ಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)
ಭಾಗ್ಯಲಕ್ಷ್ಮೀ[೧] ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿ ಆಗಿದೆ. ಅಕ್ಟೋಬರ್ ೧೦, ೨೦೨೨ ರಿಂದ ಆರಂಭವಾದ ಈ ಧಾರಾವಾಹಿಯು ಸೋಮವಾರದಿಂದ ಶನಿವಾರದವರೆಗೆ ರಾತ್ರಿ ೭:೦೦ ಗಂಟೆಗೆ ಪ್ರಸಾರವಾಗುತ್ತಿದೆ. ಹಲವಾರು ಯಶಸ್ವಿ ಧಾರಾವಾಹಿಗಳನ್ನು ನಿರ್ಮಾಣ ಮಾಡಿರುವ ಜೈ ಮಾತಾ ಕಂಬೈನ್ಸ್ ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದು ಮಂಗಳ ಗೌರಿ ಮದುವೆ ಧಾರಾವಾಹಿಯು ಮುಗಿದ ನಂತರ ಆರಂಭವಾಗಿದೆ.
ಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ) | |
---|---|
ಶೈಲಿ | ದೈನಂದಿನ ಧಾರಾವಾಹಿ |
ಬರೆದವರು | ಜಯ ಆಳ್ವಾ |
ನಿರ್ದೇಶಕರು | ಯಶವಂತ್ ಪಾಂಡು[೨] , ಗೌಡು ದರ್ಶನ್ [೩] |
ದೇಶ | ಭಾರತ |
ಭಾಷೆ(ಗಳು) | ಕನ್ನಡ |
ನಿರ್ಮಾಣ | |
ನಿರ್ಮಾಪಕ(ರು) | ಜೈ ಮಾತಾ ಕಂಬೈನ್ಸ್ |
ಸಮಯ | 20-22 ನಿಮಿಷಗಳು |
ಪ್ರಸಾರಣೆ | |
ಮೂಲ ವಾಹಿನಿ | ಕಲರ್ಸ್ ಕನ್ನಡ (ವಿಯಾಕಾಂ 18) |
ಮೂಲ ಪ್ರಸಾರಣಾ ಸಮಯ | 10 ಅಕ್ಟೋಬರ್ 2022 – ಪ್ರಸ್ತುತ |
ಕಾಲಕ್ರಮ | |
ಸಂಬಂಧಿತ ಪ್ರದರ್ಶನಗಳು | ಲಕ್ಷ್ಮೀಬಾರಮ್ಮ-2 |
ಅಷ್ಟಅಲ್ಲದೇ, ಸುಮಾರು ಹತ್ತು ವರ್ಷಗಳ ನಂತರ ಮತ್ತೆ ನಾಯಕಿಯಾಗಿ ಸುಷ್ಮಾ ಕೆ. ರಾವ್ ಈ ಧಾರಾವಾಹಿಯ ಮೂಲಕ ಕಿರುತೆರೆಗೆ ಮರಳಿದ್ದಾರೆ.[೪]
ಕಥೆ
[ಬದಲಾಯಿಸಿ]ಅಕ್ಕ ತಂಗಿಯ ಬಾಂಧ್ಯವದ ಕಥೆಯ ಹಂದರವಾಗಿದೆ. ಭಾಗ್ಯ (ಸುಷ್ಮಾ ಕೆ. ರಾವ್) ಕಥೆಯ ನಾಯಕಿಯಾಗಿದ್ದು, ಜೀವನದಲ್ಲಿ ಏನೇ ಬಂದರೂ ಅದನ್ನು ಖುಷಿಯಿಂದ ಸ್ವಾಗತಿಸಿ, ಮನೆಯ ಜವಬ್ದಾರಿಯನ್ನು ಹೊತ್ತು ಇಡೀ ಜೀವನವನ್ನು ತನ್ನ ಸಂಸಾರಕ್ಕಾಗಿ ಮುಡಿಪಾಗಿಟ್ಟಿರುವ ಹೆಣ್ಣಾಗಿರುತ್ತಾಳೆ. ಬಾಲ್ಯದಲ್ಲೇ ತಂದೆ-ತಾಯಿಯನ್ನು ಕಳೆದು ಕೊಂಡ ಲಕ್ಷ್ಮೀಯನ್ನು (ಭೂಮಿಕಾ) ತನ್ನ ಮಗಳಂತೆ ಸಾಕಿದ್ದಾಳೆ. ಲಕ್ಷ್ಮೀಗೆ ಒಳ್ಳೆಯ ವರನ್ನು ಹುಡುಕಿ ಅವಳ ಮದುವೆ ಮಾಡುವ ಜವಬ್ಬಾರಿಯನ್ನು ಭಾಗ್ಯ ಹೊತ್ತಿದ್ದಾಳೆ. ಲಕ್ಷ್ಮೀ ಭಾಗ್ಯಳ ಚಿಕ್ಕಪ್ಪನ ಮಗಳಾಗಿದ್ದಾಳೆ. ಭಾಗ್ಯ ತನ್ನ ಗಂಡನಿಂದ ನಿಂದನೆಗೆ ಒಳಾಗಾಗುತ್ತಿರುತ್ತಾಳೆ. ಆದರೂ, ಈ ವಿಷಯವನ್ನು ಎಲ್ಲೂ ತೋರಿಸದೇ ನಗು ಮುಖದಿಂದ ಜೀವನವನ್ನು ನಿರ್ವಹಿಸುತ್ತ ಇರುತ್ತಾಳೆ.
ಈ ಧಾರಾವಾಹಿಯು ನಂತರ 'ಭಾಗ್ಯಲಕ್ಷ್ಮಿ' ಮತ್ತು 'ಲಕ್ಷ್ಮಿ ಬಾರಮ್ಮ' ಎಂಬ ಎರಡು ಧಾರಾವಾಹಿಗಳಾಗಿ ವಿಭಜನೆಯಾಯಿತು. ಈಗ, ಈ ಕಥೆಯು ಭಾಗ್ಯಾಳ ಜೀವನದ ಮೇಲೆ, ಪತಿ ಮತ್ತು ಮಗಳ ಕಾರಣದಿಂದಾಗಿ ಅತ್ತೆ ಮಾವಂದಿರು ಎದುರಿಸುತ್ತಿರುವ ತೊಂದರೆಗಳು, ಹೇಗೆ ಭಾಗ್ಯಳ ಅತ್ತೆ ಭಾಗ್ಯಳ ಹಕ್ಕುಗಳಿಗಾಗಿ ಅವಳಿಗೆ ಶಕ್ತಿಯನ್ನು ನೀಡುತ್ತಾಳೆ. ಮತ್ತೆ ಭಾಗ್ಯಳ ಶಿಕ್ಷಣವನ್ನು ಪೂರ್ಣಗೊಳಿಸುವಂತೆ ಉತ್ತೇಜಿಸುತ್ತಾಳೆ ಎಂಬುವುದರ ಮೇಲೆ ಕೇಂದ್ರಕೃತವಾಗಿದೆ.
ಕಲಾವಿದರು
[ಬದಲಾಯಿಸಿ]ಮುಖ್ಯ ಪಾತ್ರಗಳು
[ಬದಲಾಯಿಸಿ]- ಸುಷ್ಮಾ ಕೆ. ರಾವ್ : ಭಾಗ್ಯ ಆಗಿ; ತಾಂಡವ್ ಹೆಂಡತಿ.
- ಪದ್ಮಜಾ ರಾವ್':[೫] ಕುಸುಮ ಆಗಿ; ತಾಂಡವ್ ತಾಯಿ, ಭಾಗ್ಯಳ ಅತ್ತೆ, ಕಾವೇರಿಯ ಅಕ್ಕ.
- ಸುದರ್ಶನ್ ರಂಗಪ್ರಸಾದ್:[೬] [೭] ತಾಂಡವ್ ಆಗಿ; ಕುಸುಮಾಳ ಮಗ, ಭಾಗ್ಯಳ ಗಂಡ.
ಇತರೆ ಪಾತ್ರಗಳು
[ಬದಲಾಯಿಸಿ]- ಗೌತಮಿ ಗೌಡ: ಶ್ರೇಷ್ಠ ಆಗಿ; ಭಾಗ್ಯಳ ಗಂಡ. ತಾಂಡವ್ ಪ್ರೇಯಸಿ.
- ಕಾವ್ಯ ಗೌಡ ಪಾತ್ರ ಬದಲವಾಣೆಯ ನಂತರ.
- ಅಮೃತ ಗೌಡ: ತನ್ವಿ ಆಗಿ; ಭಾಗ್ಯ ಮತ್ತು ತಾಂಡವ್ ಮಗಳು.
- ನಿಹಾರ್ ಗೌಡ: ತನ್ಮಯ್ ಆಗಿ; ಭಾಗ್ಯ ಮತ್ತು ತಾಂಡವ್ ಮಗ.
- ಸುನೀತಾ ಶೆಟ್ಟಿ: ಸುನಂದಾ ಆಗಿ; ಭಾಗ್ಯಳ ತಾಯಿ.
- ಆಶಾ ಅಯ್ಯನರ್: ಪೂಜಾ ಆಗಿ; ಭಾಗ್ಯಳ ಸ್ವಂತ ತಂಗಿ.
- ಭೂಮಿಕಾ ರಮೇಶ್:[೮] ಲಕ್ಷ್ಮೀ ಆಗಿ; ಭಾಗ್ಯಳ ಚಿಕ್ಕಪ್ಪನ ಮಗಳು, ವೈಷ್ಣವ್ ಹೆಂಡತಿ.
- ಶಮಂತ್ ಗೌಡ ಆಲಿಯಾಸ ಬ್ರೋ ಗೌಡ: ವೈಷ್ಣವ್ ಆಗಿ; ಕಾವೇರಿಯ ಮಗ, ತಾಂಡವ್ ತಮ್ಮ, ಲಕ್ಷ್ಮಿಯ ಗಂಡ.
- ತನ್ವಿ ರಾವ್:[೯] ಕೀರ್ತಿಯಾಗಿ; ವೈಷ್ಣವ್ ಮಾಜಿ ಪ್ರೇಯಸಿ.
- ಸುಷ್ಮಾ ನಾಣಯ್ಯ: ಕಾವೇರಿ ಆಗಿ; ವೈಷ್ಣವ್ ತಾಯಿ, ಕುಸುಮಾಳ ತಂಗಿ.
- ಸುರೇಶ್ ರೈ: ಕೃಷ್ಣಕಾಂತ್ ಆಗಿ; ವೈಷ್ಣವ್ ತಂದೆ, ಕಾವೇರಿಯ ಗಂಡ.
- ರಜನಿ ಪ್ರವೀಣ್: ಸುಪ್ರೀತಾ ಆಗಿ; ವೈಷ್ಣವ್ ಸೋದರ ಅತ್ತೆ.
- ಲಾವಣ್ಯ ಹಿರೇಮಠ್ : ವಿಧಿ ಆಗಿ; ವೈಷ್ಣವ್ ತಂಗಿ.
ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು
[ಬದಲಾಯಿಸಿ]ವರ್ಷ | ವರ್ಗ | ಫಲಿತಾಂಶ | ಇತರೆ ಟಿಪ್ಪಣಿ | Refs |
---|---|---|---|---|
ಅನುಬಂಧ ಅವಾರ್ಡ್ಸ್ 2023 | ಜನಮೆಚ್ಚಿದ ಜೋಡಿ | ನಾಮನಿರ್ದೇಶನ | ಭಾಗ್ಯ-ತಾಂಡವ್ | |
ಜನಮೆಚ್ಚಿದ ಡಿಜಿಟಲ್ ಜೋಡಿ | ನಾಮನಿರ್ದೇಶನ | ಭಾಗ್ಯ-ತಾಂಡವ್ | ||
ಜನಮೆಚ್ಚಿದ ಮಂಥರೆ | ನಾಮನಿರ್ದೇಶನ | ಶ್ರೇಷ್ಠ | ||
ಜನಮೆಚ್ಚಿದ ಶಕುನಿ | ವಿಜೇತ | ತಾಂಡವ್ | ||
ಜನಮೆಚ್ಚಿದ ನಾಯಕಿ | ನಾಮನಿರ್ದೇಶನ | ಭಾಗ್ಯ | ||
ಜನಮೆಚ್ಚಿದ ಸ್ಟೈಲ್ ಐಕಾನ್ ಮಹಿಳೆ | ನಾಮನಿರ್ದೇಶನ | ಶ್ರೇಷ್ಠ | ||
ಜನಮೆಚ್ಚಿದ ಯೂತ್ ಐಕಾನ್ | ನಾಮನಿರ್ದೇಶನ | ಭಾಗ್ಯ | ||
ಜನಮೆಚ್ಚಿದ ಸಂಸಾರ | ನಾಮನಿರ್ದೇಶನ | |||
ಜನಮೆಚ್ಚಿದ ಹೊಸ ಪರಿಚಯ (ಫಿಕ್ಷನ್) | ನಾಮನಿರ್ದೇಶನ | ತಾಂಡವ್ | ||
ಮನೆಮೆಚ್ಚಿದ ಅತ್ತೆ | ವಿಜೇತ | ಕುಸುಮಾ | ||
ಮನೆಮೆಚ್ಚಿದ ಸೊಸೆ | ವಿಜೇತ | ಭಾಗ್ಯ | ||
ಉತ್ತಮ ನಿರ್ದೇಶನ | ವಿಜೇತ | ದರ್ಶನ್ | ||
ಉತ್ತಮ ರೇಟೆಡ್ ಫಿಕ್ಷನ್ ಶೋ | ವಿಜೇತ | |||
ಅನುಬಂಧ ಅವಾರ್ಡ್ಸ್ 2024 | ಜನಮೆಚ್ಚಿದ ಜೋಡಿ | ನಾಮನಿರ್ದೇಶನ | ಭಾಗ್ಯ-ತಾಂಡವ್ | |
ಜನಮೆಚ್ಚಿದ ಡಿಜಿಟಲ್ ಜೋಡಿ | ನಾಮನಿರ್ದೇಶನ | ಭಾಗ್ಯ-ತಾಂಡವ್ | ||
ಜನಮೆಚ್ಚಿದ ಮಂಥರೆ | ನಾಮನಿರ್ದೇಶನ | ಶ್ರೇಷ್ಠ | ||
ಜನಮೆಚ್ಚಿದ ಶಕುನಿ | ವಿಜೇತ | ತಾಂಡವ್ | ||
ಜನಮೆಚ್ಚಿದ ನಾಯಕಿ | ವಿಜೇತ | ಭಾಗ್ಯ | ||
ಜನಮೆಚ್ಚಿದ ಸ್ಟೈಲ್ ಐಕಾನ್ ಮಹಿಳೆ | ನಾಮನಿರ್ದೇಶನ | ಶ್ರೇಷ್ಠ | ||
ಜನಮೆಚ್ಚಿದ ಸಂಸಾರ | ನಾಮನಿರ್ದೇಶನ | |||
ಮನೆಮೆಚ್ಚಿದ ಅತ್ತೆ | ವಿಜೇತ | ಕುಸುಮಾ | ||
ಮನೆಮೆಚ್ಚಿದ ಸೊಸೆ | ವಿಜೇತ | ಭಾಗ್ಯ | ||
ಮನೆಮೆಚ್ಚಿದ ಸಹೋದರಿ | ವಿಜೇತ | ಪೂಜಾ | ||
ಉತ್ತಮ ರೇಟೆಡ್ ಫಿಕ್ಷನ್ ಶೋ | ವಿಜೇತ |
ರೂಪಾಂತರಗಳು
[ಬದಲಾಯಿಸಿ]ಭಾಷೆ | ಶ್ರೀರ್ಷಿಕೆ | ಮೂಲ ಬಿಡುಗಡೆ | ವಾಹಿನಿ(ಗಳು) | ಕೊನೆಯ ಪ್ರಸಾರ | ಟಿಪ್ಪಣಿಗಳು |
---|---|---|---|---|---|
ಕನ್ನಡ | Bhagyalakshmi ಭಾಗ್ಯಲಕ್ಷ್ಮಿ |
10 ಅಕ್ಟೋಬರ್ 2022 | ಕಲರ್ಸ್ ಕನ್ನಡ | ಪ್ರಸಾರವಾಗುತ್ತಿದೆ | ಮೂಲ |
ತಮಿಳು | ಅರ್ಚನೈ ಪೋಕಲ್ | 3 ಜುಲೈ 2023 | ಕಲರ್ಸ್ ತಮಿಳು | ಕನ್ನಡದಿಂದ ಡಬ್ಬ್ ಮಾಡಲಾಗಿದೆ | |
ಮರಾಠಿ | ಕಾವ್ಯಂಜಲಿ- ಸಖಿ ಸಾವಲಿ काव्यांजली - सखी सावली |
29 ಮೇ 2023 | ಕಲರ್ಸ್ ಮರಾಠಿ | ರೀಮೆಕ್ | |
ಹಿಂದಿ | ಮಂಗಳ ಲಕ್ಷ್ಮೀ मंगल लक्ष्मी |
27 ಫೆಬ್ರವರಿ 2024 | ಕಲರ್ಸ್ ಟಿವಿ |
ಉಲ್ಲೇಖಗಳು
[ಬದಲಾಯಿಸಿ]- ↑ "ಹೊಸ ಧಾರಾವಾಹಿ, ಭಾಗ್ಯಲಕ್ಷ್ಮೀಯಾಗಿ ಬಾಗಿಲು ತೆರೆಯಲಿದ್ದಾಳೆ". ಪ್ರಜಾವಾಣಿ. Retrieved 7 ಅಕ್ಟೋಬರ್ 2022.
- ↑ "ಭಾಗ್ಯಲಕ್ಷ್ಮಿ ಧಾರಾವಾಹಿ ಹಿಂದಿಗೆ ಡಬ್ ಆಗುತ್ತಿದೆ". Retrieved February 15, 2023.
- ↑ "ಭಾಗ್ಯಲಕ್ಷ್ಮೀ ನಿರ್ದೇಶನ ಮಾಡುತ್ತಿದ್ದಾರೆ ಗೌಡು ದರ್ಶನ್". ವಿಜಯ ಕರ್ನಾಟಕ. Retrieved 16 April 2023.
- ↑ "Bhagyalakshmi: 10 ವರ್ಷಗಳ ನಂತರ ನಾಯಕಿಯಾಗಿ 'ಭಾಗ್ಯಲಕ್ಷ್ಮೀ' ಮೂಲಕ ತೆರೆ ಮೇಲೆ ನಟಿ ಸುಷ್ಮಾ ರಾವ್". Vijaya Karnataka. Retrieved 5 Oct 2022.
- ↑ "ನನ್ನದು ಗಟ್ಟಿಗಿತ್ತಿ ಅತ್ತೆಯ ಪಾತ್ರ". Retrieved October 4, 2022.[ಶಾಶ್ವತವಾಗಿ ಮಡಿದ ಕೊಂಡಿ]
- ↑ "ಭಾಗ್ಯಲಕ್ಷ್ಮಿ ಧಾರಾವಾಹಿಯ ತಾಂಡವ್‍ನ ನಿಜವಾದ ಪತ್ನಿ ಯಾರು". Retrieved November 4, 2022.
- ↑ "ಮಹೇಶನ ಕೈಯಲ್ಲಿ ಚಿತ್ರಾನ್ನ ಆಯ್ತು ತಾಂಡವ್ ಲೈಫು!". ಸುವರ್ಣ ನ್ಯೂಸ್. Retrieved 24 August 2023.
- ↑ "ಮೆಡಿಕಲ್ ಓದ್ಬೇಕಿದ್ದ ಭಾಗ್ಯಲಕ್ಷ್ಮಿ ನಟಿ ಭೂಮಿಕಾ ನಟನಾ ಜಗತ್ತಿಗೆ ಎಂಟ್ರಿ ಕೊಟ್ಟಿದ್ದು ಹೇಗೆ?". Retrieved Jan 5, 2023.
- ↑ "ಭಾಗ್ಯಲಕ್ಷ್ಮಿ ಧಾರಾವಾಹಿ ಕೀರ್ತಿ ಬಗ್ಗೆ ನಿಮಗೆ ಗೊತ್ತಾ? ತನ್ವಿ ರಾವ್ ಅವರ ರಿಯಲ್ ಸ್ಟೋರಿ". Retrieved March 1, 2023.