ವಿಷಯಕ್ಕೆ ಹೋಗು

ಮಿಲೊಲೋಂತಿಡೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಿಲೊಲೋಂತಿಡೀ
ಗಂಡು ಪಾಲಿಫ಼ಿಲಾ ಆಲ್ಬಾ (ಮೆಲೊಲೋಂತಿನಿ)
Scientific classification e
ಕ್ಷೇತ್ರ: Eukaryota
ಸಾಮ್ರಾಜ್ಯ: Animalia
ವಿಭಾಗ: ಆರ್ಥ್ರೊಪೋಡಾ
ವರ್ಗ: ಇನ್ಸೆಕ್ಟಾ
ಗಣ: ಕೋಲಿಯಾಪ್ಟೆರಾ
ಕುಟುಂಬ: ಸ್ಕಾರಬೇಯ್ಡೀ
ಉಪಕುಟುಂಬ: ಮಿಲೊಲೋಂತಿಡೀ
Leach, 1819
Diversity
ಸುಮಾರು 20-30 ಪಂಗಡಗಳು
Synonyms

ಹಾಪ್ಲಿಯಿನೀ
ಮಿಲೊಲೋಂತಿನೀ
ಸಿಸ್ಟೆಲೊಪೋಡಿನೀ

ಮಿಲೊಲೋಂತಿಡೀ ಕೋಲಿಯಾಪ್ಟರ ಗಣದ ಸ್ಕಾರಬಾಯ್ಡಿಯ ಅಧಿಕುಟುಂಬಕ್ಕೆ ಸೇರಿದ ಕೀಟಕುಟುಂಬ. ಈ ಕುಟುಂಬದಲ್ಲಿ ೭೫೦ ಕ್ಕಿಂತ ಹೆಚ್ಚು ಜಾತಿಗಳಿದ್ದು ೧೧,೦೦೦ ಕ್ಕಿಂತ ಹೆಚ್ಚು ಪ್ರಭೇದಗಳಿವೆ.[] ಇದಕ್ಕೆ ಸೇರಿದ ಕೀಟಗಳು ಗಿಡಮರಗಳಿಗೆ ಹಾನಿಕಾರಕವಾಗಿದ್ದು ಮೇ ಬೀಟಲ್ಸ್, ಜೂನ್ ಬೀಟಲ್ಸ್ ಅಥವಾ ಕಾಕ್‌ಷೇಫರ್‌ಗಳೆಂಬ ಹೆಸರಿನಿಂದ ಪ್ರಸಿದ್ಧವಾಗಿವೆ.[] ಇವುಗಳ ಗಾತ್ರದಲ್ಲೂ ಮೈಬಣ್ಣದಲ್ಲೂ ಅಪಾರ ವೈವಿಧ್ಯವನ್ನು ಕಾಣಬಹುದು. ಭಾರತಾದ್ಯಂತ ಇವುಗಳ ವ್ಯಾಪ್ತಿಯುಂಟು.

ದೇಹರಚನೆ

[ಬದಲಾಯಿಸಿ]

ದೇಹದ ಗಾತ್ರ 10-15 ಮಿಮೀ. ದೃಢವಾದ ಮೈಕಟ್ಟು. ಮಣ್ಣು ತೋಡಲು ಅನುಕೂಲವಾಗಿರುವ ಗರಗಸದಂಥ ರಚನೆಗಳುಳ್ಳ ಮುಂಗಾಲುಗಳು, ಆಹಾರವನ್ನು ಕತ್ತರಿಸಲು ಸಹಾಯಕವಾಗುವಂಥ ಬಾಯಿ, ಆಂಟೆನದ ಕೊನೆಯ ಮೂರು ಖಂಡಗಳು ಎಲೆಯಾಕಾರದವಾಗಿರುವುದು. ಚಿಪ್ಪಿನಾಕಾರದ ಎಲಿಟ್ರ ಇವು ಈ ಜೀರುಂಡೆಗಳ ಲಕ್ಷಣಗಳ ಪೈಕಿ ಕೆಲವು.

ನಡವಳಿಕೆ

[ಬದಲಾಯಿಸಿ]

ಇವು ಹಗಲಿನ ವೇಳೆಯನ್ನು ಭೂಮಿಯೊಳಗೆ 10-20 ಸೆಂಮೀ ಆಳದಲ್ಲಿ ಕಳೆಯುತ್ತವೆ. ರಾತ್ರಿ ಹೊತ್ತು ಮಾತ್ರ ನೆಲದಿಂದ ಹೊರಬಂದು ಗಿಡಮರಗಳನ್ನು ತಿನ್ನುವುವು.

ಸಂತಾನೋತ್ಪತ್ತಿ

[ಬದಲಾಯಿಸಿ]

ಬೇಸಗೆ ಕಳೆದು ಮೇ-ಜೂನ್ ತಿಂಗಳುಗಳಲ್ಲಿ ಮಾತ್ರ ಗಂಡು ಹೆಣ್ಣು ಕೀಟಗಳು ಭೂಮಿಯ ಮೇಲಕ್ಕೆ ಬಂದು ಸಂತಾನ ಕ್ರಿಯೆಯಲ್ಲಿ ತೊಡಗುವುವು. ಆ ಸಮಯದಲ್ಲಿ ಮಾತ್ರ ಹೊರಗೆ ಕಾಣಿಸಿಕೊಳ್ಳುವುದರಿಂದ ಇವಕ್ಕೆ ಮೇ ಅಥವಾ ಜೂನ್ ಬೀಟಲ್ಸ್ ಎಂಬ ಹೆಸರು ಬಂದಿದೆ. ಸಂಭೋಗಾನಂತರ ಎರಡು ಮೂರು ವಾರಗಳಲ್ಲಿ ಹೆಣ್ಣು ನೆಲದೊಳಗೆ ಮಣ್ಣಿನ ಕುಡಿಕೆಯಂಥ ರಚನೆ ರೂಪಿಸಿ ಅದರೊಳಗೆ 30-50 ಮೊಟ್ಟಿಯಿಟ್ಟು ಸತ್ತುಹೋಗುತ್ತದೆ. 10-15 ದಿವಸಗಳ ತರುವಾಯ ಮೊಟ್ಟೆಯೊಡೆದು ಮರಿ ಹೊರಬರುತ್ತದೆ. ಸುಮಾರು 3-6 ತಿಂಗಳ ತನಕ ಮಣ್ಣಿನೊಳಗೇ ಹುದುಗಿದ್ದು ಬೇರುಗಳನ್ನು ತಿಂದು ಬೆಳೆದು ಅನಂತರ ಕೋಶಾವಸ್ಥೆ ತಲುಪುವ ಈ ಮರಿಗಳನ್ನು ಗೊಬ್ಬರದ ಹುಳು, ಗೊಣ್ಣೆ ಹುಳು ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಕೋಶಾವಸ್ಥೆಯ ಅವಧಿ 10-14 ದಿವಸಗಳು. ಇದರಿಂದ ಬರುವ ಪ್ರೌಢಕೀಟ ಮುಂದಿನ ಮುಂಗಾರು ಮಳೆಯ ತನಕ ಮಣ್ಣಿನಲ್ಲಿಯೇ ಅಡಗಿದ್ದು, ಅನಂತರ ಹೊರಬಂದು ತನ್ನ ಎಂದಿನ ಗುಪ್ತ ಜೀವನ ಆರಂಭಿಸುತ್ತದೆ.

ಭಾರತದಲ್ಲಿ

[ಬದಲಾಯಿಸಿ]

ಭಾರತದಲ್ಲಿ ಕಾಣದೊರೆಯುವ ಈ ಜೀರುಂಡೆಗಳ ಹೆಸರುಗಳನ್ನೂ, ಅವು ಹಾಳುಮಾಡುವ ಬೆಳೆಗಳನ್ನೂ ಈ ಮುಂದೆ ಉಲ್ಲೇಖಿಸಿದೆ:

ಉಲ್ಲೇಖಗಳು

[ಬದಲಾಯಿಸಿ]
  1. Cave, R.D. & Ratcliffe, B.C. (2008). Scarab beetles (Coleoptera: Scarabaeoidea). In J.F. Capinera (Ed.), Encyclopedia of Entomology (pp. 3273–3286. Heidelberg. Springer.
  2. Britannica, The Editors of Encyclopaedia. "chafer". Encyclopedia Britannica, 21 Aug. 2007, https://www.britannica.com/animal/chafer. Accessed 4 December 2023.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: