ಬಂಡಿಹಳ್ಳ ಜಲಾಶಯ

ವಿಕಿಪೀಡಿಯ ಇಂದ
Jump to navigation Jump to searchಬಂಡಿಹಳ್ಳ ಜಲಾಶಯವು ಘಾಟಿ ಸುಬ್ರಮಣ್ಯ ಮತ್ತು ದೊಡ್ಡಬಳ್ಳಾಪುರ ಮಾರ್ಗ ಮಧ್ಯೆ , ಘಾಟಿ ಸುಬ್ರಹ್ಮಣ್ಯಕ್ಕೆ ೩ಕೀ.ಮಿ ದೂರದಲ್ಲಿ ಇದೆ ಇದನ್ನು ಸುಮಾರು 1946ರಲ್ಲಿ ನಿರ್ಮಿಸಲಾಯಿತು. ಇದೆ ಜಲಾನಯನ ಪ್ರದೇಶವು ಸುಮಾರು ೧೫೦೦ ಹೇಕ್ಟೆರ್ ಪ್ರದೇಶಗಳಿಗೆ ನೀರಿಣಿಸಬಲ್ಲದು. ಬಂಡಿಹಳ್ಳ ಜಲಾಶಯ ಜಲಾನಯನ ಪ್ರದೇಶ ಗೌರಿಬಿದನೂರು ತಾಲ್ಲೂಕಿನ ತೊಂಡೆಬಾವಿ ಹೋಬಳಿಯ ಸೂಮಾರು ೫೦ ಹಳ್ಳಿಗೆ ಇದೆ ಆಧಾರ. ಇದು ಉತ್ತರ ಪಿನಾಕಿನಿಯ ಉಪನದಿಯಾಗಿದ್ದು ಸುಮಾರು ೫೦ ಕೀ.ಮಿ ಕ್ರಮಿಸಿ ತೊಂಡೆಬಾವಿಯ ಸಮೀಪ ಉತ್ತರ ಪಿನಾಕಿನಿಗೆ ಸೇರುತ್ತದೆ. ಈಗ ಈ ನದಿಗೆ ಘಾಟಿ ಸುಬ್ರಹ್ಮಣ್ಯದ ಬಳಿ ವಿಶ್ವೇಶ್ವರಯ್ಯ ಪಿಕಪ್ ಡ್ಯಾಂ ಹಾಗೂ ಗೂಂಜುರು ಬಳಿ ೫೦೦ ಹೇಕ್ಟೆರ್ ಪ್ರದೇಶದಲ್ಲಿ ಕೆರೆಯನ್ನು ನಿರ್ಮಿಸಲಾಗಿದೆ. ಆದ ಕಾರಣ ಬಂಡಿಹಳ್ಳ ನದಿಯ(ಸುಬ್ರಹ್ಮಣ್ಯ ನದಿ ಹಿಂದಿನ ಹೇಸರು) ಜಾಡು ನಶಿಸಿಹೋಗಿದೆ.