ಡ್ರ್ಯಾಗನ್
This article possibly contains original research. (September 2007) |
ಡ್ರ್ಯಾಗನ್‌ಗಳು ಅನೇಕ ಸಂಸ್ಕೃತಿಗಳ ಪುರಾಣ ಕಥೆಗಳಲ್ಲಿ ಕಂಡುಬರುವ ಹಾವಿನಂಥ ಅಥವಾ ಸರೀಸೃಪಗಳಂಥ ವಿಶೇಷ ಲಕ್ಷಣಗಳನ್ನು ಹೊಂದಿರುವ ಪೌರಾಣಿಕ ಪ್ರಾಣಿಗಳು.
ಹೆಚ್ಚು ಸಾಮಾನ್ಯವಾಗಿ ತಿಳಿದುಕೊಳ್ಳಲಾದ ಡ್ರ್ಯಾಗನ್‌ಗಳೆಂದರೆ - ಯುರೋಪಿನ ವಿವಿಧ ಜಾನಪದ ಸಂಪ್ರದಾಯಗಳಿಂದ ಪಡೆದ ಮತ್ತು ಅಂತಿಮವಾಗಿ ಗ್ರೀಕ್ ಮತ್ತು ಮಧ್ಯ ಪೂರ್ವ ಪುರಾಣಗಳಿಗೆ ಸಂಬಂಧಿಸಿದ ಯುರೋಪಿನ ಡ್ರ್ಯಾಗನ್‌ಗಳು ಹಾಗೂ ಚೀನಾದ ಡ್ರ್ಯಾಗನ್‌ನಂಥ ಸಂಬಂಧಪಡದ ಪೂರ್ವದೇಶದ ಡ್ರ್ಯಾಗನ್‌ಗಳು (ಸಾಂಪ್ರದಾಯಿಕ: 龍; ಸರಳೀಕೃತ: 龙; ಪಿನ್‌ಯಿನ್: lóng ). ಇಂಗ್ಲಿಷ್ ಪದ "ಡ್ರ್ಯಾಗನ್"ಅನ್ನು "ಡ್ರ್ಯಾಗನ್, ದೊಡ್ಡ ಗಾತ್ರದ ಸರೀಸೃಪ, ನೀರು-ಹಾವು" ಎಂಬರ್ಥವಿರುವ ಗ್ರೀಕ್‌ನ ಪದ δράκων (ಡ್ರ್ಯಾಕನ್ )ದಿಂದ ಪಡೆಯಲಾಗಿದೆ. ಅದು ಬಹುಶಃ ಕ್ರಿಯಾಪದ δρακεῖν (ಡ್ರ್ಯಾಕೈನ್ ) "ಸ್ಪಷ್ಟವಾಗಿ ನೋಡಲು" ಎಂಬುದರಿಂದ ಬಂದಿರಬಹುದು.
ಸ್ಥೂಲ ಅವಲೋಕನ
[ಬದಲಾಯಿಸಿ]This section contains weasel words: vague phrasing that often accompanies biased or unverifiable information. (July 2009) |
ಡ್ರ್ಯಾಗನ್‌ಗಳನ್ನು ಸಾಮಾನ್ಯವಾಗಿ ಆಧುನಿಕ ಕಾಲದಲ್ಲಿ ಅತಿದೊಡ್ಡ ಗಾತ್ರದ ಹಲ್ಲಿಯಂತೆ ಅಥವಾ ಹಲ್ಲಿಯ-ಮಾದರಿಯ ಎರಡು ಜೊತೆ ಕಾಲುಗಳನ್ನು ಹೊಂದಿರುವ ಹಾವಿನಂತೆ ಮತ್ತು ಬಾಯಿಂದ ಬೆಂಕಿಯನ್ನು ಉಗುಳುವ ಸಾಮರ್ಥ್ಯ ಇರುವಂತೆ ತೋರಿಸಲಾಗುತ್ತದೆ. ಯುರೋಪಿನ ಡ್ರ್ಯಾಗನ್ ಅದರ ಹಿಂದಿನಿಂದ ಬೆಳೆದ ಬಾವಲಿಯ ರೀತಿಯ ರೆಕ್ಕೆಗಳನ್ನು ಹೊಂದಿರುತ್ತದೆ. ಮುಂದಿನ ಕಾಲುಗಳಿರದ ಡ್ರ್ಯಾಗನ್-ಮಾದರಿಯ ಪ್ರಾಣಿಯನ್ನು ವೈವರ್ನ್ ಎಂದು ಕರೆಯಲಾಗುತ್ತದೆ. ಟೆರಸಾರ್ಗಳು ಭೂಮಿಯಲ್ಲಿ ಹೇಗೆ ನಡೆದಾಡಿದ್ದಾವೆ ಎಂಬುದನ್ನು ಅನ್ವೇಷಣೆ ಮಾಡಿದ ನಂತರ, ಕೆಲವು ಡ್ರ್ಯಾಗನ್‌ಗಳನ್ನು ಮುಂದಿನ ಕಾಲುಗಳಿಲ್ಲದಂತೆ ಮತ್ತು ರೆಕ್ಕೆಗಳನ್ನು ಮುಂಭಾಗದ ಕಾಲುಗಳಾಗಿ ಬಳಸಿಕೊಂಡು ಟೆರಸಾರ್-ಶೈಲಿಯಲ್ಲಿ ಭೂಮಿಯ ಮೇಲೆ ನಡೆಯುವಂತೆ ಚಿತ್ರಿಸಲಾಗಿದೆ.
ಡ್ರ್ಯಾಗನ್‌ಗಳು ಪ್ರಪಂಚದಾದ್ಯಂತದ ಹೆಚ್ಚಿನ ಪುರಾಣ ಕಥೆಗಳಲ್ಲಿ ಕಂಡುಬಂದಿವೆಯಾದರೂ, ವಿವಿಧ ಸಂಸ್ಕೃತಿಗಳು ಡ್ರ್ಯಾಗನ್ ಹೆಸರಿನಡಿಯಲ್ಲಿ ಗುಂಪುಗೂಡಿಸಲಾದ ಭಿನ್ನ ದೈತ್ಯಪ್ರಾಣಿಗಳ ಬಗೆಗಿನ ಕಥೆಗಳನ್ನು ಹೊಂದಿವೆ. ಕೆಲವು ಡ್ರ್ಯಾಗನ್‌ಗಳು ಬೆಂಕಿಯನ್ನು ಉಗುಳುತ್ತವೆ ಅಥವಾ ವಿಷಕಾರಿಯಾಗಿವೆ ಎಂದು ಹೇಳಲಾಗುತ್ತದೆ. ಅವುಗಳನ್ನು ಸಾಮಾನ್ಯವಾಗಿ ಹಾವಿನಂತೆ ಅಥವಾ ಸರೀಸೃಪದಂತೆ, ಮೊಟ್ಟೆಯೊಡೆದು ಹೊರಬರುವಂತೆ ಮತ್ತು ವಿಶಿಷ್ಟವಾಗಿ ಚಿಪ್ಪುಚಿಪ್ಪಾಗಿ ಕಾಣುವ ಅಥವಾ ಗರಿಗಳಂತಹ ದೇಹವನ್ನು ಹೊಂದಿರುವಂತೆ ವರ್ಣಿಸಲಾಗುತ್ತದೆ. ಅವುಗಳನ್ನು ಕೆಲವೊಮ್ಮೆ ವಿಶೇಷವಾಗಿ ದೊಡ್ಡ ಕಣ್ಣುಗಳನ್ನು ಹೊಂದಿರುವಂತೆ ಅಥವಾ ಸಂಪತ್ತನ್ನು ತುಂಬಾ ಶ್ರದ್ಧೆಯಿಂದ ವೀಕ್ಷಿಸುವಂತೆ, ಡ್ರ್ಯಾಗನ್ ಪದದ ಮೂಲವನ್ನು ("ಸ್ಪಷ್ಟವಾಗಿ ನೋಡಲು" ಎಂಬರ್ಥದ ಗ್ರೀಕ್ ಪದ ಡ್ರ್ಯಾಕೈನ್ ) ನಿರೂಪಿಸುವ ವೈಶಿಷ್ಟ್ಯ, ಚಿತ್ರಿಸಲಾಗುತ್ತದೆ.[೧] ಕೆಲವು ಪುರಾಣ ಕಥೆಗಳು ಅವುಗಳು ಬೆನ್ನೆಲುಬಿನ ಸಾಲೊಂದನ್ನು ಹೊಂದಿರುವಂತೆ ನಿರೂಪಿಸುತ್ತವೆ. ಯುರೋಪಿನ ಡ್ರ್ಯಾಗನ್‌ಗಳು ಹೆಚ್ಚಾಗಿ ರೆಕ್ಕೆಗಳನ್ನು ಹೊಂದಿರುತ್ತವೆ. ಪೂರ್ವದೇಶದ ಡ್ರ್ಯಾಗನ್‌ಗಳು ದೊಡ್ಡ ಗಾತ್ರದ ಹಾವುಗಳನ್ನು ಹೋಲುತ್ತವೆ. ಡ್ರ್ಯಾಗನ್‌ಗಳು ಅಸ್ಥಿರ ಸಂಖ್ಯೆಯ ಕಾಲುಗಳನ್ನು ಹೊಂದಿರುತ್ತವೆ: ಕಾಲುಗಳೇ ಇಲ್ಲದಿರಬಹುದು, ಎರಡು, ನಾಲ್ಕು ಅಥವಾ ಅದಕ್ಕಿಂತ ಹೆಚ್ಚು - ಆರಂಭಿಕ ಯುರೋಪಿನ ಸಾಹಿತ್ಯದಲ್ಲಿ ನಿರೂಪಿಸಲಾದಂತೆ.
ಪ್ರಪಂಚದಾದ್ಯಂತದ ವಿವಿಧ ಧರ್ಮಗಳಲ್ಲಿ ಮತ್ತು ಸಂಸ್ಕೃತಿಗಳಲ್ಲಿ ಡ್ರ್ಯಾಗನ್‌ಗಳು ಪ್ರಮುಖ ದೈವಿಕ ಮಹತ್ವವನ್ನು ಹೊಂದಿವೆ ಎಂದು ಹೇಳಲಾಗುತ್ತದೆ. ಏಷ್ಯಾದ ಅನೇಕ ಸಂಸ್ಕೃತಿಗಳಲ್ಲಿ ಡ್ರ್ಯಾಗನ್‌ಗಳನ್ನು ಪರಿಸರ, ಧರ್ಮ ಮತ್ತು ಜಗತ್ತಿನ ಪ್ರಧಾನ ಶಕ್ತಿಗಳ ಪ್ರತೀಕಗಳೆಂದು ಭಯಭಕ್ತಿಗಳಿಂದ ಕಾಣಲಾಗುತ್ತಿತ್ತು ಮತ್ತು ಇನ್ನು ಕೆಲವು ಸಂಸ್ಕೃತಿಗಳಲ್ಲಿ ಈಗಲೂ ಕಾಣಲಾಗುತ್ತಿದೆ. ಅವು ಸೂಕ್ಷ್ಮ ಪರಿಜ್ಞಾನವನ್ನು ಮತ್ತು ದೀರ್ಘಾಯುಷ್ಯವನ್ನು ಹೊಂದಿರುತ್ತವೆ ಎಂದು ಹೇಳಲಾಗುತ್ತದೆ. ಹೆಚ್ಚಾಗಿ ಮಾನವರಿಗಿಂತ ಅಧಿಕ ಸೂಕ್ಷ್ಮವಿವೇಚನೆಯಿರುತ್ತದೆ ಎಂದೂ ನಂಬಲಾಗಿದೆ. ಅವು ಕೆಲವು ರೂಪದ ಮಂತ್ರವಿದ್ಯೆಯನ್ನು ಅಥವಾ ಇತರ ಅತಿಮಾನುಷ ಶಕ್ತಿಯನ್ನು ಹೊಂದಿರುತ್ತವೆ. ಅಲ್ಲದೇ ಮಳೆ, ಚಿಲುಮೆ, ನದಿಗಳನ್ನು ಒಳಗೊಂಡಿರುತ್ತವೆ ಎಂದು ಹೇಳಲಾಗುತ್ತದೆ. ಕೆಲವು ಸಂಸ್ಕೃತಿಗಳಲ್ಲಿ ಅವು ಮನುಷ್ಯರ ಮಾತನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತವೆಂದೂ ನಿರೂಪಿಸಲಾಗಿದೆ. ಕೆಲವು ಸಂಪ್ರದಾಯಗಳಲ್ಲಿ ಡ್ರ್ಯಾಗನ್‌ಗಳೇ ಮಾನವರಿಗೆ ಮಾತನಾಡಲು ಕಲಿಸಿಕೊಟ್ಟವೆಂದು ಹೇಳಲಾಗಿದೆ.
ಕುದುರೆ ಬೆನ್ನಿನಲ್ಲಿ ತಿರುಗಾಡಿದರೂ ಕಾಲಾಳುಗಳಾಗಿ ಸೆಣಸಾಡುತ್ತಿದ್ದ ಕಾಲುಪಡೆಯ ಹೆಸರು ಡ್ರ್ಯಾಗೂನ್ ಪದವನ್ನು ಅವರ ಆರಂಭದ ಫಿರಂಗಿ "ಡ್ರ್ಯಾಗನ್"ನಿಂದ ಪಡೆದುಕೊಳ್ಳಲಾಗಿದೆ. "ಡ್ರ್ಯಾಗನ್" ಸಿಡಿಸಿದಾಗ ಬೆಂಕಿ ಹೊರಬರುವ ಅಗಲವಾದ ಕೊಳವೆಯನ್ನು ಹೊಂದಿರುವ ಒಂದು ಹಗುರ ಬಂದೂಕು. ಆದ್ದರಿಂದ ಪೌರಾಣಿಕ ಪ್ರಾಣಿಗೆ ಆ ಹೆಸರನ್ನು ಇಡಲಾಗಿದೆ.
ಮೂಲ ಮತ್ತು ವ್ಯುತ್ಪತ್ತಿಶಾಸ್ತ್ರ
[ಬದಲಾಯಿಸಿ]ಡ್ರ್ಯಾಗನ್ ಪದವನ್ನು ಗ್ರೀಕ್ δρακω ಪದದಿಂದ ಲ್ಯಾಟಿನ್ ಡ್ರ್ಯಾಕೊ ಎಂಬ ಪದದ ಮೂಲಕ ಪಡೆಯಲಾಗಿದೆ. ಇದನ್ನು 13ನೇ ಶತಮಾನದಿಂದ ಮಧ್ಯಕಾಲೀನ ಇಂಗ್ಲಿಷ್‌ನಲ್ಲಿ ಮಧ್ಯಯುಗದ ಪ್ರಾಣಿನೀತಿ ಕಥೆಗಳು ಮತ್ತು ಪುರಾಣ ಕಥೆಗಳ ಸಂದರ್ಭದಲ್ಲಿ ಪ್ರಮಾಣೀಕರಿಸಲಾಗಿದೆ.
ಗ್ರೀಕ್ ಮತ್ತು ಲ್ಯಾಟಿನ್ ಪದವು ಪೌರಾಣಿಕವಲ್ಲದ ಬೇರೆ ಯಾವುದೊ ದೊಡ್ಡ ಗಾತ್ರದ ಹಾವನ್ನು ನಿರೂಪಿಸುತ್ತದೆ. ಅಲ್ಲದೇ ಈ ಬಳಕೆಯು 18ನೇ ಶತಮಾನದವರೆಗೆ ಇಂಗ್ಲಿಷ್‌ನಲ್ಲಿಯೂ ಅಸ್ತಿತ್ವದಲ್ಲಿತ್ತು. ಭಾರಿ ಕೊಮೊಡೊ ಹಲ್ಲಿ ವಾರನಸ್ ಕೊಮೊಡೋಯೆನ್ಸಿಸ್ ಸಹ ಇಂದು ಕೊಮೊಡೊ ಡ್ರ್ಯಾಗನ್ ಆಗಿ ಇಂಗ್ಲಿಷ್‌ನಲ್ಲಿ ಕಂಡುಬಂದಿದೆ. ಕಿಂಗ್ ಜೇಮ್ಸ್ ಬೈಬಲ್ "ಹಾವು", "ಡ್ರ್ಯಾಗನ್" ಮತ್ತು "ದುಷ್ಟ ಶಕ್ತಿ" ಇತ್ಯಾದಿ ಪದಗಳನ್ನು ಹೆಚ್ಚು ಕಡಿಮೆ ಅದಲುಬದಲು ಮಾಡುವ ರೀತಿಯಲ್ಲಿ ಬಳಸಿಕೊಂಡಿದೆ.
ದೈತ್ಯ ಗಾತ್ರದ ಹಾವು ವೀರೋಚಿತ ದೇವರಾಗಿ ಮೂಡಿಬಂದುದರ ಮೂಲವು, ಕ್ಯಾನನೈಟ್ (ಹೀಬ್ರೂ, ಉಗಾರ್ಟಿಕ್), ಹಿಟೈಟ್ ಮತ್ತು ಮೆಸಪೊಟಮಿಯನ್ ಮೊದಲಾದವುಗಳನ್ನೂ ಒಳಗೊಂಡಂತೆ ಪುರಾತನ ಸಮೀಪಪ್ರಾಚ್ಯ ಪುರಾಣದಲ್ಲಿದೆ. ಹಾವಿನ ವಿಶಿಷ್ಟ ಲಕ್ಷಣವು ಇತಿಹಾಸಪೂರ್ವ ಇಂಡೊ-ಯುರೋಪ್ ಪುರಾಣದಲ್ಲಿ ಕಂಡುಬಂದಿದ್ದರೂ, ಇಂಡಿಕ್ ಮತ್ತು ಜರ್ಮ್ಯಾನಿಕ್ ಅಂಶಗಳ ತುಲನಾತ್ಮಕ ಸಾಕ್ಷ್ಯವನ್ನು ಆಧರಿಸಿ ಚಾವೋಸ್‌ಕ್ಯಾಂಫ್ ವಿಶಿಷ್ಟ ಲಕ್ಷಣವು ಗ್ರೀಕ್ ಪುರಾಣವನ್ನು ಮತ್ತು ಅಂತಿಮವಾಗಿ ಕ್ರೈಸ್ತ ಪುರಾಣವನ್ನು ಪ್ರವೇಶಿಸಿತು.
"ಯುರೋಪಿನ ಡ್ರ್ಯಾಗನ್" (ಮತ್ತು ಅದರ ಸಮೀಪಪ್ರಾಚ್ಯ ಮತ್ತು ಇಂಡಿಕ್ ಭಾಷಾಕುಲದ) ಪುರಾಣ ಕಥೆಯು ಚೀನಾದ ಡ್ರ್ಯಾಗನ್ ಪುರಾಣ ಕಥೆಗಿಂತ ಭಿನ್ನವಾದ ಗುಣಲಕ್ಷಣ ಮತ್ತು ಮೂಲಗಳನ್ನು ಹೊಂದಿದೆ.
ಡೈನಸಾರ್ ಮತ್ತು ಸಸ್ತನಿಯ ಪಳೆಯುಳಿಕೆಗಳನ್ನು ಡ್ರ್ಯಾಗನ್‌ಗಳ ಮತ್ತು ಇತರ ಪೌರಾಣಿಕ ಪ್ರಾಣಿಗಳ ಮೂಳೆಗಳೆಂದು ತಪ್ಪು ತಿಳಿಯಲಾಗಿತ್ತು; ಉದಾಹರಣೆಗಾಗಿ, ಕ್ರಿ.ಪೂ 300ರಲ್ಲಿ ಚೀನಾದ ಸಿಚ್ವಾನ್ ವುಚೆಂಗ್‌ನಲ್ಲಿ ಮಾಡಿದ ಅನ್ವೇಷಣೆಯನ್ನು ಚ್ಯಾಂಗ್ ಕ್ಯು ಈ ರೀತಿ ತಪ್ಪಾಗಿ ವರ್ಗೀಕರಿಸಿದ್ದನು.[೨] ಆಡ್ರೈನ್ನೆ ಮೇಯರ್ ಅವಳ ಪುಸ್ತಕ ದ ಫರ್ಸ್ಟ್ ಫಾಸಿಲ್ ಹಂಟರ್ಸ್ ನಲ್ಲಿ ಪುರಾಣಕ್ಕೆ ಪ್ರೇರಣೆಯಾಗಿ ಪಳೆಯುಳಿಕೆಗಳ ವಿಷಯದ ಬಗ್ಗೆ ಬರೆದಿದ್ದಾಳೆ. ಅಲ್ಲದೇ ಎನ್‌ಸೈಕ್ಲೋಪೀಡಿಯ ಆಫ್ ಜಿಯಾಲಜಿ ಯ ಒಂದು ದಾಖಲೆಯಲ್ಲಿ ಹೀಗೆಂದು ಬರೆದಿದ್ದಾಳೆ: "ಪಳೆಯುಳಿಕೆ ಅವಶೇಷಗಳು ಪ್ರಾಣಿಗಳ ಗುರುತಿಸುವಿಕೆ ಮತ್ತು ಅವುಗಳ ಅಳಿವಿನ ಕಾರಣದ ಬಗ್ಗೆ ವಿಚಾರ ಮಾಡುವ ಭಿನ್ನವಾದ ಭೌಗೋಳಿಕ ಪುರಾಣ ಕಥೆಗಳನ್ನು ಸೃಷ್ಟಿಸಿವೆ. ಚೀನಾ ಮತ್ತು ಭಾರತದಿಂದ ಹಿಡಿದು ಗ್ರೀಸ್, ಅಮೇರಿಕಾ ಮತ್ತು ಆಸ್ಟ್ರೇಲಿಯಾದವರೆಗಿನ ಅನೇಕ ಪುರಾತನ ಸಂಸ್ಕೃತಿಗಳು, "ಜೀವಂತವಾಗಿ ನೋಡಿಲ್ಲದ ಪ್ರಾಣಿಗಳ ಪಳೆಯುಳಿಕೆಗಳ ಬಗ್ಗೆ ಸಮಜಾಯಿಷಿ ನೀಡುವ ಡ್ರ್ಯಾಗನ್‌ಗಳ, ಬೃಹದಾಕಾರದ ಪ್ರಾಣಿಗಳ ಮತ್ತು ದೈತ್ಯ ಜೀವಿಗಳ ಕಥೆಗಳನ್ನು ಹೇಳಿವೆ."[೩] ಆಸ್ಟ್ರೇಲಿಯಾದಲ್ಲಿ ಅಂತಹ ಪ್ರಾಣಿಗಳ ಕಥೆಗಳು, ಐದರಿಂದ 7 ಮೀಟರ್‌ಗಳಷ್ಟು ಉದ್ದಕ್ಕೆ ಬೆಳೆಯುವ ನೆಲದ ಮೇಲೆ ವಾಸಿಸುವ ಮೊಸಳೆ 'ಕ್ವಿಂಕಾನ'ವನ್ನು ಅಥವಾ ಏಳು ಮೀಟರ್‌ಗಳಷ್ಟು ಉದ್ದಕ್ಕೆ ಬೆಳೆಯಬಹುದಾದ ಮತ್ತು 1,940 ಕಿಲೋಗ್ರಾಂಗಳಷ್ಟು ಭಾರವಿರುವ ಭಾರಿ ಗಾತ್ರದ ಮಾಂಸಹಾರಿ ಗೊಯಾನ್ನ 4 ಟನ್ ಮಾನಿಟರ್(ಮೊಸಳೆ ಸೂಚಕ ಹಲ್ಲಿ) ಹಲ್ಲಿಗಳಾದ ವಾರನಸ್ ಪ್ರಿಸ್ಕಸ್ಅನ್ನು (ಹಿಂದಿನ ಮೆಗಾಲನಿಯ ಪ್ರಿಸ್ಕ) ಅಥವಾ ಭೂಖಂಡದಲ್ಲಿ ಅಳಿದುಹೋದ ಭಾರಿಪ್ರಾಣಿಸಂಪತ್ತಿನ ಭಾಗವಾದ ರೈನ್‌ಬೊ ಹಾವುಗಳನ್ನು (ಬಹುಶಃ ವೊನಂಬಿ ನ್ಯಾರಕೂರ್ಟೆನ್ಸಿಸ್) [೪] ಉಲ್ಲೇಖಿಸಿರಬಹುದು.
ಆನ್ ಇಂಸ್ಟಿಂಕ್ಟ್ ಫಾರ್ ಡ್ರ್ಯಾಗನ್ಸ್ [೫] ಪುಸ್ತಕದಲ್ಲಿ ಮಾನವ ಶಾಸ್ತ್ರಜ್ಞ ಡೇವಿಡ್ E. ಜಾನ್ಸ್, ಮಂಗಗಳಂತೆ ಮಾನವರು ಹಾವುಗಳಿಗೆ, ದೊಡ್ಡ ಬೆಕ್ಕುಗಳಿಗೆ ಮತ್ತು ಹಿಂಸ್ರ ಪಕ್ಷಿಗಳಿಗೆ ಆನುವಂಶಿಕವಾಗಿ ಪಡೆದ ಹುಟ್ಟುಸ್ವಭಾವದ ಪ್ರತಿಕ್ರಿಯೆಗಳನ್ನು ಹೊಂದಿದ್ದಾರೆ ಎಂಬ ಊಹನೆಯೊಂದನ್ನು ಸೂಚಿಸಿದ್ದಾನೆ. ಈ ಮೂರರ ಸಂಯೋಜಿತ ಗುಣಲಕ್ಷಣಗಳನ್ನು ಡ್ರ್ಯಾಗನ್‌ಗಳು ಹೊಂದಿವೆ. ಈ ಮೂರರ ಬಗೆಗಿನ ನಮ್ಮ ಹುಟ್ಟುಗುಣದ ಭಯವು, ಡ್ರ್ಯಾಗನ್‌ಗಳು ಏಕೆ ಅಂತಹುದೇ ಗುಣಲಕ್ಷಣಗಳೊಂದಿಗೆ ಎಲ್ಲಾ ಭೂಖಂಡಗಳ ಸ್ವತಂತ್ರ ಸಂಸ್ಕೃತಿಗಳ ಕಥೆಗಳಲ್ಲಿ ಕಂಡುಬರುತ್ತವೆ ಎಂಬುದನ್ನು ವಿವರಿಸುತ್ತದೆ. ವಿಶೇಷವಾಗಿ ಮಾದಕ ದ್ರವ್ಯಗಳ ಪ್ರಭಾವದಡಿಯಲ್ಲಿ ಅಥವಾ ಕನಸಿನಲ್ಲಿ ಈ ಹುಟ್ಟುಸ್ವಭಾವವು ಡ್ರ್ಯಾಗನ್, ಹಾವು, ಜೇಡ ಇತ್ಯಾದಿಗಳ ಕಲ್ಪನೆಯನ್ನು ಹೆಚ್ಚಿಸಬಹುದು. ಅದು ಈ ಸಂಕೇತಗಳು ಏಕೆ ಮಾದಕ-ಪದಾರ್ಥಗಳ-ಸಂಸ್ಕೃತಿಯಲ್ಲಿ ಹೆಚ್ಚು ಪ್ರಸಿದ್ಧಿಯಾಗಿದೆ, ಎಂಬುದನ್ನು ತಿಳಿಸುತ್ತದೆ ಎಂದು ಇತರ ಲೇಖಕರು ಸೂಚಿಸಿದ್ದಾರೆ. ಜಾನಪದ ಕಥೆಯ ಡ್ರ್ಯಾಗನ್‌ಗಳು ಮಾನವನ ಹುಟ್ಟುಸ್ವಭಾವವನ್ನು ಆಧರಿಸಿಲ್ಲ, ಬದಲಿಗೆ ಪ್ರಪಂಚದಾದ್ಯಂತ ಡೈನಸಾರ್‌ಗಳ ಪಳೆಯುಳಿಕೆ ಅವಶೇಷಗಳು ನೀಡಿದ ಊಹೆಗಳಂತಹ ಕಲ್ಪನೆಯನ್ನು ಆಧರಿಸಿವೆ, ಎಂದು ಸಾಂಪ್ರದಾಯಿಕ ಪ್ರಚಲಿತ ಪ್ರವೃತ್ತಿಗಳು ವಿವರಿಸುತ್ತವೆ.
ಪ್ರಾದೇಶಿಕತೆ
[ಬದಲಾಯಿಸಿ]ಗ್ರೀಕ್ ಪುರಾಣ
[ಬದಲಾಯಿಸಿ]ಪುರಾತನ ಗ್ರೀಸ್‌ನಲ್ಲಿ ಮೊದಲು ಸೂಚಿಸಿದ "ಡ್ರ್ಯಾಗನ್" ಪದವನ್ನು, ಆಗಮೆಮ್ನನ್‌ನನ್ನು ಅವನ ಖಡ್ಗದ ಪಟ್ಟಿಯಲ್ಲಿ ನೀಲಿ ಬಣ್ಣದ ಡ್ರ್ಯಾಗನ್‌ನ ವಿಶಿಷ್ಟ ಚಿತ್ರವನ್ನು ಮತ್ತು ಎದೆಯ ಫಲಕದಲ್ಲಿ ಮೂರು-ತಲೆಯ ಡ್ರ್ಯಾಗನ್ ಗುರುತನ್ನು ಹೊಂದಿರುವಂತೆ ವಿವರಿಸಲಾದ ಇಲಿಯಡ್‌ನಿಂದ ಪಡೆಯಲಾಗಿದೆ.[೬] ಬಳಸಿದ ಗ್ರೀಕ್ ಪದವು (δράκων ಡ್ರ್ಯಾಕನ್ , ಜೆನಿಟಿವ್ δράκοντοϛ ಡ್ರ್ಯಾಕೊಂಟಸ್ ) "ಹಾವು" ಎಂಬರ್ಥವನ್ನು ನೀಡುತ್ತದೆ. δράκων ಡ್ರ್ಯಾಕನ್ ಪದವು ಗ್ರೀಕ್‌ನ δέρκομαι ಡರ್ಕೊಮೈ = "ನಾನು ನೋಡುತ್ತೇನೆ", ಡರ್ಕೈನ್ = "ನೋಡಲು" ಮತ್ತು ಮೂಲತಃ "ನೋಡುವ" ಅಥವಾ "ಹೊಳೆಯುವ ಅಥವಾ ಮಿನುಗುವ" ಎಂಬರ್ಥ ನೀಡುವುದರ ಅನಿಶ್ಚಿತ ಭೂತಕಾಲದ ಅವ್ಯಯದ ಕ್ರಿಯಾಪದದ ಕರ್ತರಿ ಪ್ರಯೋಗದ ರೂಪವಾಗಿದೆ. ಇದು "ಡ್ರ್ಯಾಗನ್" ಪದದ ಮೂಲವಾಗಿದೆ. (ಇದನ್ನೂ ಗಮನಿಸಿ - ಹೆಸಿಯಾಡ್‌ನ ಥಿಯಾಗನಿ, 322.)
ಕ್ರಿ.ಶ. 217ರಲ್ಲಿ, ಫಿಲೋಸ್ಟ್ರೇಟಸ್ ಭಾರತದಲ್ಲಿನ ಡ್ರ್ಯಾಗನ್‌ಗಳ (δράκων, ಡ್ರ್ಯಾಕನ್) ಬಗ್ಗೆ ದ ಲೈಫ್ ಆಫ್ ಅಪೋಲೋನಿಯಸ್ ಆಫ್ ಟ್ಯಾನ (II,17 ಮತ್ತು III,6-8)ದಲ್ಲಿ ವಿವರಿಸಿದ್ದಾನೆ. ಲೋಯೆಬ್ ಕ್ಲಾಸಿಕಲ್ ಲೈಬ್ರರಿಯ ಅನುವಾದವು (F.C. ಕೋನಿಬಿಯರೆ ಮಾಡಿದ) ಹೀಗೆಂದು ಹೇಳುತ್ತದೆ. (III,7) - “ಹೆಚ್ಚಿನ ವಿವರಗಳಲ್ಲಿ ಕೋರೆಹಲ್ಲುಗಳು ದೊಡ್ಡ ಹಂದಿಗಳ ಹಲ್ಲುಗಳನ್ನು ಹೋಲುತ್ತವೆ. ಆದರೆ ಅವು ರಚನೆಯಲ್ಲಿ ಸ್ವಲ್ಪ ತೆಳ್ಳಗಾಗಿರುತ್ತವೆ; ಅಲ್ಲದೇ ತಿರುಚಲ್ಪಟ್ಟ ಹಾಗೂ ಶಾರ್ಕ್‌ಗಳ ಹಲ್ಲಿನಂತೆ ಚೂಪಾಗಿರುತ್ತವೆ.”
ಏಲಿಯನ್‌ನ ಆನ್ ಆನಿಮಲ್ಸ್ ನ ಪ್ರಕಾರ, ಇಥಿಯೋಪಿಯಾದಲ್ಲಿ ಆನೆಗಳನ್ನು ಬೇಟೆಯಾಡಿದ ಡ್ರ್ಯಾಗನ್ ಜಾತಿಗಳು ವಾಸವಾಗಿದ್ದವು. ಅವು 180 ಅಡಿ ಉದ್ದಕ್ಕೆ ಬೆಳೆಯುತ್ತಿದ್ದವಲ್ಲದೇ ಹೆಚ್ಚು ಕಾಲ ಬಾಳುತ್ತಿದ್ದ ಪ್ರಾಣಿಗಳಿಗೆ ಸರಿಸಮನಾದ ಆಯುಸ್ಸನ್ನು ಹೊಂದಿದ್ದವು.[೭]
ಯೂರೋಪಿಯನ್
[ಬದಲಾಯಿಸಿ]'ಯುರೋಪಿನ ಡ್ರ್ಯಾಗನ್‌ಗಳು' ಯುರೋಪಿನಲ್ಲಿ ವ್ಯಾಪಿಸಿಕೊಂಡಿರುವ ಸಂಸ್ಕೃತಿಗಳ ಜಾನಪದ ಕಥೆಗಳಲ್ಲಿ ಮತ್ತು ಪುರಾಣ ಕಥೆಗಳಲ್ಲಿ ಕಂಡುಬರುತ್ತವೆ. ಇದರಲ್ಲಿ ಡ್ರ್ಯಾಗನ್‌ಗಳು ಸಾಮಾನ್ಯವಾಗಿ ರೆಕ್ಕೆಗಳನ್ನು ಮಾತ್ರವಲ್ಲದೆ ನೆಲದೊಳಗಿನ ವಿಶ್ರಾಂತಿ ಸ್ಥಾನ ಅಥವಾ ಗುಹೆಗಳನ್ನೂ ಹೊಂದಿವೆ, ಎಂದು ಚಿತ್ರಿಸಲಾಗಿದೆ. ಈ ಮೂಲಕ ಇದನ್ನು ಭೂಮಿಯ ಅಂಶಗಳಲ್ಲಿ ಪುರಾತನ ಪ್ರಾಣಿಯಾಗಿ ಮಾಡಲಾಗಿದೆ.
ಚೀನಾದವರು
[ಬದಲಾಯಿಸಿ]ಚೀನಾದ ಡ್ರ್ಯಾಗನ್‌ಗಳು (simplified Chinese: 龙; traditional Chinese: 龍; pinyin: lóng) ಮತ್ತು ಪೂರ್ವದೇಶದ ಡ್ರ್ಯಾಗನ್‌ಗಳು ಸಾಮಾನ್ಯವಾಗಿ ಮಾನವನಿಗೆ ಉಪಕಾರ ಮಾಡುವ ಬುದ್ಧಿಯನ್ನು ಹೊಂದಿರುತ್ತವೆ. ಯುರೋಪಿನ ಡ್ರ್ಯಾಗನ್‌ಗಳು ಕೇಡನ್ನು ಉಂಟುಮಾಡುವವು, ಕೆಲವು ಇದಕ್ಕೆ ಹೊರತಾಗಿವೆ (ಉದಾ. ಕೆಂಪು ಡ್ರ್ಯಾಗನ್ Y ಡ್ರೈಗ್ ಗೋಚ್). ಕೇಡನ್ನುಂಟುಮಾಡುವ ಡ್ರ್ಯಾಗನ್‌ಗಳು ಪರ್ಷಿಯಾ ಆಜಿ ದಹಾಕವನ್ನು ಗಮನಿಸಿ) ಮತ್ತು ಇವು ರಷ್ಯಾದ ಪುರಾಣ ಕಥೆಗಳಲ್ಲೂ ಕಂಡುಬರುತ್ತವೆ.
ಡ್ರ್ಯಾಗನ್‌ಗಳು ವಿಶೇಷವಾಗಿ ಚೀನಾದಲ್ಲಿ ಹೆಚ್ಚು ಜನಪ್ರಿಯವಾಗಿವೆ. ಇವುಗಳು ಫೀನಿಕ್ಸ್ ಅಥವಾ ಫೆಂಗ್ವಾಂಗ್ ಚೀನಾದ ಚಕ್ರವರ್ತಿನಿಯ ಗುರುತಾಗಿರುವಂತೆ, ಐದು-ಪಂಜಗಳ ಡ್ರ್ಯಾಗನ್ ಚೀನಾದ ಚಕ್ರವರ್ತಿಗಳ ಲಾಂಛನವಾಗಿದೆ. ಜನರು ಡ್ರ್ಯಾಗನ್ ವೇಷವನ್ನು ಧರಿಸುವುದು ಚೀನಾದ ಹಬ್ಬಗಳಲ್ಲಿ ಸರ್ವೇಸಾಮಾನ್ಯವಾಗಿದೆ.
ಜಪಾನಿಗಳು
[ಬದಲಾಯಿಸಿ]ಜಪಾನಿನ ಡ್ರ್ಯಾಗನ್ ಪುರಾಣಗಳು ಸ್ಥಳೀಯ ದಂತಕಥೆಗಳನ್ನು ಚೀನಾ, ಕೊರಿಯಾ ಮತ್ತು ಭಾರತದಿಂದ ಪಡೆದ ಡ್ರ್ಯಾಗನ್‌ಗಳ ಕಥೆಗಳೊಂದಿಗೆ ಮಿಶ್ರಮಾಡುತ್ತವೆ. ಇಂತಹ ಇತರ ಏಷ್ಯಾದ ಡ್ರ್ಯಾಗನ್‌ಗಳಂತೆ ಹೆಚ್ಚಿನ ಜಪಾನಿನ ಡ್ರ್ಯಾಗನ್‌ಗಳು ಮಳೆ ಮತ್ತು ಜಲಾಶಯಗಳಿಗೆ ಸಂಬಂಧಿಸಿದ ಜಲ ದೇವತೆಗಳಾಗಿವೆ. ಇವುಗಳನ್ನು ವಿಶಿಷ್ಟವಾಗಿ ದೊಡ್ಡದಾದ, ರೆಕ್ಕೆಗಳಿಲ್ಲದ, ಉಗುರಗಳಿರುವ ಪಾದವನ್ನು ಹೊಂದಿರುವ ಸರೀಸೃಪ ಪ್ರಾಣಿಗಳಾಗಿ ಚಿತ್ರಿಸಲಾಗಿದೆ. ಗೌಲ್ಡ್ (1896:248),[೮] ಜಪಾನಿನ ಡ್ರ್ಯಾಗನ್‌ಅನ್ನು "ಮೂರು ಪಂಜಗಳನ್ನು ಹೊಂದಿರುವಂತೆ ಏಕರೂಪವಾಗಿ ರೂಪಿಸಲಾಗಿದೆ" ಎಂದು ಬರೆದಿದ್ದಾನೆ.
ವೈದಿಕ
[ಬದಲಾಯಿಸಿ]ಆರಂಭಿಕ ವೈದಿಕ ಧರ್ಮದಲ್ಲಿ, "ಮರೆಮಾಡುವ" ವೃತ್ರ ನನ್ನು (ಸಂಸ್ಕೃತ: वृत्र (ದೇವನಾಗರಿ) ಅಥವಾVṛtra (IAST)) ಒಬ್ಬ ಅಸುರನಾಗಿ ಮತ್ತು ಬರದ ಮೂರ್ತರೂಪ ಮತ್ತು ಇಂದ್ರನ ವೈರಿ "ನಾಗ" (ಹಾವು) ಅಥವಾ ಡ್ರ್ಯಾಗನ್-ಮಾದರಿಯ ಪ್ರಾಣಿಯಾಗಿಯೂ ಚಿತ್ರಿಸಲಾಗಿದೆ. ವೃತ್ರನನ್ನು ವೇದಗಳಲ್ಲಿಯೂ ಅಹಿ ಯಾಗಿ ("ಹಾವು") ಮತ್ತು ಮೂರು ತಲೆಗಳನ್ನು ಹೊಂದಿರುವಂತೆ ನಿರೂಪಿಸಲಾಗಿದೆ.
ಭಾರತೀಯ
[ಬದಲಾಯಿಸಿ]ಕೆಳಗಿನ ವಿವರವು ಫ್ಲೇವಿಯಸ್ ಫಿಲೋಸ್ಟ್ರೇಟಸ್ನ ದ ಲೈಫ್ ಆಫ್ ಅಪೋಲೋನಿಯಸ್ ಆಫ್ ಟ್ಯಾನ ದಿಂದ ಪಡೆಯಲಾಗಿದೆ:
“ | The whole of India is girt with dragons of enormous size; for not only the marshes are full of them, but the mountains as well, and there is not a single ridge without one. Now the marsh kind are sluggish in their habits and are thirty cubits long, and they have no crest standing up on their heads, but in this respect resemble the she-dragons. Their backs however are very black, with fewer scales on them than the other kinds; and Homer has described them with deeper insight than have most poets, for he says that the dragon that lived hard by the spring in Aulis had a tawny back; but other poets declare that the congener of this one in the grove of Nemea also had a crest, a feature which we could not verify in regard to the marsh dragons.
And the dragons along the foothills and the mountain crests make their way into the plains after their quarry, and prey upon all the creatures in the marshes; for indeed they reach an extreme length, and move faster than the swiftest rivers, so that nothing escapes them. These actually have a crest, of moderate extent and height when they are young; but as they reach their full size, it grows with them and extends to a considerable height, at which time also they turn red and get serrated backs. This kind also have beards, and lift their necks on high, while their scales glitter like silver; and the pupils of their eves consist of a fiery stone, and they say that this has an uncanny power for many secret purposes. The plain specimen falls the prize of the hunters whenever it draws upon itself an elephant; for the destruction of both creatures is the result, and those who capture the dragons are rewarded by getting the eyes and skin and teeth. In most respects they resemble the largest swine, but they are slighter in build and flexible, and they have teeth as sharp and indestructible as those of the largest fishes. Now the dragons of the mountains have scales of a golden colour, and in length excel those of the plain, and they have bushy beards, which also are of a golden hue; and their eyebrows are more prominent than those of the plain, and their eye is sunk deep under the eyebrow, and emits a terrible and ruthless glance. And they give off a noise like the clashing of brass whenever they are burrowing under the earth, and from their crests, which are all fiery red, there flashes a fire brighter than a torch. They also can catch the elephants, though they are themselves caught by the Indians in the following manner. They embroider golden runes on a scarlet cloak, which they lay in front of the animal's burrow after charming them to sleep with the runes; for this is the only way to overcome the eyes of the dragon, which are otherwise inflexible, and much mysterious lore is sung by them to overcome him. These runes induce the dragon to stretch his neck out of his burrow and fall asleep over them : then the Indians fall upon him as he lies there, and despatch him with blows of their axes, and having cut off the head they despoil it of its gems. And they say that in the heads of the mountain dragons there are stored away stones of flowery colour, which flash out all kinds of hues, and possess a mystical power if set in a ring, like that which they say belonged to Gyges. But often the Indian, in spite of his axe and his cunning, is caught by the dragon, who carries him off into his burrow, and almost shakes the mountains as he' disappears. These are also said to inhabit the mountains in the neighbourhood of the Red Sea, and they say that they heard them hissing terribly and that they saw them go down to the shore and swim far out into the sea.[೯] |
” |
ಪರ್ಷಿಯನ್ನರು
[ಬದಲಾಯಿಸಿ]ಆಜಿ ದಹಾಕದ ಹೆಸರು "ಡ್ರ್ಯಾಗನ್" ಎಂಬರ್ಥ ನೀಡುವ ಅಜ್ದಾಹ ಅಥವಾ ಎಜ್ದೇಹ اژدها (ಮಧ್ಯ ಪರ್ಷಿಯಾದ ಅಜ್ದಾಹಗ್) ಎಂಬ ಆಧುನಿಕ ಪರ್ಷಿಯಾದ ಪದದ ಮೂಲವಾಗಿದೆ. ಈ ಡ್ರ್ಯಾಗನ್‌ಅನ್ನು ಹೆಚ್ಚಾಗಿ ಯುದ್ಧ ಪತಾಕೆಯಲ್ಲಿ ಚಿತ್ರಿಸಲಾಗುತ್ತಿತ್ತು. ಡ್ರ್ಯಾಗನ್‌ನ ಮರಿಯು ತಾಯಿಯ ಕಣ್ಣುಗಳ ಬಣ್ಣವನ್ನು ಹೊಂದಿರುತ್ತದೆ, ಎಂದು ಪರ್ಷಿಯನ್ನರು ನಂಬುತ್ತಿದ್ದರು. ಮಧ್ಯ ಪರ್ಷಿಯಾದಲ್ಲಿ ಅದನ್ನು ದಹಾಗ್ ಅಥವಾ ಬೇವಾರ್-ಆಸ್ಪ್ ಎಂದು ಕರೆಯಲಾಗುತ್ತದೆ. ಬೇವಾರ್-ಆಸ್ಪ್ ಅಂದರೆ "10,000 ಕುದುರೆಗಳನ್ನು ಹೊಂದಿರುವವನು". ಹಾನಿಯನ್ನುಂಟುಮಾಡುವ ಇತರ ಅನೇಕ ಡ್ರ್ಯಾಗನ್‌ಗಳನ್ನು ಮತ್ತು ಡ್ರ್ಯಾಗನ್-ರೀತಿಯ ಪ್ರಾಣಿಗಳನ್ನು ಜರತುಷ್ಟ್ರ ಧರ್ಮದ (ಪಾರಸಿ ಧರ್ಮದ) ಲಿಪಿಯಲ್ಲಿ ಸೂಚಿಸಲಾಗಿದೆ. (ಜಹಾಕ್ ಗಮನಿಸಿ).
ಯೆಹೂದ್ಯರ
[ಬದಲಾಯಿಸಿ]ಯೆಹೂದ್ಯರ ಧರ್ಮಗ್ರಂಥಗಳಲ್ಲಿ ಡ್ರ್ಯಾಗನ್-ಮಾದರಿಯ ಪ್ರಾಣಿಯ ಮೊದಲ ಸೂಚನೆಯು ಜಾಬ್ (26:13) ಮತ್ತು ಇಸೈಹ್‌ನ (27:1) ಬೈಬಲಿನ ಬರಹಗಳಲ್ಲಿ ಕಂಡುಬರುತ್ತದೆ. ಅವುಗಳಲ್ಲಿ ಅದನ್ನು ನಚಾಶ್ ಬ್ಯಾರೆಆಕ್ ಅಥವಾ "ಧ್ರುವದ ಹಾವು" ಎಂದು ಹೇಳಲಾಗಿದೆ.[೧೦] ಇದನ್ನು ಮಿದ್ರಾಶ್ ರಬ್ಬದಲ್ಲಿ 1:21 ಟ್ಯಾನಿನಿಮ್ (תנינים) ಪದದಿಂದ ಪಡೆದ ಭೂತಾಕಾರದ ಪ್ರಾಣಿಯಾಗಿ ಗುರುತಿಸಲಾಗಿದೆ. ಅಲ್ಲದೇ "ದೇವರು ಭಾರಿ ಸಮುದ್ರ-ವಿಕೃತರೂಪದ ಪ್ರಾಣಿಗಳನ್ನು ಸೃಷ್ಟಿಸಿದನು" ಎಂದು ಹೇಳಲಾಗಿದೆ.[೧೧] ಆಧುನಿಕ ಯೆಹೂದ್ಯರಲ್ಲಿ ಟ್ಯಾನಿಮಿನ್ ಪದವನ್ನು ಮೊಸಳೆಗಳಿಗೆ ಬಳಸಲಾಗುತ್ತದೆ. ಇದು ಮೂಲ ಬೈಬಲಿನ ಅರ್ಥಕ್ಕೆ ಸಂಬಂಧಿಸಿರದ 20ನೇ ಶತಮಾನದ ಬಳಕೆಯಾಗಿದೆ.[ಸೂಕ್ತ ಉಲ್ಲೇಖನ ಬೇಕು]
ಯೆಹೂದ್ಯರ ಖಗೋಳ ವಿಜ್ಞಾನದಲ್ಲಿ ಇದನ್ನು ಉತ್ತರ ಧ್ರುವದ, ಡ್ರ್ಯಾಕೊ ನಕ್ಷತ್ರಪುಂಜದ "ಕಥೆ"ಯಲ್ಲಿ ಸುಮಾರು 4,500 ವರ್ಷಗಳ ಹಿಂದೆ ಇದ್ದ ನಕ್ಷತ್ರ ತ್ಯೂಬಾನ್ ನೊಂದಿಗೆ ಗುರುತಿಸಲಾಗಿದೆ.[೧೦] ಇದು ಖಗೋಳ ಧ್ರುವ ಅಥವಾ ಕ್ರಾಂತಿವೃತ್ತದ ಧ್ರವವೂ ಆಗಿರಬಹುದು. ಡ್ರ್ಯಾಕೊ ಖಗೋಳ ಧ್ರುವದ ತುದಿಯಲ್ಲಿದ್ದು, ನಕ್ಷತ್ರಗಳು ಅದರಿಂದ "ನೇತಾಡುವಂತೆ" ಕಾಣುತ್ತದೆ, ಎಂದು ಪ್ರಾಚೀನ ವೀಕ್ಷಕರು ಹೇಳಿದ್ದಾರೆ. ಯೆಹೂದಿಯಲ್ಲಿ ಇದನ್ನು, ನೇತಾಡಲು ಎಂಬರ್ಥವಿರುವ ತಲಾಹ್ (תלה)ನಿಂದ ಪಡೆದ ಟೆಲಿ ಎಂದು ನಿರೂಪಿಸಲಾಗಿದೆ. ಅರೇಬಿಕ್-ಮಾತನಾಡುವ ಪ್ರದೇಶಗಳ ಯೆಹೂದಿ ಬರಹಗಾರರು ಟೆಲಿ ಯನ್ನು ಆಲ್ ಜ್ಯಾಜ್‌ಹಾರ್ ಎಂದು ಗುರುತಿಸಿದ್ದಾರೆ. ಇದೊಂದು "ಗ್ರಂಥಿ" ಅಥವಾ "ಗಂಟು" ಎಂಬರ್ಥವಿರುವ ಪರ್ಷಿಯನ್ ಪದ. ಏಕೆಂದರೆ ಅಂಡಾಕಾರದ ಗೃಹದ ಕಕ್ಷೆಯ ಬಾಗುವಿಕೆಯ ಅಡ್ಡಹಾಯುವಿಕೆಯು ಅಂತಹ ಎರಡು ಗಂಟುಗಳನ್ನು ರೂಪಿಸುತ್ತದೆ. ಆಧುನಿಕ ಖಗೋಳ ವಿಜ್ಞಾನದಲ್ಲಿ ಇವನ್ನು ಏರುತ್ತಿರುವ ನಿಶ್ಚಲ ಬಿಂದು ಮತ್ತು ಇಳಿಯುತ್ತಿರುವ ನಿಶ್ಚಲ ಬಿಂದು ಎನ್ನಲಾಗುತ್ತದೆ. ಆದರೆ ಮಧ್ಯಯುಗದ ಖಗೋಳ ವಿಜ್ಞಾನದಲ್ಲಿ ಅವನ್ನು "ಡ್ರ್ಯಾಗನ್‌ನ ತಲೆ" ಮತ್ತು "ಡ್ರ್ಯಾಗನ್‌ನ ಬಾಲ" ಎಂದು ಸೂಚಿಸಲಾಗಿದೆ.[೧೨]
ಪ್ಸಾಲ್ಮ್ಸ್ 89:9-10 ಮತ್ತು ಇಸೈಯಾಹ್ 51:9-10 ಅಲ್ಲಿ ವಿವರಿಸಿದಂತೆ ರಹಾಬ್ ಸಹ "ಡ್ರ್ಯಾಗನ್-ಮಾದರಿಯ" ವೈಶಿಷ್ಟ್ಯಗಳನ್ನು ಹೊಂದಿದೆ.[original research?]
ಆಧುನಿಕ ಚಿತ್ರಣಗಳು
[ಬದಲಾಯಿಸಿ]ಮಧ್ಯಯುಗದ ಕಲೆಯಿಂದ ಪ್ರೇರಿತವಾದ 20ನೇ ಶತಮಾನದ ಆರಂಭದ ನಾರ್ವೆಯ ಕಲಾವಿದ ಗುಸ್ತವ್ ವಿಗೆಲ್ಯಾಂಡ್‌ನ ಶಿಲ್ಪಕೃತಿಯಲ್ಲಿ, ಡ್ರ್ಯಾಗನ್‌ಗಳನ್ನು ಹೆಚ್ಚಾಗಿ ಪಾಪದ ಸಂಕೇತವಾಗಿ ಮತ್ತು ಮಾನವನ ವಿರುದ್ಧ ಹೋರಾಡುವ ನಿಸರ್ಗದ ಶಕ್ತಿಯಾಗಿ ಚಿತ್ರಿಸಲಾಗಿದೆ.
ಆಧುನಿಕ ಸಾಹಿತ್ಯದಲ್ಲಿ ಡ್ರ್ಯಾಗನ್‌ಗಳ ವಿಶೇಷವಾಗಿ ಕಲ್ಪನಾ ಶೈಲಿಯ ಅಸಂಖ್ಯಾತ ಉದಾಹರಣೆಗಳಿವೆ.
1937ರ J.R.R. ಟಾಲ್ಕೀನ್‌ನ ಕಾಲ್ಪನಿಕ ಕಾದಂಬರಿ, ದ ಹಾಬಿಟ್ ನಲ್ಲಿನ ಪ್ರಮುಖ ಪ್ರತಿನಾಯಕನೆಂದರೆ ಸ್ಮಾಗ್ ಹೆಸರಿನ ಒಂದು ಡ್ರ್ಯಾಗನ್. ಸ್ಮಾಗ್ ಭಾರಿ ಅಮೂಲ್ಯವಾದುದೊಂದನ್ನು ಸಂಗ್ರಹಿಸಿಟ್ಟುಕೊಂಡಿರುತ್ತದೆ. ಆದರೆ ಅದನ್ನು ಅಂತಿಮವಾಗಿ, ಸ್ಮಾಗ್‌ನ ಕೆಳಭಾಗದ ರಕ್ಷಾಕವಚದಲ್ಲಿ ಮೃದುವಾದ ಸಣ್ಣ ಭಾಗವೊಂದಿದೆ, ಎಂದು ತಿಳಿದ ಬಿಲ್ಲುಗಾರನೊಬ್ಬನು ಬಾಣದಿಂದ ತೆಗೆದುಹಾಕುತ್ತಾನೆ. ಟಾಲ್ಕೀನ್‌ನ ಕೃತಿಗಳಲ್ಲಿ ಕಂಡುಬರುವ ಇತರ ಡ್ರ್ಯಾಗನ್‌ಗಳೆಂದರೆ ಮೋರ್ಗೋತ್ ರಚಿಸಿದ ""ಡ್ರ್ಯಾಗನ್‌ಗಳ ಜನಕ" ಗ್ಲಾರಂಗ್ ಮತ್ತು ಬ್ಲ್ಯಾಕ್ ಮತ್ತು [[ಸ್ಕಾತ{/0 {0}ಆಂಕಲಗಾನ್]]. ಹಾಗೆಯೇ ಟಾಲ್ಕೀನ್‌ನ ಫಾರ್ಮರ್ ಗಿಲ್ಸ್ ಆಫ್ ಹ್ಯಾಮ್ ನಲ್ಲಿ ಕ್ರೈಸೋಫಿಲ್ಯಾಕ್ಸ್ ಡೈವ್ಸ್ ಎಂಬ ಹೆಸರಿನ ಒಂದು ಡ್ರ್ಯಾಗನ್‌ಅನ್ನು ಚಿತ್ರಿಸಲಾಗಿದೆ.
ಡ್ರ್ಯಾಗನ್‌ರೈಡರ್ಸ್ ಆಫ್ ಪರ್ನ್ ಮೂಲತಃ ಆನ್ ಮ್ಯಾಕ್‌ಕ್ಯಾಫ್ರೆ ಬರೆದ ವ್ಯಾಪಕ ಕಾಲ್ಪನಿಕ/ವೈಜ್ಞಾನಿಕ-ಕಲ್ಪನೆಯ ಕಾದಂಬರಿಗಳ ಮತ್ತು ಸಣ್ಣ ಕಥೆಗಳ ಒಂದು ಸರಣಿ. ಕಳೆದ 2004ರವರೆಗೆ ಮ್ಯಾಕ್‌ಕ್ಯಾಫ್ರೆಯ ಮಗ ಟಾಡ್ ಮ್ಯಾಕ್‌ಕ್ಯಾಫ್ರೆಯೂ ಸಹ ಆನ್ ಸಹಯೋಗದೊಂದಿಗೆ ಮತ್ತು ಅವನೇ ಸ್ವಂತವಾಗಿ ಪರ್ನ್ ಕಾದಂಬರಿಗಳನ್ನು ಪ್ರಕಟಿಸಿದನು. ಪರ್ನೇಸೆ, ಡ್ರ್ಯಾಗನ್‌ಗಳು ಮೊಟ್ಟೆಯಿಂದ ಹೊರಬರುವಾಗ ಪಡೆದುಕೊಂಡು ಬಂದಿರುವ ಮಾನಸಿಕ ಭಾವನೆಗಳಿಂದ ರಚನೆಯಾಗುವ ತಮ್ಮ ಸವಾರರೊಂದಿಗಿನ ದೂರಸಂವೇದನೆಯ ಸಂಬಂಧವನ್ನು ಹೊಂದಿರುವ ಚುರುಕುಬದ್ಧಿಯ ಬೆಂಕಿಯನ್ನುಗುಳುವ ಡ್ರ್ಯಾಗನ್‌ಗಳನ್ನು ಬಳಸಿಕೊಂಡಿದೆ.
ಡ್ರ್ಯಾಕೊ ಹೆಸರನ್ನು ನೈಜ-ಜೀವಶಾಸ್ತ್ರದಲ್ಲಿ ಜಾರುವ ಸಣ್ಣ ಅಗಾಮಿಡ್ ಹಲ್ಲಿಗಳ ಜಾತಿಗೆ ಬಳಸಲಾಗುತ್ತಿದೆಯಾದರೂ, ಡ್ರ್ಯಾಗನ್‌ಗಳ ಬಗೆಗಿನ ಕೆಲವು ಆಧುನಿಕ ಸುಳ್ಳು-ಜೀವಶಾಸ್ತ್ರೀಯ ವಿವರಣೆಗಳು ಅವುಗಳಿಗೆ ಡ್ರ್ಯಾಕೊ ಎಂಬ ಜಾತಿವಾಚಕ ಹೆಸರನ್ನು ನೀಡಿವೆ.
ಸೃಷ್ಟಿವಾದಿಗಳ ಸಮರ್ಥನೆ
[ಬದಲಾಯಿಸಿ]ಕೆಂಟ್ ಹೋವಿಂದ್ ಮತ್ತು ಬಿಲ್ ಕೂಪರ್‌ನಂತಹ ಕೆಲವು ಸೃಷ್ಟಿವಾದಿಗಳು, ಡ್ರ್ಯಾಗನ್‌ಗಳು ಡೈನಸಾರ್‌ಗಳ ಒಂದು ರೂಪ ಮತ್ತು ಅವು ಮರೆಯಾಗಿದ್ದರೂ ಇನ್ನೂ ಅಸ್ತಿತ್ವದಲ್ಲಿವೆ ಎಂದು ನಂಬಿದ್ದಾರೆ.[೧೩]
ಭೂಪಟ ಶಾಸ್ತ್ರ
[ಬದಲಾಯಿಸಿ]ನಕ್ಷೆಯ ಖಾಲಿ ಪ್ರದೇಶಗಳಲ್ಲಿ ಸಮುದ್ರ ಹಾವುಗಳನ್ನು ಮತ್ತು ಇತರ ಪೌರಾಣಿಕ ಪ್ರಾಣಿಗಳನ್ನು ಹಾಕುವ ಮಧ್ಯಯುಗದಲ್ಲಿ ವಿರಳವಾಗಿ ಚಾಲ್ತಿಯಲ್ಲಿದ್ದ ಅಭ್ಯಾಸವನ್ನು ಅನುಕರಿಸುವ ರೀತಿಯಲ್ಲಿ ಅಪಾಯಕಾರಿ ಅಥವಾ ಪರಿಶೋಧಿಸದ ಪ್ರದೇಶಗಳನ್ನು ಸೂಚಿಸುವುದಕ್ಕಾಗಿ ಹಿಂದಿನ ನಕ್ಷೆಗಾರರು ಲ್ಯಾಟಿನ್ ಸೂಕ್ತಿ ಹಿಕ್ ಸಂಟ್ ಡ್ರ್ಯಾಕೋನ್ಸ್ಅನ್ನು, ಅಂದರೆ "ಇಲ್ಲಿ ಡ್ರ್ಯಾಗನ್‌ಗಳಿವೆ" ಅಥವಾ "ಅಲ್ಲಿ ಡ್ರ್ಯಾಗನ್‌ಗಳಿವೆ", ಎಂದು ಬಳಸುತ್ತಿದ್ದರು; ಎಂಬ ಬಗ್ಗೆ ವ್ಯಾಪಕ ನಂಬಿಕೆ ಇದೆ. ಈ ಸೂಕ್ತಿಯ ಹೆಚ್ಚು ಪ್ರಸಿದ್ಧ ಬಳಕೆಯೆಂದರೆ ಲೆನಕ್ಸ್ ಗ್ಲೋಬ್‌ನಲ್ಲಿರುವ ಲ್ಯಾಟಿನ್ ರೂಪ "HC SVNT DRACONES" (ಸುಮಾರು 1503-07).[೧೪]
ಇವನ್ನೂ ನೋಡಿ
[ಬದಲಾಯಿಸಿ]- ಬಾವಲಿ (ವಂಶಲಾಂಛನ)
- ಇಕ್ನ್ಯೂಮಸ್ (ಮಧ್ಯಯುಗದ ಜೀವಶಾಸ್ತ್ರದಲ್ಲಿ)
- ಕೊಮೊಡೊ ಡ್ರ್ಯಾಗನ್
- ಪುರಾಣ ಮತ್ತು ಜಾನಪದ ಕಥೆಗಳಲ್ಲಿರುವ ಡ್ರ್ಯಾಗನ್‌ಗಳ ಪಟ್ಟಿ
- ಸಾಹಿತ್ಯದಲ್ಲಿರುವ ಡ್ರ್ಯಾಗನ್‌ಗಳ ಪಟ್ಟಿ
- ಸೇಂಟ್ ಜಾರ್ಜ್ ಮತ್ತು ಡ್ರ್ಯಾಗನ್
ಆಕರಗಳು
[ಬದಲಾಯಿಸಿ]- ↑ Wiktionary.org
- ↑ "Dinosaurs And Cave People". Abc.net.au. 2005-04-14. Retrieved 2010-02-11.
- ↑ ಎನ್‌ಸೈಕ್ಲೋಪೀಡಿಯ ಆಫ್ ಜಿಯಾಲಜಿ ಆವೃತ್ತಿಯ ಆಡ್ರೈನ್ನೆ ಮೇಯರ್, ರಿಚಾರ್ಡ್ ಸೆಲ್ಲೆ, ರಾಬಿನ್ ಕಾಕ್ಸ್ ಮತ್ತು ಐಯನ್ ಪಾಮರ್. ಎಲ್ಸೆವಿಯರ್:2004
- ↑ ಮ್ಯಾಕ್ನೆಸ್, B.S. 2009. ರಿಕಂಸ್ಟ್ರಕ್ಟಿಂಗ್ ಪ್ಯಾಲರ್ಚೆಸ್ಟ್ಸ್ (ಮಾರ್ಸುಪಿಯಾಲಿಯ: ಪ್ಯಾಲರ್ಚೆಸ್ಟಿಡೆ) — ಭಾರಿ ಕಾಂಗಾರೂಗಳಿಂದ ಮಾರ್ಸುಪಿಯಾಲ್ ‘ಟಾಪಿರ್’ವರೆಗೆ. ದ ಲಿನ್ನಿಯನ್ ಸೊಸೈಟಿ ಆಫ್ ನ್ಯೂ ಸೌತ್ ವೇಲ್ಸ್‌ನ ವರದಿಗಳು 130: 21-36.
- ↑ David E. Jones (2000). An Instinct for Dragons. New York: Routledge. ISBN 0-415-92721-8.
- ↑ p.79, ಡ್ರ್ಯೂರಿ, ನೆವಿಲ್, ದ ಡಿಕ್ಶನರಿ ಆಫ್ ದ ಈಸೋಟೆರಿಕ್, books.google.com
- ↑ Theoi.com
- ↑ ಗೌಲ್ಡ್, ಚಾರ್ಲ್ಸ್. 1896. ಮಿಥಿಕಲ್ ಮಾಂಸ್ಟರ್ಸ್". W. H. ಅಲ್ಲೆನ್ ಮತ್ತು ಸಹಚರರು
- ↑ Flavius Philostratus, The Life of Apollonius of Tyana, translated by F. C. Conybeare, volume I, book III. chapters VI, VII, VIII, 1921, pp. 243- 247..
- ↑ ೧೦.೦ ೧೦.೧ p.233, ಕ್ಯಾಪ್ಲನ್
- ↑ p.51, ಫ್ರೀಡ್‍ಮ್ಯಾನ್
- ↑ p.235, ಕ್ಯಾಪ್ಲನ್
- ↑ Bill Cooper, BA (1995). After The Flood, The Early Post-Flood History of Europe. New Wine Press.
{{cite book}}
: Text "chapters 10 & 11" ignored (help) - ↑ Erin C. Blake (1999). "Where Be "Here be Dragons"?". MapHist Discussion Group. Maphist.nl. Retrieved February 10, 2006.
{{cite web}}
: Unknown parameter|dateformat=
ignored (help)
ಮೂಲಗಳು
[ಬದಲಾಯಿಸಿ]- ಡ್ರ್ಯೂರಿ, ನೆವಿಲ್, ದ ಡಿಕ್ಶನರಿ ಆಫ್ ದ ಈಸೋಟೆರಿಕ್, ಮೋತಿಲಾಲ್ ಬ್ಯಾನರ್ಜಿದಾಸ್ ಪಬ್ಲಿಕೇಶನ್, 2003 ISBN 8120819896
- ಫ್ರೀಡ್‌ಮ್ಯಾನ್, ರಬ್ಬಿ ಡಾ. H. (ಅನುವಾದ), ಸೈಮನ್ M., ಸಂಪಾದಕ, ಮಿದ್ರಾಶ್ ರಬ್ಬಾಹ್: ಜೆನೆಸಿಸ್, ಸಂಪುಟ ಒಂದು, ದ ಸಾಂಕಿನೊ ಪ್ರೆಸ್, ಲಂಡನ್, 1983
- Littleton, C. Scott. Mythology: The Illustrated Anthology of World Myth and Storytelling. Thunder Bay Press (CA). ISBN 1571458271.
- Rosanna M. Giammanco Frongia; Giorgi, Rosa; Giammanco Frongia, Rosanna M.; Zuffi, Stefano (2005). Angels and demons in art. Los Angeles: J. Paul Getty Museum. ISBN 0892368306.
{{cite book}}
: CS1 maint: multiple names: authors list (link)
ಹೆಚ್ಚಿನ ಮಾಹಿತಿಗಾಗಿ
[ಬದಲಾಯಿಸಿ]- ನೈಟ್, ಪೀಟರ್. "ಸ್ಯಾಕ್ರೆಡ್ ಡಾರ್ಸೆಟ್ - ಆನ್ ದ ಪಾತ್ ಆಫ್ ದ ಡ್ರ್ಯಾಗನ್", 1998.
- Manning-Sanders, Ruth (1977). A Book of Dragons. London: Methuen. ISBN 0416581102.
- Mayor, Adrienne (2000). The First Fossil Hunters: Paleontology in Greek and Roman Times. Princeton, New Jersey: Princeton University Press. ISBN 0-691-08977-9.
- Shuker, Karl (1995). Dragons: a natural history. New York: Simon & Schuster. ISBN 0684814439.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಸುದ್ದಿಯಲ್ಲಿರುವ ಚೀನಾದ ಡ್ರ್ಯಾಗನ್‌ಗಳು, BBC
- ದ ಎವಲ್ಯೂಶನ್ ಆಫ್ ದ ಡ್ರ್ಯಾಗನ್ - G. ಎಲಿಯಟ್ ಸ್ಮಿತ್, 1919, ಪ್ರಾಜೆಕ್ಟ್ ಗುಂಟೆನ್ಬರ್ಗ್
- - ನ್ಯೂಯಾರ್ಕ್ ಟೈಮ್ಸ್ನ ಮೆನಿ ಇಮ್ಯಾಜಿನೇಶನ್ಸ್, ಒನ್ ಫಿಯರ್ಸಮ್ ಕ್ರಿಯೇಚರ್, ಎಪ್ರಿಲ್ 29, 2003
- Pages using the JsonConfig extension
- CS1 errors: unrecognized parameter
- CS1 errors: unsupported parameter
- Articles with hatnote templates targeting a nonexistent page
- Articles that may contain original research from September 2007
- All articles that may contain original research
- Articles with weasel words from July 2009
- Articles containing Chinese-language text
- Articles with unsourced statements from September 2009
- Articles that may contain original research from September 2009
- Commons link is on Wikidata
- CS1 maint: multiple names: authors list
- ಡ್ರ್ಯಾಗನ್‌ಗಳು
- ಕ್ರಿಪ್ಟೈಡ್ಗಳು
- ವಂಶಲಾಂಛನ ಮೃಗಗಳು
- ಪೌರಾಣಿಕ ಸಂಕರಗಳು
- ಗ್ರೀಕ್ ಸ್ವೀಕೃತ-ಪದಗಳು
- Pages using ISBN magic links