ವಿಷಯಕ್ಕೆ ಹೋಗು

ಬಿಗ್ ಬಾಸ್ ಕನ್ನಡ (ಸೀಸನ್ 10)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತೀಯ ಕನ್ನಡ ಭಾಷೆಯ ರಿಯಾಲಿಟಿ ಟೆಲಿವಿಷನ್ ಗೇಮ್ ಶೋ ಬಿಗ್ ಬಾಸ್ ನ ಹತ್ತನೇ ಸೀಸನ್ 8ನೇ ಅಕ್ಟೋಬರ್ 2023 ರಂದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಸಂಜೆ 6ಕ್ಕೆ ಪ್ರಥಮ ಪ್ರದರ್ಶನ ಕಂಡಿತು[]. ಬನಿಜಯ್ ಅವರ ನಿಯಂತ್ರಣದಲ್ಲಿ ಎಂಡೆಮೋಲ್ ಶೈನ್ ಇಂಡಿಯಾ ನಿರ್ಮಿಸುತ್ತಿರುವ ಈ ರಿಯಾಲಿಟಿ ಶೋ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರದ ಜೊತೆಗೆ ಜಿಯೋಸಿನಿಮಾದಲ್ಲಿ 24/7 ಲೈವ್ ಸ್ಟ್ರೀಮ್ ನಲ್ಲಿ ಪ್ರಸಾರವಾಗಿತ್ತು. [] [] []. ಈ ಸೀಸನ್ ಬಿಗ್ ಬಾಸ್‌ನ 10 ನೇ ಸೀಸನ್ ಆಗಿರುವುದರಿಂದ, ಪ್ರಥಮ ಬಾರಿಗೆ ಬಿಗ್‌ಬಾಸ್ ಕನ್ನಡ 100 ದಿನಗಳ ಹಬ್ಬ (ಊರ ಹಬ್ಬ) ಎಂಬ ಥೀಮ್ ಒಂದನ್ನು ಪರಿಚಯಿಸಿಯಿದೆ[] . ಹಿಂದಿನ ಒಂಭತ್ತು ಸೀಸನ್‌ನಂತೆಯೇ ಈ ಬಾರಿಯೂ ಕಿಚ್ಚ ಸುದೀಪ್ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ [].


ಬಿಗ್ ಬಾಸ್ ಕನ್ನಡ ಸೀಸನ್ 10
‍ ಸೀಸನ್ ಲೋಗೂ
ಮೂಲದ ದೇಶಭಾರತ
ಪ್ರಸಾರ
ಮೂಲ ಛಾನೆಲ್ಕಲರ್ಸ್ ಕನ್ನಡ
ಮೂಲ ಪ್ರಸಾರ8 ಅಕ್ಟೋಬರ್ 2023 – 28 ಜನವರಿ 2024
ಹೆಚ್ಚುವರಿ ಮಾಹಿತಿ
ಪ್ರಸಿದ್ಧಿ ವಿಜೇತಕಾರ್ತಿಕ್ ಮಹೇಶ್
ಸೀಸನ್ ಕಾಲಗಣನೆ
Next →

ಪ್ರಸಾರ

[ಬದಲಾಯಿಸಿ]

ಈ ರಿಯಾಲಿಟಿ ಶೋ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರದ ಜೊತೆಗೆ ಜಿಯೋಸಿನಿಮಾದಲ್ಲಿ 24/7 ಲೈವ್ ಸ್ಟ್ರೀಮ್ ನಲ್ಲಿ ಪ್ರಸಾರವಾಗಿತ್ತು.

ಟೀಸರ್

[ಬದಲಾಯಿಸಿ]

ಟೀಸರ್ ಅನ್ನು 22 ಸೆಪ್ಟಂಬರ್ 2023ರಂದು ಪ್ರಸಾರ ಮಾಡಲಾಯಿತು[]

ನಿರ್ಮಾಣ

[ಬದಲಾಯಿಸಿ]

ಬನಿಜಯ್ ಅವರ ನಿಯಂತ್ರಣದಲ್ಲಿ ಎಂಡೆಮೋಲ್ ಶೈನ್ ಇಂಡಿಯಾ ನಿರ್ಮಿಸುತ್ತಿದೆ.

ಬಿಗ್ ಬಾಸ್ ಕನ್ನಡದ ಹತ್ತನೇ ವಾರ್ಷಿಕೋತ್ಸವವನ್ನು ಆಚರಿಸಲು ಈ ವರ್ಷದ ಬಿಗ್ ಬಾಸ್ ಥೀಮ್ "ಹ್ಯಾಪಿ ಬಿಗ್ ಬಾಸ್" ಆಗಿದೆ.

ಸ್ಪರ್ಧಿಗಳು

[ಬದಲಾಯಿಸಿ]

ಈ ಸೀಸನ್ ರಿಯಾಲಿಟಿ ಕಾರ್ಯಕ್ರಮದ ಮೂಲ ಸ್ವರೂಪಕ್ಕೆ ಅಂಟಿಕೊಂಡಿದೆ. ಈ ಬಾರಿ ಸ್ಪರ್ಧಿಗಳಾಗಿ ಮನೆಗೆ ಪ್ರವೇಶಿಸುವ ಸೆಲೆಬ್ರಿಟಿಗಳನ್ನು ಮಾತ್ರ ಹೊಂದಿರುತ್ತದೆ.

ಸ್ವರೂಪ

[ಬದಲಾಯಿಸಿ]

ಈ ಕಾರ್ಯಕ್ರಮವು ಆಯ್ದ ಸ್ಪರ್ಧಿಗಳನ್ನು ಹೊರಗಿನ ಪ್ರಪಂಚದಿಂದ ಪ್ರತ್ಯೇಕವಾಗಿ 98 ದಿನಗಳವರೆಗೆ (ಅಥವಾ 14 ವಾರಗಳು) ಕಾರ್ಯಕ್ರಮಕ್ಕೆಂದೇ ನಿರ್ಮಿತವಾಘಿರುವ ಮನೆಯಲ್ಲಿ ವಾಸಿಸುತ್ತಾರೆ. ಹೌಸ್‌ಮೇಟ್‌ಗಳು ಬಿಗ್ ಬಾಸ್ ಎಂಬ ಸರ್ವಾಧಿಕಾರಿಯಿಂದ ನಿರ್ದೇಶಿಸಲ್ಪಡುತ್ತಾರೆ. ಪ್ರತಿ ವಾರ, ಒಬ್ಬ ಅಥವಾ ಹೆಚ್ಚಿನ ಹೌಸ್‌ಮೇಟ್‌ಗಳನ್ನು ಸಾರ್ವಜನಿಕ ಮತದಿಂದ ಹೊರಹಾಕಲಾಗುತ್ತದೆ. ಕೊನೆಯ ವಾರದಲ್ಲಿ, ಹೆಚ್ಚು ಮತಗಳನ್ನು ಪಡೆದ ಮನೆಯವರು ಆಟದಲ್ಲಿ ಗೆಲ್ಲುತ್ತಾರೆ.

ಮನೆಯವರ ಸ್ಥಿತಿ

[ಬದಲಾಯಿಸಿ]
ಕ್ರಮ ಸಂಖ್ಯೆ. ಮನೆಯವರು ಪ್ರವೇಶಿಸಿದ ದಿನ ನಿರ್ಗಮನದ ದಿನ ಸ್ಥಿತಿ
1 ಭಾಗ್ಯಶ್ರೀ ದಿನ 1 ದಿನ 42 Evicted
2 ಈಶಾನಿ ದಿನ 1 ದಿನ 41 Evicted
3 ಕಾರ್ತಿಕ್ ದಿನ 1 ದಿನ 112 Winner
4 ಮೈಕಲ್ ದಿನ 1 ದಿನ 91 Evicted
5 ನಮೃತಾ ದಿನ 1 ದಿನ 105 Evicted
6 ನೀತು ದಿನ 1 ದಿನ 49 Evicted
7 ಪ್ರತಾಪ್ ದಿನ 1 ದಿನ 60 Walked
ದಿನ 62 ದಿನ 88 Walked
ದಿನ 90 ದಿನ 112 ಮೊದಲ ರನ್ನರ್ ಆಪ್
8 ರಕ್ಷಕ್ ದಿನ 1 ದಿನ 29 Evicted
9 ಸಂಗೀತಾ ದಿನ 1 ದಿನ 60 Walked
ದಿನ 62 ದಿನ 112 ಎರಡನೇ ರನ್ನರ್ ಆಪ್
10 ಸಂತೋಷ್ K ದಿನ 1 ದಿನ 111 ಐದನೇ ರನ್ನರ್ ಆಪ್
11 ಸಂತೋಷ್ V ದಿನ 1 ದಿನ 15 Ejected
ದಿನ 23 ದಿನ 112 ನಾಲ್ಕನೇ ರನ್ನರ್ ಆಪ್
12 ಸಿರಿ ದಿನ 1 ದಿನ 84 Evicted
13 ಸ್ನೇಹಿತ್ ದಿನ 1 ದಿನ 63 Evicted
14 ತನಿಷಾ ದಿನ 1 ದಿನ 51 Walked
ದಿನ 54 ದಿನ 102 Evicted
15 ವಿನಯ್ ದಿನ 1 ದಿನ 112 ಮೂರನೇ ರನ್ನರ್ ಆಪ್
16 ಗೌರೀಶ್ ದಿನ 1 ದಿನ 14 Evicted
17 ಶ್ಯಾಮ್ ದಿನ 1 ದಿನ 7 Evicted
18 ಚಿತ್ರಲ್ ದಿನ 1 ದಿನ 1 Evicted
19 ಅವಿನಾಶ್ ದಿನ 1 ದಿನ 1 Evicted
20 ಪವಿ ದಿನ 50 ದಿನ 70 Evicted
21 ಅವಿನಾಶ್ ದಿನ 50 ದಿನ 77 Evicted

ಬಹುಮಾನ

[ಬದಲಾಯಿಸಿ]

ಬಿಗ್ ಬಾಸ್ ಕನ್ನಡ 10 ರ ವಿಜೇತ ಸ್ಪರ್ಧಿಗೆ 50 ಲಕ್ಷ ರೂ ದೊರಕಿದೆ. ಹಣದ ಬಹುಮಾನ ಜೊತೆಗೆ ಬೌನ್ಸ್ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್, ಅಪೇಕ್ಷಿತ ಟ್ರೋಫಿ ಹಾಗೂ ಉಡುಗೊರೆಗಳನ್ನು ಸಹ ನೀಡಲಾಗಿದೆ[] .

ಟ್ವಿಸ್ಟ್

[ಬದಲಾಯಿಸಿ]

ವೀಕ್ಷಕರು ಮನೆಯ ಸ್ಪರ್ಧಿಗಳನ್ನು ಆಯ್ಕೆ ಮಾಡುತ್ತಾರೆ

[ಬದಲಾಯಿಸಿ]

ಪ್ರತಿ ಸ್ಪರ್ಧಿಗಳನ್ನು ಪ್ರೀಮಿಯರ್‌ನಲ್ಲಿ ಪರಿಚಯಿಸಿದ ನಂತರ, ವೀಕ್ಷಕರಿಗೆ ಅವರನ್ನು ಬಿಗ್‌ಬಾಸ್ ಮನೆಗೆ ಕಳುಹಿಸುವ ಬಗ್ಗೆ ಮತ ಚಲಾಯಿಸುವ ಮೂಲಕ ಅವಕಾಶ ನೀಡಲಾಗಿತ್ತು. ಕನಿಷ್ಠ 80% ಸಾರ್ವಜನಿಕ ಮತಗಳನ್ನು ಹೊಂದಿರುವ ಸ್ಪರ್ಧಿಗಳು ಅಧಿಕೃತ ಸ್ಪರ್ಧಿಗಳಾಗಿದ್ದರು, ಹಾಗೂ 40% ರಿಂದ 80% ನಡುವೆ ಮತಪಡೆದವರನ್ನು ತಡೆಹಿಡಿಯಲಾಯಿತು ಮತ್ತು ಮನೆಯೊಳಗೆ ಪ್ರವೇಶಿಸಿಲು ತಮ್ಮ ದಾರಿಯನ್ನು ಸಂಪಾದಿಸಬೇಕಾಗಿತ್ತು. ಆದರೆ 40% ಕ್ಕಿಂತ ಕಡಿಮೆ ಮತಗಳನ್ನು ಪಡೆದವರನ್ನು ಪ್ರೀಮಿಯರ್ ದಿನವೇ ಆಟದಿಂದ ಹೊರಹಾಕಲಾಯಿತು.

ಮನೆಯವರು ಶೇಕಡ ಪಡೆದ ಮತ ಸ್ಥಿತಿ
ನಮೃತಾ 86% ಆಯ್ಕೆ
ಸ್ನೇಹಿತ್ 81% ಆಯ್ಕೆ
ಈಶಾನಿ 83% ಆಯ್ಕೆ
ವಿನಯ್ 89% ಆಯ್ಕೆ
ಅವಿನಾಶ್ 27% ನಿರಾಕರಣೆ
ಪ್ರತಾಪ್ 41% ತಡೆಹಿಡಿಯಲಾಗಿದೆ
ಸಂತೋಷ್ K 93% ಆಯ್ಕೆ
ತನಿಷಾ 68% ತಡೆಹಿಡಿಯಲಾಗಿದೆ
ನೀತು 86% ಆಯ್ಕೆ
ಸಿರಿ 83% ಆಯ್ಕೆ
ರಕ್ಷಕ್ 53% ತಡೆಹಿಡಿಯಲಾಗಿದೆ
ಸಂಗೀತಾ 76% ತಡೆಹಿಡಿಯಲಾಗಿದೆ
ಶ್ಯಾಮ್ 84% ಆಯ್ಕೆ
ಚಿತ್ರಲ್ 38% ನಿರಾಕರಣೆ
ಸಂತೋಷ್ V 78% ತಡೆಹಿಡಿಯಲಾಗಿದೆ
ಭಾಗ್ಯಶ್ರೀ 81% ಆಯ್ಕೆ
ಗೌರೀಶ್ 82% ಆಯ್ಕೆ
ಮೈಕಲ್ 81% ಆಯ್ಕೆ
ಕಾರ್ತಿಕ್ 76% ತಡೆಹಿಡಿಯಲಾಗಿದೆ


ಮನೆಯವರ ಸ್ಥಿತಿಯ ಮಟ್ಟ

[ಬದಲಾಯಿಸಿ]

ಮೇಲ್ವರ್ಗದವರಿಗೆ ಮನೆಯಲ್ಲಿ ವಿಶೇಷಾಧಿಕಾರಗಳಿದ್ದವು, ಆದರೆ ಕೆಳವರ್ಗದವರು ಮನೆಯ ಎಲ್ಲಾ ಕರ್ತವ್ಯಗಳನ್ನು ಮಾಡಬೇಕಾಗಿತ್ತು, ಸೌಲಭ್ಯಗಳನ್ನು ಉಪಯೋಗಿಸುವುದನ್ನು ನಿರ್ಬಂಧಿಸಿದ್ದರು ಮತ್ತು ಕಿತ್ತಳೆ ಬಣ್ಣದ ಸೂಟ್ ಧರಿಸಿದ್ದರು.

ಮನೆಯವರು ದಿನ 1 ದಿನ 3
ನಮೃತಾ ಮೇಲ್ವರ್ಗ
ಸ್ನೇಹಿತ್ ಮೇಲ್ವರ್ಗ
ಈಶಾನಿ ಮೇಲ್ವರ್ಗ
ವಿನಯ್ ಮೇಲ್ವರ್ಗ
ಪ್ರತಾಪ್ ಕೆಳವರ್ಗ
ಸಂತೋಷ್ K ಮೇಲ್ವರ್ಗ
ತನಿಷಾ ಕೆಳವರ್ಗ
ನೀತು ಮೇಲ್ವರ್ಗ
ಸಿರಿ ಮೇಲ್ವರ್ಗ
ರಕ್ಷಕ್ ಕೆಳವರ್ಗ
ಸಂಗೀತಾ ಕೆಳವರ್ಗ
ಸಂತೋಷ್ V ಕೆಳವರ್ಗ
ಭಾಗ್ಯಶ್ರೀ ಮೇಲ್ವರ್ಗ
ಗೌರೀಶ್ ಮೇಲ್ವರ್ಗ
ಮೈಕಲ್ ಮೇಲ್ವರ್ಗ
ಕಾರ್ತಿಕ್ ಕೆಳವರ್ಗ
ಶ್ಯಾಮ್ ಮೇಲ್ವರ್ಗ ಕೆಳವರ್ಗ
ಚಿತ್ರಲ್ ನಿರಾಕರಣೆ
ಅವಿನಾಶ್ ನಿರಾಕರಣೆ

ಸ್ಪರ್ಧಿಗಳು

[ಬದಲಾಯಿಸಿ]

ಸೀಸನ್ ೧೦ರ ಬಿಗ್‌ಬಾಸ್ ಮನೆ ಪ್ರವೇಶಿಸಿದ ಕ್ರಮದಲ್ಲಿ ಸ್ಪರ್ಧಿಗಳ ಪಟ್ಟಿ ಈ ಕೆಳಗಿನಂತೆ ಇದೆ[]

ಪ್ರವೇಶ ಕ್ರಮ ಸಂಖ್ಯೆ ಹೆಸರು ಉದ್ಯೋಗ ಇಂದ ಜನಪ್ರಿಯ ಇತರೆ ಟಿಪ್ಪಣಿಗಳು
1 ನಮ್ರತಾ ಗೌಡ ನಟನೆ ಪುಟ್ಟಗೌರಿ ಮದುವೆ ಮತ್ತು ನಾಗಿಣಿ 2 ಧಾರಾವಾಹಿಯಿಂದ [೧೦]
2 ಸ್ನೇಹಿತ್ ಗೌಡ ನಟನೆ ನಮ್ಮನೇ ಯುವರಾಣಿ ಧಾರಾವಾಹಿಯಿಂದ [೧೧]
3 ಉರ್ಮಿಳಾ ಈಶಾನಿ ಕನ್ನಡ ರಾಪರ್ ರಾಪ್ಪ್,ಹಿಪ್-ಪಾಪ್, ಮ್ಯೂಸಿಕ್‌ಗಳಿಂದ
4 ವಿನಯ್ ಗೌಡ ನಟನೆ ಹರ ಹರ ಮಹಾದೇವಾ ಮತ್ತು ಲಚ್ಚಿ ಧಾರಾವಾಹಿಯಿಂದ
5 ಅವಿನಾಶ್ ಸುರಸುಂದರ ನಟ, ಬರಹಗಾರ & ಉದ್ಯಮಿ ಕಡಿಮೆ ಮತದ ಕಾರಣ ಮನೆ ಪ್ರವೇಶಿಸಲು ನಿರಾಕರಣೆ
6 ಸಂತೋಷ್ ಕುಮಾರ್ ಹಾಸ್ಯಗಾರ ಕಾಮಿಡಿ ಕಿಲಾಡಿಗಳು ಮತ್ತು ಮಜಾಭಾರತ
7 ನೀತು ವನಜಾಕ್ಷಿ ಟ್ಯಾಟು ಆರ್ಟಿಸ್ಟ್ ಮತ್ತು ಉದ್ಯಮಿ
8 ಸಿರಿಜಾ ನಟನೆ ಬದುಕು, ರಂಗೋಲಿ ಹಾಗೂ ರಾಮಾಚಾರಿ ಧಾರಾವಾಹಿಯಿಂದ
9 ಸ್ನೇಕ್ ಶ್ಯಾಮ್ ಉರಗ ತಜ್ಞ
10 ಚಿತ್ರಲ್ ರಂಗಸ್ವಾಮಿ ನಟಿ ಮತ್ತು ಫಿಟ್ನೆಸ್ ಮಾಡೆಲ್ ಕಡಿಮೆ ಮತದ ಕಾರಣ ಮನೆ ಪ್ರವೇಶಿಸಲು ನಿರಾಕರಣೆ
11 ಭಾಗ್ಯಶ್ರೀ ನಟಿ ಲಕ್ಷ್ಮೀಬಾರಮ್ಮ ಮತ್ತು ಲಕ್ಷಣ ಧಾರಾವಾಹಿಯಿಂದ
12 ಗೌರೀಶ್ ಅಕ್ಕಿ ಪತ್ರಕರ್ತ, ನಿರೂಪಣೆ, ನಟನೆ
13 ಮೈಕಲ್ ಅಜಯ್ ಮಾಡೆಲ್ & ಉದ್ಯಮಿ
14 ಪ್ರತಾಪ್ ಡ್ರೋನ್‌ ವಿವಾದದಿಂದ
15 ತನಿಷಾ ಕುಪ್ಪಂಡಾ ನಟನೆ ಮಂಗಳಗೌರಿ ಮದುವೆ ಧಾರಾವಾಹಿಯಿಂದ
16 ರಕ್ಷಕ್ ಬುಲೆಟ್ ನಟನೆ ಹಾಸ್ಯನಟ ಬುಲೆಟ್ ಪ್ರಕಾಶ್ ಮಗ
17 ಸಂಗೀತಾ ಶೃಂಗೇರಿ ನಟನೆ ಹರ ಹರ ಮಹಾದೇವಾ ಧಾರಾವಾಹಿ & 777 ಚಾರ್ಲಿ ಸಿನಿಮಾದಿಂದ
18 ವರ್ತೂರ್ ಸಂತೋಷ್ ಜಾನುವಾರು ಸಾಕಣೆ
19 ಕಾರ್ತಿಕ್ ಮಹೇಶ್ ನಟನೆ ಅಕ್ಕ,ಬಂಗಾರಿ, ಪುಟ್ಟಕ್ಕನ ಮಕ್ಕಳು ಧಾರಾವಾಹಿಯಿಂದ & ಡೊಳ್ಳು ಸಿನಿಮಾದಲ್ಲಿ ನಾಯಕನಾಗಿದ್ದಾರೆ. [೧೨]

ವೈಲ್ಡ್ ಕಾರ್ಡ್ ಪ್ರವೇಶ

[ಬದಲಾಯಿಸಿ]
ಪ್ರವೇಶ ಕ್ರಮ ಸಂಖ್ಯೆ ಹೆಸರು ಉದ್ಯೋಗ ಇಂದ ಜನಪ್ರಿಯ ಇತರೆ ಟಿಪ್ಪಣಿಗಳು Ref.
20 ಅವಿನಾಶ್ ಶೆಟ್ಟಿ ನಟ ಮತ್ತು ರೂಪದರ್ಶಿ
21 ಪವಿ ಪೂವಪ್ಪ ರೂಪದರ್ಶಿ

`

ಅತಿಥಿಗಳು

[ಬದಲಾಯಿಸಿ]
ವಾರ(ಗಳು) ದಿನ(ಗಳು) ಅತಿಥಿ(ಗಳು) ಟಿಪ್ಪಣಿಗಳು
ಭವ್ಯವಾದ ಪ್ರಥಮ ಪ್ರದರ್ಶನ ದಿನ 0 ಚಂದನ್ ಶೆಟ್ಟಿ ಆರಂಭದ ದಿನ
ಮಂಜು ಪಾವಗಡ
ಪ್ರಥಮ್
ಶ್ರುತಿ
ವಾರ 1 ದಿನ 2 ಪ್ರದೀಪ್ ಈಶ್ವರ್ ಅತಿಥಿ
ದಿನ 5 ಪ್ರಥಮ್ ಸರ್ವಧಿಕಾರಿಯಾಗಿ [೧೩]
ವಾರ 2 ದಿನ 12 ಬೃಂದಾವನ ಧಾರಾವಾಹಿ ಕಲಾವಿದರು ಧಾರಾವಾಹಿ ಪ್ರಚಾರಕ್ಕೆ
ದಿನ 14 ಧನಂಜಯ ಸಿನಿಮಾ ಪ್ರಚಾರಕ್ಕೆ (ಟಗರು ಪಲ್ಯ)
ಅಮೃತಾ ಪ್ರೇಮ್
ವಾಸುಕಿ ವೈಭವ್
ವಾರ 3 ದಿನ 16 ತಾರಾ ವಿಜಯದಶಮಿ ಆಚರಣೆಗೆ
ವಾರ 6 ದಿನ 36 ಸುಷ್ಮಾ ಕೆ. ರಾವ್ ದೀಪಾವಳಿಯನ್ನು ಆಚರಿಸಲು ಮತ್ತು ಭಾಗ್ಯಲಕ್ಷ್ಮೀ ಧಾರಾವಾಹಿಯನ್ನು ಪ್ರಚಾರ ಮಾಡಲು
ದಿನ 37 ವರ್ತೂರ್ ಸಂತೋಷ್ ಅವರ ತಾಯಿ ವರ್ತೂರ್ ಸಂತೋಷ್ ಗೆ ಪ್ರೇರೇಪಣೆ ನೀಡಲು
ವಾರ 7 ದಿನ 43-45 ನರೇಂದ್ರ ಬಾಬು ಶರ್ಮಾ ಆಲಿಯಾಸ್ ಬ್ರಹ್ಮಾನಂದ ಗುರುಜಿ ನಾಮನಿರ್ದೇಶನ ಮತ್ತು ಮನೆಯ ಸ್ಪರ್ಧಿಗಳಿಗೆ ದಿನಸಿ ಟಾಸ್ಕ್ ಗಳನ್ನು ನಡೆಸಲು
ವಾರ 11 ದಿನ 76 ಶ್ರುತಿ ಬಿಬಿ ಮನೆಯ ನ್ಯಾಯಧೀಶೆಯಾಗಿ
ದಿನ 77 ಶೈನ್ ಶೆಟ್ಟಿ ಅತಿಥಿಯಾಗಿ
ಶುಭ ಪೂಂಜ
ವಾರ 12 ದಿನ 79 ನಮೃತಾ ಗೌಡರ ತಾಯಿ ಮತ್ತು ಸೋದರ ಸಂಬಂಧಿ ಫ್ರೀಜ್ ಟಾಸ್ಕ್ ನ ಭಾಗವಾಗಿ ಮತ್ತು ವಾರ 12 ಕ್ಕೆ ನಾಯಕತ್ವದ ಸ್ಪರ್ಧಿಯನ್ನು ಆಯ್ಕೆ ಮಾಡಲು.
ವರ್ತೂರ್ ಸಂತೋ‍ಷ ಅವರ ತಾಯಿ
ಸಂತೋಷ್ ಕುಮಾರ್ ಅವರ ತಾಯಿ
ಮೈಕಲ್ ಅಜೇಯ್ ಅವರ ತಾಯಿ
ದಿನ 80 ಕಾರ್ತಿಕ್ ಮಹೇಶ್ ಅವರ ತಾಯಿ
ಸಿರಿಜಾ ಅವರ ಸೋದರಿ ಮತ್ತು ಅವರ ಸೋದರಿಯ ಮಗಳು
ಸಂಗೀತಾ ಶೃಂಗೇರಿಅವರ ತಾಯಿ, ತಂದೆ, ಅಣ್ಣ ಮತ್ತು ಅತ್ತಿಗೆ
ದಿನ 81 ತನೀಷಾ ಅವರ ತಂದೆ, ತಾಯಿ ಮತ್ತು ಸೋದರಿ
ವಿನಯ್ ಗೌಡ ಅವರ ಹೆಂಡತಿ ಮತ್ತು ಮಗ
ಡ್ರೋನ್ ಪ್ರತಾಪ್ ಅವರ ತಂದೆ, ತಾಯಿ ಮತ್ತು ಸೋದರ
ದಿನ 83 ಸಪ್ತಮಿ ಗೌಡ ಸರ್ಕಾರದ ಯೋಜನೆಯನ್ನು ಪ್ರಚಾರ ಮಾಡಲು
ವಾರ 13 ದಿನ 86 ವಿದ್ಯಾ ಶಂಕರಾನಂದ ಸರಸ್ವತಿ ಗುರೂಜಿ ಮನೆಯ ಸ್ಪರ್ಧಿಗಳಿಗೆ ಪ್ರೇರಣೆ ನೀಡಲು
ವಾರ 15 ದಿನ 100 ಕಾರ್ತಿಕ್ ಅತ್ತಾವರ್ ಮತ್ತು ಅಮೂಲ್ಯ ಗೌಡ ಶ್ರೀ ಗೌರಿ ಧಾರಾವಾಹಿಯನ್ನು ಪ್ರಚಾರ ಮಾಡಲು
ದಿನ 100 - 102 ಈಶಾನಿ ಮತ್ತು ನೀರು ವನಜಾಕ್ಷಿ ಮನೆಯ ಸದಸ್ಯರನ್ನು ಭೇಟಿ ಮಾಡಲು
ರಕ್ಷಕ್ ಬುಲೆಟ್
ಮೈಕಲ್ ಅಜೇಯ್
ಭಾಗ್ಯಶ್ರೀ ರಾವ್
ಸಿರಿ ಸಿರಿಜಾ
ಸ್ನೇಹಿತ್ ಗೌಡ
ವಾರ 16 ದಿನ 107 ಕಿರಿಕ್ ಕೀರ್ತಿ ಮತ್ತು ಜಾನ್ವಿ ಮೆಹ್ತಾ ಬಿಬಿ ಯ ವರದಿಗಾರರಾಗಿ
ದಿನ 112 ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 3ರ ಸ್ಫರ್ಧಿ ಅವರ ಕಾರ್ಯಕ್ರಮವನ್ನು ಪ್ರಚಾರ ಮಾಡಲು
ಗಿಚ್ಚಿ ಗಿಲಿಗಿಲಿ

ಬಾಹ್ಯಕೊಂಡಿಗಳು

[ಬದಲಾಯಿಸಿ]

ಫಲಿತಾಂಶ

[ಬದಲಾಯಿಸಿ]
  • ವಿನ್ನರ್: ಕಾರ್ತಿಕ್ ಮಹೇಶ್
  • ರನ್ನರ್: ಡ್ರೋನ್ ಪ್ರತಾಪ್
  • ಎರಡನೇ ರನ್ನರ್: ಸಂಗೀತ
  • ಮೂರನೇ ರನ್ನರ್: ವಿನಯ್ ಗೌಡ
  • ನಾಲ್ಕನೇ ರನ್ನರ್: ವರ್ತೂರ್ ಸಂತೋಷ್

ಉಲ್ಲೇಖಗಳು

[ಬದಲಾಯಿಸಿ]
  1. "ಬಿಗ್ ಬಾಸ್ ಕನ್ನಡ ಸೀಸನ್ ೧೦ ಇಂದಿನಿಂದ ಪ್ರಾರಂಭ". zeenews. 8 October 2023. Retrieved 8 ಅಕ್ಟೋಬರ್ 2023.
  2. "ಕಲರ್ಸ್ ಕನ್ನಡದ ಮೂರು ಧಾರಾವಾಹಿಗಳು ಮುಕ್ತಾಯ". ವಿಜಯ ಕರ್ನಾಟಕ. Retrieved 8 ಸೆಪ್ಟಂಬರ್ 2023.
  3. "ಬಿಗ್ ಬಾಸ್ ಕನ್ನಡಕ್ಕೆ ೧೦ಕ್ಕೆ ಮೂಹೂರ್ತ ಫಿಕ್ಸ್". ಫಿಲ್ಮಿಬೀಟ್ ಕನ್ನಡ. Retrieved 12 Sep 2023.
  4. "ಬಿಗ್ ಬಾಸ್ ಹೊಸ ಸೀಸನ್ ಯಾವಾಗ". ಡಿಜಿಟ್ ನ್ಯೂಸ್. 6 September 2023. Retrieved 6 ಸೆಪ್ಟಂಬರ್ 2023.[ಶಾಶ್ವತವಾಗಿ ಮಡಿದ ಕೊಂಡಿ]
  5. "ಊರಹಬ್ಬ:ಬಿಬಿಕೆಗೆ ದಿನಗಣನೆ ಶುರು". ಉದಯವಾಣಿ. Retrieved 23 ಸೆಪ್ಟಂಬರ್ 2023.
  6. "ಬಿಗ್ ಬಾಸ್ ಕನ್ನಡಕ್ಕೆ ೧೦ ರ ಸಂಭ್ರಮ". ದ ಟೈಮ್ಸ್ ಆಪ್ ಇಂಡಿಯಾ. Retrieved 14 Sep 2023.
  7. "ಬಿಬಿಕೆ ಟೀಸರ್ ಅನಾವರಣ". ಕನ್ನಡಪ್ರಭಾ. Retrieved 23 ಸೆಪ್ಟಂಬರ್ 2023.
  8. Singh, Shivangani (2023-10-09). "Bigg Boss kannada 10 Finale When and where to watch Kiccha sudeep's show Finalist ,prize money and more". Englishjagan. Retrieved 2024-01-25.
  9. "ಬಿಗ್ ಬಾ ೧೦ರ ಅಂತಿಮ ಸ್ಪರ್ಧಿಗಳ ಪಟ್ಟಿ". ಫಿಲ್ಮಿಬೀಟ್ ಕನ್ನಡ. Retrieved 8 ಅಕ್ಟೋಬರ್ 2023.
  10. "ಬಿಗ್‌ಬಾಸ್ ಕನ್ನಡ ಸೀಸನ್ ೧೦ರ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಇಲ್ಲಿದೆ". zeenews. 8 October 2023. Retrieved 8 ಅಕ್ಟೋಬರ್ 2023.
  11. "ಎರಡನೇ ಸ್ಪರ್ಧಿಆಗಿ ದೊಡ್ಮನೆ ಪ್ರವೇಶಿಸಿದ ಸ್ನೇಹಿತ್ ಗೌಡ". ಸುವರ್ಣ ನ್ಯೂಸ್. Retrieved 8 ಅಕ್ಟೋಬರ್ 2023.
  12. "ಕಾರ್ತಿಕ್ ಮಹೇಶ್". ಫಿಲ್ಮಿಬೀಟ್ ಕನ್ನಡ. Retrieved 9 ಅಕ್ಟೋಬರ್ 2023.
  13. "Bigg Boss 4 Winner Pratham enters Season 10 as a dictator". Times of India. 13 October 2023. Archived from the original on 13 ಅಕ್ಟೋಬರ್ 2023. Retrieved 13 October 2023.{{cite web}}: CS1 maint: bot: original URL status unknown (link)