ಇಲಿಯಡ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


ಇಲಿಯಡ್ ಮಹಾಕಾವ್ಯದ ಒಂದು ದೃಶ್ಯ

ಇಲಿಯಡ್ ಪ್ರಾಚೀನ ಗ್ರೀಕ್ ಸಾಹಿತ್ಯದ ಮಹಾಕಾವ್ಯಗಳಲ್ಲಿ ಒಂದು - ಸಾಂಪ್ರದಾಯಿಕವಾಗಿ ಇದರ ಕರ್ತೃ ಅಂಧ ಕವಿ ಹೋಮರನೆಂದು ಹೇಳಲಾಗುತ್ತದೆ. ಇಲಿಯಡ್ ಮತ್ತು ಹೋಮರನ ಇನ್ನೊಂದು ಮಹಾಕಾವ್ಯವಾದ "ಒಡಿಸ್ಸಿ" ಪ್ರಾಚೀನ ಗ್ರೀಕ್ ಕಾವ್ಯದ ಪ್ರಧಾನ ಕೃತಿಗಳೆಂದು ಹೇಳಲಾಗುತ್ತದೆ. ಹೋಮರ್ ಕವಿ ನಿಜವಾದ ವ್ಯಕ್ತಿಯೇ ಅಲ್ಲವೇ, ಅಥವಾ ಹೋಮರ್ ಒಬ್ಬನೇ ವ್ಯಕ್ತಿಯೋ ಅನೇಕ ವ್ಯಕ್ತಿಗಳೋ ಮೊದಲಾದ ಚರ್ಚೆಗಳು ಅನೇಕ ವರ್ಷಗಳಿಂದ ನಡೆದಿವೆ. ಇಲಿಯಡ್ ಷಟ್ಪದಿಯಲ್ಲಿ ರಚಿಸಲ್ಪಟ್ಟಿದ್ದು ಸುಮಾರು ೧೬,೦೦೦ ಸಾಲುಗಳನ್ನು ಒಳಗೊಂಡಿದೆ. ನಂತರದ ಗ್ರೀಕರು ಇದನ್ನು ೨೪ ಅಧ್ಯಾಯಗಳಾಗಿ ವಿಂಗಡಿಸಿದರು. ಈ ವಿಂಗಡಣೆ ಇಂದಿಗೂ ನಂಂತಿದೆ. ಇಲಿಯಡ್ ನ ಕಥೆ ಗ್ರೀಸ್ ಮತ್ತು ಟ್ರಾಯ್ ದೇಶಗಳ ನಡುವಿನ ಯುದ್ಧವೊಂದರ ಹತ್ತನೆ ಮತ್ತು ಕೊನೆಯ ವರ್ಷದ ಘಟನೆಗಳನ್ನು ಕುರಿತದ್ದು. ಮುಖ್ಯವಾಗಿ ಅಕೀಲೀಸ್ ಎಂಬ ಗ್ರೀಕ್ ವೀರನ ಸಾಹಸಗಳನ್ನು ತಿಳಿಸುತ್ತದೆ. ಅಕೀಲೀಸ್ ಮತ್ತು ಅಗಮೆಮ್ನಾನ್ ರ ನಡುವಿನಾ ಜಗಳದೊಂದಿಗೆ ಆರಂಭಗೊಂಡು, ಹೆಕ್ಟರ್ ಎಂಬ ಟ್ರಾಯ್ ದೇಶದ ವೀರನ ಮರಣ ಮತ್ತು ಅಂತ್ಯಸಂಸ್ಕಾರದೊಂದಿಗೆ ಕಾವ್ಯ ಕೊನೆಗೊಳ್ಳುತ್ತದೆ.

"https://kn.wikipedia.org/w/index.php?title=ಇಲಿಯಡ್&oldid=715378" ಇಂದ ಪಡೆಯಲ್ಪಟ್ಟಿದೆ