ಬೃಂದಾವನ (ಕನ್ನಡ ಧಾರಾವಾಹಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೃಂದಾವನ ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿ ಆಗಿದೆ. 2023ರ ಅಕ್ಟೋಬರ್ 23 ರಿಂದ ಆರಂಭವಾದ ಈ ಧಾರಾವಾಹಿಯು ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತಿದೆ[೧] [೨]. ಹಲವಾರು ಯಶಸ್ವಿ ಧಾರಾವಾಹಿಗಳನ್ನು ನಿರ್ಮಾಣ ಮಾಡಿರುವ ಕೆ.ಎಸ್ ರಾಮ್‌ಜಿ ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ[೩].

ಬೃಂದಾವನ (ಕನ್ನಡ ಧಾರಾವಾಹಿ)
ಪ್ರೋಮ್‌ಶನಲ್ ಪೋಸ್ಟರ್
ಶೈಲಿದೈನಂದಿನ ಧಾರಾವಾಹಿ
ದೇಶಭಾರತ
ಭಾಷೆ(ಗಳು)ಕನ್ನಡ
ನಿರ್ಮಾಣ
ಕ್ಯಾಮೆರಾ ಏರ್ಪಾಡುಮಲ್ಟೀ ಕ್ಯಾಮೆರಾ
ಪ್ರಸಾರಣೆ
ಮೂಲ ವಾಹಿನಿಕಲರ್ಸ್ ಕನ್ನಡ
ಮೂಲ ಪ್ರಸಾರಣಾ ಸಮಯ23 ಅಕ್ಟೋಬರ್ 2023 – ಪ್ರಸ್ತುತ


ಕಥಾ ಹಂದರ[ಬದಲಾಯಿಸಿ]

ಕಥೆಯು 36 ಸದಸ್ಯರ ವಿಶಾಲವಾದ ಅವಿಭಕ್ತ ಕುಟುಂಬದ ಸುತ್ತ ಸುತ್ತುತ್ತದೆ. ಕಥಾ ನಾಯಕ ಆಕಾಶ್ ತನ್ನ ವಿದ್ಯಾಭ್ಯಾಸ ಮುಗಿಸಿ ವಿದೇಶದಿಂದ ಹಿಂದಿರುಗುವ ಸಮಯವಾಗಿರುತ್ತದೆ. ಇತ್ತ ತನ್ನ ಅಂತಿಮ ಕ್ಷಣಗಳ ಅಂಚಿನಲ್ಲಿರುವ ಅಜ್ಜಿ ಸುಧಾಮೂರ್ತಿಗೆ ತನ್ನ ಮೊಮ್ಮಗ ಆಕಾಶ್ ನ ಮದುವೆ ನೋಡಬೇಕೆಂಬ ಆಸೆ ಇರುತ್ತದೆ.

ಇನ್ನೊಂದೆಡೆ ಕಥಾ ನಾಯಕಿಯ ಅಣ್ಣ ಅಪ್ಪಣ್ಣ ತನ್ನ ಸಹೋದರಿ ಪುಷ್ಪಾಳನ್ನು ಒಳ್ಳೆಯ ಕುಟುಂಬಕ್ಕೆ ಮದುವೆ ಮಾಡಿಕೊಡಲು ಬಯಸುತ್ತಾನೆ. ಅದೇ ಸಮಯದಲ್ಲಿ ಆಕಾಶ್ ಮನೆಯಿಂದ ಪುಷ್ಪಾಳಿಗೆ ಸಂಬಂಧ ಬರುತ್ತದೆ.

ಆದರೆ ಆಕಾಶ್ ಗೆ ಪುಷ್ಪ ಪೋಟೋ ಬದಲು ಬೇರೊಂದು ಪೋಟೋ ತಪ್ಪಾಗಿ ಕಳುಹಿಸಲಾಗಿರುತ್ತದೆ. ಈ ವಿಷಯ ಗೊತ್ತಿಲ್ಲದೆ ಆಕಾಶ್ ಮದುವೆಗೆ ಒಪ್ಪಿಗೆ ಸೂಚಿಸಿರುತ್ತಾನೆ.

ಪಾತ್ರವರ್ಗ[ಬದಲಾಯಿಸಿ]

ಮುಖ್ಯ ಪಾತ್ರಗಳು[ಬದಲಾಯಿಸಿ]

 • ಅಮೂಲ್ಯ ಭಾರಾಧ್ವಾಜ್(2023-ಪ್ರಸ್ತುತ): ಪುಷ್ಪಾ ಪಾತ್ರದಲ್ಲಿ, ಕಥಾನಾಯಕಿಯಾಗಿ.
 • ವರುಣ್ ಆರಾಧ್ಯ(2023-ಪ್ರಸ್ತುತ)[೪]: ಆಕಾಶ್ ಪಾತ್ರದಲ್ಲಿ, ಕಥಾನಾಯಕನಾಗಿ.
  • ವಿಶ್ವಾನಾಥ ರವೀಂದ್ರ(2023)[೫] [೬]: ಪಾತ್ರದಾರಿ ಬದಲಾವಣೆಯಾಗುವ ಮೊದಲು

ಇತರೆ ಪಾತ್ರಗಳು[ಬದಲಾಯಿಸಿ]

 • ಚಿತ್ಕಲಾ ಬಿರಾದಾರ್(2023-ಪ್ರಸ್ತುತ)[೭]: ಸುಧಾಮೂರ್ತಿ ಪಾತ್ರದಲ್ಲಿ, ಮನೆಯ ಯಜಮಾನಿಯಾಗಿ. ಆಕಾಶ್ ಅಜ್ಜಿಯಾಗಿ.
 • ಸಂದೀಪ್ ಅಶೋಕ್(2023-ಪ್ರಸ್ತುತ)
 • ಸುಂದರ್ ವೀಣಾ(2023-ಪ್ರಸ್ತುತ)
 • ವೀಣಾ ಸುಂದರ್(2023-ಪ್ರಸ್ತುತ)
 • ರಾಜೇಶ್ ಎಸ್.ರಾವ್(2023-ಪ್ರಸ್ತುತ)
 • ಅನು ಪಲ್ಲವಿ ಗೌಡ
 • ಮಾನಸ ಗುರುಸ್ವಾಮಿ
 • ಯೋಗಿತಾ ಕುಂಬಾರ್
 • ವೈಷ್ಣವಿ ಗೌಡ
 • ಮಧುರಾ
 • ರಕ್ಷಿತಾ ರವೀಂದ್ರ: ರತ್ನ ಪಾತ್ರದಲ್ಲಿ. ರಾಘವೇಂದ್ರ ಅವರ ಹೆಂಡತಿಯಾಗಿ, ಸೀತಾ ತಾಯಿಯಾಗಿ
 • ಸಾಗರ್ ಗೌಡ: ರಾಘವೇಂದ್ರ ಪಾತ್ರದಲ್ಲಿ, ರತ್ನ ಗಂಡನಾಗಿ ಮತ್ತು ಸೀತಾ ತಂದೆಯಾಗಿ.
 • ಆರ್ವಿ ಎಮ್.: ಸೀತಾ ಪಾತ್ರದಲ್ಲಿ. ರಾಘವೇಂದ್ರ ಮತ್ತು ರತ್ನ ಮಗಳಾಗಿ.
 • ಪ್ರಿಯಾ

ಬಾಹ್ಯಕೊಂಡಿಗಳು[ಬದಲಾಯಿಸಿ]


ಉಲ್ಲೇಖಗಳು[ಬದಲಾಯಿಸಿ]

 1. "ಕಿರುತೆರೆಯ ಕಟ್ಟುಪಾಡುಗಳ ಗೋಡೆಯೊಡೆದು ಬರ್ತಿದೆ ಹೊಸ ಧಾರಾವಾಹಿ; ಅತಿದೊಡ್ಡ ಕುಟುಂಬದ ಅಪರೂಪದ ಕತೆ, ಬೃಂದಾವನ". ಹಿಂದೂಸ್ತಾನ್ ಟೈಮ್ಸ್ ಕನ್ನಡ. Retrieved 24 ಸೆಪ್ಟಂಬರ್ 2023.
 2. "ಮದುವೆ ಒಬ್ಬನ ಜೊತೆ, ಪ್ರಸ್ಥ ಇನ್ನೊಬ್ಬನ ಜೊತೆಗಾ? ಬೃಂದಾವನ ಸೀರಿಯಲ್ ಟ್ರೋಲ್". News18 Kannada. Retrieved 19 ನವೆಂಬರ್ 2023.
 3. "ಇದೇ ಅಕ್ಟೋಬರ್ 23ರಂದು ಬೃಂದಾವನ ಧಾರಾವಾಹಿ ಆರಂಭ: ಗೀತಾ ಸೀರಿಯಲ್ ಮುಕ್ತಾಯ..!". ಫಿಲ್ಮಿಬೀಟ್ ಕನ್ನಡ. Retrieved 18 ಅಕ್ಟೋಬರ್ 2023.
 4. "ಲವ್‌ ಬ್ರೇಕಪ್‌ ಬೆನ್ನಲ್ಲೇ ಹೀರೋ ಆದ ವರುಣ್‌ ಆರಾಧ್ಯ!". 19 ನವೆಂಬರ್ 2023. News18 Kannada.
 5. "ಬೃಂದಾವನ ಸೀರಿಯಲ್ ಹೀರೋ ಚೇಂಜ್!". News18 Kannada. Retrieved 18 ನವೆಂಬರ್ 2023.
 6. "ಬೃಂದಾವನ ಹೀರೋ ಚೇಂಜ್! ಮದ್ವೆ ಇವನ ಜೊತೆ ಪ್ರಸ್ತ ಮತ್ತೊಬ್ಬರ ಜೊತೆನಾ? ಇದ್ಯಾವ ನ್ಯಾಯ ಅಂತಿದ್ದಾರೆ ವೀಕ್ಷಕರು". ಏಷ್ಯಾನೆಟ್ ಸುವರ್ಣ ನ್ಯೂಸ್. Retrieved 18 ನವೆಂಬರ್ 2023.
 7. "ಕಲರ್ಸ್ ಕನ್ನಡದಲ್ಲಿ ಹೊಸ ಸೀರಿಯಲ್: ರಂಜಿಸಲು ಬರ್ತಿದ್ದಾರೆ ಕನ್ನಡತಿ ಅಮ್ಮಮ್ಮ!". ಏಷ್ಯಾನೆಟ್ ಸುವರ್ಣ ನ್ಯೂಸ್. Retrieved 23 ಸೆಪ್ಟಂಬರ್ 2023.