ನಾಯರ್ ಕಲ್ಲು
ನಾಯರ್ ಕಲ್ಲು ಎನ್ನುವ ಸ್ಥಳವು ಸುಳ್ಯ ತಾಲೂಕಿನ ಅಮರ ಮುಡ್ನೂರು[೧] ಗ್ರಾಮದ ಪೂರ್ವ ಭಾಗದಲ್ಲಿದೆ. ಪೈಲಾರು[೨] ಎನ್ನುವ ಸ್ಥಳಕ್ಕೆ ಸಮೀಪವರ್ತಿಯಾಗಿದೆ.
ಇತಿಹಾಸ
[ಬದಲಾಯಿಸಿ]ಚಾತು ನಾಯರ್ ಎನ್ನುವ ಹೆಸರು ಮಲೆಯಾಳ ಭಾಷೆಯಲ್ಲಿ ಐತಿಹಾಸಿಕ ಪುರುಷನೊಬ್ಬನ ಹೆಸರಾಗಿದೆ. ಇವನು ಸುಳ್ಯ ಕೋಡಿ ಕೊಟ್ಟಾರದಲ್ಲಿದ್ದು ಆಡಳಿತ ನಡೆಸಿದ್ದನು. ತನ್ನ ಜೀವಿತದ ಕೊನೆಯಲ್ಲಿ ಉಲ್ಲಾಕುಳು[೩] ದೈವಗಳಿಂದ ಉಬರಡ್ಕದ ಹೊಳೆಯಲ್ಲಿ ಮಾಯಕನಾದನು. ಆ ಬಳಿಕ ದೈವನಾದನು. ಇವನು ದೈವನಾದ ಬಳಿಕ ಪ್ರಸರಣ ಹೊಂದಿ ಸುಳ್ಯ ಸೀಮೆಯಲ್ಲಿ ಆರಾಧನೆಯಾಗುವ ದೈವವಾಗಿದ್ದಾನೆ. ಉಬರಡ್ಕದಲ್ಲಿ ಮಾಯಕ ಸೇರಿ, ದೈವವಾದ ಚಾತು ನಾಯರ್ [೪]ತಾನು ಆಡಳಿತ ನಡೆಸುತ್ತಿದ್ದ ಬೀಡು ಕೇಂದ್ರ ನೆಲೆಗಳಲ್ಲಿ ಆರಾಧನೆ ಪಡೆಯುತ್ತಾನೆ. ಸುಳ್ಯ ಕೋಡಿಯಿಂದ ಹೊರಟ ಚಾತು ನಾಯರ್ ಸುಳ್ಯದ ಕಾನತ್ತಿಲ[೫], ತೊಡಿಕ್ಕಾನ, ಮರ್ಕಂಜಕ್ಕೆ ಬರುತ್ತಾನೆ. ಮರ್ಕಂಜದಲ್ಲಿ ನೆಲೆಯಾದ ಅಮರ ಮುಡ್ನೂರು ಚೊಕ್ಕಾಡಿಗೆ ಬಂಟಮಲೆ[೬]ಯ ಮೂಲಕ ಬಂದು ಆಯಾಸಗೊಂಡು ಬಂದು ಅಮರ ಮುಡ್ನೂರಿಗೆ ಸೇರಿದ ಎತ್ತರದ ಬೆಟ್ಟದ ಕಲ್ಲೊಂದರಲ್ಲಿ ಕುಳಿತು ಪಶ್ಚಿಮಾಭಿಮುಖವಾಗಿ ನೋಡುತ್ತಾನೆ. ಅಮರ ಮುಡ್ನೂರಿಗೆ ಪ್ರವೇಶವಾಗಿ, ಪ್ರಥಮತಃ ಕುಳಿತ ಕಲ್ಲೇ ಮುಂದೆ ನಾಯರ್ ಕಲ್ಲೆಂದು ಕರೆದುಕೊಂಡಿತು. ಈ ನಾಯರ್ ಕಲ್ಲೆಂದು ಕರೆದುಕೊಳ್ಳುವ ಸ್ಥಳದಲ್ಲಿ ಕೆಲ ಗೌಡ ಕುಟುಂಬಗಳು ನೆಲೆಯಾಗಿದ್ದು, ಕ್ಷೇತ್ರಾಧೀಶನೆಂದು ಕರೆದುಕೊಳ್ಳುವ ಈ ನಾಯರ್ ದೈವವನ್ನು ಇವರು ಆಚರಿಸುತ್ತಾರೆ. ನಾಯರ್ ಕಲ್ಲಿಗೆ ಇವರು ದೈವ ಮಹಾತ್ಮೆಯ ಹಿನ್ನೆಲೆಯಲ್ಲಿ ವಿಶೇಷ ಗೌರವವನ್ನು ಶ್ರದ್ಧೆಯನ್ನು ತೋರಿಸುತ್ತಾರೆ. ಸೂತಕ ಇತ್ಯಾದಿ ಮೈಲಿಗೆಯವರು ಈ ಕಲ್ಲಿನ ಹತ್ತಿರವಾಗಲೀ, ಹತ್ತುವ ಸಾಹಸವನ್ನಾಗಲೀ ಮಾಡಬಾರದೆನ್ನುವ ಕಟ್ಟಳೆಗಳಿವೆ.[೭]
ಆರಾಧನೆ
[ಬದಲಾಯಿಸಿ]- ದೀಪಾವಳಿ
- ಮಕರ ಸಂಕ್ರಾಂತಿ
- ನವರಾತ್ರಿ
- ಶಿವರಾತ್ರಿ
ಕೃಷಿ
[ಬದಲಾಯಿಸಿ]ಸಮುದಾಯ
[ಬದಲಾಯಿಸಿ]ಭಾಷೆಗಳು
[ಬದಲಾಯಿಸಿ]ಉಲ್ಲೇಖ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ https://timesofindia.indiatimes.com/topic/Amara-Mudnur-village
- ↑ http://sullia.suddinews.com/archives/351666
- ↑ http://shodhganga.inflibnet.ac.in/handle/10603/131824
- ↑ http://shodhganga.inflibnet.ac.in/handle/10603/131824
- ↑ "ಆರ್ಕೈವ್ ನಕಲು". Archived from the original on 2021-01-15. Retrieved 2019-02-10.
- ↑ http://www.varthabharati.in/article/karavali/55126
- ↑ ತುಳುನಾಡಿನ ಸ್ಥಳನಾಮಧ್ಯಯನ , ರಘುಪತಿ ಕೆಮ್ತೂರು, ಪ್ರೊ. ಟಿ. ಮುರುಗೇಶಿ, ಚರಿತ್ರೆ ಮತ್ತು ಪುರಾತತ್ವ ಶಾಸ್ತ್ರ ವಿಭಾಗ ಎಂ ಸ್ ಆರ್ ಎಸ್ ಕಾಲೇಜು ಶಿರ್ವ ಉಡುಪಿ. ಪುಟ ಸಂಖ್ಯೆ ೧೯೭,
- ↑ ಪೂವಪ್ಪ ಕಣಿಯೂರು (೨೦೧೬). ಸ್ಥಳನಾಮಗಳು ಮತ್ತು ಐತಿಹ್ಯಗಳು. ಸುಳ್ಯ: ಕನ್ನಡ ಸಂಘ,ನೆಹರು ಮೆಮೋರಿಯಲ್ ಕಾಲೇಜು. pp. ೨೫-೨೬.