ್ನೆರಡನೆಯ ವಯಸ್ಸಿನಲ್ಲಿ ಕವಿತೆಗಳನ್ನು ಬರೆಯಲು ಆರಂಭಿಸಿದರು. ಇವರು ಸರಸ್ವತಿ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ಕವಿತೆಗಳನ್ನು ಬರೆಯುವ ಮೂಲಕ ಹಿಂದಿ ಸಾಹಿತ್ಯಕ್ಕೆ ಕಾಲಿಟ್ಟರು. ೧೯೨೦ರಲ್ಲಿ ತಮ್ಮ ಮೊದಲ ಪ್ರಮುಖ ಕವನ ರಂಗ್ ಮೇನ್ ಭಂಗ್ವನ್ನು ಇಂಡಿಯನ್ ಪ್ರೆಸ್‌ರವರು ಪ್ರಕಟಿಸಿದರು. ಆದ್ದರಿಂದ ೧೯೧೦ರಲ್ಲಿ ಮೈಥಿಲಿ ಶರಣ್ ಗುಪ್ತ ಜನಸಾಮಾನ್ಯರ ನಡುವೆ ತನ್ನ ಮೊದಲ ಯಶಸ್ಸಿನ ರುಚಿಯನ್ನು ಕಂಡರು. ಭಾರತ್ ಭಾರತಿ, ತನ್ನ ರಾಷ್ಟ್ರವಾದಿ ಕವಿತೆ ಭರತಖಂಡಕ್ಕೆ ಸ್ವತಂತ್ರಕ್ಕಾಗಿ ಹೋರಾಡುತ್ತಿದ್ದವರ ನಡುವೆ ಜನಪ್ರಿಯವಾಯಿತು. ಅವರ ಕವಿತೆಗಳು ಮತ್ತು ನಾಟಕಗಳ ಹೆಚ್ಚಿನ ಕಥಾವಸ್ತುವು ಪೌರಾಣಿಕ ಗ್ರಂಥಗಳಾದ ರಾಮಾಯಣ ಹಾಗು ಮಹಾಭಾರತ, ಬೌದ್ಧ ಕಥೆಗಳು ಮತ್ತು ಧಾರ್ಮಿಕ ವ್ಯಕ್ತಿಗಳ ಆಧಾರಿತವಾಗಿದ್ದವು 'ಬ್ರಜ್' ಕಲೆಯಲ್ಲಿ ತಮ್ಮದೇ ಆದ ಸ್ವಂತ ರಚನೆಗಳನ್ನು ಮಾಡಿ ಪ್ರಸಿಧ್ದಿ ಪಡೆದಿದ್ದಾರೆ. ಇವರ ಪ್ರಸಿದ್ಧ ಕೃತಿ 'ಸಾಕೇತ್'ರಾಮಾಯಣದ ಲಕ್ಷ್ಮಣನ ಪತ್ನಿಯಾದ ಊರ್ಮಿಳಾ ಪಾತ್ರವನ್ನು ವಿವರಿಸುತ್ತದೆ ಮತ್ತು 'ಯಶೋಧರ' ಎಂಬ ಕವನವು ಗೌತಮ ಬುದ್ಧನ ಹೆಂಡತಿ ಯಶೋಧರೆಯ ಬಗ್ಗೆ ವಿವರಿಸುತ್ತದೆ.ಇವರಿಗೆ ಆಧುನಿಕ ಮತ್ತು ಪ್ರಾಚೀನ ಸಮಾಜದ ಬಗ್ಗೆ ತುಂಬ ಆಸಕ್ತಿ ಇತ್ತು. ಆದ್ದರಿಂದ ಆಧುನಿಕ ಮತ್ತು ಪ್ರಾಚೀನ ಸಮಾಜದ ಬಗ್ಗೆ ಕೃತಿಗಳನ್ನು ಕೂಡ ಬರೆದಿದ್ದಾರೆ.ತಮ್ಮ ಕವಿತೆಗಳ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ.ಮಹಾತ್ಮ ಗಾಂಧಿಯವರ ನಂತರ ಕ್ರಾಂತಿಕಾರಿ ಸಿದ್ಧಂತಗಳ ಬಗ್ಗೆ ಅರಿವಿದ್ದವರು. ದೇಶಭಕ್ತಿ, ಸೋದರತ್ವ, ಗಾಂಧಿಯನ್ ಫಿಲಾಸಫಿ, ಮಾನವೀಯತೆ, ಅನುಕಂಪ, ಮತ್ತು ಸಹಾನುಭೊತಿ ಇವರ ಕವಿತೆಗಳಲ್ಲಿ ವ್ಯಕ್ತವಾಗಿರುತ್ತವೆ. ಇವರು ಮೊದಲು ಶಿಕ್ಷಣದ ಕಡೆ ಆಸಕ್ತಿ ಮತ್ತು ಕಾಳಜಿ ತೋರಿಸುತ್ತಿದ್ದರು. ಇವರಿಗೆ ತನ್ನ ಸುತ್ತಮುತ್ತಲಿನ ಜನರನ್ನು ಸಂತೋಷದಿಂದ ನೋಡುವುದು ಗುರಿಯಾಗಿತ್ತು. ಶುದ್ಧತೆ, ನೈತಿಕತೆ ಮತ್ತು ಸಾಂಪ್ರದಾಯಿಕ ಮಾನವ ಸಂಬಂಧಗಳ ರಕ್ಷಣೆ ಬಗ್ಗೆ 'ಪಂಚವಟಿ', 'ಜಯರ್ದ್ತ ವಧೆ,' 'ಯಶೋಧರ' ಮತ್ತು 'ಸಾಕೇತ್' ಕೃತಿಗಳು ತಿಳಿಸುತ್ತವೆ. ಗುಪ್ತರವರ "ಸಾಕೇತ್" ಇತಿಹಾಸದಲ್ಲೇ ಮೈಲುಗೈ. ಆದರೆ'ಭಾರತ ಭಾರತಿ' ಮೈಥಿಲಿಯವರ ಖ್ಯಾತ ಕೆಲಸವೆಂದು ಪರಿಗಣಿಸಲಾಗಿದೆ.
प्राण न पागल हो तुम यों, पृथ्वी पर वह प्रेम कहाँ ..
मोहमयी छलना भर है, भटको न अहो अब और यहाँ ..
ऊपर को निरखो अब तो बस मिलता है चिरमेल वहाँ ..
ಮೈಥಿಲಿರವರ ಯಶೋದರಾ.
ಅನುವಾದಗಳು
[ಬದಲಾಯಿಸಿ]ಗುಪ್ತರವರು ಕೂಡ ಇತರ ಭಾಷೆಯ ಪ್ರಮುಖ ಕೃತಿಗಳನ್ನು ಹಿಂದಿ ಭಾಷೆಗೆ ಅನುವಾದ ಮಾಡಿದ್ದಾರೆ.ಉಮರ್ ಖಯ್ಯಾಮ್‌ರವರ 'ರೊಬ್ಯಾಯತ್'ಮತ್ತು 'ಸ್ವಪ್ನವಾಸವದತ್ತ' ಎಂಬ ಸಂಸ್ಕೃತದ ನಾಟಕವನ್ನು ಅನುವಾದಿಸಿದ್ದಾರೆ.
ಸಾರ್ವಜನಿಕ ಕಛೇರಿ
[ಬದಲಾಯಿಸಿ]೧೮೪೭ರಲ್ಲಿ ಭಾರತ ಸ್ವಾತಂತ್ರದ ನಂತರ, ಗುಪ್ತರವರು ೧೫ ವರ್ಷಗಳ ಕಾಲ ರಾಜ್ಯಸಭೆಯಲ್ಲಿ ಗೌರವ ಸದಸ್ಯರಾಗಿ ಕೆಲಸ ಮಾಡಿದರು. ೧೯೬೫ರಲ್ಲಿ ತಮ್ಮ ಸಾವಿನ ತನಕ ರಾಜ್ಯಸಭೆಯ ಸದಸ್ಯರಾಗಿ ಸೇವೆಸಲ್ಲಿಸಿದರು. ಅವರಿಗೆ ೧೯೫೪ರಲ್ಲಿ ಪದ್ಮಭೂಷಣ ಪ್ರಶಸ್ತಿ ಲಭಿಸಿತ್ತು. ರಾಜಕೀಯದಲ್ಲಿ ಮೈಥಿಲಿ ಶರಣ್ ಗುಪ್ತ ಉದ್ಯೋಗಾವಕಾಶದ ಸ್ವಾತಂತ್ರ್ಯ ನಂತರ ಭಾರತದ ರಾಜಕಾರಣದಲ್ಲಿ ಸಂಕ್ಷಿಪ್ತ ವೃತ್ತಿಜೀವನವು ಹೊಂದಿತು. ಭಾರತ ಆಗಸ್ಟ್ ೧೯೪೭ರಲ್ಲಿ ಸ್ವಾತಂತ್ರ್ಯ ತನ್ನದಾಗಿಸಿಕೊಂಡ ಕೂಡಲೇ ಮೈಥಿಲಿ ಶರಣ್ ಗುಪ್ತ ಭಾರತದ ಸಂಸತ್ತಿನಲ್ಲಿ ರಾಜ್ಯಸಭೆಯ ಗೌರವ ಸದಸ್ಯರಾಗಿ ನೇಮಕಗೊಂಡರು. ರಾಜ್ಯಸಭೆಯಲ್ಲಿದ್ದ ನಿಗದಿತ ಸಮಯದಲ್ಲಿಯೂ ಮೈಥಿಲಿ ಶರಣ್ ಗುಪ್ತರು ಬರವಣಿಗೆಯನ್ನು ನಿಲ್ಲಿಸಲಿಲ್ಲ. ವಾಸ್ತವವಾಗಿ ಅವರು ಸಂಸತ್ತಿನ ಮೇಲ್ಮನೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹೇಳುವ ಸಂದರ್ಭದಲ್ಲಿ ತನ್ನ ಕಾವ್ಯಗಳಿಂದ ಸಾಲುಗಳುನ್ನು ಬಳಸುತ್ತಿದ್ದರು. ಸ್ವಾತಂತ್ರಕ್ಕಾಗಿ ಹೋರಾಡಿ ಆನೇಕ ಬಾರಿ ಜೈಲಿಗೆ ಸಹ ಹೋದವರು. ಮಹಾತ್ಮ ಗಾಂಧಿ, ರಾಜೇಂದ್ರ ಪ್ರಸಾದ್, ನೆಹರೂ ಮತ್ತು ವಿನೋಬಾ ಭಾವೆ ಜೊತೆಗಿನ ಇವರ ಸಂಪರ್ಕದ ಹಾದಿ ಪ್ರಾಯೋಗಿಕವಾಗಿತ್ತು ಮತ್ತು ಚಳುವಳಿಗಳಿಗೆ ಬೆಂಬಲಿಗರಾದರು. ಗಾಂಧಿಯ ಕಾವ್ಯಾತ್ಮಕ ಗ್ರಂಥಗಳನ್ನು ಓದುವಾ ಮೂಲಕ ಮೈಥಿಲಿಯವರಿಗೆ ದೇಶಭಕ್ತಿ ಹೆಚ್ಚಾಯಿತು. ಇವರು ಇತರ ಕವಿಗಳಿಗಿಂತ ಭಿನ್ನವಾಗಿ ಆಲೋಚಿಸುತ್ತಿದ್ದರು ಮತ್ತು ಕವಿತೆಗಳನ್ನು ಕೂಡ ಭಿನ್ನವಾಗಿ ಬರೆಯುತ್ತಿದ್ದರು. ಆದ್ದರಿಂದ ಇವರಿಗೆ ಸಾಮಾಜದಲ್ಲಿ ವಿಶೇಷ ಸ್ಥಾನಮಾನವಿತ್ತು.
ಕ್ರಿಯೇಟಿವ್ ಶೈಲಿ
[ಬದಲಾಯಿಸಿ]ಮೈಥಿಲಿಯವರ ಕೃತಿಗಳು, ಕವನಗಳು ಹೆಚ್ಚಾಗಿ ದೇಶಭಕ್ತಿಯ ಸಂದೇಶಗಳನ್ನು ಕೂಡಿರುವಂತಹದ್ದು. ಇವರು ಪ್ರಾಸಬದ್ದತೆ ಇಲ್ಲದ ಕೃತಿಗಳನ್ನು ಬರೆಯುವದರಲ್ಲಿ ಪ್ರಸಿಧ್ದರು. ಇವರ 'ಖಾಡಿ ಬೊಲಿ' ಕಾವ್ಯದಲ್ಲಿ ಪ್ರಾಸಬದ್ದತೆ ಇಲ್ಲದ ದ್ವಿಪದಗಳು ಹೊಂದಿವೆ. ಗುಪ್ತರವರು ಧಾರ್ಮಿಕ ವ್ಯಕ್ತಿಯು ಹೌದು. ಇವರ ಕೃತಿಗಳಲ್ಲಿ ಅದು ಕಂಡುಬರುತ್ತದೆ ಏಕೆಂದರೆ ಇವರು ಕೃತಿಗಳಲ್ಲಿ ಹೆಚ್ಚಾಗಿ ಧಾರ್ಮಿಕತೆ ಮತ್ತು ಪೌರಣಿಕತೆ ಬಗ್ಗೆ ಬರೆಯುತ್ತಿದ್ದರು. ಇವರು ಸಂಸ್ಕೃತಿಯ ಗಾಯಕರೂ ಹೌದು.
ಕೃತಿಗಳು
[ಬದಲಾಯಿಸಿ]- ರಂಗ್ ಮೇನ್ ಭಂಗ್ .[೩]
- ಭಾರತ್-ಭಾರತಿ .
- ಜಯದತ್ತ ವಧ್.
- ವಿಕಟ್ ಭಟ್.
- ಪ್ಲಾಸೀ ಕಾ ಯುಧ್ದ
- ಗುರುಕುಲ್.[೪]
- ಕಿಸಾನ್ .[೫]
- ಪಂಚವಟಿ.
- ಸಿದ್ದಿರಾಜ್.
- ಸಾಕೇತ್.
- ಯಶೋಧರ.[೬]
- ಅರ್ಜನ್ ಔರ್ ವಿಸರ್ಜನ್.
- ಕಾಬಾ-ಕಾರ್ಬಲರೆ.
- ಜಯಭಾರತ್.
- ದ್ವಾಪರ.
- ಜಾಹುಶ್.
- ವೈಟಾಲಿಕ್.
- ಕುನಾಲ್.
- ವಿಶ್ವರಾಜ್ಯ.
- ಕಿರಣೊ ಕಾ ಕೇಲ್.
- ಮಾನವತಾ.[೭]
ನಾಟಕಗಳು
[ಬದಲಾಯಿಸಿ]- ತಿಲೋತ್ತಮ(೧೯೧೬).
- ಚಂದ್ರಾಹಾಸ್(೧೯೧೬).
- ಅನಾಘ್(೧೯೨೫).
- ವಿಜಯ್ ಪರ್ವ(೧೯೬೦).[೮]
ಪ್ರಶಸ್ತಿಗಳು
[ಬದಲಾಯಿಸಿ]- ರಾಷ್ಟ್ರಕವಿ ಪ್ರಶಸ್ತಿ
- ೧೯೫೪ರಲ್ಲಿ ಪದ್ಮಭೊಷಣ ಪ್ರಶಸ್ತಿ[೯]
- ಭಾರತೀಯ ಆಕಾಡೆಮಿ ಪ್ರಶಸ್ತಿಗಳು
- ಮಂಗಳಾ ಪ್ರಸಾದ್ ಸಾಕೇತ್ ಪ್ರಶಸ್ತಿಗಳು ಲಭಿಸಿವೆ.
ಇವರಿಗೆ ಮುಂತಾದ ಪ್ರಶಸ್ತಿಗಳನ್ನು ಭಾರತ ಸರ್ಕಾರ ಹಾಗೂ ಉತ್ತರಪ್ರದೇಶ ಸರ್ಕಾರವು ಕೊಟ್ಟು ಗೌರವಿಸಿದೆ.[೧೦][೧೧]
ಮೈಥಿಲಿ ಶರಣ್ ಗುಪ್ತರವರು 1964 ಡಿಸೆಂಬರ್ 12 ರಂದು ನಿಧನರಾದರು.[೧೨]
ಉಲ್ಲೇಖಗಳು
[ಬದಲಾಯಿಸಿ]- ↑ "ಗುಪ್ತರ ಜನನ ಸ್ಥಳ".
- ↑ "ಮೈಥಿಲಿ ಶರಣ್ ಗುಪ್ತ್‌ರ ಜೀವನ ಚರಿತ್ರೆ".
- ↑ https://bundelkhand.in/maithilisharan-gupt
- ↑ "गुरुकुल - मैथिलीशरण गुप्त Gurukul - Hindi book by - Maithili Sharan Gupt". www.pustak.org. Retrieved 12 January 2020.
- ↑ "Maithili Sharan Gupt Poems - Kisan (किसान) | Bundelkhand.IN - बुंदेलखंड.इन - Bundelkhand Research Portal". bundelkhand.in. Retrieved 12 January 2020.
- ↑ "यशोधरा - मैथिलीशरण गुप्त Yashodhara - Hindi book by - Maithili Sharan Gupt". pustak.org. Archived from the original on 12 ಜನವರಿ 2020. Retrieved 12 January 2020.
- ↑ "ಮೈಥಿಲಿ ಶರಣ್ ಗುಪ್ತ್‌ರ ಕವಿತೆಗಳು".
- ↑ "ಮೈಥಿಲಿ ಶರಣ್ ಗುಪ್ತ - ನಾಟಕ मैथिलीशरण गुप्त Maithili sharan Gupt ke Natak - Hindi book by - Maithili Sharan Gupt". pustak.org. Archived from the original on 12 ಜನವರಿ 2020. Retrieved 12 January 2020.
- ↑ "೧೯೫೪ ಸಾಲಿನ ಪದ್ಮಭೂಷಣ ಪ್ರಶಸ್ತಿ ವೀಜೆತರ ಪಟ್ಟಿ" (PDF). Archived from the original (PDF) on 2015-10-15. Retrieved 2015-11-05.
- ↑ "राष्ट्रकवि मैथिलीशरण गुप्त सम्मान-2018 की घोषणा, इन्हें किया जाएगा सम्मानित". Patrika News (in hindi). Retrieved 12 January 2020.
{{cite web}}
: CS1 maint: unrecognized language (link) - ↑ https://www.amazon.in/Saket-Methlisharan-Gupt/dp/8180312925
- ↑ https://hindi.firstpost.com/culture/maithilisharan-gupt-death-anniversary-5032.html
ಹೊರಗಿನ ಕೊಂಡಿಗಳು
[ಬದಲಾಯಿಸಿ]- "ಮೈಥಿಲಿಯವರ ಕವನಗಳು". Archived from the original on 2016-03-04. Retrieved 2015-11-05.
- Pages using the JsonConfig extension
- CS1 maint: unrecognized language
- ಉತ್ತರ ಪ್ರದೇಶ
- ಕವಿಗಳು
- ರಾಷ್ಟ್ರಕವಿ ಪ್ರಶಸ್ತಿ ಪುರಸ್ಕೃತರು
- ಅನುವಾದಕರು
- ನಾಟಕಕಾರರು
- ರಾಜಕಾರಣಿಗಳು
- ಲೇಖಕರು
- ರಾಜ್ಯಸಭೆ ಸದಸ್ಯರು
- ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆ-೨೦೧೫-೧೬
- ಪ್ರೋಜೆಕ್ಟ್ ಟೈಗರ್-೨ ಸ್ಪರ್ಧೆಗಾಗಿ ವಿಸ್ತರಿಸಿದ ಲೇಖನ
- ವಿಕಿಕ್ಲಬ್ ಕ್ರೈಸ್ಟ್ ಯೂನಿವರ್ಸಿಟಿ ರಚಿಸಿದ ಲೇಖನಗಳು