ದೆಹಲಿಯ ಇತಿಹಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತದ ರಾಜಧಾನಿ ದೆಹಲಿ ಗೆ ತುಂಬಾ ಹಳೆಯ ಇತಿಹಾಸವಿದ್ದು, ಹಲವಾರು ಸಾಮ್ರಾಜ್ಯಗಳ ರಾಜಧಾನಿಯಾಗಿ ಮೆರೆದಿದೆ. ಭೂಗರ್ಭ ಇತಿಹಾಸ ತಜ್ಞರ ಪ್ರಕಾರ, ಮೊದಲ ವಾಸ್ತುಶಿಲ್ಪದ ಸ್ಮಾರಕ ಭಗ್ನಾವಶೇಷಗಳ ದೆಹಲಿಯ ಇತಿಹಾಸ ಮೌರ್ಯಕಾಲದ (ಸಿ . 300 ಬಿ.ಸಿ. ) ಅವಧಿ ಆಗಿದ್ದು.; ಆಗಿನಿಂದಲೂ, ಈ ಪ್ರದೇಶ ಅಭಿವೃದ್ಧಿಯನ್ನು ಹೊಂದುತ್ತಿದೆ.1966 ರಲ್ಲಿ ಮೌರ್ಯ ಸಾಮ್ರಾಜ್ಯ ಅಧಿಪತಿ ಅಶೋಕನ (273-236 ಬಿ.ಸಿ. )ಕಾಲದ ಶಿಲಾಶಾಸನದ ಅನ್ವಯ , ನೋಯಿಡಾಬಳಿಯಿರುವ ಶ್ರೀನಿವಾಸಪುರಿಯಲ್ಲಿ ಶಿಲಾಶಾಸನ ದೊರೆತಿದ್ದು, ಎರಡು ಮರಳುಗಲ್ಲು ಕಂಬಗಳ ಮೇಲೆ ಅಶೋಕನ ಆಡಳಿತದ ಶಾಸನಗಳ ರಚನೆಯಾಗಿದ್ದು,ಅವುಗಳನ್ನು 14ನೇ ಶತಮಾನದಲ್ಲಿ ,ಫಿರುಜ್ ಷಾ ತುಘಲಕ್‌ ನಗರಕ್ಕೆ ತರಲಾಗಿದೆ. ಬಹಳ ಜನಪ್ರಿಯವಾದ ಕಬ್ಬಿಣದ ಕಂಬ, ಕುತುಬ್ ಮಿನಾರ್ ಬಳಿ ದೊರೆತಿದ್ದು, ಮತ್ತು ರಾಜ ಕುಮಾರಗುಪ್ತ - I, ಗುಪ್ತ ಸಾಮ್ರಾಜ್ಯ (320-540)ದ ನಂತರ,10ನೇ ಶತಮಾನದಲ್ಲಿ ದೆಹಲಿಗೆ ಇದನ್ನು ವರ್ಗಾಯಿಸಲಾಯಿತು. ದೆಹಲಿಯ ಸುತ್ತ-ಮುತ್ತ ಎಂಟು ಮುಖ್ಯ ನಗರಗಳು ರಚನೆಯಾಗಿವೆ. ಮೊದಲ ನಾಲ್ಕು ನಗರಗಳು ಇಂದಿನ ದೆಹಲಿಯ ದಕ್ಷಿಣ ಭಾಗದಲ್ಲಿದೆ.

ಸ್ಥೂಲ ಅವಲೋಕನ/ಪಕ್ಷಿ ನೋಟ[ಬದಲಾಯಿಸಿ]

ಪ್ರಾಚೀನ ಕಾಲದ ಹಳೆಯ ನಗರಗಳ ಅವಶೇಷಗಳನ್ನು ಇಂದಿನ ಆಧುನಿಕ ನಗರ ಉಳಿಸಿಕೊಂಡಿದೆ,ಅವುಗಳು:

 1. ಮೊದಲನೇ ಉದಾಹರಣೆಯಾಗಿ,ಪ್ರಾಚೀನ ಅವಧಿಯ ಮಹಾಭಾರತ ಯುದ್ಧದ ಅವಧಿಯ ಸಮಯದಲ್ಲಿನ ನಗರ ರಾಜಧಾನಿಯಾಗಿದ್ದು,ಪಂಚ ಪಾಂಡವರು ಮಹತ್ತಾದ ಮತ್ತು ಅತ್ಯಂತ ಸೂಕ್ಷ್ಮವಾದ ಇಂದ್ರಪ್ರಸ್ಥ ಕೋಟೆಯನ್ನು ಕಟ್ಟಿ ಅಲ್ಲಿಂದಲೇ ರಾಜ್ಯಭಾರವನ್ನು ನಡೆಸಿರುತ್ತಾರೆ.
 2. 'ಧಿಲ್ಲಿ ' ಯನ್ನು ತೊಮಾರ ಆಡಳಿತಗಾರ , ಅನಂಗಪಾಲ್ ಗೊತ್ತುಹಿಡಿದಿರುವುದು, ವಿಬುಧ ಶ್ರೀಧರ್ ಮತ್ತು ಇತರೆ ಲೇಖಕರ ಅಭಿಪ್ರಾಯವಾಗಿದೆ [೧].
 3. ತೋಮರ್ ನಿಂದ ಕಟ್ಟಲ್ಪಟ್ಟ ಲಾಲ್ ಕೋಟೆ ಯನ್ನು ಪೃಥ್ವಿರಾಜ್ ಚೌಹಾನ್ ನಂತರದಲ್ಲಿ , ಖಿಲ್ಲರಾಯ್ ಪಿತೋರ ಎಂದು ಪುನರ್ ನಾಮಕರಣ ಮಾಡಿದನು. ದೆಹಲಿ ಯಲ್ಲಿರುವ , 13 ಮಹಾ-ದ್ವಾರಗಳ ಕೋಟೆ ಇದಾಗಿತ್ತು . ಓರ್ವ ಚೌಹಾಣ್ ರಾಜನಾದ ಪೃಥ್ವಿರಾಜ್, ದೆಹಲಿಯನ್ನಾಳಿದ ಹಿಂದೂ ಅರಸರ ಪಟ್ಟಿಯಲ್ಲಿ ಕೊನೆಯಿಂದ ಎರಡನೆಯವನು.
 4. ಸಿರಿ , ಯನ್ನು 1303 ರಲ್ಲಿ ಅಲ್ಲಾ ಉದ್ದೀನ್ ಖಿಲ್ಜಿ ನಿರ್ಮಿಸಿದನು.;
 5. (1321-1325):ಘಿಯ ಸುದ್ದೀನ್ ತುಘ್ಲುಕನು ತುಘ್ಲುಕಬಾದ್ ಅನ್ನು ಕಟ್ಟಿಸಿದನು.
 6. (1325-1351):ಮಹಮ್ಮದ್ ಬಿನ್ ತುಘ್ಲುಕ್ ಜಹನಪನಹ ವನ್ನು ಕಟ್ಟಿಸಿದನು.
 7. (1351-1388):ಫಿರುಜ್ ಶಾಹ್ ತುಘ್ಲುಕ್ ಫಿರೋಜ್ ಶಾಹ್ ಕೋಟ್ಲ ವನ್ನು ಕಟ್ಟಿಸಿದನು.
 8. ಪುರಾನ ಖಿಲ್ಲ ವನ್ನು , ಶೇರ್ ಶಾಹ್ ಸೂರಿ ಮತ್ತು 'ದಿನಪನಹ'ವನ್ನು ಹುಮಾಯುನ್ ಕಟ್ಟಿಸಿದ್ದು , ಇವೆರೆಡೂ ಕಲ್ಪನಾತೀತ ದೃಶ್ಯವಾಗಿದ್ದು, ಇಂದ್ರಪ್ರಸ್ಥ ದ ಬಳಿ ನಿರ್ಮಿತವಾಗಿದೆ. (1538-1545);ಮತ್ತು
 9. 1638 ರಿಂದ 1649 ರವರೆಗೆ 'ಷಃ ಜಹಾನ' ನು ಗೋಡೆಗಳ ನಗರ ಎಂದು ಪ್ರಖ್ಯಾತವಾದ ಶಹಜಹನಬಾದ್ ಅನ್ನು ನಿರ್ಮಿಸಿದನು.ಅದರಲ್ಲಿ ಲಾಲ್ ಕ್ಹಿಲ ಮತ್ತು ಚಾಂದನಿ ಚೌಕ ಗಳ ನಿರ್ಮಾಣಗಳನ್ನೂ ಒಳಗೊಂಡಿದೆ. ಶಃಜಹಾನನ ಆಡಳಿತದ ಅವಧಿಯಲ್ಲಿ, ಇದು ಮುಘಲ್ ಸಾಮ್ರಾಜ್ಯ ದ ರಾಜಧಾನಿಯಾಗಿತ್ತು. ಇದನ್ನು ಈಗ "ಹಳೆ ದೆಹಲಿ "ಎಂದು ಕರೆಯಲಾಗುತ್ತದೆ.
 10. ಲುತ್ಯೆನ್ಸ್ ನ ದೆಹಲಿ ಅಥವಾ 'ನವದೆಹಲಿ'ಯನ್ನು , ಬ್ರಿಟಿಷರು ದಕ್ಷಿಣ-ಪಶ್ಚಿಮ ಭಾಗದಲ್ಲಿ ಕಟ್ಟಿಸಿದರು.
 11. ಆಧುನಿಕ ದೆಹಲಿ ,'ನಯಿ ದಿಲ್ಲಿ ' ನವದೆಹಲಿಈಗ ಅವುಗಳೆಲ್ಲವನ್ನೂ ಸೇರಿಸಿಕೊಂಡು ಆದುದಾಗಿದೆ.

ಪ್ರಾಚೀನ ಇತಿಹಾಸ[ಬದಲಾಯಿಸಿ]

ಭಾರತದ ಜನಪದ ದ ಪ್ರಕಾರ ,2500 ಬಿ.ಸಿ.ಯನ್ವಯ,ಭಾರತೀಯರ ಮಹಾಕಾವ್ಯ ಮಹಾಭಾರತ ದಲ್ಲಿ ಪಾಂಡವರ ರಾಜಧಾನಿ ಇಂದ್ರಪ್ರಸ್ಥ ಒಂದು ಅದ್ಭುತ ಸಂಪದ್ಭಿರಿತ ನಗರ. ಹಿಂದೂ ಗ್ರಂಥಗಳ ಪ್ರಕಾರ ದೆಹಲಿಯನ್ನು ಸಂಸ್ಕೃತ ದಲ್ಲಿ ಹಸ್ತಿನಾಪುರ ಎಂದು,ಅಂದರೆ "ಆನೆಗಳ -ನಗರ " ಎಂದು ಕರೆಯಲಾಗಿದೆ . 19ನೇ ಶತಮಾನದ ಆರಂಭದವರೆಗೆ ಇಂದ್ರಪ್ರಸ್ಥವೆಂದು ಕರೆಯಲಾಗುತ್ತಿದ್ದ ಹಳ್ಳಿಯೊಂದು ದೆಹಲಿಯಲ್ಲಿ ಅಸ್ತಿತ್ವದಲ್ಲಿತ್ತು. ಬ್ರಿಟಿಷರು ಆ ಹಳೆಯ ಹಳ್ಳಿಯನ್ನು ಒಡೆದು ಹಾಕಿ ನವ ದೆಹಲಿ ಗೆ 19 ನೇ ಶತಮಾನದಲ್ಲಿ ನಾಂದಿ ಹಾಡಿದರು. ಭೂಗರ್ಭ ಶಾಸ್ತ್ರಜ್ಞರ ಪ್ರಕಾರ ,ಇಂದಿನ ಹಳೆ ಕೋಟೆ ಇರುವ ಕಡೆ ಇಂದ್ರಪ್ರಸ್ಥ ಇತ್ತು ಎಂದು ತಿಳಿಯಲಾಗಿದೆ. ಸಂಶೋಧನೆಯಿಂದ ಬೂದು ಬಣ್ಣದ ಸಾಮಾನುಗಳು (ಸಿ . ಕ್ರಿ.ಪೂ 1000 ಕಾಲದ್ದು)ದೊರೆತಿದ್ದು, ಕೆಲ ಪುರಾತತ್ವ ಶಾಸ್ತ್ರಜ್ಞರು ಅಭಿಪ್ರಾಯ ಪಡುವ ಪ್ರಕಾರ ಮಹಾಭಾರತದ ಕಾಲಕ್ಕೆ ಸೇರಿದ್ದೆಂದರೂ , ಈ ಬಗ್ಗೆ ಯಾವುದೇ ಪೂರಕ ಸಾಕ್ಷ್ಯಾಧಾರಗಳು ದೊರೆತಿಲ್ಲ.

ಬೇರೆ ಹಲವಾರು ಅಭಿಪ್ರಾಯಗಳು ಚಾಲ್ತಿಯಲ್ಲಿದ್ದರೂ ಸಹ , 'ಡೆಲ್ಲಿ' ಎಂಬ ಹೆಸರು 'ಧಿಲ್ಲಿಕ ' ಎಂಬ ಶಬ್ದದಿಂದ ಬಂದಿರಬಹುದು. ಸ್ವಾಮಿ ದಯಾನಂದಸತ್ಯಾರ್ಥ ಪ್ರಕಾಶ (1875)ದ ಪ್ರಕಾರ, ರಾಜ ಧಿಲು (ದೊರೆ ದಿಹ್ಲು )ಹಳೆಯ ದೆಹಲಿಯನ್ನು 800 ಬಿ.ಸಿ.ಯಲ್ಲಿ ನಿರ್ಮಿಸಿದ್ದಾನೆ.ಆದರೆ ಈ ವಿಷಯವನ್ನು ಯಾವ ಗ್ರಂಥವೂ [೨] ಸಮರ್ಥಿಸುತ್ತಿಲ್ಲ, ಇದು ಮಧ್ಯಂತರ ನಗರ ದೆಹಲಿಯ ಮೊದಲ ಹೆಸರು ಆ ಗಿದ್ದು ,ಈಗಿನ ದೆಹಲಿಯ ದಕ್ಷಿಣ-ಪಶ್ಚಿಮ ಗಡಿಯ ಬಳಿ ಮೆಹ್ರುಲಿ ಯಲ್ಲಿ ಸ್ಥಾಪಿತವಾಗಿದೆ. 7 ಮಧ್ಯಂತರ ನಗರಗಳಲ್ಲಿ ಇದು ಮೊದಲನೆಯದಾಗಿದೆ. ಇದನ್ನು 'ಯೋಗಿನಿಪುರ' ಎಂದು ಕರೆಯಲಾಗಿದೆ, ಅಂದರೆ , ಯೋಗಿನಿಗಳ (ಹೆಣ್ಣು ಭಕ್ತೆಯರು )ಕೋಟೆಯಾಗಿದೆ. 'ಅನಂಗಪಾಲ ತೋಮರ' ನ ಕಾಲದಲ್ಲಿ ಇದು ಪ್ರವರ್ಧಮಾನಕ್ಕೆ ಬಂದಿದೆ. 12ನೇ ಶತಮಾನದಲ್ಲಿ, ಈ ನಗರವು ಪೃಥ್ವಿರಾಜ್ ಚೌಹಾನಆಡಳಿತ ದ ಸುಪರ್ದಿಗೆ ಒಳಪಟ್ಟಿತ್ತು.

ಅಪಭ್ರಂಶ ಬರಹಗಾರ ವಿಬುಧ ಶ್ರೀಧರ (ವಿ.ಎಸ್. 1189-1230)ನ 'ಪಸನಹ ಚೈರು' ಪ್ರಕಾರ, ದೆಹಲಿ [೧] ಯ ಮೂಲ ಹೆಸರು ' ಧಿಲ್ಲಿ ' ಎಂದು ಉಹಿಸಿದ್ದಾನೆ.

 हरियाणए देसे असंखगाम, गामियण जणि अणवरथ काम|
परचक्क विहट्टणु सिरिसंघट्टणु, जो सुरव इणा परिगणियं|
रिउ रुहिरावट्टणु बिउलु पवट्टणु, ढिल्ली नामेण जि भणियं|

ಭಾಷಾಂತರ : ಹರಿಯಾಣ ರಾಷ್ಟ್ರದಲ್ಲಿ ಲೆಕ್ಕವಿಲ್ಲದಷ್ಟು ಹಳ್ಳಿಗಳಿವೆ.. ಹಳ್ಳಿಯವರು ಅಲ್ಲಿ ಕಷ್ಟಪಟ್ಟು ದುಡಿಯುತ್ತಾರೆ. ಅವರು ಬೇರೆಯವರ ಅಧಿಪತ್ಯವನ್ನು ಒಪ್ಪುವುದಿಲ್ಲ,ಬೇರೆಯವರ ಅಂದರೆ ಶತ್ರುಗಳ ರಕ್ತವನ್ನು ಹರಿಸುವುದರಲ್ಲಿ ನಿಸ್ಸೀಮರು. ಇಂದ್ರನೇ ಇವರ ರಾಷ್ಟ್ರವನ್ನು ಹೊಗಳಿದ್ದಾನೆ. ಈ ರಾಷ್ಟ್ರದ ರಾಜಧಾನಿ ಧಿಲ್ಲಿ .

जहिं असिवर तोडिय रिउ कवालु, णरणाहु पसिद्धउ अणंगवालु ||
वलभर कम्पाविउ णायरायु, माणिणियण मणसंजनीय ||

ಭಾಷಾಂತರ : ಆಡಳಿತ ಅನಂಗಪಾಲ ಜನಪ್ರಿಯ,ತನ್ನ ಶತ್ರುಗಳನ್ನು ತನ್ನ ಕತ್ತಿಯಿಂದ ಕತ್ತರಿಸಬಲ್ಲ. (ಕಬ್ಬಿಣ ಕಂಬ ) ದ ಭಾರ ನಾಗರಾಜನನ್ನು ಅಲುಗಾಡಿಸಲು ಕಾರಣವಾಯಿತು.

ವಿ ಎಸ್ 1383 ಶಿಲಾಶಾಸನವನ್ನು ನಲ್ಲಿರುವ ತೋಮರಸ್ ನಿಂದ ದೆಹಲಿಯು ಗುರುತಿಸಲ್ಪಟ್ಟಿದೆ ಎಂದು ದೆಹಲಿ ಮ್ಯುಸಿಯುಂ ಖಚಿತಪಡಿಸಿದೆ .  :

देशोऽस्ति हरियानाख्यो पॄथिव्यां स्वर्गसन्निभः |
ढिल्लिकाख्या पुरी तत्र तोमरैरस्ति निर्मिता ||

ತೋಮರಸನು ಕಂಡುಹಿಡಿದ ಈ ವಿಷಯವನ್ನು ಪೃಥ್ವಿರಾಜ್ ರಾಸೋ ಒಪ್ಪುತ್ತಾನೆ.

हुं गड्डि गयौ किल्ली सज्जीव हल्लाय करी ढिल्ली सईव |
फिरि व्यास कहै सुनि अनंगराइ भवितव्य बात मेटी न जाइ ||

8ನೇ ಶತಮಾನದಿಂದ 16ನೇ ಶತಮಾನದವರೆಗೆ[ಬದಲಾಯಿಸಿ]

ಕುತುಬ್ ಮಿನಾರ್ - ವಿಶ್ವದ ಅತ್ಯಂತ ಎತ್ತರವಾದ ಇಟ್ಟಿಗೆಯ ಗೋಪುರ, 72.5 ಮೀಟರ್ ಗಳು.
ಲಾಲ್ ಕೋಟ್ ಫೋರ್ಟ್ ನ ಬುರುಜು - ಮೆಹ್ರುಲಿ , ಡೆಲ್ಲಿ - ತೊಮಾರ ಆಡಳಿತಗಾರರಿಂದ ಕಟ್ಟಲ್ಪಟ್ಟಿದೆ. , ಅನಂಗ್ಪಾಲ್ ಇನ್ ಸಿ . ಕ್ರಿಸ್ತಶಕ 736.

ಮೆಹ್ರುಲಿಕುತುಬ್ ಮಿನಾರ್ ಬಳಿಯಲ್ಲಿ,736 ರಲ್ಲಿ ತೋಮರ್ ನ ಸಾಮ್ರಾಜ್ಯ ಲಾಲ್ ಕೋಟ್ ಅನ್ನು ನಿರ್ಮಿಸಿದೆ. ಪೃಥ್ವಿರಾಜ್ ರಾಸೋ ನು ತೋಮರ್ ಅನಂಗ್ಪಾಲ್ ಲಾಲ್ ಕೋಟ್ ನ ಸ್ಥಾಪಕನೆಂದು, ಅವನ ಹೆಸರನ್ನು , ದೆಹಲಿಯ ಕಬ್ಬಿಣದ ಸ್ಥಂಭ ದ ಮೇಲೆ ಕುತಬ್ ಕಾಂಪ್ಲೆಕ್ಸ್ , ಚಂದ್ರ ಅಥವಾ ಚಂದ್ರಗುಪ್ತ - II[೩] ಎಂದು ಹೆಸರಿಸಲಾಗಿದೆ.4.

ದೆಹಲಿಯ ಸಮಕಾಲೀನ ಯುಗ ತೋಮರ್ ನ ಅವಧಿಯನ್ನು ವಿಬುಧ ಶ್ರೀಧರ ನೀಡಿದ್ದಾನೆ. ಮಹತ್ತಾದ ಕೋಟೆಯ ಬಗ್ಗೆ ವರ್ಣಿಸುತ್ತಾ,ಕೋಟೆಯ ಸುತ್ತ ಕಂದಕದ ಪಕ್ಕದಲ್ಲಿಯೇ ಅನಂಗ ಸರೋವರದ ಬಗ್ಗೆ ಹೇಳಿದ್ದಾನೆ. ಅಲ್ಲಿದ್ದ ವಾಣಿಜ್ಯ ಮಳಿಗೆಗಳು ಬಟ್ಟೆಗಳಿಂದ,ಧವಸ ಧಾನ್ಯಗಳಿಂದ ,ಅಡಿಕೆ ಸಿಹಿ ತಿನಿಸುಗಳಿಂದ ತುಂಬಿ ಹೋಗಿತ್ತೆಂದು,ಲೆಕ್ಕ ಪುಸ್ತಕಗಳಿಂದ ಕೂಡಿದ್ದವೆಂದು ಹೇಳಿದ್ದಾನೆ. ಹಾಗೆಯೇ ದೆಹಲಿಯು ವಾಕ್ಚಾತುರ ಭಾಷೆಗಳನ್ನು ಕಲಿಯಲು ಕೇಂದ್ರ ಸ್ಥಾನವಾಗಿತ್ತು ಎಂದು ಹೇಳಿದ್ದಾನೆ. ನಗರದ ಹೆಬಾಗಿಲ ಗೋಪುರಗಳಿಗೆ ಚಿನ್ನದ ಬಣ್ಣ ಹಾಕಲಾಗಿದ್ದು,ಕಟ್ಟಡಗಳನ್ನು ಮುತ್ತುಗಳಿಂದ ಜೋಡಿಸಲಾಗಿದ್ದವು.

ಅಜ್ಮೀರ್ ನ ರಾಜ ಚೌಹಾನ್ ಲಾಲ್ ಕೋಟೆಯನ್ನು 1180 ರಲ್ಲಿ ಆಕ್ರಮಿಸಿ ,ಅದಕ್ಕೆ ಕಿಲ್ಲ ರಾಯ್ ಪಿತೋರ ಎಂದು ಪುನಃ ನಾಮಕರಣ ಮಾಡಿದನು.. 1192ರಲ್ಲಿ ಅಪ್ಘಾನ್‌ಮಹಮದ್ ಘೋರಿಯು ಚೌಹಾಣದ ರಾಜ, ಪ್ರಥ್ವಿರಾಜ- III ಸೋಲಿಸಿದನು. [47] ದೆಹಲಿಯ ರಜಪೂತ ರಾಜ ಅನಂಗಪಾಲ ತೋಮಾರ ಚಂದ್ರವಂಶಿ ಗುರ್ಜಾರ [೪], ದೆಹಲಿಯ ಸ್ಥಾಪಕ ಎಂದು ತಿಳಿಯಲಾಗಿದ್ದು, ಸುಮಾರು 731 ರಲ್ಲಿ ಸೂರಜ್ ಕುಂಡ್ ನಿಂದ 10 ಕಿಲೋ ಮೀಟರುಗಳ ದೂರದಲ್ಲಿ ಕೋಟೆಯನ್ನು ಕಟ್ಟಿಸಿದನು.

1206 ರಿಂದ ದೆಹಲಿಯು, ದೆಹಲಿ ಸುಲ್ತಾನರ ಗುಲಾಮ ಸಾಮ್ರಾಜ್ಯ ದ ರಾಜಧಾನಿಯಾಯಿತು. ದೆಹಲಿಯ ಮೊದಲ ಸುಲ್ತಾನ ,ಕುತುಬ್ -ಉದ್ -ದೀನ್ ಐಬಕ್ ,ಮಾಜಿ ಗುಲಾಮ ,ತದನಂತರದ ದಿನಗಳಲ್ಲಿ ಜನರಲ್ ಆಗಿ,ರಾಜ್ಯಪಾಲನಾಗಿ ದೆಹಲಿಯ ಸುಲ್ತಾನನಾದನು. ದೆಹಲಿಯನ್ನು ಗುರುತಿಸುವ ನಿಟ್ಟಿನಲ್ಲಿ ಕುತುಬ್ ಮಿನಾರ್ ಅನ್ನು, ಕುತುಬ್ -ಉದ್ -ದೀನ್ ಕಟ್ಟಿಸಲು ಪ್ರಾರಂಭಿಸಿದನು.ತನ್ನ ವಿಜಯದ ಸಂಕೇತವಾಗಿ ಇದನ್ನು ಕತ್ತಿಸಲಾರಮ್ಭಿಸಿದ ಅವನು,ಅದು ಸಂಪೂಅರ್ನವಾಗುವ ಮೊದಲೇ ನಿಧನ ಹೊಂದಿದನು. ಈ ಕುತುಬ್ ಕಾಂಪ್ಲೆಕ್ಸ್ ನಲ್ಲಿ , ಕುವ್ವಾತ್ -ಅಲ್ -ಇಸ್ಲಾಂ ( ಇಸ್ಲಾಂ ಶಕ್ತಿ ) ಅನ್ನು ,ಅತ್ಯಂತ ಪ್ರಾಚೀನ ಮಸೀದಿಯಾಗಿ ಭಾರತದಲ್ಲಿ ಕಟ್ಟಿಸಿದನು. 27 ಜೈನರ ದೇವಾಲಯಗಳನ್ನು ಈ ಸ್ಥಳದಲ್ಲಿ ನಾಶಮಾಡಿ,ಅಲ್ಲಿದ್ದ ಅಲೊಂಕಾರಿಕ ಕಂಬಗಳನ್ನು ಕೊಳ್ಳೆ ಹೊಡೆದು,ಅಲ್ಲಿದ್ದ ಕಟ್ಟಡದ ಸಾಮಗ್ರಿಗಳನ್ನು ಲೂಟಿ ಮಾಡಿ ಮಸೀದಿಯ ನಿರ್ಮಾಣ ಮಾಡಿದನು.ಅವುಗಳ ಗುರುತನ್ನು ಈಗಲೂ ಕಾಣಬಹುದಾಗಿದೆ.[೫] ಗುಲಾಮ ಸಾಮ್ರಾಜ್ಯದ ಪತನಾನಂತರ , ಟರ್ಕಿಕ್ ಸೆಂಟ್ರಲ್ ಏಷ್ಯನ್ ಮತ್ತು ಆಫ್ಘನ್ ಸಾಮ್ರಾಜ್ಯಗಳು , ಖಿಲ್ಜಿ ಸಾಮ್ರಾಜ್ಯ , ತುಘ್ಲುಕ್ ಸಾಮ್ರಾಜ್ಯ , ಸಯ್ಯಿದ್ ಸಾಮ್ರಾಜ್ಯ ಮತ್ತು ಲೋದಿ ಸಾಮ್ರಾಜ್ಯ ಮಧ್ಯಂತರ ಯುಗದಲ್ಲಿ ಅಧಿಕಾರವನ್ನು ಪಡೆದು,ದೆಹಲಿಯಲ್ಲಿ ಕೋಟೆ ಮತ್ತು ನಗರಗಳನ್ನು ಕಟ್ಟಿಸಿದರು.[೬]

ದೆಹಲಿಯ ಮುಸ್ಲಿಂ ಸುಲ್ತಾನರು, ತಮ್ಮ ಹಿಂದೂ ಪ್ರಜೆಗಳ ಬಗ್ಗೆ ಅತಿ ಸಹಿಷ್ಣುತೆ ಹೊಂದಿದ್ದಾರೆಂದು ಭಾವಿಸಿ 1398ರಲ್ಲಿ ತೈಮೂರ್ ಲೆಂಕ್‌ ಭಾರತದ ದೆಹಲಿಯ ಮೇಲೆ ಆಕ್ರಮಣ ನಡೆಸಿದನು. ತೈಮೂರ್ ದೆಹಲಿಯನ್ನು ಪ್ರವೇಶಿಸಿ,ನಗರವನ್ನು ಕೊಳ್ಳೆ ಹೊಡೆದು,ಲೂಟಿ ಮಾಡಿ,ಹಾಳುಗೆಡವಿದನು.[೭] 1526 ರಲ್ಲಿ , ಮೊದಲನೇ ಪಾಣಿಪಟ್ ಕದನ ದ ನಂತರ,ಫೆರ್ಗನ ದ ಮಾಜಿ ರಾಜ , ಜಹೀರುದ್ದೀನ್ ಬಾಬರ್ , ಆಫ್ಘನ್ ನ ಕೊನೆಯ ರಾಜ , ಲೋದಿ ಸುಲ್ತಾನನನ್ನು ಸೋಲಿಸಿ , ಮುಘಲ್ ರ ಸಾಮ್ರಾಜ್ಯವನ್ನು ಸ್ಥಾಪಿಸಿ, ದೆಹಲಿ , ಆಗ್ರಾ ಮತ್ತ್ತು ಲಾಹೋರ್ ಗಳನ್ನು ಆಳಿದನು.

17ನೇ ಶತಮಾನದಿಂದ 19ನೇ ಶತಮಾನದವರೆಗೆ[ಬದಲಾಯಿಸಿ]

'ಇಂಡಿಯಾ ಗೇಟ್' - ಆಫ್ಘನ್ ಯುದ್ಧ ಮತ್ತು ಒಂದನೇ ಮಹಾ ಯುದ್ಧದಲ್ಲಿ ಸತ್ತ, 90,000 ಭಾರತೀಯ ಸೈನಿಕರುಗಳ ಸ್ಮಾರಕವಾಗಿದೆ.

16 ನೇ ಶತಮಾನದ ಮಧ್ಯದಲ್ಲಿ ಮುಘಲರ ಆಡಳಿತದಲ್ಲಿ ತೊಡಕಾಗಿದ್ದು, ಶೇರ್ ಶಾ ಸೂರಿ ಯು , ಬಾಬರನ ಮಗ ಹುಮಾಯುನ್ ನನ್ನು ಸೋಲಿಸಿ, ಅಫ್ಘಾನಿಸ್ತಾನ್ ಮತ್ತು ಪರ್ಶಿಯಾ ಗೆ ಅವನನ್ನು ಬಲವಂತವಾಗಿ ಓಡಿಸುವುದರಲ್ಲಿ ಯಶಸ್ವಿಯಾದನು. ಶೇರ್ ಶಾ ಸೂರಿಯು , ದೆಹಲಿಯ 6 ನೇ ನಗರವನ್ನು ಕಟ್ಟಿಸಿ , ಹಳೇ ಕೋಟೆ ಪುರಾನ ಕಿಲ್ಲ ವನ್ನು ಸರಿಪಡಿಸಿದನು.ಇದು ಪ್ರಾಚೀನ ಕಾಲದ ನಗರವಾಗಿತ್ತು. ಶೇರ್ ಶಾ ಸೂರಿಯು ಸತ್ತ ನಂತರ , ಹುಮಯೂನನು ಪರ್ಶಿಯನ್ನರ ಸಹಾಯವನ್ನು ಪಡೆದು,ಮತ್ತೆ ಅಧಿಕಾರವನ್ನು ಮರಳಿ ಪಡೆದನು. 3ನೇ ಹಾಗು ಅತ್ಯಂತ ಹೆಸರುವಾಸಿಯಾದ ಮುಘಲ್ ಚಕ್ರಾಧಿಪತಿ , ಅಕ್ಬರ್ ತನ್ನ ರಾಜಧಾನಿಯನ್ನು , ಆಗ್ರಾ ಕ್ಕೆ ವರ್ಗಾಯಿಸಿದ ಮೇಲೆ ದೆಹಲಿಯ ಅದೃಷ್ಟ ಇಳಿಮುಖವಾಯಿತು. 17ನೇ ಶತಮಾನದ ಮಧ್ಯದಲ್ಲಿ , ಮುಘಲ್ ಸಾಮ್ರಾಜ್ಯದ ರಾಜ ಷಹಜಹಾನ್ (1628-1658) ನಗರವೊಂದನ್ನು ಕಟ್ಟಿಸಿ, ಷಹಜಹನಬಾದ್ ಎಂದು ತನ್ನ ಹೆಸರನ್ನೇ ಇಟ್ಟುಕೊಂಡು, ದೆಹಲಿಯ 7ನೇ ನಗರವಾದ,ಅದು ಇಂದಿನ ಹಳೆಯ ಹಳೆಯ ನಗರ ಅಥವಾ ಹಳೇ ದೆಹಲಿಯಾಗಿದೆ. ಈ ನಗರವು ಹಲವಾರು ವಾಸ್ತುಶಿಲ್ಪತೆಯನ್ನು ಹೊಂದಿದ್ದು,ಇದರಲ್ಲಿ ಕೆಂಪು ಕೋಟೆ (ಲಾಲ್ ಕಿಲ್ಲ ) ಮತ್ತು ಜಮ್ಮ ಮಸ್ಜಿದ್ ಸಹ ಸೇರಿವೆ. ಈ ಹಳೇ ನಗರವು ತದನಂತರದ ಮುಘಲ್ ಸಾಮ್ರಾಜ್ಯದ ರಾಜಧಾನಿಯಾಗಿ 1638 ರಲ್ಲಿ ಚಾಲ್ತಿಯಲ್ಲಿದ್ದು ,ಷಹಜಹಾನನು ಆಗ್ರಾ ದಿಂದ ಮರಳಿ ದೆಹಲಿಗೆ ರಾಜಧಾನಿಯನ್ನು ವರ್ಗಾಯಿಸಿದನು. ಔರಂಗ್ಜೇಬ್ (1658-1707)ದೆಹಲಿಯಲ್ಲಿ 1658 ರಲ್ಲಿ ತಾನಾಗಿಯೇ ಪಟ್ಟಾಭಿಷೇಕ ಮಾಡಿಕೊಂಡಿದ್ದು, ಶಾಲಿಮಾರ್ ತೋಟ ದಲ್ಲಿ ('ಅಯಿಜ್ಜಬಾದ್ -ಬಾಗ್ಹ್ ) 1659 ರಲ್ಲಿ ಎರಡನೇ ಬಾರಿ ಅಧಿಕಾರ ಹೊಂದಿದನು. ಮುಘಲ್ ಸೈನ್ಯವನ್ನು ನಾದಿರ್ ಶಾ ಫೆಬ್ರವರಿ ,1739 ರಲ್ಲಿ ಕರ್ನಾಲ್ ಮಹಾಯುದ್ಧ ದಲ್ಲಿ ಸೋಲಿಸಿ, ಗೆಲುವಿನ ನಂತರ, ನಾದಿರನುದೆಹಲಿಯನ್ನು ಆಕ್ರಮಿಸಿ, ಲೂಟಿ ಮಾಡಿದನು.[೮]

ಮುಘಲ್ ಸಾಮ್ರಾಜ್ಯದ ಪತನಾನಂತರ ಮರಾಠರ ರಾಜ್ಯಭಾರ ಸ್ಥಾಪನೆಗೆ ಕಾರಣವಾಯಿತು. 1707 ರಲ್ಲಿ ಮುಘಲ್ ಸಮ್ರಾಜ್ಯದ ದೊರೆ ಔರಂಗ್ಜೇಬ್ ನಿಧನಾನಂತರ ಮುಘಲ್ ಸಾಮ್ರಾಜ್ಯ ಅಳಿಯುತ್ತಾ ಬಂದಂತೆ, ಮರಾಠರ ಹೋರಾಟಗಳು ಹೆಚ್ಚಾಗಿ ದಕ್ಷಿಣದಲ್ಲಿ ಕಾಣಿಸಿಕೊಂಡು,ಹಲವಾರು ರಾಜ್ಯಗಳ ವಿಭಜನೆಗಳಾಗಿ,( ಹೈದರಾಬಾದ್ ಮತ್ತು ಬೆಂಗಾಲ ಸೇರಿದಂತೆ ), ರಾಜ್ಯಗಳು ದುರ್ಬಲವಾಗುತ್ತಾ ಹೋಯಿತು. ಮರಾಠರು, ಡೆಕ್ಕನ್ ಪ್ರದೇಶದ ಎಲ್ಲ ಮೊಘಲರನ್ನು ಹಿಂದಿಕ್ಕುತ್ತಾ ಬಂದು,ಎಲ್ಲ ಮೊಘಲರ ಪ್ರಾಂತ್ಯಗಳನ್ನು ,ಕೇಂದ್ರ ಮತ್ತು ಉತ್ತರ ಭಾರತದಲ್ಲಿ ಆಕ್ರಮಿಸಿಕೊಳ್ಳುತ್ತಾ ಬಂದರು. ಮುಘಲರು ಹೆಸರಿಗೆ ಮಾತ್ರ ದೆಹಲಿಯಲ್ಲಿ ಆಡಳಿತವನ್ನು 1857 ರವರೆವಿಗೆ ನಡೆಸಿದರು. 3 ನೇ ಪಾಣಿಪಟ್ ಕದನ ದ ನಂತರ 1761 ರಲ್ಲಿ ದೆಹಲಿಯನ್ನು ಅಹ್ಮದ್ ಶಾ ಅಬ್ದಾಲಿ ಆಕ್ರಮಿಸಿದನು. 1803 ರ ಸೆಪ್ಟೆಂಬರ್ 11 ರಂದು ದೆಹಲಿಯ ಕದನ/ಹೋರಾಟ ದಲ್ಲಿ ಜನರಲ್ ಲೇಕ್ ಬ್ರಿಟೀಷರ ತಂಡ ಮರಾಠರನ್ನು ಸೋಲಿಸಿತು.

1857 ರ ಮೊದಲನೇ ಭಾರತದ ಸ್ವಾತಂತ್ರ್ಯ ಹೋರಾಟ ದಲ್ಲಿ ದೆಹಲಿಯು ಬ್ರಿಟಿಷ ರ ಹಿಡಿತಕ್ಕೆ ಒಳಗಾಯಿತು. ಕೊನೆಯ ಮುಘಲ್ ದೊರೆ ಬಹಾದುರ್ ಶಾ ಜಫಾರ್ - II ನನ್ನು ರಂಗೂನ್ ಗೆ ದಬ್ಬಲಾಯಿತು,ಮತ್ತು ಇನ್ನುಳಿದ ಮುಘಲ್ ಪ್ರಾಂತ್ಯಗಳನ್ನು ಬ್ರಿಟಿಷ್ ಇಂಡಿಯಾ ಸಾಮ್ರಾಜ್ಯದ ಭಾಗಗಳು ಎಂದು ಗುರುತಿಸಲಾಯಿತು.

20ನೇ ಶತಮಾನ[ಬದಲಾಯಿಸಿ]

ಚಿತ್ರ:RajGhat.JPG
ರಾಜ್ ಘಾಟ್ - 'ಮೋಹನದಾಸ ಕರಮಚಂದ ಗಾಂಧಿ' ಯ ಸಮಾಧಿ ಸ್ಥಳವಾಗಿದೆ.

1857 ರ ಭಾರತದ ಹೋರಾಟ ದ ನಂತರ , ಕಲ್ಕತ್ತ ಬ್ರಿಟಿಷ್ ಭಾರತದ 'ರಾಜಧಾನಿ' ಎಂದು ಘೋಷಿಸಿದರೂ, 1911 ರಲ್ಲಿ ಮತ್ತೊಮ್ಮೆ ದೆಹಲಿಯನ್ನು 'ರಾಜಧಾನಿ' ಎಂದು ಪರಿಗಣಿಸಲಾಯಿತು. ಹಳೆಯ ದೆಹಲಿಯ ಭಾಗಗಳನ್ನು ಒಡೆದು ಹಾಕಿ ಹೊಸ ದೆಹಲಿ ಯನ್ನು ನಿರ್ಮಿಸಲಾಯಿತು. ಬ್ರಿಟೀಷರ ವಾಸ್ತುಶಿಲ್ಪಿ ತಜ್ಞ ಎಡ್ವಿನ್ ಲುತ್ಯೆನ್ಸ್ ನ ಯೋಜನೆಗಳಂತೆ ಸರ್ಕಾರಿ ಕಟ್ಟಡಗಳನ್ನು ಕಟ್ಟಲಾಯಿತು. ಈ ಕಟ್ಟಡದ ಹಿಂದಿನ ಭಾರತೀಯ ಇಂಜಿನಿಯರುಗಳು ಶ್ರಮ, ಕೆಲಸಗಳ ಬಗ್ಗೆ ಖುಷ್ವಂತ್ ಸಿಂಗ್ ರ ಜೀವನ ಚರಿತ್ರೆಯಲ್ಲಿ ಸತ್ಯ , ಪ್ರೀತಿ ಮತ್ತು ಸ್ವಲ್ಪ ದ್ವೇಷದಲ್ಲಿ ಚಿತ್ರಿಸಲಾಗಿದೆ.. 1947 ರ ಸ್ವಾತಂತ್ರ್ಯದ ನಂತರ ಹೊಸ ದೆಹಲಿಯನ್ನು ಅಧಿಕೃತವಾಗಿ ಭಾರತ ಸರ್ಕಾರ ದ ರಾಜಧಾನಿ ಎಂದು ಘೋಷಿಸಲಾಯಿತು. ಭಾರತದ ವಿಭಜನೆ ಯ ಕಾಲದಲ್ಲಿ ಸಾವಿರಾರು ಹಿಂದೂ ಮತ್ತು ಸಿಖ್ ನಿರಾಶ್ರಿತರು ಪಶ್ಚಿಮ ಪಂಜಾಬ್ ನಿಂದ ದೆಹಲಿಗೆ ಬಂದರು ,ಮತ್ತು ನಂತರದ ದಿನಗಳಲ್ಲಿ ಉತ್ತರ ಮತ್ತು ಪಶ್ಚಿಮ ದೆಹಲಿ ಭಾಗಗಳಲ್ಲಿ ನೆಲೆಸಿ , ಪೂರ್ವ ಪಾಕಿಸ್ತಾನ ದಿಂದ ಹಿಂದೂಗಳು ವಲಸಿಗರಾಗಿ 1960 ರ ನಂತರದ ದಿನಗಳಲ್ಲಿ ಇಪಿಡಿಪಿ ಕಾಲೋನಿಯಲ್ಲಿ (:ಇಪಿಡಿಪಿ ಪೂರ್ವ ಪಾಕಿಸ್ತಾನದ ನಿರಾಶ್ರಿತ ಜನ ) ದಕ್ಷಿಣ ದೆಹಲಿಯಲ್ಲಿ, ಅಂದರೆ ಈಗಿನ ಚಿತ್ತರಂಜನ್ ಪಾರ್ಕ್ ನಲ್ಲಿ , 1980 ರಲ್ಲಿ ನೆಲೆಸಿದರು .

ಆಕರಗಳು[ಬದಲಾಯಿಸಿ]

 1. ೧.೦ ೧.೧ ಅನ್ ಅರ್ಲಿ ಅಟೆಸ್ಟೆಶನ್ ಆಫ್ ದಿ ತೋಪೋನ್ಯ್ಮ್ ಧಿಲ್ಲಿ , ರಿಚರ್ಡ್ ಜೆ.ಕೋಹೆನ್ ರವರಿಂದ , ಜರ್ನಲ್ ಆಫ್ ದಿ ಅಮೆರಿಕನ್ ಓರಿಯಂಟಲ್ ಸೊಸೈಟಿ , 1989, ಪುಟ . 513-519
 2. ಸತ್ಯಾರ್ಥ ಪ್ರಕಾಶ್ -ಸ್ವಾಮಿ ದಯಾನಂದ ಸರಸ್ವತಿ .
 3. Ghosh, A. (1991). Encyclopedia of Indian Archaeology. BRILL. p. 251. ISBN 9004092641. {{cite book}}: Cite has empty unknown parameter: |coauthors= (help); External link in |ref= (help)
 4. A. F. Rudolf Hoernle. Some Problems of Ancient Indian History. No. III: The Gurjara Clans(Concluded from p. 662, October, 1904). Royal Asiatic Society of Great Britain and Ireland. Both this "leader" and the "lord" Rudrena must have been chiefs of minor divisions of the imperial Tomara clan of Gurjaras. {{cite book}}: Unknown parameter |source= ignored (help)
 5. "World Heritage Monuments and Related Edifices in India". Pg.107. Google Books. Retrieved 2009-05-27. {{cite web}}: |first= missing |last= (help); Cite has empty unknown parameter: |coauthors= (help)CS1 maint: multiple names: authors list (link)
 6. "ಬಟ್ಟುತನ ಪ್ರವಾಸ : ದೆಹಲಿ , ಮುಸ್ಲಿಂ ಭಾರತದ ರಾಜಧಾನಿ". Archived from the original on 2008-04-23. Retrieved 2010-06-18.
 7. "ದಿ ಇಸ್ಲಾಮಿಕ್ ವರ್ಲ್ಡ್ ಟು 1600: ದಿ ಮೊಂಗೊಲ್ ಇನ್ವೇಶನ್ಸ್ (ದಿ ತೈಮುರಿದ್ ಎಂಪೈರ್ )". Archived from the original on 2009-08-16. Retrieved 2010-06-18.
 8. ಇರಾನ್ ಇನ್ ದಿ ಏಜ್ ಆಫ್ ದಿ ರಾಜ್

ಇವುಗಳನ್ನೂ ನೋಡಬಹುದು[ಬದಲಾಯಿಸಿ]