ಸುಷ್ಮಾ ಕೆ. ರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುಷ್ಮಾ ಕೃಷ್ಣಮೂರ್ತಿ ರಾವ್ (ಜನನ ಫೆಬ್ರವರಿ ೨೩, ೧೯೮೫) ಭಾರತೀಯ ನಟಿ, ನೃತ್ಯಗಾರ್ತಿ ಮತ್ತು ದೂರದರ್ಶನ ನಿರೂಪಕಿ. ನಟಿಯಾಗಿ ಅವರು ಕನ್ನಡ ಕಿರುತೆರೆಯಲ್ಲಿನ ಕೆಲಸಕ್ಕಾಗಿ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಎಸ್. ನಾರಾಯಣ್ ಅವರ ಭಾಗೀರಥಿಯಲ್ಲಿ ಪಾದಾರ್ಪಣೆ ಮಾಡಿದ ನಂತರ, ಗುಪ್ತಗಾಮಿನಿ (ಧಾರಾವಾಹಿ)[೧] ಮೂಲಕ ಪ್ರಸಿದ್ಧಗೊಂಡರು. ಅವರು ಭರತನಾಟ್ಯ ನರ್ತಕಿಯಾಗಿದ್ದಾರೆ. 1997 ರಲ್ಲಿ ನೃತ್ಯಕ್ಕಾಗಿ ಆರ್ಯಭಟ ಪ್ರಶಸ್ತಿಯನ್ನು ಪಡೆದಿದ್ದಾರೆ.

ಸುಷ್ಮಾ ಕೆ. ರಾವ್
ಜನನ (1985-02-23) ೨೩ ಫೆಬ್ರವರಿ ೧೯೮೫ (ವಯಸ್ಸು ೩೯)
ರಾಷ್ಟ್ರೀಯತೆಭಾರತೀಯ
ವೃತ್ತಿ(ಗಳು)ನಟಿ, ನೃತ್ಯಗಾರ್ತಿ, ದೂರದರ್ಶನ ನಿರೂಪಕಿ
Years active೨೦೦೪– ಪ್ರಸ್ತುತ
Televisionಭಾಗೀರಥಿ (೨೦೦೪)
ಸಂಗಾತಿಪ್ರೀತಂ ಗುಬ್ಬಿ (೨೦೦೭-೨೦೧೩)
ಪೋಷಕಕೃ‍ಷ್ಣಮೂರ್ತಿ

ಜೀವನಚರಿತ್ರೆ[ಬದಲಾಯಿಸಿ]

ಭಾರತದ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಎಂಬ ಊರಿನಲ್ಲಿ ೨೩ ಫೆಬ್ರವರಿ ೧೯೮೫ ರಲ್ಲಿ ಸುಷ್ಮಾ ಜನಿಸಿದರು.

ಇವರ ಕುಟುಂಬದ ಬಗ್ಗೆ ಅಷ್ಟೇನು ವಿವರಗಳು ಇಲ್ಲ. ಸುಷ್ಮಾ ೨೦೦೭ರಲ್ಲಿ ಭಾರತೀಯ ಸಿನಿಮಾ ಚಿತ್ರಕಥೆಕಾರ ಮತ್ತು ನಿರ್ದೇಶಕ ಪ್ರೀತಂ ಗುಬ್ಬಿಯನ್ನು ಮದುವೆಯಾಗುತ್ತಾರೆ. ಸುಮಾರು ಆರು ವರ್ಷಗಳ ಕಾಲ ಒಟ್ಟಿಗೆ ಇದ್ದ ನಂತರ ಇವರಿಬ್ಬರು ೨೦೧೩ರಲ್ಲಿ ವೈಯಕ್ತಿಕ ಕಾರಣಗಳಿಂದ ದೂರವಾಗುತ್ತಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.

ಶಿಕ್ಷಣ

ಅವರು KLE ಕಾಲೇಜಿನಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಪಡೆದಿದ್ದಾರೆ ಮತ್ತು ಅವರು ಮದ್ರಾಸ್ ವಿಶ್ವವಿದ್ಯಾಲಯದಿಂದ ಹಿಂದಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಸಹ ಹೊಂದಿದ್ದಾರೆ. ಇವರು ತರಬೇತಿ ಪಡೆದ ಭರತನಾಟ್ಯ ನರ್ತಕಿಯಾಗಿದ್ದಾರೆ. ಅವರು ನವದೆಹಲಿ, ಮುಂಬೈ, ಜೈಪುರ ಮತ್ತು ತಿರುವನಂತಪುರಂ ಮತ್ತು ಹಂಪಿ ಉತ್ಸವದಲ್ಲಿ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಅವರು ನೃತ್ಯದಲ್ಲಿ ಕರ್ನಾಟಕ ರಾಜ್ಯ ಮತ್ತು ಕೇಂದ್ರೀಯ ವಿದ್ಯಾರ್ಥಿವೇತನವನ್ನು (NCERT) ಪಡೆದಿದ್ದಾರೆ. ಅವರು 1997 ರಲ್ಲಿ ನೃತ್ಯಕ್ಕಾಗಿ ಆರ್ಯಭಟ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ನಟನಾ ವೃತ್ತಿ[ಬದಲಾಯಿಸಿ]

ನಟ ವಿಜಯ್ ಕಾಶಿ ಅವರು ಸುಷ್ಮಾ ಅವರಿಗೆ ನಟನೆಗೆ ಬರುವಂತೆ ಪ್ರೋತ್ಸಾಹಿಸುತ್ತಾರೆ. ಹೀಗೆ ಸುಷ್ಮಾ ತಮ್ಮ ದೂರದರ್ಶನ ವೃತ್ತಿಜೀವನವನ್ನು ಪ್ರಾರಂಭಿಸಿದರು. ಈ ಸಮಯದಲ್ಲಿ, ನಟ ವಿಜಯ್ ಕಾಶಿ ಅವರ ಪತ್ನಿ ವೈಜಯಂತಿ ಕಾಶಿಯಲ್ಲಿ ಕೂಚಿಪುಡಿ ಕಲಿಯುತ್ತಿದ್ದರು. ಸುಷ್ಮಾ ಅವರು ಎಸ್. ನಾರಾಯಣ್ ಅವರ ಭಾಗೀರಥಿಯೊಂದಿಗೆ ದೂರದರ್ಶನಕ್ಕೆ ಪಾದಾರ್ಪಣೆ ಮಾಡಿದರು, ಇದರಲ್ಲಿ ಅವರು ಹೇಮಾ ಪ್ರಭಾತ್ ಅವರ ಪಾತ್ರದ ಸಹೋದರಿ ವೀಣಾ ಪಾತ್ರವನ್ನು ನಿರ್ವಹಿಸಿದರು. ನಂತರ ಅವರು ಸ್ವಾತಿ ಮುತ್ತು ಚಿತ್ರದಲ್ಲಿ ಪಲ್ಲವಿಯಾಗಿ, ಬಿದಿಗೆ ಚಂದ್ರಮದಲ್ಲಿ ಶಶಿಕಲಾ ಪಾತ್ರದಲ್ಲಿ ಕಾಣಿಸಿಕೊಂಡರು. ಮೊದಲು ಯಾವ ಜನ್ಮದ ಮೈತ್ರಿಯಲ್ಲಿ ಅನನ್ಯಾಳಾಗಿ, ಗುಪ್ತಗಾಮಿನಿಯಲ್ಲಿ ಭಾವನಾ ಮತ್ತು ಸೊಸೆ ತಂದ ಸೌಭಾಗ್ಯದಲ್ಲಿ ಕೀರ್ತಿಯಾಗಿ ಕಾಣಿಸಿಕೊಂಡರು. ಸುಷ್ಮಾ ಅವರಿಗೆ ಗುಪ್ತಗಾಮಿನಿಯಲ್ಲಿನ ಅವರ ಅಭಿನಯಕ್ಕಾಗಿ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ​​​​ಅತ್ಯುತ್ತಮ ನಟಿ ಪ್ರಶಸ್ತಿ ಮತ್ತು ಸೊಸೆ ತಂದ ಸೌಭಾಗ್ಯಕ್ಕಾಗಿ ಜೀ ಕನ್ನಡ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ನೀಡಲಾಯಿತು.

ನಿರೂಪಣೆ[ಬದಲಾಯಿಸಿ]

ಇವರು ಹಲವಾರು ದೂರದರ್ಶನ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ.

ದೂರದರ್ಶನ[ಬದಲಾಯಿಸಿ]

ವರ್ಷ ಧಾರಾವಾಹಿ ಪಾತ್ರ ವಾಹಿನಿ ಇತರೆ ಟಿಪ್ಪಣಿಗಳು
೨೦೦೪ ಭಾಗೀರಥಿ ವೀಣಾ
೨೦೦೪ ಸ್ವಾತಿ ಮುತ್ತು ಪಲ್ಲವಿ
೨೦೦೪ ಬಿದಿಗೆ ಚಂದ್ರಮ ಶಶಿಕಲಾ
೨೦೦೪ ಯಾವ ಜನ್ಮದ ಮೈತ್ರಿ ಅನನ್ಯ ತ್ರಿಪಾತ್ರ
೨೦೦೫ ಗುಪ್ತಗಾಮಿನಿ[೨] [೩] ಭಾವನ ಈ ಟಿವಿ ಕನ್ನಡ ನಾಯಕಿ
೨೦೧೨ ಸೊಸೆ ತಂದ ಸೌಭಾಗ್ಯ ಕೀರ್ತಿ/ ಗಾಯತ್ರಿ ಝೀ ಕನ್ನಡ ನಾಯಕಿ
೨೦೧೨ ಪುಟ್ಟಗೌರಿ ಮದುವೆ ಟೀಚರ್ ಈ ಟಿವಿ ಕನ್ನಡ ವಿಶೇಷ ಪಾತ್ರ
೨೦೧೪ ತರ್ಲೆ ನನ್ಮಕ್ಕಳು ನಿರೂಪಕಿ ಸ್ಟಾರ್ ಸುವರ್ಣ
೨೦೨೦ ಜೀನ್ಸ್ ನಿರೂಪಕಿ ಝೀ ಕನ್ನಡ
೨೦೨೦ ಗೀತಾ ಕಲರ್ಸ್ ಕನ್ನಡ ವಿಶೇಷ ಪಾತ್ರ
೨೦೨೧ ಮನೆ ಮನೆ ಮಹಾಲಕ್ಷ್ಮೀ ನಿರೂಪಕಿ ಝೀ ಕನ್ನಡ
೨೦೨೨ ಬೆಟ್ಟದ ಹೂ ಸ್ಟಾರ್ ಸುವರ್ಣ ವಿಶೇಷ ಪಾತ್ರ[೪]
೨೦೨೨- ಪ್ರಸ್ತುತ ಭಾಗ್ಯಲಕ್ಷ್ಮೀ ಭಾಗ್ಯ ಕಲರ್ಸ್ ಕನ್ನಡ ನಾಯಕಿ[೫] [೬] [೭]
೨೦೨೩ ಅನುಬಂಧ ಅವಾರ್ಡ್ಸ್ ಸ್ವತಃ ಕಲರ್ಸ್ ಕನ್ನಡ
೨೦೨೩ ಬಿಗ್ ಬಾಸ್ ಕನ್ನಡ (ಸೀಸನ್ ೮) ಅತಿಥಿ ಕಲರ್ಸ್ ಕನ್ನಡ ದೀಪಾವಾಳಿ ಆಚರಣೆ ಮತ್ತು ಭಾಗ್ಯಲಕ್ಷ್ಮೀ ಧಾರಾವಾಹಿ ಪ್ರಚಾರಕ್ಕೆ

ಸಿನಿಮಾ[ಬದಲಾಯಿಸಿ]

ಎಕ್ಸ್‌ಕ್ಯೂಸ್‌ಮಿ ಕನ್ನಡ ಸಿನಿಮಾದ ನಾಯಕಿ ಪಾತ್ರಕ್ಕೆ ಸುಷ್ಮಾರಿಗೆ ಅವಕಾಶ ನೀಡಲಾಯಿತು. ಆದರೆ, ನಾಯಕಿ ಪಾತ್ರಕ್ಕೆ ತುಂಬಾ ಗ್ಲಾಮರಸ್ ಬಟ್ಟೆಯನ್ನು ಧರಿಸಬೇಕಿದ್ದರಿಂದ ಈ ಪಾತ್ರ ಮಾಡುವುದನ್ನು ನಿರಾಕರಿಸಿದರು.

ಪ್ರಶಸ್ತಿಗಳು ಮತ್ತು ಗೌರವಗಳು[ಬದಲಾಯಿಸಿ]

ವರ್ಷ ಪ್ರಶಸ್ತಿ ವರ್ಗ ಫಲಿತಾಂಶ ಇತರೆ ಟಿಪ್ಪಣಿಗಳು
1997 ಆರ್ಯಭಟ ಭರತನಾಟ್ಯಕ್ಕೆ ನೀಡಿದ ಕೊಡುಗೆಗಾಗಿ ಗೆಲುವು
2005 ಆರ್ಯಭಟ ನಟನೆಗಾಗಿ ಗೆಲುವು
2005 ಅತ್ಯುತ್ತಮ ನಟಿ (ಗುಪ್ತಗಾಮಿನಿ) ಭಾವನ ಪಾತ್ರಕ್ಕಾಗಿ ಗೆಲುವು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್
2007 ಅತ್ಯುತ್ತಮ ನಟಿ (ಗುಪ್ತಗಾಮಿನಿ) ಭಾವನ ಪಾತ್ರಕ್ಕಾಗಿ ಗೆಲುವು ಎಸ್ಸೇಲ್ ಕರ್ನಾಟಕ
2012 ಅತ್ಯುತ್ತಮ ಮಗಳು( ಸೊಸೆ ತಂದ ಸೌಭಾಗ್ಯ) ಕೀರ್ತಿ ಪಾತ್ರಕ್ಕಾಗಿ ಗೆಲುವು
2023 ಮನೆಮೆಚ್ಚಿದ ಸೊಸೆ (ಅನುಬಂಧ ಅವಾರ್ಡ್ಸ್) ಭಾಗ್ಯ (ಭಾಗ್ಯಲಕ್ಷ್ಮೀ) ಗೆಲುವು [೮]

ಉಲ್ಲೇಖಗಳು[ಬದಲಾಯಿಸಿ]

  1. "ಐದುವರುಷಗಳನ್ನು ಪೂರ್ಣಗೊಳಿಸಿದ ಗುಪ್ತಗಾಮಿನಿ". ಫಿಲ್ಮಿಬೀಟ್ ಕನ್ನಡ. Retrieved 29 ಡಿಸೆಂಬರ್ 2008.
  2. "ಗುಪ್ತಗಾಮಿನಿ ಧಾರಾವಾಹಿಯ ಪಾತ್ರವರ್ಗ". nettv4u. Retrieved 10 ಸೆಪ್ಟಂಬರ್ 2023.
  3. "ಕನ್ನಡದ ಉತ್ತಮ ಧಾರಾವಾಹಿಗಳು". ದ ಟೈಮ್ಸ್ ಆಪ್ ಇಂಡಿಯಾ. Retrieved 31 ಆಗಸ್ಟ್ 2023.
  4. "ಮತ್ತೆ ಧಾರಾವಾಹಿಗೆ ಕಮ್‌ಬ್ಯಾಕ್ ಮಾಡಿದ ಭಾವನ ಆಲಿಯಾಸ್ ಸುಷ್ಮಾ". Retrieved July 7, 2022.
  5. "10 ವರ್ಷಗಳ ನಂತರ ನಾಯಕಿಯಾಗಿ 'ಭಾಗ್ಯಲಕ್ಷ್ಮೀ' ಮೂಲಕ ತೆರೆ ಮೇಲೆ ನಟಿ ಸುಷ್ಮಾ ರಾವ್". Retrieved 5th October, 2022. {{cite web}}: Check date values in: |access-date= (help)[ಶಾಶ್ವತವಾಗಿ ಮಡಿದ ಕೊಂಡಿ]
  6. "ಭಾಗ್ಯಲಕ್ಷ್ಮಿ ಧಾರಾವಾಹಿ ಹಿಂದಿಗೆ ಡಬ್ ಆಗುತ್ತಿದೆ". Retrieved February 15, 2023.
  7. "ಕಿರುತೆರೆ ನಟನೆಗೆ ಮರಳಿದ ಭಾವನ ಆಲಿಯಾಸ್ ಸುಷ್ಮಾ ಕೆ. ರಾವ್". ಹಿಂದೂಸ್ತಾನ ಟೈಮ್ಸ್. Retrieved 7 ಜುಲೈ 2022.
  8. "ಸಡನ್‌ ಆಗಿ ಅಪ್ಪ ತೀರಿಕೊಂಡರು: 'ಭಾಗ್ಯಲಕ್ಷ್ಮೀ' ಸೀರಿಯಲ್ ಖ್ಯಾತಿಯ ಸುಷ್ಮಾ ಭಾವುಕ". ವಿಜಯ ಕರ್ನಾಟಕ. Retrieved 25 ಸೆಪ್ಟಂಬರ್ 2023.