ವಿಷಯಕ್ಕೆ ಹೋಗು

ಭಾರತದಲ್ಲಿ ತುರ್ತು ಪರಿಸ್ಥಿತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೆಲ ಪರಿಸ್ಥಿತಿಗಳಲ್ಲಿ ಒಂದು ದೇಶದ ಸರ್ಕಾರವು ತನ್ನ ಕೆಲವು ನಿಯಮಿತ ಕಾರ್ಯಗಳನ್ನು ಸ್ಥಗಿತಗೊಳಿಸಿ ಪ್ರಜೆಗಳ ವ್ಯವಹಾರಗಳ ಮೇಲೆ ಕೆಲವು ನಿಯಮಗಳನ್ನು ಅಥವ ನಿಯಂತ್ರಣಗಳನ್ನು ತರಬಹುದು. ಇಂತಃ ಪರಿಸ್ಥಿತಿಗಳಿಗೆ ತುರ್ತು ಪರಿಸ್ಥಿತಿ ಎಂದು ಹೆಸರು. ಈ ಘೋಷಣೆಯು ನೈಸರ್ಗಿಕ ವಿಕೋಪಗಳಿಗಿರಬಹುದು, ಯುದ್ಧಕಾಲ ಅಥವ ಪರದೇಶದ ಆಕ್ರಮಣದಿಂದಿರಬಹುದು ಅಥವ ಸಾರ್ವಜನಿಕ ಅಶಾಂತಿಯ ಪರಿಸ್ಥಿತಿಗಾಗಿರಬಹುದು. 'ಭಾರತದಲ್ಲಿ ತುರ್ತು ಪರಿಸ್ಥಿತಿ' ಭಾರತದಲ್ಲಿ ತುರ್ತು ಪರಿಸ್ಥಿತಿಯು ಜೂನ್ -೨೫-೧೯೭೫ ರಿಂದ ಮಾರ್ಚ್-೨೧-೧೯೭೭ ರವರೆಗೆ ಜಾರಿಯಲ್ಲಿತ್ತು.ಆ ಸಮಯದಲ್ಲಿ 'ಫಕ್ರುದೀನ್ ಅಲಿ ಅಹ್ಮದ್'ಭಾರತದ ರಾಷ್ಟ್ರಪತಿಯಾಗಿದ್ದರು ಮತ್ತು ಶ್ರೀಮತಿ ಇಂದಿರಾಗಾಂಧಿ ಯವರು ಪ್ರದಾನಮಂತ್ರಿಯಾಗಿದ್ದರು. ಭಾರತದಲ್ಲಿ ೧೯೭೫-೧೯೭೭ ರಲ್ಲಿ ಶ್ರೀಮತಿ ಇಂದಿರಾಗಾಂಧಿ ಯವರು ಪ್ರಧಾನಮಂತ್ರಿ ಯಾಗಿದ್ದಾಗ ಅಧಿಕ್ರುತವಾಗಿ ದೇಶಾದ್ಯಂತ ರಾಜ್ಯ ತುರ್ತು ಪರಿಸ್ಥಿತಿಯನ್ನು ಜಾರಿಗೆ ತಂದರು.ಈ 'ತುರ್ತುಪರಿಸ್ಥಿತಿ'ಯು ೨೧ ತಿಂಗಳುಗಳ ಕಾಲ ಮುಂದುವರೆಯಿತು. ಸಮಾಜವಾದಿ ಪಕ್ಷದ ನಾಯಕ ಜಯಪ್ರಕಾಶ ನಾರಾಯಣ ಅವರು ಪ್ರಚಾರದ ದೊಡ್ಡ ರ್ಯಾಲಿಯಲ್ಲಿ ಇಂದಿರಾ ಗಾಂಧಿಯವರ ಆಡಳಿತದ ವಿರುದ್ಧ ಪೋಲಿಸ್‍ನವರಿಗೂ ಸೈನ್ಯಕ್ಕೂ ಸರ್ಕಾರದ ಆಜ್ಞೆಯನ್ನು ಪಾಲಿಸಬಾರದೆಂದೂ, ಸರ್ಕಾರದ ವಿರುದ್ಧ ದಂಗೆ ಏಳಬೇಕೆಂದೂ ಕರೆ ಇತ್ತರು. ಜನಪ್ರಿಯ ಜಯಪ್ರಕಾಶ ನಾರಾಯನರ ಕರೆ ಬಗೆಗೆ ಪ್ರಧಾನಿಗೆ ಆತಂಕಕ್ಕೆ ಕಾರಣವಾಯಿತು. ಆಗಿನ ರಾಷ್ಟ್ರಪತಿಯಾಗಿದ್ದ ಫಕ್ರುದ್ದೀನ್ ಅಲಿ ಯವರು ಸಂವಿಧಾನದ ೩೫೨(೧)ನೇ ವಿಧಿಯ ಪ್ರಕಾರ'ಆಂತರಿಕ ಕಠಿನ ಪರಿಸ್ಥಿತಿ ಕಾರಣ ನೀಡಿ ಇದಕ್ಕೆ ಅಧಿಕೃತವಾಗಿ ಒಪ್ಪಿಗೆ ನೀಡಿದರು. ಇದರ ಪರಿಣಾಮವಾಗಿ ತುರ್ತುಪರಿಸ್ಥಿತಿಯು ಜೂನ್-೨೫-೧೯೭೫ ರಿಂದ ಜಾರಿಯಾಯಿತು ಮತ್ತು ಮಾರ್ಚ್-೨೧-೧೯೭೭ ರಲ್ಲಿ ಇದನ್ನು ಹಿಂಪಡೆಯಲಾಯಿತು. []ಪ್ರಧಾನಮಂತ್ರಿ ಯವರಿಂದ ಜಾರಿಯಾದ ಈ ತುರ್ತುಪರಿಸ್ಥಿತಿಯು ಅವರ ಸರ್ವಾಧಿಕಾರಿ ಆಡಳಿತವನ್ನು ಸೂಚಿಸಿತು.ಆ ಸಮಯದಲ್ಲಿ ಚುನಾವಣೆಗಳಿಗೆ ಬಹಿಷ್ಕಾರ ಹಾಕಿ, ನಾಗರೀಕ ಹಕ್ಕುಗಳನ್ನು ನಿಷೇದಿಸಲಾಯಿತು.ಹಾಗೂ ಇದಕ್ಕೆ ಪ್ರತಿರೋದ ಒಡ್ಡಿದ ಹೆಚ್ಚಿನ ಗಾಂಧಿವಾಧಿಗಳು ಜೈಲು ಶಿಕ್ಷೆ ಅನುಭವಿಸಬೇಕಾಯಿತು ಮತ್ತು ಇದನ್ನು ಪ್ರಶ್ನಿಸಿದ ಮಾಧ್ಯಮದ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು.ಜೊತೆಗೆ ಇಂದಿರಾರವರ ಮಗ ಸಂಜಯ್ ಗಾಂಧಿಯವರಿಂದ ಸಾಮೂಹಿಕ ಸಂತಾನಹರಣ ಶಸ್ತ್ರಚಿಕಿತ್ಸೆ ಸೇರಿದಂತೆ ಅನೇಕ ದೌರ್ಜನ್ಯಗಳು ವರದಿಯಾದವು.ಈ ಮೂಲಕ ಸ್ವತಂತ್ರ್ಯಭಾರತದ ಇತಿಹಾಸದಲ್ಲಿ ತುರ್ತುಪರಿಸ್ಥಿತಿಯು ವಿವಾದಾತ್ಮಕ ಕಾಲವಾಗಿತ್ತು.

ಮುನ್ನುಡಿ

[ಬದಲಾಯಿಸಿ]

೧೯೬೭-೧೯೭೧ ರ ನಡುವೆ ಭಾರತದಲ್ಲಿ ಪ್ರಧಾನಮಂತ್ರಿ ಇಂದಿರಾಗಾಂಧಿ ಯವರು ಸಂಸತ್ತಿನ ಮೇಲೆ ಮತ್ತು ಸರ್ಕಾರದ ಮೇಲೆ,ರಾಷ್ಟೀಯ ಕಾಂಗ್ರೆಸ್ ನ ಮೇಲೆ ಸಂಪೂರ್ಣ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು.ಈ ಸಮಯದಲ್ಲಿ ಕೇಂದ್ರ ಸರ್ಕಾರದ ಆಡಳಿತ ಶಕ್ತಿಯನ್ನೆಲ್ಲಾ ಕ್ಯಾಬಿನೆಟ್ ನ ಬದಲಾಗಿ ತಮ್ಮಲ್ಲೇ ಕೇಂದ್ರೀಕರಿಸಿಕೊಳ್ಳುತ್ತಾ ಹೋದರು.ಇವರ ಸರ್ಕಾರದಲ್ಲಿ'ಕಾಶ್ಮೀರಿ ಪಂಡಿತ'ರಾದ ಪಿ.ಎನ್.ಹಕ್ಸರ್ ರವರು ಇವರ ಸಲಹೆಗಾರರಾಗಿ ಮುಖ್ಯಪಾತ್ರ ವಹಿಸಿದರು.ಇದಲ್ಲದೇ ಹಕ್ಸರ್'ಕಮಿಟೆಡ್ ಬ್ಯುರೋಕ್ರಸಿ' ಯನ್ನು ಜಾರಿಗೆ ತಂದು ಎಲ್ಲಾ ಸರ್ಕಾರಿ ಅಧಿಕಾರಿಗಳು ಇದಕ್ಕೆ ಬದ್ದರಾಗಿರಬೇಕೆಂದು ಆದೇಶಿಸಿದರು.

೧೯೬೯ ರ ನಂತರ ಇಂದಿರಾ ಕಾಂಗ್ರೆಸ್ ನೊಳಗೆ ನಿರ್ದಯವಾಗಿ ನಡೆದುಕೊಳ್ಳುತ್ತಾ,ತಮ್ಮ ಪ್ರತಿಸ್ಪರ್ಧಿಗಳಾದ ಕಾಂಗ್ರೆಸ್(೦){ಸಿಂಡಿಕೇಟ್} ಸದಸ್ಯರನ್ನು ಎದುರಿಸಿದರು.ಇಂದಿರಾ ಕಾಂಗ್ರೆಸ್ (ಆರ್)ಗೆ,ಎಲ್ಲಾ ಕಾಂಗ್ರೆಸ್ ನ ಎಂಪಿ ಗಳು ಮತ್ತು ರಾಷ್ಟೀಯ ಕಾಂಗ್ರೆಸ್ ನ ಪ್ರಮುಖ ಸದಸ್ಯರುಗಳು ಬೆಂಬಲ ನೀಡಿದರು.ಈಗ ಇಂದಿರಾ ರವರ ಕಾಂಗ್ರೆಸ್ ಪಕ್ಷ,ಹಳೆಯ ಪಕ್ಷಕ್ಕಿಂತ ವಿಭಿನ್ನವಾಗಿ, ರಾಷ್ಟ್ರೀಯ ಪ್ರಜಾಪ್ರಭುತ್ವಕ್ಕೆ ಬದಲಾಗಿ ಆಂತರಿಕ ಪ್ರಜಾಪ್ರಭುತ್ವಕ್ಕೆ ಬೆಲೆ ಕೊಟ್ಟತು.ಮತ್ತೊಂದೆಡೆ ಕಾಂಗ್ರೆಸ್(ಆರ್) ನಲ್ಲಿನ ಸದಸ್ಯರು ಸಹ ಈ ಪಕ್ಷದಲ್ಲಿ ತಮ್ಮ ಬೆಳವಣಿಗೆ ಇಂದಿರಾರಿಗೆ ಮತ್ತು ಅವರ ಕುಟುಂಬದವರಿಗೆ ನಿಷ್ಟಾವಂತರಾಗಿದ್ದರೆ ಮಾತ್ರ ಎಂಬುದನ್ನು ಅರಿತರು.ಇಲ್ಲವಾದರೆ ಅಲ್ಲಿ ತಮಗೆ ಉಳಿಗಾಲವಿಲ್ಲ ಎಂಬುದನ್ನು ಅರಿತರು.ಮುಂದಿನ ವರ್ಷಗಳಲ್ಲಿ ಇಂದಿರ ಪ್ರಭಾವದಿಂದ ಕೆಲವರನ್ನು ಮಾತ್ರ ರಾಜ್ಯಗಳ ಮುಖ್ಯಮಂತ್ರಿಗಳನ್ನಾಗಿ ನೇಮಕ ಮಾಡಲಾಯಿತು.

ಇಷ್ಟೆಲ್ಲಾ ಆದರು ಇಂದಿರಾಗಾಂಧಿಯವರ ಜನಪ್ರಿಯತೆ ಸಾರ್ವಜನಿಕವಾಗಿ ಹೆಚ್ಚುತ್ತಾ ಹೋಯಿತು.ರಾಜಕೀಯದಲ್ಲಿ ನಿಪುಣರಾದರು.ಜನವರಿ ೧೯೬೯ ರಲ್ಲಿ ಹಲವಾರು ಪ್ರಮುಖ ಬ್ಯಾಂಕುಗಳನ್ನು ರಾಷ್ಟೀಕರಣ ಮಾಡಿದರು.ಕಾರಣಾಂತರ ಗಳಿಂದ ೧೯೭೦ ರಲ್ಲಿ ಕೆಲವನ್ನು ಹಿಂಪೆಡೆಯಲಾಯಿತು.ಬ್ಯಾಂಕುಗಳ ರಾಷ್ಟೀಕರಣ ಅವರ ವಿರೋಧಿಗಳಿಗೆ ನುಂಗಲಾರದ ತುತ್ತಾಯಿತು.ಸಿಂಡಿಕೇಟ್ ಸದಸ್ಯರೇ ಅಲ್ಲದೇ,ಇತರರಿಗು ಇಂದಿರಾ'ಜಾತ್ಯಾತೀತತೆ,ಧರ್ಮ,ಆರ್ಥಿಕತೆ,ಸಮಾಜವಾದ ಮತ್ತು ಇಲ್ಲದವರ ಪರವಾಗಿ ನಿಂತಂತೆ ಕಂಡರು.ದೇಶದ ಅಭಿವ್ರುದ್ದಿಗೆ,ಅಂದರೆ ಇವರು ಸಮಾಜದಲ್ಲಿ ಹಿಂದುಳಿದ, ಬಡವರ,ದಲಿತರ,ಮಹಿಳೆಯರ'ಪರವಾಗಿ ನಿಂತಂತೆ ಕಂಡರು.ಅವರ ಪಾಲಿಗೆ 'ಮದರ್ ಇಂಡಿಯಾ' ಅಂದರೆ'ಇಂದಿರಾ ಅಮ್ಮ'ನಾಗಿ ಕಂಡರು.

೧೯೭೧ ರಲ್ಲಿ ಸಾರ್ವತ್ರಿಕ ಚುನಾವಣೆಗಳು ಘೋಷಣೆಯಾದಾಗ,ಜನರು ಇಂದಿರಾರವರ ಪ್ರಸಿದ್ದ ಘೊಷಣೆ'ಗರೀಬಿ ಹಟಾವೋ'ಎಂದು ಕೂಗುತ್ತ ರಾಲಿಗಳನ್ನು ಮಾಡತೊಡಗಿದರು.ಇವರ ಜನಪ್ರಿಯತೆಯನ್ನು ಕಂಡ ಇತಿಹಾಸಕಾರ'ರಾಮಚಂದ್ರ ಗುಹ'ಈ ರೀತಿ ಬರೆದಿದ್ದಾರೆ.'ಈ ಕಾಂಗ್ರೆಸ್ ಗೆ ಬೇರೆ ಯಾವುದೇ ಪಕ್ಷಗಳಂತೆ ಯಾವುದೇ ರೀತಿಯ ವಿಶೇಷಣ ಗಳ ಅಗತ್ಯವಿಲ್ಲ'.ಈ ಸಮಯದಲ್ಲೇ ಇಂದಿರಾರವರು ಪಾಕಿಸ್ತಾನದ ವಿರುದ್ದ ಬಾಂಗ್ಲಾದೇಶಕ್ಕೆ ಸಹಾಯ ಮಾಡಿ ಅದು ಸ್ವತಂತ್ರ್ಯವಾಗಲು ಸಹಾಯ ಮಾಡಿದರು.ಮತ್ತೆ 'ಭಾರತ ರತ್ನ' ಪಡೆದು ಜನಪ್ರಿಯತೆಯ ಉತ್ತುಂಗದಲ್ಲಿದ್ದ ಇಂದಿರಾರವರನ್ನು 'ಇಂದರ್ ಮಲೋತ್ರ'-'ಇಂಪ್ರೆಸ್ ಆಫ್ ಇಂಡಿಯಾ'ಎಂದು ಕರೆದರೆ,ಅವರ ವಿರೋಧಿಗಳು ಸಹ ಅವರನ್ನು ಹಿಂದೂ ದೇವತೆ 'ದುರ್ಗೆ'ಗೆ ಹೋಲಿಸಿದ್ದಾರೆ.

ಕಾರ್ಯಾಂಗದಿಂದ ನ್ಯಾಯಾಂಗದ ನಿಯಂತ್ರಣ

[ಬದಲಾಯಿಸಿ]

'ಗೋಲಖ್ ನಾತ್' ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರಿಂಕೋರ್ಟ್'ಸಂವಿಧಾನದ ತಿದ್ದುಪಡಿಗೆ ಸಂಬಂಧಿಸಿದಂತೆ ಸಂಸತ್ ಗೆ ಯಾವುದೇ ರೀತಿಯ ಅಧಿಕಾರವಿಲ್ಲ,ಒಂದು ವೇಳೆ ಮಾಡಿದರೆ ಮೂಲಭೂತ ಹಕ್ಕುಗಳ ಉಲ್ಲಂಘನೆ ಮಾಡಿದಂತಾಗುತ್ತದೆ'ಎಂದು ಆದೇಶ ನೀಡಿತು .ಇದರ ವಿರುದ್ದವಾಗಿ ೧೯೭೧ ರಲ್ಲಿ ಇಂದಿರಾ ಸರ್ಕಾರ ಅಧಿಕಾರಯುತವಾಗಿ ಸಂವಿಧಾನದ ೨೪ ನೇ ವಿಧಿಯನ್ನು ತಿದ್ದುಪಡಿ ಮಾಡಿತು.ಇದರ ಪ್ರಕಾರ'ಸರ್ಕಾರ ರಾಜರ ಸ್ವಂತ ವೆಚ್ಚಕ್ಕೆ ತನ್ನ ಬೊಕ್ಕಸದಿಂದ ಹಣ ಕೊಡುವುದು'ಇದನ್ನು ತಿದ್ದುಪಡಿ ಮಾಡಿ ಸಂಸತ್ ೨೬ ನೇ ವಿಧಿಯನ್ನು ಜಾರಿಗೆ ತಂದಿತು.ಈ ವಿಧಿಯ ಮೂಲಕ ಸಂವಿಧಾನವು ತನ್ನದೇ ಆದ ಬೆಲೆ ಪಡೆದುಕೊಂಡಿತು ಮತ್ತು ಸರ್ಕಾರ'ರಾಜ ಧನ' ಪದ್ದತಿಯನ್ನು ರದ್ದು ಮಾಡಿತು.

ಈ ನ್ಯಾಯ ನಿಯಂತ್ರಣವು ೨೪ ನೇ ವಿಧಿ ಯ ಪ್ರಕಾರ'ಕೇಶವಾನಂದ ಭಾರತಿ'ಯ ಪ್ರಕರಣ ವನ್ನು ಪ್ರಶ್ನಿಸಿತು.ಇದರಿಂದ ಸುಪ್ರಿಂಕೋರ್ಟ್ ನ ೬-೭ ಜನ ನ್ಯಾಯಾಧಿಶರ ಪೀಠವು ಈ ರೀತಿ ಹೇಳಿತು'ಸಂವಿಧಾನದ ಮೂಲವನ್ನು ತಿದ್ದುಪಡಿ ಮಾಡುವ ಅಧಿಕಾರವನ್ನು ಸಂಸತ್ತಿಗೆ ನೀಡಬಾರದು'.ಇದರಿಂದಾಗಿ ಇಂದಿರಾಗಾಂಧಿ ಈ ಪ್ರಕರಣಕ್ಕೆ ತೀರ್ಪು ನೀಡಲು ಮೊದಲೇ ಇದ್ದ ಜೆ.ಎಮ್.ಶೀಲತ್,ಗ್ರೋವರ್ ರವರ ಬದಲಾಗಿ ಎ.ಎನ್.ರಾಯ್ ರವರನ್ನು ಮುಖ್ಯ ನ್ಯಾಯಧೀಶರನ್ನಾಗಿ ನೇಮಕ ಮಾಡಿದರು.ಇಂದಿರಾರವರ ಈ ವರ್ತನೆ ಜೆ.ಪಿ.ಸೇರಿದಂತೆ ಹಲವರ ಟೀಕೆಗೆ ಒಳಗಾಯಿತು.

ರಾಜಕೀಯ ಅಶಾಂತಿ

[ಬದಲಾಯಿಸಿ]

೧೯೭೩-೧೯೭೫ ರ ನಡುವೆ ದೇಶಾದ್ಯಂತ ಇಂದಿರಾರವರ ವಿರುದ್ದ ಪ್ರತಿಭಟನೆಗಳು ನಡೆದು,ರಾಜಕೀಯ ಅಶಾಂತಿ ತಲೆದೋರಿತು.ಈ ಪ್ರತಿಭಟನೆಯ ಪ್ರಮುಖ ಘಟನೆ ಎಂದರೆ ಮಾರ್ಚ್ ೧೯೭೩-೭೪ ರಲ್ಲಿ ಗುಜರಾತಿನಲ್ಲಿ ನಡೆದ'ನವ ನಿರ್ಮಾಣ'ಚಳುವಳಿ.ಪ್ರಮುಖವಾಗಿ ವಿಧ್ಯಾರ್ಥಿಗಳು ಸಹ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೇಂದ್ರ ಶಿಕ್ಷಣ ಮಂತ್ರಿಯ ವಿರುದ್ದ ಪ್ರತಿಭಟನೆ ಮಾಡಿದರು.ಮುಖ್ಯವಾಗಿ ಮುಖ್ಯಮಂತ್ರಿಯಾದ'ಚಿಮನ್ ಭಾಯ್ ಪಟೇಲ್'ರ ವಿರುದ್ದ ಸಿಡಿದೆದ್ದು ರಾಜ್ಯದಲ್ಲಿ ರಾಷ್ಟಪತಿ ಆಳ್ವಿಕೆಗಾಗಿ ಅಗ್ರಹಿಸಿದರು.ಮುಂದೆ ೧೯೭೫-ಜೂನ್ ನಲ್ಲಿ ನಡೆದ ಮರುಚುನಾವಣೆಯಲ್ಲಿ ಗಾಂಧಿ ಪಾರ್ಟಿಯು, ಜನತಾ ಪಾರ್ಟಿಯಿಂದ ಸೋಲಲ್ಪಟ್ಟಿತು.

೧೯೭೪-ಮಾರ್ಚ್,ಏಪ್ರಿಲ್ ನಲ್ಲಿ'ಬಿಹಾರದ ಚತ್ರ ಸಂಘರ್ಷ ಸಮಿತಿಯ' ವಿಧ್ಯಾರ್ಥಿ ಸಂಘಟನೆಯು,ಗಾಂಧಿವಾದಿಯು,ಸಮಾಜವಾದಿಯು ಆದ 'ಜಯ ಪ್ರಕಾಶ್ ನಾರಯಣ್' ರ ಸಹಯೋಗದಲ್ಲಿ ಬಿಹಾರದ ಸರ್ಕಾರದ ವಿರುದ್ದ ಚಳುವಳಿ ಹೂಡಿದರು.ಇದನ್ನು ಜೆ.ಪಿ.ಚಳುವಳಿ ಎಂದೂ ಸಹ ಕರೆಯುತ್ತಾರೆ.೧೯೭೪ ರ ಏಪ್ರಿಲ್ ನಲ್ಲಿ ಜೆ.ಪಿ.ಯವರು ಪಾಟ್ನ ದಲ್ಲಿ,ದೇಶದಲ್ಲಿ ಶಾಂತಿಸ್ಥಾಪನೆಗಾಗಿ ಕರೆಕೊಟ್ಟು'ಟೋಟಲ್ ರೆವಲ್ಯುಶನ್' ಅನ್ನು ಪ್ರಾರಂಭಿಸಿದರು.ಇದಕ್ಕಾಗಿ ವಿಧ್ಯಾರ್ಥಿಗಳ,ಬಡ ಕಾರ್ಮಿಕರ,ಕಾರ್ಮಿಕ ಸಂಘಟನೆ ಗಳ ಸಹಾಯವನ್ನು ಕೋರಿದರು.ಒಂದು ತಿಂಗಳ ನಂತರ ದೇಶದ ಅತಿದೊಡ್ದ ಕಾರ್ಮಿಕ ಸಂಘಟನೆಯಾದ ರೈಲ್ವೆ ಕಾರ್ಮಿಕರ ಸಂಘಟನೆಯು ದೇಶಾದ್ಯಂತ ಮುಷ್ಕರಗಳನ್ನು ಹೂಡಿತು.ಏಕೆಂದರೆ ಸರ್ಕಾರ ಸಾವರಾರು ಕುಟುಂಬಗಳನ್ನು ವಸತಿನಿಲಯಗಳಿಂದ ಹೊರಗಟ್ಟಿತು.ಈ ಪ್ರತಿಭಟನೆಯು ಇಂದಿರಾಗಾಂಧಿ ಸರ್ಕಾರಕ್ಕೆ ಬಹುದೊಡ್ದ ಸಮಸ್ಯೆಯಾಯಿತು.ಇದಲ್ಲದೇ ಸಂಸತ್ತಿನ ಒಳಗು ಸಹ ಸರ್ಕಾರದ ವಿರುದ್ದ ಟೀಕೆಗಳು ಬಂದವು.ಇದರಿಂದ ಗಾಂಧಿ ಸರ್ಕಾರಕ್ಕೆ ಲೋಕಸಭೆ ಯಲ್ಲಿ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಾಯಿತು.

ರಾಜ್ ನಾರಾಯಣ್ ತೀರ್ಪು

[ಬದಲಾಯಿಸಿ]
  • ಲೋಕಸಭಾ ಚುನಾವಣೆಯಲ್ಲಿ ಇಂದಿರಾಗಾಂಧಿಯವರಿಂದ ಸೋತ ರಾಜ್ ನಾರಾಯಣ್ ರವರು,ಇಂದಿರಾ ರವರ ಚುನಾವಣ ಭ್ರಷ್ಟತೆಯನ್ನು ದಾಖಲುಮಾಡಿ ಆರೋಪ ಮಾಡಿದರು.ಅಂದರೆ ಇಂದಿರಾ ರವರು ಚುನಾವಣೆ ಸಮಯದಲ್ಲಿ ನಕಲು ಯಂತ್ರಗಳನ್ನು ಬಳಸಿದ್ದಾರೆ ಎಂದು ಅಲಹಾಬಾದ್ ಹೈಕೋರ್ಟ್ ನಲ್ಲಿ ಪ್ರಕರಣ ದಾಖಲು ಮಾಡಿದರು.ನಾರಾಯಣ್ ರ ಪರವಾಗಿ'ಶಾಂತಿ ಭೂಷಣ್' ರವರು ತೀರ್ಪು ನೀಡಿದಾಗ ಪ್ರಧಾನಿಯಾದ ಇಂದಿರ,ತೀರ್ಪಿನ ಪುನರ್ ಪರಿಶೀಲನೆಗಾಗಿ ಆದೇಶಿಸಿದರು.
  • ೧೯೭೫ ರ ಜೂನ್ ೧೨ ರಂದು ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರಾದ ಜಗಮೋಹನ್ ಸಿನ್ಹ ರವರು ಚುನಾವಣೆಯಲ್ಲಿ ಇಂದಿರಾರವರ ಭ್ರಷ್ಟಚಾರವನ್ನು ಸಾಬೀತುಪಡಿಸಿ ತೀರ್ಪು ನೀಡಿದರು.ಅದಲ್ಲದೇ ನ್ಯಾಯಾಲಯ ಅವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಮತ್ತು ಅದುವರೆಗು ಲೋಕಸಭೆ ಯಲ್ಲಿ ಯಾವುದೇ ರೀತಿಯ ಅಧಿಕಾರವನ್ನು ನೀಡಬಾರದೆಂದು ಆದೇಶ ನೀಡಿತು.ಅದೇ ರೀತಿ ೬ ವರ್ಷ ಗಳ ಕಾಲ,ಯಾವುದೇ ಕ್ಷೇತ್ರದಿಂದ ಚುನಾವಣೆ ಯಲ್ಲಿ ಭಾಗವಹಿಸುವಂತಿಲ್ಲ ಎಂದು ಹೇಳಿತು.ಈ ಪ್ರಕಾರ ಇಂದಿರಾರವರ ವಿರುದ್ದ ಪೋಲಿಸರಿಂದ ಪ್ರಕರಣ ದಾಖಲಾಯಿತು.ಚುನಾವಣೆ ಸಮಯದಲ್ಲಿದ್ದ ಅಧಿಕಾರಿ 'ಯಶ್ಪಾಲ್ ಕಪೂರ್'ವಿಧ್ಯುಚಕ್ತಿ ನಕಲು ಪ್ರಕರಣ ಒಪ್ಪಿಕೊಂಡು ರಾಜಿನಾಮೆ ನೀಡಿದರು.
ತೀರ್ಪಿನ ಸಾರಾಂಶ: ಫೆಡರಲ್ ಅಧಿಕಾರಿ ಯಶ್ಪಾಲ್ ಕಪೂರ್, ಅವರು 1971 ರ ಜನವರಿಯಲ್ಲಿ ಪ್ರಧಾನ ಮಂತ್ರಿಗಳ ಕಾರ್ಯದರ್ಶಿಯ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದರು ಮತ್ತು ಅದೇ ತಿಂಗಳಲ್ಲಿ ಎರಡು ತಿಂಗಳ ನಂತರ ನಡೆದ ಚುನಾವಣೆಗೆ ಅವರು ಏಜೆಂಟರಾಗಿ ತಮ್ಮ ಕರ್ತವ್ಯವನ್ನು ಪ್ರಾರಂಭಿಸಿದರು. ನ್ಯಾಯಾಲಯದಲ್ಲಿ, ಶ್ರೀಮತಿ ಗಾಂಧಿ ಅವರ ವಕೀಲರು ಅವರ ರಾಜೀನಾಮೆಯನ್ನು ಅವರು ಪ್ರಚಾರದ ಕೆಲಸವನ್ನು ತೆಗೆದುಕೊಳ್ಳುವ ಮೊದಲು ನೀಡಿದ್ದಾರೆ. ಅದನ್ನು ಆ ಸಮಯದವರೆಗೆ ಔಪಚಾರಿಕವಾಗಿ ಅಂಗೀಕರಿಸದಿದ್ದರೂ ಸಹ ಸರ್ಕಾರದ ಕರ್ತವ್ಯದ ಮೇಲೆ ಇಲ್ಲವೆಂದು (ಸರ್ಕಾರಿ ನೌಕರರು ಅಲ್ಲವೆಂದು)ಪರಿಗಣಿಸಬೇಕೆಂದು ವಾದಿಸಿದರು,. ಆದರೆ ಅಲಹಾಬಾದು ಹೈಕೋರ್ಟು ಅದನ್ನು ಒಪ್ಪಲಿಲ್ಲ. ರಾಜನಾರಾಯಣರ ಉಳಿದ ಎಲ್ಲಾ ಆಪಾದನೆಯನ್ನು ನ್ಯಾಯಾಲಯ ಆಧಾರವಿಲ್ಲವೆಂದು ತಿರಸ್ಕರಿಸಿದರೂ, ಸರ್ಕಾರಿ ನೌಕರ ಯಶಪಾಲ ಕಪೂರರನ್ನು ಅವರ ರಾಜಿನಾಮೆ ಅಂಗೀಕಾರವಾಗಿಲ್ಲದಿರುವುದರಿಂದ ಅವರನ್ನು ಚುನಾವಣೆಗೆ ಬಳಸಿದ್ದು ಅಪರಾಧವೆಂದು ತೀರ್ಪು ನೀಡಿತು. ನಂತರ ಇಂದಿರಾ ಅವರು ಸುಪ್ರೀಮ್ ಕೋರ್ಟಿನಲ್ಲಿ ಅಪೀಲು ಹೋಗಿ ಆ ಅಪರಾಧದ ತೀರ್ಪಿನಿಂದ ಮುಕ್ತಿಪಡೆದರು[]
  • ಇಂದಿರಾರ ಈ ವರ್ತನೆಯಿಂದ ಅನೇಕ ವ್ಯಾಪಾರಿಗಳು,ವಿಧ್ಯಾರ್ಥಿಗಳು,ಸರ್ಕಾರಿ ಸಂಘಟನೆಗಳು ದೇಶಾದ್ಯಂತ ಪ್ರತಿಭಟನೆಯನ್ನು ಮುಂದುವರೆಸಿದವು.ಜೆ.ಪಿ.ನಾರಾಯಣ್,ಸತ್ಯೇಂದ್ರ ನಾರಾಯಣ್ ಸಿನ್ಹ,ಮೊರಾರ್ಜಿ ದೇಸಾಯಿ ಸೇರಿದಂತೆ ಪ್ರತಿಭಟನಾಕಾರರು ದೆಹಲಿಯ ಬೀದಿಗಳಲ್ಲಿ ಪ್ರವಾಹದಂತೆ ಮುನ್ನುಗ್ಗಿ,ಪ್ರಧಾನಮಂತ್ರಿ ಯವರ ನಿವಾಸದ ಹತ್ತಿರವು ಪ್ರತಿಭಟನೆ ಮಾಡಿದರು.ನಾರಾಯಣ್ ರ ಈ ನಿರಂತರ ಪರಿಶ್ರಮವು ಜಗತ್ತಿನಾದ್ಯಾಂತ ಮನೆಮಾತಾಯಿತು.ಆದರು ಪ್ರಧಾನಮಂತ್ರಿಯವರ ವಿರುದ್ದ ತೀರ್ಪು ನೀಡಲು ನ್ಯಾಯಾಧೀಶ ಸಿನ್ಹ ಅವರಿಗೆ ೪ ವರ್ಷಗಳೇ ಬೇಕಾಯಿತು.
  • ಇಂದಿರಾರವರು ಹೈಕೋರ್ಟ್ ನ ಈ ತೀರ್ಪನ್ನು ಪ್ರಶ್ನಿಸಿ,ಸುಪ್ರಿಂಕೋರ್ಟ್ ನಲ್ಲಿ ಪ್ರಕರಣ ದಾಖಲು ಮಾಡಿದರು.ಆದರು ೧೯೭೫ ಜೂನ್ ೨೪ ರಂದು ನ್ಯಾಯಾದೀಶ'ವಿ.ಆರ್.ಕ್ರಿಷ್ಣ ಲಯರ್'ರವರು ಹೈಕೋರ್ಟ್ ನ ತೀರ್ಪನ್ನು ಎತ್ತಿ ಹಿಡಿದರು.ಮತ್ತು ಇಂದಿರಾರ ಅಧಿಕಾರ,ಹಕ್ಕುಗಳನ್ನು ಕಸಿದುಕೋಂಡು ಅವರನ್ನು ಮತದಾನದಿಂದ ಹೊರಗಿಡಲಾಯಿತು.ಮತದಾನದ ಹಕ್ಕನ್ನು ಕಳೆದುಕೊಂಡರು ಕೂಡ ಪ್ರಧಾನಮಂತ್ರಿಯಾಗಿ ಮುಂದುವರಿಯಲು ಅವಕಾಶ ಪಡೆದರು.ಮರುದಿನ ದೆಹಲಿಯಲ್ಲಿ ಜೆ.ಪಿ.ಜಯಪ್ರಕಾಶ ಒಂದು ದೊಡ್ಡ ಮೆರವಣಿಗೆಯನ್ನು ಹಮ್ಮಿಕೊಂಡರು ,ಮಹಾತ್ಮಗಾಂಧಿ ಯವರ ಸ್ವಾತಂತ್ರ್ಯ ಹೋರಾಟದ ಧ್ಯೇಯದಂತೆ ಎಲ್ಲಿ ನಿಯಮಗಳು ಅನೈತಿಕವಾಗಿರುತ್ತವೆಯೊ ಅಂತಹ ಸರ್ಕಾರದ ನಿಯಮಗಳನ್ನು ಪೋಲೀಸ್ ಅಧಿಕಾರಿಗಳು ಉಲ್ಲಂಘಿಸಬೇಕು ಎಂದು ಹೇಳಿದರು.ಇಂದಿರಾಗಾಂಧಿ ಆಗಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮ್ಮದ್ ರಿಗೆ ರಾಜ್ಯ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಲು ಮನವಿ ಮಾಡಿದರು.ಕೇವಲ ೩ರೇ ಗಂಟೆಯ ಒಳಗೆ ಎಲ್ಲಾ ರಾಜಕೀಯ ವಿರೋದಿಗಳು ಬಂಧಿಸಲ್ಪಟ್ಟರು ಮತ್ತು ಎಲ್ಲಾ ದಿನಪತ್ರಿಕೆಗಳಿಗೆ ವಿದ್ಯುತ್ಚಕ್ತಿಯನ್ನು ಕಡಿತಗೊಳಿಸಲಾಯಿತು.ಕೇಂದ್ರ ಕ್ಯಾಬಿನೆಟ್ ನೊಂದಿಗೆ ಯಾವುದೇ ಮಾತುಕತೆಯಿಲ್ಲದೆ ಮರುದಿನವೆ ಈ ಬೇಡಿಕೆ ಮಂಜೂರು ಮಾಡಲಾಯಿತು.

ತುರ್ತುಪರಿಸ್ಥಿತಿಯ ಘೋಷಣೆ

[ಬದಲಾಯಿಸಿ]

ಪಾಕಿಸ್ತಾನದೊಂದಿಗಿನ ಯುದ್ದ ಆಗ ತಾನೇ ಮುಗಿದಿದ್ದರಿಂದ ರಾಷ್ಟ್ರದ ಭದ್ರತಾ ವ್ಯವಸ್ಥೆಯ ಮೇಲೆ ತೊಂದರೆಗಳು ಉಂಟಾಗಬಹುದೆಂದು ಸರ್ಕಾರ ಕರೆಯನ್ನು ಕೊಟ್ಟಿತು.ಯುದ್ದ್ದ,ಬರಗಾಲ,ಮತ್ತು ೧೯೭೩ರಲ್ಲಿ ಉಂಟಾದ ತೈಲ ಬಿಕ್ಕಟ್ಟು ದೇಶದ ಆರ್ಥಿಕ ವ್ಯವಸ್ಥೆಯನ್ನು ಬದಲಾಯಿಸಿತು.ಮುಷ್ಕರಗಳು ಮತ್ತು ಪ್ರತಿಭಟನೆಗಳು ದೇಶದ ಆರ್ಥಿಕ ವ್ಯವಸ್ಥೆಯನ್ನು ತೊಂದರೆಗೀಡುಮಾಡಿದವು ಜೊತೆಗೆ ಎಲ್ಲಾ ಸರ್ಕಾರಗಳನ್ನು ಒಂದುಗೂಡಿಸಿದವು.ದೇಶದೆಲ್ಲೆಡೆ ಮತ್ತು ಪಕ್ಷದೊಳಗಿನ ಬಲವಾದ ರಾಜಕೀಯ ವಿರೋದ ಮತ್ತು ಅವ್ಯವಸ್ಥೆಗಳ ನಡುವೆಯೂ ವಿಶೇಷ ಸಾಂವಿಧಾನಿಕ ಅಧಿಕಾರಿಯಾದ ತನ್ನ ಕಿರಿಯ ಮಗನಾದ ಸಂಜಯಗಾಂಧಿ ಹಾಗೂ ಇತರೆ ಅಧಿಕಾರಿಗಳಿಂದ ಸಲಹೆಯನ್ನು ಪಡೆದರು.ಪಶ್ಚಿಮಬಂಗಾಳದ ಮುಖ್ಯಮಂತ್ರಿಯಾದ ಸಿದ್ಧಾರ್ಥ ಶಂಕರ್ ರೇ ಯವರು ಆಂತರಿಕ ತುರ್ತುಪರಿಸ್ಥಿತಿಯನ್ನು ಜಾರಿಗೆ ತರುವಂತೆ ಪ್ರಧಾನಿಯ ಬಳಿ ಬೇಡಿಕೆಯಿತ್ತರು.ಇಂದಿರಾಗಾಂಧಿಯವರಿಂದ ಪಡೆದ ಮಾಹಿತಿಯಂತೆ "ಆಂತರಿಕ ತೊಂದರೆಗಳಿಂದ ದೇಶದ ಭದ್ರತಾ ವ್ಯವಸ್ಥೆಯ ಮೇಲೆ ಪರಿಣಾಮವಾಗುತ್ತಿದೆ" ಆದ್ದರಿಂದಾಗಿ ಆಂತರಿಕ ತುರ್ತುಪರಿಸ್ಥಿತಿಯನ್ನು ಘೋಷಣೆ ಮಾಡುವಂತೆ ರಾಷ್ಟ್ರಪತಿಗೆ ಕರಡು ಪ್ರತಿಯನ್ನು ಕಳುಹಿಸಿದನು. ಜೊತೆಗೆ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯ ಹೇಗೆ ಸಂವಿಧಾನದ ವ್ಯಾಪ್ತಿಯಲ್ಲಿಯೇ ಉಳಿದಿದೆ ಎಂಬುದನ್ನು ತಿಳಿಸಿದನು. ಈ ಕಾರ್ಯವೈಖರಿಯ ಮೇಲೆ ಉಂಟಾದ ಪ್ರಶ್ನೆಯಿಂದಾಗಿ ಆಗಿನ ರಾಷ್ಟ್ರಪತಿಯಾದ ಫಕ್ರುದ್ದಿನ್ ಅಲಿ ಅಹಮ್ಮದ್ ಪ್ರಧಾನಮಂತ್ರಿಯವರ ಅನುಮತಿಯ ಮೇರೆಗೆ ಜೂನ್ ೨೫ ೧೯೭೫ ರ ಮಧ್ಯರಾತ್ರಿ ಆಂತರಿಕ ತುರ್ತುಪರಿಸ್ಥಿತಿಯನ್ನು ಘೋಷಣೆ ಮಾಡಿದರು. ಇಂದಿರಾಗಾಂಧಿಯವರ ನಿರ್ಧಾರದಂತೆ ತುರ್ತುಪರಿಸ್ಥಿತಿಯು ಪ್ರತಿ ೬ ತಿಂಗಳಿಗೊಮ್ಮೆ ೧೯೭೭ ರ ಚುನಾವಣೆ ನಿರ್ಧಾರವಾಗುವವರೆಗೆ ಮುಂದುವರಿಯುವಂತೆ ರಾಷ್ಟ್ರಪತಿ ಅಲಿ ಅನುಮೋದಿಸಿದರು.

ತುರ್ತುಪರಿಸ್ಥಿತಿಯ ಆಡಳಿತ

[ಬದಲಾಯಿಸಿ]

ಕೃಷಿ ಮತ್ತು ಕೈಗಾರಿಕಾ ಉತ್ಪಾದನೆ, ಸಾರ್ವಜನಿಕ ಸೇವೆಯ ಅಭಿವೃದ್ದಿ,ಅನಕ್ಷರತೆ ಮತ್ತು ಬಡತನದ ನಿವಾರಣೆಗಾಗಿ ಇಂದಿರಾಗಾಂಧಿಯವರು ೨೦ ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ತುರ್ತುಪರಿಸ್ಥಿತಿಯ ಸಂರ್ಧಭದಲ್ಲಿಯೂ ಕೂಡ ರೈಲುಗಳ ಸಂಚಾರವಿತ್ತು ಮತ್ತು ಕಾರ್ಮಿಕರು ತಮ್ಮ ಕೆಲಸಗಳಲ್ಲಿ ನಿರತರಾಗಿದ್ದರು.

೧೯೭೬ ರಲ್ಲಿ ಸಾಮಾಜಿಕ ಕಾರ್ಮಿಕರ ಗುಂಪಿನ ನಾಯಕ ಜಾರ್ಜ್ ಫರ್ನಾಂಡಿಸ್ ಪ್ರತಿಭಟಿಸುತ್ತಾ ಬಂಧಿತರಾದರು.ಅದು ತುರ್ತುಪರಿಸ್ಥಿತಿಯ ಮೂರ್ತ ರೂಪದ ಚಿತ್ರಣ.ಭಾರತ ಸಂವಿಧಾನದ ೩೫೨ನೇ ವಿಧಿಯಂತೆ ಹಲವು ಅಧಿಕಾರಗಳನ್ನು ಜಾರಿಗೆ ತಂದರು ಮತ್ತು ನಾಗರೀಕ ಸ್ವಾತಂತ್ರ್ಯ ಮತ್ತು ರಾಜಕೀಯ ವಿರೋಧಗಳನ್ನು ಸಾಮೂಹಿಕವಾಗಿ ತಿರಸ್ಕರಿಸಿದರು. ಸಾವಿರಾರು ಪ್ರತಿಭಟನಾಕಾರರನ್ನು ಮತ್ತು ಮುಷ್ಕರದ ನಾಯಕರುಗಳನ್ನು ಬಂಧಿಸಲು ಸರ್ಕಾರ ದೇಶದಾದ್ಯಂತ ಪೋಲಿಸ್ ಪಡೆಗಳನ್ನು ಬಳಸಲಾಯಿತು.ವಿಜಯಾರಾಜೇ ಸಿಂದೈ,ರಾಜ್ ನಾರಯಣ್,ಮೊರಾರ್ಜಿ ದೇಸಾಯಿ,ಚರಣ್ ಸಿಂಗ್,ಕೃಪಲಾನಿ,ಅಟಲ್ ಬಿಹಾರಿ ವಾಜಪೇಯಿ,ಎಸ್,ಕೆ,ಅಡ್ವಾಣಿ,ಸತ್ಯೇಂದ್ರ ನಾರಯಣ್ ಸಿನ್ಹಾ ಮತ್ತು ಇತರೆ ಹೋರಾಟಗಾರರು ಬಂಧಿಸಲ್ಪಟ್ಟರು.ಸಂಘಟನೆಗಳಾದ ರಾಷ್ಟ್ರೀಯ ಸ್ವಯಂ ಸೇವಾ ಸಂಘ ಮತ್ತು ಜಮತ್-ಈ-ಇಸ್ಲಾಮಿ ಇತರೆ ರಾಜಕೀಯ ಪಕ್ಸಗಳು ನಿಷೇದಿಸಲ್ಪಟ್ಟವು.ಹಲವಾರು ಕಮ್ಯೂನಿಷ್ಟ ಪಕ್ಷದ ನಾಯಕರುಗಳು ಮತ್ತು ಇತರೆ ಸಂಘಟಕರು ಬಂಧಿಸಲ್ಪಟ್ಟರು.

ತಮಿಳುನಾಡಿನಲ್ಲಿ ಎಮ್.ಕರುಣಾನಿಧಿ ಸರ್ಕಾರವು ರದ್ದಾಯಿತು ಮತ್ತು ಡಿ,ಎಮ್,ಕೆ ಪಕ್ಷದ ನಾಯಕರುಗಳು ಬಂಧನಕೊಳಪಟ್ಟರು.ಕರುಣಾನಿಧಿಯ ಮಗ ಎಮ್,ಕೆ ಸ್ಟ್ಯಾಲಿನ್ ಆಂತರಿಕ ರಕ್ಷಣಾದಳದಿಂದ ಬಂಧಿಸಲ್ಪಟ್ಟನು.ತುರ್ತು ಪರಿಸ್ಥಿತಿಯೂ ಘೋಷಣೆಯಾದ ನಂತರವೂ ಒಬ್ಬ ವ್ಯಕ್ತಿ ತನ್ನ ವಿರೋಧವನ್ನು ವ್ಯಕ್ತಪಡಿಸಬಹುದು ಎಂದು ೯ ಉಚ್ಛನ್ಯಾಲಯಗಳು ನಿರ್ಣಯಿಸಿದವು.ಇಂಧಿರಾಗಾಂಧಿಯವರು ಎ,ಎನ್,ರೇ ಯವರನ್ನು ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರನ್ನಾಗಿ ನೇಮಿಸಿದರು.ಸುಪ್ರೀಂಕೋರ್ಟ್ ನ ಆದೇಶದಂತೇ ಯಾವುದೇ ಒಬ್ಬ ವ್ಯಕ್ತಿಯನ್ನು ಕಾರಣವಿಲ್ಲದೆ ಬಂಧಿಸುವಂತಿಲ್ಲ ಏಕೆಂದರೇ ಇದು ಆ ವ್ಯಕ್ತಿಯಿಂದ ವ್ಯಕ್ತಿ ಸ್ವಾತಂತ್ರ್ಯ ಮತ್ತು ಬದುಕುವ ಹಕ್ಕನ್ನು ಕಿತ್ತುಕೊಂಡತೆ ಇದು ನಿಜವಾಗಿ(ಹೆಬಿಯಸ್ ಕಾರ್ಪಸ್ ಪ್ರಕರಣ). ಬಂಧನಕ್ಕೊಳಪಡದ ಹಲವಾರು ರಾಜಕಾರಣಿಗಳು ಭೂಗತದಲ್ಲಿ ಪ್ರತಿಭಟನೆಗೆ ಸಂಘಟನೆಯನ್ನು ಮುಂದುವರಿಸಿದರು.

ಕಾನೂನು ಮಾನವ ಹಕ್ಕುಗಳು ಮತ್ತು ಚುನಾವಣೆಗಳು

[ಬದಲಾಯಿಸಿ]

ಪಾರ್ಲಿಮೆಂಟ್ ಮತ್ತು ರಾಜ್ಯಸರ್ಕಾರಗಳ ಚುನಾವಣೆಗಳನ್ನು ಮುಂದೂಡಲಾಯಿತು.ಗಾಂಧಿ ಮತ್ತು ಅವಳ ಸಂಸತ್ತಿನ ಸದಸ್ಯರು ೨/೩ ಸದಸ್ಯರ ಅನುಮತಿಯ ಮೇರೆಗೆ ದೇಶದ ಕಾನೂನುಗಳನ್ನು ಬದಲಾಯಿಸಿದರು.ಕಾನೂನುಗಳ ಮಂದಗತಿಯ ಕಾರ್ಯವೈಖರಿಯನ್ನು ಗಮನಿಸಿದ ಇವಳು ರಾಷ್ಟ್ರಪತಿಗೆ ಕಾನೂನು ರಚಿಸುವ ಸಂರ್ಪೂಣ ಅಧಿಕಾರವನ್ನು ಸಂಸತ್ತಿಗೆ ಕೊಡಲು ಶಾಸನಗಳನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದಳು.೪೨ನೇ ತಿದ್ದುಪಡಿ ತುರ್ತುಪರಿಸ್ಥಿತಿಯ ಮಹತ್ವದ ಇತಿಹಾಸ ಏಕೆಂದರೇ ಇದು ಸಂವಿಧಾನದಲ್ಲಿ ಹಲವಾರು ಬದಲಾವಣೆಗಳನ್ನು ತಂದಿತು.ಜಸ್ಟಿಸ್ ಖಾನ್ ತನ್ನ ಕೃತಿ' ಮೇಕಿಂಗ್ ಆಫ್ ಇಂಡಿಯನ್ ಕಾನ್ ಸ್ಟ್ಯೂಷನ್'ನ ಉಪಸಂಹಾರದಲ್ಲಿ ಹೇಳಿರುವಂತೆ ಒಂದು ವೇಳೆ ಭಾರತದ ಸಂವಿಧಾನ ನಮ್ಮ ಪೂರ್ವಜರಿಂದ ಪಡೆದದ್ದೆ ಆಗಿದ್ದರೆ, ನಾವು ಭಾರತದ ಜನತೆ, ಸಂವಿಧಾನದಲ್ಲಿ ನಂಬಿಕೆಯಿರುವ ಮತ್ತು ಅದರ ವ್ಯಾಪ್ತಿಯಲ್ಲಿ ಬರುವ ನಮಗೆ ಸಂವಿಧಾನ ಸ್ಪಂದಿಸುತ್ತದೆ.ಸಂವಿಧಾನ ನಾವು ಬದುಕುವ ಜೀವನ ವಿಧಾನ, ಅದು ಚರ್ಮದ ಕಾಗದವಲ್ಲ.ನಿರಂತರವಾದ ಜಾಗರೂಕತೆಯ ಸ್ವಾತಂತ್ರ್ಯ ಮತ್ತು ಅಂತಿಮವಾಗಿ ಜನರು ಅದರ ಕಾವಲುಗಾರರು.ದುರ್ಬಲ ಮನಸ್ಸಿನ ಮನುಷ್ಯರಿಗೆ ಇತಿಹಾಸ ಯಾವಾಗಲು ಉದ್ದಟತನದಿಂದ ಅಧಿಕಾರವನ್ನು ಆಹ್ವಾನಿಸುವುದನ್ನು ಕಲಿಸುತ್ತದೆ. ರಾಜನ್ ಪ್ರಕರಣಕ್ಕೆ ಸಂಬಂದಿಸಿದಂತೆ, ಈತ ಕಲ್ಕತ್ತಾದ 'ರೀಜನಲ್ ಎಂಜಿನಿಯರಿಂಗ್ ಕಾಲೇಜ್ನಲ್ಲಿ ಮಾರ್ಚ್ ೧, ೧೯೭೬ ರಲ್ಲಿ ಪೋಲೀಸರಿಂದ ಬಂಧಿಸಲ್ಪಟ್ಟನ್ನು ಸೆರೆಮನೆಯಲ್ಲಿ ತುಂಬಾ ಹಿಂಸಿಸಲಾಯಿತು ಅನಂತರ ಅವನು ಮರಣ ಹೊಂದಿದನು. ಈ ಘಟನೆಯೂ ಕೇರಳದ ಉಚ್ಛನ್ಯಾಯಲಯದಲ್ಲಿ ಹೆಬಿಯಸ್ ಕಾರ್ಪಸ್ ನಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಯಿತು.

ಕುಟುಂಬ ಯೋಜನೆ

[ಬದಲಾಯಿಸಿ]

ಅತಿಯಾದ ಜನಸಂಖ್ಯೆಗೆ ಸಂಬಂದಿಸಿದ ವಿಷಯಗಳ ಬಗ್ಗೆ ಸಂಜಯ್ ಗಾಂಧಿವಿಶೇಷ ಆಸಕ್ತಿಯನ್ನು ಹೊಂದಿದ್ದರು.ಜನನ ನಿಯಂತ್ರಣವನ್ನು ಕಾರ್ಯಕ್ರಮಗಳಾದ ಸಂತಾನಹರಣ ,ವೆಸ್ಕಟಮೀ ಗಳನ್ನು ಪ್ರಾರಂಬಿಸಿದರು.ಕೆಲವು ವಿಮರ್ಶಕರು ಕೋಪವನ್ನು ವ್ಯಕ್ತಪಡಿಸಿದರು ಕಾರಣ ಮನಸ್ಸಿಲ್ಲದಿದ್ದರು ಭಾರತೀಯರು ಒತ್ತಾಯಪೂರ್ವಕವಾಗಿ ಇದಕ್ಕೆ ಒಳಪಟ್ಟರು.ಹಿಂದಿನ ವರ್ಷ ೨.೭ ಮಿಲಿಯನ್ ಇದ್ದ ಸಂತಾನಹರಣ ೧೯೭೬-೭೭ ರಲ್ಲಿ ೮.೩ ಮಿಲಿಯನ್ ಗೆ ಹೆಚ್ಚಿತು.

ಸರ್ಕಾರದ ವಿರುದ್ಧ ಪ್ರತಿರೋಧ

[ಬದಲಾಯಿಸಿ]
  1. ತುರ್ತುಪರಿಸ್ಥಿತಿಗೆ ಸಂಬಂಧಿಸಿದ ಪ್ರತಿರೋಧ ಹಾಗೂ ಆರೋಪಗಳನ್ನು ಈ ಕೆಳಕಂಡಂತೆ ಪಟ್ಟಿ ಮಾಡಬಹುದು.
  2. ಯಾವುದೆ ಘೋಷಣೆಯಿಲ್ಲದೆ ಪೋಲಿಸರಿಂದ ಜನಗಳಿಗೆ ಅಡ್ಡಿ.
  3. ಬಂಧಿಸಲ್ಪಟ್ಟವರ ಮೇಲಿನ ಹಿಂಸೆ.
  4. ಸಾರ್ವಜನಿಕ ಹಾಗೂ ಖಾಸಗಿ ಸುದ್ದಿ ಸಂಸ್ಥೆಗಳಾದ ನ್ಯಾಷನಲ್ ಟೆಲಿವಿಷನ್ ನೆಟವರ್ಕ್.
  5. ಬಲವಂತದ ಸಂತಾನಹರಣ.
  6. ಟರ್ಕ್ ಮೆನ್ ಗೇಟ್ ಮತ್ತು ಹಳೆ ಡೆಲ್ಲಿಯ ಜಮ್ಮಾ ಮಸೀದಿ,ಕೊಳಗೇರಿಗಳು ಮತ್ತು ಕಡಿಮೆ ಆದಾಯದ ಪ್ರದೇಶಗಳ ನಾಶ.
  7. ಬೃಹತ್ ಮತ್ತು ಕಾನೂನುಬಾಹಿರ್ ಕಾನೂನುಗಳ ಜಾರಿ.

ತುರ್ತುಪರಿಸ್ಥಿಯು ಪ್ರಜಾಸತ್ತಾತ್ಮಕ ರಾಷ್ಟ್ರಗಳಿಗೆ ಮುಖ್ಯ ಸವಾಲು ಏಕೆಂದರೇ ಇದು ಯುಕ್ತಿಯಿಂದ ಕಾರ್ಯನಿರ್ವಹಿಸುವ ರಾಜಕಾರಣಿಗಳು ಮತ್ತು ಸಂಸತ್ತಿನ ಪ್ರಬಲತೆಯನ್ನು ವಿರೋಧಕ್ಕೊಳಪಡಿಸಿತು.

ಸಿಖ್ಖರ ವಿರೋಧ

[ಬದಲಾಯಿಸಿ]

ಇಂದಿರಾಗಾಂಧಿಯ ಸರ್ಕಾರದಲ್ಲಿ ಧೈರ್ಯವಾಗಿ ಮಾತನಾಡುವ ಮತ್ತು ವಿರೋಧ ಪಕ್ಷದ ನಾಯಕರುಗಳೆಲ್ಲ ಬಂಧಿಸಲ್ಪಟ್ಟರು. ಇದು ರಾಷ್ತ್ರಕ್ಕೆ ಅಚ್ಚರಿಯನ್ನು ಉಂಟು ಮಾಡಿತು.ತುರ್ತುಪರಿಸ್ಥಿತಿ ಘೋಷಣೆಯಾದ ನಂತರ ಸಿಖ್ಖರು ಅಮೃತಸರದಲ್ಲಿ ಸಭೆ ಸೇರುವುದರ ಮೂಲಕ ಪ್ಯಾಸಿಸ್ಟ್ ಮಾದರಿ ಕಾಂಗ್ರೇಸ್ ಸರ್ಕಾರವನ್ನು ವಿರೋಧಿಸಿದರು.ಮೊದಲ ಬಾರಿಗೆ ಸಾಮೂಹಿಕ ಪ್ರತಿಭಟನೆ ಆಕಾಲಿದಳದಿಂದ ಸಂಘಟಿಸಲ್ಪಟ್ಟಿತು ಮತ್ತು ಜುಲೈ ೯ ರಂದು ಅಮೃತಸರದಲ್ಲಿ ಜಾರಿಗೆ ಬಂದಿತು.ಈ ಪ್ರತಿಭಟನೆ 'Campaign to Save Democracy' ಎಂದೇ ಪ್ರಖ್ಯಾತಿಯಾಗಿದೆ.ಪೋಲಿಸರು ತಮ್ಮ ಶಕ್ತಿ ಪ್ರದರ್ಶನದಲ್ಲಿ ಹಲವಾರು ಬೆಂಬಲಿಗರನ್ನು ಬಂಧಿಸಿದರು. ಅವರೆಂದರೇ'Shiromani Akali Dal and Shiromani Gudwara Prabandhak committee(sgpc) ಯ ನಾಯಕರು. ಈ ರೀತಿಯ ಸಿಖ್ಖರ ಬೆಂಬಲ ಪ್ರಧಾನಿಯಲ್ಲಿ ಅಚ್ಚರಿಯನ್ನುಂಟು ಮಾಡಿತು.ಇವರ ಪ್ರತಿಭಟನೆ ರಾಷ್ಟ್ರದ ಇತರೆ ಭಾಗಗಳಲ್ಲಿ ನಾಗರೀಕ ಅವಿಧೇಯತೆಯಿಂದ ಹೊರಬರಲು ಸ್ಪೂರ್ತಿಯನ್ನು ನೀಡಿತು.ಇಂದಿರಾಗಾಂಧಿ ಶಿರೋಮಣಿ ಆಕಾಲಿದಳ ಮತ್ತು ಪಂಜಾಬ್ ಲೆಜಿಸ್ಲೆಟೀವ್ ಅಸೆಂಬ್ಲಿ ಯ ನಡುವೆ ಸಂಧಾನಕ್ಕೆ ಅವಕಾಶ ನೀಡಿದರು.ಆದರೆ ಪ್ರತಿಭಟನೆಯ ನಾಯಕನಾದ Sant Harcharan Singh longowal ತುರ್ತುಪರಿಸ್ಥಿತಿ ಜಾರಿಯಲ್ಲಿದ್ದ ಕಾರಣ ಸರ್ಕಾರದ ಪ್ರತಿನಿಧಿಗಳನ್ನು ಭೇಟಿಯಾಗಲು ನಿರಾಕರಿಸಿದನು. ಪತ್ರಿಕೆಯ ಸಂದರ್ಶನದಲ್ಲಿ Save Democracy campaign ಮೂಲಗಳನ್ನು ಸ್ಪಷ್ಟಪಡಿಸಿದನು.'ನಮ್ಮ ಪ್ರಶ್ನೇ ಇಂದಿರಾಗಾಂಧಿ ಪ್ರಧಾನಮಂತ್ರಿಯಾಗಿ ಮುಂದುವರಿಯುತ್ತಾರೋ ಅಥವಾ ಇಲ್ಲವೋ ಎಂಬುದಲ್ಲ ಈ ರಾಷ್ಟ್ರದಲ್ಲಿ ಪ್ರಜಾಪ್ರಭುತ್ವ ಉಳಿಯುತ್ತದೋ ಅಥವಾ ಇಲ್ಲವೋ ಎಂಬುದು ಪ್ರಮುಖ ಅಂಶ.ಪ್ರಜಾಸತ್ತಾತ್ಮಕ ವ್ಯವಸ್ಥೆ ಪ್ರಮುಖವಾಗಿ ಮೂರು ಆಧಾರ ಸ್ತಂಭಗಳ ಮೇಲೆ ನಿಂತಿದೆ.ಅವುಗಳೆಂದರೇ ಬಲವಾದ ವಿರೋಧ, ಸ್ವತಂತ್ರ್ಯನ್ಯಾಯಾಂಗ ಮತ್ತು ಪತ್ರಿಕಾ ಸ್ವಾತಂತ್ರ್ಯ.ತುರ್ತುಪರಿಸ್ಥಿತಿ ಈ ಎಲ್ಲಾ ಅಂಶಗಳನ್ನು ನಾಶಮಾಡಿತು. ನಾಗರೀಕ ಅವಿಧೇಯತೆಯ ನಡುವೆಯೂ ಈ ಕಾರ್ಯಾಚರಣೆ ರಾಷ್ಟ್ರದ ಕೆಲವು ಭಾಗಗಳಲ್ಲಿ ಹರಡಿತು.ವಿಶೇಷವಾಗಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಸಾಮೂಹಿಕವಾಗಿ ಬಂಧಿಸುವ ತಂತ್ರಗಳು, ಪರಿಶೀಲನಾಧಿಕಾರ ಮತ್ತು ಜನಸಂಖ್ಯೆಯನ್ನು ಕಡಿಮೆಗೊಳಿಸುವಂತೆ ಬೆದರಿಕೆ ಹಾಕುವುದು ಇತ್ಯಾದಿ ಚಟುವಟಿಕಗಳು ಹೆಚ್ಚಾದವು.ಜನವರಿಯ ನಂತರ ಸಿಖ್ಖರು ಅಧಿಕಾರದಲ್ಲಿ ಉಳಿದರು.

ಆರ್.ಎಸ್.ಎಸ್ ನ ಪಾತ್ರ

[ಬದಲಾಯಿಸಿ]

ರಾಷ್ಟ್ರೀಯ ಸ್ವಯಂ ಸೇವಕ ಸಂಘ ವಿರೋಧ ಪಕ್ಷದೊಂದಿಗೆ ಸೇರಿಕೊಂಡಿತು ಮತ್ತು ಇದರ ಬಲವಾದ ಸಂಘಟನೆಯಿಂದ ಸರ್ಕಾರದ ವಿರುದ್ದ ಪ್ರತಿಭಟನೆಯನ್ನು ಕೈಗೊಂಡಿತು,ಆದರೆ ನಿಷೇದಿಸಲ್ಪಟ್ಟಿತು.ಸಂಘಟನೆಯ ತೀವ್ರವಾದ ವಿರೋಧದಿಂದ ಪೋಲಿಸರು ಮೂಲೆ ಗುಂಪಾದರು ಮತ್ತು ಸಂಘಟನೆಯ ಕಾರ್ಯಕರ್ತರು ಬಿಡುಗಡೆಗೊಂಡರು.

೧೯೭೭ ರ ಚುನಾವಣೆ

[ಬದಲಾಯಿಸಿ]

ಇಂದಿರಾ ಗಾಂಧಿ ಜನವರಿ ೨೩, ೧೯೭೭ ರಂದು ನೂತನ ಚುನಾವಣೆಯನ್ನು ಘೋಷಿಸಿದರು ಮತ್ತು ಇದೇ ಸಮಯದಲ್ಲಿ ಎಲ್ಲಾ ರಾಜಕೀಯ ಸೆರೆಯಾಳುಗಳು ಜೈಲಿನಿಂದ ಬಿಡುಗಡೆ ಹೊಂದಿದರು. ಮಾರ್ಚ್ ೨೩, ೧೯೭೭ ರಂದು ತುರ್ತುಪರಿಸ್ಠಿತಿ ಯನ್ನು ಅಧಿಕ್ರುತವಾಗಿ ಮುಕ್ತಾಯ ಮಾಡಿದರು. ಇದೇ ಸಮಯದಲ್ಲಿ ಜನತಾ ಚಳುವಳಿಯ ಕಾರ್ಯಾಚರಣೆಗೆ ಭಾರತೀಯರ ಸಾಮರ್ಥ್ಯವನ್ನು ಬಹಿರಂಗ ಪಡಿಸುವದಕ್ಕೆ ಕೊನೆಯ ಅವಕಾಶವಾಗಿತ್ತು. ಈ ಚುವನಾಣೆಯು ಭಾರತದಲ್ಲಿ "ಪ್ರಜಾಪ್ರಭುತ್ವ" ಅಥವಾ "ಸರ್ವಾಧಿಕಾರತ್ವ" ಯಾವುದು ಆಳ್ವಿಕೆಗೆ ಬರುತ್ತದೆ ಎಂಬುದನ್ನು ನಿರ್ಧರಿಸುವ ಚುನಾವಣೆಯಾಗಿತ್ತು.

ಫೆಬ್ರವರಿ ೨ ರಂದು ನಡೆದ ಲೋಕಸಭಾ ಚುವನಾಣೆಯಲ್ಲಿ ಪಕ್ಷದ ನಂಬಿಕಸ್ತ ಬೆಂಬಲಿಗರು ಮಾಡಿದ ಕುತಂತ್ರದಿಂದ ಮಿಸಸ್ ಗಾಂಧಿ ಮತ್ತು ಸಂಜಯ್ ಗಾಂಧಿ ಇಬ್ಬರೂ ತಮ್ಮ ಸ್ಥಾನವನ್ನು ಕಳೆದುಕೊಂಡರು. ಕಾಂಗ್ರೆಸ್ ಕೇವಲ ೧೫೩ ಸ್ಥಾನಗಳನ್ನು ಪಡೆದುಕೊಂಡು ದಕ್ಷಿಣದ ೪ ರಾಜ್ಯಗಳಲ್ಲಿ ೯೨ ರಷ್ತು ಸ್ಥಾನಗಳನ್ನು ಪಡೆದುಕೊಂಡಿತು. ಜನತಾಪಾರ್ಟಿ ೨೯೮ ಸ್ಥಾನಗಳನ್ನು ಗಿಟ್ಟಿಸಿಕೊಂಡು ಮತ್ತು ೪೭ ಪಕ್ಷೇತರ ಸ್ಥಾನಗಳನ್ನು ತನ್ನೆಡೆಗೆ ಪಡೆದು ಬಹುಮತದಿಂದ ವಿಜಯ ಪತಾಕೆ ಹಾರಿಸಿತು. ನಂತರ ಮೊರಾರ್ಜಿ ದೇಸಾಯಿ ಮೊದಲ ಕಾಂಗ್ರೆಸ್ಸೇತರ ಪ್ರಧಾನಮಂತ್ರಿಯಾಗಿ ಆಯ್ಕೆಯಾದರು.

ಉತ್ತರ ಪ್ರದೇಶದಲ್ಲಿನ ಚುನಾವಣೆ ಕಾಂಗ್ರೆಸ್ ಪಕ್ಷ ಕಟ್ಟಿದ್ದ ಜನರ ಕೋಟೆಯನ್ನು ಭೇದಿಸಿತು.ಇದು ಗಾಂದಿಯ ವಿರುದ್ಧ ನಡೆದ ಐತಿಹಾಸಿಕ ಘಟನೆಯಾಗಿದೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಗಟ್ಟಿಯಾಗಿ ನೆಲೆಯೂಡಿದ್ದರೂ ಸಹ ಅಲ್ಲಿನ ಜನರು ಗಾಂದಿಯ ವಿರುದ್ಧ ತಿರುಗಿಬೀಳುತ್ತಾರೆ. ಇದೇ ಸಮಯದಲ್ಲಿ ಧಾನಗೆರೆ ಎಂಬುವವರು ಕಾಂಗ್ರೆಸ್ ಪಕ್ಷ ರಚಿಸಿದ ತುರ್ತುಪರಿಸ್ಥಿತಿ ಅವರ ಒಗ್ಗಟ್ಟನ್ನು ಹೊಡೆದು ಅವರ ಅನೈಖ್ಯತೆಗೆ ಕಾರಣವಾಯಿತು, ಅವರ ಮುಷ್ಟಿಯಲ್ಲಿದ್ದ ಮಾಧ್ಯಮಗಳು ಸಹ ಅವರ ಜನಪ್ರಿಯತೆಯನ್ನು ಹೆಚ್ಚಿಸುವಲ್ಲಿ ವಿಪಲವಾದವು ಎಂಬ ಹೇಳಿಕೆಯನ್ನು ನೀಡುತ್ತಾರೆ. ಈ ಸಂಗತಿಯಿಂದ ಜನರು ತಮ್ಮ ಕುಂದುಕೊರತೆಗಳು ಮತ್ತು ಅಸಂತ್ರುಪ್ತಿಯನ್ನು ವ್ಯಕ್ತಪಡಿಸಲು ಅವರ ಅಧಿಕಾರವನ್ನು ಹತ್ತಿಕ್ಕಲು ಸಹಕಾರಿಯದವು. ಗ್ರಾಮೀಣ ಪ್ರದೇಶಗಲಳಲ್ಲಿ ನಡೆಸಿದ ನಸ್ಬಂಧಿ(ವ್ಯಾಸಕ್ಟೆಮಿ) ಶಿಭಿರವು ಜನರ ಅಸಂತ್ರುಪ್ತಿಗೆ ಪ್ರಮುಖ ಕಾರಣವಾಯಿತು. ಇದೇ ಕಾಲದಲ್ಲಿ ಕಾಂಗ್ರೆಸ್ ನ ಎಲ್ಲಾ ಚಟುವಟಿಕಗಳಲ್ಲಿ ಕುಂದುಕೊರತೆಗಳು ಕಾಣತೊಡಗಿದ್ದರಿಂದ ಕಾಂಗ್ರೆಸ್ ಸಾಕಷ್ಟು ಬೆಂಬಲವಿಲ್ಲದೆ ಪಶ್ಛಿಮ ಬಂಗಾಳದಲ್ಲೂ ಸಹ ತನ್ನ ಸ್ಥಾನವನ್ನು ಕಳೆದುಕೊಂಡಿತು. ಪಕ್ಷದ ವಿರೋಧಿಗಳು ನೀಡಿದ ವಿವಾದಾಂಶಗಳು, ಕಾಂಗ್ರೆಸ್ ನ ಭ್ರಷ್ಟಾಚಾರ, ಮತದಾರರ ಇಚ್ಛಾಸಕ್ತಿಗಳು ಮತ್ತು ಕೋರಿಕೆಗಳ ಕಡೆ ಗಮನ ನೀಡದಿರುವುದು ಹೊಸ ನಾಯಕತ್ವಕ್ಕೆ ದಾರಿ ಮಾಡಿಕೊಟ್ಟಿತು.

ನ್ಯಾಯಸ್ಥಾನ

[ಬದಲಾಯಿಸಿ]

ಜನತಾಪಕ್ಷದ ವಿಜಯದ ನಂತರ ತುರ್ತುಪರಿಸ್ಥಿತಿಯ ದೋಷಗಳನ್ನು ಕಾಂಗ್ರೆಸ್ ರಾಜಕಾರಣಿಗಳ ವಿರುದ್ಧ ಜನರನ್ನು ಎತ್ತಿಕಟ್ಟಿ ಅವರ ವಿರುದ್ಧ ಮೊಕದ್ದಮೆ ಹೂಡುತ್ತಾರೆ. ಇದಕ್ಕೋಸ್ಕರ ವಿಶೇಷ ನ್ಯಾಯಾಲಯಗಳು ಸಂಘಟಿತವಾಗಿ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರುಗಳನ್ನು ಮತ್ತು ಅನೇಕ ಸಾರ್ವಜನಿಕ ಅಧಿಕಾರಿಗಳನ್ನು ಬಂಧಿಸಲಾಗುತ್ತದೆ. ಮಿಸಸ್ ಗಾಂಧಿ ಮತ್ತು ಸಂಜಯ್ ಗಾಂಧಿ ಸೇರಿದಂತೆ ಅನೇಕರ ಮೇಲೆ ಹಲ್ಲೆ ಮಾಡಲಾಗುತ್ತದೆ. ಆದರೆ ಹೆಚ್ಚಿನ ಸಂಖ್ಯೆಯ ಮೊಕದ್ಧಮೆಗಳಿಗೆ ಸಾಕಾದಷ್ಟು ಸಾಕ್ಷ್ಯಾಧಾರಗಳು ಇಲ್ಲದ ಕಾರಣ ಕೆಲವರನ್ನು ಬಂಧಿಸುವುದರಲ್ಲಿ ವಿಪಲರಾಗುತ್ತಾರೆ.

ಇತಿಹಾಸ

[ಬದಲಾಯಿಸಿ]

ತುರ್ತುಪರಿಸ್ಥಿತಿ ಕೇವಲ ೨೧ ತಿಂಗಳುಗಳ ಕಾಲ ಜಾರಿಯಲ್ಲಿತ್ತು. ಆದರೆ ಇದರ ಇತಿಹಾಸ ಮಾತ್ರ ಸೂಕ್ಷ್ಮವಾದಂತಹ ವಿವಾದಾತ್ಮಕ ಅಂಶವಾಗಿದೆ. ತುರ್ತುಪರಿಸ್ಥಿತಿಯ ಘೋಷಣೆಯ ಮರುದಿನ ೧೯೭೫, ಜೂನ್ ೨೬ ರ ಬಾಂಬೆ ಆವ್ರುತ್ತಿಯ '''ದ ಟೈಮ್ಸ್ ಆಫ಼್ ಇಂಡಿಯಾ''' ದಿನಪತ್ರಿಕೆಯಲ್ಲಿ ತುರ್ತುಪರಿಸ್ಥಿತಿಯ ಪರಿಣಾಮಗಳನ್ನು "T.Ruth (ಟ್ರುತ್) ರ ಪ್ರೀತಿಯ ಪತಿಯಾದ, L.I.Bertie (ಲಿಬರ್ಟಿ) ಯ ತಂದೆಯಾದ, Faith, Hope, Justica ರ ಸಹೋದರರಾದ D.E.M.O.Cracy (ಡೆಮಾಕ್ರಸಿ) ಮರಣ ಹೊಂದಿದರು." ಎಂದು ಟೀಕಿಸಿ ಬರೆಯಲಾಗಿತ್ತು. ನಂತರ ಪತ್ರಿಕೆಗಳಿಂದ ವಿಮರ್ಷಾ ಅಧಿಕಾರವನ್ನು ಕಿತ್ತುಕೊಳ್ಳಲಾಯಿತು. ಜೂನ್ ೨೮ ರಂದು ಪ್ರಖಟವಾದ ದೆಹಲಿ ಆವ್ರುತ್ತಿಯ '''ಇಂಡಿಯನ್ ಎಕ್ಸ್ಪ್ರೆಸ್''' ಪತ್ರಿಕೆಯ ಸಂಪಾದಕೀಯ ಭಾಗ ಖಾಲಿ ಉಳಿದಿದ್ದರೆ, ಫ಼ಿನಾನ್ಷಿಯಲ್ ಎಕ್ಸ್ಪ್ರೆಸ್ಸ್ ಪತ್ರಿಕೆಯಲ್ಲಿ ರಬೀಂದ್ರನಾಥ್ ಟ್ಯಾಗೂರ್ ರವರ "ವೇರ್ ದ ಮೈಂಡ್ ಈಸ್ ವಿತ್ಔಟ್ ಫ಼ಿಯರ್" ಪಧ್ಯ ಪ್ರಕಟವಾಗಿತ್ತು. ಇಷ್ಟೆಲ್ಲಾ ಆದರೂ ಕೂಡ ತುರ್ತುಪರಿಸ್ಥಿತಿ ಹಲವಾರು ವಿಧಗಳಿಂದ ಬೆಂಬಲವನ್ನು ಪಡೆದುಕೊಂಡಿತು. ಸಮಾಜ ಸುಧಾರಕರಾದ ವಿನೋಭ ಭಾವೆ, ಕೈಗಾರಿಕೋಧ್ಯಮಿಯಾದ ಜೆ.ಆರ್.ಡಿ.ಟಾಟಾ, ಬರಹಗಾರ ಖುಷವಂತ್ ಸಿಂಗ್ ಮತ್ತು ಇಂದಿರಾ ಗಾಂಧಿಯವರ ಆತ್ಮೀಯ ಗೆಳೆಯರಾದ ಒಡಿಶಾ ದ ಮುಖ್ಯಮಂತ್ರಿ ನಂದಿನಿ ಸತ್ಪತಿ ಇದಕ್ಕೆ ಬೆಂಬಲ ನೀಡಿದರು. ನತರ ಟಾಟಾ ಮತ್ತು ಸತ್ಪತಿ ತುರ್ತುಪರಿಸ್ಥಿತಿಯ ಬಗ್ಗೆ ವಿಷಾದವನ್ನು ವ್ಯಕ್ತ ಪಡಿಸಿದರೆ, ಕೆಲವರು ಗಾಂಧಿಯವರು ತಂದ ೨೦ಅಂಶಗಳ ಕಾರ್ಯಕ್ರಮದಿಂದ ಕ್ರುಷಿ ಉತ್ಪಾದನೆ, ಉತ್ಪಾದನಾ ಚಟುವಟಿಕೆಗಳ ಕಾರ್ಯ, ರಫ಼್ತು ಮತ್ತು ವಿದೇಶಿ ಹೂಡಿಕೆಗಳಲ್ಲಿ ಏರಿಕೆ ಕಂಡುಬಂದಿತು ಎಂದು ವಾದಿಸುತ್ತಾರೆ. ೧೯೬೦ ಮತ್ತು ೧೯೭೦ರಲ್ಲಿ ಹಿಂಧೂ ಮುಸ್ಲೀಂ ಸಮುಧಾಯ ಗಲಬೆಗಳು ಕಡಿಮೆಯಾದವು.

ಸಂಸ್ಕೃತಿ

[ಬದಲಾಯಿಸಿ]

ಸಾಹಿತ್ಯ

[ಬದಲಾಯಿಸಿ]
  • ರಾಹಿ ಮಸೂಮ್ ರಾಜಾ ರವರು ಕ್ವಾತ್ರ ಬಿ ಆರ್ಜೂ ಕಾದಂಬರಿಯಲ್ಲಿ ತುರ್ತುಪರಿಸ್ಥಿತಿ ಯನ್ನು ವಿಮರ್ಷಿಸಿದ್ದಾರೆ.
  • ರೋಹಿನ್ ಟನ್ ಮಿಸ್ಟ್ರಿ ರವರ ಎ ಫ಼ೈನ್ ಬ್ಯಾಲೆನ್ಸ್ ಮತ್ತು ಸಚ್ ಎ ಲಾಂಗ್ ಜರ್ನಿ ಯಲ್ಲಿ ತುರ್ತುಪರಿಸ್ಥಿತಿ ಯ ದೋಷಗಳನ್ನು ಕಾಣಬಹದು.
  • ಸಲ್ಮಾನ್ ರಶ್ದಿ ರವರ ಮಿಡ್ ನೈಟ್ ಚಿಲ್ದ್ರೆನ್ ಲ್ಲಿ ಇಂದಿರಾಗಾಂಧಿಯವರ ತುರ್ತುಪರಿಸ್ಥಿತಿ ಯ ಛಿತ್ರಣವನ್ನು ಕಾಣಬಹುದು. ಈ ಕಥೆಯಲ್ಲಿ ಸಲೀಂ ಸಿನಾಮ್ ನಾಯಕ, ಮೆಜಿಷಿಯನ್ ಗೆಟ್ಟೋ ಎಂಬ ಹಿಂದುಳಿದ ಪ್ರದೇಶದಲ್ಲಿ ವಾಸವಾಗಿರುತ್ತಾನೆ. ನ್ಯಾಷನಲ್ ಬ್ಯೂಟಿಫ಼ಿಕೇಷನ್ ಪ್ರೋಗ್ರಾಮ್ ನ ಸಲುವಾಗಿ ಈ ಸ್ಥಳವನ್ನು ನೆಲಸಮಗೊಳಿಸಲಾಗುತ್ತದೆ. ಇದು ಸಂಜಯ್ ಗಾಂಧಿಯವರು ದೆಹಲಿ ಯಲ್ಲಿ ಕೊಳಗೇರಿ ಜನರ ಸ್ಥಳಗಳನ್ನು ನಾಶ ಮಾಡಿದ ಪ್ರಕರಣವನ್ನು ಟೀಕಿಸುತ್ತದೆ ಮತ್ತು ಬಲವಂತವಾಗಿ ಜನರ ಮೇಲೆ ಹೇರಿದ ನಸ್ಬಂದಿ(ವ್ಯಾಸಕ್ಟಮಿ)ಕಾರ್ಯಕ್ರಮವನ್ನು ಸಹ ಈ ಕತೆಯಲ್ಲಿ ಕಾಣಬಹುದು.
  • ಚಾಣುಕ್ಯ ಸೇನ್ ರವರ ಬ್ರೂಟನ್ ಯು ಎಂಬ ಪುಸ್ತಕವು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿನ ದೆಹಲಿಯ ಜವಹಾರ್ ಲಾಲ್ ನೆಹರು ವಿಶ್ವವಿಧ್ಯಾಲಯದ ಪರಿಸ್ಥಿತಿಯನ್ನು ವಿವರಿಸುತ್ತದೆ.
  • ಎಮ್. ಮುಕುಂದನ್ ರವರ ಮಲಯಾಳಮ್ ಕಾದಂಬರಿ ಡೆಲ್ಲಿ ಕದಕಾಲ್(ದೆಹಲಿಯ ಕಥೆಗಳು) ಸಹ ತುರ್ತುಪರಿಸ್ಥಿತಿಯ ಕಾಲದಲ್ಲಾದ ದೋಷಗಳನ್ನು ಎತ್ತಿಹಿಡಿಯುತ್ತದೆ.

ಸಿನಿಮಾ

[ಬದಲಾಯಿಸಿ]
  • ಅಮ್ರಿತ್ ನಹತ್ ರವರು ಚಿತ್ರಿಸಿರುವ ಕಿಸ್ಸಾ ಕುರ್ಸಿಕಾ ಸಿನಿಮಾವು ಇಂದಿರಾಗಾಂಧಿಯವರ ತುರ್ತುಪರಿಸ್ಥಿತಿಯ ವಿಡಂಬನೆಯಾಗಿದೆ.
  • ೧೯೭೮ ರಲ್ಲಿ ಟಿ.ಎಸ್. ಜೋಹರ್ ರ ನಸ್ಬಂದಿ ಚಿತ್ರವು ತುರ್ತುಪರಿಸ್ಥಿತಿಯ ಬಗ್ಗೆ ಹೇಳುತ್ತದೆ.
  • ೧೯೮೦ ರಲ್ಲಿ ಚಿತ್ರಿಸಿದ ಸತ್ಯಜಿತ್ ರೇಸ್ ರವರ ಹಿರಾಕ್ ರಾಜಲ್ ದೇಶೀ, ಮಕ್ಕಳ ಹಾಸ್ಯ ಪ್ರಧಾನ ಚಿತ್ರವಾಗಿದ್ದು ತುರ್ತುಪರಿಸ್ಥಿತಿಯ ಅಪಹಾಸ್ಯವಾಗಿದೆ.
  • ಬಾಲು ಮಹೇಂದರ್ ನಿರ್ಮಾಣದ ಮಲಯಾಳಮ್ ನ ಯಾತ್ರಾ ಚಿತ್ರವು ತುರ್ತುಪರಿಸ್ಥಿತಿಯ ಸಮಯದಲ್ಲಾದ ಮಾನವ ಹಕ್ಕುಗಳ ಉಲ್ಲಂಘನೆಯ ಚಿತ್ರಣವನ್ನು ನೀಡುತ್ತದೆ.
  • ಮರಾಠಿ ಚಿತ್ರ ಶಾಲಾ ತುರ್ತುಪರಿಸ್ಥಿತಿಗೆ ಸಂಬಂದಿಸಿದ ವಿಷಯಗಳನ್ನು ಚರ್ಚಿಸುತ್ತದೆ.

ಸಂಬಂಧಿತ ಸಂಪರ್ಕ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. How Indira Gandhi came to the Emergency decisionRavi Visvesvaraya Sharada Prasad, JUN 26 2019
  2. MRS. GANDHI WINS COURT REVERSAL OF HER CONVICTIONBy WILLIAM BORDERSNOV. 8, 1975