ಮಾರ್ಗರೀನ್(ಕೃತಕ ಬೆಣ್ಣೆ)
ಮಾರ್ಗರೀನ್ (pronounced /ˈmɑrdʒərɨn/, /ˈmɑrdʒrɨn/ ಅಥವಾ /ˈmɑrdʒəriːn/), ಜಾತಿವಿಶಿಷ್ಟವಾದ ಪದವಾಗಿದ್ದು, ಬದಲಿ ಬೆಣ್ಣೆಗಳ ವ್ಯಾಪಕ ಶ್ರೇಣಿಯಲ್ಲೊಂದನ್ನು ಸೂಚಿಸುತ್ತದೆ. ಪ್ರಪಂಚದ ಅನೇಕ ಭಾಗಗಳಲ್ಲಿ ಮಾರ್ಗರೀನ್ ಮತ್ತು ಸ್ಪ್ರೆಡ್(ಸಿಹಿ ಯಾ ಕಾರದ ಗೊಜ್ಜು)ಗಳ ಮಾರುಕಟ್ಟೆ ಷೇರು ಬೆಣ್ಣೆಯದನ್ನು ಮೀರಿಸಿದೆ. ಮಾರ್ಗರೀನ್ ಅನೇಕ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಮತ್ತು ಪಾಕವಿಧಾನಗಳಲ್ಲಿ ಬಳಸುವ ಘಟಕಾಂಶವಾಗಿದೆ ಹಾಗೂ ಇದನ್ನು ಆಡುಮಾತಿನಲ್ಲಿ ಕೆಲವೊಮ್ಮೆ ಓಲಿಯೊ ಎಂದು ಕರೆಯುತ್ತಾರೆ.
ಮಾರ್ಗರೀನ್ ಸಹಜವಾಗಿ ಬಿಳಿ ಬಣ್ಣದಲ್ಲಿ ಕಂಡುಬರುತ್ತದೆ: ಕೃತಕ ಬಣ್ಣ ನೀಡುವ ಅಂಶಗಳ ಸೇರಿಸುವಿಕೆಯನ್ನು ನಿಷೇಧಿಸುವ ಮೂಲಕ, ಕೆಲವು ಕಾನೂನುವ್ಯಾಪ್ತಿಯ ಸದಸ್ಯರು ಮಾರ್ಗರೀನ್‌ನ ಬಳಕೆಯನ್ನು ವಿರೋಧಿಸುವುದರಿಂದ ಅವರ ಡೈರಿ ಉದ್ಯಮವನ್ನು ರಕ್ಷಿಸಬೇಕೆಂದು ಯೋಚಿಸಿದರು. ಬಣ್ಣವನ್ನು ಸೇರಿಸುವಲ್ಲಿನ ನಿಷೇಧವು U.S., ಆಸ್ಟ್ರೇಲೇಷಿಯಾ ಮತ್ತು ಕೆನಡಾದಲ್ಲಿ ಸಾಮಾನ್ಯ ವಿಷಯವಾಯಿತು; ಕೆಲವು ಸಂದರ್ಭಗಳಲ್ಲಿ, ಆ ನಿಷೇಧವು ಸುಮಾರು 100 ವರ್ಷಗಳ ಕಾಲ ಅಸ್ತಿತ್ವದಲ್ಲಿತ್ತು. ಬಣ್ಣಯುಕ್ತ ಮಾರ್ಗರೀನ್‌ಅನ್ನು ಮಾರಾಟ ಮಾಡುವುದು ಆಸ್ಟ್ರೇಲಿಯಾದಲ್ಲಿ, ಉದಾಹರಣೆಗಾಗಿ, 1960ರವರೆಗೆ ಕಾನೂನುಸಮ್ಮತವಾಗಲಿಲ್ಲ.
ಇತಿಹಾಸ
[ಬದಲಾಯಿಸಿ]ಮಾರ್ಗರೀನ್ 1813ರಲ್ಲಿ ಮೈಕೆಲ್ ಯುಜೀನ್ ಚೆವ್ರಿಯಲ್ ಮಾರ್ಗರಿಕ್ ಆಮ್ಲ ವನ್ನು ಕಂಡುಹಿಡಿಯುವುದರೊಂದಿಗೆ ಹುಟ್ಟಿಕೊಂಡಿತು. (ಇದನ್ನು ಕೊಬ್ಬಿನಾಮ್ಲದ ಮುತ್ತಿನಂಥ ಜೋಡಣೆಯ ನಂತರ ಗ್ರೀಕ್‌ನ μαργαρίς, -ρῖτης ಅಥವಾ μάργαρον (margarís, -îtēs / márgaron)ನಿಂದ ಹೆಸರಿಸಲಾಗಿದೆ, ಇದರರ್ಥ ಮುತ್ತು-ಸಿಂಪಿ(ಮಳಿ) ಅಥವಾ ಮುತ್ತು ).[೧] ಆ ಸಂದರ್ಭದಲ್ಲಿ ವಿಜ್ಞಾನಿಗಳು ಓಲೀಯಿಕ್ ಆಮ್ಲ ಮತ್ತು ಸ್ಟಿಯರಿಕ್ ಆಮ್ಲದಂತೆ ಮಾರ್ಗರಿಕ್ ಆಮ್ಲವನ್ನೂ, ಸಂಯುಕ್ತವಾಗಿ ಹೆಚ್ಚಿನ ಪ್ರಾಣಿಗಳ ಕೊಬ್ಬುಗಳನ್ನು ರೂಪಿಸುವ ಮೂರು ಕೊಬ್ಬಿನಾಮ್ಲಗಳಲ್ಲಿ ಒಂದೆಂದು ಪರಿಗಣಿಸಿದರು. 1853ರಲ್ಲಿ ಜರ್ಮನ್‌ನ ರಚನಾ ರಸಾಯನವಿಜ್ಞಾನಿ ವಿಲ್ಹೆಲ್ಮ್ ಹೈನ್ರಿಕ್ ಹೈಂಟ್ಜ್, ಮಾರ್ಗರಿಕ್ ಆಮ್ಲವನ್ನು ಸ್ಟಿಯರಿಕ್ ಆಮ್ಲ ಮತ್ತು ಹಿಂದೆ ತಿಳಿದಿರದಿದ್ದ ತಾಳೆ ಆಮ್ಲ(ಪಾಲ್ಮಿಟಿಕ್ ಆಮ್ಲ)ದ ಸಂಯುಕ್ತವೆಂದು ವಿಶ್ಲೇಷಿಸಿದನು.[೨]
1869ರಲ್ಲಿ ಫ್ರಾನ್ಸಿನ ಚಕ್ರವರ್ತಿ ಲೂಯಿಸ್ ನೆಪೋಲಿಯನ್ III, ಸೈನಿಕರಿಗೆ ಮತ್ತು ಕೆಳದರ್ಜೆಯವರಿಗೆ ಬಳಸಲು ಸೂಕ್ತವಾದ ಬೆಣ್ಣೆಯ ತೃಪ್ತಿದಾಯಕ ಬದಲಿಯನ್ನು ತಯಾರಿಸಿದವರಿಗೆ ಉಡುಗೊರೆಯನ್ನು ನೀಡುವುದಾಗಿ ಸಾರಿದನು.[೩] ಫ್ರೆಂಚ್ ರಸಾಯನ ಶಾಸ್ತ್ರಜ್ಞ ಹಿಪ್ಪೊಲೈಟ್ ಮೆಗೆ-ಮೌರೀಸ್ ಬೆಣ್ಣೆಯ-ಬದಲಿಯೊಂದನ್ನು ಸೃಷ್ಟಿಸಿ, ಅದಕ್ಕೆ ಆಲಿಯೊಮಾರ್ಗರೀನ್ ಎಂದು ಹೆಸರು ನೀಡಿದನು. ಆ ಹೆಸರು ನಂತರ ಸಣ್ಣದಾಗಿ ವ್ಯಾಪಾರದ ಹೆಸರು "ಮಾರ್ಗರೀನ್" ಆಯಿತು. ಮೆಗೆ-ಮೌರೀಸ್ 1869ರಲ್ಲಿ ಆ ವಿಷಯದ ಒಡೆತನದ ಹಕ್ಕನ್ನು ಪಡೆದನು. ಅಲ್ಲದೇ ಅವನ ಆರಂಭಿಕ ಉತ್ಪಾದನೆಯ ಕಾರ್ಯವನ್ನು ಫ್ರಾನ್ಸ್‌ನಿಂದ ವಿಸ್ತರಿಸಿದನು. ಆದರೆ ಅದು ವಾಣಿಜ್ಯಿಕವಾಗಿ ಯಶಸ್ವನ್ನು ಪಡೆಯಲಿಲ್ಲ. 1871ರಲ್ಲಿ ಅವನು ಆ ಹಕ್ಕು ಸ್ವಾಮ್ಯವನ್ನು ಈಗ ಯೂನಿಲಿವರ್‌ನ ಭಾಗವಾಗಿರುವ ಡಚ್ ಕಂಪೆನಿ ಜರ್ಗೆನ್ಸ್‌ಗೆ ಮಾರಿದನು.[೪]
ಅಮೆರಿಕ ಸಂಯುಕ್ತ ಸಂಸ್ಥಾನ
[ಬದಲಾಯಿಸಿ]1877ರಲ್ಲಿ ಆರಂಭಿಕ ಅಮೆರಿಕ ಸಂಯುಕ್ತ ಸಂಸ್ಥಾನ ಒಕ್ಕೂಟದ (U.S.) ರಾಜ್ಯಗಳು ಮಾರ್ಗರೀನ್‌ನ ಮಾರಾಟ ಮತ್ತು ಲೇಬಲ್ ಮಾಡುವುದನ್ನು ನಿಷೇಧಿಸುವ ಕಾನೂನುಗಳನ್ನು ಜಾರಿಗೆ ತಂದವು. ಮಧ್ಯ-1880ರಲ್ಲಿ U.S. ಫೆಡರಲ್ ಸರಕಾರವು ಪ್ರತಿ ಪೌಂಡ್‌ಗೆ ಎರಡು ಸೆಂಟ್‌ಗಳ ತೆರಿಗೆಯನ್ನು ವಿಧಿಸಿತು ಹಾಗೂ ಉತ್ಪನ್ನವನ್ನು ತಯಾರಿಸಲು ಅಥವಾ ಮಾರಾಟ ಮಾಡಲು ತಯಾರಕರು ದುಬಾರಿ ಪರವಾನಗಿಯೊಂದನ್ನು ಪಡೆಯಬೇಕಿತ್ತು. ವೈಯಕ್ತಿಕ ರಾಜ್ಯಗಳು ಮಾರ್ಗರೀನ್‌ನ ಶುದ್ಧ ಲೇಬಲ್ ಮಾಡಬೇಕೆಂಬುದನ್ನು ಆರಂಭಿಸಿದವು. ಬೆಣ್ಣೆ ಲಾಬಿಯಿಂದ ಕರಡು ತಯಾರಿಸಲ್ಪಟ್ಟ, ಬಣ್ಣದ ನಿಷೇಧಗಳು ಡೈರಿ ರಾಜ್ಯಗಳಾದ ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯಲ್ಲಿ ಆರಂಭವಾದವು. ಅನೇಕ ರಾಜ್ಯಗಳಲ್ಲಿ ಶಾಸಕಾಂಗಗಳು, ಉತ್ಪನ್ನವನ್ನು ರುಚಿಸದಂತೆ ಕಾಣಿಸಲು ಮಾರ್ಗರೀನ್ ತಯಾರಕರು ಗುಲಾಬಿ ಬಣ್ಣವನ್ನು ಸೇರಿಸಬೇಕೆಂಬ ಕಾಯಿದೆಗಳನ್ನು ಮಾಡಿದವು.[೫] ಆದರೆ ಸರ್ವೋಚ್ಛ ನ್ಯಾಯಾಲಯವು ನ್ಯೂಹ್ಯಾಂಪ್‌ಶೈರ್‌ನ ಕಾನೂನನ್ನು ನಿರಾಕರಿಸಿತು ಮತ್ತು ಈ ಕಾಯಿದೆಗಳನ್ನು ರದ್ದುಗೊಳಿಸಿತು.[ಸೂಕ್ತ ಉಲ್ಲೇಖನ ಬೇಕು]
20ನೇ ಶತಮಾನದ ಆರಂಭದಲ್ಲಿ, ಹತ್ತರಲ್ಲಿ ಎಂಟು ಅಮೆರಿಕನ್ನರು ಹಳದಿ ಮಾರ್ಗರೀನ್‌ಅನ್ನು ಖರೀಸುವಂತಿರಲಿಲ್ಲ ಹಾಗೂ ಖರೀದಿಸಿದವರು ಅದರ ಮೇಲೆ ಭಾರಿ ತೆರಿಗೆಯನ್ನು ಪಾವತಿಸಬೇಕಿತ್ತು. ಕಳ್ಳವ್ಯಾಪಾರದ ಬಣ್ಣಯುಕ್ತ-ಮಾರ್ಗರೀನ್ ಹೆಚ್ಚು ಸಾಮಾನ್ಯವಾಯಿತು. ಅಲ್ಲದೇ ತಯಾರಕರು ಆಹಾರಕ್ಕೆ-ಬಣ್ಣನೀಡುವ ಕ್ಯಾಪ್ಸೂಲ್‌ಗಳನ್ನು ಪೂರೈಸಲು ಆರಂಭಿಸಿದರು. ಆ ಮೂಲಕ ಗ್ರಾಹಕರು ವಿತರಿಸುವುದಕ್ಕಿಂತ ಮೊದಲು ಮಾರ್ಗರೀನ್‌ಗೆ ಹಳದಿ ಬಣ್ಣವನ್ನು ಬೆರೆಸಬಹುದಿತ್ತು. ಆದರೂ ನಿಯಮಗಳು ಮತ್ತು ತೆರಿಗೆಗಳು ಗಮನಾರ್ಹ ಪ್ರಭಾವವನ್ನು ಬೀರಿದವು: ಮಾರ್ಗರೀನ್ ಬಣ್ಣದ ಮೇಲಿನ 1902ರ ನಿಷೇಧಗಳು, ಉದಾಹರಣೆಗಾಗಿ, U.S.ನ ವಾರ್ಷಿಕ ಬಳಕೆಯನ್ನು 120 ದಶಲಕ್ಷದಿಂದ 48 ದಶಲಕ್ಷ ಪೌಂಡ್‌ಗಳಷ್ಟು (60,000ರಿಂದ 24,000 ಟನ್‌ಗಳು) ಕಡಿಮೆ ಮಾಡಿದವು. ಆದರೆ 1910ರ ಕೊನೆಯಲ್ಲಿ ಇದು ಎಲ್ಲಕ್ಕಿಂತಲೂ ಹೆಚ್ಚು ಜನಪ್ರಿಯವಾಯಿತು[ಸೂಕ್ತ ಉಲ್ಲೇಖನ ಬೇಕು].
ವಿಶ್ವ ಸಮರ I ಹತ್ತಿರ ಬರುತ್ತಿದ್ದಂತೆ, ಮಾರ್ಗರೀನ್ ಬಳಕೆಯು ಅಗಾಧ ಪ್ರಮಾಣದಲ್ಲಿ U.S.ಯಂತಹ ಪರಿಣಾಮಕ್ಕೆ ಒಳಗಾಗದ ಪ್ರದೇಶಗಳಲ್ಲೂ ಹೆಚ್ಚಾಯಿತು. ಯುದ್ಧದಲ್ಲಿ ಹೆಚ್ಚು ತೊಡಗಿಕೊಂಡಿದ್ದ ರಾಷ್ಟ್ರಗಳಲ್ಲಿ, ಡೈರಿ ಉತ್ಪನ್ನಗಳು ಹೆಚ್ಚುಕಡಿಮೆ ಪಡೆಯಲಾಗದ ವಸ್ತುಗಳಾಗಿದ್ದವು ಮತ್ತು ಕಟ್ಟುನಿಟ್ಟಾಗಿ ನಿಗದಿತ ಪ್ರಮಾಣದಲ್ಲಿ ನೀಡಲ್ಪಡುತ್ತಿದ್ದವು. ಉದಾಹರಣೆಗಾಗಿ, ಯುನೈಟೆಡ್ ಕಿಂಗ್ಡಮ್ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ನಿಂದ ಆಮದಾಗುವ ಬೆಣ್ಣೆಯನ್ನು ಅವಲಂಬಿಸಿತ್ತು. ಅಲ್ಲದೇ ಸಮುದ್ರಾಂತರದ ದಾಳಿಯ ಅಪಾಯವು ಇದಕ್ಕೆ ಅಡ್ಡಿಪಡಿಸಿತು.
ಮಾರ್ಗರೀನ್ ಮತ್ತು ಡೈರಿ ಲಾಬಿಗಳ ನಡುವಿನ ದೀರ್ಘಕಾಲದ ಬಿರುಕು-ಮೂಡಿಸುವ ಕದನವು ಹಾಗೆಯೇ ಮುಂದುವರಿಯಿತು: U.S.ನಲ್ಲಿ ಗ್ರೇಟ್ ಡಿಪ್ರೆಶನ್(ಅತಿ ಹೆಚ್ಚಿನ ಕುಸಿತ), ಡೈರಿಯ-ಪರವಾದ ಕಾನೂನೊಂದನ್ನು ಜಾರಿಗೆ ತಂದಿತು; ಎರಡನೇ ವಿಶ್ವ ಸಮರವು ಮಾರ್ಗರೀನ್‌ನ ಬಳಕೆಯಲ್ಲಿ ಹೆಚ್ಚು ವ್ಯತ್ಯಾಸವಾಗಲು ಕಾರಣವಾಯಿತು. ಯುದ್ಧದ ನಂತರ ಮಾರ್ಗರೀನ್ ಲಾಬಿಯು ಹೆಚ್ಚು ಪ್ರಬಲವಾಯಿತು. ಅಲ್ಲದೇ ಮಾರ್ಗರೀನ್‌ನ ಮೇಲಿದ್ದ ಪ್ರಮುಖ ನಿಷೇಧಗಳು ಸ್ವಲ್ಪ-ಸ್ವಲ್ಪವೇ ತೆಗೆದುಹಾಕಲ್ಪಟ್ಟವು. ಇತ್ತೀಚಿನ ರಾಜ್ಯಗಳಾದ ಮಿನ್ನೆಸೊಟ 1963ರಲ್ಲಿ ಮತ್ತು ವಿಸ್ಕನ್ಸಿನ್ 1967ರಲ್ಲಿ ಈ ಕಾರ್ಯಗಳನ್ನು ಮಾಡಿದವು.[೬] ಆದರೂ ಕೆಲವು ವಿಧಿಸಲಾಗದ ಕಾನೂನುಗಳು ದಾಖಲೆಯಲ್ಲಿ ಉಳಿದಿವೆ.[೭][೮]
ಕೆನಡಾ
[ಬದಲಾಯಿಸಿ]ಕೆನಡಾದಲ್ಲಿ ಮಾರ್ಗರೀನ್‌ಅನ್ನು 1886ರಿಂದ 1948ರವರೆಗೆ ನಿಷೇಧಿಸಲಾಗಿತ್ತು. ಆದರೂ ಈ ನಿಷೇಧವನ್ನು ಡೈರಿಯ ಕೊರತೆಯಿಂದಾಗಿ 1917ರಿಂದ 1923ರವರೆಗೆ ತೆಗೆದುಹಾಕಲಾಗಿತ್ತು.[೯] ಕಳ್ಳವ್ಯಾಪಾರದ ಮಾರ್ಗರೀನ್‌ಅನ್ನು ಹತ್ತಿರದ ಬ್ರಿಟಿಷ್ ವಸಾಹತು ನ್ಯೂಫೌಂಡ್‌ಲ್ಯಾಂಡ್‌ನಲ್ಲಿ ನ್ಯೂಫೌಂಡ್‌ಲ್ಯಾಂಡ್ ಬಟರ್ ಕಂಪೆನಿಯಿಂದ (ವಾಸ್ತವವಾಗಿ ಇದು ಕೇವಲ ಮಾರ್ಗರೀನ್ಅನ್ನು ಮಾತ್ರ ಉತ್ಪಾದಿಸುತ್ತಿತ್ತು) ತಿಮಿಂಗಿಲ, ವೇಲ್ ಮತ್ತು ಮೀನಿನ ಎಣ್ಣೆಯಿಂದ ತಯಾರಿಸಲಾಗುತ್ತಿತ್ತು. ನಂತರ ಇದನ್ನು ಬೆಣ್ಣೆಯ ಅರ್ಧದಷ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದ್ದ ಕೆನಡಾಕ್ಕೆ ಕಳ್ಳತನದಿಂದ ಸಾಗಿಸಲಾಗುತ್ತಿತ್ತು. ಕೆನಡಾದ ಸರ್ವೋಚ್ಛ ನ್ಯಾಯಾಲಯವು ಮಾರ್ಗರೀನ್‌ನ ನಿಷೇಧವನ್ನು 1948ರಲ್ಲಿ ಮಾರ್ಗರೀನ್ ರೆಫರೆನ್ಸ್‌ನಲ್ಲಿ ತೆಗೆದುಹಾಕಿತು.
1950ರಲ್ಲಿ ನ್ಯಾಯಾಲಯವು ಪ್ರಾಂತಗಳಿಗೆ ಉತ್ಪನ್ನವನ್ನು ನಿಯಂತ್ರಿಸುವ ಹಕ್ಕನ್ನು ನೀಡಿದುದರ ಪರಿಣಾಮವಾಗಿ, ಕೆನಡಾದ ಹೆಚ್ಚಿನ ಭಾಗಗಳಲ್ಲಿ ಮಾರ್ಗರೀನ್‌ನ ಬಣ್ಣಕ್ಕೆ ಸಂಬಂಧಿಸಿದಂತೆ ಅನೇಕ ನಿಯಮಗಳನ್ನು ಮಾಡಲಾಯಿತು, ಕೆಲವು ಪ್ರಾಂತಗಳಲ್ಲಿ ಇದು ತಿಳಿ ಹಳದಿ ಅಥವಾ ಕಿತ್ತಳೆ ಬಣ್ಣವನ್ನು ಹೊಂದಿರಬೇಕಾಗಿತ್ತು ಅಥವಾ ಮತ್ತೆ ಕೆಲವು ಪ್ರಾಂತಗಳಲ್ಲಿ ಇದು ಬಣ್ಣರಹಿತವಾಗಿರಬೇಕಾಗಿತ್ತು. 1980ರಲ್ಲಿ ಹೆಚ್ಚಿನ ಪ್ರಾಂತಗಳು ನಿಷೇಧವನ್ನು ರದ್ದುಗೊಳಿಸಿದವು. ಆದರೆ ಒಂಟಾರಿಯೊದಲ್ಲಿ ಬೆಣ್ಣೆ-ಬಣ್ಣಯುಕ್ತ ಮಾರ್ಗರೀನ್‌ಅನ್ನು ಮಾರಾಟ ಮಾಡುವುದು 1995ರವರೆಗೆ ಕಾನೂನು ಸಮ್ಮತವಾಗಿರಲಿಲ್ಲ.[೯] ಮಾರ್ಗರೀನ್‌ಗೆ ಬಣ್ಣ ಹಾಕುವುದನ್ನು ನಿರ್ಬಂಧಿಸಿದ ಕೆನಡಾದ ಕೊನೆಯ ಪ್ರಾಂತ ಕ್ವೆಬೆಕ್ ಮಾರ್ಗರೀನ್ ಬಣ್ಣರಹಿತವಾಗಿರಬೇಕೆಂಬ ಅದರ ಕಾನೂನನ್ನು 2008ರ ಜುಲೈನಲ್ಲಿ ರದ್ದುಗೊಳಿಸಿತು.[೧೦]
ಸ್ಪ್ರೆಡ್‌ಗಳ ಅಭಿವೃದ್ಧಿ
[ಬದಲಾಯಿಸಿ]ಮಾರ್ಗರೀನ್ ಮತ್ತು ಬೆಣ್ಣೆಗಳೆರಡೂ 10-80 ಮೈಕ್ರಾನ್‌ಗಳಷ್ಟು ವ್ಯಾಸದ ಸಣ್ಣ ನೀರಿನ ಹನಿಗಳೊಂದಿಗೆ (ಭಾರದಲ್ಲಿ ಒಟ್ಟು ಎಮಲ್ಷನ್ ಅಂಶದ ಕನಿಷ್ಠ 16%ನಷ್ಟು) ಎಣ್ಣೆಯಲ್ಲಿನ-ನೀರಿನ ಎಮಲ್ಷನ್ಅನ್ನು ಹೊಂದಿರುತ್ತವೆ. ಇವು ದೃಢ ಸ್ಫಟಿಕ ರೂಪದಲ್ಲಿರುವ ಕೊಬ್ಬಿನ ಸ್ಥಿತಿಯಾದ್ಯಂತ ಏಕರೀತಿಯಲ್ಲಿ ಹರಡಿರುತ್ತವೆ.[೧೧]
ಮಾರ್ಗರೀನ್‌ನ ನಿರೂಪಣೆಯು ಮೂಲತಃ ಬೆಣ್ಣೆಯ ವಿಧ್ಯುಕ್ತ ನಿರೂಪಣೆಯಿಂದ ಬಂದಿದೆ. ಎರಡೂ ಕನಿಷ್ಠ 16%ನಷ್ಟು ನೀರು ಮತ್ತು ಕನಿಷ್ಠ 80%ನಷ್ಟು ಕೊಬ್ಬಿನಾಂಶವನ್ನು ಹೊಂದಿದ್ದವು. ಇದನ್ನು ಎಲ್ಲಾ ಪ್ರಮುಖ ಉತ್ಪಾದಕರು ಅಳವಡಿಸಿಕೊಂಡರು ಮತ್ತು ಇದು ಉದ್ಯಮದ ಪ್ರಮಾಣಕವಾಯಿತು.[೧೧]
ಮಾರ್ಗರೀನ್‌ನ ಮೂಲ ಉತ್ಪಾದನೆಯಲ್ಲಿದ್ದ ಮುಖ್ಯ ಕಚ್ಛಾ ಪದಾರ್ಥವೆಂದರೆ ಬೀಫ್(ಗೋಮಾಂಸ) ಕೊಬ್ಬು. ಪೂರೈಕೆಯಲ್ಲಿ ಅಭಾವವು ಶೀಘ್ರದಲ್ಲಿ ಸಸ್ಯಗಳ ಎಣ್ಣೆಗಳನ್ನು ಬಳಸುವಂತೆ ಮಾಡಿತು. 1900ರಿಂದ 1920ರವರೆಗಿನ ಅವಧಿಯಲ್ಲಿ ಮಾರ್ಗರೀನ್‌ಅನ್ನು ಪ್ರಾಣಿಗಳ ಕೊಬ್ಬುಗಳು ಹಾಗೂ ಗಟ್ಟಿಗೊಳಿಸಿದ ಮತ್ತು ಗಟ್ಟಿಗೊಳಿಸದ ಸಸ್ಯದ ಎಣ್ಣೆಗಳ ಸಂಯುಕ್ತದಿಂದ ತಯಾರಿಸಲಾಗುತ್ತಿತ್ತು.[೧೨] 1930ರಲ್ಲಿನ ಕುಸಿತವು, ವಿಶ್ವ ಸಮರ IIರ ಸಂದರ್ಭದಲ್ಲಿ ಆಹಾರ ಮೊದಲಾದವುಗಳನ್ನು ನಿಗದಿತ ಪ್ರಮಾಣದಲ್ಲಿ ನೀಡುವಂತೆ ಮಾಡುವುದರೊಂದಿಗೆ, ಪ್ರಾಣಿಗಳ ಕೊಬ್ಬಿನ ಪೂರೈಕೆಯ ಇಳಿಕೆಗೂ ಕಾರಣವಾಯಿತು; 1945ರಲ್ಲಿ ಇದು ಮಾರುಕಟ್ಟೆಯಿಂದ ಹೆಚ್ಚುಕಡಿಮೆ ಸಂಪೂರ್ಣವಾಗಿ ಮರೆಯಾಯಿತು.[೧೨] U.S.ನಲ್ಲಿ ಪೂರೈಕೆಯ ಸಮಸ್ಯೆಯು ಕಾನೂನಿನ ಬದಲಾವಣೆಗಳೊಂದಿಗೆ ಸೇರಿಕೊಂಡು, ತಯಾರಕರು 1950ರಷ್ಟರ ಹೊತ್ತಿಗೆ ಸಂಪೂರ್ಣವಾಗಿ ಸಸ್ಯದ ಕೊಬ್ಬುಗಳನ್ನು ಬಳಸುವಂತೆ ಮಾಡಿತು ಹಾಗೂ ಉದ್ಯಮವು ಉತ್ಪನ್ನದ ಅಭಿವೃದ್ಧಿಯ ಅವಧಿಗೆ ತಯಾರಾಗುವಂತೆ ಮಾಡಿತು.[೧೨]
ವಿಶ್ವ ಸಮರ II ನಿಗದಿತ ಪ್ರಮಾಣದಲ್ಲಿ ನೀಡುತ್ತಿದ್ದ ಸಂದರ್ಭದಲ್ಲಿ, UKನಲ್ಲಿ ಕೇವಲ ಎರಡು ಪ್ರಕಾರದ ಮಾರ್ಗರೀನ್‌ಗಳು ಮಾತ್ರ ಲಭ್ಯವಿದ್ದವು, ಅಧಿಕ ಮೌಲ್ಯದ ಬ್ರ್ಯಾಂಡ್ ಮತ್ತು ಅಗ್ಗದ ಬ್ರ್ಯಾಂಡ್. ನಿಗದಿತ ಪ್ರಮಾಣದ ನೀಡುವಿಕೆಯು 1955ರಲ್ಲಿ ಕೊನೆಗೊಳ್ಳುವುದರೊಂದಿಗೆ ಮಾರುಕಟ್ಟೆಯು ಪೂರೈಕೆ ಮತ್ತು ಬೇಡಿಕೆಯ ಪ್ರಭಾವಗಳಿಗೆ ತೆರೆದುಕೊಂಡಿತು ಹಾಗೂ ಬ್ರ್ಯಾಂಡ್ ಮಾರಾಟವು ಏಳಿಗೆಯನ್ನು ಕಂಡಿತು.[೧೨] ಪ್ರಮುಖ ಉತ್ಪಾದಕರ ನಡುವಿನ ಪೈಪೋಟಿಯು ಇನ್ನಷ್ಟು ಪ್ರಚೋದನೆಯನ್ನು ನೀಡಿತು ಹಾಗೂ 1955ರಲ್ಲಿ ವಾಣಿಜ್ಯ ದೂರದರ್ಶನ ಜಾಹೀರಾತು ಆರಂಭಗೊಂಡಿತು; 1950ರಿಂದ 1960ರವರೆಗಿನ ಅವಧಿಯಲ್ಲಿ, ಸ್ಪರ್ಧಾತ್ಮಕ ಕಂಪೆನಿಗಳು ಬೆಣ್ಣೆಯಂತೆ ರುಚಿಯಿರುವ ಮಾರ್ಗರೀನ್‌ಅನ್ನು ಉತ್ಪಾದಿಸಲು ಪರಸ್ಪರ ಪೈಪೋಟಿ ನಡೆಸಿದವು.[೧೨]
ಮಧ್ಯ-1960ರಲ್ಲಿ, ಸ್ಕ್ಯಾಂಡಿನೇವಿಯಾದಲ್ಲಿ ಲ್ಯಾಂಡ್ ಆಂಡ್ ಲ್ಯಾಗಮ್ ಮತ್ತು ಬ್ರೆಗಟ್ ಎನ್ನುವ ಬೆಣ್ಣೆಯ ಎಣ್ಣೆ ಮತ್ತು ಸಸ್ಯದ ಎಣ್ಣೆಗಳ ಎರಡು ದುರ್ಬಲ-ಕೊಬ್ಬಿನ ಮಿಶ್ರಣಗಳ ಬಳಕೆಯು, ಯಾವುದನ್ನು "ಮಾರ್ಗರೀನ್" ಎಂದು ಕರೆಯಬೇಕೆಂಬ ಸಮಸ್ಯೆಯನ್ನು ಹುಟ್ಟುಹಾಕಿದವು ಹಾಗೂ ಅದು "ಸ್ಪ್ರೆಡ್" ಎಂಬ ಪದವು ಚಾಲ್ತಿಗೆ ಬರುವಂತೆ ಮಾಡಿದವು.[೧೧] 1978ರಲ್ಲಿ ಡೈರಿ ಕೆನೆ ಮತ್ತು ಸಸ್ಯದ ಎಣ್ಣೆಗಳ ಮಿಶ್ರಣವನ್ನು ಮಥಿಸಿ ತಯಾರಿಸಿದ ಕ್ರೋನ ಎನ್ನುವ 80%ನಷ್ಟು ಕೊಬ್ಬಿನ ಉತ್ಪನ್ನವೊಂದನ್ನು ಯುರೋಪ್‌ನಲ್ಲಿ ಬಳಕೆಗೆ ತರಲಾಯಿತು; 1982ರಲ್ಲಿ, ಕ್ಲವರ್ ಎಂದು ಕರೆಯುವ ಕೆನೆ ಮತ್ತು ಸಸ್ಯದ ಎಣ್ಣೆಗಳ ಮಿಶ್ರಣವೊಂದನ್ನು UKಯಲ್ಲಿ ಮಿಲ್ಕ್ ಮಾರ್ಕೆಟಿಂಗ್ ಬೋರ್ಡ್ ಬಳಕೆಗೆ ತಂದಿತು.[೧೧] ಸಸ್ಯದ ಎಣ್ಣೆ ಮತ್ತು ಕೆನೆ ಸ್ಪ್ರೆಡ್ ಐ ಕಾಂಟ್ ಬಿಲೀವ್ ಇಟ್ಸ್ ನಾಟ್ ಬಟರ್!ಅನ್ನು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ 1986ರಲ್ಲಿ ಹಾಗೂ ಯುನೈಟೆಡ್ ಕಿಂಗ್ಡಮ್ ಮತ್ತು ಕೆನಡಾದಲ್ಲಿ 1991ರಲ್ಲಿ ಪರಿಚಯಿಸಲಾಯಿತು.[೧೩][೧೪]
ತಯಾರಿಕೆ
[ಬದಲಾಯಿಸಿ]ಮಾರ್ಗರೀನ್ ತಯಾರಿಸುವ ಮೂಲ ವಿಧಾನವು ಇಂದು, ಮೆಗೆ-ಮೌರೀಸ್‌ನ ಕಾಲದಲ್ಲಿ ಮಾಡಿದಂತೆ, ಶುದ್ಧೀಕರಿಸಿದ ಸಸ್ಯದ ಎಣ್ಣೆಗಳ ಮತ್ತು ಕೆನೆ ತೆಗೆದ ಹಾಲಿನ ಮಿಶ್ರಣವನ್ನು ಎಮಲ್ಸೀಕರಣ ಮಾಡುವುದು, ಮಿಶ್ರಣವನ್ನು ಗಟ್ಟಿಯಾಗಿಸಲು ತಣ್ಣಗಾಗಿಸುವುದು ಹಾಗೂ ಸಂಯೋಜನೆಯನ್ನು ಸುಧಾರಿಸುವುದು ಮೊದಲಾದವುಗಳನ್ನು ಒಳಗೊಂಡಿದೆ.[೧] ಸಸ್ಯ ಮತ್ತು ಪ್ರಾಣಿಯ ಕೊಬ್ಬುಗಳು ಬೇರೆ ಬೇರೆ ಕರಗುವ ಬಿಂದುಗಳೊಂದಿಗೆ ಒಂದೇ ರೀತಿಯ ಸಂಯುಕ್ತಗಳಾಗಿವೆ. ಕೊಠಡಿ ತಾಪಮಾನದಲ್ಲಿ ದ್ರವವಾಗಿರುವ ಕೊಬ್ಬುಗಳನ್ನು ಸಾಮಾನ್ಯವಾಗಿ ಎಣ್ಣೆಗಳೆಂದು ಕರೆಯುತ್ತಾರೆ. ಕರಗುವ ಬಿಂದುಗಳನ್ನು ಕೊಬ್ಬಿನಾಮ್ಲಗಳಲ್ಲಿರುವ ಅನ್‌ಸ್ಯಾಚುರೇಟೆಡ್(ಅಪರ್ಯಾಪ್ತ) ಆಸಿಲ್ ಗುಂಪುಗಳ ದ್ವಿಬಂಧಗಳ ಅಸ್ತಿತ್ವದಿಂದ ಕಂಡುಹಿಡಿಯಲಾಗುತ್ತದೆ; ದ್ವಿಬಂಧಗಳು ಹೆಚ್ಚಿದಂತೆ, ಕರಗುವ ಬಿಂದು ಕಡಿಮೆಯಾಗುತ್ತದೆ.
ಪರ್ಯಾಯವಾಗಿ, ನಿಕೆಲ್ ವೇಗವರ್ಧಕದ ಅಸ್ತಿತ್ವದಲ್ಲಿ, ನಿಯಂತ್ರಿತ ಪರಿಸ್ಥಿತಿಯಡಿಯಲ್ಲಿ ಜಲಜನಕವನ್ನು ಸಾಗಿಸುವುದರಿಂದ ಪ್ರಾಣಿ ಅಥವಾ ಸಸ್ಯದ ಎಣ್ಣೆಗಳನ್ನು ಪರಿವರ್ತಿಸಿ ಪ್ರಬಲ ಕೊಬ್ಬುಗಳನ್ನು ತಯಾರಿಸಬಹುದು. ಅನ್‌ಸ್ಯಾಚುರೇಟೆಡ್ ಬಂಧಗಳಿಗೆ ಜಲಜನಕದ ಸೇರಿಸುವಿಕೆಯು ಸ್ಯಾಚುರೇಟೆಡ್(ಅತ್ಯಧಿಕ ಸಂಖ್ಯೆಯ ಜಲಜನಕ ಪರಮಾಣುಗಳಿಂದ ಕೂಡಿದ) ಬಂಧಗಳನ್ನು ನೀಡುತ್ತದೆ. ಅಲ್ಲದೇ ಎಣ್ಣೆಯ ಕರಗುವ ಬಿಂದುವನ್ನು ಪರಿಣಾಮಕಾರಿಯಾಗಿ ಹೆಚ್ಚಿಸಿ, ಅದು "ಗಟ್ಟಿ"ಯಾಗುವಂತೆ ಮಾಡುತ್ತದೆ. ಮಾನವನ ಆಹಾರದಲ್ಲಿ ಸ್ಯಾಚುರೇಟೆಡ್ ಕೊಬ್ಬುಗಳ ಪ್ರಮಾಣವನ್ನು ಮಿತಿಗೊಳಿಸುವುದರಿಂದ ಆರೋಗ್ಯಕಾರಿ ಪ್ರಯೋಜನಗಳಿರುವುದರಿಂದ, ಈ ಕ್ರಿಯೆಯನ್ನು ನಿಯಂತ್ರಿಸಿ, ಅವಶ್ಯಕ ಸಂಯೋಜನೆಯನ್ನು ಪಡೆಯಲು ಸಾಕಷ್ಟು ಬಂಧಗಳನ್ನು ಮಾತ್ರ ಹೈಡ್ರೋಜನೀಕರಣ ಮಾಡಲಾಗುತ್ತದೆ. ಈ ವಿಧಾನದಲ್ಲಿ ತಯಾರಿಸಲಾದ ಮಾರ್ಗರೀನ್‌ಗಳು ಹೈಡ್ರೋಜನೀಕರಿಸಿದ ಕೊಬ್ಬನ್ನು ಹೊಂದಿರುತ್ತವೆ.[೧೫] ಪ್ರಕ್ರಿಯೆಯು ಅಭಿವೃದ್ಧಿಗೊಂಡಿದ್ದರೂ, ಇಂದು ಈ ವಿಧಾನವನ್ನು ಕೆಲವು ಮಾರ್ಗರೀನ್‌ಗಳಿಗೆ ಬಳಸಲಾಗುತ್ತದೆ ಹಾಗೂ ಕೆಲವೊಮ್ಮೆ ಪಲೇಡಿಯಮ್‌ನಂತಹ ಇತರ ಲೋಹ ವೇಗವರ್ಧಕಗಳನ್ನು ಉಪಯೋಗಿಸಲಾಗುತ್ತದೆ.[೧] ಹೈಡ್ರೋಜನೀಕರಣವು ಅಪೂರ್ಣಗೊಂಡರೆ (ಭಾಗಶಃ ಗಟ್ಟಿಯಾಗುವಿಕೆ), ಹೈಡ್ರೋಜನೀಕರಣ ಕ್ರಿಯೆಯಲ್ಲಿ ಹೆಚ್ಚು ತಾಪಮಾನವನ್ನು ಬಳಸಿ, ಕೆಲವು ಇಂಗಾಲ-ಇಂಗಾಲ ದ್ವಿಬಂಧಗಳನ್ನು "ಟ್ರಾನ್ಸ್" ರೂಪಕ್ಕೆ ತಿರುಗಿಸಲಾಗುತ್ತದೆ. ಈ ನಿರ್ದಿಷ್ಟ ಬಂಧಗಳು ಈ ಕ್ರಿಯೆಯಲ್ಲಿ ಹೈಡ್ರೋಜನೀಕರಣ ಮಾಡಲ್ಪಡದಿದ್ದರೆ, ಅವು ಅಂತಿಮ ಮಾರ್ಗರೀನ್‌ನಲ್ಲಿ ಟ್ರಾನ್ಸ್ ಕೊಬ್ಬಿನಾಂಶಗಳಾಗಿ ಉಳಿಯುತ್ತವೆ[೧೫]. ಅವುಗಳ ಸೇವನೆಯಿಂದ ಹೃದಯ ರಕ್ತನಾಳದ ಕಾಯಿಲೆಯಂತಹ ಅಪಾಯಗಳುಂಟಾಗಬಹುದು.[೧೬]. ಈ ಕಾರಣಕ್ಕಾಗಿ, ಭಾಗಶಃ ಗಟ್ಟಿಗೊಳಿಸಿದ ಕೊಬ್ಬುಗಳನ್ನು ಮಾರ್ಗರೀನ್ ಉದ್ಯಮದಲ್ಲಿ ತುಂಬಾ ಕಡಿಮೆ ಬಳಸಲಾಗುತ್ತದೆ. ತಾಳೆ ಎಣ್ಣೆ ಮತ್ತು ತೆಂಗಿನೆಣ್ಣೆಯಂತಹ ಕೆಲವು ಉಷ್ಣವಲಯದ ಎಣ್ಣೆಗಳು ನೈಸರ್ಗಿಕವಾಗಿ ಅರೆ-ಗಟ್ಟಿಯಾಗಿರುತ್ತವೆ, ಹಾಗಾಗಿ ಅವುಗಳಿಗೆ ಹೈಡ್ರೋಜನೀಕರಣದ ಅವಶ್ಯಕತೆ ಇರುವುದಿಲ್ಲ.[೧೭][೧೮]
ಆಧುನಿಕ ಮಾರ್ಗರೀನ್‌ಗಳನ್ನು, ಯಾವುದೇ ಪ್ರಕಾರದ ಪ್ರಾಣಿ ಅಥವಾ ಸಸ್ಯದ ಕೊಬ್ಬುಗಳನ್ನು ಕೆನೆ ತೆಗೆದ ಹಾಲು, ಉಪ್ಪು ಮತ್ತು ಎಮಲ್ಸಿಕಾರಕಗಳೊಂದಿಗೆ ಮಿಶ್ರ ಮಾಡಿ ತಯಾರಿಸಲಾಗುತ್ತದೆ. ಬೆಣ್ಣೆಯಂತೆ ಮಾರ್ಗರೀನ್ ಸುಮಾರು 80%ನಷ್ಟು ಕೊಬ್ಬು, 20%ನಷ್ಟು ನೀರು ಮತ್ತು ಗಟ್ಟಿ ಪದಾರ್ಥಗಳನ್ನು, ವಾಸನೆ, ಬಣ್ಣವನ್ನು ಹೊಂದಿರುತ್ತದೆ. A ಜೀವಸತ್ವದೊಂದಿಗೆ, ಕೆಲವೊಮ್ಮೆ D ಜೀವಸತ್ವದೊಂದಿಗೆ, ಪುಷ್ಟಿಗೊಳಿಸುವುದರೊಂದಿಗೆ ಮಾರ್ಗರೀನ್ ಮಾನವನ ಆಹಾರಕ್ಕೆ ಬೆಣ್ಣೆಯ ಪೌಷ್ಠಿಕಾಂಶದ ಕೊಡುಗೆಯನ್ನು ಸರಿದೂಗುತ್ತದೆ. ಎಣ್ಣೆಯನ್ನು ಬೀಜಗಳಿಂದ ತೆಗೆದು, ಶುದ್ಧೀಕರಿಸಿ, ಹೈಡ್ರೋಜನೀಕರಿಸಿ, ನಂತರ ಪುಷ್ಟಿಗೊಳಿಸಲಾಗುತ್ತದೆ ಮತ್ತು ಅದಕ್ಕೆ ಕೃತಕ ಕ್ಯಾರಟೀನ್ ಅಥವಾ ಅನ್ಯಾಟೊನಿಂದ ಬಣ್ಣ ಕೊಡಲಾಗುತ್ತದೆ. ನೀರಿನ ಸ್ಥಿತಿಯನ್ನು ಸಾಮಾನ್ಯವಾಗಿ ಪೂರ್ವಾಸ್ಥೆಗೆ ತರಲಾಗುತ್ತದೆ ಅಥವಾ ಕೆನೆ ತೆಗೆದ ಹಾಲನ್ನು ಹೆಚ್ಚು ಪ್ರಬಲ ವಾಸನೆಯನ್ನು ಉತ್ಪತ್ತಿ ಮಾಡಲು ಲ್ಯಾಕ್ಟಿಕ್ ಆಮ್ಲ ಬ್ಯಾಕ್ಟೀರಿಯಾದೊಂದಿಗೆ ಸಂಸ್ಕರಿಸಲಾಗುತ್ತದೆ. ಲೆಸಿತಿನ್‌ನಂತಹ ಎಮಲ್ಸಿಕಾರಕಗಳು ನೀರಿನ ಸ್ಥಿತಿಯನ್ನು ಎಣ್ಣೆಯಲ್ಲಿ ಸಮವಾಗಿ ಹರಡಲು ಸಹಾಯ ಮಾಡುತ್ತವೆ ಹಾಗೂ ಉಪ್ಪು ಮತ್ತು ಸಂರಕ್ಷಕಗಳನ್ನೂ ಸೇರಿಸಲಾಗುತ್ತದೆ. ಈ ಎಣ್ಣೆ ಮತ್ತು ನೀರಿನ ಎಮಲ್ಷನ್‌ಅನ್ನು ಬಿಸಿಮಾಡಿ, ಹದವಾಗಿ ಕಲಸಿ, ನಂತರ ತಂಪುಗೊಳಿಸಲಾಗುತ್ತದೆ. ಮೃದು ಟಬ್ ಮಾರ್ಗರೀನ್‌ಗಳನ್ನು ಬ್ಲಾಕ್ ಮಾರ್ಗರೀನ್‌ಗಳಿಗಿಂತ ಕಡಿಮೆ ಹೈಡ್ರೋಜನೀಕರಿಸಿದ, ಹೆಚ್ಚು ದ್ರವೀಯ, ಎಣ್ಣೆಗಳಿಂದ ತಯಾರಿಸಲಾಗುತ್ತದೆ.[೧೯]
ಸಸ್ಯದ ಎಣ್ಣೆಯಿಂದ ತಯಾರಿಸಿದ ಮಾರ್ಗರೀನ್‌ಗಳು ಇಂದಿನ ಮಾರುಕಟ್ಟೆಯಲ್ಲಿ ವಿಶೇಷವಾದ ಪ್ರಾಮುಖ್ಯತೆಯನ್ನು ಪಡೆದಿವೆ. ಏಕೆಂದರೆ ಅವು ಬೆಣ್ಣೆಗಿಂತ ಕಡಿಮೆ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತವೆ ಮತ್ತು ಅವನ್ನು ಸಾಮಾನ್ಯವಾಗಿ ಆರೋಗ್ಯಪೂರ್ಣ ಆಯ್ಕೆಯೆಂದು, ಈ ಅಭಿಪ್ರಾಯದ ಬಗ್ಗೆ ವಿರೋಧವಿದ್ದರೂ, ಹೇಳಲಾಗುತ್ತದೆ.[೨೦]
ಪ್ರಮುಖ ಮೂರು ಪ್ರಕಾರದ ಮಾರ್ಗರೀನ್‌ಗಳು ಹೆಚ್ಚು ಸಾಮಾನ್ಯವಾಗಿರುತ್ತವೆ:
- ಸಾಂಪ್ರದಾಯಿಕ ಮಾರ್ಗರೀನ್‌ಗಳು - ಸ್ಯಾಚುರೇಟೆಡ್ ಕೊಬ್ಬುಗಳನ್ನು ಹೊಂದಿರುತ್ತವೆ. ಇವನ್ನು ಹೆಚ್ಚಾಗಿ ಸಸ್ಯದ ಎಣ್ಣೆಗಳಿಂದ ತಯಾರಿಸಲಾಗುತ್ತದೆ.
- ಸಂಯೋಜಿತ ಮಾರ್ಗರೀನ್‌ಗಳು - ಹೆಚ್ಚಾಗಿ ಮೋನೊ- ಅಥವಾ ಪಾಲಿ-ಅನ್‌ಸ್ಯಾಚುರೇಟೆಡ್ ಕೊಬ್ಬುಗಳನ್ನು ಹೊಂದಿರುತ್ತವೆ. ಇವನ್ನು ಸ್ಯಾಫ್ಲವರ್, ಸೂರ್ಯಕಾಂತಿ, ಸೋಯಾಬೀನ್, ಹತ್ತಿ ಬೀಜ, ರೇಪ್ಸೀಡ್ ಅಥವಾ ಆಲಿವ್ ಎಣ್ಣೆಯಿಂದ ತಯಾರಿಸಲಾಗುತ್ತದೆ.
- ಗಟ್ಟಿ, ಸಾಮಾನ್ಯವಾಗಿ ಬಣ್ಣರಹಿತ, ಮಾರ್ಗರೀನ್‌ಗಳು - ಇವನ್ನು ಅಡುಗೆಯಲ್ಲಿ ಅಥವಾ ಬೇಕರಿ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸುತ್ತಾರೆ. (ಶಾರ್ಟನಿಂಗ್(ಹಿಟ್ಟಿನ ಭಕ್ಷ್ಯಗಳನ್ನು ಮಾಡಲು ಬಳಸುವ ಕೊಬ್ಬು))
ಬೆಣ್ಣೆಯೊಂದಿಗೆ ಬೆರೆಸುವುದು
[ಬದಲಾಯಿಸಿ]ಇಂದು ಮಾರಾಟವಾಗುವ ಹೆಚ್ಚಿನ ಪ್ರಸಿದ್ಧ ಸ್ಪ್ರೆಡ್‌ಗಳು ಮಾರ್ಗರೀನ್ ಮತ್ತು ಬೆಣ್ಣೆಯ ಅಥವಾ ಮಜ್ಜಿಗೆಯ ಮಿಶ್ರಣಗಳಾಗಿವೆ. ಮಜ್ಜಿಗೆಯೆಂದರೆ ಬೆಣ್ಣೆಯನ್ನು ಕಡೆದ ನಂತರ ಉಳಿಯುವ ದ್ರವವಾಗಿದೆ. ಮಾರ್ಗರೀನ್‌ನ ರುಚಿಯನ್ನು ಹೆಚ್ಚಿಸಲು ಸಂಮ್ಮಿಶ್ರಣವನ್ನು ಬಳಸುವುದು ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಆಸ್ಟ್ರೇಲಿಯಾದಂತಹ ರಾಷ್ಟ್ರಗಳಲ್ಲಿ ಕಾನೂನು ಬಾಹಿರವಾಗಿದೆ. ಯುರೋಪಿಯನ್ ಒಕ್ಕೂಟದ ನಿರ್ದೇಶನಗಳಡಿಯಲ್ಲಿ ಮಾರ್ಗರೀನ್ ಉತ್ಪನ್ನವನ್ನು, ಹೆಚ್ಚಿನವು ನೈಸರ್ಗಿಕ ಬೆಣ್ಣೆಯನ್ನು ಹೊಂದಿದ್ದರೂ, "ಬೆಣ್ಣೆ" ಎಂದು ಕರೆಯಲಾಗುವುದಿಲ್ಲ. ಯುರೋಪಿನ ಕೆಲವು ರಾಷ್ಟ್ರಗಳಲ್ಲಿ, ಬೆಣ್ಣೆ-ಆಧಾರಿತ ಊಟದ ಸ್ಪ್ರೆಡ್‌ಗಳನ್ನು ಮತ್ತು ಮಾರ್ಗರೀನ್ ಉತ್ಪನ್ನಗಳನ್ನು "ಬೆಣ್ಣೆ ಮಿಶ್ರಣ"ಗಳಾಗಿ ಮಾರಾಟ ಮಾಡಲಾಗುತ್ತದೆ.
ಬೆಣ್ಣೆ ಮಿಶ್ರಣಗಳು ಈಗ ಊಟದ-ಸ್ಪ್ರೆಡ್ ಮಾರುಕಟ್ಟೆಯಲ್ಲಿ ಪ್ರಮುಖ ಅಂಶವಾಗಿವೆ. "ಐ ಕಾಂಟ್ ಬಿಲೀವ್ ಇಟ್ಸ್ ನಾಟ್ ಬಟರ್" ಬ್ರ್ಯಾಂಡ್ ಅಂತಹುದೇ ರೀತಿಯ ಹೆಸರಿನ ವಿವಿಧ ಸ್ಪ್ರೆಡ್‌ಗಳನ್ನು ಉತ್ಪಾದಿಸಿದೆ. ಈಗ ಅವು ಪ್ರಪಂಚದಾದ್ಯಂತ ಸೂಪರ್‌ಮಾರ್ಕೆಟ್‌ಗಳಲ್ಲಿ "ಅಟ್ಟರ್ಲಿ ಬಟರ್ಲಿ", "ಯು ವುಡ್ ಬಟರ್ ಬಿಲೀವ್ ಇಟ್", "ಬ್ಯೂಟಿಫುಲ್ಲಿ ಬಟರ್‌ಫುಲ್ಲಿ" ಮತ್ತು "ಬಟರ್ಲಿಶಿಯಸ್" ಎಂಬ ಹೆಸರುಗಳಲ್ಲಿ ಕಂಡುಬರುತ್ತವೆ. ಈ ಬೆಣ್ಣೆ ಮಿಶ್ರಣಗಳು ಲೇಬಲ್ ಮಾಡುವುದರ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುತ್ತವೆ. ಮಾರಾಟದ ವಿಧಾನಗಳು ನಿಜವಾದ ಬೆಣ್ಣೆಯೊಂದಿಗೆ ಪ್ರಬಲ ಹೋಲಿಕೆಯನ್ನು ಹೊಂದಿರುತ್ತವೆ. ಅಂತಹ ವ್ಯಾಪಾರದ ಹೆಸರುಗಳು ಉತ್ಪನ್ನವನ್ನು ಗ್ರಾಹಕರಿಗೆ ಅವಶ್ಯಕ ಉತ್ಪನ್ನ ಲೇಬಲ್‌ಗಳಿಂದ ಭಿನ್ನ ರೀತಿಯಲ್ಲಿ ಪೂರೈಸುತ್ತದೆ. ಅದು ಮಾರ್ಗರೀನ್‌ಅನ್ನು "ಭಾಗಶಃ ಹೈಡ್ರೋಜನೀಕರಿಸಿದ ಸಸ್ಯದ ಎಣ್ಣೆ" ಎಂದು ಕರೆಯುತ್ತದೆ.
ಮಾರುಕಟ್ಟೆ ಸ್ವೀಕಾರ
[ಬದಲಾಯಿಸಿ]ಮಾರ್ಗರೀನ್, ನಿರ್ದಿಷ್ಟವಾಗಿ ಪಾಲಿ-ಅನ್‌ಸ್ಯಾಚುರೇಟೆಡ್ ಮಾರ್ಗರೀನ್, ಮಧ್ಯ-20ನೇ ಶತಮಾನದಲ್ಲಿ ಪಾಶ್ಚಿಮಾತ್ಯ ಆಹಾರದ ಪ್ರಮುಖ ಅಂಶವಾಯಿತು ಮತ್ತು ಜನಪ್ರಿಯತೆಯಲ್ಲಿ ಬೆಣ್ಣೆಯನ್ನು ಮೀರಿಸಿತು.[೧೯] ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ, ಉದಾಹರಣೆಗಾಗಿ, 1930ರಲ್ಲಿ ಸರಾಸರಿ ವ್ಯಕ್ತಿಯೊಬ್ಬನು ವರ್ಷವೊಂದಕ್ಕೆ 18 pounds (8.2 kg)ನಷ್ಟು ಬೆಣ್ಣೆಯನ್ನು ಹಾಗೂ 2 pounds (0.91 kg)ನಷ್ಟು ಮಾರ್ಗರೀನ್‌ಅನ್ನು ತಿಂದಿದ್ದನು. 20ನೇ ಶತಮಾನದ ಕೊನೆಯಲ್ಲಿ, ಸರಾಸರಿ ಅಮೆರಿಕನ್ನನೊಬ್ಬನು ಸುಮಾರು 5 lb (2.3 kg)ನಷ್ಟು ಬೆಣ್ಣೆ ಮತ್ತು 8 lb (3.6 kg)ನಷ್ಟು ಮಾರ್ಗರೀನ್ಅನ್ನು ಸೇವಿಸುತ್ತಿದ್ದನು.[೨೧]
ಅಮೆರಿಕ ಸಂಯುಕ್ತ ಸಂಸ್ಥಾನವು ವಾರ್ಷಿಕವಾಗಿ ಮಾರ್ಗರೀನ್‌ಅನ್ನು 10,000,000,000 pounds (4.5×109 kg)ನಷ್ಟು ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತದೆ ಮತ್ತು 2,000,000,000 lb (910,000,000 kg)ನಷ್ಟನ್ನು ರಫ್ತು ಮಾಡುತ್ತದೆ.
ಮಾರ್ಗರೀನ್ ಯೆಹೂದ್ಯರ ಆಹಾರ ಕ್ರಮಗಳಾದ ಕಶ್ರುತ್‌ಅನ್ನು ಅನುಸರಿಸುವವರಿಗೆ ವಿಶೇಷವಾದ ಮಾರುಕಟ್ಟೆಯನ್ನು ಹೊಂದಿದೆ. ಕಶ್ರುತ್ ಮಾಂಸ ಮತ್ತು ಡೈರಿ ಉತ್ಪನ್ನಗಳ ಮಿಶ್ರಣವನ್ನು ನಿಷೇಧಿಸುತ್ತದೆ. ಆದ್ದರಿಂದ ಅಲ್ಲಿ ಕಟ್ಟುನಿಟ್ಟಾಗಿ ಕೋಷರ್ ಡೈರಿಯಲ್ಲದ ಮಾರ್ಗರೀನ್‌ಗಳು ಲಭ್ಯವಿರುತ್ತವೆ. ಇವನ್ನು ಹೆಚ್ಚಾಗಿ ಕೋಷರ್ ಗ್ರಾಹಕರು ಮಾಂಸ ಮತ್ತು ಬೆಣ್ಣೆಯನ್ನು ಬಳಸುವ ಪಾಕವಿಧಾನಗಳನ್ನು ಅಳವಡಿಸಿಕೊಳ್ಳಲು ಅಥವಾ ಮಾಂಸದ ಆಹಾರಗಳೊಂದಿಗೆ ನೀಡಲಾಗುವ ಬೇಕರಿ ಉತ್ಪನ್ನಗಳಲ್ಲಿ ಬಳಸುತ್ತಾರೆ. 2008ರ ಪಾಸೋವರ್ ಮಾರ್ಗರೀನ್ ಅಭಾವವು ಕೋಷರ್-ಅನುಸರಿಸುವ ಸಮುದಾಯದಲ್ಲಿ ಅಧಿಕ ತಲ್ಲಣವನ್ನುಂಟುಮಾಡಿತು.
ಡೈರಿ ಉತ್ಪನ್ನಗಳನ್ನು ಹೊಂದಿಲ್ಲದ ಮಾರ್ಗರೀನ್, ಬೆಣ್ಣೆಗೆ ಸಸ್ಯಾಹಾರಿ ಬದಲಿಯನ್ನೂ ಪೂರೈಸಬಹುದು.
ಪೋಷಕಾಂಶ
[ಬದಲಾಯಿಸಿ]ಮಾರ್ಗರೀನ್ ಮತ್ತು ಸ್ಪ್ರೆಡ್‌ಗಳ ಪೋಷಕಾಂಶಗಳಿಗೆ ಸಂಬಂಧಿಸಿದ ಚರ್ಚೆಗಳು ಎರಡು ವಿಷಯಗಳ ಸುತ್ತ ಸುತ್ತುತ್ತವೆ - ಒಟ್ಟು ಕೊಬ್ಬಿನ ಪ್ರಮಾಣ ಮತ್ತು ಕೊಬ್ಬಿನ ಪ್ರಕಾರಗಳು (ಸ್ಯಾಚುರೇಟೆಡ್ ಕೊಬ್ಬು, ಟ್ರಾನ್ಸ್ ಕೊಬ್ಬು). ಸಾಮಾನ್ಯವಾಗಿ ಮಾರ್ಗರೀನ್ ಮತ್ತು ಬೆಣ್ಣೆ ನಡುವಿನ ಹೋಲಿಕೆಯೂ ಸಹ ಈ ವಿಷಯದಲ್ಲಿ ಸೇರುತ್ತದೆ.
ಕೊಬ್ಬಿನ ಪ್ರಮಾಣ
[ಬದಲಾಯಿಸಿ]ಜೀವಕೋಶ ಪೊರೆಗಳ ಮತ್ತು ಏಕೊಸ್ಯಾನಾಯ್ಡ್‌ಗಳೆನ್ನುವ ಅನೇಕ ಹಾರ್ಮೋನ್-ರೀತಿಯ ಸಂಯುಕ್ತಗಳ ಉತ್ಪತ್ತಿಗೆ ಅಗತ್ಯವಾಗಿರುವುದರಿಂದ ಕೊಬ್ಬು, ಪೋಷಕಾಂಶದ ಅವಶ್ಯಕ ಭಾಗವಾಗಿದೆ. ಇದಕ್ಕೆ ಹೆಚ್ಚುವರಿಯಾಗಿ, ಕೊಬ್ಬು A, D, E ಮತ್ತು K ಮೊದಲಾದ ಕೊಬ್ಬಿನಲ್ಲಿ-ಕರಗುವ ಜೀವಸತ್ವಗಳಿಗೆ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ.[೨೨]
ಬೆಣ್ಣೆ ಮತ್ತು ಸಾಂಪ್ರದಾಯಿಕ ಮಾರ್ಗರೀನ್‌ನ (80% ಕೊಬ್ಬು) ಕಾರ್ಯಗಳು ಅವುಗಳ ಶಕ್ತಿಯ ಅಂಶಗಳಿಗೆ ಸಂಬಂಧಿಸಿದಂತೆ ಒಂದೇ ರೀತಿ ಇರುತ್ತವೆ. ಆದರೆ ಕಡಿಮೆ-ಕೊಬ್ಬಿನ ಮಾರ್ಗರೀನ್ ಮತ್ತು ಸ್ಪ್ರೆಡ್‌ಗಳೂ ಲಭ್ಯವಿರುತ್ತವೆ.
ಸ್ಯಾಚುರೇಟೆಡ್(ಪರ್ಯಾಪ್ತ) ಕೊಬ್ಬು
[ಬದಲಾಯಿಸಿ]ಸಸ್ಯದ ಕೊಬ್ಬುಗಳು 7%ನಿಂದ 86%ನಷ್ಟು ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ. ದ್ರವ ಎಣ್ಣೆಗಳು (ಗಟ್ಟಿಗೊಳಿಸದ ಕ್ಯಾನೋಲ ಎಣ್ಣೆ, ಸೂರ್ಯಕಾಂತಿ ಎಣ್ಣೆ) ಕಡಿಮೆ ಪ್ರಮಾಣದಲ್ಲಿ ಹೊಂದಿರುತ್ತವೆ. ಉಷ್ಣವಲಯದ ಎಣ್ಣೆಗಳು (ತೆಂಗಿನೆಣ್ಣೆ, ತಾಳೆ ಬೀಜದ ಎಣ್ಣೆ) ಮತ್ತು ಸಂಪೂರ್ಣವಾಗಿ ಗಟ್ಟಿಗೊಳಿಸಿದ (ಹೈಡ್ರೋಜನೀಕರಿಸಿದ) ಎಣ್ಣೆಗಳು ಹೆಚ್ಚಿನ ಪ್ರಮಾಣದಲ್ಲಿ ಒಳಗೊಂಡಿರುತ್ತವೆ.[೨೩] ಮಾರ್ಗರೀನ್ ಮಿಶ್ರಣವು ಎರಡೂ ಪ್ರಕಾರದ ಘಟಕಗಳ ಮಿಶ್ರಣವಾಗಿದೆ ಮತ್ತು ವಿರಳವಾಗಿ 50% ಸ್ಯಾಚುರೇಟೆಡ್ ಕೊಬ್ಬುಗಳನ್ನು ಮೀರುತ್ತದೆ. ಇದಕ್ಕೆ ಹೊರತಾಗಿರುವುವೆಂದರೆ ಕೆಲವು ಸಾಂಪ್ರದಾಯಿಕ ಊಟದ-ಮಾರ್ಗರೀನ್‌ಗಳು ಅಥವಾ ಉಷ್ಣವಲಯದ ಸ್ಥಿತಿಗಳಲ್ಲಿ ಸ್ಥಿರತೆಯನ್ನು ಉಳಿಸಿಕೊಳ್ಳುವ ಅವುಗಳ ಉತ್ಪನ್ನಗಳು.[೨೪] ಸಾಮಾನ್ಯವಾಗಿ ಗಟ್ಟಿ ಮಾರ್ಗರೀನ್‌ಗಳು ಹೆಚ್ಚು ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತವೆ.
ಸಾಂದ್ರದಾಯಿಕ ಬೆಣ್ಣೆಯ ಕೊಬ್ಬು ಸುಮಾರು 65%ನಷ್ಟು ಸ್ಯಾಚುರೇಟೆಡ್ ಕೊಬ್ಬುಗಳನ್ನು[೨೫] ಹೊಂದಿರುತ್ತದೆ, ಈ ಪ್ರಮಾಣವು ಕೆಲವೊಮ್ಮೆ ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ. ಒಂದು ಮೇಜುಚಮಚ ಬೆಣ್ಣೆಯು ಸುಮಾರು 7 ಗ್ರಾಂನಷ್ಟು ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ.
ಅನ್‌ಸ್ಯಾಚುರೇಟೆಡ್ ಕೊಬ್ಬು
[ಬದಲಾಯಿಸಿ]ಅನ್‌ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳ ಸೇವನೆಯು ರಕ್ತದಲ್ಲಿನ LDL ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು HDL ಕೊಲೆಸ್ಟರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಎಂಬುದನ್ನು ಕಂಡುಹಿಡಿಯಾಗಿದೆ. ಆ ಮೂಲಕ ಅದು ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.[೨೬][೨೭][೨೮]
ಎರಡು ಪ್ರಕಾರದ ಅನ್‌ಸ್ಯಾಚುರೇಟೆಡ್ ಎಣ್ಣೆಗಳಿವೆ: ಮೋನೊ- ಮತ್ತು ಪಾಲಿ-ಅನ್‌ಸ್ಯಾಚುರೇಟೆಡ್ ಕೊಬ್ಬುಗಳು, ಇವೆರಡನ್ನೂ ಸ್ಯಾಚುರೇಟೆಡ್ ಕೊಬ್ಬುಗಳಿಗೆ ವಿರುದ್ಧವಾಗಿ ಆರೋಗ್ಯಕ್ಕೆ ಪ್ರಯೋಜನಕಾರಿಗಳೆಂದು ಹೇಳಲಾಗುತ್ತದೆ. ರೇಪ್ಸೀಡ್ (ಮತ್ತು ಅದರ ರೂಪಾಂತರ ಕ್ಯಾನೋಲ), ಸೂರ್ಯಕಾಂತಿ, ಸ್ಯಾಫ್ಲವರ್ ಮತ್ತು ಆಲೀವ್ ಎಣ್ಣೆಗಳಂತಹ ಕೆಲವು ವ್ಯಾಪಕವಾಗಿ ಬೆಳೆಯಲಾಗುವ ಸಸ್ಯದ ಎಣ್ಣೆಗಳು ಹೆಚ್ಚಿನ ಪ್ರಮಾಣದಲ್ಲಿ ಅನ್‌ಸ್ಯಾಚುರೇಟೆಡ್ ಕೊಬ್ಬುಗಳನ್ನು ಹೊಂದಿರುತ್ತವೆ.[೨೩] ಮಾರ್ಗರೀನ್‌ನ ತಯಾರಿಕೆಯ ಸಂದರ್ಭದಲ್ಲಿ, ಕೊಠಡಿ ತಾಪಮಾನದಲ್ಲೂ ಗಟ್ಟಿಯಾಗಿರಲು ಸಾಧ್ಯವಾಗಲು ಅದಕ್ಕೆ ಹೆಚ್ಚಿನ ಕರಗುವ ಬಿಂದುವನ್ನು ನೀಡುವುದಕ್ಕಾಗಿ ಕೆಲವು ಅನ್‌ಸ್ಯಾಚುರೇಟೆಡ್ ಕೊಬ್ಬುಗಳನ್ನು ಸ್ಯಾಚುರೇಟೆಡ್ ಕೊಬ್ಬು ಅಥವಾ ಟ್ರಾನ್ಸ್ ಕೊಬ್ಬುಗಳಾಗಿ ಪರಿವರ್ತಿಸಲಾಗುತ್ತದೆ.
- ಒಮೇಗಾ-3 ಕೊಬ್ಬಿನಾಮ್ಲಗಳು ಅವಶ್ಯಕ ಕೊಬ್ಬಿನಾಮ್ಲಗಳಲ್ಲಿ ಇದು ಒಂದಾಗಿದೆ. ಹೆಚ್ಚಿನ ಆಧುನಿಕ ಪಾಶ್ಚಿಮಾತ್ಯ ಆಹಾರಗಳು ತೀವ್ರವಾಗಿ ಇದರ ಕೊರತೆಯನ್ನು ಹೊಂದಿರುತ್ತವೆ. ಒಮೇಗಾ-3 ಕೊಬ್ಬಿನಾಮ್ಲಗಳನ್ನು ಹೆಚ್ಚಾಗಿ ಹೆಚ್ಚಿನ-ಅಕ್ಷಾಂಶದ ಪ್ರದೇಶಗಳ ನೀರಿನಲ್ಲಿ ಹಿಡಿದ ಎಣ್ಣೆಯುಕ್ತ-ಮೀನುಗಳಿಂದ ಪಡೆಯಲಾಗುತ್ತದೆ. ಅವು ಹೆಚ್ಚುಕಡಿಮೆ ಮಾರ್ಗರೀನ್‌ಅನ್ನೂ ಒಳಗೊಂಡಂತೆ ಸಸ್ಯದ ಮೂಲಗಳಲ್ಲಿ ಕಂಡುಬರುವುದಿಲ್ಲ. ಆದರೆ ಆಲ್ಫಾ-ಲಿನೆಲಾಯ್ಕ್ ಆಮ್ಲ (ALA) ಎಂಬ ಒಂದು ಪ್ರಕಾರದ ಒಮೇಗಾ-3 ಕೊಬ್ಬಿನಾಮ್ಲವು ಕೆಲವು ಸಸ್ಯದ ಎಣ್ಣೆಗಳಲ್ಲಿ ಕಂಡುಬರುತ್ತದೆ. ಸೀಮೆ ಅಗಸೆಯ(ಫ್ಲ್ಯಾಕ್ಸ್) ಎಣ್ಣೆಯು 30-50%ನಷ್ಟು ALAಅನ್ನು ಹೊಂದಿರುತ್ತದೆ. ಆದ್ದರಿಂದ ಅದು ಅದರ ಪ್ರತಿಸ್ಫರ್ಧಿ ಮೀನಿನ-ಎಣ್ಣೆಗಳಿಗೆ ಒಂದು ಜನಪ್ರಿಯ ಆಹಾರ ಪೂರೈಕೆಯಾಗುತ್ತಿದೆ; ಎರಡನ್ನೂ ಹೆಚ್ಚಾಗಿ ಉತ್ತಮ ಗುಣಮಟ್ಟದ ಮಾರ್ಗರೀನ್‌ಗಳಿಗೆ ಸೇರಿಸಲಾಗುತ್ತದೆ. ಪುರಾತನ ಎಣ್ಣೆ-ಸಸ್ಯ ಕ್ಯಾಮಲಿನ ಸಟೈವ ವು ಅದರ ಹೆಚ್ಚಿನ ಪ್ರಮಾಣದ ಒಮೇಗಾ-3 (30-45%)ಯಿಂದಾಗಿ ಇತ್ತೀಚೆಗೆ ಜನಪ್ರಿಯತೆಯನ್ನು ಗಳಿಸಿತು. ಅದನ್ನು ಕೆಲವು ಮಾರ್ಗರೀನ್‌ಗಳಲ್ಲೂ ಬಳಸಲಾಗುತ್ತದೆ. ಸೆಣಬಿನ ಗಿಡದ(ಹೆಂಪ್) ಎಣ್ಣೆಯು ಸುಮಾರು 20%ಷ್ಟು ALAಅನ್ನು ಹೊಂದಿರುತ್ತದೆ. ಅಲ್ಪ ಪ್ರಮಾಣದ ALA, ಸಸ್ಯದ ಎಣ್ಣೆಗಳಾದ ಸೋಯಾಬೀನ್ ಎಣ್ಣೆ (7%), ರೇಪ್ಸೀಡ್ ಎಣ್ಣೆ (7%) ಮತ್ತು ಗೋಧಿ-ಭ್ರೂಣ ಎಣ್ಣೆ (5%)ಯಲ್ಲಿ ಕಂಡುಬರುತ್ತದೆ. - ಒಮೇಗಾ-3 ಕೊಬ್ಬಿನಾಮ್ಲಗಳು ಪಾಲಿಅನ್‌ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳ ಜಾತಿಯಾಗಿದ್ದು, ಆರೋಗ್ಯಕ್ಕೆ ಉತ್ತಮವಾದುದೆಂದು ಹೇಳಲಾಗುತ್ತದೆ. ಮಾವನ ದೇಹದಲ್ಲಿ ಉತ್ಪತ್ತಿಯಾಗದ, ಆಹಾರದ ಮೂಲಕವೇ ಪಡೆಯಬೇಕಾದ ಎರಡು
- ಒಮೇಗಾ-6 ಕೊಬ್ಬಿನಾಮ್ಲಗಳು ಸೆಣಬಿನ ಗಿಡದ (60%) ಹಾಗೂ ಹತ್ತಿಬೀಜ (50%) ಮತ್ತು ಸೂರ್ಯಕಾಂತಿ (50%)ಯಂತಹ ಮಾರ್ಗರೀನ್‌ಗೆ ಸಾಮಾನ್ಯವಾಗಿ ಬಳಸುವ ಎಣ್ಣೆ-ಬೀಜಗಳು (60%) ಹೆಚ್ಚಿನ ಪ್ರಮಾಣದಲ್ಲಿ LAಅನ್ನು ಹೊಂದಿರುತ್ತವೆ, ಆದರೆ ಹೆಚ್ಚಿನ ಉಷ್ಣವಲಯದ ಎಣ್ಣೆ-ಬೀಜಗಳು 10%ನಷ್ಟು ಮಾತ್ರ ಹೊಂದಿರುತ್ತವೆ. ಮಾರ್ಗರೀನ್ ಹೆಚ್ಚಿನ ಪ್ರಮಾಣದಲ್ಲಿ ಒಮೇಗಾ-6 ಕೊಬ್ಬಿನಾಮ್ಲಗಳನ್ನು ಒಳಗೊಂಡಿರುತ್ತದೆ. ಆಧುನಿಕ ಪಾಶ್ಚಿಮಾತ್ಯ ಆಹಾರಗಳು ಸಾಧಾರಣವಾಗಿ ಒಮೇಗಾ-6 ಅನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುತ್ತವೆ, ಆದರೆ ಒಮೇಗಾ-3ರ ಕೊರತೆಯಾಗಿರುತ್ತವೆ. ಒಮೇಗಾ-6 ಮತ್ತು ಒಮೇಗಾ-3ರ ಅನುಪಾತವು 10:1 ಮತ್ತು 30:1ರಷ್ಟಿರುತ್ತದೆ. ಹೆಚ್ಚಿನ ಪ್ರಮಾಣದ ಒಮೇಗಾ-6, ಒಮೇಗಾ-3ರ ಪ್ರಭಾವವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಆಹಾರದಲ್ಲಿನ ಅನುಪಾತವು 4:1ಗಿಂತ ಕಡಿಮೆ ಇರಬೇಕೆಂದು ಸೂಚಿಸಲಾಗುತ್ತದೆ, ಆದರೂ ಪ್ರಶಸ್ತ ಅನುಪಾತವು 1:1ನಷ್ಟಿರಲೂಬಹುದು.[೨೯][೩೦] ಒಮೇಗಾ-6 ಕೊಬ್ಬಿನಾಮ್ಲಗಳೂ ಸಹ ಆರೋಗ್ಯಕ್ಕೆ ಮುಖ್ಯವಾದುದಾಗಿವೆ. ಅವು ಉಷ್ಣವಲಯ ಹವಾಗುಣದಲ್ಲಿ ಬೆಳೆಯುವ ಸಸ್ಯದ ಎಣ್ಣೆಗಳಲ್ಲಿ ಹೇರಳವಾಗಿರುವ ಅವಶ್ಯಕ ಕೊಬ್ಬಿನಾಮ್ಲ ಲಿನಾಯ್ಕ್ ಆಮ್ಲ (LA)ವನ್ನು ಒಳಗೊಂಡಿರುತ್ತವೆ.
ಟ್ರಾನ್ಸ್ ಕೊಬ್ಬು
[ಬದಲಾಯಿಸಿ]ಇತರ ಆಹಾರದ ಕೊಬ್ಬುಗಳಿಗೆ ಭಿನ್ನವಾಗಿ, ಟ್ರಾನ್ಸ್ ಕೊಬ್ಬಿನಾಮ್ಲಗಳು ಅವಶ್ಯಕವಾದವುಗಳಲ್ಲ ಮತ್ತು ಅವು ಮಾನವನ ಆರೋಗ್ಯಕ್ಕೆ ಯಾವುದೇ ರೀತಿಯ ತಿಳಿದ ಪ್ರಯೋಜನಗಳನ್ನು ಮಾಡುವುದಿಲ್ಲ. ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳಂತೆ, ಟ್ರಾನ್ಸ್ ಕೊಬ್ಬಿನಾಮ್ಲದ ಸೇವನೆಯ ಮತ್ತು LDL ಕೊಲೆಸ್ಟರಾಲ್ ಮಟ್ಟದ ಮಧ್ಯೆ ಸಂಭಾವ್ಯ ನೇರ ಸಂಬಂಧವಿದೆ. ಆದ್ದರಿಂದ ಇದು LDL ಕೊಲೆಸ್ಟರಾಲ್ ಮಟ್ಟವನ್ನು ಏರಿಸುವ ಮತ್ತು HDL ಕೊಲೆಸ್ಟರಾಲ್ ಮಟ್ಟವನ್ನು ತಗ್ಗಿಸುವ ಮೂಲಕ ಪರಿಧಮನಿಯ ಹೃದಯ-ಕಾಯಿಲೆಯ[೧೬][೩೧] ಅಪಾಯದ ಹೆಚ್ಚುತ್ತದೆ.[೩೨] ಹೈಡ್ರೋಜನೀಕರಿಸಿದ ಎಣ್ಣೆಗಳು ನೈಸರ್ಗಿಕ ಎಣ್ಣೆಗಳಿಗಿಂತ ಅಧಿಕ ಟ್ರಾನ್ಸ್ ಬಂಧಗಳನ್ನು ಹೊಂದಿರುವುದರಿಂದ, ಅವನ್ನು ಸಾಮಾನ್ಯವಾಗಿ ಹೆಚ್ಚು ಹಾನಿಕರವೆಂದು ಪರಿಗಣಿಸಲಾಗುತ್ತದೆ.[೩೩]
ಕೆಲವು ಅಧ್ಯಯನಗಳು ಟ್ರಾನ್ಸ್ ಕೊಬ್ಬಿನ ಹೆಚ್ಚಿನ ಪ್ರಮಾಣದ ಸೇವನೆ ಮತ್ತು ಪರಿಧಮನಿ ಹೃದಯ-ಕಾಯಿಲೆಗಳ ಮಧ್ಯೆ ಸಂಬಂಧವೊಂದಿದೆ ಎಂದು ಸೂಚಿಸಿವೆ.[೩೪][೩೫][೩೬][೩೭] ಇವು ಪ್ರಪಂಚದಾದ್ಯಂತದ ಅನೇಕ ಸರಕಾರಿ ಆರೋಗ್ಯ ಸಂಸ್ಥೆಗಳು ಟ್ರಾನ್ಸ್-ಕೊಬ್ಬುಗಳ ಸೇವನೆಯನ್ನು ಕಡಿಮೆ ಮಾಡಲು ಸಲಹೆ ನೀಡುವಂತೆ ಪ್ರೇರೇಪಿಸಿವೆ.
USನಲ್ಲಿ, ಮನೆಯಲ್ಲಿ ತಯಾರಿಸಿದ ಎಣ್ಣೆಗಳನ್ನು ಹೆಚ್ಚಾಗಿ ಬಳಸುವುದರಿಂದ ಭಾಗಶಃ ಹೈಡ್ರೋಜನೀಕರಣವು ಸಾಮಾನ್ಯವಾಗಿದೆ. ಆದರೆ ಮಧ್ಯ-1990ರಿಂದ ಪ್ರಪಂಚದಾದ್ಯಂತದ ಹೆಚ್ಚಿನ ರಾಷ್ಟ್ರಗಳು ಭಾಗಶಃ ಹೈಡ್ರೋಜನೀಕರಿಸಿದ ಎಣ್ಣೆಗಳನ್ನು ಬಳಸುವುದರಿಂದ ದೂರಸರಿಯಲು ಆರಂಭಿಸಿದವು.[೩೮] ಇದು ಟ್ರಾನ್ಸ್ ಕೊಬ್ಬನ್ನು ಕಡಿಮೆ ಅಥವಾ ಹೊಂದಿಲ್ಲದೇ ಇರುವ ಹೊಸ ಮಾರ್ಗರೀನ್ ಪ್ರಕಾರಗಳನ್ನು ಉತ್ಪಾದಿಸುವಂತೆ ಮಾಡಿತು.[೩೯]
2003ರಿಂದ USನಲ್ಲಿನ ಆಹಾರ ಉತ್ಪಾದಕರು ಅವರ ಉತ್ಪನ್ನಗಳನ್ನು (ಸರಕಾರಿ ನಿಯಮಗಳನ್ನು ಅನುಸರಿಸಿಕೊಂಡು) "0 ಗ್ರಾಂ" ಟ್ರಾನ್ಸ್-ಕೊಬ್ಬಿರುವಂತೆ, ಅಂದರೆ ಒಬ್ಬ ವ್ಯಕ್ತಿಯ ಆಹಾರಕ್ಕೆ 500 ಮಿಗ್ರಾಂಗಿಂತಲೂ ಕಡಿಮೆ ಟ್ರಾನ್ಸ್-ಕೊಬ್ಬಿರುವಂತೆ, ಲೇಬಲ್ ಮಾಡುತ್ತಿದ್ದಾರೆ; ಯಾವುದೇ ಕೊಬ್ಬು ಸಂಪೂರ್ಣವಾಗಿ ಟ್ರಾನ್ಸ್ ಕೊಬ್ಬುರಹಿತವಾಗಿರುವುದಿಲ್ಲ. ಉದಾಹರಣೆಗಾಗಿ, ನೈಸರ್ಗಿಕ ಬೆಣ್ಣೆಯ-ಕೊಬ್ಬು 2-5%ನಷ್ಟು ಟ್ರಾನ್ಸ್-ಕೊಬ್ಬಿನಾಮ್ಲಗಳನ್ನು (ಮುಖ್ಯವಾಗಿ ಸಾಮಾನ್ಯ ವ್ಯಾಸೆನಿಕ್ ಆಮ್ಲದ ಒಂದು ರೂಪಾಂತರವಾದ ಟ್ರಾನ್ಸ್-ವ್ಯಾಸೆನಿಕ್ ಆಮ್ಲ) ಹೊಂದಿರುತ್ತದೆ.[೪೦] ನೈಸರ್ಗಿಕವಾಗಿ ಕಂಡುಬರುವ ಟ್ರಾನ್ಸ್-ಕೊಬ್ಬಿನಾಮ್ಲಗಳಾದ ರುಮೆನಿಕ್ ಆಮ್ಲ ಮತ್ತು ಟ್ರಾನ್ಸ್-ವ್ಯಾಸೆನಿಕ್ ಆಮ್ಲ (ರುಮೆನಿಕ್ ಆಮ್ಲವನ್ನು ತಯಾರಿಸಲು ಮಾನವನ ದೇಹವು ಟ್ರಾನ್ಸ್-ವ್ಯಾಸೆನಿಕ್ ಆಮ್ಲವನ್ನು ಬಳಸಿಕೊಳ್ಳುತ್ತದೆ[೪೧][೪೨]) ಕ್ಯಾನ್ಸರ್-ನಿರೋಧಕ ಗುಣಲಕ್ಷಣಗಳನ್ನು ಹೊಂದಿರುತ್ತವೆ.[೪೩] ಆದ್ದರಿಂದ ಇವು ಕೃತಕವಾಗಿ ಉತ್ಪಾದಿಸಿದ ಟ್ರಾನ್ಸ್-ಕೊಬ್ಬಿನಾಮ್ಲಗಳಿಗಿಂತ ಸ್ವಲ್ಪ ಭಿನ್ನವಾಗಿರುತ್ತವೆ.
US ಮತ್ತು ಕೆನಡಾದ ಮಾರ್ಗರೀನ್‌ನ ಬಗೆಗಿನ ನಿಯಮಗಳು ಒಂದೇ ರೀತಿಯಾಗಿಲ್ಲ. ಆದ್ದರಿಂದ US ನಿಯಂತ್ರಕ ಕಾರ್ಯಗಳನ್ನು ಕೆನಡಾದಲ್ಲಿ ನಡೆಸಲಾಗುವುದಿಲ್ಲ ಅಥವಾ ಬೇರೆ ರೂಪದಲ್ಲಿ ನಡೆಸಲಾಗಬಹುದು.
ಕೊಲೆಸ್ಟರಾಲ್‌ಗಳು
[ಬದಲಾಯಿಸಿ]ಮಿತಿಮೀರಿದ ಕೊಲೆಸ್ಟರಾಲ್ ಮಟ್ಟವು ಆರೋಗ್ಯಕ್ಕೆ ಹಾನಿಕರವಾಗಿರುತ್ತದೆ ಏಕೆಂದರೆ ಕೊಬ್ಬಿನ ಸಂಗ್ರಹವು ಕ್ರಮೇಣ ಅಪಧಮನಿಗಳಿಗೆ ಅಡ್ಡಿಮಾಡುತ್ತದೆ. ಇದು ಮಿದುಳು, ಹೃದಯ, ಮೂತ್ರಜನಕಾಂಗ ಮತ್ತು ದೇಹದ ಇತರ ಭಾಗಗಳಿಗೆ ರಕ್ತದ ಹರಿಯುವಿಕೆಯನ್ನು ಕಡಿಮೆ ಪರಿಣಾಮಕಾರಿಯಾಗುವಂತೆ ಮಾಡುತ್ತದೆ. ಕೊಲೆಸ್ಟರಾಲ್ ಚಯಾಪಚಯ ಕ್ರಿಯೆಗೆ ಸಂಬಂಧಿಸಿದಂತೆ ಅಗತ್ಯವಾಗಿದ್ದರೂ, ಸೇವಿಸುವ ಆಹಾರದಲ್ಲಿರಬೇಕಾಗಿಲ್ಲ. ಮಾನವ ಶರೀರವು ಪಿತ್ತಜನಕಾಂಗದಲ್ಲಿ ಪ್ರತಿ ದಿನಕ್ಕೆ ಸುಮಾರು 1 ಗ್ರಾಂನಷ್ಟು ಅಥವಾ ದೇಹಕ್ಕೆ ಬೇಕಾದ ಒಟ್ಟು ಕೊಲೆಸ್ಟರಾಲ್‌ನ 80%ನಷ್ಟು ಕೊಲೆಸ್ಟರಾಲ್‌ಅನ್ನು ಉತ್ಪಾದಿಸುತ್ತದೆ. ಉಳಿದ 20%ನಷ್ಟು ಆಹಾರದ ಸೇವನೆಯಿಂದ ನೇರವಾಗಿ ಬರುತ್ತದೆ.
ಆದ್ದರಿಂದ ಆಹಾರವಾಗಿ ಒಟ್ಟು ಕೊಲೆಸ್ಟರಾಲ್‌ನ ಸೇವನೆಯು ರಕ್ತದಲ್ಲಿನ ಕೊಲೆಸ್ಟರಾಲ್ ಮಟ್ಟದ ಮೇಲೆ ಸೇವಿಸಿದ ಕೊಬ್ಬಿನ ಪ್ರಕಾರಕ್ಕಿಂತ ಕಡಿಮೆ ಪರಿಣಾಮವನ್ನು ಹೊಂದಿದೆ.[೪೪] ಆದರೂ ಕೆಲವರು ಇತರರಿಗಿಂತ ಆಹಾರದ ಕೊಲೆಸ್ಟರಾಲ್‌ಗೆ ಹೆಚ್ಚು ಪ್ರತಿಕ್ರಿಯಾಶೀಲರಾಗಿರುತ್ತಾರೆ. U.S. ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್, ಆರೋಗ್ಯವಂತ ವ್ಯಕ್ತಿಗಳು ಪ್ರತಿ ದಿನ 300 ಮಿಗ್ರಾಂಗಿಂತಲೂ ಹೆಚ್ಚು ಕೊಲೆಸ್ಟರಾಲ್‌ಅನ್ನು ಸೇವಿಸಬೇಕೆಂದು ಹೇಳುತ್ತದೆ.
ಸಸ್ಯದ ಸ್ಟೆರಾಲ್/ಸ್ಟ್ಯಾನಲ್ ಈಸ್ಟರ್‌ಗಳು
[ಬದಲಾಯಿಸಿ]ಸಸ್ಯದ ಸ್ಟೆರಾಲ್ ಈಸ್ಟರ್‌ಗಳನ್ನು ಅಥವಾ ಸ್ಟ್ಯಾನಲ್ ಈಸ್ಟರ್‌ಗಳನ್ನು ಅವುಗಳ ಕೊಲೆಸ್ಟರಾಲ್ ಕಡಿಮೆ ಮಾಡುವ ಪರಿಣಾಮದಿಂದಾಗಿ ಕೆಲವು ಮಾರ್ಗರೀನ್‌ಗಳಿಗೆ ಮತ್ತು ಸ್ಪ್ರೆಡ್‌ಗಳಿಗೆ ಸೇರಿಸಲಾಗುತ್ತದೆ.
ಪ್ರತಿ ದಿನಕ್ಕೆ ಸುಮಾರು 2 ಗ್ರಾಂಗಳಷ್ಟು ಸೇವನೆಯು LDL ಕೊಲೆಸ್ಟರಾಲ್‌ಅನ್ನು ಸುಮಾರು 10%ನಷ್ಟು ಇಳಿಸುತ್ತದೆ ಎಂದು ಕೆಲವು ಅಧ್ಯಯನಗಳು ಸೂಚಿಸಿವೆ.[೪೫][೪೬] ಸ್ಟೆರಾಲ್/ಸ್ಟ್ಯಾನಲ್ ಈಸ್ಟರ್‌ಗಳು ರುಚಿ ಮತ್ತು ಬಣ್ಣರಹಿತವಾಗಿರುತ್ತವೆ ಹಾಗೂ ಹೆಚ್ಚಿನ ಕೊಬ್ಬುಗಳಂತಹುದೇ ಭೌತಿಕ ಮತ್ತು ರಾಸಾಯನಿಕ ಗುಣಲಕ್ಷಣಗಳನ್ನು ಹೊಂದಿರುತ್ತವೆ. ಅವು ರಕ್ತದ ಪ್ರವಾಹವನ್ನು ಪ್ರವೇಶಿಸುವುದಿಲ್ಲ. ಬದಲಿಗೆ ಕರುಳಿನ ಮೂಲಕ ಸಾಗುತ್ತದೆ, ಅದು ಕಡಿಮೆ-ಕೊಬ್ಬಿನ ಮಾರ್ಗರೀನ್, ಸ್ಟೆರಾಲ್/ಸ್ಟ್ಯಾನಲ್ ಈಸ್ಟರ್‌ಗಳಿಗೆ ಒಂದು ಉತ್ತಮ ವಾಹಕವಾಗುವಂತೆ ಮಾಡುತ್ತದೆ.
ಮಾರ್ಗರೀನ್ ಇಂದು
[ಬದಲಾಯಿಸಿ]ಯೂರೋಪಿಯನ್ ಒಕ್ಕೂಟ
ಯೂರೋಪಿಯನ್ ಒಕ್ಕೂಟದ ನಿರ್ದೇಶನಗಳಡಿಯಲ್ಲಿ[೪೭], ಮಾರ್ಗರೀನ್‌ಅನ್ನು ಹೀಗೆಂದು ನಿರೂಪಿಸಲಾಗಿದೆ:
ಕನಿಷ್ಠ 80%ನಷ್ಟು ಮತ್ತು 90%ಗಿಂತ ಕಡಿಮೆ ಕೊಬ್ಬಿನಾಂಶದೊಂದಿಗೆ, 20 °C ತಾಪಮಾನದಲ್ಲಿ ಗಟ್ಟಿಯಾಗಿರುವ, ಸಸ್ಯ/ಪ್ರಾಣಿಯ ಕೊಬ್ಬುಗಳಿಂದ ಪಡೆದ ಒಂದು ಎಣ್ಣೆಯಲ್ಲಿ-ನೀರಿನ ಎಮಲ್ಷನ್.
ಮಾರ್ಗರೀನ್‌ಗಳು ಹಾಲಿನ ಕೊಬ್ಬಿನಾಂಶವನ್ನು 3%ಗಿಂತ ಹೆಚ್ಚಿಗೆ ಹೊಂದಿರುವುದಿಲ್ಲ. ಮಿಶ್ರಣಗಳಲ್ಲಿ ಮತ್ತು ಬೆರೆಸಿದ ಸ್ಪ್ರೆಡ್‌ಗಳಲ್ಲಿ ಹಾಲಿನ ಕೊಬ್ಬು 10%ರಿಂದ 80%ನಷ್ಟು ಪ್ರಮಾಣದಲ್ಲಿರುತ್ತದೆ.[೪೮]
60ರಿಂದ 62%ನಷ್ಟು ಕೊಬ್ಬನ್ನು ಹೊಂದಿರುವ ಸ್ಪ್ರೆಡ್ಅನ್ನು "ಥ್ರೀ-ಕ್ವಾರ್ಟರ್-ಫ್ಯಾಟ್ ಮಾರ್ಗರೀನ್" ಅಥವಾ "ರೆಡ್ಯೂಸ್ಡ್-ಫ್ಯಾಟ್ ಮಾರ್ಗರೀನ್" ಎಂದು ಕರೆಯಲಾಗುತ್ತದೆ. 39ರಿಂದ 41%ನಷ್ಟು ಕೊಬ್ಬನ್ನು ಹೊಂದಿರುವ ಸ್ಪ್ರೆಡ್ಅನ್ನು "ಹಾಫ್-ಫ್ಯಾಟ್ ಮಾರ್ಗರೀನ್", "ಲೊ-ಫ್ಯಾಟ್ ಮಾರ್ಗರೀನ್" ಅಥವಾ "ಲೈಟ್ ಮಾರ್ಗರೀನ್" ಎಂದು ಕರೆಯುತ್ತಾರೆ. ಯಾವುದೇ ಬೇರೆ ಪ್ರತಿಶತದಷ್ಟು ಕೊಬ್ಬನ್ನು ಹೊಂದಿರುವ ಸ್ಪ್ರೆಡ್‌ಅನ್ನು "ಫ್ಯಾಟ್ ಸ್ಪ್ರೆಡ್" ಅಥವಾ "ಲೈಟ್ ಸ್ಪ್ರೆಡ್" ಎನ್ನುತ್ತಾರೆ.
ಅನೇಕ ಸದಸ್ಯ ರಾಷ್ಟ್ರಗಳು ಪ್ರಸ್ತುತ ಸಾರ್ವಜನಿಕ ಆರೋಗ್ಯ ರಕ್ಷಣಾ ಕಾರಣಗಳಿಗಾಗಿ ಮಾರ್ಗರೀನ್ ಮತ್ತು ಕೊಬ್ಬಿನ ಸ್ಪ್ರೆಡ್‌ಗಳಿಗೆ A ಮತ್ತು D ಜೀವಸತ್ವವನ್ನು ಕಡ್ಡಾಯವಾಗಿ ಸೇರಿಸಬೇಕಾಗಿವೆ. ಮಾರ್ಗರೀನ್‌ಗೆ ಜೀವಸತ್ವಗಳನ್ನು ಸೇರಿಸಿ ಸಾರವರ್ಧಿಸುವ ಸ್ವಯಂಪ್ರೇರಿತ ಕಾರ್ಯಗಳನ್ನು ತಯಾರಕರು 1925ರಿಂದ ಆರಂಭಿಸಿದರು. ಆದರೆ 1940ರಲ್ಲಿ ಯುದ್ಧದ ಬರುವಿಕೆಯೊಂದಿಗೆ, ಕೆಲವು ಸರಕಾರಗಳು ಅವುಗಳ ರಾಷ್ಟ್ರಗಳ ಪೌಷ್ಠಿಕಾಂಶದ ಸ್ಥಿತಿಯನ್ನು ರಕ್ಷಿಸಲು A ಮತ್ತು D ಜೀವಸತ್ವಗಳ ಸೇರಿಸುವಿಕೆಯನ್ನು ಕಡ್ಡಾಯಗೊಳಿಸಿದವು. ಈ ಕಡ್ಡಾಯ ಸಾರವರ್ಧನೆಯು, ಮಾರ್ಗರೀನ್‌ಅನ್ನು ಆಹಾರದಲ್ಲಿ ಬೆಣ್ಣೆಯ ಬದಲಿಗೆ ಬಳಸಲಾಗುತ್ತದೆ ಎಂಬ ಅಭಿಪ್ರಾಯದೊಂದಿಗೆ ಸಮರ್ಥಿಸಲ್ಪಟ್ಟಿತು.[೪೯]
ಯುನೈಟೆಡ್ ಕಿಂಗ್ಡಮ್
ಯುನೈಟೆಡ್ ಕಿಂಗ್ಡಮ್‌ನಲ್ಲಿ ಭಾಗಶಃ ಹೈಡ್ರೋಜನೀಕರಿಸಿದ ಎಣ್ಣೆಗಳನ್ನು ಹೊಂದಿರುವ ಸ್ಪ್ರೆಡ್‌ನ ಯಾವುದೇ ಬ್ರ್ಯಾಂಡ್‌ಗಳು ಮಾರಾಟದಲ್ಲಿಲ್ಲ. A ಮತ್ತು D ಜೀವಸತ್ವಗಳ ಸಾರವರ್ಧನೆಯು ಮಾರ್ಗರೀನ್‌ಗೆ ಕಡ್ಡಾಯವಾಗಿದ್ದರೂ, ಇತರ ಸ್ಪ್ರೆಡ್‌ಗಳಿಗೆ ಇದು ಕೇವಲ ಸ್ವಯಂಪ್ರೇರಿತ ಅವಶ್ಯಕತೆಯಾಗಿದೆ.[೫೦]
ಕೆನಡಾ
ಕೆನಡಾದ ಪ್ರಮಾಣಕ B.09.016 ಹೀಗೆಂದು ಸೂಚಿಸುತ್ತದೆ - ಮಾರ್ಗರೀನ್ ಎಂದರೆ:
"ಕೊಬ್ಬಿನ ಪ್ಲ್ಯಾಸ್ಟಿಕ್ ಅಥವಾ ದ್ರವ ಎಮಲ್ಷನ್ ಅಥವಾ ಕೊಬ್ಬಿನ, ಎಣ್ಣೆಯಲ್ಲಿನ ನೀರು ಅಥವಾ 80%ಗಿಂತ ಕಡಿಮೆ ಇಲ್ಲದಷ್ಟು ಕೊಬ್ಬನ್ನು ಹಾಗೂ 3300 IUಗಿಂತ ಕಡಿಮೆ ಇಲ್ಲದಷ್ಟು A ಜೀವಸತ್ವ ಮತ್ತು 530 IUನಷ್ಟು D ಜೀವಸತ್ವವನ್ನು ಹೊಂದಿರುವ, ಹಾಲಿನಿಂದ ಪಡೆಯದ ಕೊಬ್ಬು ಮತ್ತು ಎಣ್ಣೆ".[೫೧]
ಕ್ಯಾಲೋರಿ ಕುಗ್ಗಿಸಿದ ಮಾರ್ಗರೀನ್‌ಅನ್ನು ಪ್ರಮಾಣಕ B.09.017ರಲ್ಲಿ ಹೀಗೆಂದು ನಿರ್ದಿಷ್ಟಪಡಿಸಲಾಗಿದೆ:
"40%ಗಿಂತ ಕಡಿಮೆ ಇಲ್ಲದಷ್ಟು ಕೊಬ್ಬು ಮತ್ತು 50%ನಷ್ಟು ಕ್ಯಾಲೋರಿಗಳು ಸಾಮಾನ್ಯವಾಗಿ ಮಾರ್ಗರೀನ್‌ನಲ್ಲಿ ಕಂಡುಬರುತ್ತವೆ".[೫೧]
ಆಸ್ಟ್ರೇಲಿಯೇಷಿಯಾ
ಮಾರ್ಗರೀನ್ ಆಸ್ಟ್ರೇಲಿಯಾದ ಸೂಪರ್‌ಮಾರ್ಕೆಟ್‌ಗಳಲ್ಲಿ ಸಾಮಾನ್ಯವಾಗಿರುತ್ತದೆ. ಗ್ರಾಹಕರು "ಅವರ ದಿನನಿತ್ಯದ ಆಹಾರದಲ್ಲಿ ಸ್ಪ್ರೆಡ್‌ಗಳ ಬಳಕೆಯನ್ನು ಕಡಿಮೆ ಮಾಡುತ್ತಿರುವುದರಿಂದ" ಉತ್ಪನ್ನದ ಮಾರಾಟವು ಇತ್ತೀಚೆಗೆ ಕ್ಷೀಣಿಸುತ್ತಿದೆ.[೫೨] ಆಸ್ಟ್ರೇಲಿಯಾದಲ್ಲಿ ಬಣ್ಣಯುಕ್ತ ಮಾರ್ಗರೀನ್‌ಅನ್ನು ಮಾರಾಟ ಮಾಡುವುದು 1960ರವರೆಗೆ ಕಾನೂನು ಸಮ್ಮತವಾಗಿರಲಿಲ್ಲ.
ನ್ಯೂಜಿಲ್ಯಾಂಡ್‌ನಲ್ಲಿ ಈ ಉತ್ಪನ್ನದ ಲಭ್ಯತೆಯು ಐತಿಹಾಸಿಕವಾಗಿ ಆಸ್ಟ್ರೇಲಿಯಾದಲ್ಲಿನ ಲಭ್ಯತೆಯನ್ನು ಹೋಲುತ್ತದೆ.
ಇವನ್ನೂ ಗಮನಿಸಿ
[ಬದಲಾಯಿಸಿ]ಆಕರಗಳು
[ಬದಲಾಯಿಸಿ]- ↑ ೧.೦ ೧.೧ ೧.೨ Baker Christopher G.J, Ranken H.D, Kill R.C., ed. (1997). Food industries manual. Vol. 24th Edition. Springer. pp. 285–289. ISBN 9780751404043. Retrieved 13 November 2009.
{{cite book}}
: CS1 maint: multiple names: editors list (link) - ↑ C.G. ಲೆಹ್‌ಮ್ಯಾನ್, ಲೆಹ್ರ್‌ಬಚ್ ದೇರ್ ಫಿಸಿಯಲಾಜಿಸ್ಚೆನ್ ಕೆಮಿ, ವರ್ಲಾಗ್ ವಿಲ್ಹೆಲ್ಮ್, ಲೈಪ್ಜಿಗ್ (1853) ಪುಟ 71.
- ↑ ಸೈನ್ಸ್ ಪವರ್ 9: ಅಟ್ಲಾಂಟಿಕ್ ಎಡಿಶನ್, ಮ್ಯಾಕ್‌ಗ್ರಾ-ಹಿಲ್ ರೇರ್ಸನ್ ಲಿಮಿಟೆಡ್. ISBN 0-07-560905-3.
- ↑ Anon. "Stork Margarine:How it all started". Unilever :Our Brands. Unilever. Archived from the original on 2009-10-12. Retrieved 2009-10-21.
- ↑ Visser, Margaret (1986). Much Depends on Dinner. Toronto: Harper Perennial Canada. p. 107. ISBN 0006391044.
{{cite book}}
: Cite has empty unknown parameter:|coauthors=
(help) - ↑ ಡ್ಯೂಪ್ರೆ R: ಮಾರ್ಗರೀನ್ ರೆಗ್ಯುಲೇಶನ್ ಇನ್ ನಾರ್ತ್ ಅಮೆರಿಕ ಸಿನ್ಸ್ 1886', ಜರ್ನಲ್ ಆಫ್ ಇಕಾನಮಿಕ್ ಹಿಸ್ಟರಿ, ಸಂಪುಟ 59, ಸಂ. 2, ಜೂನ್ 1999, ಪುಟಗಳು 353-371.
- ↑ ಇಂಟ್ರಾಸ್ಟೇಟ್ ಸೇಲ್ಸ್ ಆಫ್ ಕಲರ್ಡ್ ಆಲಿಯೊಮಾರ್ಗರೀನ್
- ↑ "Yellow margarine: I Can't Believe It's Not Legal!". AP / USA Today. 2008-12-16.
- ↑ ೯.೦ ೯.೧ "Canada's conflicted relationship with margarine". CBC News Online. 2005-03-18. Archived from the original on 2004-06-04. Retrieved 2007-08-28.
- ↑ "Resolving Canada's conflicted relationship with margarine". CBC News Online. 2008-07-09. Archived from the original on 2008-07-29. Retrieved 2008-07-10.
- ↑ ೧೧.೦ ೧೧.೧ ೧೧.೨ ೧೧.೩ Rajah, Kanes (1 May 2005). "Spread thickly with innovation: with the basic concept of spreads unchanged for decades, producers have to be increasingly innovative in their product development and marketing. Kanes Rajah outlines some successful strategies". Al Business website. The Gale Group, Inc. Retrieved 10 November 2009.
- ↑ ೧೨.೦ ೧೨.೧ ೧೨.೨ ೧೨.೩ ೧೨.೪ Clark, Paul (6 may 1983). "The marketing iof margarine" (PDF). Paper presented to a seminar on Marketing and Advertising in the 20th Century at Central London Polytechnic. Emeral Backfiles. p. 54. Retrieved 2009-11-10.
{{cite web}}
: Check date values in:|date=
(help)[ಶಾಶ್ವತವಾಗಿ ಮಡಿದ ಕೊಂಡಿ] - ↑ "ಆರ್ಕೈವ್ ನಕಲು". Archived from the original on 2005-04-14. Retrieved 2010-06-29.
- ↑ "ಆರ್ಕೈವ್ ನಕಲು". Archived from the original on 2009-11-09. Retrieved 2010-06-29.
- ↑ ೧೫.೦ ೧೫.೧ Claek, Jim. "The Hydrogenation of Alkenes:Margarine Manufacture". Chemguide:Helping you to understand Chemistry. Retrieved 9 November 2009.
- ↑ ೧೬.೦ ೧೬.೧ Food and nutrition board, institute of medicine of the national academies (2005). Dietary Reference Intakes for Energy, Carbohydrate, Fiber, Fat, Fatty Acids, Cholesterol, Protein, and Amino Acids (Macronutrients). National Academies Press. p. 423. Archived from the original on 2007-06-25. Retrieved 2010-06-29.
- ↑ "Palm Oil/Palm Kernel Oil Applications - Margarine" (PDF). The Malaysian Palm Oil Council. Archived from the original (PDF) on 2020-02-25. Retrieved 2010-01-04.
- ↑ Shurtleff, William (2007). "History of sot oil margarine". Soyinfo Center. Retrieved 4 January 2010.
{{cite web}}
: Unknown parameter|coauthors=
ignored (|author=
suggested) (help) - ↑ ೧೯.೦ ೧೯.೧ Anon. "Margarine". Butter through the ages. webexhibits.org. Archived from the original on 20 ಜನವರಿ 2021. Retrieved 10 November 2009.
- ↑ O'Connor, Anahad (16 October 2007). "The Claim: Margarine Is Healthier Than Butter". New York Times. New York Times Company. Retrieved 10 October 2009.
- ↑ Anon. "Eating less butter and more fat". Butter through the ages. webexhibits.org. Archived from the original on 17 ಅಕ್ಟೋಬರ್ 2008. Retrieved 10 November 2009.
- ↑ Mayo Clinic (January 31, 2007). "Dietary fats: Know which types to choose". Retrieved 2008-05-18.
- ↑ ೨೩.೦ ೨೩.೧ NutriStrategy (2005). "Fats, Cooking Oils and Fatty Acids". Retrieved 2008-05-18.[ಶಾಶ್ವತವಾಗಿ ಮಡಿದ ಕೊಂಡಿ]
- ↑ D.W. ದಿ ಬ್ರೂಜ್ನೆ, A. ಬಾಟ್, ಫ್ಯಾಬ್ರಿಕೇಟೆಡ್ ಫ್ಯಾಟ್-ಬೇಸ್ಡ್ ಫುಡ್ಸ್, ಇನ್: ಫುಡ್ ಟೆಕ್ಸ್ಟರ್ — ಮೆಸರ್ಮೆಂಟ್ ಆಂಡ್ ಪರ್ಸೆಪ್ಷನ್ (ಸಂಪಾದಕರು A.J. ರೊಸೆಂತಾಲ್), ಆಸ್ಪೆನ್, ಗೈತರ್ಸ್‌ಬರ್ಗ್, 1999, ಪುಟಗಳು 185-227.
- ↑ "ಆರ್ಕೈವ್ ನಕಲು". Archived from the original on 2015-03-03. Retrieved 2010-06-29.
- ↑
Müller; et al. (2003). "The Serum LDL/HDL Cholesterol Ratio Is Influenced More Favorably by Exchanging Saturated with Unsaturated Fat Than by Reducing Saturated Fat in the Diet of Women". Retrieved 2008-05-18.
{{cite web}}
: Explicit use of et al. in:|author=
(help); Unknown parameter|month=
ignored (help) - ↑ Hu, Manson, Willett (2001). "Types of Dietary Fat and Risk of Coronary Heart Disease: A Critical Review". Archived from the original on 2008-06-22. Retrieved 2008-05-18.
{{cite web}}
: CS1 maint: multiple names: authors list (link) - ↑ Jeppesen; et al. (2001). "Low Triglycerides–High High-Density Lipoprotein Cholesterol and Risk of Ischemic Heart Disease". Archived from the original on 2011-08-31. Retrieved 2008-05-18.
{{cite web}}
: Explicit use of et al. in:|author=
(help) - ↑ Clear Springs Press (2006). "Omega-3 and Omega-6 Essential fatty Acids (EFA)". Retrieved 2008-07-18.
- ↑ Chico College of Agriculture (January 18, 2007). "Grass Fed Beef - Health Benefits". Archived from the original on 2008-07-06. Retrieved 2008-07-18.
- ↑ Food and nutrition board, institute of medicine of the national academies (2005). Dietary Reference Intakes for Energy, Carbohydrate, Fiber, Fat, Fatty Acids, Cholesterol, Protein, and Amino Acids (Macronutrients). National Academies Press. p. 504.[ಶಾಶ್ವತವಾಗಿ ಮಡಿದ ಕೊಂಡಿ]
- ↑ "Trans fat: Avoid this cholesterol double whammy". Mayo Foundation for Medical Education and Research (MFMER). Retrieved 2007-12-10.
- ↑ Mozaffarian D, Katan MB, Ascherio A, Stampfer MJ, Willett WC (13 April 2006). "Trans Fatty Acids and Cardiovascular Disease". New England Journal of Medicine. 354 (15): 1601–1613. doi:10.1056/NEJMra054035. PMID 16611951. Archived from the original on 19 ಸೆಪ್ಟೆಂಬರ್ 2009. Retrieved 29 ಜೂನ್ 2010.
{{cite journal}}
: CS1 maint: multiple names: authors list (link) PMID 16611951 - ↑ W.C. ವಿಲ್ಲೆಟ್, M.J. ಸ್ಟ್ಯಾಂಫರ್, J.E. ಮೇಸನ್, G.A. ಕೋಲ್ಡಿಟ್ಜ್, F.E. ಸ್ಪೈಜರ್, B.A. ರೋಸ್ನರ್, L.A. ಸ್ಯಾಂಪ್ಸನ್, C.H. ಹೆನ್ನೆಕೆಸ್, ಇಂಟೇಕ್ ಆಫ್ ಟ್ರಾನ್ಸ್ ಫ್ಯಾಟಿ ಆಸಿಡ್ಸ್ ಆಂಡ್ ರಿಸ್ಕ್ ಆಫ್ ಕೊರೊನರಿ ಹಾರ್ಟ್ ಡಿಸೀಸ್ ಎಮಾಂಗ್ ವುಮೆನ್, ಲ್ಯಾನ್ಸೆಟ್ 341, 581-585 (1993)
- ↑ F.B. ಹು, M.J. ಸ್ಟ್ಯಾಂಫರ್, ಮ್ಯಾನ್ಸನ್ JE, E. ರಿಮ್, G.A. ಕೋಲ್ಡಿಟ್ಜ್, B.A. ರೋಸ್ನರ್, C.H. ಹೆನ್ನೆಕೆನ್ಸ್, W.C. ವಿಲ್ಲೆಟ್, ಡೈಯಟರಿ ಫ್ಯಾಂಟ್ ಇಂಟೇಕ್ ಆಂಡ್ ರಿಸ್ಕ್ ಆಫ್ ಕೊರೊನರಿ ಹಾರ್ಟ್ ಡಿಸೀಸ್ ಇನ್ ವುಮೆನ್, ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ 337, 1491-1499 (1997) http://content.nejm.org/cgi/content/short/337/21/1491 Archived 2010-07-15 ವೇಬ್ಯಾಕ್ ಮೆಷಿನ್ ನಲ್ಲಿ.
- ↑ K. ಹಯಕವ, Y.Y. ಲಿಂಕೊ, P. ಲಿಂಕೊ, ದ ರೋಲ್ ಆಫ್ ಟ್ರಾನ್ಸ್ ಫ್ಯಾಟಿ ಆಸಿಡ್ಸ್ ಇನ್ ಹ್ಯೂಮನ್ ನ್ಯೂಟ್ರಿಷನ್, ಜರ್ನಲ್ ಆಫ್ ಲಿಪಿಡ್ ಸೈನ್ಸ್ ಆಂಡ್ ಟೆಕ್ನಾಲಜಿ 102, 419-425 (2000)
- ↑ ದ ನರ್ಸಸ್ ಹೆಲ್ತ್ ಸ್ಟಡಿ (NHS)
- ↑ E. ಫ್ಲಾಟರ್, G. ವ್ಯಾನ್ ಡ್ಯುಜಿನ್, ಟ್ರಾನ್ಸ್-ಫ್ರೀ ಫ್ಯಾಟ್ಸ್ ಫಾರ್ ಯೂಸ್ ಇನ್ ಫುಡ್ಸ್, ಇನ್: ಮಾಡಿಫೈಯಿಂಗ್ ಲಿಪಿಡ್ಸ್ ಫಾರ್ ಯೂಸ್ ಇನ್ ಫುಡ್ಸ್ (ಸಂಪಾದಕರು F.D. ಗನ್‌ಸ್ಟೋನ್), ವುಡ್‌ಹೆಡ್, ಕೇಂಬ್ರಿಡ್ಜ್, UK, 2006, ಪುಟ 429-443.
- ↑ G. ವ್ಯಾನ್ ಡ್ಯುಜಿನ್, ಟೆಕ್ನಿಕಲ್ ಆಸ್ಪೆಕ್ಟ್ಸ್ ಆಫ್ ಟ್ರಾನ್ಸ್ ರಿಡಕ್ಷನ್ ಇನ್ ಮಾಡಿಫೈಟ್ ಫ್ಯಾಟ್ಸ್, ಆಲೀಜಿನಿಯಾಕ್ಸ್, ಕಾರ್ಪ್ಸ್ ಗ್ರಾಸ್, ಲಿಪಿಡೆಸ್, 12, 422-426 (2005)
- ↑ ಗಮನಿಸಿ - ಉದಾ. P.S. ಆನಂದ್ ಮತ್ತು ಇತರರು, J. ಡೈರಿ ರೆಸ್. 71, 66-73 (2004)
- ↑ Bauman, Dale. "cis-9, trans-11 CLA - A Potent Anticarcinogen Found in Milk Fat". Retrieved 2007-01-15.
- ↑ Banni S, Angioni E, Murru E, Carta G, Melis M, Bauman D, Dong Y, Ip C (2001). "Vaccenic acid feeding increases tissue levels of conjugated linoleic acid and suppresses development of premalignant lesions in rat mammary gland". Nutr Cancer. 41 (1–2): 91–7. doi:10.1207/S15327914NC41-1&2_12. PMID 12094634.
{{cite journal}}
:|access-date=
requires|url=
(help)CS1 maint: multiple names: authors list (link) - ↑ Lock AL, Corl BA, Barbano DM, Bauman DE, Ip C. (1 October 2004). "The anticarcinogenic effect of trans-11 18:1 is dependent on its conversion to cis-9, trans-11 CLA by delta9-desaturase in rats". J Nutr. 134(10) (10): 2698–704. PMID 15465769. Retrieved 2007-01-15.
{{cite journal}}
: CS1 maint: multiple names: authors list (link) - ↑ Harvard School of Public Health. "The Nutrition Source - Fats and Cholesterol".
- ↑ Katan; et al. (2003). "Efficacy and Safety of Plant Stanols and Sterols in the Management of Blood Cholesterol Levels" (PDF). Archived from the original (PDF) on 2008-12-17. Retrieved 2008-04-08.
{{cite web}}
: Explicit use of et al. in:|author=
(help) - ↑ IFIC (2007). "Functional Foods Fact Sheet: Plant Stanols and Sterols". Archived from the original on 2008-04-11. Retrieved 2008-04-08.
{{cite web}}
: Unknown parameter|month=
ignored (help) - ↑ "Spreadable fats (dairy and non-dairy): Definition, labelling and sale". Retrieved 2010-01-05.
- ↑ Anon. "EU Margarine legislation". Website of the International Margarine Association of the Countries of Europe. IMACE. Archived from the original on 3 ಅಕ್ಟೋಬರ್ 2011. Retrieved 11 November 2009.
- ↑ Anon. "Code of Parctice on Vitamin A&D fortification of fats and spreads" (PDF). IMACE Code of practice. IMACE. Archived from the original (PDF) on 2011-10-03. Retrieved 2009-11-10.
- ↑ Anon. "What's in a margarine spread?". Website of the Margarines and Spreads Association. MSA. Retrieved 10 November 2009.
- ↑ ೫೧.೦ ೫೧.೧ Gunstone, Frank D. (13 May 1997). Lipid technologies and applications. CRC Press. p. 311. ISBN 0824798384.
{{cite book}}
: Unknown parameter|coauthors=
ignored (|author=
suggested) (help) - ↑ "ಆರ್ಕೈವ್ ನಕಲು". Archived from the original on 2005-05-07. Retrieved 2010-06-29.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಕೆನಡಾದಲ್ಲಿ ಮಾರ್ಗರೀನ್ ಬಗೆಗಿನ ಒಂದು ಗಂಟೆ ರೇಡಿಯೊ ಪ್ರಸಾರ (ಡಿಕಂಸ್ಟ್ರಕ್ಟಿಂಗ್ ಡಿನ್ನರ್) Archived 2007-10-19 ವೇಬ್ಯಾಕ್ ಮೆಷಿನ್ ನಲ್ಲಿ.
- ಅಮೆರಿಕ್ ಹಾರ್ಟ್ ಅಸೋಸಿಯೇಶನ್ ಆರ್ಟಿಕಲ್ [ಡೆಡ್ ಲಿಂಕ್]
- ಹೈಫೋಮ ಎಬೌಟ್ ಮಾರ್ಗರೀನ್
- ಕ್ಲಾಸಿಕ್ ಸ್ಟಾರ್ಕ್ ಮಾರ್ಗರೀನ್ ಆಡ್ ಫ್ರಮ್ 1974
- CS1 maint: multiple names: editors list
- CS1: long volume value
- CS1 errors: empty unknown parameters
- CS1 errors: dates
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಏಪ್ರಿಲ್ 2023
- Articles with invalid date parameter in template
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- CS1 errors: unsupported parameter
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- CS1 errors: explicit use of et al.
- CS1 maint: multiple names: authors list
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: access-date without URL
- Pages using ISBN magic links
- Pages using PMID magic links
- Articles containing Ancient Greek (to 1453)-language text
- Articles with unsourced statements from May 2010
- Pages containing citation needed template with deprecated parameters
- Articles with unsourced statements from June 2008
- Articles with hatnote templates targeting a nonexistent page
- Commons link is locally defined
- Commons category with page title different than on Wikidata
- ಫ್ರೆಂಚ್ ಆವಿಷ್ಕಾರಗಳು
- ಸ್ಪ್ರೆಡ್‌ಗಳು
- ಅಡುಗೆಯ ಕೊಬ್ಬುಗಳು