ನಂದಿ ಬೆಟ್ಟ (ಭಾರತ)
ನಂದಿ ಬೆಟ್ಟ
ನ೦ದಿ ದುರ್ಗ ನ೦ದಿ ದುರ್ಗ ಹಿಲ್ಸ್ | |
---|---|
town |
ನಂದಿ ಬೆಟ್ಟ ಅಥವಾ ನಂದಿ ದುರ್ಗ ಒಂದು ಪುರಾತನ ಕಾಲದ ಕೋಟೆ, ಇದು ಭಾರತದ ದಕ್ಷಿಣಭಾಗದಲ್ಲಿರುವ ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇರುವ ಗಿರಿಧಾಮ. ಚಿಕ್ಕಬಳ್ಳಾಪುರ ಪಟ್ಟಣದಿಂದ ೧೦ ಕಿ.ಮಿ ದೂರದಲ್ಲಿ ಹಾಗು ಬೆಂಗಳೂರು ನಗರದಿಂದ ಸುಮಾರು ೪೫ ಕಿ.ಮಿ ದೂರದಲ್ಲಿದೆ. ಈ ಬೆಟ್ಟವು ಮೂರು ಪಟ್ಟಣಗಳ ಮಧ್ಯೆ ನೆಲೆಸಿದೆ.
ಇತಿಹಾಸ
- ಅವುಗಳೆಂದರೆ, ನಂದಿ ಹಳ್ಳಿ, ಮುದ್ದೇನಹಳ್ಳಿ ಹಾಗು ಕಣಿವೆನಾರಾಯಣಪುರ,ಮುಂಬರುವ ದಿನಗಳಲ್ಲಿ ಈ ಪ್ರದೇಶದಲ್ಲಿ ಶ್ರೀ ಸತ್ಯ ಸಾಯಿ ಬಾಬಾ ವಿಶ್ವವಿದ್ಯಾನಿಲಯ ಹಾಗು ವೈದ್ಯಕೀಯ ಕಾಲೇಜು, ಇಂಡಿಯನ್ ಇನಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮುದ್ದೇನಹಳ್ಳಿ, ೬೦೦ ಕೋಟಿಯ ವಿಶ್ವೇಶ್ವರಯ್ಯ ರಇನಸ್ಟಿಟ್ಯೂಟ್ ಆಫ್ ಅಡ್ವಾನ್ಸ ಟೆಕ್ನಾಲಜಿ, ಹಾಗು ೭೦ ಕೋಟಿಯ "ಸಿಲ್ಕ್ ಸಿಟಿ" ಸ್ಥಾಪಿತವಾಗಲಿದೆ. ಇತ್ತೀಚೆಗೆ ಬಹುಕೋಟಿ ವೆಚ್ಚದಲ್ಲಿ ನಂದಿ ಬೆಟ್ಟವನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ.
- ಇದನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡಲು ವೈಯಕ್ತಿಕ ಹಾಗು ಸಾರ್ವಜನಿಕ ಪಾಲುದಾರಿಕೆಯ ಮೂಲಕ ತೋಟಗಾರಿಕಾ ವಿಭಾಗವು ಗಿರಿಧಾಮದಲ್ಲಿ ಒಂದು ಆಹಾರ ಮಳಿಗೆಯನ್ನು ಸ್ಥಾಪಿಸಲು ಯೋಜನೆ ರೂಪಿಸಿತು, ಅದು ಸಿಂಗಾಪುರದಲ್ಲಿ ಇರುವ ಒಂದು ಕೋಟಿ ಬಂಡವಾಳದ ಆಹಾರ ಮಳಿಗೆಯ ಮಾದರಿಯದ್ದಾಗಿತ್ತು.
- ವೈವಿಧ್ಯಪೂರ್ಣವಾದ ಸಸ್ಯಹಾರಿ ಹಾಗು ಬೇರೆ ಖಂಡಗಳ ಆಹಾರ ಪದಾರ್ಥಗಳು, ಪಾನೀಯಗಳು, ಬೇಕರಿ ಪದಾರ್ಥಗಳು, ಐಸ್ ಕ್ರೀಮ್ ಗಳು, ಹಾಗು ತಾಜಾ ಹಣ್ಣಿನ ರಸ ಇಲ್ಲಿ ದೊರೆಯುತ್ತವೆ. ಮೂರೂವರೆ ಎಕರೆ ಪ್ರದೇಶದಲ್ಲಿ ೩೦ ಲಕ್ಷ ಬೆಲೆಬಾಳುವ ಸಂಗೀತ ರಂಗಮಂದಿರದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಅದರಲ್ಲಿ ನೂರಾರು ಯುಕಲಿಪ್ಟಸ್ ಮರಗಳು ಹಾಗು ಮಳೆ ಮರಗಳು ಇವೆ.[೧][೨][೩] ಅಲ್ಲದೆ, ತೋಟಗಾರಿಕಾ ಇಲಾಖೆಯು ೧೪೦ ಎಕರೆ ಯಿಂದ ಕಲುಷಿತವಾಗದ ನಂದಿ ಬೆಟ್ಟದಲ್ಲಿ / ಮುದ್ದೇನಹಳ್ಳಿ ಪ್ರದೇಶದಲ್ಲಿ ಅತೀ ದೊಡ್ಡ ವಿದೇಶಿ ಗಿಡಗಳ ಉದ್ಯಾನವನ್ನು ಅಭಿವೃದ್ಧಿಗೊಳಿಸಲುಆಧುನಿಕತೆ ನಿರ್ಧರಿಸಿತು.[೪][೫][೬][೭][೮] ಬೆಟ್ಟವು ಸಾಂಪ್ರದಾಯಿಕವಾಗಿ ಅರ್ಕಾವತಿ ನದಿಯ ಮೂಲದಲ್ಲಿ ಕಂಡುಬರುತ್ತದೆ.
ಶಬ್ಧರಚನೆ
[ಬದಲಾಯಿಸಿ]- ನಂದಿ ಬೆಟ್ಟದ ಹೆಸರಿನ ಮೂಲದ ಬಗ್ಗೆ ಹಲವಾರು ಕಥೆಗಳಿವೆ. ಚೋಳರ ಕಾಲದಲ್ಲಿ, ನಂದಿ ಬೆಟ್ಟವನ್ನು ಆನಂದ ಗಿರಿ ಎಂದು ಕರೆಯಲಾಗುತ್ತಿತ್ತು, ಅದರ ಅರ್ಥ ಸಂತೋಷದಿಂದ ಕೂಡಿದ ಬೆಟ್ಟ ಎಂದಾಗಿತ್ತು. ಮತ್ತೊಂದು ಶಾಸನದ ಪ್ರಕಾರ ಪುರಾತನ ಕಾಲದ ಸುಮಾರು ೧೦೦೦ ವರ್ಷಗಳ ಹಿಂದಿನ ನಂದಿ ದೇವಾಲಯ ಬೆಟ್ಟದ ಮೇಲೆ ಇರುವುದರಿಂದ ಬೆಟ್ಟಕ್ಕೆ ನಂದಿ ಬೆಟ್ಟ ಎಂಬ ಹೆಸರು ಬಂದಿದೆ. ಪುರಾತನ ಕಾಲದ ಶಿವ ಮತ್ತು ಪಾರ್ವತಿಯರ ದೇವಾಲಯ ಈ ಬೆಟ್ಟವನ್ನು ಮತ್ತಷ್ಟು ಸುಂದರಗೊಳಿಸಿದೆ.
- ಯೋಗ ನಂದೀಶ್ವರನೆಂಬ ತಪಸ್ಸಿಯು ತಪಸ್ಸು ಮಾಡಿದ ನಂತರ ಬೆಟ್ಟಕ್ಕೆ ಈ ಹೆಸರು ಬಂತೆಂದು ಇನ್ನೊಂದು ಕಥೆ ಹೇಳುತ್ತದೆ. ಆಡಳಿತಗಾರನಾಗಿದ್ದ ಟಿಪ್ಪು ಸುಲ್ತಾನನು ಕೋಟೆ ಕಟ್ಟಿರುವುದರಿಂದ, ನಂದಿಯು ನಂದಿದುರ್ಗ(ಕೋಟೆ) ಎಂಬ ಹೆಸರಿನಿಂದ ಕರೆಯಲ್ಪಟ್ಟಿತ್ತು. ಈ ಬೆಟ್ಟವು ನಿದ್ರಿಸುತ್ತಿರುವ ವೃಷಭ(ನಂದಿ) ದಂತೆ ಕಾಣುವುದರಿಂದ ಬಹುಶಃ ಈ ಬೆಟ್ಟಕ್ಕೆ ನಂದಿ ಬೆಟ್ಟ ಎಂಬ ಹೆಸರು ಬಂದಿರಬಹುದು.[೯]
ಭೂಗೋಳಶಾಸ್ತ್ರ
[ಬದಲಾಯಿಸಿ]ನಂದಿಬೆಟ್ಟ ಸಮುದ್ರಮಟ್ಟದಿಂದ ೪೮೫೧ ಅಡಿ (೧೪೭೮ ಮೀ) ಎತ್ತರದಲ್ಲಿದೆ. ಇದು ಭಾರತದ ಎರಡನೆಯ ಅತ್ಯಂತ ದೊಡ್ಡ ಬೆಟ್ಟ. ಹೊಸದಾಗಿ ನಿರ್ಮಾಣಗೊಂಡಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿದೆ. ಜೊತೆಗೆ, ನಂದಿಬೆಟ್ಟವು ದೇವನಹಳ್ಳಿ ನಗರದ ಹತ್ತಿರದ ರಾಷ್ಟ್ರೀಯ ಹೆದ್ದಾರಿ (ಎನ್ ಹೆಚ್-೭)ಯಿಂದ ೨೦ ಕಿ.ಮಿ ದೂರದಲ್ಲಿದೆ. ಆದ್ದರಿಂದ ನಂದಿ ಬೆಟ್ಟದ ಪ್ರದೇಶದಲ್ಲಿ ಅನೇಕ ಮನೆಗಳು ಮತ್ತು ಅಂಗಡಿಗಳು ವೇಗವಾಗಿ ಬೆಳೆಯುವ ಅವಕಾಶಗಳು ಹೆಚ್ಚಾಗಿವೆ. ಬೆಂಗಳೂರಿನ ಅಮೆಚೂರ್ ಹಮ್ ರೇಡಿಯೋ ಆಪರೇಟರ್‌ಗಳ ಮರು ಪ್ರಸಾರಣ ಕೇಂದ್ರವು ನಂದಿಬೆಟ್ಟದ ಮೇಲಿದೆ, ಇದು ತಲುಪುವ ಅಥವಾ ಪ್ರಸಾರಮಾಡುವ ಮತ್ತು ಹಿಡಿದಿಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ (ರಿಪೀಟರ್ 145.700 (Rx) ಮೈನಸ್ 600 (Tx) ಕಾಲ್‌ಸೈನ್ VU2RSB ನ ಜೊತೆ)
Gaurididanur gf top.jpg|thumb|left|200px|ನಂದಿಬೆಟ್ಟದ ಮೇಲೆ]]
- ನಂದಿದುರ್ಗವು ಸಾಂಪ್ರದಾಯಿಕವಾಗಿ ಹೆಸರಾಗಿದೆ, ಹಾಗೂ ೧೭೯೧ರ ಅಕ್ಟೋಬರ್ ೧೯ರಂದು ಮೈಸೂರಿನ ಟಿಪ್ಪು ಸುಲ್ತಾನ್ ಹಾಗೂ ಕಾರ್ನ್‌ವಾಲಿಸ್ ಅವರ ನಡುವೆ ನಡೆದ ಮೊದಲ ಯುದ್ಧದಿಂದ ಹೆಚ್ಚು ಪ್ರಖ್ಯಾತಿಯಾಗಿದೆ. ಮುತ್ತಿಗೆಯ ವಿವರಣೆಯು ಬ್ರೌನೆಯ ವರ ಹಿಸ್ಟರಿ ಆಫ್ ಸ್ಕಾಟ್‌ಲ್ಯಾಂಡ್ [೧೦] ಇದರಲ್ಲಿ ನಮೂದಿತವಾಗಿದೆ ಮತ್ತು 71ನೆಯ ಹೈಲ್ಯಾಂಡರ್ಸ್‌ನಲ್ಲೂ ದಾಖಲೆಯಾಗಿದೆ.[೧೧]
NUNDYDROOG, a celebrated fortress and country of Hindostan, in the province of Mysore. The former is built on the summit of a rock, about 1700 feet high, three-fourths of its circumference being inaccessible. Our forces took it by storm in 1791, after a three weeks' siege. It stands in long. 77° 53' E.,and lat. 13° 22' N.
— London Encyclopaedia, 1829[೧೨]
- ನಂತರದಲ್ಲಿ ಬ್ರಿಟೀಷ್ ರಾಜ್ ಅಧಿಕಾರಿಗಳಿಗೆ ಬೇಸಿಗೆ ತಂಗುದಾಣವಾಯಿತು. ಫ್ರಾನ್ಸಿಸ್ ಕನಿಂಗ್‌ಹ್ಯಾಮ್ ಅವರು ಸರ್ ಮಾರ್ಕ್ ಕಬ್ಬನ್ ಅವರಿಗೊಂದು ಬೇಸಿಗೆಯಲ್ಲಿ ವಾಸಮಾಡಲು ಮನೆ ನಿರ್ಮಿಸಿದನು.
...this droog, one now used as a hotel, built by General Cubbon, sometime British resident; but the rock has a bad reputation for malaria, and except in the very dry months is shunned by visitors, in spite of its, to the senses, delightful climate
— Lt. Gen. E F Burton[೧೩]
- ಬೆಟ್ಟದ ಮೇಲಿನ ಹವಾಗುಣವು ತೋಟಗಾರಿಕೆ ಮಾಡುವವರಿಗೆ ಅನುಕೂಲ ಹಾಗೂ ಆಸಕ್ತಿ ಉಂಟುಮಾಡುವಂತಹದಾಗಿದೆ. ಪ್ರಯೋಗಾತ್ಮಕ ತೋಟದಲ್ಲಿ ಹಲವಾರು ಬಗೆಯ ಗಿಡಗಳನ್ನು ಪರಿಚಯಿಸಲಾಗಿದೆ. ಫರ್ಮಿಂಗರ್‌ನ ಕೈಬರಹದ ಟಿಪ್ಪಣಿಯಲ್ಲಿರುವಂತೆ ಅನೋನಾ ದ ಹಲವಾರು ತಳಿಗಳನ್ನು ಈ ತೋಟದಲ್ಲಿ ಬೆಳೆಸಲಾಗಿದೆ ಹಾಗೂ ಇದರಲ್ಲಿ ಹೈಪರಿಕಮ್ ಮೈಸೊರೆನ್ಸ್ ನ ವೈಶಿಷ್ಟ್ಯವನ್ನು ಸಹ ತಿಳಿಸಲಾಗಿದೆ:[೧೪]
H. mysorense.—An ornamental bush indigenous to the Western Ghauts, but rarely found in gardens. It is domesticated, or wild, in the Fort at Nandidroog, the latter being situated on the top of an isolated hill on the plateau of Mysore at an elevation of 4,850 feet. This is mentioned, as curiously enough, one has to travel more than a hundred miles towards the Western Ghauts, before the plant is met with in the wild state again. Fertile seed has never been secured. The fine yellow flowers are three inches across. Only suitable for the shrubbery in hill gardens.
— Burns, 1930[೧೪]
- ಬೆಂಗಳೂರಿನ ಸಮೀಪದ ನಂದಿ ಬೆಟ್ಟದ ಹತ್ತಿರದಲ್ಲಿ ಮೊದಲಬಾರಿಗೆ ಆಲೂಗಡ್ಡೆಯನ್ನು ಬೆಳೆಯುವುದನ್ನು ಸಸ್ಯಶಾಸ್ತ್ರಜ್ಞ ಬೆಂಜಮಿನ್ ಹೈನಸ್ ಅವರು ಕರ್ನಲ್ ಕುಪ್ಪೇಜ್ ಅವರ ಮುಖಾಂತರ ಪರಿಚಯಿಸಿದರು. ಅವರು ಬೀಜಗಳನ್ನು ಸೇಂಟ್ ಹೆಲೆನಾ ಅವರಿಂದ ತಂದರು, ಮತ್ತು ಅವು ಮದ್ರಾಸ್‌ನಿಂದ ಪೂರೈಕೆಯಾಗುತ್ತವೆ, ಅದರಲ್ಲೂ ಬೆಂಗಾಲ್‌ನಲ್ಲಿ ಬೆಳೆದವಕ್ಕೆ ಹೆಚ್ಚು ಆದ್ಯತೆ ಇದೆ.[೧೫]
ಅಭಿವ್ರ ದ್ದಿ
[ಬದಲಾಯಿಸಿ]- ನಂದಿಬೆಟ್ಟದ ಸುತ್ತಮುತ್ತ ರಿಯಲ್ ಎಸ್ಟೇಟ್ ಬೆಳವಣಿಗೆ ತೀವ್ರತರವಾಗಿದೆ ಏಕೆಂದರೆ ಇಲ್ಲಿಗೆ ಹತ್ತಿರವಿರುವ ದೇವನಹಳ್ಳಿಯ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಬಟ್ಟೆಯ ಉದ್ಯಮದ ಹೆಸರಾದ ದೊಡ್ಡಬಳ್ಳಾಪುರ, ಅಲ್ಲದೆ ಮುದ್ದೇನಹಳ್ಳಿ-ಕಣಿವೆರಾಯನ ಪುರ ಪ್ರದೇಶಗಳು, ಮುಂಬರುವ ದಿನಗಳಲ್ಲಿ ಐಐಟಿ ಮುದ್ದೇನಹಳ್ಳಿ, ಶ್ರೀ ವ್ಹಿ. ಎಸ್ ಯೂನಿವರ್ಸಿಟಿ, ಮತ್ತು ಶ್ರೀ ಸತ್ಯ ಸಾಯಿಬಾಬಾ ಯೂನಿವರ್ಸಿಟಿಯೂ ಸೇರಿದಂತೆ ಹಲವಾರು ವಿದ್ಯಾಸಂಸ್ಠೆಗಳು ಸ್ಥಾಪನೆಯಾಗುವ ಯೋಜನೆಗಳಿದ್ದು ಇದು ಒಂದು ಶೈಕ್ಷಣಿಕ ಕೇಂದ್ರವಾಗುವ ಸಾಧ್ಯತೆಗಳು ಇವೆ.[೧೬]
- ನಂದಿಬೆಟ್ಟದ ಕೆಳಗೆ ವಿಸ್ತಾರವಾಗಿ ಚಾಚಿಕೊಂಡಿರುವ ೩೦೦ ಎಕರೆ ಜಾಗದಲ್ಲಿ ೧೦೦೦ ಕೋಟಿವೆಚ್ಚದ ಪ್ರೆಸ್ಟೀಜ್ ಗಲ್ಫ್‌ಶೈರ್ ರಿಯಲ್ ಎಸ್ಟೇಟ್ ಯೋಜನೆ ತಯಾರಾಗಿದೆ, ಇಲ್ಲಿಂದ ವಿಮಾನ ನಿಲ್ದಾಣಕ್ಕೆ ೧೦ ನಿಮಿಷಗಳು ಚಲಿಸಬೇಕು ಹಾಗೂ PGA ಗುಣಮಟ್ಟದ ಗಾಲ್ಫ್ ಕೋರ್ಸ್ ಮತ್ತು ೫-ಸ್ಟಾರ್ ಹೋಟೆಲ್ ಕೂಡಾ ಅತಿ ಸಮೀಪದಲ್ಲಿವೆ.[೧೭] QVC ರಿಯಾಲಿಟಿಯ ಮುಖ್ಯಸ್ಠ ಪ್ರಕಾಶ್ ಗುರ್ಬಾಕ್ಸಾನಿಯವರು ನಂದಿ ಹಿಲ್ಸ್ ಯೋಜನೆಯ ಒಂದು ಭಾಗವಾದ ಅತ್ಯುತ್ತಮವಾದ ಮಹಲುಗಳನ್ನು ನಿರ್ಮಿಸಲು ೧೦೦ ಮಿಲಿಯನ್ ಡಾಲರ್‌ಗಳಷ್ಟು ಮೂಲಹಣವನ್ನು ಪಡೆದಿದ್ದಾರೆ.
ಪ್ರವಾಸೋದ್ಯಮ
[ಬದಲಾಯಿಸಿ]ಬೆಟ್ಟಗಳು ಈಗ ಬೇಸಿಗೆಯ ಪ್ರವಾಸಿ ತಾಣಗಳಾಗಿ ಜನಪ್ರಿಯವಾಗಿವೆ. ರಾಜ್ಯದ ತೋಟಗಾರಿಕಾ ಇಲಾಖೆಯು ಪ್ರವಾಸಿಗಳಿಗಾಗಿ ಕೈದೋಟವನ್ನು ನಿರ್ವಹಿಸುತ್ತಿದೆ. ಯಾವಾಗಲೂ ಪ್ರವಾಸಿಗಳಿಂದ ತುಂಬಿದ ವಾತಾವರಣವಿರುತ್ತದೆ ಜೊತೆಯಲ್ಲಿ ಸಣ್ಣ ಸಮಸ್ಯೆಗಳಾದ ಕಸ ಎಸೆಯುವುದು, ಗಲಾಟೆ ಮತ್ತು ಭೌತಿಕ ತೊಂದರೆಗಳಿವೆ
ಜೀವವೈವಿಧ್ಯತೆ
[ಬದಲಾಯಿಸಿ]- ಸಸ್ಯಗಳ ಬೆಳವಣಿಗೆಯಲ್ಲಿ ಇತರ ಎತ್ತರದ ಬೆಟ್ಟಗಳಲ್ಲಿರುವಂತಹ ವೈಶಿಷ್ಟ್ಯತೆಗಳು ಇಲ್ಲೂ ಇವೆ. ಕೋಟೆಯ ಒಳಗೆ ಶಿಖರದಲ್ಲಿ, ಬಹಳಷ್ಟು ದೊಡ್ಡ ಮರಗಳು, ವಿದೇಶಿ ಸಸ್ಯಗಳು ಬೆಳೆದಿವೆ ಉದಾಹರಣೆಗೆ ನೀಲಗಿರಿ ಮತ್ತು ಕಾಫೀ ಅರೆಬಿಕಾ ಜೊತೆಯಲ್ಲಿ ಕೆಲ ದೇಸಿ ತಳಿಗಳು ಸೇರಿವೆ. ಈ ಕಾಡು ಮೋಡಗಳು ಸಾಂದ್ರೀಕರಿಸುವಲ್ಲಿ ಸಹಕಾರಿಯಾಗಿವೆ ಮತ್ತು ಪ್ರತಿದಿನ ಬೆಳಿಗ್ಗೆ ಮರಗಳು ನೀರಿನಿಂದ ಆವೃತವಾಗಿರುತ್ತವೆ. ತೇವಹೊಂದಿರುವ ಕಾಡು ಸಸ್ಯಗಳ ತಳಿಗಳು ಹಾಗೂ ಪ್ರಾಣಿಗಳು ಬೆಳೆಯಲು ಈ ವಾತಾವರಣವು ಅನುಕೂಲಕರವಾಗಿದೆ. ಪಕ್ಷಿಗಳ ಸಂತಾನೋತ್ಪತ್ತಿಯು ಈ ಬೆಟ್ಟಗಳಲ್ಲಿ ಹೆಚ್ಚಾಗಿದೆ ಹಾಗೂ ಇದರಿಂದ ಪಕ್ಷಿವೀಕ್ಷಣೆ ಮಾಡುವವರಿಗೆ ಮತ್ತು ಪಕ್ಷಿಗಳ ಛಾಯಾಗ್ರಾಹಕರಿಗೆ ಈ ಪ್ರದೇಶವು ಬಹಳ ಮೆಚ್ಚುಗೆಯದ್ದಾಗಿದೆ. ನಿತ್ಯ ಹಸಿರಾಗಿರುವ ಕಾಡಿನಿಂದಾವೃತವಾಗಿರುವ ಬೆಟ್ಟದ ಮೇಲ್ಭಾಗವು ಚಳಿಗಾಲದಲ್ಲಿ ಕೆಲ ತಳಿಗಳ ಹಕ್ಕಿಗಳಿಗೆ ವಲಸೆ ಬರುವ ಸ್ಥಾನವಾಗಿದೆ, ಅವೆಂದರೆ ಕೋಗಿಲೆ ತಳಿಗಳು, ಕೀಟ ಹಿಡಿವ ಪಕ್ಷಿಗಳು ಮತ್ತು ಹಾಡುವಹಕ್ಕಿಗಳು. ಈ ಕಾಡಿನ ಭಾಗವು ನೀಲಗಿರಿ ವುಡ್ ಪೀಜನ್‌ಗಳ ವಾಸಸ್ಥಾನವಾಗಿ ಸಂಖ್ಯೆ ಕೂಡಾ ಗಣನೀಯವಾಗಿ ಹೆಚ್ಚಾಗಿದೆ.[೧೮]
- ತಳಿ ಸಂವರ್ಧನೆ ಮಾಡುವ ಶಹೀನ್ ಫಾಲ್ಕನ್‌ನ ಒಂದು ಜೋಡಿ, ಹಾಗೂ ನಂದಿ ಬೆಟ್ಟದಲ್ಲಿ ವಾಸಿಸುವ ಪೆರೆಗ್ರಿನ್ ಫಾಲ್ಕನ್‌ಗಳು ಹೆಚ್ಚಾಗಿ ಕಾಣಿಸುತ್ತವೆ. ಪಶ್ಚಿಮ ಘಟ್ಟಗಳಲ್ಲಷ್ಟೆ ಕಾಣಸಿಗುವ ಮಲಬಾರ್ ವಿಸ್ಲಿಂಗ್ ತ್ರಶ್,[೧೯]
- ಯೂರೋಪೆಲ್ಟಿಡ್ ಹಾವುಗಳು ಮತ್ತು ಪಿಲ್ ಮಿಲ್ಲಿಪೇಡ್‌ಗಳು ನಂದಿಬೆಟ್ಟದಲ್ಲಿಯೂ ಕಾಣಿಸುತ್ತವೆ. ಇಂಡಿಯಾದ ಪರ್ಯಾಯದ್ವೀಪದ ಬೆಟ್ಟಗಳಲ್ಲಿರುವ ಹಳದಿ- ಕುತ್ತಿಗೆಯ ಬುಲ್‌ಬುಲ್‌ಗಳೂ ಸಹ ಈ ಬೆಟ್ಟದ ಇಳಿಜಾರಿನಲ್ಲಿ ಮನೆ ಮಾಡಿಕೊಂಡಿವೆ .[೨೦]
ಪ್ರವಾಸಿ ಆಕರ್ಷಣೆಯ ಸ್ಥಳಗಳು
[ಬದಲಾಯಿಸಿ]- ಟಿಪ್ಪೂಸ್ ಡ್ರಾಪ್ - ಈ ಸ್ಥಳದಲ್ಲಿ ಟಿಪ್ಪು ಸುಲ್ತಾನ್‌ರು ತಪ್ಪಿತಸ್ಥರೆಂದು ನಿರ್ಣಯವಾದ ಖೈದಿಗಳನ್ನು ಮೇಲಿಂದ ತಳ್ಳಿ ಸಾಯಿಸಲಾಗುತ್ತಿತ್ತು, ಇದರಿಂದಾಗಿ ಈ ಸ್ಥಳವು ಪ್ರಖ್ಯಾತಿಯಾಗಿದೆ. ಟಿಪ್ಪುವಿನ ಬೇಸಿಗೆ ಅರಮನೆ ಮತ್ತು ಕೋಟೆ - ಗಂಗರ ಕಾಲದಲ್ಲಿ ಅವರ ಮುಖ್ಯಸ್ಥನು ಚಿಕ್ಕಬಳ್ಳಾಪುರದಲ್ಲಿ ಕೋಟೆಯನ್ನು ನಿರ್ಮಿಸಿದನು. ಟಿಪ್ಪು ಇದನ್ನು ಬಲಗೊಳಿಸಿ ಒಂದು ವಿಶ್ರಾಂತಿ ಗೃಹವನ್ನೂ ಸಹ ನಿರ್ಮಿಸಿದ. ಇದು ಟಿಪ್ಪುವಿನ ಬೇಸಿಗೆ ಮಹಲು ಎಂದೇ ಕರೆಯಲಾಗುತ್ತದೆ. ಇದು ಸಾಮಾನ್ಯ ನಾಗರೀಕರಿಗೆ ಲಭ್ಯವಿಲ್ಲ
- ಕುದುರೆ ದಾರಿ - ಕೋಟೆಯ ಈಶಾನ್ಯ ದಿಕ್ಕಿಗೆ ಒಂದು ಕಲ್ಲು ಬಾಗಿಲು ಇದೆ, ಇದನ್ನು ಕುದುರೆಗಳ ಬೆನ್ನಮೇಲೆ ಕುಳಿತು ಸೈನಿಕರು ಮೇಲೆ ಹತ್ತಲು ಬಳಸಲಾಗುತ್ತಿತ್ತೆಂದು ನಂಬಿಕೆ ಇದೆ. ಪಾರಾಗುವ ರಹಸ್ಯ ದಾರಿ - ಪೂರ್ವಕ್ಕೆ ಒಂದು ರಹಸ್ಯ ಮಾರ್ಗವಿದೆ, ಇದನ್ನು ರಾಜರು ಅನೀರೀಕ್ಷಿತ ಆಕ್ರಮಣಗಳಿಂದ ತಪ್ಪಿಸಿಕೊಳ್ಳಲು ಬಳಸಲಾಗುತ್ತಿತ್ತೆಂದು ನಂಬಲಾಗಿದೆ.
- ದೇವಸ್ಥಾನಗಳು - ಇಲ್ಲಿ ಶ್ರೀ ಭೋಗ ನರಸಿಂಹ , ಶ್ರೀ ಉಗ್ರ ನರಸಿಂಹ ಮತ್ತು ಸುಂದರವಾದ ಪುರಾತನ ದೇವಾಲಯಗಳನ್ನು ನೋಡಬಹುದು. ಗವಿ ವೀರಭದ್ರಸ್ವಾಮಿ ದೇವಸ್ಥಾನ ಬೆಟ್ಟದ ತುದಿಯಲ್ಲಿದೆ, ಟಿಪ್ಪು ಅರಮನೆಯಿಂದ ಸುಲ್ತಾನ್ ಪೇಟ್‌ಗೆ ಹೋಗುವ ದಾರಿಯಲ್ಲಿ ಸ್ವಾಭಾವಿಕಾವಾಗಿ ದೊಡ್ಡಬಂಡೆಗಳಿಂದ ನಿರ್ಮಿತವಾದ ಒಂದು ಮಹತ್ವದ ದೇವಸ್ಥಾನ.
- ಮಕ್ಕಳ ಆಟದ ಮೈದಾನ - ತೋಟಗಾರಿಕಾ ಇಲಾಖೆಯು ಒಂದು ಸುಂದರವಾದ ಕೈದೋಟ ಹಾಗೂ ಮಕ್ಕಳ ಆಟವಾಡುವ ಸ್ಲೈಡ್ಸ್, ಮೆರ್ರಿ-ಗೊ-ರೌಂಡ್, ಜೋಕಾಲಿಗಳನ್ನು ನಿರ್ವಹಣೆ ಮಾಡುತ್ತದೆ. ನೆಹರು ನಿಲಯ - ಜವಾಹರ್ ಲಾಲ್ ನೆಹರೂರವರು ಇಲ್ಲಿಗೆ ಬಂದಾಗ ಉಳಿದುಕೊಳ್ಳುತ್ತಿದ್ದ ತೋಟಗಾರಿಕಾ ಇಲಾಖೆಯ ಪ್ರವಾಸಿ ಮಂದಿರ. ಗಾಂಧಿ ಹೌಸ್, ಮಹಾತ್ಮಾ ಗಾಂಧಿಯವರೇ ಉಳಿದುಕೊಂಡಂತಹ ಸ್ಥಳ, ಇದು DPAR (Protocol)ನ ನಿರ್ವಹಣೆಗೆ ಒಳಪಟ್ಟಿದೆ.
- ಕರ್ನಾಟಕ ಸರ್ಕಾರದ ಅಧೀನದಲ್ಲಿದೆ ಮತ್ತು ಪ್ರತಿಷ್ಟಿತ ವ್ಯಕ್ತಿಗಳಿಗಾಗಿ ಇದನ್ನು ಕಾಯ್ದಿರಿಸಲಾಗುತ್ತದೆ. ತೋಟಗಾರಿಕಾ ಇಲಾಖೆಯು ಒಂದು ಸಸ್ಯಹಾರಿ ಹೋಟೆಲನ್ನು ನಡೆಸುತ್ತದೆ ಮತ್ತು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಸಸ್ಯಾಹಾರಿ/ಮಾಂಸಾಹಾರಿ ಹೋಟೆಲ್ "ಮಯೂರ" ವನ್ನು ನಡೆಸುತ್ತಿದ್ದಾರೆ. ನದಿಗಳು - ಪೆಣ್ಣರ್, ಪಾಲಾರ್ ಮತ್ತು ಅರ್ಕಾವತಿ ನದಿಗಳ ಮೂಲಗಳು ಈ ಬೆಟ್ಟದಲ್ಲಿವೆ. ಬಹಳಷ್ಟು ಮೂಲಗಳು ಒಣಗಿ ಹೋಗಿವೆ.
- ಅಮೃತ ಸರೋವರವು ಬೆಟ್ಟದಲ್ಲಿರುವ ಒಂದು ಹೊಳೆಯುವ ನೀರಿನಿಂದ ವರ್ಷ ಪೂರ್ತಿ ತುಂಬಿ ತುಳುಕುವ ಸುಂದರ ಸರೋವರ. ಬ್ರಹ್ಮಾಶ್ರಮ - ಋಷಿ ರಾಮಕೃಷ್ಣರು ಇಲ್ಲಿ ಧ್ಯಾನ ಮಾಡಿದ್ದರೆಂದು ಹೇಳಲಾಗಿದೆ. ಇದು ಒಂದು ತಂಪಾದ ಗುಹೆ. ಆಶ್ರಮದಲ್ಲಿರುವ ಋಷಿ ಮುನಿಗಳು ಮುಂಜಾನೆ ಬೆಟ್ಟದ ಮೇಲೆ ಜೊತೆಯಾಗಿ ಕುಳಿತು ಧೂಮಪಾನ ಮಾಡಿ ತಮ್ಮ ಮುಂದಿನ ಕಾರ್ಯಗಳಿಗೆ ತೆರಳುತ್ತಿದ್ದರೆಂದು ಹೇಳಲಾಗಿದೆ. ಇದೇ ಪದ್ದತಿಯು ಈಗಿನ ಯುವ ಪೀಳಿಗೆಗೂ ಮುಂದುವರೆದಿದೆ.
- ಮುದ್ದೇನಹಳ್ಳಿ-ಕಣಿವೆರಾಯನಪುರ - ದಂತಕಥೆಯಾದ ನವ್ಯ ಕರ್ನಾಟಕವನ್ನು ನಿರ್ಮಾಣ ಮಾಡಿದ ಶಿಲ್ಪಿ ಸರ್ ಎಮ್. ವಿಶ್ವೇಶ್ವರಯ್ಯನವರ ಜನ್ಮಸ್ಥಳ. ಕಣಿವೆರಾಯನಪುರ, ಮುಂಬರುವ ದಿನಗಳಲ್ಲಿ ಈ ಪ್ರದೇಶದಲ್ಲಿ ಶ್ರೀ ಸತ್ಯ ಸಾಯಿ ಬಾಬಾ ಯೂನಿವರ್ಸಿಟಿ ಮತ್ತು ವೈದ್ಯಕೀಯ ಕಾಲೇಜು , [[ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ >[೮]
ನದಿ ಮೂಲಗಳು
[ಬದಲಾಯಿಸಿ]ನಂದಿ ಬೆಟ್ಟವು ಉತ್ತರ ಪಿನಾಕಿನಿ,ದಕ್ಷಿಣ ಪಿನಾಕಿನಿ, ಪಾಲರ್ ಮತ್ತು ಅರ್ಕಾವತಿ ನದಿಗಳ ಉಗಮ ಸ್ಥಾನವಾಗಿದೆ.
-
ನಂದಿ ಬೆಟ್ಟದ ಪಲಾರ್ ನದಿಯ ಉಗಮ ಸ್ಥಾನ
-
ಅರ್ಕಾವತಿ ನದಿಯ ಮೂಲ
ನಂದಿ ಬೆಟ್ಟದ ಚಿತ್ರಗಳು
[ಬದಲಾಯಿಸಿ]-
ನಂದಿ ಬೆಟ್ಟದಲ್ಲಿರುವ ವಾಟರ್ವರ್ಕ್ಸ್ನ ಅಡಿಪಾಯದ ಒಂದು ಕಲ್ಲು.
-
ನಂದಿಬೆಟ್ಟಕ್ಕೆ ಸಾಗುವ ದಾರಿಯ ಅಡಿಪಾಯ.
-
ಕಾಲಿಕ್ ಮ್ಯಾಕೆಂಝೀಯವರು ರಚಿಸಿರುವ, 1791ರ ಬ್ರಿಟಿಷ್ ದಿಗ್ಭಂಧನದ ಕಾಲದಲ್ಲಿ ನಂದಿದುರ್ಗ್ನ ಕೋಟೆಯ ವಾಟರ್ ಕಲರ್ ದೃಶ್ಯ.
-
ನಂದಿಬೆಟ್ಟದಿಂದ ಉತ್ತರಕ್ಕೆ ಕಾಣುವ ದೃಶ್ಯ
-
ಮೇಲಿನಿಂದ ಕಾಣುವ ಕಾಡಿನ ದೃಶ್ಯಇದು ನೀಲಗಿರಿ ವುಡ್ ಪೀಜನ್ನ ತವರಾಗಿದೆ. ಪರ್ಯಾಯದ್ವೀಪದ ಆಕಾರದ ಒಂದು ಜಾತಿಯ ಹಲ್ಲಿ ಬಂಡೆಯ ಮುಂಭಾಗದ ಮೇಲೆ ಬಿಸಿಲು ಕಾಯಿಸುತ್ತಿರುವುದು.
-
ಮುಂಜಾವಿನಲ್ಲಿ ಮೋಡಗಳಲ್ಲಿ ಗಟ್ಟಿಯಾಗಿರುವುದು ನೀರಾಗಿ ಹರಿಯುವುದರಿಂದ ಪಾಚಿ ಮತ್ತು ಕಲ್ಲುಹೂವುಗಳು ಹೆಚ್ಚಾಗಿ ಬೆಳೆಯುತ್ತವೆ. ಮರದಮೇಲೆ ಇರುವ ವಿಶೀರ್ಣ ವಸ್ತುವನ್ನು ಒಂದು ಸಹಸ್ರಪದಿ ಉಣ್ಣಿಸುತ್ತಿರುವುದು ಇಲ್ಲಿದೆ.
-
ಬೆಟ್ಟದ ಇಳಿಜಾರಿನಲ್ಲಿ ಆವೃತವಾಗಿರುವ ಕುರುಚಲು ಪೊದೆಗಳು, ಹಳದಿ ಕುತ್ತಿಗೆಯ ಬುಲ್ಬುಲ್ಗಳ ವಾಸಸ್ಥಾನವಾಗಿದೆ.
-
ಕೋಟೆಯ ಮುಂಬಾಗಿಲಿನಿಂದ ಇರುವ ಕೋಟೆಯ ಶಿಖರಕ್ಕೆ ಮೆಟ್ಟಿಲುಗಳು ಸಸ್ಯಗಳಿಂದ ಸುತ್ತುವರೆದು ಇದು ಚಳಿಗಾಲದ ಪಕ್ಷಿಗಳಾದ ಹಾಡು ಹಕ್ಕಿಗಳಿಗೆ ಹಾಗೂ ಕೋಗಿಲೆಗಳಿಗೆ ಉತ್ತಮ ವಾಸಸ್ಥಾನವಾಗಿದೆ.
-
ಸಮೀಪದ ಹಳ್ಳಿಯಿಂದ ನಂದಿಬೆಟ್ಟ
-
ನಂದಿ ಬೆಟ್ಟಕ್ಕೆ ಹೋಗುವಾಗ
-
ನಂದಿ ಬೆಟ್ಟದ ಕೋಟೆಯ ಪ್ರವೇಶ ದ್ವಾರ 1
-
ನಂದಿ ಹಿಲ್ಸ್ ನಾಮಫಲಕ: 8 km
-
ನಂದಿ ಬೆಟ್ಟದಲ್ಲಿರುವ ವರ್ಷವಿಡೀ ನೀರಿನಿಂದ ತುಂಬಿರುವ ಕೊಳ
-
ನರ್ಸರಿಯ ಹಿಂಭಾಗದಲ್ಲಿರುವ ನಂದಿಯ ಪ್ರತಿಮೆ
ಆಕರಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2009-12-14. Retrieved 2010-02-10.
- ↑ "ಆರ್ಕೈವ್ ನಕಲು". Archived from the original on 2012-10-11. Retrieved 2021-08-10.
- ↑ "ಆರ್ಕೈವ್ ನಕಲು". Archived from the original on 2008-09-13. Retrieved 2010-08-08.
- ↑ "ಆರ್ಕೈವ್ ನಕಲು". Archived from the original on 2011-09-25. Retrieved 2010-08-08.
- ↑ "ಆರ್ಕೈವ್ ನಕಲು". Archived from the original on 2012-11-07. Retrieved 2010-08-08.
- ↑ "ಆರ್ಕೈವ್ ನಕಲು". Archived from the original on 2010-04-17. Retrieved 2010-08-08.
- ↑ http://www.deccanherald.com/content/31009/silk-city-come-up-near.html
- ↑ ೮.೦ ೮.೧ "ಆರ್ಕೈವ್ ನಕಲು". Archived from the original on 2009-07-13. Retrieved 2010-08-08.
- ↑ "ಆರ್ಕೈವ್ ನಕಲು". Archived from the original on 2010-06-18. Retrieved 2010-02-10.
- ↑ Browne, James (1909) The history of Scotland. ಸಂ 1. Francis A. Niccolls. pp. 10-11http://www.archive. org/stream/ historyofscotlan08 browiala# page/10/ mode/ 1up
- ↑ Hildyard HJT Lt (1876) Historical record of the 71st Regiment Highland Light Infantry. Harrison and sons. scan
- ↑ Anon, 1829 The London Encylopaedia. Vol. 16 scan
- ↑ Burton, E F (1888) An Indian Olio. Spencer Blackett. London. p. 145 Scan
- ↑ ೧೪.೦ ೧೪.೧ Burns, W (1930) Firminger's manual of gardening for India. Thacker and Spink. Sixth edition.
- ↑ Royle JF (1840) Essay on the productive resources of India. WH Allen London scan
- ↑ "ಆರ್ಕೈವ್ ನಕಲು". Archived from the original on 2011-01-22. Retrieved 2010-08-08.
- ↑ "ಆರ್ಕೈವ್ ನಕಲು". Archived from the original on 2011-01-24. Retrieved 2010-02-10.
- ↑ Subramanya, S. (2005) Nesting of Wood-Pigeon Columba elphinstonii in Nandi hills, Karnataka, India. Indian Birds 1(2):36-37
- ↑ ಪ್ರವೀಣ್ J (2006) Post-monsoon dispersal of Malabar Whistling Thrush Myiophonus horsfieldii (Vigors) to Chamundi Hill and Nandi Hills, Karnataka, Southern India. Zoos' Print Journal 21(9):2411 PDF Archived 2018-06-03 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಸುಬ್ರಹ್ಮಣ್ಯ,S; ಕಾರ್ತಿಕೇಯನ್,S; Prasad,JN (1991) Yellowthroated Bulbul at Nandi Hill. Newsl. for Birdwatchers 31(3&4):7-8.
ಹೊರಗಿನ ಕೊಂಡಿಗಳು
[ಬದಲಾಯಿಸಿ]- [೧] Archived 2010-06-18 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಕಿಟ್ರಾವೆಲ್ ನಲ್ಲಿ ನಂದಿ ಬೆಟ್ಟ (ಭಾರತ) ಪ್ರವಾಸ ಕೈಪಿಡಿ (ಆಂಗ್ಲ)
- ನಂದಿ ಬೆಟ್ಟದ ಪಕ್ಷಿಗಳು Archived 2006-03-21 ವೇಬ್ಯಾಕ್ ಮೆಷಿನ್ ನಲ್ಲಿ.
- Paragliding At Nandi Hills
- ನಂದಿ ಬೆಟ್ಟಗಳು Archived 2009-07-27 ವೇಬ್ಯಾಕ್ ಮೆಷಿನ್ ನಲ್ಲಿ.
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles with hatnote templates targeting a nonexistent page
- Short description is different from Wikidata
- Articles using infobox templates with no data rows
- Pages using infobox settlement with unknown parameters
- Pages using infobox settlement with missing country
- Pages using infobox settlement with no map
- Pages using infobox settlement with no coordinates
- Commons link is locally defined
- ಬೆಟ್ಟ
- ಕರ್ನಾಟಕದ ಬೆಟ್ಟಗಳು
- ಪರ್ವತಗಳು
- ಕರ್ನಾಟಕದಲ್ಲಿರುವ ನಗರಗಳು ಮತ್ತು ಪಟ್ಟಣಗಳು
- ಭಾರತೀಯ ಗಿರಿಧಾಮಗಳು
- ಇಂಡಿಯಾದ ಬೆಟ್ಟಗಳು
- ಕರ್ನಾಟಕದ ಪ್ರವಾಸೋದ್ಯಮ
- ಬೆಂಗಳೂರಿನ ಪ್ರೇಕ್ಷಕರ ಆಕರ್ಷಣೆಗಳು