ಹೋಮರ್

ವಿಕಿಪೀಡಿಯ ಇಂದ
Jump to navigation Jump to search
ಹೋಮರ್
Homer British Museum.jpg
Idealized portrayal of Homer dating to the Hellenistic period. British Museum.
ಜನನ Melesigenes, as told in Pseudo-Herodotus
c. 8th century BCE, according to Herodotus
Smyrna
ಮರಣ Ios
unknown illness
ವಾಸ್ತವ್ಯ Smyrna, Cyme (Aeolis), Chios
ರಾಷ್ಟ್ರೀಯತೆ ಗ್ರೀಕ್
ಕಾಲಮಾನ Geometric Period
ಪ್ರದೇಶ Shores and islands of the Aegean Sea
ಧರ್ಮ Polytheism
ಮುಖ್ಯ  ಹವ್ಯಾಸಗಳು Composition of oral poetry as a travelling performer, conducting a school for Rhapsodes, the Homeridae, on Chios

ಹೋಮರ್ ಗ್ರೀಕ್ ಭಾಷೆಯ ಅಮರ ಕವಿ. ಇಲಿಯಾಡ್, ಒಡಿಸ್ಸಿ ಎಂಬ ಎರಡು ಮಹಾ ಕಾವ್ಯಗಳನ್ನು ಬರೆದವ. ಕ್ರಿಸ್ತ ಪೂರ್ವ ೮೫೦ರ ಸರಿಸುಮಾರಿನಲ್ಲಿ ಬದುಕಿದ್ದ ಎಂಬುದು ಒಂದು ಅಂದಾಜು.

ಹೋಮರ್ ಪದದ ಅರ್ಥ[ಬದಲಾಯಿಸಿ]

ಹೋಮರ್ ಪದದ ಅರ್ಥ ಕೈದಿ ಅಥವಾ ಕುರುಡ ಅಥವಾ ಬಂದಿಯಾಗಿರುವವ. ಕುರುಡನಾಗಿದ್ದಕ್ಕೆ ಆತನ ಹೆಸರು ಹೋಮರ್ ಎಂದಾಯಿತೋ ಅಥವಾ ಅವನು ಕುರುಡಾಗಿದ್ದನೋ ಅಂಬುದು ಸಂದೇಹವೇ. ಹೋಮರ್ ಬರೆದು ಪ್ರಸಿದ್ಧಿ ಪಡೆದದ್ದು ಇಲಿಯಾಡ್, ಒಡಿಸ್ಸಿ ಎಂಬೆರಡು ವೀರಕಾವ್ಯಗಳಿಗೆ. ನೋಸ್ಟೋಲ್, ಸಣ್ಣ ಇಲಿಯಾಡ್, ಸಿಪ್ರಿಯಾ, ಎಪಿಗೋನಿ, ಈಡಿಪಸ್ ಮತ್ತು ಸಂತಾನ, ಹೋಮರನ ಒಸಗೆಗಳು,ಕಪ್ಪೆ-ಇಲಿಗಳ ಯುದ್ಧ (ಬಟ್ರಚೋಮಿಯೋಚಿಯ) ಎಂಬ ನೀಳ್ಗವಿತೆಗಳು ಆತ ಬರೆದುದೇ ಎಂಬುದು ನಂಬಿಕೆ.

ಹೋಮರ್ ಬರೆದ ಕಾವ್ಯಗಳು[ಬದಲಾಯಿಸಿ]

೫೦ ನಗರಗಳ ಗುಂಪಾದ ಗ್ರೀಸ್ ಒಂದು ರಾಷ್ಟ್ರವಾಗಿ ಹೊಮ್ಮಲು ಹೋಮರ್ ಬರೆದ ಕಾವ್ಯಗಳು ಸ್ಪೂರ್ತಿಯಾದವು. ಇಲಿಯಾಡ್ ಮತ್ತು ಒಡಿಸ್ಸಿ ಇವು ಎರಡೂ ಕಾವ್ಯಗಳು ಅರ್ಧಕ್ಕಿಂತಲೂ ಹೆಚ್ಚು ಭಾಗ ಭಾಷಣಗಳನ್ನು ಹೊಂದಿವೆ. ಕೆಲವರ ಪ್ರಕಾರ ಹೋಮರ್ ಒಬ್ಬ ಕವಿಯಲ್ಲ ಮತ್ತು ಅವನ ಕಾವ್ಯಗಳು ಒಬ್ಬನಿಗಿಂತ ಹೆಚ್ಚು ಮಂದಿ ಬರೆದಿರುವಂತಿದೆ.

ಇತಿಹಾಸಕಾರರ ಪ್ರಕಾರ[ಬದಲಾಯಿಸಿ]

  • ಇತಿಹಾಸಕಾರರ ಪ್ರಕಾರ ಹೋಮರ ನಿಜವಾದ ಹೆಸರು ಟಿಗ್ರಾನೆಸ್.ಆತ ಬ್ಯಾಬಿಲೊನಿಯದವ ಇರಬಹುದೆಂದು ಊಹೆ. ಗ್ರೀಕರ ಯುದ್ಧಕೈದಿಯಾಗಿ ಗ್ರೀಸಿಗೆ ಬಂದನೆಂದು ನಂಬುಗೆ. ಇನ್ನು ಕೆಲವು ಐತಿಹ್ಯಗಳ ಪ್ರಕಾರ ಆತನ ಹೆಸರು ಮೆಲೆಸಿಗೆನೆಸ್ (ಮೆಲೆಸ್ ನಲ್ಲಿ ಜನಿಸಿದವ ಎಂದರ್ಥ)ವಯಸ್ಸಾದ ಮೇಲೆ ಒಡಿಸ್ಸಿಯನ್ನೂ, ಯವ್ವನದಲ್ಲಿ ಇಲಿಯಾಡನ್ನೂ ಬರೆದ ಎಂಬುದು ವಾಡಿಕೆ.
  • ಗ್ರೀಕ್ ದೊರೆ ಟಾಲೆಮಿ ಹೋಮರನ ಕೃತಿಗಳೊಡನೆ ಇರುವ ಬಸದಿಗಳು ಇಟಲಿಯಲ್ಲಿ ದೊರೆತಿವೆ. ಅಲೆಕ್ಸಾಂಡ್ರಿಯದಲ್ಲಿ ಮತ್ತು ಇತರೆಡೆ ದೊರೆತಿರುವ ಶಿಲಾಶಿಲ್ಪಗಳು ಹೋಮರ್ ಗ್ರೀಕರ ಮನಸ್ಸಿನಲ್ಲಿ ಮೂಡಿಸಿದ್ದ ಛಾಪನ್ನು ಒತ್ತಿ ಹೇಳುತ್ತವೆ. ಹೋಮರ್ ತನ್ನ ಬದುಕನ್ನು ಬಡತನದಲ್ಲಿ ಕಳೆದು ಸತ್ತ ಎಂಬುದು ಖಚಿತವಾಗಿದೆ. ಆತನ ಕೀರ್ತಿ, ಆತ ಸತ್ತ ಮೇಲೆಯೇ ಬೆಳೆದಿದ್ದು.

==[ಬದಲಾಯಿಸಿ]

  • ಎ. ಎನ್. ಮೂರ್ತಿರಾಯರ "ಅಲೆಯುವ ಮನ" ಪುಸ್ತಕದಲ್ಲಿ ಹೋಮರನ ಬಗ್ಗೆ ಇರುವ ಚೌಪದಿ ಆತನ ಅವಸ್ಥೆಯನ್ನು ಸೂಕ್ಕ್ಶ್ಮವಾಗಿ ಹೇಳುತ್ತದೆ.


ಹೋಮರನು ಬದುಕಿದ್ದ, ಐವತ್ತು ನಗರಗಳ ಬೀದಿಯಲ್ಲಿ ತಂಗೂಳ ತಿರಿದು ತಿಂದು.
ಹೋಮರನು ಸತ್ತಾಯ್ತು, ಐವತ್ತು ನಗರಗಳು ಸ್ಪರ್ಧೆಯನು ಹೂಡಿದವು, ನಮ್ಮವನು ಹೋಮರ್ ಎಂದು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಹೋಮರ್&oldid=818366" ಇಂದ ಪಡೆಯಲ್ಪಟ್ಟಿದೆ