ಸ್ಮೃತಿ ಇರಾನಿ

ವಿಕಿಪೀಡಿಯ ಇಂದ
Jump to navigation Jump to search
ಸ್ಮೃತಿ ಜ಼ುಬಿನ್ ಇರಾನಿ
Smriti Irani(c).jpg

ಹಾಲಿ
ಅಧಿಕಾರ ಸ್ವೀಕಾರ 
೨೬ ಮೇ ೨೦೧೪
ರಾಷ್ಟ್ರಪತಿ ಪ್ರಣಬ್ ಮುಖರ್ಜಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪೂರ್ವಾಧಿಕಾರಿ ಪಲ್ಲಮ್ ರಾಜು

ಹಾಲಿ
ಅಧಿಕಾರ ಸ್ವೀಕಾರ 
೨೦೧೩
ರಾಷ್ಟ್ರಪತಿ ರಾಜನಾಥ್ ಸಿಂಗ್

ಹಾಲಿ
ಅಧಿಕಾರ ಸ್ವೀಕಾರ 
೨೦೧೧
ವೈಯಕ್ತಿಕ ಮಾಹಿತಿ
ಜನನ ೨೩.೦೩.೧೯೭೬
ನವ ದೆಹಲಿ, ಭಾರತ
ರಾಜಕೀಯ ಪಕ್ಷ ಭಾರತೀಯ ಜನತಾ ಪಕ್ಷ
ಸಂಗಾತಿ(ಗಳು) ಜ಼ುಬಿನ್ ಇರಾನಿ
ವಾಸಸ್ಥಾನ ಮುಂಬಯಿ, ಮಹಾರಾಷ್ಟ್ರ, ಭಾರತ
ವೃತ್ತಿ ರಾಜಕಾರಣ
ಧರ್ಮ ಹಿಂದೂ ಧರ್ಮ

ಸ್ಮೃತಿ ಜ಼ುಬಿನ್ ಇರಾನಿ (ಹಿಂದೆ ಸ್ಮೃತಿ ಮಲ್ಹೋತ್ರ) ಭಾರತೀಯ ಸರ್ಕಾರದ ಜವಳಿ ಸಚಿವರು. ಇವರು ಮಾಜಿ-ರೂಪಸದರ್ಶಿ, ನಟಿ ಹಾಗು ನಿರ್ಮಾಪಕಿ.[೧] ಭಾರತೀಯ ಜನತಾ ಪಕ್ಷದ ರಾಜ್ಯ ಸಭೆಯ ಸದಸ್ಯರಾಗಿ ಈಗ ನರೇಂದ್ರ ಮೋದಿಯವರ ಸಂಪುಟದಲ್ಲಿ ಸಚಿವೆಯಾಗಿದ್ದಾರೆ.[೨]

ಬಾಲ್ಯ ಮತ್ತು ಶಿಕ್ಷಣ[ಬದಲಾಯಿಸಿ]

ಸ್ಮೃತಿ ಇರಾನಿ ಅವರ ತಾಯಿ ಶಿಬಾನಿ ಮತ್ತು ತಂದೆ ಅಜಯ್ ಕುಮಾರ್ ಮಲ್ಹೋತ್ರಾ. ಅವರು ಮೂವರು ಸಹೋದರಿಯರಲ್ಲಿ ಹಿರಿಯರಾಗಿದ್ದಾರೆ. ಅವರು ನವದೆಹಲಿಯ ಹೋಲಿ ಚೈಲ್ಡ್ ಆಕ್ಸಿಲಿಯಮ್ ಶಾಲೆಯಲ್ಲಿ ೧೨ನೇ ತರಗತಿ ಪೂರೈಸಿದರು. ನಂತರ ಅವರು ದೆಹಲಿ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಓಪನ್ ಅಲ್ಲಿ ಕಲಿಕೆಗೆ ಸೇರಿಕೊಂಡರು.[೩][೪][೫]

ರೂಪದರ್ಶಿ ಹಾಗೂ ನಟನೆ[ಬದಲಾಯಿಸಿ]

ಸ್ಮೃತಿ ಇರಾನಿ ಸೌಂದರ್ಯ ಸ್ಪರ್ಧೆ ಮಿಸ್ ಇಂಡಿಯಾ ೧೯೯೮ರಲ್ಲಿ ಭಾಗವಹಿಸಿದ್ದರು.[೬][೭][೮] ೧೯೯೮ರಲ್ಲಿ "ಸಾವನ್ ಮೇ ಲಗ್ ಗಯಿ ಆಗ್" ಆಲ್ಬಂನಲ್ಲಿ ನಟಿಸಿದರು. ೨೦೦೦ನೆ ಇಸವಿಯಲ್ಲಿ, ಆತಿಶ್ ಮತ್ತು ಹಮ್ ಹೈ ಕಲ್ ಆಜ್ ಔರ್ ಕಲ್ ಅವರೊಂದಿಗೆ ಸ್ಟಾರ್ ಪ್ಲಸ್ನಲ್ಲಿ ಪ್ರಸಾರವಾಗುತ್ತಿದ್ದ ಟಿವಿ ಸರಣಿಯಲ್ಲಿ ನಟಿಸಿದ್ದರು. ನಾಲ್ಕು ಭಾರತೀಯ ಟೆಲಿ ಪ್ರಶಸ್ತಿಗಳನ್ನು ಮತ್ತು ಅತ್ಯುತ್ತಮ ನಟಿಗಾಗಿ ಸತತ ಐದು ಬಾರಿ ಭಾರತೀಯ ಟೆಲಿವಿಷನ್ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದಾರೆ. ೨೦೧೨ರಲ್ಲಿ ಅವರು ಬಂಗಾಳಿ ಚಲನಚಿತ್ರ ಅಮೃತಾದಲ್ಲಿ ಕೆಲಸ ಮಾಡಿದರು.[೯]೨೦೦೧ ರಲ್ಲಿ, ಅವರು ಝೀ ಟಿವಿಯ ರಾಮಾಯಣದಲ್ಲಿ ಮಹಾಕಾವ್ಯದ ಪಾತ್ರವಾದ ಸೀತಾ ಪಾತ್ರವನ್ನೂ ನಿರ್ವಹಿಸಿದರು. ೨೦೦೬ರಲ್ಲಿ ಇರಾನಿ ಅವರು ಬಾಲಾಜಿ ಟೆಲಿಫಿಲ್ಮ್ಸ್ನ ಮುಖಪುಟದಲ್ಲಿ ತೆರೆ ಕಂಡ ಥೋಡಿ ಸಿ ಸಿ ಜಮೀನ್ ತೋಡ ಸ ಆಸ್ಮಾನ್ ಚಿತ್ರದ ಸಹ ನಿರ್ಮಾಪಕರಾಗಿದ್ದರು.[೧೦]

ರಾಜಕೀಯ[ಬದಲಾಯಿಸಿ]

ಸ್ಮೃತಿ ಇರಾನಿ ೨೦೦೩ರಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಸೇರಿದರು. ಅವರು ೨೦೦೪ರಲ್ಲಿ ಮಹಾರಾಷ್ಟ್ರ ಯೂತ್ ವಿಂಗ್ನ ಉಪಾಧ್ಯಕ್ಷರಾಗಿದ್ದರು.[೧೧]ಜುಲೈ ೨೦೧೬ರ ಕ್ಯಾಬಿನೆಟ್ ಪುನರ್ರಚನೆಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಬದಲಾಗಿ ಟೆಕ್ಸ್ಟೈಲ್ಸ್ ಸಚಿವಾಲಯಕ್ಕೆ ಅವರಿಗೆ ಅಧಿಕಾರ ನೀಡಲಾಯಿತು. ಮಾಜಿ ಸಚಿವ ಎಂ.ವೆಂಕಯ್ಯ ನಾಯ್ಡು ಅವರು ಉಪಾಧ್ಯಕ್ಷ ಚುನಾವಣೆಯಲ್ಲಿ ಪಾಲ್ಗೊಳ್ಳಲು ಸಚಿವಾಲಯದಿಂದ ರಾಜಿನಾಮೆ ನೀಡಿದಾಗ ಜುಲೈ ೨೦೧೭ರಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹೆಚ್ಚುವರಿ ಅಧಿಕಾರವನ್ನು ಅವರಿಗೆ ನೀಡಲಾಯಿತು. ೨೦೧೦ರ ಆರಂಭದಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಇರಾನಿ ನೇಮಕಗೊಂಡರು ಮತ್ತು ಜೂನ್ ೨೪ರಂದು ಅವರನ್ನು ಬಿಜೆಪಿ ಮಹಿಳಾ ವಿಭಾಗದ ಬಿಜೆಪಿ ಮಹಿಳಾ ಮೋರ್ಚಾದ ಅಖಿಲ ಭಾರತ ಅಧ್ಯಕ್ಷೆಯಾಗಿ ನೇಮಿಸಲಾಯಿತು. [೧೨] ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿಯವರ ವಿರುದ್ಧ ೨೦೧೪ರ ಸಾರ್ವತ್ರಿಕ ಚುನಾವಣೆಯಲ್ಲಿ ಇರಾನಿ ಸ್ಪರ್ಧಿಸಿದ್ದಾರೆ. ೨೬ ಮೇ ೨೦೧೪ ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿ ನೇಮಕಗೊಂಡರು.

ಉಲ್ಲೇಖಗಳು[ಬದಲಾಯಿಸಿ]