ತೊಂಬಟ್ಟು
ತೊಂಬಟ್ಟು | |
---|---|
ಹಳ್ಳಿ | |
Coordinates: 13°39′51.4″N 74°59′10.3″E / 13.664278°N 74.986194°E | |
Country | ಭಾರತ |
State | ಕರ್ನಾಟಕ |
District | ಉಡುಪಿ ಜಿಲ್ಲೆ |
Nearest city | ಕುಂದಾಪುರ |
Languages | |
• Official | ಕನ್ನಡ, ತುಳು |
Time zone | UTC+5:30 (IST) |
Telephone code | 08259 |
Vehicle registration | KA-20 |
Nearest city | Udupi |
Climate | Tropical (Köppen) |
ತೊಂಬಟ್ಟು, ಇದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಒಂದು ಗ್ರಾಮ. ಇದು ಉಡುಪಿ ಜಿಲ್ಲೆಯ ಉತ್ತರ ದಿಕ್ಕಿನಿಂದ ೪೫ ಕಿಲೋಮೀಟರ್, ಕುಂದಾಪುದಿಂದ ೨೬ ಕಿಲೋಮೀಟರ್ ಹಾಗೂ ಬೆಂಗಳೂರುನಿಂದ ೪೧೦ ಕಿಲೋಮೀಟರ್ ದೂರದಲ್ಲಿದೆ. ಕೋಟ, ಉಡುಪಿ, ಕಾರ್ಕಳ, ಸಾಗರ ಇವು ಈ ಸ್ಥಳಕ್ಕೆ ಹತ್ತಿರವಿರುವ ಪ್ರದೇಶವಾಗಿದೆ. ತೊಂಬಟ್ಟು ಜಲಪಾತವು ಅರಬ್ಬೀ ಸಮುದ್ರದ ಪಶ್ಚಿಮ ದಿಕ್ಕಿನಲ್ಲಿದೆ. ಇದರ ಪೂರ್ವ ದಿಕ್ಕಿನಲ್ಲಿ ಪಶ್ಚಿಮ ಘಟ್ಟಗಳಿವೆ. ತೊಂಬಟ್ಟು ಜಲಪಾತವು ಭತ್ತದ ಗದ್ದೆ ಮತ್ತು ತೆಂಗಿನ ತೋಟಗಳಿಂದ ಹಾಗೂ ದಟ್ಟವಾದ ಅರಣ್ಯ ಭೂಮಿ, ಗುಡ್ಡಗಾಡು ಪ್ರದೇಶಗಳಿಂದ ಕೂಡಿದೆ. ಪ್ರತಿ ವರ್ಷ ಈ ಸ್ಥಳದಲ್ಲಿ ಜೂನ್ ತಿಂಗಳಿನಿಂದ ಅಕ್ಟೋಬರ್ ತಿಂಗಳವರೆಗೆ ಅಧಿಕ ಮಳೆಯಾಗುತ್ತದೆ.
ಆರ್ಥಿಕತೆ
[ಬದಲಾಯಿಸಿ]ಕೃಷಿ ತೊಂಬಟ್ಟು ಗ್ರಾಮದ ಜನರ ಪ್ರಮುಖ ಆರ್ಥಿಕತೆಯಾಗಿದೆ. ಅಕ್ಕಿ, ತೆಂಗಿನಕಾಯಿ, ಅಡಿಕೆ ಮತ್ತು ಗೇರುಬೀಜಗಳನ್ನು ಇಲ್ಲಿ ಬೆಳೆಸಲಾಗುತ್ತದೆ. ರಬ್ಬರ್ ಕೂಡ ಇಲ್ಲಿನ ಪ್ರಮುಖ ಬೆಳೆಯಾಗಿದೆ.
ವಾರಾಹಿ ನದಿ
[ಬದಲಾಯಿಸಿ]ವಾರಾಹಿ ನದಿಯನ್ನು ಸ್ಥಳೀಯ ಜನರು ಬಾಗಿಮನೆ ನದಿ ಅಥವಾ ಮಚಟ್ಟು ನದಿ [೧] ಅಥವಾ ಹಾಲಾಡಿ ನದಿ [೨] ಎಂದು ಕರೆಯುತ್ತಾರೆ. ಈ ನದಿಯು ಗ್ರಾಮದ ಉತ್ತರ ದಿಕ್ಕಿನಲ್ಲಿ ಹರಿದು, ನದಿದಡದ ಅಡಿಕೆ ತೋಟಗಳಿಗೆ ನೀರಾವರಿಯ ಮೂಲವಾಗಿದೆ. ಬಸ್ರೂರು ಗ್ರಾಮವನ್ನು ಹಾದು ನಂತರ ಕುಂದಾಪುರದ ಬಳಿ ವಾರಾಹೀ ನದಿಯು ಅರಬ್ಬೀ ಸಮುದ್ರವನ್ನು ಸೇರುತ್ತದೆ. ಮಾಸ್ತಿಕಟ್ಟೆಯ [೩] ಬಳಿ ವಾರಾಹಿ ನದಿಗೆ ಅಡ್ಡಲಾಗಿ ಮಣಿ ಅಣೆಕಟ್ಟನ್ನು ನಿರ್ಮಿಸಿದ ನಂತರ ಈ ನದಿಯ ಹರಿವು ಬಹಳ ಕಡಿಮೆಯಾಗಿದೆ. ಈ ಅಣೆಕಟ್ಟು ತೊಂಬಟ್ಟು ಗ್ರಾಮಕ್ಕೆ ಸಮೀಪದಲ್ಲಿದೆ.
ಸಸ್ಯ ಮತ್ತು ಪ್ರಾಣಿ
[ಬದಲಾಯಿಸಿ]ತೊಂಬಟ್ಟು ಜಲಪಾತವು ಪಶ್ಚಿಮ ಘಟ್ಟಗಳಿಂದ ಕೂಡಿದ್ದು ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿದೆ. ಈ ಸ್ಥಳದಲ್ಲಿ ವಿವಿಧ ರೀತಿಯ ಸಸ್ಯ ಮತ್ತು ಪ್ರಾಣಿ ಪಕ್ಷಿಗಳು ಕಂಡು ಬರುತ್ತದೆ. ಕೊಲ್ಲೂರು, ಅಮಾಸೆಬೈಲು ಇವು ಸುತ್ತಮುತ್ತಲಿನ ಪ್ರದೇಶಗಳಾಗಿವೆ. ಚಿರತೆ, ಹುಲಿ, ಕಾಡೆಮ್ಮೆ ಮತ್ತು ನಾಗರ ಹಾವುಗಳು ಈ ಕಾಡಿನಲ್ಲಿ ಕಂಡುಬರುತ್ತವೆ. ಅಪರೂಪದ ಬೀಟೆಮರ ಇಲ್ಲಿ ನೋಡಲು ಸಿಗುತ್ತದೆ. ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯವು ಜಲಪಾತದ ಪೂರ್ವದಿಕ್ಕಿನಲ್ಲಿದೆ.
ಕಲೆ ಮತ್ತು ಸಂಸ್ಕೃತಿ
[ಬದಲಾಯಿಸಿ]ಯಕ್ಷಗಾನ ಇಲ್ಲಿನ ಮುಖ್ಯ ಕಲೆಯಾಗಿದೆ. ಇದು ನೃತ್ಯ-ನಾಟಕಗಳಿಂದ ಕೂಡಿದ್ದು ೬-೮ ಗಂಟೆಗಳ ಕಾಲ ನಡೆಯುತ್ತದೆ. ಪ್ರತಿವರ್ಷ ನವಂಬರ್ ನಿಂದ ಮೇ ತಿಂಗಳವರೆಗೆ ಉಡುಪಿಯ ಸುತ್ತಮುತ್ತಲಿನ ವಿವಿಧ ಸ್ಥಳಗಳಲ್ಲಿ ಯಕ್ಷಗಾನ ನಡೆಯುತ್ತದೆ. ಇಲ್ಲಿ ಶ್ರೀ ಮಹಾಗಣಪತಿ ಭಜನಾ ಮಂಡಳಿ, ತೊಂಬಟ್ಟು ಎಂಬ ಭಜನಾ ಮಂದಿರವಿದ್ದು, ಅನೇಕ ಕಾರ್ಯಕ್ರಮಗಳು ನಡೆಯುತ್ತವೆ.
ಶಿಕ್ಷಣ ಸಂಸ್ಥೆ
[ಬದಲಾಯಿಸಿ]- ವರಸಿದ್ದಿವಿನಾಯಕ ಪದವಿಪರ್ವೂ ಕಾಲೇಜು, ಕೇರಾಡಿ
- ಕೆನರಾ ಕಾಲೇಜ್ ಅಫ್ ನರ್ಸಿಂಗ್
- ಮೂಡಲಾಕಟ್ಟೆ ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿ
- ಮದರ್ ತೆರೆಸಾ ಸ್ಕೂಲ್ ಮತ್ತು ಶಂಕರನಾರಾಯಣ ಕಾಲೇಜು
- ಸರ್ಕಾರಿ ಪ್ರೌಢಶಾಲೆ, ಅಮಾವಾಸೆಬೈಲು
ಉಲ್ಲೇಖಗಳು
[ಬದಲಾಯಿಸಿ]- ↑ https://books.google.com/books?id=C8h2lSmvyMUC&printsec=frontcover&dq=halady+kundapura&source=bl&ots=CnmapQTeS1&sig=pELrBSMZ0NbkHiGqYYWFjPhpFEA&hl=en&sa=X&ei=hncWUP34H4-srAeHvYD4Cg&redir_esc=y#v=onepage&q=haladi&f=false
- ↑ Geology of K<arnataka by B. P. Radhakrishna, R. Vaidyanadhan.Pub:Geological Survey of India (1994) 2nd print. Page 325.[೧]
- ↑ Forest biodiversity, Volume 1 by Sadasivam Kannaiyan.Associated Pub.Co. (2008) Page.127. [೨]