ಭೋಗ ನಂದೀಶ್ವರ ದೇವಾಲಯ
Bhoga Nandeeshwara Temple complex | |
---|---|
ಸ್ಥಳ | Nandi, Chikkaballapura, Chikkaballapura, Karnataka, ಭಾರತ |
Coordinates | 13°23′12″N 77°41′53″E / 13.3868°N 77.6980°E |
ನಿರ್ಮಾಣ | Early 9th century A.D.-16th century |
ವಾಸ್ತುಶಿಲ್ಪ ಶೈಲಿ | Dravidian |
ಭೋಗ ನಂದೀಶ್ವರ ದೇವಾಲಯವು ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟ (ಅಥವಾ ನಂದಿದುರ್ಗ)ದ ಬುಡದಲ್ಲಿರುವ, ನಂದಿ ಗ್ರಾಮದಲ್ಲಿ ಇರುವ ಶಿವನ ದೇವಾಲಯವಾಗಿದೆ.
ಈ ಸಂಕೀರ್ಣದಲ್ಲಿರುವ ಮೂಲ ದೇವಾಲಯವು ಕರ್ನಾಟಕದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿದೆ, ಇದು 9 ನೇ ಶತಮಾನದ ಆರಂಭದ್ದಾಗಿದೆ. ಭಾರತದ ಪುರಾತತ್ವ ಇಲಾಖೆಯ ಪ್ರಕಾರ ಹಳೆಯ ಶಾಸನಗಳಲ್ಲಿ ಪ್ರಕಾರ, ಈ ಶಿವ ದೇವಾಲಯದ ನಿರ್ಮಾಣದ ಉಲ್ಲೇಖವು ನೊಳಂಬ ರಾಜವಂಶದ ದೊರೆ ನೊಳಂಬಾಧಿರಾಜ ಮತ್ತು ರಾಷ್ಟ್ರಕೂಟ ದೊರೆ ಮೂರನೇ ಗೋವಿಂದನ ಕ್ರಿ.ಶ. ೮೦೬ ರ ಶಾಸನಗಳಲ್ಲಿ, ಮತ್ತು ಸುಮಾರು ಕ್ರಿ.ಶ. ೮೧೦ರ ಬಾಣ ರಾಜವಂಶದ ಜಯತೇಜ ಮತ್ತು ದತ್ತಿಯನ ತಾಮ್ರದ ಫಲಕಗಳಲ್ಲಿ ಇದೆ . ಈ ದೇವಾಲಯವು ನಂತರದಲ್ಲಿ ದಕ್ಷಿಣ ಭಾರತದ ರಾಜವಂಶಗಳಾದ ಗಂಗ ರಾಜವಂಶ, ಚೋಳ ಸಾಮ್ರಾಜ್ಯ, ಹೊಯ್ಸಳ ಸಾಮ್ರಾಜ್ಯ ಮತ್ತು ವಿಜಯನಗರ ಸಾಮ್ರಾಜ್ಯಗಳ ಆಶ್ರಯದಲ್ಲಿತ್ತು:. ಮಧ್ಯಕಾಲೀನ ನಂತರದ ಯುಗದಲ್ಲಿ, ಚಿಕ್ಕಬಳ್ಳಾಪುರದ ಸ್ಥಳೀಯ ಮುಖ್ಯಸ್ಥರು ಮತ್ತು ಮೈಸೂರು ಸಾಮ್ರಾಜ್ಯದ ಆಡಳಿತಗಾರರು ( ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ) ಕ್ರಿ.ಶ.1799 ರಲ್ಲಿ ಟಿಪ್ಪು ಸುಲ್ತಾನನ ಮರಣದ ನಂತರ ಅಂತಿಮವಾಗಿ ಬ್ರಿಟಿಷ್ ಆಳ್ವಿಕೆಗೆ ಒಳಪಡುವ ಮೊದಲು ಈ ಪ್ರದೇಶವನ್ನು ನಿಯಂತ್ರಿಸಿದರು. ವಾಸ್ತುಶಿಲ್ಪ ಶೈಲಿ ದ್ರಾವಿಡ ವಾಗಿದೆ .[೧] ಈ ದೇವಸ್ಥಾನವು ಬೆಂಗಳೂರಿನಿಂದ ೬೦ ಕಿಮೀ. ದೂರದಲ್ಲಿ ಇದೆ.[೨] ಭಾರತೀಯ ಪುರಾತತ್ವ ಇಲಾಖೆಯು ಈ ದೇವಾಲಯವನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕವಾಗಿ ರಕ್ಷಿಸಿದೆ.[೩][೪]
ದೇವಾಲಯದ ಸಂಕೀರ್ಣವು ಎರಡು ದೊಡ್ಡ ದೇಗುಲಗಳನ್ನು ಹೊಂದಿದೆ: ದಕ್ಷಿಣಕ್ಕೆ ತಲಕಾಡಿನ ಗಂಗರು ನಿರ್ಮಿಸಿದ "ಅರುಣಾಚಲೇಶ್ವರ" ದೇಗುಲ, ಮತ್ತು ಉತ್ತರಕ್ಕೆ ಚೋಳರು ನಿರ್ಮಿಸಿದ "ಭೋಗ ನಂದೀಶ್ವರ" ದೇಗುಲ. ಇದು ರಾಜೇಂದ್ರ ಚೋಳನ ಶಿಲ್ಪವೆಂದು ಪರಿಗಣಿಸಲ್ಪಟ್ಟ ರಾಜನ ಶಿಲ್ಪವನ್ನು ಹೊಂದಿದೆ. ಮಧ್ಯದಲ್ಲಿ "ಉಮಾ-ಮಹೇಶ್ವರ" ದೇಗುಲವೆಂದು ಕರೆಯಲ್ಪಡುವ ಒಂದು ಕಲ್ಯಾಣ ಮಂಟಪವು ಇದೆ ಅದರಲ್ಲಿ ಕಪ್ಪು ಕಲ್ಲಿನಲ್ಲಿ ಅಲಂಕೃತವಾದ ಕಂಬ, ದೇವರುಗಳಾದ ಶಿವ ಮತ್ತು ಆತನ ಪತ್ನಿ ಪಾರ್ವತಿ, ಸೃಷ್ಟಿಕರ್ತ ಬ್ರಹ್ಮ ಮತ್ತು ಸರಸ್ವತಿ, ರಕ್ಷಕ ವಿಷ್ಣು ಮತ್ತು ಅವನ ಪತ್ನಿ ಲಕ್ಷ್ಮಿ , ಅಗ್ನಿದೇವತೆ ಮತ್ತು ಅವನ ಪತ್ನಿ ಸ್ವಾಹಾದೇವಿ, ಮತ್ತು ಅಲಂಕಾರಿಕ ಬಳ್ಳಿಗಳು ಮತ್ತು ಪಕ್ಷಿಗಳು ಇವೆ . ಇದು ಹೊಯ್ಸಳ ವಾಸ್ತುಶಿಲ್ಪಕ್ಕೆ ವಿಶಿಷ್ಟವಾಗಿದೆ.[೧][೪]
ಕಲಾ ಇತಿಹಾಸಕಾರ ಜಾರ್ಜ್ ಮಿಚೆಲ್ ಅವರ ಪ್ರಕಾರ, ದೇವಾಲಯವು 9-10ನೇ ಶತಮಾನದ ನೊಳಂಬರ ನಿರ್ಮಾಣವಾಗಿದ್ದು , ದೇಗುಲಗಳ ಹೊರ ಗೋಡೆಗಳ ಮೇಲೆ ಪೈಲಸ್ಟರ್‌ಗಳನ್ನು ಹೊಂದಿದೆ, ಆಕೃತಿಗಳನ್ನು ಒಳಗೊಂಡಿರುವ ರಂಧ್ರವಿರುವ ಅಲಂಕಾರಿಕ ಕಲ್ಲಿನ ಕಿಟಕಿಗಳು , ಅರುಣಾಚಲೇಶ್ವರ ದೇಗುಲದ ದಕ್ಷಿಣ ಗೋಡೆಯಲ್ಲಿ ನೃತ್ಯ ಮಾಡುತ್ತಿರುವ ಶಿವನ ಮೂರ್ತಿಯಿದೆ. ಭೋಗ ನಂದೀಶ್ವರ ಗುಡಿಯ ಉತ್ತರ ಗೋಡೆಯಲ್ಲಿ ದುರ್ಗಾ ಮಹಿಷದ ತಲೆಯ ಮೇಲೆ ನಿಂತಿದ್ದಾಳೆ . ಪಿರಮಿಡ್ ಮತ್ತು ಶ್ರೇಣೀಕೃತ ಶಿಖರಗೋಪುರಗಳು ಎರಡೂ ಪ್ರಮುಖ ದೇಗುಲಗಳಲ್ಲಿವೆ. ಪ್ರತಿ ಪ್ರಮುಖ ದೇಗುಲವು ಗರ್ಭಗೃಹದಲ್ಲಿ ದೊಡ್ಡ ಲಿಂಗವನ್ನು ಹೊಂದಿದೆ. ದೇಗುಲಕ್ಕೆ ಎದುರಾಗಿರುವ ಮಂಟಪದಲ್ಲಿ ನಂದಿಯ ಶಿಲ್ಪವಿದೆ.[೫] ಮಿಚೆಲ್ ಪ್ರಕಾರ, 16 ನೇ ಶತಮಾನದ ವಿಜಯನಗರ ಕಾಲದಲ್ಲಿ, ಎರಡು ಪ್ರಮುಖ ದೇಗುಲಗಳ ನಡುವೆ ಸೊಗಸಾದ ಕಂಬಗಳನ್ನು ಹೊಂದಿರುವ ಮಂಟಪವನ್ನು ಸೇರಿಸಲಾಯಿತು. ಬೂದು-ಹಸಿರು ಗ್ರಾನೈಟ್ ನಿಂದ ತಯಾರಿಸಲಾದ ಕಂಬಗಳು ಪರಿವಾರದ ದಾಸಿಯರ ಶಿಲ್ಪಗಳನ್ನು ಹೊಂದಿವೆ. ಮಿಚೆಲ್ ಅವರಿಗೆ ಅನಿಸಿದಂತೆ ವಿಜಯನಗರ ಆಡಳಿತದ ನಂತರದ ಯಲಹಂಕ ರಾಜವಂಶದ ಗೌಡರ ಆಳಿಕೆಯ ಅವಧಿಯಲ್ಲಿ ಸಣ್ಣ "ಉಮಾ-ಮಹೇಶ್ವರ" ದೇವಾಲಯವನ್ನು ಎರಡು ಪ್ರಮುಖ ದೇವಾಲಯಗಳಲ್ಲಿ ನಡುವೆ ಸೇರಿಸಲಾಯಿತು. . ಚಿಕ್ಕ ದೇಗುಲವು ಗೋಡೆಯಲ್ಲಿ ದೇವತೆಗಳು ಮತ್ತು ಋಷಿಗಳ ಮೆರವಣಿಗೆಯನ್ನು ಹೊಂದಿದೆ.. ಎರಡು ಪ್ರಮುಖ ದೇಗುಲಗಳನ್ನು ಜೋಡಿಸುವ ಗೋಡೆಯನ್ನು ಜಾಣ್ಮೆಯಿಂದ ನಿರ್ಮಿಸಲಾಗಿದ್ದು, ಎರಡು ಮೂಲ ದೇಗುಲಗಳಿಂದ ಪ್ರತ್ಯೇಕಿಸಲು ಸಾಧ್ಯವಾಗದಂತೆ ಇದೆ. ಎರಡು ಪ್ರಮುಖ ದೇಗುಲಗಳ ಮುಂದೆ ವಿಶಾಲವಾದ ಕಂಬದ ಸಭಾಂಗಣವನ್ನು ಕೂಡ ಸೇರಿಸಲಾಗಿದೆ.
ಶಿವನ "ಅರುಣಾಚಲೇಶ್ವರ" ಮತ್ತು "ಭೋಗ ನಂದೀಶ್ವರ" ರೂಪಗಳು ಹಿಂದೂ ಪುರಾಣದ ಪ್ರಕಾರ, ಶಿವನ ಜೀವನದಲ್ಲಿ ಎರಡು ಹಂತಗಳಾದ ಬಾಲ್ಯ ಮತ್ತು ಯೌವನಗಳನ್ನು ಪ್ರತಿನಿಧಿಸುತ್ತವೆ. "ಉಮಾ-ಮಹೇಶ್ವರ" ದೇಗುಲವು ಪಾರ್ವತಿ ದೇವಿಯೊಂದಿಗೆ ಶಿವನ ವಿವಾಹದ ಮೂರನೇ ಹಂತವನ್ನು ವಿವರಿಸುವ ಕೆತ್ತನೆಗಳನ್ನು ಹೊಂದಿದೆ. ಆದ್ದರಿಂದ ಈ ದೇಗುಲಕ್ಕೆ ನವವಿವಾಹಿತರು ಆಶೀರ್ವಾದ ಪಡೆಯಲು ಬರುತ್ತ್ತಾರೆ. ನಂದಿ ಬೆಟ್ಟಗಳ ಮೇಲಿರುವ ಯೋಗ ನಂದೀಶ್ವರ ದೇವಸ್ಥಾನವು ಶಿವನ ಜೀವನದಲ್ಲಿ ಅಂತಿಮ "ತ್ಯಾಗದ" ಹಂತವನ್ನು ಪ್ರತಿನಿಧಿಸುತ್ತದೆ ಮತ್ತು ಆದ್ದರಿಂದ ಈ ದೇವಸ್ಥಾನವು ಯಾವುದೇ ಉತ್ಸವಗಳಿಂದ ಮುಕ್ತವಾಗಿದೆ.[೪] ದೊಡ್ಡ ದೇಗುಲಗಳಲ್ಲಿ ಪ್ರತಿಯೊಂದೂ ಗರ್ಭಗೃಹ , ಸುಕನಾಸಿ ಮತ್ತು ನವರಂಗ ಅಥವಾ ಮಂಟಪವನ್ನು ಹೊಂದಿದೆ. ಜಗುಲಿ ಮತ್ತು ಸಭಾಂಗಣಕ್ಕೆ ರಂದ್ರಗಳಿರುವ ಕಲ್ಲಿನ ಪರದೆಗಳನ್ನು ಒದಗಿಸಲಾಗಿದೆ. ಪ್ರತಿಯೊಂದು ದೇಗುಲವು ಮುಂಭಾಗದಲ್ಲಿ ಗರ್ಭಗೃಹಕ್ಕೆ ಅಭಿಮುಖವಾಗಿರುವ ನಂದಿ ಇರುವ ನಂದಿಮಂಟಪವನ್ನು ಹೊಂದಿದೆ . ಸಂಕೀರ್ಣದ ಹೊರಭಾಗದ ಗೋಡೆ ಅಥವಾ ಪ್ರಾಕಾರವು ದೇವಿಗೆ ಎರಡು ಸಣ್ಣ ದೇಗುಲಗಳನ್ನು ಹೊಂದಿದೆ,[೧] ದೇಗುಲಗಳ ಉತ್ತರದಲ್ಲಿ ಯಾಳಿ ಕಂಬಗಳನ್ನು ಹೊಂದಿರುವ ನವರಂಗ ಮಂಟಪ ಇರುವ ಎರಡನೇ ಆವರಣವಿದೆ. ಈ ಆವರಣದ ಆಚೆ ದೇವಾಲಯದ ಕೊಳ ಕಲ್ಯಾಣಿ ಅಥವಾ ಪುಷ್ಕರಣಿ ಇದೆ), ಇದನ್ನು ಸ್ಥಳೀಯವಾಗಿ "ಶೃಂಗೇರಿ ತೀರ್ಥ" (ಪಿನಾಕಿನಿ ನದಿಯ ಪೌರಾಣಿಕ ಮೂಲ) ಎಂದು ಕರೆಯಲಾಗುತ್ತದೆ ದೀಪಗಳನ್ನು ಕೆಲವು ಹಬ್ಬದ ದಿನಗಳಲ್ಲಿ ಅಲ್ಲಿಹಚ್ಚಲಾಗುತ್ತದೆ.[೧][೪]
ಚಿತ್ರಸಂಪುಟ
[ಬದಲಾಯಿಸಿ]-
Entrance as seen in 1834
-
Archaeological Survey of India signboard explaining the original construction was commissioned by Bana King Vidyadhara in 810 A.D.
-
View of the large Maha mantapa (main hall), a Vijayanagara empire era construction at the Bhoga Nandeeshvara temple complex
-
Kalyani (temple tank):a Vijayanagara era contribution to the Bhoga Nandeeshwara temple complex
-
Kalyani or Pushkarni (temple tank) was added by King Krishnadeva Raya at Bhoga Nandeeshvara temple complex
-
Window art and relief work at the Bhoganandeeshvara temple complex
-
Yali pillars in the vasantha mantapa, a Vijayanagara era addition at Bhoga Nandeeshvara temple complex
-
Yali pillars in the vasantha mantapa, a Vijayanagara era addition at Bhoga Nandeeshvara temple complex
-
Yali pillars in the prakara ("bounding wall"), a Vijayanagara era addition at Bhoga Nandeeshvara temple complex
-
Vasantha mantapa ("marriage alter") is a Vijayanagara era contribution to the Bhoga Nandeeshwara temple complex
-
Ornate pillar in the large open mantapa is a Vijayanagara era addition to the Bhoga Nandeeshvara temple complex
-
Ornate pillars in the large open mantapa, a Vijayanagara era addition to the Bhoga Nandeeshwara temple complex
-
Ornate pillars in the large open mantapa, a Vijayanagara era contribution to the Bhoga Nandeeshwara temple complex
-
Ornate pillars of the vasanta mantapa ("marriage alter", facing the Uma-Maheshvara shrine), made of soap stone, is a Hoysala era contribution to the Bhoga Nandeeshvara temple complex
-
Ornate pillar of the vasanta mantapa, made of soap stone, is a Hoysala era contribution to the Bhoga Nandeeshvara temple complex
-
Ornate pillar of the vasanta mantapa, made of soap stone, is a Hoysala era contribution to the Bhoga Nandeeshvara temple complex
-
Ornate pillar of the vasanta mantapa, made of soap stone, is a Hoysala era contribution to the Bhoga Nandeeshvara temple complex
-
Open mantapa facing a minor shrine at the rear in the Bhoga Nandeeshwara temple complex
-
Entrance to minor shrine at the rear in the Bhoga Nandeeshwara temple complex
-
Ornate Pillar carvings of the Vasantha Mantapa
-
Ornate Carvings on the Uma-Maheshswara Shrine
-
Ornated pillar of Vasanta Mantap
-
Window carving on outerwall of the Arunachaleshswara shrine in the Bhoga Nandeeshvara temple complex
ಉಲ್ಲೇಖಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ೧.೨ ೧.೩ "Bhoganandishwara Temple". Archaeological Survey of India, Bengaluru Circle. ASI Bengaluru Circle. Archived from the original on 2 May 2014. Retrieved 31 May 2015. ಉಲ್ಲೇಖ ದೋಷ: Invalid
<ref>
tag; name "bhoga" defined multiple times with different content - ↑ V L, Prakasha. "From here and there". Deccan Herald. Retrieved 27 June 2013.
- ↑ "Alphabetical List of Monuments - Karnataka -Bangalore, Bangalore Circle, Karnataka". Archaeological Survey of India, Government of India. Indira Gandhi National Center for the Arts. Retrieved 31 May 2015.
- ↑ ೪.೦ ೪.೧ ೪.೨ ೪.೩ "Bhoga Nandeeshwara Temple". Karnataka.com. Retrieved 1 June 2015. ಉಲ್ಲೇಖ ದೋಷ: Invalid
<ref>
tag; name "karnataka" defined multiple times with different content - ↑ ಉಲ್ಲೇಖ ದೋಷ: Invalid
<ref>
tag; no text was provided for refs namedyalahanka