ವಿಷಯಕ್ಕೆ ಹೋಗು

ಚಂದನ್ ಶೆಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಂದನ್ ಶೆಟ್ಟಿ
ಹಿನ್ನೆಲೆ ಮಾಹಿತಿ
ಜನ್ಮನಾಮಚಂದನ್ ಪರಮೇಶ್ ಶೆಟ್ಟಿ
ಜನನ (1989-09-17) ೧೭ ಸೆಪ್ಟೆಂಬರ್ ೧೯೮೯ (ವಯಸ್ಸು ೩೪)
ಶಾಂತಿಗ್ರಾಮ,
ಹೊಳೆನರಸಿಪುರ
ಸಂಗೀತ ಶೈಲಿಪಾರ್ಟಿ,
ಪಾಪ್ ಸಂಗೀತ,
ರಾಪ್ ಸಂಗೀತ,
ಡಿಸ್ಕೊ
ವೃತ್ತಿನಟ,
ಗಾಯಕ,
ರಾಪರ್,
ಗೀತಕಾರ,
ಸಂಗೀತ ನಿರ್ದೇಶಕ
ವಾದ್ಯಗಳುಗಿಟಾರಿಸ್ಟ್,
ಡ್ರಮ್ಮರ್
ಸಕ್ರಿಯ ವರ್ಷಗಳು೨೦೧೨-
L‍abelsOwn
ಅಧೀಕೃತ ಜಾಲತಾಣhttp://chandanshetty.com/

ಚಂದನ್ ಶೆಟ್ಟಿ ಅವರು ೧೭ ಸೆಪ್ಟೆಂಬರ್ ೧೯೮೯ ರಂದು ಹಾಸನ ಜಿಲ್ಲೆಯ ಶಾಂತಿಗ್ರಮದ ಹೊಳೆನರಸೀಪುರದಲ್ಲಿ ಜನಿಸಿದರು. ಇವರ ಪೂರ್ತಿ ಹೆಸರು ಚಂದನ್ ಪರಮೇಶ್ ಶೆಟ್ಟಿ. ನಟನಾಗಿ, ಸಂಗೀತ ನಿರ್ದೇಶಕನಾಗಿ, ಗಿಟಾರ್ ವಾದಕನಾಗಿ, ಡ್ರಮ್ಮರ್ ಮತ್ತು ರಾಪರ್ ಗಾಯಕನಾಗಿ ಇವರು ಹೆಸರು ಮಾಡಿದ್ದಾರೆ.[] "ಟಾಪ್ ಟು ಬಾಟಮ್", "೩ ಪೆಗ್", "ಚಾಕೊಲೇಟ್ ಗರ್ಲ್", "ಹಾಲಗೊಡೆ" ಮತ್ತು "ಟಕಿಲಾ" ನಂತಹ ಹಾಡುಗಳಲ್ಲಿ ಏಕವ್ಯಕ್ತಿ ಕಲಾವಿದನಾಗಿ ಚಂದನ್ ಶೆಟ್ಟಿ ಅಭಿನಯಿಸಿದ್ದಾರೆ.

ವೃತ್ತಿಜೀವನ

[ಬದಲಾಯಿಸಿ]

ಚಂದನ್ ಶೆಟ್ಟಿ ೨೦೧೨ ರಲ್ಲಿ ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯರವರ ಅಲೆಮಾರಿ ಚಿತ್ರದ ಗೀತರಚನೆಕಾರ ಮತ್ತು ಸಹಾಯಕ ಸಂಗೀತ ನಿರ್ದೇಶಕರಾಗಿ ತಮ್ಮ ವೃತ್ತಿಜೀವನವನ್ನು ಪ್ರವೇಶಿಸಿದ್ದಾರೆ. ನಂತರ ವರದನಾಯಕ, ಪವರ್, ಚಕ್ರವ್ಯೂಹ ಮತ್ತು ಭಜರಂಗಿ ಚಲನಚಿತ್ರಗಳಿಗೆ ಕೆಲಸ ಮಾಡಿದರು. ಕನ್ನಡ ಬಿಗ್ ಬಾಸ್ ಸೀಸನ್ ೫ ರಿಯಾಲಿಟಿ ಶೋನಲ್ಲಿ ಚಂದನ್ ಶೆಟ್ಟಿಯವರು ಜಯಗಳಿಸಿದರು.

ಧ್ವನಿಮುದ್ರಿಕೆ ಪಟ್ಟಿ

[ಬದಲಾಯಿಸಿ]
ವರ್ಷ ಸಿನಿಮಾ ಭಾಷೆ
೨೦೧೮ ಅಪ್ಪುಗೆ ಕನ್ನಡ
೨೦೧೮ ಸೀಸರ್ ಕನ್ನಡ
೨೦೧೭ ಗಂಚಲಿ ಕನ್ನಡ
೨೦೧೭ ಸಂಜೀವ ಕನ್ನಡ
೨೦೧೮ ಜೋಶ್ಲೇ ಕನ್ನಡ

ಆಲ್ಬಮ್ ಹಾಡುಗಳು

[ಬದಲಾಯಿಸಿ]
  1. ಹಲಾಗೊಡೆ
  2. ೩ ಪೆಗ್#
  3. ಚಾಕೊಲೇಟ್ ಗರ್ಲ್
  4. ಟಕಿಲಾ
  5. ನನ್ನಾ ಪ್ರೀತಿ ಸುಳ್ಳಾಲ್ಲ
  6. ಬೆಂಕಿ
  7. ಶೋಕಿಲಾಲ
  8. ಪಾರ್ಟಿ ಫ್ರೀಕ್
  9. ನೋಡು ಶಿವ
  10. ಲಂಬರ್ಗಿನಿ

ದೂರದರ್ಶನ

[ಬದಲಾಯಿಸಿ]
ರಿಯಾಲಿಟಿ ಶೋ ಚಾನಲ್ ಪಾತ್ರ
ಬಿಗ್ ಬಾಸ್ ಕನ್ನಡ 5 ಕಲರ್ಸ್ ಸೂಪರ್ ಸ್ಪರ್ಧಿ/ವಿಜೇತ[]
ಮಾಸ್ಟರ್ ಡಾನ್ಸರ್ ಕಲರ್ಸ್ ಸೂಪರ್ ತೀರ್ಪುಗಾರ[]
ಕನ್ನಡ ಕೋಗಿಲೆ ಕಲರ್ಸ್ ಸೂಪರ್ ತೀರ್ಪುಗಾರ

ಉಲ್ಲೇಖಗಳು

[ಬದಲಾಯಿಸಿ]
  1. https://www.filmibeat.com/celebs/chandan-shetty.html
  2. "Bigg Boss Kannada Season 5: Chandan Shetty wins the show, Diwakar is the runner-up". The Times of India. 29 January 2018.
  3. "Chandan Shetty to judge dance reality show". The Times of India.