ಬಂಡಾರು ದತ್ತಾತ್ರೇಯ
Bandaru Dattatreya | |
| |
ಪ್ರಸಕ್ತ | |
ಅಧಿಕಾರ ಪ್ರಾರಂಭ 7 July 2021 | |
ರಾಷ್ಟ್ರಪತಿ | Droupadi Murmu |
---|---|
ಪೂರ್ವಾಧಿಕಾರಿ | Satyadev Narayan Arya |
ಪೂರ್ವಾಧಿಕಾರಿ | Kalraj Mishra |
ಉತ್ತರಾಧಿಕಾರಿ | Rajendra Arlekar |
ಅಧಿಕಾರದ ಅವಧಿ 9 November 2014 – 1 September 2017 | |
ಪೂರ್ವಾಧಿಕಾರಿ | Narendra Singh Tomar |
ಉತ್ತರಾಧಿಕಾರಿ | Santosh Gangwar |
ಪೂರ್ವಾಧಿಕಾರಿ | N. Indrasena Reddy |
ಉತ್ತರಾಧಿಕಾರಿ | G. Kishan Reddy |
ಅಧಿಕಾರದ ಅವಧಿ 16 May 2014 – 23 May 2019 | |
ಪೂರ್ವಾಧಿಕಾರಿ | Anjan Kumar Yadav |
ಉತ್ತರಾಧಿಕಾರಿ | G. Kishan Reddy |
ಜನನ | Hyderabad, Hyderabad State, British India (present-day Telangana, India) | ೧೨ ಜೂನ್ ೧೯೪೭
ರಾಜಕೀಯ ಪಕ್ಷ | Bharatiya Janata Party |
ಜೀವನಸಂಗಾತಿ | Vasantha (m. 1989) |
ವೃತ್ತಿ | Social worker[೧] |
ಬಂಡಾರು ದತ್ತಾತ್ರೇಯ (ಜನನ ೧೨ ಜೂನ್ ೧೯೪೭) ಒಬ್ಬ ಭಾರತೀಯ ರಾಜಕಾರಣಿಯಾಗಿದ್ದು, ೨೦೨೧ ರಿಂದ ಹರಿಯಾಣ ರಾಜ್ಯದ ಪ್ರಸ್ತುತ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಹಿಮಾಚಲ ಪ್ರದೇಶದ ೨೦ ನೇ ರಾಜ್ಯಪಾಲರಾಗಿದ್ದರು ಮತ್ತು ೨೦೧೪ ರಿಂದ ೨೦೧೯ ರವರೆಗೆ ಸಿಕಂದರಾಬಾದ್‌ನ ಲೋಕಸಭೆಯ ಸದಸ್ಯರಾಗಿದ್ದರು . ಅವರು ಭಾರತೀಯ ಜನತಾ ಪಕ್ಷ (ಬಿಜೆಪಿ) ಕ್ಕೆ ಸೇರಿದವರು.
ಹೈದರಾಬಾದ್‌ನಲ್ಲಿ ಜನಿಸಿದ ದತ್ತಾತ್ರೇಯ ಅವರು ವಿಜ್ಞಾನ ವಿಭಾಗ ದಲ್ಲಿ ಪದವಿ ಪಡೆದರು. ಅವರು ೧೯೬೫ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರಿದರು ಮತ್ತು ತುರ್ತು ಪರಿಸ್ಥಿತಿಯ ಸಮಯದಲ್ಲಿ ಜೈಲುವಾಸ ಅನುಭವಿಸಿದರು. ೧೯೯೧ರಲ್ಲಿ, ಅವರು ಮೊದಲ ಬಾರಿಗೆ ಸಿಕಂದರಾಬಾದ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ೧೯೯೭ ರಲ್ಲಿ ಅವರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ೧೯೯೮ ರಲ್ಲಿ, ಅವರು ಮರು ಆಯ್ಕೆಯಾದರು ಮತ್ತು ಎರಡನೇ ವಾಜಪೇಯಿ ಮಂತ್ರಿಮಂಡಲದಲ್ಲಿ ಕೇಂದ್ರ ನಗರಾಭಿವೃದ್ಧಿ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು ೧೯೯೯ರಲ್ಲಿ ಸತತ ಮೂರನೇ ಬಾರಿಗೆ ಆಯ್ಕೆಯಾದರು. ಮತ್ತೆ ಮೂರನೇ ವಾಜಪೇಯಿ ಮಂತ್ರಿಮಂಡಲದಲ್ಲಿ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು ೨೦೦೪ ಮತ್ತು ೨೦೦೯ ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಸೋತರು. ಪಕ್ಷವು ಅವರನ್ನು ೨೦೧೩ರಲ್ಲಿ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಿಸಿತು. ಮೇ ೨೦೧೪ ರಲ್ಲಿ, ಅವರು ತಮ್ಮ ಹಿಂದಿನ ಕ್ಷೇತ್ರದಿಂದ ಲೋಕಸಭೆಗೆ ಮರು ಆಯ್ಕೆಯಾದರು. ನವೆಂಬರ್‌ನಲ್ಲಿ ಅವರು ಮೋದಿ ಸಚಿವಾಲಯದಲ್ಲಿ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವರಾದರು ಮತ್ತು ತೆಲಂಗಾಣದಿಂದ ಏಕೈಕ ಸಚಿವರಾದರು.
ಆರಂಭಿಕ ಜೀವನ
[ಬದಲಾಯಿಸಿ]ದತ್ತಾತ್ರೇಯ ಅವರು ಹೈದರಾಬಾದ್ ರಾಜ್ಯದ ಹೈದರಾಬಾದ್ ನಗರದಲ್ಲಿ ಬಂಡಾರು ಅಂಜಯ್ಯ ಮತ್ತು ಈಶ್ವರಮ್ಮ ದಂಪತಿಗಳಿಗೆ ೧೨ ಜೂನ್ ೧೯೪೭ ರಂದು ಜನಿಸಿದರು. [೨] [೩] ಅವರು ಬಿ.ಎಸ್ಸಿ ಪದವಿಯನ್ನು ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಪಡೆದರು[೨]
ರಾಜಕೀಯ ವೃತ್ತಿಜೀವನ
[ಬದಲಾಯಿಸಿ]ದತ್ತಾತ್ರೇಯ ಅವರು ೧೯೬೫ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರಿದರು. ಅವರು ೧೯೬೫ ರಿಂದ ೧೯೬೮ ರವರೆಗೆ ಸಂಘದ ಪ್ರಚಾರಕರಾಗಿ ಸೇವೆ ಸಲ್ಲಿಸಿದರು. ಅವರು ಲೋಕ ಸಂಘರ್ಷ ಸಮಿತಿಯ ( ಜಯಪ್ರಕಾಶ ನಾರಾಯಣ ನೇತೃತ್ವದ ಸಂಪೂರ್ಣ ಕ್ರಾಂತಿಯ ಚಳುವಳಿ ) ರಾಜ್ಯ ಜಂಟಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದರು ಮತ್ತು ೧೯೭೦ ರ ದಶಕದಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜೈಲುವಾಸ ಅನುಭವಿಸಿದರು. [೪]
೧೯೮೦ ರಲ್ಲಿ, ದತ್ತಾತ್ರೇಯ ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿದರು. [೪] ಅವರನ್ನು ಪಕ್ಷದ ಆಂಧ್ರ ಪ್ರದೇಶ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಅವರುರವರೆಗೆ ಆ ಸ್ಥಾನದಲ್ಲಿ ಸೇವೆ ಸಲ್ಲಿಸಿದರು [೩].
ದತ್ತಾತ್ರೇಯ ಅವರು ೧೯೯೧ ರಲ್ಲಿ ಸಿಕಂದರಾಬಾದ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. [೨] ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಟಿ. ಮನೆಮ್ಮ ಅಂಜಯ್ಯ ಅವರನ್ನು ೮೫,೦೬೩ ಮತಗಳ ಅಂತರದಿಂದ ಸೋಲಿಸಿದರು[೫]. ಇವರು ಆಂಧ್ರಪ್ರದೇಶದಿಂದ ಗೆದ್ದ ಏಕೈಕ ಬಿಜೆಪಿ ಅಭ್ಯರ್ಥಿ. [೬] ೧೯೯೭ ರಲ್ಲಿ ಅವರು ಪಕ್ಷದ ಆಂಧ್ರ ಪ್ರದೇಶ ಘಟಕದ ಅಧ್ಯಕ್ಷರಾದರು. [೨]
೧೯೯೬ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪಿವಿ ರಾಜೇಶ್ವರ ರಾವ್ ಅವರು ದತ್ತಾತ್ರೇಯ ಅವರನ್ನು ಸೋಲಿಸಿದರು. ಆದಾಗ್ಯೂ, ಎರಡು ವರ್ಷಗಳ ನಂತರ, ಅವರು ರಾವ್ ಅವರನ್ನು ೧,೮೫,೯೧೦ ಮತಗಳ ಅಂತರದಿಂದ ಸೋಲಿಸಿದರು ಮತ್ತು ಸಿಕಂದರಾಬಾದ್ ಕ್ಷೇತ್ರದಿಂದ ಲೋಕಸಭೆಗೆ ಮರು ಆಯ್ಕೆಯಾದರು. ಅವರ ಪ್ರಯತ್ನದಿಂದ ರಾಜ್ಯದಲ್ಲಿ ಪಕ್ಷವು ನಾಲ್ಕು ಕ್ಷೇತ್ರಗಳನ್ನು ಗೆದ್ದಿದೆ ಎಂದು Rediff.com ಬರೆದಿದೆ. [೬] ಅವರು ೧೯೯೮ ರಿಂದ ೧೯೯೯ ರವರೆಗೆ ಎರಡನೇ ವಾಜಪೇಯಿ ಸಚಿವಾಲಯದಲ್ಲಿ ನಗರಾಭಿವೃದ್ಧಿಗಾಗಿ ಕೇಂದ್ರ ರಾಜ್ಯ ಸಚಿವರಾಗಿ (ಮಿನಿಸ್ಟರ್ ಅಫ಼್ ಸ್ಟೇಟ್) ಸೇವೆ ಸಲ್ಲಿಸಿದರು [೭]
೧೯೯೯ ರಲ್ಲಿ ದತ್ತಾತ್ರೇಯ ಮೂರನೇ ಬಾರಿಗೆ ಲೋಕಸಭೆಗೆ ಆಯ್ಕೆಯಾದರು. ೧೯೯೯ ಮತ್ತು ೨೦೦೧ ರ ನಡುವೆ, ಅವರು ಮತ್ತೆ ಮೂರನೇ ವಾಜಪೇಯಿ ಮಂತ್ರಿಮಂಡಲದಲ್ಲಿ ನಗರಾಭಿವೃದ್ಧಿಗಾಗಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದರು. ೨೦೦೧ ರಿಂದ ೨೦೦೩ ರವರೆಗೆ, ಅವರು ರೈಲ್ವೇಯ ಯೂನಿಯನ್ ಮಿನಿಸ್ಟರ್ ಅಫ಼್ ಸ್ಟೇಟ್ ಆಗಿ ಸೇವೆ ಸಲ್ಲಿಸಿದರು. ೨೦೦೩ ರಲ್ಲಿ, ಅವರಿಗೆ ಮತ್ತೆ ನಗರಾಭಿವೃದ್ಧಿ ಖಾತೆಯನ್ನು ನೀಡಲಾಯಿತು. [೨]
೨೦೦೪ ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ದತ್ತಾತ್ರೇಯ ಸೋತರು. ಅದೇ ವರ್ಷದಲ್ಲಿ, ಅವರು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾದರು, ಅವರು ೨೦೦೬ ರವರೆಗೆ ಈ ಹುದ್ದೆಯನ್ನು ನಿರ್ವಹಿಸಿದರು[೧] ೨೦೦೬ರಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕಗೊಂಡರು. ಮೂರು ವರ್ಷಗಳ ನಂತರ ಅವರು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದರು. [೨] ೨೦೦೯ ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ, ಅವರು ತಮ್ಮ ಕ್ಷೇತ್ರವನ್ನು ಎರಡನೇ ಬಾರಿಗೆ ಕಳೆದುಕೊಂಡರು. [೮] ಅವರು ೨೦೧೩ ರಲ್ಲಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕಗೊಂಡರು [೧]
ಮೇ ೨೦೧೪ ರಲ್ಲಿ, ದತ್ತಾತ್ರೇಯ ಅವರು ಸಿಕಂದರಾಬಾದ್ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಲೋಕಸಭೆಗೆ ಮರು ಆಯ್ಕೆಯಾದರು. [೪] ನವೆಂಬರ್ ೯ ರಂದು, ಅವರನ್ನು ಕಾರ್ಮಿಕ ಮತ್ತು ಉದ್ಯೋಗ ಮಿನಿಸ್ಟರ್ ಅಫ಼್ ಸ್ಟೇಟ್ ಅಗಿ ಮಾಡಲಾಯಿತು. [೯] [೧೦] ತೆಲಂಗಾಣ ರಾಜ್ಯದಿಂದ ಮೋದಿ ಸಚಿವ ಸಂಪುಟದಲ್ಲಿ ಏಕೈಕ ಸಚಿವರಾದರು. [೯] ೧ ಸೆಪ್ಟೆಂಬರ್ ೨೦೧೭ ರಂದು ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. [೧೧] ತರುವಾಯ, ಅವರನ್ನು ಹಣಕಾಸು ಸ್ಥಾಯಿ ಸಮಿತಿಯ ಸದಸ್ಯರನ್ನಾಗಿ ಮಾಡಲಾಯಿತು. [೧]
೨೧ ಮಾರ್ಚ್ ೨೦೧೯ ರಂದು, ಮುಂಬರುವ ಲೋಕಸಭೆ ಚುನಾವಣೆಗೆ ಸಿಕಂದರಾಬಾದ್‌ನಿಂದ ಬಿಜೆಪಿಯು ದತ್ತಾತ್ರೇಯ ಅವರ ಬದಲಿಗೆ ಮಾಜಿ ಶಾಸಕ ಜಿ. ಕಿಶನ್ ರೆಡ್ಡಿ ಅವರನ್ನು ಅಭ್ಯರ್ಥಿಯನ್ನಾಗಿ ನೇಮಿಸಿತು. ದತ್ತಾತ್ರೇಯ ೨೦೧೯ ರಲ್ಲಿ ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ನೇಮಕಗೊಂಡರು [೧೨] [೧೩]
೧೮ ಜುಲೈ ೨೦೨೧ ರಂದು, ದತ್ತಾತ್ರೇಯ ಅವರನ್ನು ಹರಿಯಾಣದ ೧೮ ನೇ ರಾಜ್ಯಪಾಲರನ್ನಾಗಿ ನೇಮಿಸಲಾಯಿತು. [೧೪]
ವೈಯಕ್ತಿಕ ಜೀವನ
[ಬದಲಾಯಿಸಿ]೧೭ ಮೇ ೧೯೮೯ ರಂದು ದತ್ತಾತ್ರೇಯ ವಸಂತ ಅವರನ್ನು ವಿವಾಹವಾದರು [೩] ನವೆಂಬರ್ ೨೦೧೬ ರಲ್ಲಿ , ಅವರ ಪುತ್ರಿ ವಿಜಯ ಲಕ್ಷ್ಮಿ ಚೇವೆಲ್ಲಾ ಲೋಕಸಭಾ ಕ್ಷೇತ್ರದ ಜನಾರ್ದನ್ ರೆಡ್ಡಿಯವರ ಮಗ ಜಿಗ್ನೇಶ್ ರೆಡ್ಡಿ ಅವರು ಅವರನ್ನು ಅವರನ್ನು ವಿವಾಹವಾದರು. [೧೫] ೨೪ ಮೇ ೨೦೧೮ ರಂದು, ಅವರ ಮಗ ವೈಷ್ಣವ್ ೨೧ ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು [೧೬]
ದತ್ತಾತ್ರೇಯ ಅವರು ಎಪಿ ಸೈಕ್ಲೋನ್ ಸಮಿತಿಯ ಜಂಟಿ ಕಾರ್ಯದರ್ಶಿ ಮತ್ತು ಭಾರತದ ಸ್ವಯಂಸೇವಾ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. [೩]
ಚಿತ್ರ
[ಬದಲಾಯಿಸಿ]ದಿ ಹಿಂದೂ ಪ್ರಕಾರ, "ದತ್ತಾತ್ರೇಯರನ್ನು ತೆಲಂಗಾಣದಲ್ಲಿ ಅತ್ಯಂತ ವಿವಾದಾತ್ಮಕವಲ್ಲದ ಮತ್ತು ಸ್ವೀಕಾರಾರ್ಹ ಬಿಜೆಪಿ ನಾಯಕರಾಗಿ ನೋಡಲಾಗುತ್ತದೆ". [೧೭] ಬ್ಯುಸಿನೆಸ್ ಸ್ಟಾಂಡರ್ಡ್ ಅವರು ಸರಳ, ಮೃದುಭಾಷಿ ಮತ್ತು ಕೆಳಮಟ್ಟದ ಸ್ವಭಾವವನ್ನು ಹೊಂದಿದ್ದಾರೆ ಎಂದು ಬರೆದಿದ್ದಾರೆ. [೨]
ಕಾನೂನು ಸಮಸ್ಯೆಗಳು
[ಬದಲಾಯಿಸಿ]ಜನವರಿ ೨೦೧೬ ರಲ್ಲಿ, ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪವನ್ನು ದತ್ತಾತ್ರೇಯ ಮೇಲೆ ಹೊರಿಸಲಾಗಿತ್ತು. ವಿಶ್ವವಿದ್ಯಾನಿಲಯದ ಹಾಸ್ಟೆಲ್‌ನಿಂದ ಇತರ ನಾಲ್ವರು ವಿದ್ಯಾರ್ಥಿಗಳೊಂದಿಗೆ ವೇಮುಲಾ ಅವರನ್ನು ಅಮಾನತುಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ಆರೋಪದ ನಂತರ, ಅವರನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ದಾಖಲಿಸಲಾಗಿದೆ. [೧೮]. ಅದರ ಹಿಂದಿನ ವರ್ಷದ ಆಗಸ್ಟ್‌ನಲ್ಲಿ ಅವರು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರಿಗೆ ಪತ್ರ ಬರೆದು ವಿಶ್ವವಿದ್ಯಾನಿಲಯವು "ಜಾತಿವಾದಿ, ಉಗ್ರಗಾಮಿ ಮತ್ತು ರಾಷ್ಟ್ರ ವಿರೋಧಿ ರಾಜಕೀಯದ ಗೂಡಾಗಿ ಮಾರ್ಪಟ್ಟಿದೆ" ಎಂದು ಆರೊಪಿಸಿದ್ದರು. [೧೯] ದತ್ತಾತ್ರೇಯ ಅವರು ಯಾವುದೇ ತಮ್ಮ ಸಮರ್ಥೆನೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಿಂದ ಬಂದ ಪತ್ರವನ್ನು ಸ್ಮ್ರಿತಿ ಇರಾನಿ ಅವರಿಗೆ ಅವರಿಗೆ ತಮ್ಮ ಅಧಿಕೃತ ಲೆಟರ್‌ಹೆಡ್‌ನೊಂದಿಗೆ ಕಳುಹಿಸಿದ್ದೇನೆ ಎಂದು ಹೇಳಿದ್ದಾರೆ. [೨೦] ವಿಶ್ವವಿದ್ಯಾನಿಲಯದ ಇತರ ವಿದ್ಯಾರ್ಥಿಗಳು ಅವರ ಈ ಪತ್ರವು " ದಲಿತ ವಿದ್ಯಾರ್ಥಿಗಳನ್ನ ನೊಡುವ ತಾರತಮ್ಯದ ಒಂದು ಪ್ರತೀಕವಾಗಿದೆ" ಎಂದು ಆರೋಪಿದಿಸಿದರು. [೧೯]
ಬಾಹ್ಯ ಕೊಂಡಿಗಳು
[ಬದಲಾಯಿಸಿ]ಲೋಕಸಭೆ | ||
---|---|---|
ಪೂರ್ವಾಧಿಕಾರಿ T Maniamma |
Member of Parliament for Secunderabad 1991 – 1996 |
ಉತ್ತರಾಧಿಕಾರಿ P.V. Rajeshwar Rao |
ಪೂರ್ವಾಧಿಕಾರಿ P.V. Rajeshwar Rao |
Member of Parliament for Secunderabad 1998 – 2004 |
ಉತ್ತರಾಧಿಕಾರಿ Anjan Kumar Yadav |
ಪೂರ್ವಾಧಿಕಾರಿ Anjan Kumar Yadav |
Member of Parliament for Secunderabad 2014 – 2019 |
ಉತ್ತರಾಧಿಕಾರಿ G. Kishan Reddy |
Political offices | ||
ಪೂರ್ವಾಧಿಕಾರಿ Narendra Singh Tomar |
Minister of Labour and Employment 9 November 2014 – 1 September 2017 Minister of State (Independent Charge) |
ಉತ್ತರಾಧಿಕಾರಿ Santosh Gangwar Minister of State (Independent Charge) |
ಪೂರ್ವಾಧಿಕಾರಿ Kalraj Mishra |
Governor of Himachal Pradesh 11 September 2019 – 8 July 2021 |
ಉತ್ತರಾಧಿಕಾರಿ Rajendra Arlekar |
ಪೂರ್ವಾಧಿಕಾರಿ Satyadev Narayan Arya |
Governor of Haryana 7 July 2021 – Present |
Incumbent |
- ↑ ೧.೦ ೧.೧ ೧.೨ ೧.೩ "Dattatreya, Shri Bandarayu". Lok Sabha. Retrieved 9 March 2019.
- ↑ ೨.೦ ೨.೧ ೨.೨ ೨.೩ ೨.೪ ೨.೫ ೨.೬ "Bandaru Dattatreya – a simple leader from backward class (Profile)". Business Standard. 9 November 2014. Retrieved 9 March 2019.
- ↑ ೩.೦ ೩.೧ ೩.೨ ೩.೩ "Union Cabinet expansion: Dattatreya joins team Modi". Sakshi. 9 November 2014. Retrieved 9 March 2019.
- ↑ ೪.೦ ೪.೧ ೪.೨ "Bandaru Dattatreya's political career, profile". The Hans India. 10 November 2014. Retrieved 9 March 2019.
- ↑ "Secunderabad Lok Sabha Elections and Results 2014". Elections. Retrieved 9 March 2019.
- ↑ ೬.೦ ೬.೧ "The man behind AP's saffron success". Rediff.com. 19 May 1998. Retrieved 9 March 2019.
- ↑ "Bandaru Dattatreya – Lone Telangana face in Modi Ministry". News18. 9 November 2014. Retrieved 9 March 2019.
- ↑ "BJP MP Bandaru Dattatreya to get berth in Union Cabinet". The Economic Times. 8 November 2014. Retrieved 9 March 2019.
- ↑ ೯.೦ ೯.೧ "Bandaru Dattatreya: Lone Telangana face in Modi Cabinet". The Indian Express. 9 November 2014. Retrieved 9 March 2019.
- ↑ "Labour reforms for the unorganised sector a priority: Minister". The Hindu Business Line. 27 December 2014. Retrieved 9 March 2019.
- ↑ "Cabinet reshuffle: Now, Bandaru Dattatreya resigns as Labour Minister", Financial Express, 1 September 2017, retrieved 9 March 2019
- ↑ "In BJP List, Ex-Legislator Replaces Four-Time Lawmaker In Secunderabad". NDTV. 22 March 2019. Retrieved 25 March 2019.
- ↑ ANI (September 11, 2019). "BJP leader Bandaru Dattatreya takes oath as 27th Governor of Himachal Pradesh; predecessor Kalraj Mishra takes charge as Rajasthan governor". Firstpost. Retrieved 12 September 2019.
- ↑ "Bandaru Dattatreya sworn in as 18th governor of Haryana". The Indian Express (in ಇಂಗ್ಲಿಷ್). 15 July 2021. Retrieved 10 March 2022.
- ↑ "Bandaru Dattatreya's daughter Vijaya Laxmi ties the knot". The Siasat Daily. 26 November 2016. Retrieved 9 March 2019.
- ↑ Mahesh, Koride (21 May 2018). "BJP MP Bandaru Dattatreya's son Vaishnav, 21, dies of heart attack". The Times of India. Archived from the original on 24 May 2018. Retrieved 9 March 2019.
- ↑ Reddy, Ravi (2 September 2017). "Bandaru Dattatreya's resignation shocks BJP". The Hindu. Retrieved 10 March 2019.
- ↑ "Union min Dattatreya charged for Dalit scholar suicide, probe ordered". Hindustan Times. 19 January 2016. Retrieved 10 March 2019.
- ↑ ೧೯.೦ ೧೯.೧ Sudhir, Uma (18 January 2016). "Suicide Of Student After 'Social Boycott' Sparks Anger in Hyderabad University". NDTV. Retrieved 10 March 2019.
- ↑ Janyala, Sreenivas (20 January 2016). "Behind Rohit Vemula's suicide: how Hyderabad Central University showed him the door". The Indian Express. Retrieved 10 March 2019.